Tag: Islamabad

  • ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಹಿಂದೂ ಕುಟುಂಬ ಫೇಮಸ್..!

    ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಹಿಂದೂ ಕುಟುಂಬ ಫೇಮಸ್..!

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಯಾರಿಂದಲೂ ಮರೆಯಲಾಗುವುದಿಲ್ಲ. ಪಾಕ್ ನಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯದ ಸುದ್ದಿಗಳು ಎಲ್ಲೆಡೆ ಹರಿದಾಡುತ್ತೆ. ಆದರೆ ಪಾಕಿಸ್ತಾನದಲ್ಲಿ ಹಿಂದೂ ಕುಟುಂಬವೊಂದು ರಾಜಕೀಯ ವಲಯದಲ್ಲಿ ಫೇಮಸ್ ಆಗಿದ್ದು, ಮುಸ್ಲಿಂ ಜನರನ್ನು ರಕ್ಷಿಸುತ್ತಾರೆ.

    ಪಾಕಿಸ್ತಾನದಲ್ಲಿ ಇರಲಾಗದೆ ಹಲವು ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಬಂದ ಹಲವಾರು ಉದಾಹರಣೆಗಳಿವೆ. ಆದರೆ ಪಾಕಿಸ್ತಾನದ ಉಮರ್ಕೋಟ್ ರಾಜ್ಯದ ರಾಜ ಕರಣಿಸಿಂಗ್ ಕುಟುಂಬ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಕರ್ಣಿಸಿಂಗ್ ಅವರಿಗೆ ಪಾಕಿಸ್ತಾನದಲ್ಲಿ ಒಳ್ಳೆಯ ಸ್ಥಾನ ಮತ್ತು ಬೆಂಬಲವಿದೆ. ಅಲ್ಲದೆ ಅವರು ಹೋದ ಕಡೆ ಅಂಗರಕ್ಷಕರನ್ನು ಆಯೋಜಿಸಲಾಗುತ್ತೆ. ಈ ಕುಟುಂಬ ಇಲ್ಲಿರುವ ಪ್ರತಿ ಮುಸ್ಲಿಂ ಕುಟುಂಬವನ್ನು ರಕ್ಷಿಸಲು ಅವರ ಎಲ್ಲ ಕಾನೂನುಗಳನ್ನು ಅನುಸರಿಸುತ್ತಾರೆ. ಇದನ್ನೂ ಓದಿ: ಮರ್ಸಿಡಿಸ್ ಬೆಂಜ್ ಗಿಫ್ಟ್ ಕೊಟ್ಟ ಬಾಸ್ – ಕಾರ್ ನೋಡಿ ಸಿಬ್ಬಂದಿ ಖುಷ್

    Pakistani Hindus are a resilient minority too

    ಅಕ್ಬರನ ಜನ್ಮಸ್ಥಳ ಉಮರ್ಕೋಟ್!
    ಉಮರ್‍ಕೋಟ್‍ನ ಹಿಂದಿನ ಹೆಸರು ಅಮರಕೋಟ್. ಈ ರಾಜಪ್ರಭುತ್ವವು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದೆ. ಅಮರಕೋಟ್ ಮೊಘಲ್ ಚಕ್ರವರ್ತಿ ಅಕ್ಬರನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಅಮರಕೋಟ್ ಮೊದಲು ಸಿಂಧ್‍ನ ರಾಜಧಾನಿಯಾಗಿತ್ತು. ಮಧ್ಯಕಾಲೀನ ಅವಧಿ 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದ ವೇಳೆ ಹಿಂದೂ ಬಹುಸಂಖ್ಯಾತ ಉಮರ್ಕೋಟ್ ಪಾಕಿಸ್ತಾನಕ್ಕೆ ಹೋದ ಏಕೈಕ ರಾಜಪ್ರಭುತ್ವದ ರಾಜ್ಯವಾಗಿತ್ತು.

    ಪಾಕಿಸ್ತಾನದಲ್ಲಿ ಉಳಿಯಲು ನಿರ್ಧಾರ..!
    ಮೊಘಲ್ ಸಾಮ್ರಾಜ್ಯ ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ನಗರವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆಯಿತು. ಉಮರ್ಕೋಟ್‍ನ ರಜಪೂತ ದೊರೆ ಶೇರ್ ಶಾ ಸೂರಿಯ ಕೈಯಲ್ಲಿ ಅಕ್ಬರನ ತಂದೆ ಹುಮಾಯೂನ್ ಸೋತಾಗ, ರಾಣಾ ರಾವ್ ಸಿಂಗ್ ಅವನಿಗೆ ಆಶ್ರಯ ನೀಡಿದನೆಂದು ನಂಬಲಾಗಿದೆ. ವಿಭಜನೆಯ ಸಮಯದಲ್ಲಿ, ಈ ರಾಜ್ಯ ರಾಜ ಪಾಕಿಸ್ತಾನದಲ್ಲೇ ಉಳಿಯಲು ನಿರ್ಧರಿಸಿದರು. ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಹೋದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೇವೆ: ಜೋಶಿ

