ಕಾಬೂಲ್/ಇಸ್ಲಾಮಾಬಾದ್: ದಕ್ಷಿಣ ವಜಿರಿಸ್ತಾನದಲ್ಲಿರುವ ಪಾಕಿಸ್ತಾನಿ ಮಿಲಿಟರಿ ಹೊರಠಾಣೆ ಮೇಲೆ ನಡೆದ ಭೀಕರ ದಾಳಿಯಲ್ಲಿ 25 ಪಾಕ್ ಸೈನಿಕರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಹೇಳಿಕೊಂಡಿದೆ.
BREAKING NEWS 🚨
The Tehrik-i-Taliban Pakistan (TTP) has claimed that its fighters killed 25 Pakistani soldiers and wounded eight others in an attack carried out in South Waziristan.
In an official statement, the militant group said that last night it launched an assault on a… pic.twitter.com/55hGUx1Axl
ಸೋಮವಾರ ತಡರಾತ್ರಿ ತನ್ನ ಸೇನೆಯು ಮಿಲಿಟರಿ ಹೊರಠಾಣೆ ಮೇಲೆ ಭೀಕರ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಡ್ರೋನ್‌ಗಳನ್ನು (Pakistani Army Drone) ನಾಶಪಡಿಸಿದ್ದಾಗಿ ಟಿಟಿಪಿ ಉಗ್ರರ ಗುಂಪು ಹೇಳಿಕೊಂಡಿದೆ. ದಾಳಿಯ ನಂತರ ಮಿಲಿಟರಿ ಠಾಣೆಯನ್ನ ಟಿಟಿಪಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳಲ್ಲಿ ಟಿಟಿಪಿ ಆಗಾಗ್ಗೆ ಪಾಕಿಸ್ತಾನಿ ಭದ್ರತಾಪಡೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಾ ಬರುತ್ತಿದೆ. ಪಹಲ್ಗಾಮ್ ದಾಳಿ ಬಳಿಕ ಒಂದೆಡೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಗಲೂ ಟಿಟಿಪಿ ಪಾಕ್‌ನ ಸೇನಾ ಠಾಣೆಯ ಮೇಲೆ ದಾಳಿ ನಡೆಸಿ ಹತ್ತಾರು ಮಂದಿ ಸೈನಿಕರನ್ನ ಕೊಂದಿತ್ತು. ಆದ್ರೆ ಇದು ಇತ್ತೀಚಿನ ತಿಂಗಳಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ಒಂದಾಗಿದೆ ಎಂದು ಹೇಳಲಾಗ್ತಿದೆ. ಪಾಕಿಸ್ತಾನ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಇಸ್ಲಾಮಾಬಾದ್: ವಾರಾಂತ್ಯದಲ್ಲಿ ಸಂಭವಿಸಿದ್ದ ಎರಡು ಭೂಕಂಪನದ ಬಳಿಕ ಇದೀಗ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಸೋಮವಾರ (ಅ.20) ಪಾಕಿಸ್ತಾನದಲ್ಲಿ (Pakistan) 10 ಕಿ.ಮೀ ಆಳದಲ್ಲಿ 4.7 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ.
ಈ ಭೂಕಂಪನದಿಂದಾಗಿ ಪಂಜಾಬ್‌ನ ಡೇರಾ ಘಾಜಿ ಖಾನ್ ಸುತ್ತಮುತ್ತಿನ ಪ್ರದೇಶದ ಮೇಲೆ ಪರಿಣಾಮ ಬೀರಿದೆ.
ಪಾಕಿಸ್ತಾನವು ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಒಂದಾಗಿದೆ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರಾಂತ್ಯಗಳು ಯುರೇಷಿಯನ್ ಪ್ಲೇಟ್‌ನ ದಕ್ಷಿಣ ಅಂಚಿನಲ್ಲಿದ್ದರೆ, ಸಿಂಧ್ ಮತ್ತು ಪಂಜಾಬ್ ಭಾರತೀಯ ಪ್ಲೇಟ್‌ನ ವಾಯುವ್ಯ ಅಂಚಿನಲ್ಲಿದ್ದು, ಆಗಾಗ್ಗೆ ಭೂಕಂಪಕ್ಕೆ ಕಾರಣವಾಗುತ್ತದೆ.
ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸೋದನ್ನ ಮುಂದುವರಿಸಿದ್ರೆ ನಾವು ಯುದ್ಧದಿಂದ ಹಿಂದೆ ಸರಿಯಲ್ಲ ಅಂತ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಭಾರತಕ್ಕೆ ಬೆದರಿಕೆಯೊಡ್ಡಿದ್ದಾರೆ.
ಸಿಂಧ್ ಸರ್ಕಾರದ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿರುವುದು ಸಿಂಧೂ ಕಣಿವೆ ನಾಗರಿಕತೆ ಮತ್ತು ಸಂಸ್ಕೃತಿಯ ಮೇಲೆ ಭಾರತ ಮಾಡುತ್ತಿರುವ ದಾಳಿಯಾಗಿದೆ. ಪಾಕಿಸ್ತಾನ ಯಾವಾಗಲೂ ಶಾಂತಿಯನ್ನ ಪ್ರತಿಪಾದಿಸುತ್ತೆ. ಆದ್ರೆ ಭಾರತ ಯುದ್ಧಕ್ಕೆ ಒತ್ತಾಯಿಸಿದರೆ, ನಾವು ಹಿಂದೆ ಸರಿಯಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: 1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ
ಮೋದಿ ಸರ್ಕಾರಕ್ಕೆ ನಾವು ಒಂದು ಸಂದೇಶ ಕಳಿಸುತ್ತೇವೆ. ನಾವು ಯಾವುದಕ್ಕೂ ಹಿಂದೆ ಸರಿಯುವುದಿಲ್ಲ, ತಲೆಬಾಗುವುದಿಲ್ಲ ಮತ್ತು ನೀವು ಸಿಂಧೂ ನದಿಯನ್ನು ಅತಿಕ್ರಮಿಸಲು ಧೈರ್ಯ ಮಾಡಿದರೆ, ಪಾಕಿಸ್ತಾನದ ಪ್ರತಿಯೊಂದು ಪ್ರಾಂತ್ಯದ ಜನರು ನಿಮ್ಮೊಂದಿಗೆ ಹೋರಾಡಲು ಸಿದ್ಧರಿರುತ್ತಾರೆ ಭುಟ್ಟೋ ಹೇಳಿದ್ದಾರೆ. ಇದನ್ನೂ ಓದಿ: ಎಥೆನಾಲ್ ಪೆಟ್ರೋಲ್‌ನಿಂದ ಮೈಲೇಜ್ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ಇಸ್ಲಾಮಾಬಾದ್: ಭಾರತದ (India) ದಾಳಿಗೆ ಬೆದರಿರುವ ಪಾಕಿಸ್ತಾನ (Pakistan) ಸೇನೆ ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು (GHQ) ರಾಜಧಾನಿ ಇಸ್ಲಾಮಾಬಾದ್‌ಗೆ (Islamabad) ಶಿಫ್ಟ್ ಮಾಡಲು ಮುಂದಾಗುತ್ತಿದೆ.
ಸದ್ಯ ಪಾಕಿಸ್ತಾನದ ಸೇನಾ ಜನರಲ್ ಪ್ರಧಾನ ಕಚೇರಿ(GHQ) ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್ ವಾಯು ನೆಲೆಯ ಬಳಿಯಿದೆ. ಮೇ 10 ರಂದು ಭಾರತ ಪಾಕ್ ವಾಯುನೆಲೆಯಗಳ ಮೇಲೆ ಭೀಕರ ವಾಯುದಾಳಿ ನಡೆಸಿತು. ಚಕ್ಲಾಲಾ ವಾಯು ನೆಲೆ ಮೇಲೆಯೂ ದಾಳಿ ನಡೆಸಿ ಧ್ವಂಸ ಮಾಡಿತ್ತು.
