Tag: Israel

  • ಇರಾನ್, ಇಸ್ರೇಲ್‍ಗೆ ಪ್ರಯಾಣಿಸದಂತೆ ನಾಗರಿಕರಿಗೆ ಕೇಂದ್ರದ ಸಲಹೆ

    ಇರಾನ್, ಇಸ್ರೇಲ್‍ಗೆ ಪ್ರಯಾಣಿಸದಂತೆ ನಾಗರಿಕರಿಗೆ ಕೇಂದ್ರದ ಸಲಹೆ

    ನವದೆಹಲಿ: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಸಂಘರ್ಷದಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಎರಡೂ ದೇಶಗಳಿಗೆ ಪ್ರಯಾಣಿಸದಂತೆ ಕೇಂದ್ರ ಸರ್ಕಾರ ನಾಗರಿಕರಿಗೆ ಸಲಹೆ ನೀಡಿದೆ.

    ಸಿರಿಯಾದಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೇಲೆ ಶಂಕಿತ ಇಸ್ರೇಲಿ ವೈಮಾನಿಕ ದಾಳಿಗೆ (Airstrike) ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‍ನ ಬೆದರಿಕೆ ಬಂದ ನಂತರ ವಿದೇಶಾಂಗ ಸಚಿವಾಲಯ (Foreign Ministry) ಈ ಸಲಹೆ ನೀಡಿದೆ. ಉಭಯ ದೇಶಗಳಲ್ಲಿನ ತಮ್ಮ ದೇಶದ ನಾಗರಿಕರು ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಾತ್ರಿ 10 ಗಂಟೆ ನಂತರವೂ ಪ್ರಚಾರ – ಅಣ್ಣಾಮಲೈ ವಿರುದ್ಧ ದೂರು ದಾಖಲು

    ಅಮೆರಿಕ ಮತ್ತು ರಷ್ಯಾ ಸೇರಿದಂತೆ ಇತರೆ ದೇಶಗಳು ತಮ್ಮ ಸಿಬ್ಬಂದಿ ಮತ್ತು ನಾಗರಿಕರಿಗೆ ಇದೇ ರೀತಿಯ ಸಲಹೆಗಳನ್ನು ನೀಡಿವೆ.

    ಇರಾನ್‍ನ ಪ್ರತೀಕಾರ, ಗಾಜಾದಲ್ಲಿ ಇರಾನ್ ಬೆಂಬಲಿತ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಯುದ್ಧದಂತೆ ಮರುಕಳಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.

    ಸಂಘರ್ಷವನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕ, ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಇರಾಕ್‍ನ ವಿದೇಶಾಂಗ ಮಂತ್ರಿಗಳಿಗೆ ಮಾತುಕತೆ ನಡೆಸಿದೆ. ಇರಾನ್‍ಗೆ ಇಸ್ರೇಲ್‍ನೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುವಂತೆ ಕೇಳಿಕೊಳ್ಳಲಾಗಿದೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್‌ ಬಾಂಬ್‌ ಸ್ಫೋಟದ ಸೂತ್ರಧಾರ!

  • ಇಸ್ರೇಲ್‌ನಲ್ಲಿ ಅಲ್‌ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು

    ಇಸ್ರೇಲ್‌ನಲ್ಲಿ ಅಲ್‌ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು

    ಟೆಲ್‌ ಅವಿವ್‌: ಕತಾರ್‌ ಮೂಲದ ಅಲ್‌ ಜಜೀರಾ (Al Jazeera) ಸುದ್ದಿ ವಾಹಿನಿ ಇಸ್ರೇಲ್‌ನಲ್ಲಿ ನಿಷೇಧವಾಗಲಿದೆ. ಇಸ್ರೇಲ್‌ ಸಂಸತ್ತು (Israel Parliament) ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಸೋಮವಾರ ಪಾಸ್‌ ಮಾಡಿದೆ.

