Tag: Israel Defense Forces

  • ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ಟೆಲ್‌ ಅವಿವ್‌: ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ ಹಾಗೂ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹೇಳಿದ್ದಾರೆ.

    2023ರ ಅಕ್ಟೋಬರ್ 7 ರಂದು ಇಸ್ರೇಲ್‌ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್ (Yahya Sinwar) ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ. ಇದಾದ ಕೆಲ ಗಂಟೆಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.

    ಈ ಕುರಿತು ತನ್ನ ಎಕ್ಸ್‌ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ನೆತನ್ಯಾಹು, ಯಾಹ್ಯಾ ಸತ್ತಿದ್ದಾನೆ. ಇಸ್ರೇಲ್‌ನ ಕೆಚ್ಚೆದೆಯ ಸೈನಿಕರ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾನೆ. ಆದ್ರೆ ಇದು ಜಾದಲ್ಲಿನ ಯುದ್ಧದ ಅಂತ್ಯವಲ್ಲ, ಆರಂಭ ಎಂದು ಎಚ್ಚರಿಸಿದ್ದಾರೆ. ಮುಂದುವರಿದು, ಗಾಜಾದ ಜನರೇ ನನ್ನ ಬಳಿ ಒಂದು ಸರಳವಾದ ಸಂದೇಶವಿದೆ. ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಿದರೆ, ಈ ಯುದ್ಧ ನಾಳೆಯೇ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ.

    ಜೊತೆಗೆ ಹಮಾಸ್‌ ಪ್ರಸ್ತುತ ಗಾಜಾದಲ್ಲಿ 101 ಒತ್ತೆಯಾಳುಗಳನ್ನು ಇರಿಸಿಕೊಂಡಿದೆ. ಇದರಲ್ಲಿ ಇಸ್ರೇಲ್‌ ಸೇರಿದಂತೆ ವಿವಿಧ ವಿವಿಧ ದೇಶಗಳ 23 ನಾಗರಿಕರು ಇದ್ದಾರೆ ಎಂದು ನೆತನ್ಯಾಹು ಬಹಿರಂಗಪಡಿಸಿದ್ದಾರೆ.

    ಬೇಟೆಯಾಡದೇ ಬಿಡುವುದಿಲ್ಲ:
    ಇಸ್ರೇಲ್‌ ತನ್ನ ದೇಶದ ನಾಗರಿಕರನ್ನು ಮಾತ್ರವಲ್ಲ, ಒತ್ತೆಯಾಳಾಗಿರುವ ಇತರ ದೇಶಗಳ ನಾಗರಿಕರನ್ನು ರಕ್ಷಿಸಿ ತಮ್ಮ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಬದ್ಧವಾಗಿಯೂ ನಡೆದುಕೊಳ್ಳುತ್ತಿದೆ. ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಿದ್ರೆ, ಅವರನ್ನ ಏನೂ ಮಾಡುವುದಿಲ್ಲ. ಒಂದು ವೇಳೆ ಅವರಿಗೆ ತೊಂದರೆ ಮಾಡಿದ್ರೆ, ಬೇಟೆಯಾಡದೇ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಬೆಂಜಮಿನ್‌ ನೆತನ್ಯಾಹು ನೀಡಿದ್ದಾರೆ.

    ಮೊದಲು ನಸ್ರಲ್ಲಾ ಹೋದ, ಆಮೇಲೆ ಹಿಜ್ಬುಲ್ಲಾ ವೋಹ್ಸೆನ್‌, ಹನಿಯೆ, ಡೀಫ್‌, ಸಿನ್ವಾರ್‌ ಸೇರಿ ಅನೇಕ ಟಾಪ್‌ ಲೀಡರ್‌ಗಳು ಹೋದರು. ಮುಂದೆ ಇರಾಕ್‌, ಸಿರಿಯಾ, ಲೆಬನಾನ್‌, ಯೆಮನ್‌ ದೇಶಗಳ ಭಯೋತ್ಪಾದನಾ ಆಳ್ವಿಕೆಯೂ ಕೊನೆಗೊಳ್ಳುತ್ತದೆ. ಆದ್ದರಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ, ಸಮೃದ್ಧಿ, ಉತ್ತಮ ಭವಿಷ್ಯ ಬಯಸುವ ಎಲ್ಲರೂ ಒಂದಾಗಬೇಕು. ಆಗ ಕತ್ತಲನ್ನು ದೂಡಿ ಬೆಳಕು ತರಬಹುದು ಎಂದು ಕಿವಿಮಾತು ಹೇಳಿದ್ದಾರೆ.

  • ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ಟೆಲ್‌ ಅವಿವ್‌: ಇಸ್ರೇಲ್‌ ರಕ್ಷಣಾ ಪಡೆಗಳು (ಐಡಿಎಫ್‌) ರಾತ್ರೋರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ (Hamas Commander ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್‌ನ ಕಮಾಂಡರ್ ಮಾಧತ್ ಮುಬ್ಶರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ.

    ಇಸ್ರೇಲ್ (Israel) ರಕ್ಷಣಾ ಪಡೆಗಳು ದೃಢಪಡಿಸಿದಂತೆ ಸತತ ಎರಡನೇ ರಾತ್ರಿ ಗಾಜಾದೊಳಗೆ ಉದ್ದೇಶಿತ ದಾಳಿಗಳನ್ನು ನಡೆಸಿವೆ. ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಮುಂದಿನ ಹಂತದ ಸಿದ್ಧತೆಗಳನ್ನು ರಕ್ಷಣಾ ಪಡೆಗಳು ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ:

    IDF ಕಳೆದ ದಿನದಲ್ಲಿ ಗಾಜಾ ಪಟ್ಟಿಯಲ್ಲಿ (Gaza) ಹಮಾಸ್‌ ಬಂಡುಕೋರರ 250 ಕ್ಕೂ ಹೆಚ್ಚು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ‘ಹಮಾಸ್‌ನ ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್ ಕಮಾಂಡರ್ ಮಧತ್ ಮುಬಾಶರ್ ಹತ್ಯೆ ಮಾಡಲಾಗಿದೆ. ಇದಲ್ಲದೆ, IDF 250 ಕ್ಕೂ ಹೆಚ್ಚು ಹಮಾಸ್ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಐಡಿಎಫ್‌ ಪೋಸ್ಟ್‌ ಹಾಕಿದೆ.

    ಹಮಾಸ್ ಸುರಂಗಗಳು, ಕಮಾಂಡ್ ಸೆಂಟರ್‌ಗಳು, ರಾಕೆಟ್ ಉಡಾವಣಾ ಸ್ಥಾನಗಳು ಮತ್ತು ಡಜನ್‌ಗಟ್ಟಲೇ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ರಾತ್ರೋರಾತ್ರಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್‌ನ ಜೆನಿನ್ ವಿಭಾಗದಲ್ಲಿ ಫೀಲ್ಡ್ ಕಮಾಂಡರ್ ಆಗಿದ್ದ ಐಸರ್ ಮೊಹಮ್ಮದ್ ಅಲ್-ಅಮೆರ್‌ನ ಹತ್ಯೆಯನ್ನು IDF ದೃಢಪಡಿಸಿದೆ.

    ತಮ್ಮ ಪಡೆಗಳ ಮೇಲೆ ಗುಂಡು ಹಾರಿಸುತ್ತಿದ್ದ ಮತ್ತು ಸ್ಫೋಟಕ ಸಾಧನಗಳನ್ನು ಎಸೆಯುವ ಗಲಭೆಕೋರರೊಂದಿಗೆ ವ್ಯವಹರಿಸುತ್ತಿರುವ ಪ್ಯಾಲೆಸ್ತೀನಿಯರ ಮೇಲೂ ಗುಂಡು ಹಾರಿಸಲಾಗಿದೆ ಎಂದು IDF ಸ್ಪಷ್ಟಪಡಿಸಿದೆ. ವೆಸ್ಟ್ ಬ್ಯಾಂಕ್‌ನಾದ್ಯಂತ ರಾತ್ರಿಯ ದಾಳಿಗಳಲ್ಲಿ, ಐಡಿಎಫ್ ಪಡೆಗಳು ಹಮಾಸ್ ಭಯೋತ್ಪಾದಕ ಗುಂಪಿನ 17 ಸದಸ್ಯರನ್ನು ಮತ್ತು 19 ಇತರ ವಾಂಟೆಡ್ ಪ್ಯಾಲೆಸ್ತೀನಿಯರನ್ನು ಬಂಧಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]