– ಸಂಘರ್ಷದಿಂದ ಹಡಗಲ್ಲಿರೋ ಸರಕಿಗೆ ವಿಮೆ ಅನ್ವಯಿಸಲ್ಲ – ರಫ್ತುದಾರರ ಆತಂಕ
ನವದೆಹಲಿ: ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದ (Israel-Iran Conflict) ಭಾರತದ ಅಕ್ಕಿ ರಫ್ತಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಇರಾನ್‌ಗೆ ರಫ್ತಾಗಬೇಕಿದ್ದ (Export) ಸುಮಾರು 1 ಲಕ್ಷ ಟನ್ ಬಾಸ್ಮತಿ ಅಕ್ಕಿ (Basmati Rice) ಭಾರತದ (India) ಬಂದರುಗಳಲ್ಲೇ ಉಳಿದುಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಮಾಹಿತಿ ನೀಡಿದೆ.
ಸೌದಿ ಅರೇಬಿಯಾದ ನಂತರ ಭಾರತ ದಿಂದ ಹೆಚ್ಚು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ರಾಷ್ಟ್ರ ಇರಾನ್ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬರೋಬ್ಬರಿ 10 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದಿಂದ ಇರಾನ್‌ಗೆ ರಫ್ತಾಗಿತ್ತು. ಈಗ ನಡೆಯುತ್ತಿರುವ ಸಂಘರ್ಷದಿಂದಾಗಿ, ರಫ್ತಾಗಬೇಕಿದ್ದ 18% – 20% ರಷ್ಟು ಬಾಸ್ಮತಿ ಅಕ್ಕಿ ಇಲ್ಲೇ ಉಳಿಯುವಂತಾಗಿದೆ. ಇದನ್ನೂ ಓದಿ: ಇಸ್ರೇಲ್- ಇರಾನ್ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್
ಜೂ.30ಕ್ಕೆ ವಾಣಿಜ್ಯ ಸಚಿವರ ಜೊತೆ ರಫ್ತುದಾರರ ಸಭೆ
ಇರಾನ್‌ಗೆ ತೆರಳಬೇಕಿದ್ದ ಅಕ್ಕಿ ತುಂಬಿದ ಹಡಗುಗಳು ಗುಜರಾತ್‌ನ ಕಾಂಡ್ಲಾ ಹಾಗೂ ಮುಂಡ್ರಾ ಬಂದರಿನಲ್ಲೇ ಉಳಿದಿವೆ. ಸಂಘರ್ಷ ನಡೆಯುತ್ತಿರುವುದರಿಂದ ಹಡಗಿನಲ್ಲಿರುವ ಸರಕಿಗೆ ವಿಮೆ ಅನ್ವಯವಾಗುವುದಿಲ್ಲ. ಇದರಿಂದ ರಫ್ತುದಾರರು ನಷ್ಟವಾಗುವ ಆತಂಕದಲ್ಲಿದ್ದಾರೆ. ದೇಶೀಯ ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೇಜಿಗೆ 4ರಿಂದ 5 ರೂ. ಕಡಿಮೆಯಾಗಿರುವುದು ರಫ್ತುದಾರರನ್ನು ಮತ್ತಷ್ಟು ಚಿಂತೆಗೆದೂಡಿದೆ. ಇದನ್ನೂ ಓದಿ: ಸುರಕ್ಷಿತ ಸ್ಥಳಗಳಲ್ಲೇ ಇರಿ – ಇರಾನ್ ಮಿಸೈಲ್ ದಾಳಿ ಬೆನ್ನಲ್ಲೇ ಕತಾರ್‌ನಲ್ಲಿರೋ ಭಾರತೀಯರಿಗೆ ಎಚ್ಚರಿಕೆ
ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಸ್ಪರ ದಾಳಿ ನಡೆಸುತ್ತಿದ್ದು, ಎರಡೂ ದೇಶಗಳಲ್ಲಿ ನೂರಾರು ಮಂಧಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಭಯದಿಂದ ದೇಶವನ್ನೇ ಬಿಟ್ಟು ಹೋಗ್ತಿದ್ದಾರೆ. ಆದ್ರೆ ಯಾರ ಮಾತನ್ನೂ ಕೇಳುವಂತಹ ಪರಿಸ್ಥಿತಿಯಲ್ಲಿ ಈ ದೇಶಗಳು ಇದ್ದಂತೆ ಕಾಣ್ತಿಲ್ಲ. ದಿನೇ ದಿನೇ ದಾಳಿಯ ಸ್ವರೂಪವನ್ನು ತೀವ್ರಗೊಳಿಸಿವೆ. ಈ ನಡುವೆ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಹಳೆಯ ಟ್ವೀಟ್‌ಗಳು ವೈರಲ್ ಆಗಿವೆ.
ಕೆಲವೊಂದು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು (Social Media Posts) ಖಮೇನಿಗೆ ಮಹಿಳೆಯರ ಮೇಲಿನ ಗೌರವನ್ನು ಸೂಚಿಸಿವೆ. ಅಲ್ಲದೇ ಮಹಿಳಾ ಹಕ್ಕುಗಳ ಬಗ್ಗೆ ಖಮೇನಿ ಚಿಂತಿಸುತ್ತಿದ್ದದ್ದು, ಕವಿತೆಗಳನ್ನು ಇಷ್ಟಪಡುವುದು, ಬಾಲ್ಯದ ತುಂಟತನ, ಹಾಸ್ಯಪ್ರಜ್ಞೆ ಎಲ್ಲವೂ ಅನಾವರಣಗೊಂಡಿದೆ.
ಈ ಪೋಸ್ಟ್‌ಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಖಮೇನಿ ತೀವ್ರವಾದಿ ಎಂದು ಕಿಡಿ ಕಾರಿದ್ದರೆ, ಇನ್ನೂ ಕೆಲವರು ಹೀಗೂ ಇದ್ದರಾ? ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅದೇನೆಂಬುದನ್ನು ಮುಂದೆ ನೋಡೋಣ….
– ನಿನಗೆ ನಾನು.. ನನಗೆ ನೀನು.. ಎನ್ನುತ್ತಿದ್ದವರ ಮಧ್ಯೆ ಬ್ರೇಕಪ್ ಯಾಕಾಯ್ತು?
ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಬ್ಬರ ಮೇಲೊಬ್ಬರು ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಸಂಘರ್ಷದಲ್ಲಿ ಎರಡೂ ದೇಶಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಭಯದಿಂದ ಉಟ್ಟ ಬಟ್ಟೆಯಲ್ಲೇ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಸಂಭವನೀಯ ಯುದ್ಧ ಅಮೆರಿಕ ಸೇರಿದಂತೆ ಯುರೋಪ್ ರಾಷ್ಟ್ರಗಳು ಶತಪ್ರಯತ್ನ ನಡೆಸುತ್ತಿವೆ. ಆದರೆ, ಯಾರ ಮಾತನ್ನೂ ಕೇಳುವಂತಹ ಪರಿಸ್ಥಿತಿಯಲ್ಲಿ ಈ ಎರಡು ದೇಶಗಳು ಇದ್ದಂತೆ ಕಾಣುತ್ತಿಲ್ಲ. ಪರಸ್ಪರರ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿ ಅಪಾರ ಹಾನಿಗೆ ಕಾರಣರಾಗಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಇಬ್ಬರ ನಡುವಿನ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ.
ಈ ಎರಡೂ ದೇಶಗಳ ಇತಿಹಾಸ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಒಂದು ಕಾಲದಲ್ಲಿ ಕುಚಿಕು ಗೆಳೆಯರಂತಿದ್ದ ಇಸ್ರೇಲ್ ಮತ್ತು ಇರಾನ್ ಈಗ ಬದ್ಧವೈರಿಗಳಂತೆ ಕಾದಾಡುತ್ತಿದ್ದಾರೆ. ಇಬ್ಬರ ನಡುವಿನ ಕಿತ್ತಾಟ ಯುದ್ಧಕ್ಕೆ ನಾಂದಿ ಹಾಡಬಹುದೆಂಬ ಆತಂಕ ಜಾಗತಿಕ ನಾಯಕರಲ್ಲಿ ಮೂಡಿದೆ. ಇತಿಹಾಸವನ್ನು ನೋಡಿದಾಗ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಬಂಧ ಹೇಗಿತ್ತು? ಕಾಲಾನಂತರದಲ್ಲಿ ಅದು ಹೇಗೆ ಬದಲಾಯಿತು? ಇಬ್ಬರ ಬ್ರೇಕಪ್‌ಗೆ ಕಾರಣ ಏನು? ಸಂಘರ್ಷದ ವಾತಾವರಣ ಏಕೆ ಸೃಷ್ಟಿಯಾಯಿತು ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ವಿವರ ಇಲ್ಲಿದೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ
ಇಸ್ರೇಲ್ ಉಗಮಕ್ಕೆ ಇರಾನ್ ಬೆಂಬಲ
ಅದು 1948ರ ಸಂದರ್ಭ. ಇಸ್ರೇಲ್ ಎಂಬ ಹೊಸ ದೇಶದ ಉಗಮಕ್ಕೆ ಪಶ್ಚಿಮ ಏಷ್ಯಾದ ಹೆಚ್ಚಿನ ಮುಸ್ಲಿಂ ಬಹುಸಂಖ್ಯಾತ ದೇಶಗಳು ನಿರಾಕರಿಸಿದ್ದವು. ಅಚ್ಚರಿ ಎಂಬಂತೆ ಶಿಯಾ ಬಹುಸಂಖ್ಯಾತ ಇರಾನ್ ಮತ್ತು ಟರ್ಕಿ ಮಾತ್ರ ಇಸ್ರೇಲ್ ಪರವಾಗಿ ನಿಂತವು. ಇಸ್ರೇಲ್ ಸಾರ್ವಭೌಮ ರಾಷ್ಟ್ರ ಎಂಬುದನ್ನು ಪ್ರತಿಪಾದಿಸಿದ ಇಸ್ಲಾಮಿಕ್ ರಾಷ್ಟ್ರಗಳು (ಇರಾನ್, ಟರ್ಕಿ) ಇವು. ಇವೆರಡು ದೇಶಗಳು ಆಗ ಅಮೆರಿಕ ಜೊತೆ ನಿಕಟ ಸಂಪರ್ಕ ಹೊಂದಿದ್ದವು.
ಆ ಸಂದರ್ಭದಲ್ಲಿ ಶಾ ಮೊಹಮ್ಮದ್ ರೆಜಾ ಪಹ್ಲವಿ ನೇತೃತ್ವದಲ್ಲಿ ಇರಾನ್ ರಾಷ್ಟ್ರ ಪಾಶ್ಚಿಮಾತ್ಯರಿಗೆ ಪ್ರಜ್ಞಾಪೂರ್ವಕವಾಗಿ ಹತ್ತಿರವಾಗಿತ್ತು. ಶೀತಲ ಸಮರದ ಸಮಯದಲ್ಲಿ ಅಮೆರಿಕದ ಪ್ರಮುಖ ಪ್ರಾದೇಶಿಕ ಮಿತ್ರನೆಂದೇ ಇರಾನ್ ಗುರುತಿಸಿಕೊಂಡಿತ್ತು. ಹೊಸದಾಗಿ ರೂಪುಗೊಂಡ ಇಸ್ರೇಲ್ ದೇಶಕ್ಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಮೆರಿಕದ ಬೆಂಬಲದ ಅಗತ್ಯವಿತ್ತು. ಇದರ ಜೊತೆಗೆ ಇರಾನ್ ಬೆಂಬಲ ಸಿಕ್ಕಿದ್ದು, ಇಸ್ರೇಲ್‌ಗೆ ಮತ್ತಷ್ಟು ಬಲ ತುಂಬಿತ್ತು. ತದನಂತರ, ಮುಂದಿನ ಒಂದೆರಡು ದಶಕಗಳಲ್ಲಿ ಮಾಜಿ ಇಸ್ರೇಲ್ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರು ಅರಬ್ ಅಲ್ಲದ ರಾಷ್ಟ್ರಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಪರಿಧಿಯ ಸಿದ್ಧಾಂತದ ಮೂಲಕ ದೇಶವನ್ನು ಮುನ್ನಡೆಸಿದರು. ಇದನ್ನೂ ಓದಿ: ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ
ಕಚ್ಚಾ ತೈಲ ಪೂರೈಸಿದ್ದ ಇರಾನ್
ಇರಾನ್, ಟರ್ಕಿ ಮತ್ತು ಇಥಿಯೋಪಿಯಾ ದೇಶಗಳು ಇಸ್ರೇಲ್ ಜೊತೆ ಪ್ರಮುಖ ಪಾಲುದಾರರಾಗಿ ಗುರುತಿಸಿಕೊಂಡರು. ಈ ನಾಲ್ಕು ರಾಷ್ಟ್ರಗಳು ಪರಸ್ಪರ ಆರ್ಥಿಕ ಸಹಕಾರ ಪಡೆದವು. ವಿಶೇಷವಾಗಿ ಇಸ್ರೇಲ್‌ನ ಮೊಸಾದ್ ಮತ್ತು ಇರಾನ್‌ನ SAVAK ನಡುವಿನ ಶಸ್ತ್ರಾಸ್ತ್ರ ಮಾರಾಟ ಮತ್ತು ಗುಪ್ತಚರ ಮಾಹಿತಿ ಹಂಚಿಕೆಯಿಂದ ಪ್ರಯೋಜನ ಪಡೆದುಕೊಂಡವು. ಆರು ದಿನಗಳ ಯುದ್ಧದ ಪರಿಣಾಮವಾಗಿ ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಬಹಿಷ್ಕರಿಸಿದವು. ಆ ಸಂದರ್ಭದಲ್ಲಿ ಇರಾನ್ ಇಸ್ರೇಲ್‌ಗೆ ಕಚ್ಚಾ ತೈಲವನ್ನು ಪೂರೈಸಿತು. ಇರಾನ್‌ನಲ್ಲಿ ವ್ಯಾಪಾರ ಮತ್ತು ಮೂಲಸೌಕರ್ಯ ಬೆಳವಣಿಗೆಗೆ ಇಸ್ರೇಲ್ ಕೂಡ ಬೆಂಬಲ ನೀಡಿತು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಂತೆ ಕಾಣುತ್ತಿತ್ತು. ಆದರೆ, 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯ ಗಾಳಿ ಇರಾನ್‌ನಲ್ಲೂ ಬೀಸಿತು. ಪರಿಣಾಮವಾಗಿ, ಇರಾನ್-ಇಸ್ರೇಲ್ ಸಂಬಂಧಗಳಲ್ಲಿ ಮೂಲಭೂತ ಬದಲಾವಣೆಯಾಯಿತು. ಷಾ ಅವರನ್ನು ಪದಚ್ಯುತಗೊಳಿಸಿ ಅಯತೊಲ್ಲಾ ರುಹೊಲ್ಲಾ ಖಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಗೆ ಕಾರಣವಾಯಿತು. ಇದು ಬದಲಾವಣೆಗೆ ನಾಂದಿಹಾಡಿತು.
ಇರಾನ್-ಇಸ್ರೇಲ್ ಬ್ರೇಕಪ್
ಇರಾನ್‌ನಲ್ಲಿ ಇಸ್ಲಾಮಿಸ್ಟ್‌ಗಳು ಪ್ಯಾಲೆಸ್ತೀನಿಯನ್ನರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಆಗಾಗ್ಗೆ ಅವರ ಬಳಕೆಗಾಗಿ ಹಣವನ್ನೂ ಸಂಗ್ರಹಿಸುತ್ತಿದ್ದರು. 1979 ರ ನಂತರ ಇಸ್ರೇಲ್ ಮತ್ತು ಇರಾನ್ ನಡುವೆ ಬ್ರೇಕಪ್ ಆಯಿತು. ಇರಾನ್, ಇಸ್ರೇಲಿ ಪಾಸ್‌ಪೋರ್ಟ್‌ಗಳನ್ನು ಸ್ವೀಕರಿಸಲು ನಿರಾಕರಿಸಿತು. ಇರಾನಿನ ಪಾಸ್‌ಪೋರ್ಟ್ ಹೊಂದಿರುವವರು ‘ಆಕ್ರಮಿತ ಪ್ಯಾಲೆಸ್ತೀನ್’ಗೆ ಪ್ರಯಾಣಿಸುವುದನ್ನು ನಿಷೇಧಿಸಲಾಯಿತು. ಇಸ್ರೇಲ್ ಅನ್ನು ‘ಇಸ್ಲಾಂನ ಶತ್ರು’ ಮತ್ತು ‘ಸೈತಾನ್’ ಎಂದು ಬಿಂಬಿಸಲಾಯಿತು. ಇದನ್ನೂ ಓದಿ: ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ – ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಉಡೀಸ್
1980 ಮತ್ತು 90ರ ದಶಕಗಳಲ್ಲಿ ಇರಾನ್ ಸಶಸ್ತ್ರ ಗುಂಪುಗಳ ಪ್ರಾಯೋಜಕರಾಗಿ ಹೊರಹೊಮ್ಮಿತು. 1982 ರಲ್ಲಿ ಇಸ್ರೇಲ್ ಆಕ್ರಮಣದ ನಂತರ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಸಂಘಟನೆ ಸ್ಥಾಪನೆಯಾಯಿತು. ಯೆಮೆನ್‌ನಲ್ಲಿನ ಹೌತಿಗಳು ಮತ್ತು ಗಾಜಾದ ಹಮಾಸ್‌ನಂತಹ ಇತರ ಗುಂಪುಗಳಿಗೆ ಇರಾನ್ ನೆರವು ನೀಡಲು ಮುಂದಾಯಿತು. ಈ ಗುಂಪುಗಳ ಸಕ್ರಿಯ ತರಬೇತಿಗೆ ಹಣಕಾಸು ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರಗಳನ್ನು ಒದಗಿಸಿತು. 1983 ರಲ್ಲಿ ಹಿಜ್ಬೊಲ್ಲಾ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿತು. ಅದೇ ವರ್ಷದ ನವೆಂಬರ್‌ನಲ್ಲಿ ಸ್ಫೋಟಕಗಳಿಂದ ತುಂಬಿದ ಕಾರು ಲೆಬನಾನ್‌ನಲ್ಲಿರುವ ಇಸ್ರೇಲಿ ಮಿಲಿಟರಿಯ ಪ್ರಧಾನ ಕಚೇರಿಗೆ ನುಗ್ಗಿತು. ಪಶ್ಚಿಮ ಮತ್ತು ಇಸ್ರೇಲ್ ಬಿಟ್ಟು ಹೊರಹೋಗುವಂತೆ ದಾಳಿಕೋರರು ಒತ್ತಾಯಿಸಿದರು.