    ಈ ಮಸೂದೆ ಮಂತ್ರಿಗಳಿಗೆ ಇಸ್ರೇಲ್‌ನಿಂದ ಸುದ್ದಿ ವಾಹಿನಿಯ ಪ್ರಸಾರವನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಮತಕ್ಕೆ ಹಾಕಿದಾಗ 70 ಮಂದಿ ಸಂಸದರು ಒಪ್ಪಿಗೆ ನೀಡಿದರೆ 10 ಮಸೂದೆಯನ್ನು ವಿರೋಧಿಸಿದ್ದರು. ಮಸೂದೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರದ ಜೊತೆ ಇಸ್ರೇಲ್‌ನಲ್ಲಿ ಅವರ ಕಚೇರಿ ಮುಚ್ಚಲು ಅನುಮತಿ ನೀಡುತ್ತದೆ. ಇದನ್ನೂ ಓದಿ: 410 ಕೋಟಿ ಒಡೆಯ ಸ್ಟಾರ್‌ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ

    ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ಕೂಡಲೇ ಇಸ್ರೇಲ್‌ನಲ್ಲಿ ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ನೆತನ್ಯಾಹು (PM Benjamin Netanyahu) ಪ್ರತಿಜ್ಞೆ ಮಾಡಿದ್ದಾರೆ. ಅಲ್ ಜಜೀರಾವನ್ನು ಉಗ್ರರ ವಾಹಿನಿ ಎಂದು ನೆತನ್ಯಾಹು ಕರೆದಿದ್ದಾರೆ. ಇದನ್ನೂ ಓದಿ: ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್‌ ಶಾ

    ಗಾಜಾದಲ್ಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲ್ ಜಜೀರಾ ಸಿಬ್ಬಂದಿ ಪತ್ರಕರ್ತ ಮತ್ತು ಸ್ವತಂತ್ರ ಉದ್ಯೋಗಿ ಭಯೋತ್ಪಾದಕರು ಎಂದು ಇಸ್ರೇಲ್ ಜನವರಿಯಲ್ಲಿ ಹೇಳಿಕೊಂಡಿತ್ತು. ಗಾಯಗೊಂಡ ಚಾನೆಲ್‌ನ ಇನ್ನೊಬ್ಬ ಪತ್ರಕರ್ತ ಹಮಾಸ್‌  ಡೆಪ್ಯುಟಿ ಕಂಪನಿ ಕಮಾಂಡರ್ ಎಂದು ಹೇಳಿತ್ತು.

     

  • ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್‌ ಮೇಲೆ ದಾಳಿ – 20 ಮಂದಿ ಸಾವು

    ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್‌ ಮೇಲೆ ದಾಳಿ – 20 ಮಂದಿ ಸಾವು

    ಗಾಜಾ: ಆಹಾರದ ನೆರವಿಗಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್ ಮೇಲೆ ದಾಳಿ ನಡೆದಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. 155 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯ ಮೊಹಮ್ಮದ್ ಘ್ರಾಬ್ ತಿಳಿಸಿದ್ದಾರೆ. ಇದನ್ನೂ ಓದಿ: ಜಪಾನ್‌ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ

    ಗಾಜಾದಲ್ಲಿನ ಕುವೈತ್ ವೃತ್ತದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರ ಮೇಲೆ ಇಸ್ರೇಲಿ ಆಕ್ರಮಣ ಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಗಂಭೀರ ಆರೋಪ ಮಾಡಿದೆ. ದಾಳಿಗೆ ಇಸ್ರೇಲ್‌ ಹೊಣೆ ಎಂದು ಗಾಜಾ ಸಿವಿಲ್‌ ಡಿಫೆನ್ಸ್‌ ವಕ್ತಾರ ಮಹಮೂದ್‌ ಬಸಲ್‌ ಆರೋಪಿಸಿದ್ದಾರೆ.

    ಉತ್ತರ ಗಾಜಾ ಪಟ್ಟಿಯಲ್ಲಿ ಸಂಭವಿಸುವ ಕ್ಷಾಮದ ಪರಿಣಾಮವಾಗಿ ಪರಿಹಾರದ ನೆರವಿಗಾಗಿ ಕಾಯುತ್ತಿರುವ ಮುಗ್ಧ ನಾಗರಿಕರನ್ನು ಕೊಲ್ಲುವ ನೀತಿಯನ್ನು ಇಸ್ರೇಲಿ ಆಕ್ರಮಣ ಪಡೆಗಳು ಇನ್ನೂ ಅಭ್ಯಾಸ ಮಾಡುತ್ತಿವೆ ಎಂದು ಮಹಮೂದ್ ಬಸಲ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

