Tag: Iskon

  • ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಸೇವೆ ನಮ್ಮ ಭಾಗ್ಯ: ಗೌತಮ್ ಅದಾನಿ

    ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ಮಹಾಪ್ರಸಾದ ಸೇವೆ ನೀಡುತ್ತಿರುವ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯವರು (Gautam Adani), ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸಲು ನಮಗೆ ಇದು ಸದಾವಕಾಶ ಎಂದು ಹೇಳಿಕೊಂಡಿದ್ದಾರೆ.

    X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಮಹಾ ಕುಂಭದ ದೈವಿಕ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ಸೇವೆ ಸಲ್ಲಿಸುವ ಶುಭ ಅವಕಾಶ ಪಡೆದಿದ್ದೇವೆ. ಸೇವೆಯೇ ಧ್ಯಾನ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು. ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಮಹಾ ಕುಂಭಮೇಳದ ವಿಶೇಷತೆ ಸಾರುವ 52 ನಿಮಿಷಗಳ ವಿಡಿಯೋ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.

    ಫೆ.26 ರವರೆಗೆ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಅದಾನಿ ಗ್ರೂಪ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ISKON) ಭಕ್ತರಿಗೆ ಊಟವನ್ನು ಒದಗಿಸಲು ಕೈಜೋಡಿಸಿವೆ.

    ಅದಾನಿಯವರು ಮಂಗಳವಾರ ಅವರ ಪತ್ನಿ ಪ್ರೀತಿ ಅದಾನಿ ಮತ್ತು ಪುತ್ರ ಕರಣ್ ಅದಾನಿ ಅವರೊಂದಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಅವರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

  • ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ

    ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ

    ಬೆಂಗಳೂರು: ಇಂದು ವೈಕುಂಠ ಏಕಾದಶಿ (Vaikunta Ekadashi) ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನ (Iskon Temple) ದಲ್ಲಿ ವಿಶೇಷ ಪೂಜೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

    ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ. ಅಂತೆಯೇ ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು. ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ.

    ಬೆಂಗಳೂರಿನ ಇಸ್ಕಾನ್ ನಲ್ಲಿ ಇಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನ ಸಾಧ್ಯತೆ ಇದೆ. ಇಂದು ರಾತ್ರಿ 11 ರವರಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಈಗಾಗಲೇ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ರು ರಾಧಿಕಾ ಪಂಡಿತ್

    ಕೃಷ್ಣನ ದರ್ಶನ ಪಡೆದ ಬಳಿಕ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತನಾಡಿ, ಪ್ರತಿವರ್ಷದಂತೆ ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದ್ದೇವೆ. ಇಸ್ಕಾನ್ ನಲ್ಲಿ ದೇಗುಲದಲ್ಲಿ ಓಡಾಡಿದ್ರೇ ನೆಮ್ಮದಿ ಸಿಗುತ್ತದೆ. ಅಮಿತ್ ಶಾ ಬಂದು ಹೋದ ಎಂದಿನಂತೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಎಲೆಕ್ಷನ್ ಎಪ್ರಿಲ್ ಗೆ ಆಗುತ್ತೆ ಎಂದರು.

    ಅರವಿಂದ ಲಿಂಬಾವಳಿ ಹೆಸರು ಬರೆದು ಡೆತ್ ನೋಟ್ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಕ್ಷೇತ್ರದ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಕೃಷ್ಣಜನ್ಮಾಷ್ಟಮಿ- ಆನ್‍ಲೈನ್‍ನಲ್ಲಿಯೇ ದೇವರ ದರ್ಶನ, ಆರಾಧನೆ

    ಕೃಷ್ಣಜನ್ಮಾಷ್ಟಮಿ- ಆನ್‍ಲೈನ್‍ನಲ್ಲಿಯೇ ದೇವರ ದರ್ಶನ, ಆರಾಧನೆ

    ಬೆಂಗಳೂರು: ನಾಳೆ ಕೃಷ್ಣಾಜನ್ಮಾಷ್ಟಮಿ ಹಬ್ಬವಾಗಿದ್ದು, ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಆನ್ ಲೈನ್ ಮೂಲಕವೇ ದೇವರ ದರ್ಶನ ಹಾಗೂ ಕಷ್ಣನ ಆರಾಧನೆ ನಡೆಯಲಿದೆ.