    PAK

    ಪಾಕ್ ರಾಜಕೀಯದಲ್ಲಿ ಪ್ರಮುಖ ಸ್ಥಾನ..!
    ಕರ್ಣಿಸಿಂಗ್ ಅವರ ಅಜ್ಜ ರಾಣಾ ಚಂದ್ರಸಿಂಗ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಸ್ಥಾಪಕರಲ್ಲಿ ಒಬ್ಬರು. ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರ ಆಪ್ತರಾಗಿದ್ದರು. ಅವರು ಬೆನಜೀರ್ ಭುಟ್ಟೋ ಅವರ ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನಗಳನ್ನು ಸಹ ಹೊಂದಿದ್ದರು. ಅವರು ಉಮರ್ಕೋಟ್ ನಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ 7 ಬಾರಿ ಆಯ್ಕೆಯಾದರು. ಪಿಪಿಪಿ ಯಿಂದ ಬೇರ್ಪಟ್ಟ ನಂತರ, ರಾಣಾ ಚಂದ್ರಸಿಂಗ್ ಪಾಕಿಸ್ತಾನ್ ಹಿಂದೂ ಪಕ್ಷವನ್ನು (ಪಿಎಚ್‍ಪಿ) ಸ್ಥಾಪಿಸಿದರು.

  • ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

    ಇಸ್ಲಾಮಬಾದ್: ಸಿಂಧ್ ಪ್ರಾಂತ್ಯದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಪಾಕಿಸ್ತಾನದ ನ್ಯಾಯಾಲಯವು ಹಿಂದೂ ಕಾಲೇಜು ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, 50,000 ರೂ. ದಂಡ ಹಾಕಿದೆ.

    ಸರ್ಕಾರಿ ಪದವಿ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ನೌತನ್ ಲಾಲ್ ಅವರನ್ನು 2019ರಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಪಾಕ್ ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಕೇಸ್ ಗೆ ಮುಕ್ತಿ ಸಿಕ್ಕಿದ್ದು, ನೌತನ್ ಲಾಲ್ ಅವರನ್ನು ಪಾಕ್ ನ್ಯಾಯಾಲಯ 10 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ.

    ಏನಿದು ಘಟನೆ?
    2019 ಸೆಪ್ಟೆಂಬರ್ 14 ರಂದು ಸ್ಥಳೀಯ ಶಾಲೆಯ ಶಿಕ್ಷಕ ನೌತನ್ ಲಾಲ್ ಅವರು ಧರ್ಮನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಪರಿಣಾಮ ನೌತನ್ ಲಾಲ್ ಅವರನ್ನು ಪಾಕ್ ಪೊಲೀಸರು ಬಂಧಿಸಿದ್ದರು. ಈ ವೇಳೆ ಅವರು ಎರಡು ಬಾರಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಅದನ್ನು ಎರಡು ಬಾರಿಯೂ ತಿರಸ್ಕರಿಸಲಾಗಿದೆ. ಪ್ರಸ್ತುತ ಪಾಕ್ ನ್ಯಾಯಾಲಯ ನೌತನ್ ಲಾಲ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 50,000 ದಂಡ ವಿಧಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೂ ಹಿಜಬ್‌ ವಿವಾದ ಎಂಟ್ರಿ – ನಿಷೇಧ ಮಾಡ್ತೀವಿ ಎಂದ ಶಿಕ್ಷಣ ಸಚಿವ

    ಪಾಕಿಸ್ತಾನವು 1947 ರಿಂದ ದೇಶದಲ್ಲಿ ಒಟ್ಟು 1,415 ಧರ್ಮನಿಂದೆಯ ಪ್ರಕರಣಗಳನ್ನು ವರದಿ ಮಾಡಿದೆ. ವರದಿಗಳ ಪ್ರಕಾರ, 1947 ರಿಂದ 2021 ರವರೆಗೆ ಧರ್ಮನಿಂದನೆಯ ಮೇಲೆ ಒಟ್ಟು 18 ಮಹಿಳೆಯರು ಮತ್ತು 71 ಪುರುಷರನ್ನು ಕೊಲ್ಲಲಾಗಿದೆ ಎಂದು ತಿಳಿಯಲಾಗಿದೆ. ಆದರೆ ಮೂಲಗಳ ಪ್ರಕಾರ ಈ ಸಂಖ್ಯೆ ಇನ್ನೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

  • ಲಾಹೋರ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ- 3 ಸಾವು

    ಲಾಹೋರ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ- 3 ಸಾವು

    ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್‌ ನ ಶಾಪಿಂಗ್ ಮಾರುಕಟ್ಟೆಯಲ್ಲಿ ಗುರುವಾರ ಬಾಂಬ್ ಸ್ಫೋಟವಾಗಿದ್ದು, ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೈಕ್‍ನಲ್ಲಿ ಸಮಯ ನಿಯಂತ್ರಿತ ಸಾಧನ ಬಳಸಿ ಬಾಂಬ್ ಇಟ್ಟು ಸ್ಫೋಟಗೊಳಿಸಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಲಾಹೋರ್ ಪೊಲೀಸ್ ವಕ್ತಾರ ರಾಣಾ ಆರಿಫ್ ಹೇಳಿದ್ದಾರೆ.