    ಏತನ್ಮಧ್ಯೆ, ಮಾನವೀಯ ನೆರವು ಮೊದಲ ಬಾರಿಗೆ ಸಮುದ್ರದ ಮೂಲಕ ಗಾಜಾ ಪ್ರವೇಶಿಸಲಿದೆ ಎಂದು ಇಸ್ರೇಲ್‌ ರಕ್ಷಣಾ ಪಡೆಗಳು ತಿಳಿಸಿವೆ. UAE ಯಿಂದ ನೆರವಿನ ಹಡಗು ಹಡಗು ಮಂಗಳವಾರ ಸೈಪ್ರಸ್‌ನ ಲಾರ್ನಾಕಾ ಬಂದರಿನಿಂದ ಪ್ರಯಾಣಿಸಿದೆ ಎಂದು ಹೇಳಿದೆ.

  • ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

    ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

    – ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಭಾರತೀಯರಿಗೆ ಕೇಂದ್ರ ಸೂಚನೆ

    ಟೆಲ್‌ ಅವಿವಾ: ಇಸ್ರೇಲ್-ಲೆಬನಾನ್ ಗಡಿಯ ಬಳಿ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿಯೊಬ್ಬರು (Kerala Man) ಸಾವನ್ನಪ್ಪಿರುವ ಪ್ರಕರಣ ವರದಿಯಾದ ಬೆನ್ನಲ್ಲೇ ಭಾರತೀಯರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

    ಇಸ್ರೇಲ್‌ನ (Israel) ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇಸ್ರೇಲಿ ಅಧಿಕಾರಿಗಳು ನಮ್ಮ ಎಲ್ಲಾ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

    ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ಸುರಕ್ಷತಾ ಸಲಹೆಗಳ ದೃಷ್ಟಿಯಿಂದ ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣದ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವವರು, ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗಲು ಸೂಚಿಸಲಾಗಿದೆ. ರಾಯಭಾರ ಕಚೇರಿಯು ಸಂಪರ್ಕದಲ್ಲಿದೆ.

    ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ಕ್ಷಿಪಣಿ ದಾಳಿಯಲ್ಲಿ ಕೇರಳದ ಕೊಲ್ಲಂನ ವ್ಯಕ್ತಿಯೊಬ್ಬರು ನಿನ್ನೆ ಉತ್ತರ ಇಸ್ರೇಲ್‌ನ ಮಾರ್ಗಲಿಯೊಟ್‌ನಲ್ಲಿ ಸಾವನ್ನಪ್ಪಿದರು. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಇಂದು ಬೆಳಗ್ಗೆ ಹೇಳಿಕೆಯಲ್ಲಿ ಕೇರಳದ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಪಾಟ್ ನಿಬಿನ್ ಮ್ಯಾಕ್ಸ್‌ವೆಲ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಇಡುಕ್ಕಿಯ ಪಾಲ್ ಮೆಲ್ವಿನ್ ಮತ್ತು ಬುಷ್ ಜೋಸೆಫ್ ಜಾರ್ಜ್ ಎಂದು ತಿಳಿದು ಬಂದಿದೆ.

    ಮ್ಯಾಕ್ಸ್‌ವೆಲ್ ಅವರು ಎರಡು ತಿಂಗಳ ಹಿಂದೆಯಷ್ಟೇ ಇಸ್ರೇಲ್‌ಗೆ (Israel) ಆಗಮಿಸಿದ್ದರು. ಆದರೆ ದುರಾದೃಷ್ಟವಶಾತ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಅವರು ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಜೊತೆಗೆ ಇವರ ಪತ್ನಿ 7 ತಿಂಗಳ ಗರ್ಭಿಣಿ.

  • ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

    ಇಸ್ರೇಲ್‌ನಲ್ಲಿ ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಬಲಿ- ಇಬ್ಬರು ಗ್ರೇಟ್‌ ಎಸ್ಕೇಪ್‌

    – ಮೃತನ ಪತ್ನಿ 7 ತಿಂಗಳ ಗರ್ಭಿಣಿ

    ಟೆಲ್‌ ಅವೀವ್: ಲೆಬನಾನ್‌ನಿಂದ ಉಡಾವಣೆಯಾದ ಕ್ಷಿಪಣಿ ದಾಳಿಗೆ (Missile Attack) ಭಾರತೀಯ ಮೂಲದ ಒಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮೃತನನ್ನು ಕೇರಳದ (Kerala) ಕೊಲ್ಲಂ ಮೂಲದ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ (31) ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಎಂದು ಗುರುತಿಸಲಾಗಿದ್ದು, ಇವರು ಕೂಡ ಕೇರಳ ಮೂಲದವರು ಎನ್ನಲಾಗಿದೆ.

