Tag: islam

  • ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಮುಸ್ಲಿಂ ಮಹಿಳೆಯರು ಐಬ್ರೊ ಮಾಡಿಸಬಾರದು: ಫತ್ವಾಗೆ ಟೀಕೆ

    ಲಕ್ನೋ: ಮುಸ್ಲಿಂ ಮಹಿಳೆಯರು ಇನ್ನೂ ಮುಂದೇ ಐಬ್ರೊ ಮಾಡಿಸುವಂತಿಲ್ಲ ಹಾಗೂ ಕೂದಲನ್ನು ಕತ್ತರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.

    ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ.

    ಫತ್ವಾದಲ್ಲಿ ಏನಿದೆ?

    ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್‍ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ತೆರಳುವುದು ಅಭ್ಯಾಸವಾಗಿದೆ. ಇದು ಸಾಂಪ್ರದಾಯಿಕ ಮುಸ್ಲಿಂರ ಲಕ್ಷಣವಲ್ಲ. ಇದನ್ನು ಕೂಡಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.

    ಮುಸ್ಲಿಂ ಮಹಿಳೆಯರಿಂದಲೂ ಫತ್ವಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರಿಗೆ ಫತ್ವಾ ಹೊರಡಿಸಲು ಯಾವುದೇ ಹಕ್ಕಿಲ್ಲ, ಪ್ರಪಂಚ ಬದಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಾದ ಗಲ್ಫ್ ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಯನ್ನು ನೀಡಲಾಗಿದೆ. ಆದರೇ ನಮ್ಮ ದೇಶದಲ್ಲಿ ಇನ್ನೂ ಮಹಿಳೆಯ ಐಬ್ರೊ ಬಗ್ಗೆ ಫತ್ವಾ ಹೊರಡಿಸಲಾಗುತ್ತಿದೆ. ಇದು ನಮ್ಮ ವಿದ್ವಾಂಸರು ಹಾಗೂ ಮೌಲ್ವಿಗಳಿಗೆ ಅವಮಾನ ಎಂದು ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿದ್ದಾರೆ.

    ಈ ಫತ್ವಾ ಇಸ್ಲಾಂ ಪುರುಷರಿಗೂ ಅನ್ವಯವಾಗುತ್ತದೆ, ಇಂದು ಎಷ್ಟು ಜನ ಮುಸ್ಲಿಂ ಪುರುಷರು ಈ ನಿಯಮವನ್ನು ಪಾಲಿಸುತ್ತಿದ್ದಾರೆ ಇಂತಹ ನಕಲಿ ಮೌಲ್ವಿಗಳನ್ನು ಬಿಟ್ಟು, ನಾವು ಎಲ್ಲವನ್ನು ಬುರ್ಕಾದಾಡಿಯಲ್ಲಿ ಮುಚ್ಚಿಡಲು ಯತ್ನಿಸುತ್ತಿದ್ದೇವೆ. ಇಂತಹ ವ್ಯಕ್ತಿಗಳು `ಲಿಪ್‍ಸ್ಪಿಕ್ ಅಂಡರ್ ಮೈ ಬುರ್ಕಾ’ ಸಿನಿಮಾವನ್ನು ಒಮ್ಮೆ ವಿಕ್ಷೀಸಬೇಕು ಎಂದು ಸಾಫಿಯಾ ಬೇಗಂ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕುರಾನ್ ಪ್ರತಿ ಹರಿದು ಬ್ಯಾಂಕ್ ಚಲನ್ ಮುದ್ರಣ – ಆರೋಪಿ ಪೊಲೀಸರ ವಶಕ್ಕೆ

    ಕುರಾನ್ ಪ್ರತಿ ಹರಿದು ಬ್ಯಾಂಕ್ ಚಲನ್ ಮುದ್ರಣ – ಆರೋಪಿ ಪೊಲೀಸರ ವಶಕ್ಕೆ

    ಮೈಸೂರು: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ನ ಪ್ರತಿಗಳನ್ನು ಹರಿದು ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಚಲನ್ ಮುದ್ರಿಸಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕೆ.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಶಾಖೆಯಲ್ಲಿ ಇಂತಹ ಚಾಲನ್ ಪ್ರತಿಗಳು ಲಭ್ಯವಾಗಿವೆ.

