ಹೈದರಾಬಾದ್: ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಐಸೋಲೇಷನ್‍ನಲ್ಲಿರುವಂತೆ ಸೂಚನೆ ನೀಡಿದ ವೇಳೆ ಮನೆಯಲ್ಲಿ ಐಸೋಲೇಷನ್ ಆಗುವಷ್ಟು ಸೌಕರ್ಯ ಇಲ್ಲದೆ ಹನ್ನೊಂದು ದಿನಗಳ ಕಾಲ ಮರದ ಮೇಲೆ ದಿನಕಳೆದ ಪ್ರಸಂಗವೊಂದು ವರದಿಯಾಗಿದೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ಕೊಥಾನಂದಿಕೊಂಡ ಗ್ರಾಮದಲ್ಲಿ ವಾಸವಿರುವ ಶಿವ ಎಂಬ ವಿದ್ಯಾರ್ಥಿಯೊರ್ವನಿಗೆ ಕೆಲದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಳಿಕ ಅಲ್ಲಿನ ಆರೋಗ್ಯ ಇಲಾಖೆ ಮತ್ತು ಸ್ಥಳೀಯರು ಐಸೋಲೆಷನ್‍ನಲ್ಲಿ ಇರುವಂತೆ ಸೂಚನೆ ನೀಡಿದರು ಆದರೆ ಶಿವ ಅವರ ಮನೆಯಲ್ಲಿ ಒಂದೇ ಕೋಣೆ ಇದ್ದುದರಿಂದಾಗಿ ಆತ ಮರದಲ್ಲಿ 11 ದಿನ ವಾಸವಾಗುವ ಮೂಲಕ ಐಸೋಲೇಷನ್‍ಗೆ ಒಳಗಾಗಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವ, ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್ ಗಳಿಲ್ಲ. ನಾವು ಕುಟುಂಬದೊಂದಿಗೆ ವಾಸವಿರುವ ಕಾರಣ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ನಾನು ಮರದ ಮೇಲೆ ವಾಸವಾಗಲು ನಿರ್ಧರಿಸಿದೆ.
ಇದಲ್ಲದೆ ಶಿವ ಅವರ ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮಿ ಕ್ರಮಿಸಬೇಕು. ತುರ್ತು ಚಿಕಿತ್ಸೆಗಾಗಿ 30 ಕಿ.ಮಿ ಕ್ರಮಿಸಬೇಕಾದಂತಹ ಪರಿಸ್ಥಿತಿಯನ್ನು ಗ್ರಾಮಸ್ಥರು ಹೊರಹಾಕಿದ್ದಾರೆ.
ಬೆಂಗಳೂರು: ಅಂತೂ ಇಂತೂ ಕೆಜಿಎಫ್-2 ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ತಂಡ ಹೈದರಾಬಾದ್‍ನಿಂದ ಮರಳಿದೆ. ಅಲ್ಲದೆ ಇದೇ ಜ.8ರಂದು ಯಶ್ ಹುಟ್ಟುಹಬ್ಬವಾದ್ದರಿಂದ ಟೀಸರ್ ಬಿಡುಗಡೆಗೆ ಸಹ ಚಿತ್ರ ತಂಡ ತಯಾರಿ ನಡೆಸಿದೆ. ಇದರಿಂದ ಚಿತ್ರ ಪ್ರೇಮಿಗಳಿಗೆ ಡಬಲ್ ಖುಷಿಯಾಗಿದೆ. ಇದರ ಮಧ್ಯೆ ಇದೀಗ ಇನ್ನೊಂದು ವಿಚಾರ ಹೊರ ಬಿದ್ದಿದೆ.
ಕೆಜಿಎಫ್-2 ಶೂಟಿಂಗ್ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ ಜ.8ರಂದು ರಾಖಿ ಭಾಯ್ ಹುಟ್ಟುಹಬ್ಬವಿದ್ದು, ಚಿತ್ರ ತಂಡ ಟೀಸರ್ ಸಹ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಡಬಲ್ ಖುಷಿಯಲ್ಲಿದ್ದಾರೆ. ಇದೇ ವೇಳೆ ಯಶ್ ಕುರಿತು ಇನ್ನೊಂದು ಸುದ್ದಿ ಹೊರ ಬಿದ್ದಿದ್ದು, ಶೂಟಿಂಗ್ ಪೂರ್ಣಗೊಂಡರೂ ರಾಖಿ ಭಾಯ್ ಮನೆಗೆ ಹೋಗಿಲ್ಲವಂತೆ.
ಹೌದು, ಯಶ್ ಮನೆಗೆ ಹೋಗದಿರಲು ಕಾರಣ ಕೊರೊನಾ, ಹೌದು ಶೂಟಿಂಗ್ ಬಳಿಕ ಬೆಂಗಳೂರಿಗೆ ಮರಳಿರುವ ರಾಖಿ ಭಾಯ್, ಮನೆಯಲ್ಲಿ ಚಿಕ್ಕ ಮಕ್ಕಳಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗೆ ತೆರಳದೆ ಹೋಟೆಲ್‍ನಲ್ಲಿ ಐಸೋಲೇಟ್ ಆಗಿದ್ದಾರೆ. ಚಿಕ್ಕ ಮಕ್ಕಳು ಹಾಗೂ ಕುಟುಂಬದವರ ಸುರಕ್ಷತೆ ದೃಷ್ಟಿಯಿಂದ ಯಶ್ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದಾರೆ. ಯಥರ್ವ್ ಗೆ ಒಂದು ವರ್ಷ, ಐರಾಗೆ 2 ವರ್ಷ ಇಬ್ಬರೂ ಸುರಕ್ಷಿತವಾಗಿರಬೇಕು. ಆದರೆ ಯಶ್ ಶೂಟಿಂಗ್ ಸಂದರ್ಭದಲ್ಲಿ ಹಲವು ಜನರ ಜೊತೆ ಸಂಪರ್ಕ ಹೊಂದಿರುತ್ತಾರೆ. ಹೀಗಾಗಿ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಬಾರದು ಎಂಬ ಉದ್ದೇಶದಿಂದ ಮುನ್ನಚ್ಚರಿಕೆ ಕ್ರಮವಾಗಿ ಐಸೋಲೇಟ್ ಆಗಿದ್ದಾರಂತೆ.
ಈ ಮಧ್ಯೆ ಯಶ್ ಮಂಗಳವಾರ ರಾತ್ರಿ ಕೆಜಿಎಫ್ ಛಾಯಾಗ್ರಾಹಕ ಭುವನ್ ಗೌಡ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ತಮ್ಮ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಅಲ್ಲದೆ ಶೂಟಿಂಗ್ ಪೂರ್ಣಗೊಂಡಿರುವುದರಿಂದ ಇನ್ನು ಡಬ್ಬಿಂಗ್, ಟೀಸರ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಯಶ್ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಚಿತ್ರ ತಂಡ ಸಹ ಟೀಸರ್ ಬಿಡುಗಡೆ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದೆ. ಯಶ್ ಮಾತ್ರ ಮನೆಗೆ ತೆರಳದೆ ಐಸೋಲೇಟ್ ಆಗಿದ್ದಾರೆ.
ಕೆಜಿಎಫ್ ಭರ್ಜರಿ ಸಕ್ಸಸ್ ಬಳಿಕ ಕೆಜಿಎಫ್-2 ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದಸರಾಗೆ ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಚಿತ್ರ ಬಿಡುಗಡೆ ತಡವಾಗಿದೆ. ಲೇಟ್ ಆದರೂ ಲೆಟೆಸ್ಟ್ ಆಗಿ ರಿಲೀಸ್ ಮಾಡಲು ಚಿತ್ರತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ಜನವರಿ 8ರಂದು ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಸಹ ಬಿಡುಗಡೆಯಾಗುತ್ತಿದೆ.