    ಮ್ಯಾಕ್ಸ್‌ವೆಲ್ ಅವರು ಎರಡು ತಿಂಗಳ ಹಿಂದೆಯಷ್ಟೇ ಇಸ್ರೇಲ್‌ಗೆ (Israel) ಆಗಮಿಸಿದ್ದರು. ಆದರೆ ದುರಾದೃಷ್ಟವಶಾತ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮ್ಯಾಕ್ಸ್‌ವೆಲ್‌ ಅವರು ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಜೊತೆಗೆ ಇವರ ಪತ್ನಿ 7 ತಿಂಗಳ ಗರ್ಭಿಣಿ.

    ಗಾಯಾಳುಗಳ ಚೇತರಿಕೆ: ಕ್ಷಿಪಣಿ ದಾಳಿಯಿಂದಾಗಿ ಜಾರ್ಜ್ ಅವರ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಪೆಟಾಹ್ ಟಿಕ್ವಾದಲ್ಲಿರುವ ಬೈಲಿನ್ಸನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.‌ ಇತ್ತ ಸಣ್ಣ ಪುಟ್ಟ ಗಾಯಗೊಂಡಿರುವ ಇನ್ನೋರ್ವ ಯುವಕ ಮೆಲ್ವಿನ್‌ ಅವರನ್ನು ಉತ್ತರ ಇಸ್ರೇಲಿ ನಗರದ ಸಫೆಡ್‌ನಲ್ಲಿರುವ ಝಿವ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರಾಗಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು

    ಘಟನೆ ಸಂಬಂಧ ಮೃತನ ತಂದೆ ಪಾಥ್ರೋಸ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿ, ಸಂಜೆ 4.30 ರ ಸುಮಾರು ಸೊಸೆಯಿಂದ ಕರೆ ಬಂದಿದ್ದು, ತನ್ನ ಮಗ ಅಪಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿಸಿದ್ದಾಳೆ. ನಂತರ 12.30ರ ಸುಮಾರಿಗೆ ಮಗನ ಸಾವಿನ ಸುದ್ದಿ ತಿಳಿಯಿತು. ನನಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಇಸ್ರೇಲ್‌ನಲ್ಲಿದ್ದರೆ, ಓರ್ವ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಕಣ್ಣೀರು ಹಾಕಿದರು.

    ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗೆಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ದ ಮಾರ್ಗಲಿಯೊಟ್‌ನ ತೋಟಕ್ಕೆ ಕ್ಷಿಪಣಿ ದಾಳಿಯಾಗಿದೆ ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (MDA) ಝಕಿ ಹೆಲ್ಲರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ದಾಳಿಯನ್ನು ಲೆಬನಾನ್‌ನ ಶಿಯಾ ಹೆಜ್ಬೊಲ್ಲಾ ಬಣ ನಡೆಸಿದೆ ಎನ್ನಲಾಗಿದೆ. ಇದು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಮಾಸ್‌ಗೆ ಬೆಂಬಲವಾಗಿ ಅಕ್ಟೋಬರ್ 8 ರಿಂದ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ.‌

  • ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು

    ಗಾಜಾ ನೆರವು ಕೇಂದ್ರದಲ್ಲಿ ಜನರ ಮೇಲೆ ಇಸ್ರೇಲ್‌ ಸೈನಿಕರ ಗುಂಡಿನ ದಾಳಿ – 104 ಮಂದಿ ಸಾವು

    ಪ್ಯಾಲೆಸ್ತೀನ್: ಗಾಜಾದ ನೆರವು ಕೇಂದ್ರದಲ್ಲಿ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ಗುಂಡಿನ ದಾಳಿಗೆ 104 ಮಂದಿ ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ನಗರದ ಪಶ್ಚಿಮ ನಬುಲ್ಸಿ ವೃತ್ತದಲ್ಲಿ ಆಹಾರಕ್ಕಾಗಿ ಸಾವಿರಾರು ಜನರು, ಸಹಾಯ ಟ್ರಕ್‌ಗಳ ಕಡೆಗೆ ಧಾವಿಸಿದ್ದರು. ಈ ವೇಳೆ ಇಸ್ರೇಲ್‌ ಪಡೆ ಹಿಂಸಾಚಾರ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದ ರ‍್ಯಾಟ್ ಹೋಲ್ ಮೈನಿಂಗ್ ಹೀರೋ ಮನೆ ನೆಲಸಮಗೊಳಿಸಿದ ಅಧಿಕಾರಿಗಳು

