Tag: Israel

  • ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    – ಹಮಾಸ್ ಉಗ್ರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆ

    ಟೆಲ್ ಅವೀವ್: ಒಂದೆಡೆ ಗಾಜಾದ ಮೇಲೆ ಇಸ್ರೇಲ್ (Israel) ವೈಮಾನಿಕ ದಾಳಿ (Airstrike) ನಡೆಸಿದ್ದರೆ, ಇನ್ನೊಂದೆಡೆ ಹಮಾಸ್ (Hamas) ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಗಾಜಾದ ಮಾಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಗಾಜಾದ ಮೇಲೆ ಭಾನುವಾರ ರಾತ್ರಿ ಆರಂಭವಾದ ಇಸ್ರೇಲ್ ದಾಳಿ ಕ್ರಿಸ್‍ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್‍ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಪರಿಣಾಮ ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

    ಇದರ ನಡುವೆಯೇ ಬೆಥ್ ಲೆಹೆಮ್‍ನಲ್ಲಿ (Bethlehem) ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸೆರೆ ಹಿಡಿದಿತ್ತು. ಹಿಂದಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ 200 ಪ್ಯಾಲೇಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಆಕ್ಸಿಡೆಂಟ್ ಆಗಿ ಕಟ್ ಆದ ತಲೆ ಮೂರೂವರೆ ಗಂಟೆ ಶೋಧದ ಬಳಿಕ ಸಿಕ್ತು..!

  • ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ

    ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ

    ಟೆಲ್‌ ಅವೀವ್‌: ಜೆರುಸಲೆಮ್‌ ಮೇಲೆ ರಾಕೆಟ್‌ ದಾಳಿ ನಡೆದ ಸಂದರ್ಭದಲ್ಲಿ ಭಯೋತ್ಪಾದಕರು ಎಂದು ತಪ್ಪಾಗಿ ಭಾವಿಸಿ ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ (Israel Army) ತಿಳಿಸಿದೆ.

    ಹಮಾಸ್ (Hamas) ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಪ್ರಾರಂಭವಾಯಿತು. ಇಲ್ಲಿಯವರೆಗೆ ಇಸ್ರೇಲಿ ಅಧಿಕಾರಿಗಳು ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

    ಹಮಾಸ್ ಬಂಡುಕೋರರ ಗುಂಪನ್ನು ನಾಶಮಾಡಲು ಮತ್ತು ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಅಂದಾಜು 250 ಒತ್ತೆಯಾಳುಗಳನ್ನು ವಾಪಸ್‌ ಕರೆತರುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್, ಭಾರಿ ಆಕ್ರಮಣ ನಡೆಸಿದೆ. ಇಸ್ರೇಲ್‌ ಸೇನೆ ಮುತ್ತಿಗೆ ಹಾಕಿದ ಹೆಚ್ಚಿನ ಪ್ರದೇಶವನ್ನು ನಾಶಮಾಡಿದೆ.

    ಯುದ್ಧದಿಂದ ಕನಿಷ್ಠ 18,800 ಜನರು ಹತರಾಗಿದ್ದಾರೆ. ಅವರ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್ ಸರ್ಕಾರ ತಿಳಿಸಿದೆ. ಶುಕ್ರವಾರವೂ ಭೀಕರ ದಾಳಿ ಮುಂದುವರಿದಿದ್ದು, ದಕ್ಷಿಣದ ನಗರವಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಸೈನಿಕರಿದ್ದ ಮನೆಯನ್ನು ಸ್ಫೋಟಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಇದನ್ನೂ ಓದಿ: ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

    ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ 60 ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿ ತಿಳಿಸಿದೆ.

  • ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

    ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

    ಟೆಲ್ ಅವಿವ್: ಇಸ್ರೇಲ್ (Israel) ಸೇನೆ ಗಾಜಾದಲ್ಲಿನ (Gaza) ಹಮಾಸ್ (Hamas) ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ (Tunnel) ಸಮುದ್ರದ ನೀರನ್ನು ಬಿಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

    ಹಮಾಸ್ ಉಗ್ರರು ಒತ್ತೆಯಾಳುಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಬಳಸಲಾಗುತ್ತಿದೆ ಎಂದು ನಂಬಲಾಗಿರುವ ಈ ಸುರಂಗಗಳನ್ನು ನಾಶಪಡಿಸಲು ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಅಯ್ಯಪ್ಪ ದರ್ಶನ ಸಿಗದೇ ವಾಪಸ್‌ – ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲ

    ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್‌ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಗುಂಡು ತಗುಲಿದ ಸ್ಥಿತಿಯಲ್ಲಿ ಅಗ್ನಿವೀರನ ಮೃತದೇಹ ಪತ್ತೆ

  • ಗಾಜಾ ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರ ಹತ್ಯೆಗೆ ಮುಂದಾದ ಇಸ್ರೇಲ್‌

    ಗಾಜಾ ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರ ಹತ್ಯೆಗೆ ಮುಂದಾದ ಇಸ್ರೇಲ್‌

    ಟೆಲ್‌ ಅವೀವ್‌: ಕೇವಲ ಗಾಜಾ ಪಟ್ಟಿಯಲ್ಲಿ (Gaza Strip) ಅಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್‌ (Hamas) ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್‌ (Israel) ಈಗ ಮುಂದಾಗಿದೆ.

    ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ (Mossad) ವಿಶ್ವದೆಲ್ಲೆಡೆ ಇರುವ ಹಮಾಸ್‌ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಆರಂಭಿಸಿದೆ. ಕತಾರ್‌ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.  ಇದನ್ನೂ ಓದಿ: ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು

    ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್‌ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.


    ವಿದೇಶದಲ್ಲಿ ಹಮಾಸ್‌ ನಾಯಕರನ್ನು ಇಸ್ರೇಲ್‌ ಹತ್ಯೆ ಮಾಡುವುದು ಹೊಸದೆನಲ್ಲ. ಈ ಹಿಂದೆ ಹಲವು ರಹಸ್ಯ ಕಾರ್ಯಾಚರಣೆ ನಡೆಸಿ ನಾಯಕರನ್ನು ಹತ್ಯೆ ಮಾಡಿತ್ತು. ಲೆಬನಾನ್‌ ಮತ್ತು ಬೈರುತ್‌ನಲ್ಲಿದ್ದ ಪ್ಯಾಲೆಸ್ತೇನಿಯನ್‌ ಉಗ್ರಗಾಮಿಗಳ ಮೇಲೆ ಮಹಿಳೆಯರ ಮೂಲಕ ಇಸ್ರೇಲ್‌ ದಾಳಿ ನಡೆಸಿ ಕೊಂದು ಹಾಕಿತ್ತು. ಪ್ರವಾಸಿಯ ಸೋಗಿನಲ್ಲಿ ದುಬೈನಲ್ಲಿದ್ದ ಹಮಾಸ್‌ ನಾಯಕನನ್ನು ಹತ್ಯೆ ಮಾಡಿತ್ತು. ಸಿರಿಯಾದಲ್ಲಿ ಹಿಜ್ಬುಲ್ಲಾ ನಾಯಕನನ್ನು ಕೊಲ್ಲಲು ಇಸ್ರೇಲ್ ಕಾರ್ ಬಾಂಬ್ ಬಳಸಿತ್ತು. ಇರಾನ್‌ನಲ್ಲಿ ಪರಮಾಣು ವಿಜ್ಞಾನಿಯನ್ನು ಕೊಲ್ಲಲು ರಿಮೋಟ್-ನಿಯಂತ್ರಿತ ರೈಫಲ್ ಬಳಸಿತ್ತು.

  • ಇಸ್ರೇಲ್‌ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್‌ ಆರೋಪ

    ಇಸ್ರೇಲ್‌ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್‌ ಆರೋಪ

    ಟೆಲ್‌ ಅವೀವ್: ಗಾಜಾದ (Gaza) ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಲ್ಲಿ ಒತ್ತೆಯಾಳಾಗಿದ್ದ 10 ತಿಂಗಳ ಮಗು ಸಾವಿಗೀಡಾಗಿದೆ ಎಂದು ಹಮಾಸ್‌ (Hamas) ಆರೋಪ ಮಾಡಿದೆ.

    ಕೆಫೀರ್ ಬಿಬಾಸ್ (9 ತಿಂಗಳು) ಮಗುವನ್ನು ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿರುವ ಮನೆಯಿಂದ ಸೆರೆ ಹಿಡಿಯಲಾಗಿತ್ತು. ಹಠಾತ್ ದಾಳಿಯ ಸಂದರ್ಭದಲ್ಲಿ ಆತನ ತಾಯಿ ಮತ್ತು ನಾಲ್ಕು ವರ್ಷದ ಸಹೋದರನನ್ನು ಸಹ ಒತ್ತೆಯಾಳಾಗಿ ಇರಿಸಲಾಗಿತ್ತು. ಬುಧವಾರ ಮೂವರೂ ಗಾಜಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಈ ಬಗ್ಗೆ ಇಸ್ರೇಲಿ ಸೇನೆಯು ತನಿಖೆ ನಡೆಸುತ್ತಿದೆ. ಇದನ್ನೂ ಓದಿ: 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

    ಗಾಜಾ ಪಟ್ಟಿಯಲ್ಲಿರುವ ಎಲ್ಲಾ ಒತ್ತೆಯಾಳುಗಳ ಭದ್ರತೆಗೆ ಹಮಾಸ್ ಸಂಪೂರ್ಣ ಜವಾಬ್ದಾರವಾಗಿದೆ. ಹಮಾಸ್‌ನ ಕ್ರಮಗಳು ಒತ್ತೆಯಾಳುಗಳಿಗೆ ಅಪಾಯವನ್ನುಂಟುಮಾಡುವುದನ್ನು ಮುಂದುವರೆಸಿದೆ. ಅಪಾಯದಲ್ಲಿ 9 ಮಕ್ಕಳಿದ್ದಾರೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

    ಕದನ ವಿರಾಮ ಜಾರಿಗೆ ಬರುವ ಕೆಲವೇ ದಿನಗಳ ಮೊದಲು ಇಸ್ರೇಲಿ ಬಾಂಬ್ ದಾಳಿಯಲ್ಲಿ ಮಗು ಕೆಫೀರ್, ಆತನ ಸಹೋದರ ಏರಿಯಲ್ ಮತ್ತು ಅವರ ತಾಯಿ ಶಿರಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಸೆರೆಹಿಡಿದಿದ್ದ ಒತ್ತೆಯಾಳುಗಳಲ್ಲಿ ಬಿಬಾಸ್ ಕುಟುಂಬವೂ ಸೇರಿದೆ. ಇದನ್ನೂ ಓದಿ: 3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್

    ತಿಂಗಳ ಯುದ್ಧದ ನಂತರ ಇಸ್ರೇಲ್‌ ಮತ್ತು ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡೂ ಕಡೆಯವರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಜನರನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿವೆ. ಈಗಾಗಲೇ ಇಸ್ರೇಲ್‌ ಮತ್ತು ಹಮಾಸ್‌ ಕಡೆಯಿಂದ ಸೆರೆಹಿಡಿಯಲಾಗಿದ್ದ ನೂರಾರು ಜನರು ಬಿಡುಗಡೆಯಾಗಿದ್ದಾರೆ.

  • 4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

    4 ವರ್ಷದ ಬಾಲಕಿ ಸೇರಿ 3ನೇ ಬ್ಯಾಚ್‍ನ 17 ಮಂದಿಯ ಬಿಡುಗಡೆ ಮಾಡಿದ ಹಮಾಸ್

    ಟೆಲ್‍ಅವೀವ್: ನಾಲ್ಕು ವರ್ಷದ ಇಸ್ರೇಲಿ-ಅಮೇರಿಕನ್ (Israeli-American) ಬಾಲಕಿ ಸೇರಿ ಮೂರನೇ ಬ್ಯಾಚ್‍ನ 17ಕ್ಕೂ ಹೆಚ್ಚು ಮಂದಿಯನ್ನು ಹಮಾಸ್ ಭಾನುವಾರ ಬಿಡುಗಡೆ ಮಾಡಿದೆ.

    ಇಸ್ರೇಲ್ ಮತ್ತು ಹಮಾಸ್ (Israel- Hamas) ನಡುವಿನ ಒಪ್ಪಂದದ ಅಡಿಯಲ್ಲಿ 50 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದರೆ 150 ಪ್ಯಾಲೆಸ್ತೇನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಹಾಗಾಗಿ ನಾಲ್ಕು ದಿನಗಳ ಕದನ ವಿರಾಮಕ್ಕೆ ಹಮಾಸ್ ಹಾಗೂ ಇಸ್ರೇಲ್ ಒಪ್ಪಿಗೆ ಸೂಚಿಸಿತ್ತು.

    ಈ ಹಿನ್ನೆಲೆಯಲ್ಲಿ ಇದೀಗ ಮೂರನೇ ಬ್ಯಾಚ್‍ನ 13 ಇಸ್ರೇಲಿಗಳು ಮತ್ತು 4 ವಿದೇಶಿ ಪ್ರಜೆಗಳ ಮೂರನೇ ಬ್ಯಾಚ್ ಅನ್ನು ರೆಡ್ ಕ್ರಾಸ್ ಸಂಸ್ಥೆಗೆ ಹಮಾಸ್ ಹಸ್ತಾಂತರಿಸಿದೆ ಎಂದು ಹೇಳಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ನವೆಂಬರ್ 24 ರಂದು ಪ್ರಾರಂಭವಾಯಿತು.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗಾಜಾ ಪಟ್ಟಿಗೆ ತೆರಳಿ ಸೈನಿಕರಿಗೆ ಸ್ಫೂರ್ತಿ ತುಂಬಿದರು. ಮೊದಲು ಹಮಾಸ್ ಅನ್ನು ನಾಶ ಮಾಡುವುದು ಹಾಗೂ ಎರಡನೆಯದು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಮರಳಿ ತರುವುದು ನಮ್ಮ ಮೂಲ ಉದ್ದೇಶ ಎಂದರು.

    ಹಮಾಸ್ ಶನಿವಾರ ರಾತ್ರಿ ಒತ್ತೆಯಾಳುಗಳ 2ನೇ ಬ್ಯಾಚ್‍ನಲ್ಲಿ 17 ಜನರನ್ನು ಬಿಡುಗಡೆ ಮಾಡಿತ್ತು. ಇವರಲ್ಲಿ 13 ಇಸ್ರೇಲಿಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. 4 ದಿನಗಳ ಅವಧಿಯಲ್ಲಿ ಒಟ್ಟು 50 ಒತ್ತೆಯಾಳುಗಳನ್ನು 150 ಪ್ಯಾಲೇಸ್ತೀನಿಯನ್ ಕೈದಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಒತ್ತೆಯಾಳುಗಳ ವಿನಿಮಯವಾಗಿ ಇಸ್ರೇಲ್ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

  • 3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್

    3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್

    ಟೆಲ್ ಅವಿವ್: ಇಸ್ರೇಲ್ (Israel) ಹಾಗೂ ಹಮಾಸ್ (Hamas) ನಡುವಿನ ಕದನಕ್ಕೆ ವಿರಾಮ ನೀಡಿದ ಬಳಿಕ ಇದೀಗ ಹಮಾಸ್ 3ನೇ ಬ್ಯಾಚ್ ಒತ್ತೆಯಾಳುಗಳನ್ನು (Hostages) ಬಿಡುಗಡೆ ಮಾಡಲು ಮುಂದಾಗಿದೆ.

    ಹಮಾಸ್ ಭಾನುವಾರ ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಸ್ವೀಕರಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಮಧ್ಯವರ್ತಿಯಾಗಿ ಕತಾರ್ ನಿರ್ವಹಿಸುತ್ತಿದ್ದು, ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್‌ಗೆ ನೀಡಿದೆ.

    ಇಸ್ರೇಲ್ ಹಾಗೂ ಹಮಾಸ್ ನಡುವೆ 4 ದಿನಗಳ ಕದನ ವಿರಾಮ ಘೋಷಿಸಿ ಇಂದಿಗೆ 3 ದಿನವಾಗಿದೆ. ಕದನ ವಿರಾಮವನ್ನು ಇನ್ನಷ್ಟು ವಿಸ್ತರಿಸಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕತಾರ್ ತಿಳಿಸಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!