    ಭಾರತೀಯ ಸರಕುಗಳನ್ನು ಮಾರಾಟ ಮಾಡುವ ಲಾಹೋರ್‌ನ ಪ್ರಸಿದ್ಧ ಅನಾರ್ಕಲಿ ಮಾರುಕಟ್ಟೆಯ ಸಮೀಪದ ಪಾನ್ ಮಂಡಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಹತ್ತಿರದ ಅಂಗಡಿಗಳು ಹಾಗೂ ಕಟ್ಟಡಗಳ ಕಿಟಕಿಗಳು ಹಾನಿಗೀಡಾಗಿವೆ. ಇದುವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಪಾಕಿಸ್ತಾನದಲ್ಲಿ ತಾಲಿಬಾನ್‍ಗಳು ಕಳೆದ ಡಿಸೆಂಬರ್‍ನಿಂದ ಸರ್ಕಾರ ಮತ್ತು ಪೊಲೀಸರ ವಿರುದ್ಧ ಸರಣಿ ಸ್ಫೋಟಗಳು ಹಾಗೂ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    ಅಫಘಾನಿಸ್ತಾನದ ತಾಲಿಬಾನ್ ಸಂಘಟನೆಯಂತೆ ಕಾರ್ಯನಿರ್ವಹಿಸುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಈ ರೀತಿ ಸಂಭವಿಸಿದ ಹೆಚ್ಚಿನ ಸ್ಫೋಟಗಳ ಹೊಣೆ ಹೊತ್ತುಕೊಂಡಿದೆ.

    ನಾವು ಈ ಸ್ಫೋಟದ ಕುರಿತು ತನಿಖೆ ಆರಂಭಿಸಿದ್ದೇವೆ. ಸ್ಫೋಟದಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಐಜಿಪಿ ಡಾ. ಮೊಹಮ್ಮದ್ ಅಬಿದ್ ತಿಳಿಸಿದ್ದಾರೆ.

    ಭಯೋತ್ಪಾದನಾ ನಿಗ್ರಹ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಫೋಟದ ಸ್ವರೂಪವನ್ನು ಪರಿಶೀಲಿಸುತ್ತಿದ್ದಾರೆ.

    ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೇಯೊ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಇಫ್ತಿಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ಕಾಂಗ್ರೆಸ್‍ನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಗರ್ಲ್ ಬಿಜೆಪಿಗೆ ಸೇರ್ಪಡೆ

    ಸ್ಫೋಟದಲ್ಲಿ ಹಲವಾರು ದ್ವಿಚಕ್ರವಾಹನಗಳು ಮತ್ತು ಮಾರಾಟ ಮಳಿಗೆಗಳು ಹಾನಿಗೊಳಗಾಗಿವೆ. ಸ್ಫೋಟದ ನಂತರ ಇಡೀ ಅನಾರ್ಕಲಿ ಬಜಾರ್ ಮುಚ್ಚಲಾಗಿದೆ.

  • ಇಸ್ಲಾಮಾಬಾದ್‍ನಲ್ಲಿ 3 ದಿನ ಮೊಬೈಲ್ ಸೇವೆ ಸ್ಥಗಿತ

    ಇಸ್ಲಾಮಾಬಾದ್‍ನಲ್ಲಿ 3 ದಿನ ಮೊಬೈಲ್ ಸೇವೆ ಸ್ಥಗಿತ

    ಇಸ್ಲಾಮಾಬಾದ್: ಇಸ್ಲಾಮಿಕ್ ಸಹಕಾರ ಸಂಘಟನೆಯು (ಓಐಸಿ) ವಿದೇಶಾಂಗ ಸಚಿವರೊಂದಿಗೆ ಅಧಿವೇಶನ ಆಯೋಜಿಸಿದ್ದು, ರಾಜಧಾನಿ ಇಸ್ಲಾಮಾಬಾದ್‍ನಲ್ಲಿ 3 ದಿನಗಳವರೆಗೂ ಮೊಬೈಲ್ ಫೋನ್ ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಪಾಕಿಸ್ತಾನ ಘೋಷಿಸಿದೆ.