ಮುಂದಿನ ಎರಡು ದಶಕಗಳಲ್ಲಿ ಇಬ್ಬರ ನಡುವಿನ ಸಂಘರ್ಷ ತೀವ್ರಗೊಂಡಿತು. 2000ರ ಡಿಸೆಂಬರ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ, ಇಸ್ರೇಲ್ ಅನ್ನು ‘ಕ್ಯಾನ್ಸರ್ ಗೆಡ್ಡೆ’ ಎಂದು ಕರೆದರು. ಅದನ್ನು ಈ ಪ್ರದೇಶದಿಂದ ತೆಗೆದುಹಾಕಬೇಕು. ಪ್ಯಾಲೆಸ್ತೀನ್ ಪ್ಯಾಲೆಸ್ತೀನಿಯನ್ನರಿಗೆ ಸೇರಿದ್ದು, ಈ ಭಾಗದ ಭವಿಷ್ಯವನ್ನು ಪ್ಯಾಲೆಸ್ತೀನಿಯನ್ ಜನರು ನಿರ್ಧರಿಸಬೇಕು ಎಂದು ಖಮೇನಿ ಪ್ರತಿಪಾದಿಸಿದರು. 2023 ರ ದಾಳಿಯ ನಂತರ ಇಸ್ರೇಲ್, ಹಿಜ್ಬೊಲ್ಲಾ ಮತ್ತು ಹಮಾಸ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಹೀಗೆ ಪರಸ್ಪರ ಸ್ನೇಹಿತರಂತಿದ್ದ ಎರಡು ದೇಶಗಳು ಬದ್ಧವೈರಿಗಳಂತೆ ಕಿತ್ತಾಡಿಕೊಳ್ಳಲು ಶುರು ಮಾಡಿದರು. ಕಳೆದ ವರ್ಷ ಇಸ್ರೇಲ್ ಮೇಲೆ ಇರಾನ್ ಜೋಡಿ ಕ್ಷಿಪಣಿ ದಾಳಿಗಳನ್ನು ನಡೆಸಿತು. ಇಸ್ರೇಲ್ ತನ್ನದೇ ಆದ ದಾಳಿಗಳೊಂದಿಗೆ ಪ್ರತಿಕ್ರಿಯಿಸಿತು. ಇದರಲ್ಲಿ ಇರಾನಿನ ಕ್ಷಿಪಣಿ ನೆಲೆಗಳನ್ನು ನಾಶಪಡಿಸಿದ ಮತ್ತು ವಾಯು ರಕ್ಷಣೆಯನ್ನು ದುರ್ಬಲಗೊಳಿಸಿದ ಒಂದು ದಾಳಿಯೂ ಸೇರಿತ್ತು. ಇದನ್ನೂ ಓದಿ: Israel-Iran Conflict – ಇರಾನ್‍ನಿಂದ ದೆಹಲಿ ತಲುಪಿದ 110 ಭಾರತೀಯರು
ಹಮಾಸ್ ದಾಳಿ
2023ರ ಅಕ್ಟೋಬರ್‌ನಲ್ಲಿ ಹಮಾಸ್ ಬಂಡುಕೋರರು ದಾಳಿ ನಡೆಸಿ 200 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ತನ್ನ ನಾಗರಿಕರ ಬಿಡುಗಡೆಗಾಗಿ ಇಸ್ರೇಲ್, ಹಮಾಸ್ ವಿರುದ್ಧ ಪ್ರತಿದಾಳಿ ನಡೆಸಿತು. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮತ್ತು ಲೆಬನಾನ್‌ನ ಉಗ್ರ ಸಂಘಟನೆ ಹಿಜ್ಬುಲ್ಲಾಗೆ ಸೇರಿದ ನೆಲೆಗಳ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿತು. ಹಿಜ್ಬುಲ್ಲಾ ಕಮಾಂಡರ್‌ಗಳನ್ನು ಕೂಡ ಇಸ್ರೇಲ್ ಹತ್ಯೆ ಮಾಡಿತು. ದಾಳಿ-ಪ್ರತಿದಾಳಿಗಳು ತೀವ್ರಗೊಂಡು ನೂರಾರು ಜನರು ಸಾವನ್ನಪ್ಪಿದರು. ಲಕ್ಷಾಂತರ ಜನರು ಸಂಘರ್ಷಪೀಡಿತ ಪ್ರದೇಶಗಳನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡರು. ‘ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಾಯುದಾಳಿ ಮತ್ತು ಭೂಸೇನಾ ದಾಳಿ ತಡೆಯದಿದ್ದರೆ, ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳು ಮೈದಾನಕ್ಕೆ ಇಳಿಯಬೇಕಾಗುತ್ತದೆ’ ಎಂದು ಇರಾನ್ ಎಚ್ಚರಿಕೆ ನೀಡಿತು.