    ಕುರಾನ್ ಹಾಳೆಗಳ ಒಂದು ಭಾಗ ಖಾಲಿ ಇರುತ್ತೆ. ಆ ಹಾಳೆ ಕತ್ತರಿಸಿ ಅದರಲ್ಲಿ ಬ್ಯಾಂಕ್ ಚಾಲನ್ ಮುದ್ರಿಸಿರುವ ಘಟನೆ ನಡೆದಿದೆ. ಹಣ ತುಂಬುವ ಚಲನ್‍ಗಳ ಹಿಂಭಾಗ ಪವಿತ್ರ ಖುರಾನ್ ನ ಸಂದೇಶಗಳ ಪ್ರಿಂಟ್ ಇರುವುದು ಕಂಡ ಮುಸ್ಲಿಂ ಸಮುದಾಯದ ಜನ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎನ್.ಆರ್.ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಬ್ಯಾಂಕ್ ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಚಲನ್ ಗಳನ್ನ ಒದಗಿಸಿದ ನವೀನ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮುದ್ರಣಕ್ಕೆ ಬಳಸುವ ಹಾಳೆಯ ವೆಚ್ಚ ಉಳಿಸಲು ನವೀನ್ ಹೀಗೆ ಕುರಾನ್ ಪ್ರತಿಗಳನ್ನು ಹರಿದು ಅದರಲ್ಲೇ ಬ್ಯಾಂಕ್ ಚಲನ್ ಮುದ್ರಿಸಿದ್ದಾನೆ ಎಂದು ಹೇಳಲಾಗಿದೆ.

    ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವೆಂದು ಆರೋಪಿಸಿದ ಕೆಲ ಯುವಕರು ಬ್ಯಾಂಕಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     

  • ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ನಿಷೇಧಿಸಿದ ಚೀನಾ ಸರ್ಕಾರ

    ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ನಿಷೇಧಿಸಿದ ಚೀನಾ ಸರ್ಕಾರ

    ಬೀಜಿಂಗ್: ಇನ್ನು ಮುಂದೆ ಚೀನಾದಲ್ಲಿ ಸದ್ದಾಂ, ಇಸ್ಲಾಂ ಸೇರಿ ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ಶಿಶುಗಳಿಗೆ ಇಡುವಂತಿಲ್ಲ.

    ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಡಜನ್‍ಗಟ್ಟಲೇ  ಇಸ್ಲಾಮಿಕ್ ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ಚೀನಾ ಸರ್ಕಾರ ನಿಷೇಧ ಹೇರಿದೆ.

    ಇಸ್ಲಾಂ, ಖುರಾನ್, ಇಮಾಮ್, ಹಾಜಿ, ಸದ್ದಾಂ, ಮೆಕ್ಕಾ, ಮದೀನಾ, ಸೇರಿದಂತೆ ಕೆಲ  ಹೆಸರುಗಳನ್ನು ನಿಷೇಧಿಸಲಾಗಿದೆ ಎಂದು ರೇಡಿಯೊ ಫ್ರೀ ಏಷ್ಯಾ(ಆರ್‍ಎಫ್‍ಎ) ವರದಿ ಮಾಡಿದೆ. ಇಸ್ಲಾಮಿಕ್ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದೆ.

    ಯಾವೆಲ್ಲ ಹೆಸರುಗಳನ್ನು ನಿಷೇಧಿಸಲಾಗಿದೆ ಎನ್ನುವ ಸಂಪೂರ್ಣ ವಿವರ ಪ್ರಕಟವಾಗಿಲ್ಲ. ಧಾರ್ಮಿಕತೆಯಿಂದ ಕೂಡಿದ ಹೆಸರನ್ನು ಇರಿಸಿದ್ದ ಶಿಶು ಮುಂದೆ ಆರೋಗ್ಯ, ಶಿಕ್ಷಣ ಇತ್ಯಾದಿ ಸರ್ಕಾರಿ ಯೋಜನೆಗಳಿಂದ ವಂಚಿತವಾಗಲಿದೆ ಆರ್‍ಎಫ್‍ಎ ವರದಿ ಮಾಡಿದೆ.

    ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡದಂತೆ ಉಯ್ಘರ್ ಮುಸ್ಲಿಮರಿಗೆ ಸೂಚಿಸಲಾಗಿದೆ. ಬುರ್ಖಾ ತೊಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚಾರ, ಅಸಹಜವಾಗಿ ಗಡ್ಡ ಬಿಡುವುದನ್ನು ಏಪ್ರಿಲ್ 1 ರಂದು ಚೀನಾ ನಿಷೇಧಿಸಿತ್ತು.