Tag: Islamic Bond

  • ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ

    ಇಸ್ಲಾಮಾಬಾದ್‌ : ನಮ್ಮ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದಿದ್ದ ಪಾಕಿಸ್ತಾನ ಈಗ ಹೆದ್ದಾರಿಯನ್ನು ಅಡವಿಟ್ಟು ದುಬಾರಿ ಬಡ್ಡಿಗೆ ಸಾಲವನ್ನು ಪಡೆದುಕೊಂಡು ಸುದ್ದಿಯಾಗಿದೆ.

    ಹೌದು. ಪಾಕಿಸ್ತಾನ ಈಗ 7 ವರ್ಷ ಅವಧಿಯ ಇಸ್ಲಾಮಿಕ್‌ ಬಾಂಡ್‌(ಸುಕುಕ್‌) ಮೂಲಕ 1 ಶತಕೋಟಿ ಡಾಲರ್‌( 17,600 ಪಾಕಿಸ್ತಾನ ರೂ.) ಸಾಲವನ್ನು ಪಡೆದುಕೊಂಡಿದೆ. ಈ ಸಾಲಕ್ಕೆ ಶೇ.7.95 ಬಡ್ಡಿದರ ಅಲ್ಲದೇ ಲಾಹೋರ್‌-ಇಸ್ಲಾಮಾಬಾದ್‌ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಿರಿಸಿದೆ.

    ಇಸ್ಲಾಮಿಕ್‌ ಬಾಂಡ್‌ನಡಿ ಪಡೆದ ಸಾಲಕ್ಕೆ ಇಷ್ಟು ಹೆಚ್ಚು ಪ್ರಮಾಣದ ಬಡ್ಡಿ ಪಾವತಿ ಮಾಡುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲು ಎಂದು ಮಾಧ್ಯಮಗಳು ತಿಳಿಸಿವೆ.

    ಯಾಕೆ ಸಾಲ?
    ಸೌದಿ ಅರೇಬಿಯಾದಿಂದ ಪಡೆದಿರುವ 3 ಬಿಲಿಯನ್‌ ಡಾಲರ್‌(52,800 ಕೋಟಿ ರೂ.) ಪೈಕಿ 35,200 ಕೋಟಿ ರೂ. ಅನ್ನು ಪಾಕ್‌ ಈಗಾಗಲೇ ವೆಚ್ಚ ಮಾಡಿದೆ. ಇದರಿಂದಾಗಿ ಜ.14ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್‌ ಡಾಲರ್‌ನಿಂದ ಕುಸಿತವಾಗಿದೆ. ಹೀಗಾಗಿ ತನ್ನ ವಿದೇಶಾಂಗ ವಿನಿಮಯ ಸಂಗ್ರಹದಲ್ಲಿ ಇನ್ನಷ್ಟುಕುಸಿತ ತಡೆಯಲು ಸಾಲ ಪಡೆಯಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.  ಇದನ್ನೂ ಓದಿ: ಉಗ್ರರಿಗೆ ಸಹಕಾರ – ಪಾಕಿಸ್ತಾನದ ಜೊತೆ ಬೂದುಪಟ್ಟಿಗೆ ಸ್ನೇಹಿತ ಟರ್ಕಿಯೂ ಸೇರ್ಪಡೆ

    PAK

    ಅಂತಾರಾಷ್ಟ್ರೀಯ ಚೇಂಬರ್ಸ್ ಶೃಂಗಸಭೆ 2022ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪಾಕಿಸ್ತಾನವು ಬೇರೆ ದೇಶಗಳಿಗಿಂತ ವಿಶೇಷವಾಗಿ ಭಾರತಕ್ಕಿಂತ ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ. ನಮ್ಮನ್ನು ಅಸಮರ್ಥರು ಎಂದು ಕರೆಯುತ್ತಾರೆ, ಆದರೆ ನಮ್ಮ ಸರ್ಕಾರವು ಎಲ್ಲಾ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ಉಳಿಸಿದೆ ಎಂಬುದು ಸತ್ಯ ಎಂದು ಎಂದು ಹೇಳಿದ್ದರು.