ಇಸ್ರೇಲ್-ಇರಾನ್ ಯುದ್ಧ
ಕಳೆದೊಂದು ವಾರದಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದೆ. ಪರಸ್ಪರರು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ. ದಾಳಿಗೆ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜಿ-7 ಶೃಂಗಸಭೆಯಲ್ಲಿ ಇಸ್ರೇಲ್ ಪರವಾದ ಅಭಿಪ್ರಾಯ ಕೇಳಿಬಂದಿದೆ. ಆದರೆ, ಇತ್ತ ಇರಾನ್‌ಗೆ ಮಿತ್ರರಾಷ್ಟ್ರಗಳಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ‘ಪರಮಾಣು ಯೋಜನೆ’ ಕೈಬಿಟ್ಟು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವಂತೆ ಇರಾನ್‌ಗೆ ಅಮೆರಿಕ ಒತ್ತಾಯಿಸಿದೆ. ಆದರೆ, ಇರಾನ್ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಇಸ್ರೇಲ್‌ಗೆ ತಕ್ಕ ಪಾಠ ಕಲಿಸುವುದಾಗಿ ಯುದ್ಧ ಮುಂದುವರಿಸಿದ್ದಾರೆ. ‘ಖಮೇನಿ ಹತ್ಯೆಯೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ’ ಎಂದು ಇಸ್ರೇಲ್ ಶಪಥ ಮಾಡಿದೆ. ಎರಡೂ ದೇಶಗಳ ಹಠವನ್ನು ನೋಡಿದರೆ ಸಂಘರ್ಷ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಇದನ್ನೂ ಓದಿ: ದಾಳಿ ಮಾಡಿ ಇಸ್ರೇಲ್ ದೊಡ್ಡ ತಪ್ಪು ಮಾಡಿದೆ, ನಾವು ಶರಣಾಗಲ್ಲ: ಟ್ರಂಪ್‌ಗೆ ಖಮೇನಿ ವಾರ್ನಿಂಗ್
– ಇರಾನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ದೂರದ ಇರಾನ್ ಹಾಗೂ ಇಸ್ರೇಲ್ (Israel Iran Conflict) ನಡುವೆ ದಿನದಿಂದ ದಿನಕ್ಕೆ ಯುದ್ಧ ತಾರಕಕ್ಕೇರುತ್ತಿದೆ. ಕ್ಷಣದಿಂದ ಕ್ಷಣಕ್ಕೂ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಡೀ ವಿಶ್ವವೇ ಈಗ ಇರಾನ್ ಮತ್ತು ಇಸ್ರೇಲ್ ಯುದ್ಧದತ್ತ ಚಿತ್ತ ನೆಟ್ಟಿವೆ. ಇಂತಹ ಸನ್ನಿವೇಶದಲ್ಲಿ ನಮ್ಮ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ (Alipur) ಗ್ರಾಮದಲ್ಲೂ ಸಹ ಆತಂಕ ಮನೆ ಮಾಡಿದೆ.
ಆತಂಕ ಯಾಕೆ?
ಹೌದು… ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮಕ್ಕೂ ದೂರದ ಯುದ್ಧಪೀಡಿತ ಇರಾನ್‌ಗೂ ಒಂಥರಾ ಅವಿನಾಭಾವ ನಂಟಿದೆ. ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಶಿಯಾ ಮುಸ್ಲಿಂ ಸಮುದಾಯದವರೇ ಇರುವ ಅಲೀಪುರ ಗ್ರಾಮಕ್ಕೂ ದೂರದ ಇರಾನ್ ದೇಶದ ಜೊತೆಗೆ ಬಹಳಷ್ಟು ನಂಟಿದ್ದು, ಬಾಂಧವ್ಯದ ಕೊಂಡಿ ಬೆಸೆದುಕೊಂಡಿದೆ. ಈ ಗ್ರಾಮದ 10 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇರಾನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯಲು ಇರಾನ್‌ನಲ್ಲೇ ನೆಲೆಸಿದ್ದಾರೆ. ಪ್ರಮುಖವಾಗಿ ಇರಾನ್‍ನ ಮಶದ್‌ನ ಪ್ರಮುಖ ಧಾರ್ಮಿಕ ಕೇಂದ್ರ ಪವಿತ್ರ ಸ್ಥಳ. ಹಾಗಾಗಿಯೇ ಪ್ರತಿ ವರ್ಷವೂ ನೂರಾರು ಮಂದಿ ಇರಾನ್‌ನ ಮಶದ್‌ಗೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ. ಇಂತಹ ಇರಾನ್ ಮೇಲೆ ಯುದ್ಧ ಸಾರಲಾಗಿದೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್
ಇರಾನ್‌ನಲ್ಲಿರುವ ವಿದ್ಯಾರ್ಥಿಗಳು; ಅಲಿಪುರದ ಪೋಷಕರಲ್ಲಿ ಆತಂಕ
ಹೌದು.. ಇರಾನ್‌ನಲ್ಲಿ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ದರಕ್ಕಿಂತ ಲಕ್ಷಗಟ್ಟಲೇ ಕಡಿಮೆ ದರಕ್ಕೆ ಎಂಬಿಬಿಎಸ್ ವ್ಯಾಸಂಗ ಮಾಡಬಹುದು. ಹಾಗಾಗಿ ಇಲ್ಲಿನ ಜನರು ತಮ್ಮ ಮಕ್ಕಳನ್ನ ವೈದ್ಯಕೀಯ ಶಿಕ್ಷಣ ಪಡೆಯುವ ಸಲುವಾಗಿ ಇರಾನ್‌ನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ವಿದ್ಯಾರ್ಥಿಗಳಾದ ಜೈನಭಿ ಹಾಗೂ ಮಹಮದ್ ಅನ್ಸಾರಿಯ ಕುಟುಂಬದ ಸದಸ್ಯ ಮಹಮದ್ ತಕೀ, 2 ವರ್ಷಗಳಿಂದ ಇರಾನ್‌ನ ತೆಹರಾನ್ ಯೂನಿವರ್ಸಿಟಿಯಲ್ಲಿ ನಮ್ಮ ಮಕ್ಕಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನಮ್ಮ ಮಕ್ಕಳು ಮಶದ್‌ನಲ್ಲಿ ಸುರಕ್ಷಿತವಾಗಿರುವ ಬಗ್ಗೆ ಫೋನ್ ಮಾಡಿ ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳ ಒಳಗಾಗಿ ಭಾರತಕ್ಕೆ ವಾಪಸ್ ಬರುವುದಾಗಿ ಮಾಹಿತಿ ಸಿಗುತ್ತಿದೆ. ನಮ್ಮ ಮಕ್ಕಳು ಇರುವ ಜಾಗದ ಅಕ್ಕಪಕ್ಕದಲ್ಲೇ ಬಾಂಬ್ ದಾಳಿಗಳಾಗಿವೆ. ಇದರಿಂದ ಸಹಜವಾಗಿ ನಮಗೂ ಆತಂಕ ಮನೆ ಮಾಡಿದೆ. ಆದರೆ, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ನಮ್ಮ ಮಕ್ಕಳನ್ನ ವಾಪಸ್ ಕರೆತರಲಿದ್ದಾರೆ ಎಂಬ ವಿಶ್ವಾಸದ ಮಾತಗಳನ್ನಾಡಿದರು.
ನವದೆಹಲಿ: ಇಸ್ರೇಲ್ ಮತ್ತು ಇರಾನ್ (Israel Iran Conflict) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯರ ರಕ್ಷಣೆಗಾಗಿ ಇರಾನ್ ತನ್ನ ವಾಯುನೆಲೆಯನ್ನು ತೆರೆದಿದೆ.
ಇರಾನ್ ತನ್ನ ಮುಚ್ಚಿದ ವಾಯುನೆಲೆಯನ್ನು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗಾಗಿ ತೆರೆದಿದೆ. ಸಂಘರ್ಷ ಪೀಡಿತ ಇರಾನಿನ ನಗರಗಳಲ್ಲಿ ಸಿಲುಕಿರುವ ಕನಿಷ್ಠ 1,000 ಭಾರತೀಯ ವಿದ್ಯಾರ್ಥಿಗಳನ್ನು ‘ಆಪರೇಷನ್ ಸಿಂಧು’ ಹೆಸರಲ್ಲಿ ಸರ್ಕಾರ ಸ್ಥಳಾಂತರಿಸಲು ಮುಂದಾಗಿದ್ದು, ಇನ್ನೆರಡು ದಿನದಲ್ಲಿ ವಿಮಾನವು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಇರಾನ್ – ಇಸ್ರೇಲ್ ಯುದ್ಧ | ಭಾರತದ ಚಹಾ ಉದ್ಯಮಕ್ಕೆ ಹೊಡೆತ
ಮೊದಲ ವಿಮಾನ ಇಂದು ರಾತ್ರಿ 11 ಗಂಟೆಗೆ ಇಳಿಯಲಿದೆ. ಎರಡನೇ ಮತ್ತು ಮೂರನೇ ವಿಮಾನಗಳು ಶನಿವಾರ ಬೆಳಗ್ಗೆ ಒಂದು ಮತ್ತು ಸಂಜೆ ಇನ್ನೊಂದು ವಿಮಾನಗಳು ಹಾರಾಟ ನಡೆಸಲಿವೆ.
ಇಸ್ರೇಲ್ ಮತ್ತು ಇರಾನ್ ಪರಸ್ಪರರ ಮೇಲೆ ಕ್ಷಿಪಣಿ, ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ಪರಿಣಾಮವಾಗಿ ಇರಾನಿನ ವಾಯುಪ್ರದೇಶವು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಮುಚ್ಚಿವೆ. ಭಾರತವು ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಇರಾನ್ ವಿಶೇಷ ಕಾರಿಡಾರ್ ಅನ್ನು ನೀಡಿದೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್
ಇಸ್ರೇಲ್ ಜೊತೆಗಿನ ಪರ್ಷಿಯನ್ ಕೊಲ್ಲಿ ರಾಷ್ಟ್ರದ ಸಂಘರ್ಷ ನಿಲ್ಲುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಬುಧವಾರ ‘ಆಪರೇಷನ್ ಸಿಂಧು’ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡ ನಂತರ ದೆಹಲಿಯಲ್ಲಿರುವ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಸಂಘರ್ಷದಿಂದ ಅಲ್ಲಿ ಸಿಲುಕಿಕೊಂಡಿದ್ದ 18 ಕನ್ನಡಿಗರು ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಇರಾನ್ ಮತ್ತು ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಆತಂಕದ ಕಾರ್ಮೋಡ ಕವಿದಿದೆ. ತಾಯ್ನಾಡಿಗೆ ವಾಪಸ್ ಆಗಲು ಮನ ಹಂಬಲಿಸುತ್ತಿದೆ. ಭಾರತ ಸರ್ಕಾರವು ಸ್ಥಳಾಂತರ ಪ್ರಕ್ರಿಯೆಯನ್ನು ಬಿರುಸುಗೊಳಿಸಿದೆ. ಭಾರತೀಯರ ರಕ್ಷಣೆಗೆ `ಆಪರೇಷನ್ ಸಿಂಧೂ’ ಹೆಸರನ್ನಿಟ್ಟಿದೆ. ಇದೀಗ ಆಪರೇಷನ್ ಸಿಂಧೂನ ಮೊದಲ ಬ್ಯಾಚ್ ದೆಹಲಿಗೆ ಬಂದಿಳಿದಿದೆ.
ಊರ್ಮಿ ಯೂನಿವರ್ಸಿಟಿಯ 110 ವಿದ್ಯಾರ್ಥಿಗಳನ್ನು ಭೂ ಮಾರ್ಗವಾಗಿ ಇರಾನ್‌ನಿಂದ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿಸಲಾಗಿತ್ತು. ಅವರೆಲ್ಲ ಇದೀಗ ದೆಹಲಿ ತಲುಪಿದ್ದಾರೆ. ಅರ್ಮೇನಿಯಾದ ಯೆರೆವಾನ್ ಏರ್‌ಪೋರ್ಟ್ನಿಂದ ವಿಶೇಷ ಇಂಡಿಗೋ ವಿಮಾನದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗಿದೆ. ಆದರೆ, ದೆಹಲಿಯಿಂದ ಕಾಶ್ಮೀರಕ್ಕೆ ತೆರಳಲು ವಿಮಾನ ಬೇಕಂತ ಕಾಶ್ಮೀರಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಆದರೆ, ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು, ಅಧ್ಯಯನ ಪ್ರವಾಸಕ್ಕೆ ಹೋಗಿದ್ದ ಬಿ-ಪ್ಯಾಕ್‌ನ 18 ಸದಸ್ಯರು ಇಸ್ರೇಲ್‌ನಿಂದ ಬೆಂಗಳೂರು ಏರ್‌ಪೋರ್ಟ್ಗೆ ಬಂದಿಳಿದಿದ್ದಾರೆ. ಆದರೆ, ಇರಾನ್‌ನಿಂದ ಬರಬೇಕಿದ್ದ ಐವರು ಕನ್ನಡಿಗರಿದ್ದ ವಿಮಾನ ಕಾರಣಾಂತರಗಳಿಂದ ರದ್ದಾಗಿದೆ.
ಇರಾನ್‌ನ ಖೋಮ್ ನಗರದಿಂದ 500 ಕಾಶ್ಮೀರಿ ವಿದ್ಯಾರ್ಥಿಗಳು ಸೇರಿದಂತೆ 600 ಭಾರತೀಯರನ್ನು ಮಶ್ಶಾದ್ ನಗರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನಿಂದಲೂ ಏರ್‌ಲಿಫ್ಟ್ಗೆ ಪ್ರಕ್ರಿಯೆ ಶುರುವಾಗಿದೆ.
