Tag: Islamic militants

  • ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    ಬಾಗ್ದಾದ್: ಇರಾಕ್‍ನ ಪೂರ್ವ ಪ್ರಾಂತ್ಯದ ದಿಯಾಲಾದಲ್ಲಿ ಶನಿವಾರ ನಡೆದ  ಏರ್‌ಸ್ಟ್ರೈಕ್  ದಾಳಿಯಲ್ಲಿ ಐಎಸ್ ಸ್ಥಳೀಯ ನಾಯಕ ಸೇರಿದಂತೆ ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ (ಐಸಿಸ್‌)  ಗುಂಪಿನ 6 ಉಗ್ರರು ಹತರಾಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

    ಗುಪ್ತಚರ ವರದಿಗಳ ಆಧಾರದ ಮೇಲೆ, ಇರಾಕಿನ ಯುದ್ಧ ವಿಮಾನಗಳು ದಿಯಾಲಾ ಪ್ರಾಂತ್ಯದ ಉತ್ತರ ಭಾಗದಲ್ಲಿರುವ ಉಧೈಮ್ ಪ್ರದೇಶದಲ್ಲಿ ಐಎಸ್ ಸ್ಥಾನದ ಮೇಲೆ ಏರ್‌ಸ್ಟ್ರೈಕ್ ದಾಳಿ ನಡೆಸಿವೆ. ಈ ದಾಳಿಯಲ್ಲಿ ಸ್ಥಳೀಯ ಐಎಸ್ ನಾಯಕ ಸೇರಿದಂತೆ 6 ಐಎಸ್ ಉಗ್ರರು ಹತರಾಗಿದ್ದಾರೆ ಎಂದು ಮೊಹಮ್ಮದ್ ಹೇಳಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಐಸಿಸ್‌ ಉಗ್ರಗಾಮಿಗಳು ಈ ಹಿಂದೆ ನಿಯಂತ್ರಿಸಿದ್ದ ಪ್ರಾಂತ್ಯಗಳು ಕಳೆದ ತಿಂಗಳುಗಳಲ್ಲಿ ಅವರ ತೀವ್ರವಾದ ಉಗ್ರಗಾಮಿ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಅವರನ್ನು ಬೇಟೆಯಾಡಲು ಪದೇ ಪದೇ ಮಿಲಿಟರಿ ಕಾರ್ಯಾಚರಣೆಗಳ ಹೊರತಾಗಿಯೂ 2017 ರಲ್ಲಿ ಇರಾಕಿನ ಪಡೆಗಳು ಐಎಸ್ ಅನ್ನು ಸೋಲಿಸಿದಾಗಿನಿಂದ ಇರಾಕ್‍ನಲ್ಲಿನ ಭದ್ರತಾ ಪರಿಸ್ಥಿತಿಯು ಸುಧಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಕಲಾವತಿ ಮೌನೇಶ ಬಡಿಗೇರ ದಿಢೀರ್ ರಾಜೀನಾಮೆ

     

  • ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ತಿರುವನಂತಪುರಂ: ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ನಂತರ ಲಕ್ಷದ್ವೀಪಕ್ಕೆ 15 ಐಸಿಸ್ ಉಗ್ರರು ಬರುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಕೇರಳದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    15 ಜನ ಇಸ್ಲಾಮಿಕ್ ಸ್ಟೇಟ್ ಉಗ್ರರು ಶ್ರೀಲಂಕಾದಿಂದ ಬಿಳಿ ಬಣ್ಣದ ದೋಣಿಯಲ್ಲಿ ಲಕ್ಷದ್ವೀಪದ ಕಡೆ ತೆರಳುತ್ತಿದ್ದಾರೆ. ಅವರು ಲಕ್ಷದ್ವೀಪದಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಮಾರ್ಚ್ 23 ರಂದು ಶ್ರೀಲಂಕಾ ಈ ಸೂಚನೆ ನೀಡಿದ ಬೆನ್ನಲ್ಲೇ ಕೇರಳದ ಕೋಸ್ಟಲ್ ಪೊಲೀಸ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.

    ಶ್ರೀಲಂಕಾದಲ್ಲಿ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ನಾವು ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಗಳು ಕರಾವಳಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

    ಸಮುದ್ರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಹಡಗುಗಳು ಕಂಡಬಂದರೆ ಆದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರಾವಳಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ.

    ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‍ಗಳು ಸೇರಿ ಎಂಟು ಕಡೆಯಲ್ಲಿ ಸರಣಿ ಅತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ ಕನ್ನಡಿಗರೂ ಸೇರಿ 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇದೇ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.