    ಹಮಾಸ್ ಶನಿವಾರ ರಾತ್ರಿ ಒತ್ತೆಯಾಳುಗಳ 2ನೇ ಬ್ಯಾಚ್‌ನಲ್ಲಿ 17 ಜನರನ್ನು ಬಿಡುಗಡೆ ಮಾಡಿತು. ಇವರಲ್ಲಿ 13 ಇಸ್ರೇಲಿಗಳು ಮತ್ತು 4 ಥಾಯ್ ಪ್ರಜೆಗಳು ಸೇರಿದ್ದಾರೆ. 4 ದಿನಗಳ ಅವಧಿಯಲ್ಲಿ ಒಟ್ಟು 50 ಒತ್ತೆಯಾಳುಗಳನ್ನು 150 ಪ್ಯಾಲೇಸ್ತೀನಿಯನ್ ಕೈದಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಒತ್ತೆಯಾಳುಗಳ ವಿನಿಮಯವಾಗಿ ಇಸ್ರೇಲ್ 39 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

  • 2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

    2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

    ಟೆಲ್‌ ಅವೀವ್‌: ಇಸ್ರೇಲ್‌ನ (Israel) ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ಹಮಾಸ್ (Hamas) ವಶಪಡಿಸಿಕೊಂಡ ಒತ್ತೆಯಾಳುಗಳ ಮೊದಲ ಬ್ಯಾಚ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಈಗ ತಾತ್ಕಾಲಿಕ ಕದನ ವಿರಾಮ ಇದೆ.

    ಪ್ಯಾಲೆಸ್ಟೀನಿಯನ್‌ (Palestine) ಬಂಡುಕೋರರ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾಗಿದ್ದ 13 ಇಸ್ರೇಲಿ ಒತ್ತೆಯಾಳುಗಳು ತಮ್ಮ ನಾಡಿಗೆ ಮರಳಿದರು. ಅವರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಸಿದ್ಧತೆ

    ಬಿಡುಗಡೆಯಾದವರ ಪೈಕಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರು ಸೇರಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪಟ್ಟಿಯು ತಿಳಿಸಿದೆ.

    ಹಮಾಸ್ ಒತ್ತೆಯಾಳುಗಳನ್ನು ಮಾನವೀಯ ಸಂಘಟನೆಗೆ ಹಸ್ತಾಂತರಿಸಿದ ನಂತರ ರೆಡ್ ಕ್ರಾಸ್ ವಾಹನಗಳ ಬೆಂಗಾವಲು ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯನ್ನು ದಾಟುತ್ತಿರುವ ದೃಶ್ಯ ವೈರಲ್‌ ಆಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಕೈ ಬೀಸುತ್ತಿರುವ ದೃಶ್ಯವೂ ಇದೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

    ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೂಡಿ ಮಾತುಕತೆಯ ನಂತರದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಪ್ಯಾಲೆಸ್ಟೀನಿಯನ್‌ ಕೈದಿಗಳು, ಮಹಿಳೆಯರು ಮತ್ತು ಹದಿಹರೆಯದ ಹುಡುಗರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

    ಹಮಾಸ್ ಶುಕ್ರವಾರ ಒಟ್ಟು 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ತನ್ನ ಜೈಲುಗಳಿಂದ 39 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಿದೆ ಎಂದು ಪ್ರಮುಖ ಮಧ್ಯವರ್ತಿ ಕತಾರ್ ದೃಢಪಡಿಸಿದೆ.

  • ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ

    ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ

    ಟೆಲ್ ಅವಿವ್: ಕಳೆದ ಆರು ವಾರಗಳಿಂದ ನಡೀತಿರೋ ಹಮಾಸ್-ಇಸ್ರೇಲ್ (Israel- Hamas) ಭೀಕರ ಯುದ್ಧದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ನಡೆಸ್ತಿದ್ದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ.

    50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡ್ವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಇಸ್ರೇಲ್ ಸಂಪುಟ ಒಪ್ಪಿಗೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಇಸ್ರೇಲ್ 4 ದಿನ ಪ್ಯಾಲಿಸ್ತೇನ್ ಮೇಲೆ ಯಾವುದೇ ರೀತಿಯ ದಾಳಿಯನ್ನು ಮಾಡಲ್ಲ. ಈ ಸಂದರ್ಭದಲ್ಲಿ 240 ಒತ್ತೆಯಾಳುಗಳ ಪೈಕಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 50 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ.