ಟೆಲ್ ಅವಿವ್/ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಯಾಗಿದ್ದು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಸ್ರೇಲ್ ಬೆಂಬಲಕ್ಕೆ ನಿಂತಿರುವ ಟ್ರಂಪ್ ಶರಣಾಗುವಂತೆ ಧಮ್ಕಿ ಹಾಕಿದ್ದಾರೆ. ಆದ್ರೆ ಅಮೆರಿಕ ಬೆದರಿಕೆಗೂ ಜಗ್ಗದ ಇರಾನ್‌ನ ಸರ್ವೋಚ್ಛ ನಾಯಕ (Iran’s Supreme Leader Ali Khamenei) ʻಯುದ್ಧ ಶುರುವಾಗಿದೆʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ʻನಮಿ ಹೆಸರಿನಲ್ಲಿ, ಯುದ್ಧ ಪ್ರಾರಂಭವಾಗುತ್ತದೆ. ಅಲಿ ತನ್ನ ಜುಲ್ಫಿಕರ್‌ನೊಂದಿಗೆ ಖಮೇನಿಗೆ ಹಿಂತಿರುಗುತ್ತಾನೆ. ಹೈದರ್ ಹೆಸರಿನಲ್ಲಿ ಯುದ್ಧ ಶುರುವಾಗುತ್ತೆ, ಜಿಯೋನಿಸ್ಟ್ (ಯಹೂದಿಗಳು) ಗಳಿಗೆ ಯಾವುದೇ ಕರುಣೆ ತೋರಲ್ಲ. ಎಂದು ಅಯತೊಲ್ಲಾ ಅಲಿ ಖಮೇನಿ ಅವರ ಅನುವಾದ ಪೋಸ್ಟ್ ಸೂಚಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಅಲಿ ಖಮೇನಿ ಶರಣಾಗಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೇರವಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಖಮೇನಿ ಅವರ ಈ ಪೋಸ್ಟ್ ಬಂದಿದೆ.
ಟ್ರಂಪ್ ಹೇಳಿದ್ದೇನು?
ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ವ್ಯಕ್ತಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಅವನನ್ನು ನಾವು ಹತ್ಯೆ ಮಾಡಲು ಹೋಗುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ.
ನಾವು ಈಗ ಇರಾನ್ ಆಕಾಶದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇವೆ. ಇರಾನ್ ಉತ್ತಮ ಸ್ಕೈ ಟ್ರ್ಯಾಕರ್‌ಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಹೊಂದಿತ್ತು. ಆದರೆ ಅಮೇರಿಕ ನಿರ್ಮಿತ ಸಾಮಾಗ್ರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಮೆರಿಕ ತಯಾರಿಸಿದಂತೆ ಯಾರೂ ಉತ್ತಮವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಿದ್ದರು.
ಒಟ್ಟಾವಾ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಲ್ಲಿ ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂದು G-7 ಶೃಂಗಸಭೆಯಲ್ಲಿ (G-7 Summit) ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಇರಾನ್ (Iran) ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್‌ಗೆ (Israel) ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿ-7 ನಾಯಕರಾದ ನಾವು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧರಾಗಿದ್ದೇವೆ. ಈ ಸಂದರ್ಭದಲ್ಲಿ ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬುದು ನಮ್ಮ ಅಭಿಪ್ರಾಯ. ಇಸ್ರೇಲ್‌ನ ಸುರಕ್ಷತೆಗಾಗಿ ನಾವು ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ನಾಗರಿಕರ ರಕ್ಷಣೆಯ ಮಹತ್ವವನ್ನು ದೃಢೀಕರಿಸುತ್ತೇವೆ ಎಂದು ಕೆನಡಾದ ಪ್ರಧಾನ ಮಂತ್ರಿಯ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಇರಾನ್-ಇಸ್ರೇಲ್ ಸಂಘರ್ಷ: ಭಾರತದ ನಿಲುವು ಮಾತ್ರ ತಟಸ್ಥ
ಇರಾನ್ ದೇಶವು ಪ್ರಾದೇಶಿಕ ಅಸ್ಥಿರತೆ ಮತ್ತು ಭಯೋತ್ಪಾದನೆಯ ಪ್ರಮುಖ ಮೂಲವಾಗಿದೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂದು ನಾವು ನಿರಂತರವಾಗಿ ಸ್ಪಷ್ಟಪಡಿಸಿದ್ದೇವೆ. ಇರಾನಿನ ಬಿಕ್ಕಟ್ಟಿನ ನಿರ್ಣಯವು ಮಧ್ಯಪ್ರಾಚ್ಯದಲ್ಲಿ ವ್ಯಾಪಕವಾದ ಹಗೆತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ.
ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಸ್ಟೇಟ್ಸ್‌ನಿಂದ ರಾಷ್ಟ್ರದ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಮಂಗಳವಾರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರ್ಧಕ್ಕೆ ಮೊಟಕು ಗೊಳಿಸಿ ಹೊರಟರು. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಕಾರಣಕ್ಕೆ ಟ್ರಂಪ್ ಅರ್ಧದಲ್ಲೇ ಎದ್ದು ಹೊರನಡೆದರು.
-ಯಾವುದೇ ರಾಷ್ಟ್ರಕ್ಕೆ ಬೆಂಬಲ ಸೂಚಿಸಿದ್ರೂ ಆರ್ಥಿಕ ಹೊಡೆತ ಪಕ್ಕಾ
ನವದೆಹಲಿ: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಭಾರತ ಎರಡು ರಾಷ್ಟ್ರಗಳ ವಿಚಾರದಲ್ಲಿ ತನ್ನ ನಿಲುವನ್ನು ತಟಸ್ಥವಾಗಿರಿಸಿದೆ. ಯಾವುದೇ ದೇಶಕ್ಕೆ ಬೆಂಬಲ ಸೂಚಿಸಿದರೂ ಅಷ್ಟೇ, ಯುದ್ಧ ನಡೆದರೂ ಅಷ್ಟೇ ಭಾರತಕ್ಕೆ ಆರ್ಥಿಕ ಹೊಡೆತ ಆಗುವ ಸಾಧ್ಯತೆಯಿದೆ.