    ಒಐಸಿಯು ವಿದೇಶಾಂಗ ಸಚಿವರ ಜೊತೆ ಅಧಿವೇಶನವನ್ನು ಶುಕ್ರವಾರ ಪ್ರಾರಂಭಿಸುವುದರಿಂದ ಡಿಸೆಂಬರ್ 17 ರಿಂದ 19ರವರೆಗೂ ಮೂರು ದಿನಗಳವರೆಗೆ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಆಂತರಿಕ ಸಚಿವಾಲಯ ಪ್ರಕಟಿಸಿದೆ. ಇದನ್ನೂ ಓದಿ: ತುಂಬಾ ಜನರು ನನ್ನನ್ನ ಜೈಲಿಗೆ ಕಳುಹಿಸಲು ಸಿದ್ಧರಿದ್ದಾರೆ: ರಮೇಶ್ ಕುಮಾರ್

    ಆಗಸ್ಟ್‍ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಗತ್ಯವಿರುವ ಅಫ್ಘಾನಿಸ್ತಾನದ ಲಕ್ಷಾಂತರ ಜನರಿಗೆ ಆಹಾರ, ಔಷಧ ಮತ್ತು ಆಶ್ರಯವನ್ನು ಒದಗಿಸುವ ಬಗ್ಗೆ ಒಐಸಿ ಅಧಿವೇಶನದಲ್ಲಿ ಚರ್ಚೆ ನಡೆಸಲಿದೆ. ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ರೆಡ್ ಜೋನ್‍ವರೆಗೂ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ಸಂಬಂಧ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಆಂತರಿಕ ಸಚಿವಾಲಯದಿಂದ ಪತ್ರ ಸ್ವೀಕರಿಸಿದೆ. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಅಧಿವೇಶನವನ್ನು ಆಯೋಜಿಸಲು ಸಂಸತ್ ಭವನದ ನಿರ್ವಹಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಂಟು ದಿನಗಳ ಕಾಲ ಹಸ್ತಾಂತರಿಸಲಾಗಿದೆ. ಈ ಕುರಿತಂತೆ ಸಮಾಲೋಚನೆಗಳು ಇನ್ನೂ ನಡೆಯುತ್ತಿರುವುದರಿಂದ ಈ ವಿಷಯದ ಬಗ್ಗೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯ ಮೊಬೈಲ್ ಸೇವೆ ಸ್ಥಗಿತಗೊಳಿಸುವ ಸಮಯ ಮತ್ತು ದಿನಾಂಕಗಳನ್ನು ಶುಕ್ರವಾರ ಅಂತಿಮಗೊಳಿಸಲಾಗುವುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ.

  • ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ

    ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ

    ಇಸ್ಲಾಮಾಬಾದ್: ಗುರುದ್ವಾರದಲ್ಲಿ ಧಾರ್ಮಿಕ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನಿ ಮಾಡೆಲ್ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮೇಲೆ ಫುಲ್ ಗರಂ ಆಗಿದ್ದಾರೆ.

    ಧಾರ್ಮಿಕ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್(ಕರ್ತಾರ್‍ಪುರ್ ಸಾಹಿಬ್) ಆವರಣದಲ್ಲಿ ಪಾಕಿಸ್ತಾನಿ ಮಾಡೆಲ್ ಭಾರತೀಯ ಉಡುಪನ್ನು ಧರಿಸಿ, ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಫೋಟೋಗೆ ಪೋಸ್ ನೀಡಿದ್ದಾಳೆ. ಆ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಆ ಫೋಟೋಗಳನ್ನು ನೋಡಿ ಮಾಡೆಲ್ ಮೇಲೆ ಕೋಪಗೊಂಡಿದ್ದಾರೆ.

    ಏನಿದು ಘಟನೆ?
    ಲಾಹೋರ್ ಮೂಲದ ಈ ಮಾಡೆಲ್ ಪಾಕಿಸ್ತಾನದಲ್ಲಿ ಸಿದ್ಧ ಉಡುಪುಗಳ ಮಹಿಳಾ ಆನ್‍ಲೈನ್ ಬಟ್ಟೆಗಳ ರಾಯಭಾರಿಯಾಗಿದ್ದಳು. ಇತ್ತೀಚೆಗೆ ಕರ್ತಾರ್‍ಪುರ ಸಾಹಿಬ್‍ನ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಭಾರತೀಯ ಉಡುಪನ್ನು ಧರಿಸಿ ಮಾಡೆಲ್ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ಬಟ್ಟೆಗಳ ಪ್ರಮೋಷನ್ ಗೆ ಬಳಸಿಕೊಳ್ಳಲಾಗಿದೆ. ಫೋಟೋ ನೋಡಿದ ನೆಟ್ಟಿಗರು, ಧಾರ್ಮಿಕ ಸ್ಥಳವಾದ ಗುರುದ್ವಾರದಲ್ಲಿ ತಲೆ ಮೇಲೆ ಬಟ್ಟೆ ಹಾಕಿಕೊಳ್ಳದೆ ಪಾಕಿಸ್ತಾನಿ ಯುವತಿ ಫೋಟೋಗಳಿಗೆ ಪೋಸ್ ಕೊಟ್ಟಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

    ಆನ್‍ಲೈನ್ ಸ್ಟೋರ್‌ನ ಮಾಲೀಕ ‘ಮನ್ನತ್_ಕ್ಲೋಥಿಂಗ್’ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ಬುರ್ಖಾವಿಲ್ಲದೇ ತೆಗೆಸಿದ ಮಾಡೆಲ್‍ನ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ

    ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮಾಡೆಲ್ ಮತ್ತು ಬ್ರಾಂಡ್‍ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಈ ರೀತಿ ಮಾಡಿದ್ದೀರಾ! ಗುರುದ್ವಾರದಲ್ಲಿ ನೀವು ಈ ರೀತಿ ನಡೆದುಕೊಂಡಿರುವುದು ಗೌರವ ತಂದುಕೊಂಡುವುದಿಲ್ಲ ಎಂದು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಈ ಪೋಸ್ಟ್ ಅನ್ನು ‘ನಾಚಿಕೆಗೇಡು’ ಎಂದು ಹೇಳಿ ಡಿಲೀಟ್ ಮಾಡುವಂತೆ ಕಮೆಂಟ್ ಮಾಡುತ್ತಿದ್ದಾರೆ. ಇದು ನಿಮ್ಮ ಪ್ರವಾಸಿ ತಾಣವಲ್ಲ, ಮೊದಲು ತಲೆ ಮೇಲೆ ಬಟ್ಟೆ ಹಾಕಿಕೊಳ್ಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಪರಮ್‍ಜಿತ್ ಸಿಂಗ್ ಸರ್ನಾ, ಇದು ಅತ್ಯಂತ ಆಕ್ಷೇಪಾರ್ಹ ಕೃತ್ಯವಾಗಿದ್ದು, ಸಿಖ್ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡುವವರು ಗುರುದ್ವಾರಗಳಲ್ಲಿ ಅನ್ವಯಿಸುವ ಸಿಖ್ ನೀತಿ ಸಂಹಿತೆಯ ಬಗ್ಗೆ ಸಂವೇದನಾಶೀಲತೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ಎಸ್‍ಜಿಪಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕಿರಣ್‍ಜೋತ್ ಕೌರ್ ಈ ಕುರಿತು ಮಾತನಾಡಿದ್ದು, ಧಾರ್ಮಿಕ ಸ್ಥಳವನ್ನು ವ್ಯಾಪಾರೀಕರಣ ಮಾಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ. ಇದರ ವಿರುದ್ಧ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

  • ಪಾಕಿಸ್ತಾನದಲ್ಲಿ ಕಾಡುತ್ತಿದೆ ನಿಗೂಢ ವೈರಲ್ ಜ್ವರ

    ಪಾಕಿಸ್ತಾನದಲ್ಲಿ ಕಾಡುತ್ತಿದೆ ನಿಗೂಢ ವೈರಲ್ ಜ್ವರ

    ಇಸ್ಲಾಮಾಬಾದ್: ನಿಗೂಢ ವೈರಲ್ ಜ್ವರವು ಪಾಕಿಸ್ತಾನದ ಕರಾಚಿಯಲ್ಲಿ ಕಾಡುತ್ತಿದ್ದು, ವೈದ್ಯರು ಇದು ಯಾವ ಜ್ವರವೆಂದು ತಿಳಿಯದೆ ತತ್ತರಿಸುತ್ತಿದ್ದಾರೆ.

    ಪಾಕಿಸ್ತಾನದ ಕರಾಚಿಯಲ್ಲಿ ‘ನಿಗೂಢ ವೈರಲ್ ಜ್ವರ’ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ವೈರಲ್ ಜ್ವರವನ್ನು ಮೊದಲು ಡೆಂಗ್ಯೂ ಎಂದು ಪರಿಗಣಿಸಿ ಪರೀಕ್ಷಿಸಿದಾಗ, ರಿಪೋರ್ಟ್ ನೆಗೆಟಿವ್ ಬಂತು ಎಂದು ವೈದ್ಯರು ಮತ್ತು ರೋಗಶಾಸ್ತ್ರಜ್ಞರು ತಿಳಿಸಿದರು. ಈ ರೋಗದಿಂದ ರೋಗಿಗಳ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತಿದ್ದು, ಡೆಂಗ್ಯೂ ರೋಗದ ಲಕ್ಷಣವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪ್ರವಾಸೋದ್ಯಮ ಕ್ಷೇತ್ರದ 3 ವಿಭಾಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಉತ್ತರಾಖಂಡ್

    ಡೌ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‍ನ ಆಣ್ವಿಕ ರೋಗಶಾಸ್ತ್ರದ ಮುಖ್ಯಸ್ಥ ಪ್ರೊ.ಸಯೀದ್ ಖಾನ್ ಈ ಕುರಿತು ಮಾತನಾಡಿದ್ದು, ಒಂದೆರಡು ವಾರಗಳಿಂದ, ನಾವು ಈ ವೈರಲ್ ಜ್ವರದ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಜ್ವರದಿಂದ ರೋಗಿಗಳಲ್ಲಿ ಪ್ಲೇಟ್‍ಲೆಟ್‍ಗಳು ಮತ್ತು ಬಿಳಿ ರಕ್ತ ಕಣಗಳು ಕುಸಿಯುತ್ತಿವೆ. ಈ ರೋಗಲಕ್ಷಣಗಳು ಡೆಂಗ್ಯೂ ಜ್ವರಕ್ಕೆ ಹೋಲುತ್ತವೆ. ಆದರೆ ಈ ಕುರಿತು ಪರೀಕ್ಷೆಸಿದಾಗ ರಿಪೋರ್ಟ್ ನೆಗೆಟಿವ್ ಬರುತ್ತಿದೆ ಎಂದು ಹೇಳಿದರು.

    ಜಿಲ್ಲಾ ಆರೋಗ್ಯ ಅಧಿಕಾರಿ(ಡಿಎಚ್‍ಒ) ಈ ಕುರಿತು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಶುಕ್ರವಾರ 45 ಜನರಿಗೆ ಹೊಸ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ಈ ನಿಗೂಢ ವೈರಸ್ ಕಾಯಿಲೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ನಗರದಲ್ಲಿ ಪ್ಲೇಟ್‍ಲೆಟ್‍ಗಳ ಮೆಗಾ ಯೂನಿಟ್‍ಗಳು ಮತ್ತು ಯಾದೃಚ್ಛಿಕ ಘಟಕಗಳ ತೀವ್ರ ಕೊರತೆಯಿದೆ. ಈ ಹಿನ್ನೆಲೆ ಇಲ್ಲಿನ ಜನರು ತುಂಬಾ ಕಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದರು.

    ನಗರದ ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ಹೆಮಟೋ-ರೋಗಶಾಸ್ತ್ರಜ್ಞರು ಸೇರಿದಂತೆ ಇತರ ತಜ್ಞರು, ಕರಾಚಿಯಲ್ಲಿ ಡೆಂಗ್ಯೂ ವೈರಸ್ ತರಹದ ಇನ್ನೊಂದು ರೋಗ ಕಾಣಿಸಿಕೊಂಡಿದೆ ಎಂದು ದೃಢಪಡಿಸಿದ್ದಾರೆ. ಇದು ಡೆಂಗ್ಯೂ ಜ್ವರದಂತೆಯೇ ಕಾರ್ಯನಿರ್ವಹಿಸುವ ಮತ್ತು ಅದೇ ಚಿಕಿತ್ಸಾ ಫ್ರೋಟೋಕಾಲ್ಸ್ ಗಳ ಅಗತ್ಯವಿರುವ ರೋಗವನ್ನು ಉಂಟುಮಾಡುತ್ತದೆ. ಆದರೆ ಇದು ಡೆಂಗ್ಯೂ ಜ್ವರವಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಗಿದ ಯೋಗಾನರಸಿಂಹ ಸ್ವಾಮಿ ಗೋಪುರದ ಕಳಶ – ಆತಂಕದಲ್ಲಿ ಭಕ್ತರು

    ಗುಲ್ಯನ್-ಎ-ಇಕ್ಬಾಲ್‍ನ ಮಕ್ಕಳ ಆಸ್ಪತ್ರೆಯ ಆಣ್ವಿಕ ವಿಜ್ಞಾನಿ ಡಾ.ಮುಹಮ್ಮದ್ ಜೊಹೈಬ್ ಅವರು, ಈ ವೈರಸ್ ಡೆಂಗ್ಯೂ ಅಲ್ಲ. ಆದರೆ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರವಾಗಿದೆ ಎಂದು ದೃಢಪಡಿಸಿದರು.

    ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಇದು ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಸಾಮಾನ್ಯವಾಗಿದೆ ಮತ್ತು ಮಳೆಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುತ್ತೆ ಎಂದು ತಿಳಿಸಿದರು.

  • ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಇಸ್ಲಾಮಾಬಾದ್: ಮೋಟಾರ್ ಬೈಕ್‍ನಲ್ಲಿ ಬಂದ ವ್ಯಕ್ತಿಯ ಆತ್ಮಾಹುತಿ ಬಾಂಬ್ ದಾಳಿಗೆ ಮೂವರು ಮೃತಪಟ್ಟು, 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಂದ ಸೂಸೈಡ್ ಬಾಂಬರ್ ಚೆಕ್​ಪೋಸ್ಟ್ ಬಳಿ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂರೂ ಮಂದಿ ಈ ಪ್ಯಾರಾಮಿಲಿಟರಿ ಸಿಬ್ಬಂದಿಯೇ ಆಗಿದ್ದಾರೆ. ಐಟಿಪಿ ನಡೆಸಿದ ಈ ಸೂಸೈಡ್ ಬಾಂಬ್ ದಾಳಿಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಸಾಂತ್ವನಗಳು ಹಾಗೂ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ವಿದೇಶಿ ಬೆಂಬಲಿತ ಉಗ್ರರಿಂದ ನಮ್ಮನ್ನು ಸದಾಕಾಲ ಸುರಕ್ಷಿತವಾಗಿಡುವ ರಕ್ಷಣಾ ಸಿಬ್ಬಂದಿಗೆ ಸೆಲ್ಯೂಟ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ

    ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ದಕ್ಷಿಣ ಭಾಗದಿಂದ ಸುಮಾರು 25 ಕಿಮೀ ದೂರದಲ್ಲಿ, ಕ್ವೆಟ್ಟಾ ಮಸ್ತುಂಗ್ ರಸ್ತೆಯ ಅರೆ ಮಿಲಿಟರಿ ಫ್ರಂಟಿಯರ್ ಕಾಪ್ರ್ಸ್ ಇರುವ ಚೆಕ್‍ಪಾಯಿಂಟ್ ಸಮೀಪ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಶೇಖ್ ಜೈದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಟಿಟಿಪಿ ಸಂಘಟನೆಯ ಸಮಸ್ಯೆಗಳನ್ನು ಇಮ್ರಾನ್ ಖಾನ್ ಸರ್ಕಾರ ಶೀಘ್ರವೇ ಬಗೆಹರಿಸಬೇಕು. ಅದನ್ನು ಬಗೆಹರಿಸಬೇಕಾಗಿದ್ದು ಅಫ್ಘಾನಿಸ್ತಾನವಲ್ಲ. ಸಂಘಟನೆಯ ಕಷ್ಟ ಆಲಿಸಿ ಪರಿಹಾರ ಕೊಡುವ ಜವಾಬ್ದಾರಿ ಪಾಕಿಸ್ತಾನಿ ಸರ್ಕಾರ, ಧಾರ್ಮಿಕ ಗುಂಪುಗಳದ್ದೇ ಹೊರತು, ಅಫ್ಘಾನಿಸ್ತಾನದ ತಾಲಿಬಾನಿಗಳದ್ದಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರು. ಈ ಮೂಲಕ ಟಿಟಿಪಿಗೂ ತಮಗೂ ಸಂಬಂಧವಿಲ್ಲ ಎಂದಿದ್ದರು. ಇತ್ತೀಚೆಗೆ ಈ ಬಲೂಚಿಸ್ತಾನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಉಗ್ರರ ದಾಳಿಗಳು ಪದೇಪದೆ ನಡೆಯುತ್ತಿವೆ.

  • ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಪಾಕ್‍ನಿಂದ ಬಂದ ಪಾರಿವಾಳ- ಎಫ್‍ಐಆರ್ ದಾಖಲಿಸಲು ಒತ್ತಾಯ!

    ಇಸ್ಲಾಮಾಬಾದ್: ಪಾಕಿಸ್ತಾನದಿಂದ ಹಾರಿಬಂದ ಪಾರಿವಾಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಗಡಿ ಭದ್ರತಾ ಪಡೆ ಒತ್ತಾಯ ಮಾಡುತ್ತಿದೆ.

    ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳವವರನ್ನು ಹಿಡಿದು ಪ್ರಕರಣ ದಾಖಲಿಸುವುದು ಬಿಎಸ್‍ಎಫ್ ಕೆಲಸ. ಆದರೆ ಈ ಬಾರಿ ಗಡಿ ಭದ್ರತಾ ಪಡೆ ಪಾರಿವಾಳ ಪಾಕಿಸ್ತಾನದಿಂದ ಭಾರತದೊಳಗೆ ಹಾರಿ ಬಂದಿದೆ. ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಎಫ್‍ಐಆರ್ ದಾಖಲಿಸುವಂತೆ ಬಿಎಸ್‍ಎಫ್ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪಂಜಾಬ್ ಪೊಲೀಸ್ ಇಲಾಖೆಯ ಅಭಿಪ್ರಾಯ ಕೋರಿದ್ದಾರೆ.

    ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನನ ಭುಜದ ಮೇಲೆ ಶಂಕಿತ ಪಾರಿವಾಳವೊಂದು ತಾನೇ ತಾನಾಗಿ ಬಂದು ಕೂತಿದೆ. ಈ ಪಾರಿವಾಳದ ಕಾಲಿನಲ್ಲಿ ಸಣ್ಣ ಪೇಪರ್ ತುಂಡನ್ನು ಕಟ್ಟಲಾಗಿತ್ತು. ಈ ಪೇಪರ್ ನಲ್ಲಿ ಕೆಲ ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಈ ಪಾರಿವಾಳ ಗಡಿಯುದ್ದಕ್ಕೂ ಹಾರಾಟ ನಡೆಸಿತ್ತು. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಎಸ್‍ಎಫ್ ಸಿಬ್ಬಂದಿ ಲಿಖಿತ ಬೇಡಿಕೆಯೊಂದಿಗೆ ಪಕ್ಷಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಬಿಎಸ್‍ಎಫ್ ಪಾರಿವಾಳದ ವಿರುದ್ಧ ಎಫ್‍ಐಆರ್ ನೋಂದಾಯಿಸಲು ಒತ್ತಾಯಿಸಲಾಗಿದೆ. ಪಾರಿವಾಳವು ಪಕ್ಷಿಯಾಗಿರುವುದರಿಂದ ಅದರ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ ಅವರ ಅಭಿಪ್ರಾಯಕ್ಕಾಗಿ ನಾವು ಈ ವಿಷಯವನ್ನು ನಮ್ಮ ಕಾನೂನು ತಜ್ಞರಿಗೆ ಹಸ್ತಾಂತರಿಸಿದ್ದೇವೆ. ಪಾರಿವಾಳದ ಕಾಲಿಗೆ ಟ್ಯಾಗ್ ಮಾಡಲಾದ ಸಂಖ್ಯೆಯನ್ನು ವಿಶ್ಲೇಷಿಸಲಾಗುತ್ತಿದ್ದು, ಗೂಢಚರ್ಯೆ ಯತ್ನಗಳನ್ನು ಶಂಕಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಪಾರಿವಾಳಗಳನ್ನು ಸೆರೆಹಿಡಿಯಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ ಹೇಳಿದ್ದಾರೆ.

  • ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಜಲಗಡಿ ದಾಟಿದ 11 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ್ದ 11 ಭಾರತೀಯ ಮೀನುಗಾರರನ್ನು ಬಂಧಿಸಿರುವ ಘಟನೆ ನಡೆದಿದೆ.

    ಸಮುದ್ರದ ಗಡಿ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನ ಜಲ ಪ್ರದೇಶ ಪ್ರವೇಶಿಸಿದ ಎರಡು ಬೋಟ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿದ್ದ 11 ಮೀನುಗಾರರನ್ನು ಪ್ರಾಥಮಿಕ ವಿಚಾರಣೆ ಬಳಿಕ ಡಾಕ್ಸ್ ಪೊಲೀಸ್ ಕರಾಚಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ಕಡಲ ಭದ್ರತಾ ಪಡೆ (ಪಿಎಂಎಸ್) ಪ್ರಕಟಣೆಯಲ್ಲಿ ತಿಳಿಸಿದೆ.

    ಹಡಗುಗಳು, ವಿಮಾನಗಳು ಮತ್ತು ವೇಗದ ದೋಣಿಗಳು ನಿಯಮಿತವಾಗಿ ಕಡಲ ವಲಯದಲ್ಲಿ ಗಸ್ತು ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳುತ್ತೇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ನೀರಿನಲ್ಲಿ ಹಲವಾರು ಅನಗತ್ಯ ಒಳನುಗ್ಗುವಿಕೆಗಳನ್ನು ಗಮನಿಸಲಾಗಿದೆ ಎಂದು ಪಿಎಂಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

    ಅರೇಬಿಯನ್ ಸಮುದ್ರದಲ್ಲಿ ಕಡಲ ಗಡಿಯನ್ನು ಸ್ಪಷ್ಟವಾಗಿ ಗುರುತಿಸದ ಕಾರಣ ಮೀನುಗಾರರು ಬರುತ್ತಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಆಗಾಗ್ಗೆ ಮೀನುಗಾರರನ್ನು ಬಂಧಿಸುತ್ತಿವೆ. ಮೀನುಗಾರರಿಗೆ ತಮ್ಮ ನಿಖರವಾದ ಸ್ಥಳವನ್ನು ತಿಳಿಯಲು ತಂತ್ರಜ್ಞಾನವನ್ನು ಹೊಂದಿದ ದೋಣಿಗಳಿಲ್ಲ.

  • ಪಾಕ್‍ನಲ್ಲಿ ಐವರು ಹಿಂದೂಗಳ ಹತ್ಯೆ

    ಪಾಕ್‍ನಲ್ಲಿ ಐವರು ಹಿಂದೂಗಳ ಹತ್ಯೆ

    ಇಸ್ಲಮಾಬಾದ್: ಹಿಂದೂ ಕುಂಟುಂಬವೊಂದರ ಐವರರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಮೃತರನ್ನು ಬೀರ್‍ಬಲ್ ದಾಸ್, ಮೇಘ್ವಾಲ್ ಹಾಗೂ ರಾಮ್ ಛಾಂದ್ ಎಂದು ಗುರತಿಸಲಾಗಿದೆ. ಟೈಲರಿಂಗ್ ಅಂಗಡಿಯನ್ನು ನಡೆಸಿ ಜೀವನ ನಡೆಸುತ್ತಿದ್ದರು. ಆದರೆ ಐವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಪಾಕ್ ನಗರದ ರೀಮ್ ಯಾರ್ ಖಾನ್‍ನಿಂದ 15 ಕೀ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಹರಿತವಾದ ಆಯುಧಗಳಿಂದ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಐವರ ಸಾವಿನಿಂದ ಸ್ಥಳೀಯರು ಶಾಕ್ ಆಗಿದ್ದಾರೆ.