    ನೆರವಿನ ಟ್ಯಾಂಕ್‌ಗಳು ಸೇನಾಪಡೆ ಇದ್ದ ಜಾಗಕ್ಕೆ ಹತ್ತಿರದಲ್ಲಿದ್ದವು. ಜನರು ಟ್ಯಾಂಕ್‌ಗಳ ಹತ್ತಿರ ನೆರವಿಗಾಗಿ ನುಗ್ಗುತ್ತಿದ್ದಂತೆ, ಗುಂಪಿನ ಮೇಲೆ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ.

    ಉತ್ತರ ಗಾಜಾ ಪಟ್ಟಿಗೆ ಮಾನವೀಯ ನೆರವು ಟ್ರಕ್‌ಗಳು ಬಂದಿದ್ದವು. ಗಜಾನ್ ನಿವಾಸಿಗಳು ಟ್ರಕ್‌ಗಳನ್ನು ಸುತ್ತುವರಿದು, ಸರಬರಾಜನ್ನು ಲೂಟಿ ಮಾಡಲು ಪ್ರಯತ್ನಿಸಿದರು. ಹೀಗಾಗಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ತಳ್ಳಾಟ-ನೂಕಾಟದಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 3ನೇ ತ್ರೈಮಾಸಿಕದಲ್ಲಿ 8.4% ಪ್ರಗತಿ

    ಗಾಜಾದ ಜನಸಮೂಹವು ಸೈನ್ಯಕ್ಕೆ ಬೆದರಿಕೆಯನ್ನುಂಟು ಮಾಡುವ ರೀತಿಯಲ್ಲಿ ಪಡೆಗಳನ್ನು ಸಮೀಪಿಸಿತ್ತು. ಹೀಗಾಗಿ ಸೇನೆ ದಾಳಿ ನಡೆಸಿದೆ ಎಂದು ಇಸ್ರೇಲ್‌ ಮೂಲಗಳು ತಿಳಿಸಿವೆ.

  • ಲೆಬನಾನ್‌ ಗುರಿಯಾಗಿಸಿ ಇಸ್ರೇಲ್‌ನ ಭಾರೀ ದಾಳಿಯಲ್ಲಿ ಹಿಜ್ಬುಲ್ಲಾ ಸೀನಿಯರ್‌ ಕಮಾಂಡರ್‌ ಬಲಿ

    ಲೆಬನಾನ್‌ ಗುರಿಯಾಗಿಸಿ ಇಸ್ರೇಲ್‌ನ ಭಾರೀ ದಾಳಿಯಲ್ಲಿ ಹಿಜ್ಬುಲ್ಲಾ ಸೀನಿಯರ್‌ ಕಮಾಂಡರ್‌ ಬಲಿ

    ಟೆಲ್‌ ಅವೀವ್:‌ ದಕ್ಷಿಣ ಲೆಬನಾನ್‌ನಲ್ಲಿ (South Lebanon) ಇಸ್ರೇಲ್‌ (Isreal) ಸೈನಿಕರು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಗಣ್ಯ ರಾದ್ವಾನ್ ಪಡೆಯ ಹಿರಿಯ ಕಮಾಂಡರ್‌ ಒಬ್ಬ ಸಾವನ್ನಪ್ಪಿರುವುದಾಗಿ ಭದ್ರತಾ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