    ಅತ್ತ ಇಸ್ರೇಲ್ ಕೂಡ ತಮ್ಮ ಜೈಲುಗಳಲ್ಲಿರೋ ಪ್ಯಾಲಿಸ್ತೇನ್ (Palestine) ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಲಿದೆ. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಬೇಕೆಂಬ ಕಾರಣಕ್ಕೆ ಕಠಿಣವಾದರೂ ಸರಿಯಾದ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಿನಕ್ಕೆ ಕನಿಷ್ಠ 10 ಒತ್ತೆಯಾಳುಗಳನ್ನು ರಿಲೀಸ್ ಮಾಡ್ತಿದ್ರೆ ಕದನ ವಿರಾಮ ವಿಸ್ತರಣೆಗೊಳ್ಳುತ್ತದೆ ಎಂದು ಇಸ್ರೇಲ್ ತಿಳಿಸಿದೆ. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

    ಕದನ ವಿರಾಮ ಯಾವಾಗಿನಿಂದ ಜಾರಿ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಕದನ ವಿರಾಮ ಒಪ್ಪಂದವನ್ನು ಅಮೆರಿಕ (America) ಸೇರಿ ವಿವಿಧ ದೇಶಗಳು ಸ್ವಾಗತಿಸಿವೆ. ಈ ಮಧ್ಯೆ ಒಪ್ಪಂದ ಏರ್ಪಟ್ಟ ಕೆಲವೇ ಕ್ಷಣಗಳಲ್ಲಿ ಓರ್ವ ಒತ್ತೆಯಾಳು ಮಹಿಳೆ ಸಾವನ್ನಪ್ಪಿದ್ದಾರೆ.

  • ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ನವದೆಹಲಿ: ಮುಂಬೈ ಭಯೋತ್ಪಾದನಾ (Mumbai Attack) ದಾಳಿಯಾಗಿ ನವೆಂಬರ್‌ಗೆ 15 ವರ್ಷ. ಈ ಕರಾಳ ದಿನದ ಸ್ಮರಣಾರ್ಥ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ ನಿಷೇಧಿಸುವುದಾಗಿ ಇಸ್ರೇಲ್‌ ಘೋಷಿಸಿದೆ. ಮುಂಬೈ ದಾಳಿ ಖಂಡನೀಯ ಎಂದು ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದಿದೆ.

    ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ. ಲಷ್ಕರ್-ಎ-ತೈಬಾವನ್ನು (Lashkar-e-Taiba) ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪೂರೈಸಿದೆ ಎಂದು ಭಾರತದಲ್ಲಿನ ಇಸ್ರೇಲ್ (Israel) ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ಪಟ್ಟಿ ಮಾಡಿದೆ. ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಈ ಭಯೋತ್ಪಾದಕ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದೆ.

    ಭಯೋತ್ಪಾದಕ ಸಂಘಟನೆ ದಾಳಿಯ ಸಂತ್ರಸ್ತರು, ಇಸ್ರೇಲ್‌ ಸೇರಿದಂತೆ ಮುಂಬೈ ದಾಳಿಯಲ್ಲಿ ಬದುಕುಳಿದ ಮತ್ತು ದುಃಖಿತ ಕುಟುಂಬಗಳಿಗೆ ಇಸ್ರೇಲ್‌ ಸಂತಾಪ ಸೂಚಿಸಿದೆ. ಭವಿಷ್ಯದ ಶಾಂತಿಯುತ ಸಮಾಜದ ಭರವಸೆಯಲ್ಲಿ ನಾವು ನಿಮ್ಮೊಂದಿಗೆ ಒಂದಾಗಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    2008 ರ ನವೆಂಬರ್‌ನಲ್ಲಿ ಮುಂಬೈನಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿದ್ದವು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸಂಪರ್ಕ ಹೊಂದಿದ್ದ 10 ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಭಯೋತ್ಪಾದಕರು ಮುಂಬೈನ ದಕ್ಷಿಣ ಭಾಗದಲ್ಲಿ ಛತ್ರಪತಿ ಶಿವಾಜಿ ರೈಲು ನಿಲ್ದಾಣ, ಜನಪ್ರಿಯ ಲಿಯೋಪೋಲ್ಡ್ ಕೆಫೆ, ಎರಡು ಆಸ್ಪತ್ರೆಗಳು ಮತ್ತು ಥಿಯೇಟರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು.