Tag: Israel

  • ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    ಟೆಲ್ ಅವೀವ್: ದಿನದಿಂದ ದಿನಕ್ಕೆ ಇಸ್ರೇಲ್-ಹಮಾಸ್ ಯುದ್ಧ (Israel Hamas War) ಭೀಕರವಾಗುತ್ತಿದ್ದು, ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ 4,469 ಮಂದಿ ಹಾಗೂ 1,400 ಇಸ್ರೇಲಿಯನ್ನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

    ಈ ನಡುವೆ ಇಸ್ರೇಲ್‌ನಿಂದ ಹಮಾಸ್ ಉಗ್ರರು ಅಪಹರಿಸಿದ್ದ 200ಕ್ಕೂ ಹೆಚ್ಚು ಒತ್ತೆಯಾಳುಗಳ (Hostages) ಪೈಕಿ ಇಬ್ಬರು ಅಮೆರಿಕದ (USA) ಪ್ರಜೆಗಳನ್ನು ಶನಿವಾರ ಬಿಡುಗಡೆ ಮಾಡಿದ್ದು, ಇಸ್ರೇಲ್ ಸಹ ಅದೇ ಕಾರ್ಯತಂತ್ರವನ್ನು ರೂಪಿಸಿದೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಹಮಾಸ್‌ನ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ (Abu Ubaida) ಈ ಬಗ್ಗೆ ಮಾತನಾಡಿದ್ದು, ಕಳೆದ ಶುಕ್ರವಾರ ಹಮಾಸ್ ಉಗ್ರರ ಗುಂಪು ಹೆಚ್ಚುವರಿಯಾಗಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶವನ್ನು ಕತಾರ್‌ಗೆ ತಿಳಿಸಲಾಗಿತ್ತು. ಆದ್ರೆ ಅದೇ ದಿನ ಇಬ್ಬರು ಅಮೆರಿಕನ್ನರಾದ ಜುಡಿತ್ ತೈ ರಾನಾನ್ ಮತ್ತು ಅವರ ಮಗಳು ನಟಾಲಿಯನ್ನು ಬಿಡುಗಡೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.

    ಹಮಾಸ್ ಉಗ್ರರ ಕಾರ್ಯವಿಧಾನವನ್ನೇ ಅನುಸರಿಸುತ್ತಿರುವ ಇಸ್ರೇಲ್ ಸಹ ಭಾನುವಾರ (ಇಂದು) ಹಮಾಸ್‌ನ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಅಬು ಉಬೈದಾ ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಅಕ್ಟೋಬರ್ 7 ರಂದು ನಡೆದ ಭೀಕರ ದಾಳಿಯಲ್ಲಿ ಹಮಾಸ್ ಉಗ್ರರು 210 ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

    ಸದ್ಯ ಇಸ್ರೇಲ್ ಕ್ಷಿಪಣಿ ದಾಳಿಗೆ ಗಾಜಾ ಛಿದ್ರ ಛಿದ್ರವಾಗಿದೆ. ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯ ಬಾಂಬ್ ದಾಳಿ ವಿಡಿಯೋಗಳು ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿವೆ. ಅತ್ತ ಲೆಬನಾನ್ ಭೂಪ್ರದೇಶದಲ್ಲಿನ ಹಿಜ್ಬುಲ್ಲಾ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕಾ ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಹಮಾಸ್‌ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರಿನಲ್ಲಿ ಓದಿದ ವೈದ್ಯ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಪರೇಷನ್ ಅಜಯ್ ತಂಡದಲ್ಲಿ ಕಾರವಾರದ ಮಹಿಮಾ

    ಆಪರೇಷನ್ ಅಜಯ್ ತಂಡದಲ್ಲಿ ಕಾರವಾರದ ಮಹಿಮಾ

    ಕಾರವಾರ: ಇಸ್ರೇಲ್‌ನಿಂದ (Israel) ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ‘ಆಪರೇಷನ್ ಅಜಯ್’ (Operation Ajay) ತಂಡದಲ್ಲಿ ಕಾರವಾರ (Karwar) ತಾಲೂಕಿನ ಬಿಣಗಾದ ಮಹಿಮಾ ಶೆಟ್ಟಿಯವರು (Mahima Shetty) ಭಾಗವಹಿಸಿ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಶ್ರಮವಹಿಸುವ ಮೂಲಕ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ.