    ಮೃತನನ್ನು ವಿಸ್ಸಾಮ್ ಅಲ್-ತವಿಲ್ (Wissam al-Tawil) ಎಂದು ಗುರುತಿಸಲಾಗಿದೆ. ಈತ ರಾದ್ವಾನ್ ಪಡೆಯೊಳಗಿನ ಘಟಕದ ಉಪ ಮುಖ್ಯಸ್ಥ ಎನ್ನಲಾಗಿದೆ. ಲೆಬನಾನಿನ ಮಜ್ದಾಲ್ ಸೆಲ್ಮ್ ಗ್ರಾಮದ ಮೇಲಿನ ದಾಳಿಯಲ್ಲಿ ವಿಸ್ಸಾಮ್ ಕಾರಿಗೆ ಡಿಕ್ಕಿ ಹೊಡೆದಾಗ‌ ವಿಸ್ಸಾಮ್‌ ಮತ್ತು ಇನ್ನೊಬ್ಬ ಹೆಜ್ಬೊಲ್ಲಾ ಹೋರಾಟಗಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಈ ಮೂಲಕ ಸದ್ಯದ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯಗಳು ಹೆಚ್ಚಿದೆ ಎಂದು ಭದ್ರತಾ ಮೂಲವೊಂದು ಆತಂಕ ವ್ಯಕ್ತಪಡಿಸಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ‌ ದಕ್ಷಿಣ ಲೆಬನಾನ್‌ನಲ್ಲಿ 130 ಕ್ಕೂ ಹೆಚ್ಚು ಹೆಜ್ಬೊಲ್ಲಾ ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ. ಇತ್ತ ಸಿರಿಯಾದಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನನ್ನ ಕಟೌಟ್ ಹಾಕಬೇಡಿ- ಅಭಿಮಾನಿಗಳಲ್ಲಿ ಯಶ್ ಮನವಿ

    ಲೆಬನಾನ್‌ನ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸದಂತೆ ಕಳೆದ ವಾರ ಹೆಜ್ಬೊಲ್ಲಾಹ್‌ನ ಪ್ರಧಾನ ಕಾರ್ಯದರ್ಶಿ ಸಯ್ಯದ್ ಹಸನ್ ನಸ್ರಲ್ಲಾ ಇಸ್ರೇಲ್‌ಗೆ ಎಚ್ಚರಿಕೆ ನೀಡಿದರು. ಯಾರು ನಮ್ಮೊಂದಿಗೆ ಯುದ್ಧದ ಬಗ್ಗೆ ಯೋಚಿಸುತ್ತಾನೋ ಅವನು ಮುಂದೆ ವಿಷಾದ ವ್ಯಕ್ತಪಡಿಸುತ್ತಾನೆ ಎಂಬುದಾಗಿ ತಿಳಿಸಿದ್ದರು.

  • ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಯುದ್ಧಪೀಡಿತ ಗಾಜಾದಲ್ಲಿ 5 ಕಿಮೀ ನಡೆದು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಟೆಲ್‌ ಅವೀವ್‌: ಯುದ್ಧದಿಂದ ಹಾನಿಗೊಳಗಾದ ಪ್ಯಾಲೆಸ್ಟೀನಿಯನ್ ಪ್ರದೇಶದ ಉತ್ತರದಲ್ಲಿರುವ ತನ್ನ ಮನೆಯಿಂದ 5 ಕಿಮೀ ದೂರದಲ್ಲಿರುವ ದಕ್ಷಿಣ ಗಾಜಾದ (Gaza) ಆಸ್ಪತ್ರೆಗೆ ನಡೆದುಕೊಂಡು ಹೋಗಿ ಮಹಿಳೆಯೊಬ್ಬರು 4 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

    ಇಮಾನ್ ಅಲ್-ಮಸ್ರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್‌ ದೂರ ನಡೆದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್‌ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ವೇಳೆ ನಡೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಗಲ್ಲು ಶಿಕ್ಷೆ ರದ್ದು – ಕತಾರ್‌ ಜೈಲಿನಲ್ಲಿರುವ 8 ಭಾರತೀಯರಿಗೆ ಬಿಗ್‌ ರಿಲೀಫ್‌

    ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆಯನ್ನು ತೊರೆದಿದ್ದಾರೆ. ಸದ್ಯ ಇಮಾನ್‌ ಅವರು ಡೀರ್ ಅಲ್-ಬಾಲಾಹ್‌ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.

    ಜನ್ಮ ನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗು ಕೇವಲ 2 kg ತೂಗುತ್ತದೆ. ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ, ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಹಿಳೆ ಹೋಗಿದ್ದಾರೆ. ಇದನ್ನೂ ಓದಿ: ಮಿತ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ಹರ್ಷಿಸುತ್ತೇವೆ: ಪುಟಿನ್ ಆಹ್ವಾನ

    24 ಲಕ್ಷ ಜನರಿಗೆ ನೆಲೆಯಾಗಿರುವ ಗಾಜಾ ಪಟ್ಟಿಯು ಉತ್ತರದಿಂದ ದಕ್ಷಿಣಕ್ಕೆ ಅವಶೇಷಗಳಲ್ಲಿದೆ. ಯುಎನ್ ಅಂದಾಜಿನ ಪ್ರಕಾರ, ಯುದ್ಧದಿಂದಾಗಿ 19 ಲಕ್ಷ ಪ್ಯಾಲೆಸ್ಟೀನಿಯನ್ನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಹಮಾಸ್ ಬಂದೂಕುಧಾರಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಸಂಘರ್ಷ ಭುಗಿಲೆದ್ದಿತು. ಇದರ ಪರಿಣಾಮವಾಗಿ ಸುಮಾರು 1,140 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ.

  • ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ಶ್ರೀನಗರ: ಗಾಜಾ (Gaza) ಮೇಲೆ ಇಸ್ರೇಲ್ (Israel) ಪಡೆಗಳು ದಾಳಿಗಳನ್ನು ಮುಂದುವರೆಸಿದ್ದು, ಅಲ್ಲಿನ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಇದೇ ಹೊತ್ತಲ್ಲಿ ಕಾಶ್ಮೀರವನ್ನು (Kashmir) ಗಾಜಾಗೆ ಸಮೀಕರಿಸಿ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿಕೆ ನೀಡಿದ್ದಾರೆ.

    ನೆರೆಯ ಪಾಕಿಸ್ತಾನದ (Pakistan) ಜೊತೆ ಭಾರತ (India) ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳದೇ ಇದ್ದಲ್ಲಿ ಮುಂದೊಂದು ದಿನ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು. ಅಲ್ಲದೇ ಬಾಂಬ್‌ಗಳು ಸದ್ದು ಮಾಡಬಹುದು ಎಂಬ ಎಚ್ಚರಿಕೆಯನ್ನು ಫಾರೂಖ್ ಅಬ್ದುಲ್ಲಾ ನೀಡಿದ್ದಾರೆ. ನೆರೆ ಹೊರೆ ದೇಶಗಳ ಜೊತೆ ಸುಮಧುರ ಬಾಂಧವ್ಯ ಹೊಂದಿದರೆ ಎರಡೂ ದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ

    ಇದೇ ಮಾತನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಈಗ ಪ್ರಧಾನಿ ಮೋದಿ ಕೂಡ ಯುದ್ಧ ಆಯ್ಕೆಯಲ್ಲ ಎಂದಿದ್ದಾರೆ. ಪಾಕ್ ವಿಚಾರಕ್ಕೂ ಇದನ್ನು ಅನ್ವಯಿಸಬಹುದು. ನವಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ. ಅವರು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ. ಆದರೆ ನಾವು ಏಕೆ ಮಾತನಾಡಲು ಸಿದ್ಧರಿಲ್ಲ? ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ಇಸ್ರೇಲ್‌ನಿಂದ ಬಾಂಬ್ ದಾಳಿಗೊಳಗಾಗುತ್ತಿರುವ ಗಾಜಾ ಮತ್ತು ಪ್ಯಾಲೆಸ್ತೀನ್ ಪರಿಸ್ಥಿತಿಯನ್ನು ನಾವೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಫಾರೂಖ್ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಇದನ್ನೂ ಓದಿ: ರಾಮ ನನ್ನ ಹೃದಯದಲ್ಲಿದ್ದಾನೆ, ಅದನ್ನು ತೋರಿಸಿಕೊಳ್ಳುವ ಅಗತ್ಯವಿಲ್ಲ: ಕಪಿಲ್ ಸಿಬಲ್

  • ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಜೀಸಸ್‌ ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮ ಇಲ್ಲ

    ಬೆತ್ಲೆಹೆಮ್‌ (ಪ್ಯಾಲೆಸ್ತೀನ್): ಜಗತ್ತಿನಾದ್ಯಂತ ಕ್ರಿಸ್ಮಸ್‌ (Christmas) ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಏಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಜೀಸಸ್‌ (Jesus Christ) ಹುಟ್ಟಿದ ನಾಡಲ್ಲೇ ಕ್ರಿಸ್ಮಸ್‌ ಸಂಭ್ರಮವಿಲ್ಲ. ಕ್ರಿಸ್ಮಟ್‌ ಟ್ರೀ ಕೂಡ ಇಲ್ಲ. ಈ ನೆಲದಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ.