ಭವಿಷ್ಯದಲ್ಲಿ ಭಾರತ ದಾಳಿ ಮಾಡಬಹುದು ಎಂಬ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಸೇನೆ ತನ್ನ ಪ್ರಧಾನ ಕಚೇರಿಯನ್ನು ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಮುಂದೆ ಭಾರತ ತನ್ನ ಮೇಲೂ ದಾಳಿ ನಡೆಸಬಹುದು ಎಂದು ಭಾವಿಸಿ ಮುನೀರ್ ಜನರಲ್ ಹೆಡ್‌ಕ್ವಾರ್ಟರ್ಸ್ (ಜಿಎಚ್‌ಕ್ಯು) ನಲ್ಲಿರುವ ಕೋಟೆಯ ಬಂಕರ್ ಒಳಗಡೆ ಅಡಗಿದ್ದರು ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಬಂದಿದೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಮುನೀರ್ ಬಂಕರ್ ಒಳಗಡೆಯೇ ಇದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಮುನೀರ್ ಹೊರಗಡೆ ಬಂದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.
ಇಸ್ಲಾಮಾಬಾದ್: ಭಾರತದ ದಾಳಿಯಿಂದ (India’s Strike) ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲೀಗ ( ಇಂಧನ ಕೊರತೆ ಎದುರಾಗಿದೆ. ರಾಜಧಾನಿ ಇಸ್ಲಾಮಾಬಾದ್ ಆಡಳಿತ ಮುಂದಿನ 48 ಗಂಟೆಗಳ ಕಾಲ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಸಂಪೂರ್ಣವಾಗಿ ಬಂದ್ (Petrol Pumps Shut) ಮಾಡುವಂತೆ ಆದೇಶ ಹೊರಡಿಸಿದೆ.
ಇಸ್ಲಾಮಾಬಾದ್ (Islamabad) ಆಡಳಿತ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ನಿಖರ ಕಾರಣ ಉಲ್ಲೇಖಿಸದೇ, ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಕೂಡಲೇ ಮುಚ್ಚಬೇಕೆಂದು ಕಟ್ಟಾಜ್ಞೆ ಮಾಡಿದೆ. ಈ ಆದೇಶ ಶನಿವಾರ ಮುಂಜಾನೆ ಹೊರಡಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್ – ದಿವಾಳಿಯತ್ತ ʻಭಿಕಾರಿಸ್ತಾನʼ
ಇದರಿಂದ 48 ಗಂಟೆ ವರೆಗೆ ಇಸ್ಲಾಮಾಬಾದ್‌ನಲ್ಲಿ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಿಗೆ ಇಂಧನ ಲಭ್ಯವಾಗದೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಜೊತೆಗೆ ಈ ಬೆಳವಣಿಗೆ ಪಾಕ್ ಸರ್ಕಾರಕ್ಕೆ ಭಾರೀ ನಷ್ಟ ತಂದೊಡ್ಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದ ಪಾಕ್ ಬ್ಯಾಲಿಸ್ಟಿಕ್ ಮಿಸೈಲ್ ಹರ್ಯಾಣದಲ್ಲೇ ಛಿದ್ರ!
ಭಾರತದ ʻಆಪರೇಷನ್ ಸಿಂಧೂರʼ (Operation Sindoor) ಎಫೆಕ್ಟ್ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ
ಭಾರತದ ವಿರುದ್ಧದ ಹೋರಾಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ. ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾಗವಾಗಿದ್ದು ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ʻxʼ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದ್ದಂತೆ ವರಸೆ ಬದಲಿಸಿದ ಪಾಕ್ ʻತನ್ನ ಎಕ್ಸ್ ಖಾತೆ ಹ್ಯಾಕ್ ಆಗಿದೆʼ ಎಂದು ಹೇಳಿಕೊಂಡಿದೆ. ಇದಾದ ಬಳಿಕ ಭಾರತದ ಆಕ್ಷೇಪದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 2 ಕಂತುಗಳಲ್ಲಿ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ.
ನವದೆಹಲಿ/ಇಸ್ಲಾಮಾಬಾದ್: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ (Air Base) ಮೇಲೆ ದಾಳಿ ಮಾಡಿದೆ.
ರಾಜಧಾನಿ ಇಸ್ಲಾಮಾಬಾದ್ (Islamabad), ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ (Rawalpindi) ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುನೆಲೆಯ ಮೇಲೆ ಭಾರತ ದಾಳಿ ಮಾಡಿದ ಎಂದು ಪಾಕ್ ಸೇನೆ ಅಧಿಕೃತವಾಗಿ ತಿಳಿಸಿದೆ.
ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ವಾಯು ನೆಲೆಯ ಮೇಲೆಯೇ ಭಾರತ ದಾಳಿ ನಡೆಸಿದೆ. ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸರ್ಕಾರವು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ಬಂದ್ ಮಾಡಿದೆ.
VIDEO ⚠️
Pakistan’s Nur Khan base in Chaklala, Rawalpindi struck overnight by what Pak Govt says was an Indian air-to-surface missile. That’s the base at the HQ city of Pakistan’s military. pic.twitter.com/01rEyLABKB
– ಬ್ಯಾಂಕ್‌ಗಳಲ್ಲಿ ಹಣ ಖಾಲಿ, ಎಟಿಎಂ ಮಿತಿ 3,000 ರೂ.ಗೆ ಇಳಿಕೆ
ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ (India) ದಿಟ್ಟ ಉತ್ತರ ನೀಡಿದೆ. ಭಾರತದ ಮಿಲಿಟರಿ ದಾಳಿಗೆ ತತ್ತರಿಸಿರುವ ಪಾಕ್ (Pakistan) ಇದೀಗ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ.
Govt of Pakistan appeals to International Partners for more loans after heavy losses inflected by enemy. Amid escalating war and stocks crash, we urge international partners to help de-escalate. Nation urged to remain steadfast. @WorldBank#IndiaPakistanWar#PakistanZindabad
— Economic Affairs Division, Government of Pakistan (@eadgop) May 9, 2025
ಭಾರತದ ನಡೆಸಿದ ಮಿಸೈಲ್ ದಾಳಿಯಿಂದ ಪಾಕಿಸ್ತಾನದ ವಾಯುನೆಲೆ (Naval Base) ಸೇರಿದಂತೆ ಪಾಕ್‌ನ ಮೂಲಭೂತ ಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಹೀಗಾಗಿ ಇಸ್ಲಾಮಾಬಾದ್ (Islamabad) ಶುಕ್ರವಾರ ತುರ್ತು ಸಾಲ ನೀಡುವಂತೆ ವಿಶ್ವಬ್ಯಾಂಕ್ (World Bank) ಸೇರಿದಂತೆ ತನ್ನ ಅಂತರರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?
ತನ್ನ ಎಕ್ಸ್ ಖಾತೆಯಲ್ಲಿ ಅಧಿಕೃತ ಸಂದೇಶ ಹಂಚಿಕೊಂಡಿರುವ ಪಾಕಿಸ್ತಾನ ಸರ್ಕಾರವು, ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡುತ್ತಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ, ಆರ್ಥಿಕ ದುಸ್ತರ ಕಡಿಮೆ ಮಾಡಲು ಸಹಾಯ ಮಾಡುವಂತೆ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ಮನವಿ ಮಾಡುತ್ತಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ
ಎಟಿಎಂಗಳಲ್ಲಿ ಹಣ ಡ್ರಾ ಮಿತಿ ಇಳಿಕೆ:
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಪಾಕ್‌ನ 16 ಕಡೆ ಭಾರತದ ದಾಳಿಯಿಂದ ಮೂಲ ಸೌಕರ್ಯಗಳು ನಷ್ಟವಾಗಿದೆ. ಹಲವೆಡೆ ಬ್ಯಾಂಕ್‌ಗಳಲ್ಲೂ ಹಣ ಖಾಲಿಯಾಗಿದ್ದು, ಎಟಿಎಂಗಳಲ್ಲಿ ಹಣದ ಡ್ರಾ ಮಿತಿಯನ್ನು 3 ಸಾವಿರ ಪಾಕಿಸ್ತಾನಿ ರೂಪಾಯಿಗೆ ಇಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಎಸ್‌ಎಫ್ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್ ಉಗ್ರರ ಹತ್ಯೆ
– ಭಾರತದ ಕ್ರಮಗಳ ಬಳಿಕ ಪಾಕ್ ಪ್ರಧಾನಿ ನೇತೃತ್ವದಲ್ಲಿ ಸಭೆ
– ಭಾರತದ ಜೊತೆಗಿನ ಎಲ್ಲ ಒಪ್ಪಂದಗಳಿಗೆ ಬ್ರೇಕ್ – ಶಿಮ್ಲಾ ಒಪ್ಪಂದ ಅಮಾನತು
– ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ: ಎನ್‌ಎಸ್‌ಸಿ ಆರೋಪ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಮಂದಿ ಅಮಾಯಕರ ಸಾವಿನ ನಂತರ ಭಾರತವು ಪಾಕ್ ಜೊತೆಗಿನ ರಾಜತಾಂತ್ರಿಕ ಸಬಂಧವನ್ನು ಕಡಿದುಕೊಂಡಿದೆ. 1960ರ ಸಿಂಧೂ ನದಿ ಒಪ್ಪಂದ ರದ್ದು ಸೇರಿದಂತೆ ಹಲವು ಕಠಿಣ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿರುವ ಪಾಕ್ (Pakistan) ಪ್ರಜೆಗಳು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಇಂದು ಮಹತ್ವದ ಭದ್ರತಾ ಸಭೆ ನಡೆಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ (Islamabad) ಪಾಕಿಸ್ತಾನದ ಮೂರು ಸೇನಾಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು, ಉನ್ನತ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳೊಂದಿಗೆ ಪಾಕ್ ಪ್ರಧಾನಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಕಿಸ್ತಾನ ಪಾಲಿನ ನೀರನ್ನು ತಡೆಯಲು ಭಾರತ ಪ್ರಯತ್ನಿಸಿದ್ರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಪಾಕ್ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ
ಭಾರತಕ್ಕೆ ಪಾಕ್ ಏರ್‌ಸ್ಪೇಸ್ ಬಂದ್:
ಇನ್ನೂ ಭಾರತ ಸರ್ಕಾರ (Indian Government) ಕಠಿಣ ನಿರ್ಧಾರ ಕೈಗೊಂಡಂತೆ ಪಾಕಿಸ್ತಾನ ಸಹ ಭಾರತ ವಿರೋಧಿ ನಿರ್ಧಾರಗಳನ್ನು ಇಂದಿನ ಪ್ರಮುಖ ಸಭೆಯಲ್ಲಿ ತೆಗೆದುಕೊಂಡಿದೆ. ಭಾರತದ ಒಡೆತನದ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಸೀಮೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಜೊತೆಗೆ ಭಾರತದ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕಡಿದುಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ
ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ:
ಮುಂದುವರಿದು… ಭಾರತದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಆರೋಪಿಸಿದೆ. ಭಾರತ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಮುಸ್ಲಿಂ ಸಮುದಾಯವನ್ನು ಅಂಚಿನಲ್ಲಿಡುತ್ತಿದೆ. ಈ ರೀತಿ ಮಾಡಿ ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಎನ್‌ಎಸ್‌ಸಿ ಆರೋಪಿಸಿದೆ. ಅಲ್ಲದೇ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಗೆಹರಿಯದ ವಿವಾದವಾಗಿದೆ ಎಂದು ಹೇಳಿದೆ.
ಭಾರತದ ಕ್ರಮಗಳಿಗೆ ತತ್ತರಿಸಿದ ಪಾಕ್
ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತದ ಕ್ರಮಗಳಿಂದ ತತ್ತರಿಸಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಭಾರತ ತೆಗೆದುಕೊಂಡ ಕ್ರಮಗಳು ಏಕಪಕ್ಷೀಯವಾಗಿದೆ, ಇದು ಅನ್ಯಾಯ, ರಾಜಕೀಯ ಪ್ರೇರಿತ, ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿದೆ. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್
ಪಾಕ್ ಸಭೆಯ ಪ್ರಮುಖ ನಿರ್ಣಯಗಳೇನು?
* ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಈ ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಏಕಪಕ್ಷೀಯವಾಗಿ ಅಮಾನತುಗೊಳಿಸಲಾಗುವುದಿಲ್ಲ ಎಂದು NSC ಹೇಳಿದೆ.
* ಭಾರತವು ನೀರನ್ನು ನಿಲ್ಲಿಸಲು ಅಥವಾ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಪೂರ್ಣ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
* ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ.
* ಜೊತೆಗೆ ಪಾಕಿಸ್ತಾನ ಸಹ ವಾಘಾ ಗಡಿಯನ್ನು ತಕ್ಷಣದಿಂದಲೇ ಮುಚ್ಚುತ್ತಿದ್ದು, ಅನುಮತಿ ಇರುವವರು ಮಾತ್ರ ಏಪ್ರಿಲ್ 30ರ ಒಳಗೆ ಹಿಂದಿರುಗಬಹುದು.
* ಸಾರ್ಕ್ ವೀಸಾ ಯೋಜನೆಯಡಿಯಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ವೀಸಾಗಳನ್ನು ರದ್ದುಪಡಿಸಲಾಗಿದೆ. ಸಿಖ್ ಯಾತ್ರಿಕರಿಗೆ ಮಾತ್ರ ವಿನಾಯಿತಿ ನೀಡಲಾಗುವುದು. ಉಳಿದ ಭಾರತೀಯರು 48 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ಸೂಚಿಸಲಾಗಿದೆ.
* ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರಿಗೆ ಪಾಕಿಸ್ತಾನ ತೊರೆಯುವಂತೆ ಆದೇಶಿಸಲಾಗಿದೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯನ್ನ 30ಕ್ಕೆ ಇಳಿಸಲಾಗಿದೆ.
– ಭಾರತದೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದ ಬಂದ್‌ಗೆ ನಿರ್ಧಾರ ಕೈಗೊಳ್ಳಲಾಗಿದೆ.
ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ( S Jaishankar) ಮಂಗಳವಾರ (ಅ.15) ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಕಳೆದ 9 ವರ್ಷಗಳಲ್ಲಿ ಅಂದ್ರೆ 2015ರಿಂದ ಇದೇ ಮೊದಲಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪಾಕ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.
ಚೀನಾದ ಪ್ರಧಾನಿ ಲಿ ಕ್ವಿಯಾಂಗ್, ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಮತ್ತು ಜೈಶಂಕರ್ ಭಾಗಿಯಾಗಲಿದ್ದಾರೆ. ಬುಧವಾರದ ಮುಖ್ಯ ಶೃಂಗಸಭೆಯ ಮೊದಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಆಯೋಜಿಸುವ ಸ್ವಾಗತ ಭೋಜನ ಕೂಟದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ – ಮೂರನೇ ಆರೋಪಿ ಅರೆಸ್ಟ್
ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಮಾತನಾಡಿ, ಜೈಶಂಕರ್ ಅವರ ಪಾಕಿಸ್ತಾನ ಭೇಟಿಯು ಮಹತ್ವ ಪಡೆದುಕೊಳ್ಳುತ್ತದೆ. ಏಕೆಂದರೆ ಇದು ನವದೆಹಲಿಯ ಕಡೆಯಿಂದ ಪ್ರಮುಖ ನಿರ್ಧಾರವಾಗಿದೆ. ಪುಲ್ವಾಮಾ ದಾಳಿ, ಬಾಲಾಕೋಟ್ ಏರ್‌ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟವು. ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುತ್ತದೆ ಎಂದು ಹೇಳುತ್ತಾ ಬಂದಿದೆ. ಆದ್ದರಿಂದ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಇಸ್ಲಾಮಾಬಾದ್‌ಗೆ ಇದೆ ಎಂದರು. ಇದನ್ನೂ ಓದಿ: ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್ ಲಿಸ್ಟ್
ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ 23 ನೇ ಸಭೆಯು ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್ 15 ಮತ್ತು 16 ರಂದು ನಡೆಯಲಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಭಾರತದ ನಾಲ್ಕು ಸದಸ್ಯರ ಅಧಿಕೃತ ನಿಯೋಗವೂ ಪಾಕಿಸ್ತಾನಕ್ಕೆ ಆಗಮಿಸಿದೆ ಎಂದು ಮೂಲಗಳು ವರದಿ ಮಾಡಿದೆ. ಚೀನಾದ 15 ಸದಸ್ಯರು, ಕಿರ್ಗಿಸ್ತಾನದ 4 ಸದಸ್ಯರು ಮತ್ತು ಇರಾನ್‌ನ ಇಬ್ಬರು ಸದಸ್ಯರ ನಿಯೋಗವೂ ಇಸ್ಲಾಮಾಬಾದ್ ತಲುಪಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಕೇಸ್ – ಕೃತ್ಯದ ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಗಳು
ಇಸ್ಲಾಮಾಬಾದ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಐಜಿಪಿ) ನಾಸಿರ್ ಅಲಿ ರಿಜ್ವಿ ಅವರು ಮಾತನಾಡಿ, ಫೆಡರಲ್ ರಾಜಧಾನಿಯಲ್ಲಿ ಶೃಂಗ ಸಭೆಗಾಗಿ ಭಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಪಾಕಿಸ್ತಾನ ಸೇನೆ, ಗುಪ್ತಚರ ಸಂಸ್ಥೆಗಳು, ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಮತ್ತು ರೇಂಜರ್‌ಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರೊಂದಿಗೆ ಶೋಧ ಮತ್ತು ಮಾಹಿತಿ ಆಧಾರಿತ ಕಾರ್ಯಾಚರಣೆಗಳು ನಡೆಯುತ್ತಿವೆ. ಭದ್ರತೆಗಾಗಿ 9 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿ – ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
9 ವರ್ಷಗಳಲ್ಲಿ ಇದೇ ಮೊದಲು:
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನ ಎಸ್‌ಸಿಒ ಶೃಂಗಸಭೆಗೆ ಆಹ್ವಾನಿಸಿತ್ತು. ಆದರೆ ಡಿಸೆಂಬರ್ 2015 ರಿಂದ ಯಾವುದೇ ಭಾರತೀಯ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ದಿವಂಗತ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 2015 ರಲ್ಲಿ ಅಫ್ಘಾನಿಸ್ತಾನದ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಗುಜರಾತ್‌ನಲ್ಲಿ 5,000 ಕೋಟಿ ಮೌಲ್ಯದ ಕೊಕೇನ್ ಸೀಜ್
ಇಸ್ಲಾಮಾಬಾದ್: ಬಾಂಗ್ಲಾದೇಶದಲ್ಲಿ ನಡೆದಂತೆ ಈಗ ಪಾಕಿಸ್ತಾನದಲ್ಲೂ (Pakistan) ಪ್ರತಿಭಟನೆ ಆರಂಭವಾಗಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ.
ಭಾನುವಾರ ಇಮ್ರಾನ್ ಖಾನ್ ಅವರ ತೆಹ್ರೀಕ್-ಎ-ಇನ್ಸಾಫ್ (PTI) ಪಕ್ಷ ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಪ್ರತಿಭಟನಾ ಸಭೆಯ ಬಳಿಕ ಇಮ್ರಾನ್ ಬೆಂಬಲಿಗರು ರಾಜಧಾನಿಯಲ್ಲಿ ಪ್ರತಿಭಟನೆ (Protest) ಆರಂಭಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಜನರು ಇಸ್ಲಾಮಾಬಾದ್‌ನತ್ತ ಆಗಮಿಸುತ್ತಿದ್ದಾರೆ. ಖಾನ್ ಜೈಲಿನಿಂದ ಬಿಡುಗಡೆಯಾಗುವವರೆಗೂ ನಾವು ವಿಶ್ರಮಿಸುವುದಿಲ್ಲ ಬೆಂಬಲಿಗರು ಘೋಷಿಸಿದ್ದಾರೆ.
ಪ್ರತಿಭಟನಾಕಾರರಿಗೆ ಇಸ್ಲಾಮಾಬಾದ್ ಪ್ರವೇಶವನ್ನು ಬಂದ್ ಮಾಡಲಾಗಿದೆ. ಗಲಾಟೆ ನಿಯಂತ್ರಿಸಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಶಿಪ್ಪಿಂಗ್ ಕಂಟೈನರ್ ಇಡುವ ಮೂಲಕ ಪ್ರತಿಭಟನಾಕಾರರ ಸಂಚಾರವನ್ನು ತಡೆಯಲಾಗುತ್ತಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.