ಕಳೆದ ನಾಲ್ಕು ದಿನಗಳಿಂದ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಭಾರತ ಮಾತ್ರ ಬೆಂಬಲ ಸೂಚಿಸದೇ ತಟಸ್ಥ ನಿಲುವನ್ನ ತಾಳಿದೆ. ಎರಡು ರಾಷ್ಟಗಳಿಂದ ಆಮದು ರಫ್ತನ್ನು ಭಾರತ ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ. ಪರೋಕ್ಷವಾಗಿ ಇಸ್ರೇಲ್ ಅನ್ನು ಬೆಂಬಲಿಸಬಹುದು ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್
ಭಾರತ ಬೆಂಬಲದ ವಿಚಾರದಲ್ಲಿ ಸ್ಪಷ್ಟ ನಿಲುವನ್ನ ತೆಗೆದುಕೊಳ್ಳಬೇಕು. ಇರಾನ್ ಅಥವಾ ಇಸ್ರೇಲ್‌ಗೆ ಬೆಂಬಲ ಘೋಷಿಸಬೇಕು. ಹೀಗಾಗಿ ತಟಸ್ಥ ನಿಲುವು ಸೂಕ್ತ ಅಲ್ಲ ಎಂದು ಎರಡು ರಾಷ್ಟ್ರಗಳ ಜೊತೆ ಟ್ರೇಡ್ ಅನ್ನು ಭಾರತ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಎಫೆಕ್ಟ್ ತಟ್ಟಲಿದೆ ಎಂದು ನಿವೃತ್ತ ಯೋಧರು ತಿಳಿಸಿದ್ದಾರೆ.
ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ನಡೆದರೆ ಏನೆಲ್ಲಾ ಆರ್ಥಿಕ ಹೊಡೆತ:
1.ಇರಾನ್, ಇಸ್ರೇಲ್ ಯುದ್ಧ ಭಾರತದ ಕಾರ್ಯತಂತ್ರದ ಆಯಾಮದ ಮೇಲೆ ಪರಿಣಾಮ
2.ಇರಾನ್‌ಗಿಂತ ಇಸ್ರೇಲ್ ಜೊತೆಗಿನ ಸಂಬಂಧ ಮೂರು ಪಟ್ಟು ಭಾರತಕ್ಕಿದೆ.
3.ಭಾರತವು ಇಸ್ರೇಲ್ ಸಹಯೋಗದೊಂದಿಗೆ ಜಂಟಿ ರಕ್ಷಣಾ ಉತ್ಪಾದನಾ ಉದ್ಯಮಗಳನ್ನ ಆರಂಭಿಸಿದೆ
4.2019ರ ಬಳಿಕ ಇರಾನ್ ಜೊತೆಗಿನ ಭಾರತದ ವ್ಯಾಪಾರ ಭಾರೀ ಕುಸಿತ
5.ಇರಾನ್ ಭಾರತಕ್ಕೆ ರಾಸಾಯನಿಕಗಳು, ಎಲ್‌ಪಿಜಿ ಮತ್ತು ಪೆಟ್ರೋಲಿಯಂ ಕೋಕ್‌ಗಳನ್ನ ಆಮದು ಮಾಡ್ತಿದೆ
6. ತೈಲ ರಾಷ್ಟ್ರಗಳು ಇರಾನ್‌ಗೆ ಬೆಂಬಲ ಕೊಟ್ಟರೆ ತೈಲ ಪೂರೈಕೆಯಲ್ಲಿ ಸಮಸ್ಯೆ ಆಗಲಿದೆ
ಬೆಂಬಲ ಕೊಟ್ಟರೂ, ಕೊಡದೇ ಇದ್ದರೂ ಆರ್ಥಿಕತೆ ಮೇಲೆ ಯಾವ ರೀತಿ ಹೊಡೆತ:
1 ತೈಲ ದರ, ಪೆಟ್ರೋಲ್ ದರ ಹೆಚ್ಚಾಗಲಿದೆ
2.ಆಮದು ದರ ಹೆಚ್ಚಾಗಿ ರೂಪಾಯಿ ದುರ್ಬಲಗೊಳ್ಳಲಿದೆ
3. ಹಣದುಬ್ಬರ ಹೆಚ್ಚುವ ಸಾಧ್ಯತೆ
4. ಚಿನ್ನದ ಬೆಲೆ ಹೆಚ್ಚಾಗುವ ಸಾಧ್ಯತೆ
5. ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ
6.ಭಾರತದಲ್ಲೂ ಪೆಟ್ರೋಲ್ ಸೇರಿದಂತೆ ಹಲವು ವಸ್ತುಗಳ ದರ ಹೆಚ್ಚಾಗಲಿದೆ.ಇದನ್ನೂ ಓದಿ: Iran-Israel Conflict | ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್ ಸಪ್ಲೈ ಬಂದ್
ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು (Iran Isrel Conflict) ತಾರಕಕ್ಕೇರಿದೆ. ಇರಾನ್‌ನ ಪ್ರಮುಖ 2 ಫೈಟರ್ ಜೆಟ್‌ಗಳನ್ನು (Fighter Jet) ಇಸ್ರೇಲ್ ಹೊಡೆದುರುಳಿಸಿದೆ.
ಟೆಹ್ರಾನ್ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕಾ ನಿರ್ಮಿತ ಎಫ್-14 ಯುದ್ಧ ವಿಮಾನಗಳು ಇಸ್ರೇಲ್ (Isrel) ದಾಳಿಗೆ ಛಿದ್ರ ಛಿದ್ರವಾಗಿದೆ. ಅಲ್ಲದೇ ಡ್ರೋನ್‌ಗಳನ್ನು ಹಾರಿಸಲು ಸಜ್ಜಾಗಿದ್ದ ಇರಾನಿನ ಸೈನಿಕರ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದನ್ನೂ ಓದಿ: ಇರಾನ್ ಜನ ತಕ್ಷಣವೇ ಟೆಹ್ರಾನ್ ಖಾಲಿ ಮಾಡಿ: ಟ್ರಂಪ್ ಸೂಚನೆ
ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್‌ನ ಐರನ್ ಡೋಮ್, ಥಾಡ್ ಏರ್ ಡಿಫೆನ್ಸ್ ಸಿಸ್ಟಂ ಆಕ್ಟೀವ್ ಆಗಿವೆ. ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಈವರೆಗೆ 200ಕ್ಕೂ ಹೆಚ್ಚು ಇರಾನ್ ನಾಗರಿಕರು ಬಲಿಯಾಗಿದ್ದಾರೆ.