    ಈ ಸಂಬಂಧ ಇಸ್ಕಾನ್ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ನರಹರಿ ಚೈತನ್ಯದಾಸ್ ಮಾತನಾಡಿ, ಕೊರೊನಾ ಭೀತಿಯಿಂದ ಇಸ್ಕಾನ್ ಸೇರಿದಂತೆ ಅನೇಕ ಕೃಷ್ಣನ ದೇಗುಲದಲ್ಲಿ ಆನ್‍ಲೈನ್‍ನಲ್ಲಿಯೇ ಪೂಜೆಗಳ ಲೈವ್ ದರ್ಶನ ಇರಲಿದೆ. ನಾಳೆ ದೇಗುಲಗಳು ಭಕ್ತರಿಂದ ತುಂಬಿ ತುಳುಕುವ ಸಾಧ್ಯತೆ ಇರುವುದರಿಂದ ಜನರಿಗೆ ಆನ್‍ಲೈನ್ ಪೂಜೆಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಮಂಗಳವಾರ ಹಾಗೂ ಬುಧವಾರ ಕೃಷ್ಣಾಷ್ಟಮಿ ಪೂಜೆ ನಡೆಯಲಿದ್ದು, 20 ಗಂಟೆಗಳ ಕಾಲ ನಿರಂತರ ಆನ್‍ಲೈನ್‍ನಲ್ಲಿ ಪೂಜೆ ವೀಕ್ಷಿಸಬಹುದು. ತೆಪ್ಪೋತ್ಸವ, ಪಂಚಗವ್ಯ ಅಭಿಷೇಕ, ಉಯ್ಯಾಲೆ ಸೇವೆಯನ್ನು ಆನ್‍ಲೈನ್‍ನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

  • ಅನಾವರಣಗೊಳ್ಳಲಿದೆ ಬರೋಬ್ಬರಿ 800 ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ

    ಅನಾವರಣಗೊಳ್ಳಲಿದೆ ಬರೋಬ್ಬರಿ 800 ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ

    ನವದೆಹಲಿ: ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ, 670 ಪುಟಗಳನ್ನು ಹೊಂದಿರುವ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.

    ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಬೃಹತ್ ಭಗವದ್ಗೀತೆ ಗ್ರಂಥವನ್ನು ಅನಾವರಣ ಮಾಡಲಿದ್ದಾರೆ. ಈ ಬೃಹತ್ ಭಗವದ್ಗೀತೆಯೂ 670 ಪುಟಗಳನ್ನು ಹೊಂದಿದ್ದು, 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿದೆ. ಆದರಿಂದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಹೆಗ್ಗಳಿಕೆ ಪಡೆಯಲಿದೆ.

    ವಿಶ್ವದೆಲ್ಲೆಡೆ ಸುಮಾರು 400 ಕ್ಕೂ ಹೆಚ್ಚು ಕೃಷ್ಣ ದೇಗುಲ ಹಾಗೂ 100ಕ್ಕೂ ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್ ಗಳನ್ನು ಇಸ್ಕಾನ್ ಸಂಸ್ಥೆ ನಡೆಸುತ್ತಿದೆ. ವಿಶೇಷವಾಗಿ ಈ ಭಗವದ್ಗೀತೆಯ ಕಾಗದವು ವಾಟರ್ ಪ್ರೂಫ್ ಆಗಿದ್ದು, ಈ ಪವಿತ್ರ ಗ್ರಂಥವು 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲದೆ ಯೂಪೊ ಸಿಂಥೆಟಿಕ್ ಲೇಪಿತ ಮಿಲನ್ ಬಳಸಿ ಇಟಲಿಯ ಮಿಲಾನ್‍ನಲ್ಲಿ ಗ್ರಂಥವನ್ನು ಮುದ್ರಿಸಲಾಗಿದೆ ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ – ಇಸ್ಕಾನ್‍ ನಲ್ಲಿ ವಿಶೇಷ ಪೂಜೆ ಪುನಸ್ಕಾರ

    ಬೆಂಗಳೂರು: ಇಂದು ವೈಕುಂಠ ಏಕಾದಶಿ. ಈ ದಿನ ವೆಂಕಟೇಶ್ವರ ದರ್ಶನ ಮಾಡಿದರೆ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಆಂಧ್ರ ಪ್ರದೇಶದ ತಿರುಪತಿ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೀತಿದೆ.

    ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತ ಬೆಂಗಳೂರಿನ ಇಸ್ಕಾನ್‍ನಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ನಡಿಯುತ್ತಿದ್ದು, ಭಕ್ತ ಸಾಗರ ಸೇರುತ್ತಿದೆ.

    ಬಳ್ಳಾರಿಯ ವೆಂಕಟೇಶ್ವರ ದೇವಾಲಯದಲ್ಲಿ ಭರ್ಜರಿ ಲಡ್ಡು ಮಾಡಲಾಗಿದೆ. ಭಕ್ತರಿಗೆ ಒಂದು ಲಕ್ಷ ಲಡ್ಡು ವಿತರಣೆ ಮಾಡಲಿದ್ದು, ಇದಕ್ಕಾಗಿ 550 ಕೆಜಿ ಕಡ್ಲೆಹಿಟ್ಟು, 900 ಕೆಜಿ ಸಕ್ಕರೆ, 30 ಕೆಜಿ ಗೊಡಂಬಿ ದಾಕ್ಷಿ, ಏಲಕ್ಕಿ ಬಳಸಿ ಲಕ್ಷ ಲಡ್ಡು ತಯಾರಿಸಲಾಗಿದೆ. ಕಳೆದ ಒಂದು ವಾರದಿಂದ 300 ಮಹಿಳೆಯರು ಲಡ್ಡು ಪ್ರಸಾದ ತಯಾರಿಕೆ ಮಾಡಿದ್ದು, ಇಂದು ದೇವರ ದರ್ಶನ ಪಡೆಯೋ ಭಕ್ತರಿಗೆ ಲಡ್ಡು ವಿತರಿಸಲಿದ್ದಾರೆ. ದಾವಣಗೆರೆ, ನೆಲಮಂಗಲದಲ್ಲೂ ಭಕ್ತರು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

    ವೈಕುಂಠ ಏಕಾದಶಿ ವಿಶೇಷವಾಗಿ ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ಬೆಳಿಗ್ಗೆ ನಾಲ್ಕು ಗಂಟೆಗಳಿಂದ ಸಾಲು ಸಾಲಾಗಿ ನಿಂತಿದ್ದು, ದೇವರ ದರ್ಶನ ಪಡೆದರು.

    ವೆಂಕಟೇಶ್ವರನಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಭಕ್ತರಿಗಾಗಿ ದೇವಾಲಯಗಳಲ್ಲಿ ಸ್ವರ್ಗದ ಬಾಗಿಲು ತೆರೆದಿದ್ದು, ಬಾಗಿಲನ್ನು ಪ್ರವೇಶಿಸಿ ಭಕ್ತರು ಪುನೀತರಾದರು. ಅಲ್ಲದೇ ಉಪವಾಸವಿದ್ದು ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲು ದರ್ಶನ ಪಡೆದರೆ ಸ್ವರ್ಗ ಪ್ರಾಪ್ತವಾಗುತ್ತೆ ಎನ್ನುವುದು ಭಕ್ತರ ನಂಬಿಕೆ.