    ಸದ್ಯ ಗೋವಾದ ಪರ್ವೊರಿಮ್‌ನಲ್ಲಿ ನೆಲೆಸಿರುವ ದುರ್ಗಪ್ಪ ಶೆಟ್ಟಿ ಮತ್ತು ನಯನಾ ದಂಪತಿಯ ಪುತ್ರಿ ಮಹಿಮಾ ಶೆಟ್ಟಿ ಆಪರೇಷನ್ ಅಜಯ್ ತಂಡದಲ್ಲಿ ಭಾಗಿಯಾಗಿದ್ದರು. ಏರ್ ಇಂಡಿಯಾದಲ್ಲಿ (Air India) ಗಗನಸಖಿ (Air Hostess) ಆಗಿರುವ ಅವರು ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆರು ಮಂದಿಯ ತಂಡದಲ್ಲಿ ಇವರು ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ – ತುಟ್ಟಿ ಭತ್ಯೆ ಶೇ. 3.75 ಹೆಚ್ಚಳ

    ಮಹಿಮಾರವರು ಇಸ್ರೇಲ್‌ಗೆ ತೆರಳಿದ್ದಾಗ ಕ್ಷಿಪಣಿ ದಾಳಿ ನಡೆಯುತ್ತಿದ್ದುದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೂ ಯಾವುದೇ ಹಿಂಜರಿಕೆಯಿಲ್ಲದೇ 236 ಮಂದಿ ಭಾರತೀಯರನ್ನು ಕರೆತಂದಿದ್ದಾಗಿ ಮಹಿಮಾರವರು ಮಾಹಿತಿ ನೀಡಿದ್ದು, ಈ ಕೆಲಸಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ

    ಗೆಲುವಿನ ತನಕ ವಿರಮಿಸುವುದಿಲ್ಲ: ಇಸ್ರೇಲ್ ಪ್ರಧಾನಿ ಪ್ರತಿಜ್ಞೆ

    ಟೆಲ್ ಅವಿವ್: ಇಸ್ರೇಲ್ (Israel) ಹಾಗೂ ಪ್ಯಾಲೆಸ್ತೀನ್ (Palestine) ನಡುವಿನ ಯುದ್ಧ ಮುಂದುವರಿದಿದ್ದು, ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯಲ್ಲ. ಗೆಲುವಿನ ತನಕ ವಿರಮಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪ್ರತಿಜ್ಞೆ ಮಾಡಿದ್ದಾರೆ.

    ಹಮಾಸ್ (Hamas Terrorists) ಬಂಡುಕೋರರು ಒತ್ತಯಾಳಾಗಿಟ್ಟುಕೊಂಡವರಲ್ಲಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಗೆಲುವಿನ ಕಡೆಯ ಕ್ಷಣದ ವರೆಗೂ ಹೋರಾಟ ನಡೆಸುತ್ತೇವೆ. ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ ಎಂದು ತಿಳಿಸಿದ್ದಾರೆ.

    ಹಮಾಸ್ ವಿರುದ್ಧದ ಹೋರಾಟಕ್ಕೆ 14ನೇ ದಿನ ತುಂಬಿದೆ. ಗಾಜಾದ ಆರೋಗ್ಯ ಸಚಿವಾಲಯದಿಂದ ಮಾಹಿತಿಗಳ ಪ್ರಕಾರ ಈವರೆಗೂ 4,137 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ, 13,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಆಕ್ರಮಣದ ಸಮಯದಲ್ಲಿ ಹಮಾಸ್ 203 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಅವರನ್ನು ಬಿಡುಗಡೆ ಮಾಡುವವರೆಗೂ ನಾವು ದಾಳಿ ಮುಂದುವರಿಸುತ್ತೇನೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಈ‌ ನಡುವೆ ಇಸ್ರೇಲ್ ಗಾಜಾದಲ್ಲಿ ನಡೆಸುತ್ತಿರುವ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಬೇಕು ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಬಂಡುಕೋರರು ದಾಳಿ ಮಾಡಿದ ನಂತರ ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಇಬ್ಬರು ಅಮೆರಿಕನ್ನರನ್ನ ಬಿಡುಗಡೆ ಮಾಡಿದ ಬಳಿಕ ಶ್ವೇತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಚ್ಚಿನ ಒತ್ತೆಯಾಳುಗಳು ಹೊರಬರುವವರೆಗೆ ಇಸ್ರೇಲ್ -ಗಾಜಾದ ಸಂಭಾವ್ಯ ನೆಲದ ಆಕ್ರಮಣವನ್ನು ವಿಳಂಬಗೊಳಿಸಬೇಕು ಎಂದು ಹೇಳಿದ್ದಾರೆ.

    ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಯುರೋಪಿನ ಹಲವಾರು ಸರ್ಕಾರಗಳು ಗಾಜಾದ ಮೇಲೆ ನೆಲದ ಆಕ್ರಮಣವನ್ನು ವಿಳಂಬಗೊಳಿಸುವಂತೆ ಇಸ್ರೇಲ್ ಅನ್ನು ಒತ್ತಾಯಿಸುತ್ತಿವೆ. ಸೌದಿ ಅರೇಬಿಯಾ ಕಳೆದ ಎರಡು ವಾರಗಳಲ್ಲಿ ಗಾಜಾದ ಮೇಲೆ ಇಸ್ರೇಲ್‌ನ ಬಾಂಬ್ ದಾಳಿಯನ್ನು ಬಹಳ ಟೀಕಿಸಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಇದಕ್ಕೆ ಪ್ರತಿಕ್ರಿಸಿರುವ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಗಾಜಾ ಪಟ್ಟಿಯಲ್ಲಿ ಜನರ ಜೀವನವನ್ನು ನಿಯಂತ್ರಿಸಲು ಮಿಲಿಟರಿ ಯೋಜಿಸುವುದಿಲ್ಲ. ಹಮಾಸ್‌ನೊಂದಿಗಿನ ಯುದ್ಧಕ್ಕೆ ಮೂರು ಹಂತಗಳಿವೆ, ಮೊದಲು ವಾಯುದಾಳಿ ಮತ್ತು ನೆಲದ ಕುಶಲತೆಯಿಂದ ದಾಳಿ ಮಾಡುತ್ತೇವೆ, ನಂತರ ಪ್ರತಿರೋಧದ ಹಮಾಸ್ ನೆಲೆಗಳಲ್ಲಿ ದಾಳಿ ಮಾಡಲಾಗುತ್ತದೆ ಅಂತಿಮವಾಗಿ ಗಾಜಾ ಪಟ್ಟಿಯಲ್ಲಿ ಜೀವನದ ಸುಗಮಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

     Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ

    ಟೆಲ್ ಅವೀವ್: ಇಸ್ರೇಲ್‍ನಿಂದ (Israel) ಹಮಾಸ್ (Hamas) ಉಗ್ರರು ಅಪಹರಿಸಿದ್ದ 200 ಒತ್ತೆಯಾಳುಗಳ ಪೈಕಿ ಇಬ್ಬರು ಅಮೆರಿಕದ (America) ಪ್ರಜೆಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಜನರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ.

    ಹಮಾಸ್ ಉಗ್ರರ ವಶದಲ್ಲಿದ್ದ ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್‍ಗೆ ಮರಳಿದ್ದಾರೆ. ಅವರ ಬಿಡುಗಡೆ ಬಳಿಕ ಅಮೆರಿಕ ಅಧ್ಯಕ್ಷ್ಯ ಜೋ ಬೈಡನ್ ಅವರ ಬಳಿ ಫೋನ್‍ನಲ್ಲಿ ಮಾತಾಡಿದ್ದಾರೆ. ಈ ವಿಷಯ ಬಹಳ ಸಂತೋಷ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತ

    ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆ ನಡೆಸಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಹೆಚ್ಚಿನ ಜನರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಸಾಂಕೇತಿಕವಾಗಿ ಆದ ಬಿಡುಗಡೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.

    ಅಕ್ಟೋಬರ್ 7 ರಂದು ಇಸ್ರೇಲ್-ಗಾಜಾ ಗಡಿಯ (Gaza Border) ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‍ನಿಂದ ಹಮಾಸ್ ಉಗ್ರರು ಅವರನ್ನು ಅಪಹರಿಸಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20 ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ದೂರಮಾಡಿದ ಬಳ್ಳಾರಿ ಪೊಲೀಸರು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ

    ಟೆಲ್ ಅವಿವ್: ಇಸ್ರೇಲ್ ಹಮಾಸ್ ಯುದ್ಧದಲ್ಲಿ (Israel Hamas war) ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 3,800 ಪ್ಯಾಲೆಸ್ತೀನಿಯರು (Palestinians) ಹಾಗೂ 1,400 ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಇಸ್ರೇಲ್-ಹಮಾಸ್ ಕದನ ಪಶ್ಚಿಮ ಏಷ್ಯಾದ ಶಾಂತಿ ಕದಡುವಂತೆ ಕಾಣ್ತಿದೆ. ಇಸ್ರೇಲ್ ಬೆಂಬಲಕ್ಕೆ ನಿಂತ ಅಮೆರಿಕ ವಿರುದ್ಧ ಅರಬ್ ದೇಶಗಳು ಸಿಡಿದೇಳುತ್ತಿವೆ. ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕ ಸೇನಾ ಶಿಬಿರದ ಮೇಲೆ ರಾಕೆಟ್‌ಗಳು ಹಾರಿವೆ.

    ಸಿರಿಯಾದ ಆಲ್-ತನ್ಫ್ ಸೇನಾ ನೆಲೆ ಮೇಲೆಯೂ ಡ್ರೋನ್ ದಾಳಿ ನಡೆದಿದೆ. ಯೆಮೆನ್ ತೀರದಿಂದ ಇರಾನ್ ಬೆಂಬಲಿತ ಹುತಿ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕ್ಷಿಪಣಿಗಳು ಯುಎಸ್ ಕಾರ್ನಿ ಹೆಸರಿನ ಅಮೆರಿಕ ಯುದ್ಧ ನೌಕೆಯನ್ನು ನಾಶ ಮಾಡಿದೆ. ನಾವು ಎಂತಹದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

    ಈ ಮಧ್ಯೆ, ಬಾಯ್ಕಾಟ್ ಇಸ್ರೇಲ್ ಕ್ಯಾಂಪೇನ್ ಎನ್ನುವ ಪೋಸ್ಟರ್ ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯ ಮಸೀದಿಯೊಂದರ ಗೋಡೆ ಮೇಲೆ ಕಾಣಿಸಿಕೊಂಡಿದೆ. ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟರ್ ತೆರವು ಮಾಡಲಾಗಿದೆ. ಇನ್ನೂ ಹೈದ್ರಾಬಾದ್‌ನ ಮಸೀದಿಯೊಂದರ ಆವರಣದಲ್ಲಿ ಇಸ್ರೇಲ್-ಅಮೆರಿಕ ಧ್ವಜವನ್ನು ಬರೆದು ಅದರ ಮೇಲೆ ಓಡಾಡುವ ಮೂಲಕ ಮುಸ್ಲಿಮರು ಆಕ್ರೋಶ ಹೊರಹಾಕ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಟೆಲ್ ಅವಿವ್: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಜಾಯ್ (Malala Yousafzai) ಅವರು ಪ್ಯಾಲೆಸ್ತೀನಿಯನ್ನರಿಗೆ (Palestine) ಸಹಾಯ ಮಾಡುವ ಮೂರು ದತ್ತಿಗಳಿಗೆ 3,00,000 ಡಾಲರ್ (ಸುಮಾರು 2.5 ಕೋಟಿ) ನೆರವು (Assistance) ನೀಡುವುದಾಗಿ ಘೋಷಿಸಿದ್ದಾರೆ.

