Tag: Ispit cards

  • ಅಂದರ್-ಬಾಹರ್ ಕಾರ್ಡ್ ಗೇಮ್‍ನಲ್ಲೂ ಡಿವೈಸ್ ಡೀಲ್

    ಅಂದರ್-ಬಾಹರ್ ಕಾರ್ಡ್ ಗೇಮ್‍ನಲ್ಲೂ ಡಿವೈಸ್ ಡೀಲ್

    ಬೆಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ಒಂದಾದ ಇಸ್ಪಿಟ್ ಆಟಕ್ಕೆ ಸಾಫ್ಟ್‌ವೇರ್‌ ಲಗ್ಗೆ ಇಟ್ಟಿದೆ. ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    Ispit cards

    ಸಾಫ್ಟ್‌ವೇರ್‌ ಬಳಸಿ ಜೂಜು ಅಡ್ಡೆಯಲ್ಲೂ ಡೀಲ್ ಮಾಡುತ್ತಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಜೂಜು ಅಡ್ಡೆಯೇ ಅಕ್ರಮ, ಅದರಲ್ಲಿ ಡಿವೈಸ್ ಮೂಲಕ ಇಡೀ ಗೇಮ್ ಡೀಲ್ ಮಾಡುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    Ispit cards

    ಅಂದರ್-ಬಾಹರ್ ಕಾರ್ಡ್ ಗೇಮ್‍ಗೂ ಡಿವೈಸ್ ಬಂದಿದೆ. ಡಿವೈಸ್ ಮೂಲಕ ಅಂದರ್-ಬಾಹರ್ ಗೇಮ್ ಟ್ರ್ಯಾಪ್ ಮಾಡಿ ಎದುರಾಳಿಗಳನ್ನು ಪಾಪರ್ ಮಾಡಿ ಆರೋಪಿಗಳು ಬರಿಗೈಯ್ಯಲ್ಲಿ ಕಳುಹಿಸುತ್ತಿದ್ದರು. ಅಂದರ್ ಬಾಹರ್ ಗೇಮ್ ಡೀಲ್ ಮಾಡುವುದಕ್ಕೆ CVK 600 ಡಿವೈಸ್ ಮೂಲಕ ಟ್ರ್ಯಾಪ್ ಮಾಡಲಾಗುತ್ತದೆ. ಸ್ಮಾರ್ಟ್ ಫೋನ್ ರೀತಿಯಲ್ಲೇ ಸಿಗುವ CVK 600 ಡಿವೈಸ್ ಇದಾಗಿದ್ದು, ಅಂದರ್ ಬಾಹರ್ ಗೇಮ್ ಅಡ್ಡಕ್ಕೆ ಡಿವೈಸ್ ಕೊಂಡೊಯ್ದು ಇಡೀ ಗೇಮ್ ಟ್ರ್ಯಾಪ್ ಮಾಡುತ್ತಿದ್ದರು. ಜೂಜು ಆಟವನ್ನು ಡೀಲ್ ಮಾಡಲು ಆರೋಪಿಗಳು ಚೀನಾದಿಂದ ಕಾರ್ಡ್ ತರಿಸಿಕೊಳ್ಳುತ್ತಿದ್ದರು.

    Ispit cards

    ಇದೀಗ ಸಾಫ್ಟ್‌ವೇರ್‌ ಬಳಸಿ ಅಂದರ್ ಬಾಹರ್ ಡೀಲ್ ನಡೆಸುತ್ತಿದ್ದ ಫರ್ದಿನ್ ಎಂಬ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕಿಂಗ್ ಫಿನ್ ಪರಿಂದರ್ ಸಿಂಗ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು