Tag: Islamabad

  • ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು – ರಾತ್ರಿ 8:30 ಬಳಿಕ ಮಾರುಕಟ್ಟೆ, 10ರ ಬಳಿಕ ಮದುವೆ ಮಾಡುವಂತಿಲ್ಲ

    ಪಾಕ್‌ನಲ್ಲಿ ವಿದ್ಯುತ್ ಬಿಕ್ಕಟ್ಟು – ರಾತ್ರಿ 8:30 ಬಳಿಕ ಮಾರುಕಟ್ಟೆ, 10ರ ಬಳಿಕ ಮದುವೆ ಮಾಡುವಂತಿಲ್ಲ

    ಇಸ್ಲಾಮಾಬಾದ್: ಹಣದ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನ, ಇಂಧನವನ್ನು ಉಳಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆ ಸರ್ಕಾರ ಇಸ್ಲಾಮಾಬಾದ್ ನಗರದಲ್ಲಿ ರಾತ್ರಿ 10 ಗಂಟೆಯ ಬಳಿಕ ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಿದೆ ಹಾಗೂ ದೇಶಾದ್ಯಂತ ರಾತ್ರಿ 8:30ರ ಬಳಿಕ ಮಾರುಕಟ್ಟೆಗಳನ್ನು ಮುಚ್ಚಲು ನಿರ್ಧರಿಸಿದೆ.

    ಪಾಕಿಸ್ತಾನದ ವಿದ್ಯುತ್ ಬಿಕ್ಕಟ್ಟು ಅಲ್ಲಿನ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಈ ಹಿನ್ನೆಲೆ ರಾಷ್ಟ್ರೀಯ ಆರ್ಥಿಕ ಮಂಡಳಿ(ಎನ್‌ಇಸಿ) ದೇಶಾದ್ಯಂತ ಮಾರುಕಟ್ಟೆಗಳನ್ನು ರಾತ್ರಿ 8:30ಕ್ಕೆ ಮುಚ್ಚುವಂತೆ ಒತ್ತಾಯಿಸಿದೆ. ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾತ್ರಿ 10 ಗಂಟೆ ಬಳಿಕ ಯಾವುದೇ ಮದುವೆ ಕಾರ್ಯಕ್ರಮಗಳನ್ನು ನಡೆಸದಂತೆ ತಿಳಿಸಿದೆ. ಈ ಕ್ರಮವನ್ನು ಜೂನ್ 8ರಿಂದಲೇ ಕಾರ್ಯಗತಗೊಳಿಸಿದೆ. ಇದನ್ನೂ ಓದಿ: ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

    ಬುಧವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಿಂಧ್, ಪಂಜಾಬ್ ಹಾಗೂ ಬಲೂಚಿಸ್ತಾನದ ಮುಖ್ಯಮಂತ್ರಿಗಳು ಈ ಬಗ್ಗೆ ಸಮಾಲೋಚನೆ ನಡೆಸಲು 2 ದಿನಗಳ ಕಾಲಾವಕಾಶ ಕೋರಿದ್ದು, ಆದರೂ ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

    ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ 22,000 ಮೆಗಾವ್ಯಾಟ್ ಹಾಗೂ ಅವಶ್ಯಕತೆ ಇರುವುದು 26,000 ಮೆಗಾವ್ಯಾಟ್. ದೇಶದಲ್ಲಿ ಸುಮಾರು 4,000 ಮೆಗಾವ್ಯಾಟ್ ಶಕ್ತಿಯ ಕೊರತೆಯಿದೆ. ಮಾರುಕಟ್ಟೆಯನ್ನು ಬೇಗನೆ ಮುಚ್ಚುವುದು ಹಾಗೂ ಜನರಿಗೆ ಮನೆಯಿಂದಲೇ ಕೆಲಸ ಮಾಡಿಸುವ ವ್ಯವಸ್ಥೆಗಳಿಂದ ವಿದ್ಯುತ್ ಅನ್ನು ಉಳಿಸಬಹುದು ಎಂದು ವಿದ್ಯುತ್ ಸಚಿವ ಖರ‍್ರುಮ್ ದಸ್ತಗಿರ್ ತಿಳಿಸಿದ್ದಾರೆ.

  • ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಈಖಾನ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ವದಂತಿ ಮಧ್ಯೆ, ಇಸ್ಲಾಮಾಬಾದ್ ಪೊಲೀಸ್ ಇಲಾಖೆ ನಗರದ ಬನಿ ಗಾಲಾದ ಅಕ್ಕಪಕ್ಕದ ಪ್ರದೇಶಗಳಲ್ಲಿ ಭದ್ರತಾ ಪಡೆಯನ್ನು ಹೆಚ್ಚಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

    ಇಸ್ಲಾಮಾಬಾದ್‍ನಲ್ಲಿ ಈಗಾಗಲೇ ಸೆಕ್ಷನ್ 144 ವಿಧಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇಸ್ಲಾಮಾಬಾದ್‍ನಲ್ಲಿರುವ ವಸತಿ ಪ್ರದೇಶವಾಗಿರುವ ಬನಿ ಗಾಲಾದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಆಗಮನದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಸ್ಲಾಮಾಬಾದ್ ಪೊಲೀಸರು ಇಲ್ಲಿಯವರೆಗೆ ಇಮ್ರಾನ್ ಖಾನ್ ತಂಡದಿಂದ ಹಿಂದಿರುಗುವ ಯಾವುದೇ ದೃಢೀಕೃತ ಸುದ್ದಿಯನ್ನು ಸ್ವೀಕರಿಸಿಲ್ಲ ಎಂದು ಇಸ್ಲಾಮಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಭದ್ರತಾ ವಿಭಾಗವು ಬನಿ ಗಾಲಾದಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಹೆಚ್ಚಿಸಿದೆ. ಬನಿ ಗಾಲಾದಲ್ಲಿರುವ ಜನರ ಪಟ್ಟಿಯನ್ನು ಇನ್ನೂ ಪೊಲೀಸರಿಗೆ ಒದಗಿಸಲಾಗಿಲ್ಲ. ಇಸ್ಲಾಮಾಬಾದ್‍ನಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಪ್ರಕಾರ ಯಾವುದೇ ಸಭೆಯನ್ನು ಅನುಮತಿಸಲಾಗುವುದಿಲ್ಲ. ಇಸ್ಲಾಮಾಬಾದ್ ಪೊಲೀಸರು ಕಾನೂನಿನ ಪ್ರಕಾರ ಇಮ್ರಾನ್ ಖಾನ್‍ಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

    ಪಾಕಿಸ್ತಾನ್‍ದ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ ಏನಾದರೂ ಆದರೆ, ಈ ಕೃತ್ಯವನ್ನು ಪಾಕಿಸ್ತಾನದ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು ಎಂದು ಇಮ್ರಾನ್ ಖಾನ್ ಅವರ ಸೋದರಳಿಯ ಹಸನ್ ನಿಯಾಜಿ ಹೇಳಿದ್ದಾರೆ. ಇಮ್ರಾನ್ ಖಾನ್ ಭಾನುವಾರ ಇಸ್ಲಾಮಾಬಾದ್‍ಗೆ ಬರಲಿದ್ದಾರೆ ಎಂದು ಫವಾದ್ ಚೌಧರಿ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: 8 ವರ್ಷದ ಬಾಲಕಿ ಕತ್ತು ಸೀಳಿ ಹತ್ಯೆ – ನಗ್ನ ಸ್ಥಿತಿಯಲ್ಲಿ ಶವ ಪತ್ತೆ

    ಏಪ್ರಿಲ್‍ನಲ್ಲಿ ಫವಾದ್ ಚೌಧರಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಿರುವ ವರದಿಗಳು ಬಂದಿದೆ. ಈ ವರದಿಗಳ ನಂತರ, ಸರ್ಕಾರದ ನಿರ್ಧಾರದ ಪ್ರಕಾರ ಮಾಜಿ ಪ್ರಧಾನಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ

  • ನಿಮ್ಮ ಆದೇಶ ಕೆಲಸ ಮಾಡಲ್ಲ- ಇಮ್ರಾನ್ ಖಾನ್‌ಗೆ ಷರೀಫ್ ತಿರುಗೇಟು

    ನಿಮ್ಮ ಆದೇಶ ಕೆಲಸ ಮಾಡಲ್ಲ- ಇಮ್ರಾನ್ ಖಾನ್‌ಗೆ ಷರೀಫ್ ತಿರುಗೇಟು

    ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸರ್ಕಾರಕ್ಕೆ 6 ದಿನಗಳ ಒಳಗಾಗಿ ಚುನಾವಣೆ ಘೋಷಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯೆ ನೀಡಿದ್ದಾರೆ.

    ಇಮ್ರಾನ್ ಖಾನ್‌ಗೆ ತಿರುಗೇಟು ನೀಡಿದ ಷರೀಫ್, ಮುಂದಿನ ಸಾರ್ವತ್ರಿಕ ಚುನಾವಣೆಗಳ ದಿನಾಂಕವನ್ನು ರಾಷ್ಟ್ರೀಯ ಅಸೆಂಬ್ಲಿ ನಿರ್ಧರಿಸುತ್ತದೆ. ನಿಮ್ಮ ಆದೇಶ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.

    ಬುಧವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರವನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ ಷರೀಫ್, ನಾನು ಪಿಟಿಐ ನಾಯಕನಿಗೆ ಒಂದು ವಿಚಾರ ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮ್ಮ ಆದೇಶ ಕೆಲಸ ಮಾಡುವುದಿಲ್ಲ. ಚುನಾವಣೆ ಯಾವಾಗ ನಡೆಸಬೇಕು ಎಂಬುದನ್ನು ರಾಷ್ಟರೀಯ ಅಸೆಂಬ್ಲಿ ನಿರ್ಧರಿಸುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: 6 ದಿನಗಳೊಳಗೆ ಚುನಾವಣೆ ಘೋಷಿಸಿ, ಇಲ್ಲವೇ…: ಇಮ್ರಾನ್ ಖಾನ್ ಎಚ್ಚರಿಕೆ

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಗುರುವಾರ ಇಸ್ಲಾಮಾಬಾದ್‌ನ ಡಿ-ಚೌಕ್ ಪ್ರದೇಶದಲ್ಲಿ ತೀವ್ರವಾದ ಪ್ರತಿಭಟನೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, 6 ದಿನಗಳ ಒಳಗಾಗಿ ಹೊಸ ಚುನಾವಣೆ ಘೋಷಿಸಬೇಕಾಗಿ ಖಾನ್ ಗಡುವು ನೀಡಿದ್ದಾರೆ. ಒಂದು ವೇಳೆ ಹೊಸ ಚುನಾವಣೆ ಘೋಷಿಸದೇ ಹೋದಲ್ಲಿ ಪ್ರತಿಭಟನೆ ನಡೆಸಲು ಇಡೀ ರಾಷ್ಟ್ರದೊಂದಿಗೆ ಇಸ್ಲಾಮಾಬಾದ್‌ಗೆ ಮರಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

  • 6 ದಿನಗಳೊಳಗೆ ಚುನಾವಣೆ ಘೋಷಿಸಿ, ಇಲ್ಲವೇ…: ಇಮ್ರಾನ್ ಖಾನ್ ಎಚ್ಚರಿಕೆ

    ಇಸ್ಲಾಮಾಬಾದ್: 6 ದಿನಗಳೊಳಗೆ ಚುನಾವಣೆ ಘೋಷಿಸಿ. ಇಲ್ಲವೇ ಇಡೀ ರಾಷ್ಟ್ರದೊಂದಿಗೆ ನಾವು ಇಸ್ಲಾಮಾಬಾದ್ ಪ್ರವೇಶಿಸಿ, ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಇಮ್ರಾನ್ ಖಾನ್ ಪ್ರಾರಂಭಿಸಿದ ಪ್ರತಿಭಟನೆಯ ಮೆರವಣಿಗೆ ಗುರುವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಪ್ರವೇಶಿಸಿದ್ದು, ಅಶಾಂತಿಯನ್ನು ನಿಯಂತ್ರಿಸಲು ಶೆಹಬಾಜ್ ಷರೀಫ್ ಸರ್ಕಾರ ವಿಫಲವಾಗಿದೆ. ಇದೀಗ ರಕ್ಷಣೆಗಾಗಿ ಸೇನೆಯನ್ನು ಕರೆಸುವಂತೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಈ ವೇಳೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಇಮ್ರಾನ್ ಖಾನ್, 6 ದಿನಗಳ ಒಳಗಾಗಿ ಚುನಾವಣೆ ಘೋಷಣೆ ಆಗಬೇಕು. ಇಲ್ಲವೇ ಇಡೀ ರಾಷ್ಟ್ರದೊಂದಿಗೆ ನಾವು ಮತ್ತೆ ಇಸ್ಲಾಮಾಬಾದ್‌ಗೆ ಹಿಂತಿರುಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ವಿಮಾನ ಕಾರ್ಯಾಚರಣೆಗೆ ಯುಎಇ ಜೊತೆ ತಾಲಿಬಾನ್ ಒಪ್ಪಂದ

    ಏಪ್ರಿಲ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಪದಚ್ಯುತಿಗೊಂಡಿದ್ದರು. ಬಳಿಕ ಹೊಸ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅಧಿಕಾರ ಸ್ವೀಕರಿಸಿದ್ದರು. ಇದೀಗ ಹೊಸ ಚುನಾವಣೆಗೆ ಒತ್ತಾಯಿಸಿ ಇಮ್ರಾನ್ ಖಾನ್ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದ್ದೇವೆ: ಪಾಕಿಸ್ತಾನ

    ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಕಲ್ಪ ಮಾಡಿದ್ದೇವೆ: ಪಾಕಿಸ್ತಾನ

    ಇಸ್ಲಾಮಾಬಾದ್: ಪಾಕಿಸ್ತಾನವು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಮತ್ತು ದೇಶದಲ್ಲಿ ಸಂಪೂರ್ಣ ಶಾಂತಿಯನ್ನು ತರಲು ಶುಕ್ರವಾರ ಪ್ರತಿಜ್ಞೆ ಮಾಡಿದೆ ಎಂದು ವಿದೇಶಾಂಗ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಕ್ತಾರ ಆಸಿಫ್ ಇಫ್ತಿಕರ್, ಇಡೀ ಪ್ರದೇಶಕ್ಕೆ ಭಯೋತ್ಪಾದನೆ ಸಾಮಾನ್ಯ ಬೆದರಿಕೆಯಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವು ಅಚಲವಾಗಿದೆ ಎಂದು ನಾನು ಹೇಳಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಶ್ವರಪ್ಪಗೆ ಒಂದು ನ್ಯಾಯ, ಶ್ರೀರಾಮುಲುಗೆ ಒಂದು ನ್ಯಾಯನಾ: ತಿಪ್ಪೇಸ್ವಾಮಿ

    ಭಯೋತ್ಪಾದನೆಯ ಪಿಡುಗನ್ನು ನಿಲ್ಲಿಸಲು, ಈ ಪ್ರದೇಶದಲ್ಲಿ ಮತ್ತು ನಮ್ಮ ದೇಶದಲ್ಲಿ ಶಾಂತಿ, ಸ್ಥಿರತೆಯನ್ನು ಸಾಧಿಸಲು ನಾವು ಎಲ್ಲ ಮಾರ್ಗಗಳನ್ನು ಅನುಸರಿಸುತ್ತೇವೆ. ಯುಎಸ್, ಚೀನಾ, ರಷ್ಯಾ ಮತ್ತು ಇತರ ಎಲ್ಲ ಪ್ರಮುಖ ಶಕ್ತಿರಾಷ್ಟ್ರಗಳೊಂದಿಗೆ ಪರಸ್ಪರ ಗೌರವದ ಆಧಾರದ ಮೇಲೆ ಸಮತೋಲಿತ, ವಸ್ತುನಿಷ್ಠ ಸಂಬಂಧಗಳನ್ನು ಬಯಸುತ್ತೇವೆ ಎಂದರು.

  • ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ

    ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ

    ಇಸ್ಲಾಮಾಬಾದ್: ಯುಎಸ್ ಮತ್ತು ದೇಶದ ಪ್ರತಿಪಕ್ಷಗಳು ನನ್ನನ್ನು ಪದಚ್ಯುತಿಗೊಳಿಸಲು ಕೈಜೋಡಿಸಿವೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಶನಿವಾರ ಆರೋಪಿಸಿದರು.

    ಕರಾಚಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅವರು ಯಾವಾಗಲೂ ಜಾಗತಿಕ ವೇದಿಕೆಗಳಲ್ಲಿ ಭಾರತ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳನ್ನು ಟೀಕಿಸುತ್ತಿದ್ದರು. ಆದರೆ ನಾನು ಈ ಮೂರು ರಾಷ್ಟ್ರಗಳ ವಿರೋಧಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬುಲ್ಡೋಜರ್ ಬಾಬಾ ರಾಜ್ಯವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ: ಅಖಿಲೇಶ್ ಯಾದವ್

    imran khan Spoke

    ನಾನು ಯಾವುದೇ ದೇಶದ ವಿರೋಧಿಯಲ್ಲ. ನಾನು ಭಾರತ ವಿರೋಧಿಯೂ ಅಲ್ಲ, ಯುರೋಪ್ ವಿರೋಧಿಯೂ ಅಲ್ಲ, ಅಮೆರಿಕದ ವಿರೋಧಿಯೂ ಅಲ್ಲ. ನಾನು ಮಾನವೀಯತೆಗೆ ಹೆಚ್ಚು ಒತ್ತುಕೊಡುತ್ತೇನೆ. ನಾನು ಯಾವುದೇ ಸಮುದಾಯದ ವಿರೋಧಿಯಲ್ಲ ಎಂದು ಭಾಷಣ ಮಾಡುವಾಗ ಹೇಳಿದರು.

    ನಾನು ಯಾವ ದೇಶದ ವಿರುದ್ಧ ನಡೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ‘ವಿದೇಶಿ ಸಂಚು’ ರೂಪಿಸಲಾಗಿದೆ. ಇವರ ಜೊತೆಗೆ ದೇಶದ ಪ್ರತಿಪಕ್ಷಗಳು ಸೇರಿಕೊಂಡಿವೆ ಎಂದು ಆರೋಪಿಸಿದರು.

    IMRANKHAN

    ಇಮ್ರಾನ್ ಖಾನ್ ಅವರು ಅಧಿಕಾರದಿಂದ ಕೆಳಗಿಳಿದ ನಂತರ ‘ವಿದೇಶಿ ಸಂಚು’ ರೂಪಿಸಿ ಇವರನ್ನು ಕೆಳಗಿಳಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ದೇಶಾದ್ಯಂತ ಹಲವು ಪ್ರತಿಭಟನೆಗಳನ್ನು ನಡೆಯಿತು. ಈ ಕುರಿತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಸಹ ಏರ್ಪಟಿತ್ತು.

    ಯುಎನ್ ಜನರಲ್ ಅಸೆಂಬ್ಲಿಯ ವಿಶೇಷ ಅಧಿವೇಶನದಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿತ್ತು. ಆದರೆ ಇಮ್ರಾನ್ ಖಾನ್ ಯುರೋಪಿಯನ್ ಯೂನಿಯನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಸ್ಲಾಮಾಬಾದ್ ಅನ್ನು ತಮ್ಮ ‘ಗುಲಾಮ’ ಎಂದು ಪರಿಗಣಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:  ಕೋವಿಡ್ ಉಲ್ಬಣ – ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

    ದೇಶದ ವಿದೇಶಾಂಗ ನೀತಿಯನ್ನು ಪಾಶ್ಚಿಮಾತ್ಯರ ಪ್ರಭಾವದಿಂದ ಮುಕ್ತಗೊಳಿಸಬೇಕೆಂದು ಇಮ್ರಾನ್ ಅವರು ದೇಶದಲ್ಲಿ ಪ್ರಚಾರ ಮಾಡುತ್ತಿದ್ದರು.

  • ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು: ಪತ್ನಿ ರೆಹಮ್ ಖಾನ್ ವ್ಯಂಗ್ಯ

    ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು: ಪತ್ನಿ ರೆಹಮ್ ಖಾನ್ ವ್ಯಂಗ್ಯ

    ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು ಎಂದು ಅವರ ಮಾಜಿ ಪತ್ನಿ ರೆಹಮ್ ಖಾನ್ ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಮ್ರಾನ್ ಖಾನ್ ಅವರು ಬಾಲಿವುಡ್‍ನ ದಿ ಕಪಿಲ್ ಶರ್ಮಾ ಶೋ ನಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಉತ್ತಮ ಬದಲಿಯಾಗಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಇಮ್ರಾನ್ ಅವರು ಭಾರತವನ್ನು ಖುದ್ದರ್ ಕ್ವಾಮ್ (ಬಹಳ ಸ್ವಾಭಿಮಾನದ ಜನರು) ಎಂದು ಹೊಗಳಿದ್ದರು. ಹೀಗಾಗಿ ಅವರು, ತಮ್ಮ ಮಾಜಿ ಪತಿಯನ್ನು ಲೇವಡಿ ಮಾಡಿದ್ದು, ಅವರು ಬಾಲಿವುಡ್‍ನಲ್ಲಿ ನಟಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ಭಾರತವು ಇಮ್ರಾನ್‍ಗೆ ಜಾಗವನ್ನು ನೀಡಬೇಕು ಅಂತ ನಾನು ಭಾವಿಸುತ್ತೇನೆ. ಅವರು ಬಹುಶಃ ಬಾಲಿವುಡ್‍ನಲ್ಲಿದ್ದರೆ ಅವರು ಆಸ್ಕರ್ ವಿಜೇತ ಪ್ರದರ್ಶನವನ್ನು ನೀಡುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

    ಇಮ್ರಾನ್ ಅವರಿಗೆ ನಾಯಕ ಅಥವಾ ಖಳನಾಯಕನ ಪಾತ್ರವನ್ನು ನೀಡಬೇಕೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಅದು ಅವರ ಮೇಲೆ ಅವಲಂಬಿತವಾಗಿದೆ. ಬಾಲಿವುಡ್‍ನಲ್ಲಿ, ಹೀರೋಗಳು ವಿಲನ್ ಆಗುತ್ತಾರೆ. ವಿಲನ್‍ಗಳು ಹೆಚ್ಚು ಜನಪ್ರಿಯರಾಗುತ್ತಾರೆ. ಆದರೆ ಅವರಲ್ಲಿ ಹಾಸ್ಯ ಪ್ರತಿಭೆಯೂ ಇದೆ ಎಂದು ನಾನು ಭಾವಿಸುತ್ತೇನೆ. ಬೇರೇನೂ ಇಲ್ಲ, ಕಪಿಲ್ ಶರ್ಮಾ ಶೋನಲ್ಲಿ ಪಾಜಿ ಅವರ (ನವಜೋತ್ ಸಿಧು ಅವರ) ಸ್ಥಾನ ಖಾಲಿಯಾಗಿದೆ. ಹೀಗಾಗಿ ಅವರು ಸಿಧು ಅವರ ಹಾಗೇ ಶಾಯರಿ ಹೇಳುತ್ತಾ ಕುಳಿತುಕೊಳ್ಳಬಹುದು ಎಂದರು.

    ಇಮ್ರಾನ್ ಅವರು ಸಿಧು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಅವರೊಂದಿಗೆ ಸ್ವಲ್ಪ ಜಾಗ ಹಂಚಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದರು.

  • ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಇಸ್ಲಾಮಾಬಾದ್: ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ  ರ‍್ಯಮ್ ನವಾಜ್ ಷರೀಫ್ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಅಷ್ಟೊಂದು ಇಷ್ಟಪಡುವುದಾದರೆ ಪಾಕ್ ತೊರೆದು ಭಾರತಕ್ಕೆ ಹೋಗುವಂತೆ ಕಟುವಾಗಿ ಟೀಕಿಸಿದ್ದಾರೆ.

    ಈ ಹಿಂದೆ ಇಮ್ರಾನ್ ಅವರು ಭಾರತವನ್ನು ‘ಖುದ್ದರ್ ಕ್ವಾಮ್’ (ಬಹಳ ಸ್ವಾಭಿಮಾನಿ ಜನರು) ಎಂದು ಶ್ಲಾಘಿಸಿದ್ದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಹೋದದ್ದನ್ನು ನೋಡಿ ಹುಚ್ಚೆದ್ದು ಕುಣಿದಾಡುತ್ತಿರುವ ವ್ಯಕ್ತಿಗೆ ಯಾರು ಹೇಳಬೇಕು. ಬೇರೆಯವರಲ್ಲ ಸ್ವಂತ ಪಕ್ಷದವರೇ ಅವರನ್ನು ಉಚ್ಛಾಟಿಸಿದ್ದಾರೆ. ನೀವು ಭಾರತವನ್ನು ತುಂಬಾ ಇಷ್ಟಪಡುವುದಾದರೆ, ಅಲ್ಲಿಗೆ ತೆರಳಿ ಮತ್ತು ಪಾಕಿಸ್ತಾನವನ್ನು ಬಿಟ್ಟುಬಿಡಿ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್‌

    ಪಾಕಿಸ್ತಾನದ ಸಂಸತ್ತಿನಲ್ಲಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಮತಕ್ಕೂ ಮೊದಲು ಅಧಿಕಾರಕ್ಕಾಗಿ ಈ ರೀತಿ ಅಳುತ್ತಿರುವವರನ್ನು ನಾನು ನೋಡಿದ್ದು ಇದೇ ಮೊದಲು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಲ್ಲೇ ಆರಗ ಜ್ಞಾನೇಂದ್ರ ವಿರುದ್ಧ ಅಪಸ್ವರ- ಬದಲಾಗುತ್ತಾ ಸಚಿವರ ಖಾತೆ..?

    ಖಾನ್ ಅವರು ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಮೊದಲು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ಯಾವುದೇ ಸೂಪರ್ ಪವರ್ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಉತ್ತಮ ಸಂಬಂಧವನ್ನು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಭಾರತೀಯರು ಖುದ್ದಾರ್ ಕ್ವಾಮ್ (ಬಹಳ ಸ್ವಾಭಿಮಾನಿ ಜನರು). ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಅವರು ಶುಕ್ರವಾರ ಹೇಳಿದ್ದರು.

    ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಈ ಹಿಂದೆ ಕಾಶ್ಮೀರವನ್ನು ಪಾಕಿಸ್ತಾನವು ಯಾವ ರೀತಿ ಬಳಸಿಕೊಂಡಿದೆ ಎಂಬುದರ ಬಗ್ಗೆ ನಮಗೆ ಬೇಸರವಿದೆ. ಹೀಗಾಗಿ ಭಾರತವು ನಮ್ಮ ಜೊತೆ ಉತ್ತಮ ಸಂಬಂಧವನ್ನು ಹೊಂದಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಆದರೆ ಇಸ್ಲಾಮಾಬಾದ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಲಾಗುತ್ತದೆ ಎಂದರು.

  • ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿ

    ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿ

    – ಜನರು ತಮ್ಮ ಆತ್ಮಸಾಕ್ಷಿಯನ್ನು ಮಾರಾಟ ಮಾಡಿದ್ದಾರೆ

    ಇಸ್ಲಾಮಾಬಾದ್: ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಿಕೊಂಡು ಎಸೆಯಲಾಗುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ಒಪ್ಪಿಕೊಂಡರು.

    PAK

    ಶುಕ್ರವಾರ ರಾಷ್ಟ್ರೀಯ ಭಾಷಣದಲ್ಲಿ ಮಾತನಾಡಿದ ಅವರು, ಭಾರತೀಯರು ಬಹಳ ಸ್ವಾಭಿಮಾನದ ಜನರು. ಯಾವುದೇ ಮಹಾಶಕ್ತಿಯು ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಆರ್‌ಎಸ್‍ಎಸ್ ಸಿದ್ದಾಂತ ಮತ್ತು ಅವರು ಕಾಶ್ಮೀರದ ಮೇಲೆ ಏನು ಮಾಡುತ್ತಿದ್ದಾರೆ ಎಂಬ ಕಾರಣದಿಂದಾಗಿ ನಮಗೆ ಅವರೊಂದಿಗೆ ಉತ್ತಮ ಸಂಬಂಧವಿಲ್ಲ ಅದಕ್ಕೆ ನಾನು ನಿರಾಶೆಗೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಇಮ್ರಾನ್‌ಗೆ ಸೋಲು- ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ

    ನಾವು ಮತ್ತು ಭಾರತ ಒಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೆ ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಿಕೊಂಡು ಎಸೆಯಲಾಗುತ್ತಿದೆ. ನಾನು ವಿದೇಶಿ ವಿರೋಧಿಯಲ್ಲ. ಆದರೆ ವಿದೇಶಿ ಪಿತೂರಿಯಿಂದ ನಮ್ಮ ಸಾರ್ವಭೌಮತ್ವದ ಮೇಲೆ ದಾಳಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

    ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಡೆಪ್ಯುಟಿ ಸ್ಪೀಕರ್ ಅವರ ತೀರ್ಪನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದ್ದರಿಂದ ಇಮ್ರಾನ್ ಖಾನ್ ಸರ್ಕಾರವು ಹಿನ್ನಡೆ ಅನುಭವಿಸಿತು. ನ್ಯಾಯಾಲಯವು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು. ಅವರ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿತು. ಇದನ್ನೂ ಓದಿ:  ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

    ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡಿದ್ದೇನೆ. ಉಪಸಭಾಪತಿಯವರು ತನಿಖೆ ನಡೆಸಿದಾಗ ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕಿತ್ತು. ಪಾಶ್ಚಿಮಾತ್ಯ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಘಟನೆಯನ್ನು ನಾನು ನೋಡಿಲ್ಲ. ಜನರು ತಮ್ಮ ಆತ್ಮಸಾಕ್ಷಿಯನ್ನು ಮಾರಾಟ ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಇಂತಹ ಚಟುವಟಿಕೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಗಮನಹರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.

  • ಏನೇ ಆದರೂ ರಾಜೀನಾಮೆ ನೀಡಲ್ಲ: ವಿರೋಧಿಗಳಿಗೆ ಇಮ್ರಾನ್ ಖಾನ್ ಸೆಡ್ಡು

    ಏನೇ ಆದರೂ ರಾಜೀನಾಮೆ ನೀಡಲ್ಲ: ವಿರೋಧಿಗಳಿಗೆ ಇಮ್ರಾನ್ ಖಾನ್ ಸೆಡ್ಡು

    ಇಸ್ಲಾಮಾಬಾದ್: ಏನು ಬೇಕಾದರೂ ಆಗಲಿ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪಟ್ಟು ಹಿಡಿದಿದ್ದಾರೆ.

    ಪಾಕ್ ಪ್ರಧಾನಿ ಇಮ್ರಾನ್‌ಖಾನ್ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ, ಏನು ಬೇಕಾದರೂ ಆಗಲಿ, ನಾನು ರಾಜೀನಾಮೆ ಕೊಡುವುದಿಲ್ಲ. ಹೋರಾಟವಿಲ್ಲದೆ ನಾನು ಎಂದಿಗೂ ಶರಣಾಗುವುದಿಲ್ಲ. ಕೆಲ ದ್ರೋಹಿಗಳ ಒತ್ತಡವನ್ನು ಸುಮ್ಮನೆ ಏಕೆ ಸಹಿಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

    IMRANKHAN

    ಅವಿಶ್ವಾಸ ಮುಂದೂಡಿಕೆ:
    ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧ ನಿಗದಿಪಡಿಸಿದ್ದ ಅವಿಶ್ವಾಸ ಗೊತ್ತುವಳಿ ಅಧಿವೇಶನವು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸದ ಖಯಾಲ್ ಜಮಾನ್ ಅವರ ನಿಧನದಿಂದಾಗಿ ಮಾರ್ಚ್ 28ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ತಿಳಿಸಿದ್ದಾರೆ. ಸಂಸತ್ತಿನ ಸಂಪ್ರದಾಯದ ಪ್ರಕಾರ ಮೊದಲ ಅಧಿವೇಶನವು ಅವರಿಗೆ ಗೌರವ ಸಲ್ಲಿಸಲು ಸೀಮಿತವಾಗಿದೆ. ಇದನ್ನೂ ಓದಿ: ಹಿಜಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಇಸ್ಲಾಂ ಬಗ್ಗೆ ಭೀತಿ ಹುಟ್ಟುವಂತೆ ಮಾಡಿದೆ: ಇಮ್ರಾನ್‌ ಖಾನ್‌

    PAK

    ಇಮ್ರಾನ್‌ ಖಾನ್ ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನವು ಅಳಿವಿನ ಅಂಚಿನತ್ತ ಸಾಗುತ್ತಿದೆ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ 8 ರಂದು ವಿರೋಧ ಪಕ್ಷಗಳು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ದೂರು ನೀಡಲಾಗಿತ್ತು. ಇದರಿಂದಾಗಿ ಮಾರ್ಚ್ 25ರಂದು ಇಮ್ರಾನ್‌ ಖಾನ್ ಅವರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇಂದು ಖಯಾಲ್ ಜಮಾನ್ ಅವರ ನಿಧನದ ಕಾರಣದಿಂದಾಗಿ ಸಭೆಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದೆ. ಅಂದು ಸಂಜೆ 4 ಗಂಟೆಗೆ ಅಧಿವೇಶನ ನಡೆಯುವ ಸಾಧ್ಯತೆಯಿದೆ.

    imran khan tweet

    ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಭಾರಿಗೆ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸ್ವಪಕ್ಷದೊಂದಿಗೆ ಪ್ರತಿಪಕ್ಷದ ನಾಯಕರೂ ಭಿನ್ನಮತ ಮರೆತು ಒಂದಾಗಿವೆ. ಕೆಲ ವೇಳೆ ಅವಿಶ್ವಾಸ ನಿರ್ಣಯ ಸಭೆಯಲ್ಲಿ ತೆಹ್ರೀಕ್-ಎ-ಇನ್ ಸಾಫ್ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳು ದೂರಿವೆ.

    ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿಯೇ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ. ಆರ್ಥಿಕತೆಯನ್ನೂ ಇಮ್ರಾನ್ ಖಾನ್ ಸಮರ್ಪಕವಾಗಿ ನಿರ್ವಹಿಸಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಮನೆಮಾಡಿದ್ದು, ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ವಿರೋಧ ಪಕ್ಷಗಳು ಒಗ್ಗೂಡಲು ಸಹ ಇದು ಮುಖ್ಯಕಾರಣವಾಗಿದೆ ಎಂಬ ಅಂಶವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ನೂರಕ್ಕೆ ನೂರರಷ್ಟು ತೊಂದರೆಯಲ್ಲಿದ್ದಾರೆ: ಮಿತ್ರ ಪಕ್ಷ ಹೇಳಿಕೆ

    ಪಾಕಿಸ್ತಾನದ ಸಂಸತ್ತು 342 ಸದಸ್ಯಬಲ ಹೊಂದಿದೆ. ಅಧಿಕಾರಕ್ಕೆ ಬರಲು 172 ಸದಸ್ಯ ಬಲ ಅಗತ್ಯವಿದೆ. ಇಮ್ರಾನ್ ಖಾನ್‌ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ. ಪಿಟಿಐ ಪಕ್ಷದ 155 ಸಂಸದರು ಸಂಸತ್ತಿನಲ್ಲಿದ್ದಾರೆ. ಅವಿಶ್ವಾಸ ಗೊತ್ತುವಳಿಯಲ್ಲಿ ಪಾಲ್ಗೊಳ್ಳುವುದಾಗಿ 3 ಪ್ರಮುಖ ಮಿತ್ರಪಕ್ಷಗಳು ಹೇಳಿಕೆ ನೀಡಿವೆ. ಪಾಕಿಸ್ತಾನದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು 163 ಸ್ಥಾನಗಳನ್ನು ಹೊಂದಿವೆ. ಪಿಟಿಐ ಪಕ್ಷ ತೊರೆದಿರುವ ಸಂಸದರು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದರೆ ಇಮ್ರಾನ್ ಖಾನ್ ಸರ್ಕಾರ ಸುಲಭವಾಗಿ ಪತನವಾಗಲಿದೆ. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

    ಈ ಹಿಂದೆಯೂ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರೋಧಿಸಿದ್ದರು. ಇದೀಗ ಮತ್ತೆ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಪಾಕಿಸ್ತಾನದ ಆಡಳಿತಗಾರರು ಒತ್ತಡದಲ್ಲಿದ್ದಾಗಲೆಲ್ಲಾ ಭಾರತವನ್ನು ದೂರುವ ಮೂಲಕ ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಯತ್ನಿಸುವುದು ವಾಡಿಕೆಯೇ ಆಗಿದೆ ಎಂದು ಅಂಶದಲ್ಲಿ ಉಲ್ಲೇಖಿಸಲಾಗಿದೆ.

    ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಪಾಕಿಸ್ತಾನದಲ್ಲಿ ಮುಂದಿನ ಮಹಾಚುನಾವಣೆಯು 2023ರಂದು ನಡೆಯಬೇಕಿತ್ತು. ಆದರೆ ಅವಧಿಗೆ ಮೊದಲೇ ಚುನಾವಣೆ ನಡೆಯಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.