    ಮಂಗಳವಾರ ಗಾಜಾದಲ್ಲಿ (Gaza) ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 500 ಜನರು ಸಾವನ್ನಪ್ಪಿದ ಘಟನೆಯನ್ನು ಕಂಡು ತಾನು ಗಾಬರಿಗೊಂಡಿದ್ದೇನೆ ಎಂದು ಯೂಸುಫ್ ಜಾಯ್ ಹೇಳಿದರು ಮತ್ತು ಸಾಮೂಹಿಕ ಶಿಕ್ಷೆ ಇದಕ್ಕೆ ಉತ್ತರವಲ್ಲ ಎಂದರು. ಇದನ್ನೂ ಓದಿ: ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಎಂದು ಯೂಸುಫ್ ಜಾಯ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಗಾಜಾಕ್ಕೆ ಮಾನವೀಯ ನೆರವನ್ನು ಅನುಮತಿಸಲು ಮತ್ತು ಕದನ ವಿರಾಮದ ಕರೆಯನ್ನು ಪುನರುಚ್ಚರಿಸಲು ನಾನು ಇಸ್ರೇಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ದಾಳಿಯಲ್ಲಿರುವ ಪ್ಯಾಲೆಸ್ತೀನಿಯನ್ ಜನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ನಾನು 3,00,000 ಡಾಲರ್ ಅನ್ನು ನಿರ್ದೇಶಿಸುತ್ತಿದ್ದೇನೆ. ನೊಬೆಲ್ ಪ್ರಶಸ್ತಿ ವಿಜೇತರು ತಕ್ಷಣದ ಕದನ ವಿರಾಮ ಮತ್ತು ಶಾಶ್ವತ ಶಾಂತಿಗಾಗಿ ಶ್ರಮಿಸಬೇಕು ಎಂದು ಸರ್ಕಾರಗಳಿಗೆ ಕರೆ ನೀಡಿದರು. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ಟೆಲ್ ಅವಿವ್: ಯುದ್ಧದ ನಡುವೆ ಇಸ್ರೇಲ್‌ಗೆ (Israel) ಬೆಂಬಲ ಸೂಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅವರ ಮನವಿಯ ಮೇರೆಗೆ ಇದೀಗ ಇಸ್ರೇಲ್ ಯುದ್ಧ ಪೀಡಿತ ಪ್ರದೇಶ ಗಾಜಾಗೆ (Gaza) ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ಅನುಮತಿಸಿದೆ.

    ಇಸ್ರೇಲ್ ಸೀಮಿತ ಪೂರೈಕೆಯನ್ನು ಒಪ್ಪಿದ ಬಳಿಕ ಇದೀಗ ಈಜಿಪ್ಟ್ ತನ್ನ ರಫಾ ಗಡಿ ಮೂಲಕ ಗಾಜಾಗೆ ಮಾನವೀಯ ನೆರವನ್ನು ಒದಗಿಸುತ್ತಿದೆ. ಅಮೆರಿಕ ಅಧ್ಯಕ್ಷ ಇಸ್ರೇಲ್‌ನಿಂದ ನಿರ್ಗಮಿಸಿದ ತಕ್ಷಣ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಮತ್ತೆ ಭೀಕರ ದಾಳಿ ಮುಂದುವರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು

    ಬೈಡನ್ ಭೇಟಿ ಬೆನ್ನಲ್ಲೇ ಗುರುವಾರ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ (Rishi Sunak) ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಿ ಸುನಾಕ್ ಯುದ್ಧದ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಿದ್ದಾರೆ.

    ಸುಮಾರು 500 ಜನರ ಸಾವಿಗೆ ಕಾರಣವಾದ ಆಸ್ಪತ್ರೆ ಮೇಲಿನ ರಾಕೆಟ್ ದಾಳಿ ಇಸ್ರೇಲ್ ನಡೆಸಿಲ್ಲ ಎಂದು ತಮ್ಮ ಗುಪ್ತಚರ ಸ್ಪಷ್ಟಪಡಿಸಿದ್ದಾಗಿ ಅಮೆರಿಕ ತಿಳಿಸಿದೆ. ಅಕ್ಟೋಬರ್ 7 ರಿಂದ ಪ್ರಾರಂಭವಾದ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಇಲ್ಲಿಯವರೆಗೆ ಎರಡೂ ಕಡೆಗಳಲ್ಲಿ ಸುಮಾರು 4,000 ಜನರು ಬಲಿಯಾಗಿದ್ದಾರೆ. ಇದನ್ನೂ ಓದಿ: ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ: ಬೈಡೆನ್

    ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ: ಬೈಡೆನ್

    ಟೆಲ್ ಅವಿವ್: ಇಸ್ರೇಲ್ (Israel) ಮತ್ತು ಹಮಾಸ್ ಬಂಡುಕೋರರ (Hamas Militants) ಮಧ್ಯೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.

    ಭಾರೀ ಪ್ರಮಾಣದ ಭದ್ರತಾ ಪಡೆಯೊಂದಿಗೆ ವಿಮಾನದಿಂದ ಕೆಳಗಿಳಿದ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರನ್ನು ಅಪ್ಪಿಕೊಂಡರು. ಬಳಿಕ ಗಾಜಾ ಆಸ್ಪತ್ರೆಯ (Gaza Hospital) ಮೇಲೆ ನಡೆದ ರಾಕೆಟ್ ದಾಳಿಯ ಕುರಿತು ನೆತನ್ಯಾಹು ಮತ್ತು ಬೈಡೆನ್ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆದ ಪರಿಣಾಮ 500 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಬಂಡುಕೋರರು ಇದು ಇಸ್ರೇಲ್ ನಡೆಸಿದ ದಾಳಿ ಎಂದು ಹೇಳಿದರೆ, ಇಸ್ರೇಲ್ ಇದು ಹಮಾಸ್ ನಡೆಸಿದ ದಾಳಿ ಎಂದು ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿದ ಬೈಡೆನ್, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದಾಳಿ ಗಜಾನ್ ಭಯೋತ್ಪಾದಕ ಗುಂಪುಗಳಿಂದ ಸಂಭವಿಸಿದೆ ಎನಿಸುತ್ತಿದೆ. ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್

    ಗಾಜಾದ ಆಸ್ಪತ್ರೆಯಲ್ಲಿ ನಡೆದ ದಾಳಿಯಿಂದಾಗಿ ನಾನು ತೀವ್ರ ದುಃಖಿತನಾಗಿದ್ದೇನೆ. ಅಲ್ಲದೇ ಆಕ್ರೋಶಗೊಂಡಿದ್ದೇನೆ. ನಾನು ನೋಡಿದ ಆಧಾರದ ಮೇಲೆ ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ. ಈ ಕೃತ್ಯವನ್ನು ಬೇರೆ ತಂಡ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್‌ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?

    ನಾನು ಇಲ್ಲಿಗೆ ಭೇಟಿ ನೀಡಲು ಒಂದು ಸಣ್ಣ ಕಾರಣವಿದೆ. ಇಸ್ರೇಲ್ ದೇಶದ ಜನರು ಮತ್ತು ವಿಶ್ವದ ಜನರು ಅಮೆರಿಕ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ. 31 ಅಮೆರಿಕನ್ನರು ಸೇರಿದಂತೆ 1,300 ಜನರನ್ನು ಹಮಾಸ್ ಹತ್ಯೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ ಬಂಡುಕೋರರಿಂದ ಹತ್ಯೆಗೀಡಾದ ಮಗಳ ಪತ್ತೆಗೆ ಆ್ಯಪಲ್‌ ವಾಚ್‌, ಫೋನ್‌ ಬಳಸಿದ ತಂದೆ

    ಅಕ್ಟೋಬರ್ 7 ರಂದು ಹಮಾಸ್ ಪ್ರಾರಂಭಿಸಿದ ಆಘಾತಕಾರಿ ಗಡಿಯಾಚೆಗಿನ ದಾಳಿಯಲ್ಲಿ ಗುಂಡು ಹಾರಿಸಿ 1,400 ಜನರ ಹತ್ಯೆಗೆ ಪ್ರತೀಕಾರವಾಗಿ ಬೈಡೆನ್ ಇಸ್ರೇಲ್ ಮತ್ತು ಅದರ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ಬೆಂಬಲಿಸಿದ್ದಾರೆ. ಅಲ್ಲದೇ ನೂರಾರು ಒತ್ತೆಯಾಳುಗಳನ್ನು ತೆಗೆದುಕೊಂಡು ಮಹಿಳೆಯರು ಮತ್ತು ಮಕ್ಕಳ ಶಿರಚ್ಛೇದ ಮಾಡುತ್ತಿರುವ ಹಮಾಸ್ ನಡೆಸಿದ ದೌರ್ಜನ್ಯವನ್ನು ಬೈಡೆನ್ ಖಂಡಿಸಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್‌ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?

    ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್‌ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?

    ಟೆಲ್‌ ಆವೀವ್‌: ಗಾಜಾ ಆಸ್ಪತ್ರೆ (Gaza Hospital) ಮೇಲೆ ರಾಕೆಟ್ ದಾಳಿ ನಡೆದಿದ್ದು 500 ಮಂದಿ ಬಲಿಯಾಗಿದ್ದಾರೆ. ಈ ದಾಳಿಯನ್ನು ನಡೆಸಿದವರು ಯಾರು ಎನ್ನುವುದರ ಬಗ್ಗೆ ಈಗ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.

    ಈ ರಾಕೆಟ್‌ ದಾಳಿಯನ್ನು ನಡೆಸಿದವರು ಯಾರು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಹಮಾಸ್‌ (Hamas) ಇಸ್ರೇಲ್‌ ನಡೆಸಿದ ದಾಳಿ ಎಂದು ಹೇಳಿದರೆ ಇಸ್ರೇಲ್‌ ಇದು ಹಮಾಸ್‌ ನಡೆಸಿದ ದಾಳಿ ಎಂದು ವಿಡಿಯೋ ರಿಲೀಸ್‌ ಮಾಡಿ ತಿರುಗೇಟು ನೀಡಿದೆ.

    ನಾವು ಆಸ್ಪತ್ರೆಯ ಮೇಲೆ ದಾಳಿ ನಡೆಸಿಲ್ಲ. ಪ್ಯಾಲೆಸ್ತೀನ್‌ ಹಮಾಸ್‌ ಉಗ್ರರು ನಡೆಸಿದ ರಾಕೆಟ್‌ ಗುರಿ ತಪ್ಪಿ ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದ ಇಸ್ರೇಲ್‌ (Israel) ಹೇಳಿದೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    ಇಸ್ರೇಲ್‌ ಸೇನೆಯ ವಕ್ತಾರ ಪ್ರತಿಕ್ರಿಯಿಸಿ, ಆಸ್ಪತ್ರೆಯ ಸಮೀಪ ಯಾವುದೇ ವೈಮಾನಿಕ ಕಾರ್ಯಾಚರಣೆ ಮಾಡಿಲ್ಲ. ಆಸ್ಪತ್ರೆಯ ಮೇಲೆ ಬಿದ್ದ ರಾಕೆಟ್‌ಗೂ ನಾವು ಬಳಕೆ ಮಾಡುತ್ತಿರುವ ರಾಕೆಟ್‌ ಉಪಕರಣಗಳಿಗೂ ಹೊಂದಿಕೆಯಾಗುವುದಿಲ್ಲ ಎಂದು ಎಂದು ತಿಳಿಸಿದ್ದಾರೆ.

    ಇಸ್ರೇಲ್‌ ಆರೋಪಕ್ಕೆ ಹಮಾಸ್‌ ಪ್ರತಿಕ್ರಿಯಿಸಿ, ಇಸ್ರೇಲ್‌ ಸುಳ್ಳು ಆರೋಪ ಮಾಡುತ್ತಿದೆ. ಭಯಾನಕ ಅಪರಾಧ ಮತ್ತು ಹತ್ಯಾಕಾಂಡವನ್ನು ಮುಚ್ಚಲು ಕಟ್ಟು ಕಥೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದೆ.

    ಇಸ್ರೇಲ್‌ ಏರ್‌ಸ್ಟ್ರೈಕ್‌ ದಾಳಿಯ ಎಚ್ಚರಿಕೆ ಬೆನ್ನಲ್ಲೇ ಉತ್ತರ ಗಾಜಾದಿಂದ 10 ಲಕ್ಷಕ್ಕೂ ಹೆಚ್ಚು ಜನರು ದಕ್ಷಿಣ ಗಾಜಾಕ್ಕೆ ತೆರಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಮಾಸ್‌ ಬಂಡುಕೋರರಿಂದ ಹತ್ಯೆಗೀಡಾದ ಮಗಳ ಪತ್ತೆಗೆ ಆ್ಯಪಲ್‌ ವಾಚ್‌, ಫೋನ್‌ ಬಳಸಿದ ತಂದೆ

    ಹಮಾಸ್‌ ಬಂಡುಕೋರರಿಂದ ಹತ್ಯೆಗೀಡಾದ ಮಗಳ ಪತ್ತೆಗೆ ಆ್ಯಪಲ್‌ ವಾಚ್‌, ಫೋನ್‌ ಬಳಸಿದ ತಂದೆ

    ವಾಷಿಂಗ್ಟನ್‌: ಹಮಾಸ್‌ (Hamas) ಬಂಡುಕೋರರಿಂದ ಹತ್ಯೆಗೀಡಾದ ತನ್ನ ಮಗಳ ಮೃತದೇಹ ಪತ್ತೆ ಮಾಡಲು ಅಮೆರಿಕದ ವ್ಯಕ್ತಿಯೊಬ್ಬ ಆ್ಯಪಲ್‌ ವಾಚ್‌ ಮತ್ತು ಫೋನ್‌ ಬಳಸಿದ್ದಾರೆ.

    ಉದ್ಯಮಿ ಇಯಾಲ್‌ ವಾಲ್ಡ್‌ಮನ್‌ ಎಂಬವರ ಪುತ್ರಿ 24 ವಯಸ್ಸಿನ ಡೇನಿಯಲ್‌ ಹತ್ಯೆಗೀಡಾದ ಯುವತಿ. ಈಕೆ ದಕ್ಷಿಣ ಇಸ್ರೇಲ್‌ನಲ್ಲಿ (Israel) ನೋವಾ ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಮಾಸ್‌ ಬಂಡುಕೋರರು ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಯುದ್ಧಭೂಮಿ ಇಸ್ರೇಲ್‍ಗೆ ಬುಧವಾರ ಅಮೆರಿಕ ಅಧ್ಯಕ್ಷ ಭೇಟಿ

    ಉದ್ಯಮಿ ಇಯಾಲ್‌ ತನ್ನ ಮಗಳ ಮೃತದೇಹ ಪತ್ತೆ ಮಾಡಲು ಆ್ಯಪಲ್‌ ವಾಚ್‌ ಮತ್ತು ಆಕೆಯ ಫೋನ್‌ನ ಟ್ರ್ಯಾಕಿಂಗ್‌ ಫೀಚರ್‌ನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ಮೊದಲಿಗೆ 24 ವಯಸ್ಸಿನ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಉದ್ಯಮಿ ಭಾವಿಸಿದ್ದರು. ನಂತರದ ದಿನಗಳಲ್ಲಿ ಉಗ್ರರಿಂದ ಆಕೆ ಕ್ರೂರವಾಗಿ ಹತ್ಯೆಗೀಡಾಗಿದ್ದಾಳೆ ಎಂಬುದು ತಿಳಿದುಬಂದಿದೆ.

    ನಾನು ಇಸ್ರೇಲ್‌ಗೆ ಬಂದಿಳಿದ 3 ಗಂಟೆಗಳ ನಂತರ ದಕ್ಷಿಣ ಭಾಗಕ್ಕೆ ಹೋದೆ. ಅಲ್ಲಿ ನನ್ನ ಮಗಳು ಇದ್ದ ಕಾರನ್ನು ಹುಡುಕಲು ಸಾಧ್ಯವಾಯಿತು. ಕಾರನ್ನು ಪತ್ತೆಹಚ್ಚಿದಾಗ ಅದರಲ್ಲಿ ಕೆಲವು ಸಾಮಾನುಗಳು ಸಿಕ್ಕಿದವು. ಕ್ರ್ಯಾಶ್‌ ಕರೆ ಹೊಂದಿರುವ ಆಕೆಯ ಸೆಲ್‌ಫೋನ್‌ನಿಂದ ನಾವು ಕರೆ ಸ್ವೀಕರಿಸಿದ್ದೆವು. ಹೀಗಾಗಿ ಕಾರನ್ನು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಇಯಾಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    ಹಮಾಸ್‌ ಬಂಡುಕೋರರು ಕಾರನ್ನು ಸುತ್ತುವರಿದು ದಾಳಿ ನಡೆಸಿದ್ದಾರೆ. ಸುಮಾರು ಐದು ಜನರು ದಾಳಿ ನಡೆಸಿ ಆಕೆಯನ್ನು ಕೊಂದಿದ್ದಾರೆ ಎಂದು ಡೇನಿಯಲ್‌ ತಂದೆ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]