    ಬೆತ್ಲೆಹೆಮ್‌ (Bethlehem) ಸಾಮಾನ್ಯವಾಗಿ ಕ್ರಿಸ್ಮಸ್‌ನಲ್ಲಿ ಅತ್ಯಂತ ಜನನಿಬಿಡವಾಗಿರುತ್ತದೆ. ಆದರೆ ಈ ವರ್ಷ ಯುದ್ಧದಿಂದಾಗಿ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ಪಟ್ಟಣ ಪ್ರವಾಸಿಗರು ಮತ್ತು ಯಾತ್ರಿಕರಿಲ್ಲದೇ ಬಣಗುಡುತ್ತಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಮಾರಕ ಅಂಗಡಿಗಳು ಖಾಲಿ ಖಾಲಿಯಾಗಿವೆ. ಇದನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೆಸ್ತೇನಿಯರ ದುರ್ಮರಣ

    ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಯಿತು. ಇದಾದ ಬಳಿಕ ಇಸ್ರೇಲ್‌ ಯುದ್ಧವನ್ನು ಘೋಷಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಮಿಲಿಟರಿ ದಾಳಿ ಮತ್ತು ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಹೆಚ್ಚಳವಾಗಿದೆ. ಹೀಗಾಗಿ ಬೆತ್ಲೆಹೆಮ್‌ಗೆ ವ್ಯಾಪಾರ ಮಾಲೀಕರು ಯಾರೂ ಬರುತ್ತಿಲ್ಲ.

    ಇದು ಪಟ್ಟಣಕ್ಕೆ (ಬೆತ್ಲೆಹೆಮ್‌) ಬಂದೊದಗಿದ ಅತ್ಯಂತ ಕೆಟ್ಟ ಕ್ರಿಸ್ಮಸ್‌ ದಿನವಾಗಿದೆ. ಬೆತ್ಲೆಹೆಮ್‌ ಅನ್ನು ಬಂದ್‌ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಇಲ್ಲ, ಸಂತೋಷವಿಲ್ಲ, ಕ್ರಿಸ್ಮಸ್ ಉತ್ಸಾಹವಿಲ್ಲ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಜೆರುಸಲೆಮ್‌ನ ದಕ್ಷಿಣದಲ್ಲಿರುವ ಬೆತ್ಲೆಹೆಮ್‌ ಜೀಸಸ್ ಜನಿಸಿದ ಪವಿತ್ರ ಸ್ಥಳ ಎಂದು ಕ್ರಿಶ್ಚಿಯನ್ನರು ನಂಬಿದ್ದಾರೆ. ನೇಟಿವಿಟಿ ಚರ್ಚ್ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಜನ ಕ್ರಿಸ್ಮಸ್‌ ಸಂದರ್ಭದಲ್ಲಿ ಬರುತ್ತಿದ್ದರು. ಸ್ಥಳೀಯರಿಗೆ ಪ್ರವಾಸಿಗರೇ ಆದಾಯ ಮೂಲವಾಗಿದ್ದರು. ಆದರೆ ಯುದ್ಧದಿಂದಾಗಿ ಕ್ರಿಸ್ಮಸ್‌ ಸಂಭ್ರಮ ಇಲ್ಲದಂತಾಗಿದೆ.

    ಕ್ರಿಸ್ಮಸ್‌ ಸಂದರ್ಭದಲ್ಲಿ ತುಂಬಿ ತುಳುಕುತ್ತಿದ್ದ ಹೋಟೆಲ್‌ಗಳು ಈಗ ಖಾಲಿ ಹೊಡೆಯುತ್ತಿವೆ. ಕ್ರಿಸ್ಮಸ್ ಬ್ರೇಕ್ಫಾಸ್ಟ್ ಇಲ್ಲ, ಕ್ರಿಸ್ಮಸ್ ಡಿನ್ನರ್ ಇಲ್ಲ, ಕ್ರಿಸ್ಮಸ್ ಬಫೆ ಇಲ್ಲ ಎಂದು ಹೋಟೆಲ್‌ ಮಾಲೀಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಾದಲ್ಲಿ ಹಿಂದೂ ದೇಗುಲದ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ- ಭಾರೀ ಖಂಡನೆ