Tag: ISIS Kashmir

  • ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

    ವಾರದಲ್ಲಿ ಮೂರನೇ ಬಾರಿ ಗೌತಮ್‌ ಗಂಭೀರ್‌ಗೆ ಐಸಿಸ್‌ನಿಂದ ಕೊಲೆ ಬೆದರಿಕೆ

    ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರಿಗೆ ಕಳೆದ ಒಂದು ವಾರದಿಂದ ಐಸಿಸ್‌ ಕಾಶ್ಮೀರದಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ಇಂದು ಕೂಡ ನನಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸ್‌ ಠಾಣೆಗೆ ಗಂಭೀರ್‌ ದೂರು ನೀಡಿದ್ದಾರೆ.

    ನಿಮ್ಮ ದೆಹಲಿ ಪೊಲೀಸರು ಹಾಗೂ ಐಪಿಎಸ್‌ ಅಧಿಕಾರಿ ಶ್ವೇತಾ ಅವರು ನಮ್ಮನ್ನು ಏನೂ ಮಾಡಲು ಆಗುವುದಿಲ್ಲ. ನಿಮ್ಮ ಪೊಲೀಸರ ನಡುವೆಯೇ ನಮ್ಮ ಗೂಢಾಚಾರಿಗಳಿದ್ದಾರೆ. ನಿಮ್ಮ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ ಎಂದು ಗಂಭೀರ್‌ ಅವರ ಇ-ಮೇಲ್‌ಗೆ ಐಸಿಸ್‌ ಕಾಶ್ಮೀರ ಹೆಸರಿನಿಂದ ಬೆದರಿಕೆಯ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಎಟಿಎಂ ಸೆಕ್ಯೂರಿಟಿ ಹಂತಕರ ಬಂಧನ

    ಒಂದು ವಾರದಲ್ಲಿ ಗೌತಮ್‌ ಗಂಭೀರ್‌ಗೆ ಕೇಳಿಬಂದಿರುವ 3ನೇ ಜೀವ ಬೆದರಿಕೆ ಕರೆ ಇದಾಗಿದೆ. ಇ-ಮೇಲ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‌ ರೇಪ್: ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

    ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ಕೊಲ್ಲುತ್ತೇವೆ ಎಂದು ಐಸಿಎಸ್‌ ಕಾಶ್ಮೀರ ಹೆಸರಿನಿಂದ ಗೌತಮ್‌ ಗಂಭೀರ್‌ ಅವರ ಇ-ಮೇಲ್‌ಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದೆ ಎಂದು ಗಂಭೀರ್‌ ಅವರ ಕಾರ್ಯದರ್ಶಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು, ರಾಜೀಂದರ್‌ ನಗರದಲ್ಲಿರುವ ಗಂಭೀರ್‌ ಮನೆಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದರು. ಮತ್ತೊಂದು ಬೆದರಿಕೆ ಕರೆಯಲ್ಲಿ, ಗೌತಮ್‌ ಗಂಭೀರ್‌ ಅವರ ನಿವಾಸದ ವೀಡಿಯೋವನ್ನು ಹಾಕಲಾಗಿತ್ತು.

    ಸಂಬಂಧಪಟ್ಟ ಇ-ಮೇಲ್‌ ಖಾತೆ ನಿರ್ವಾಹಕರು ಮತ್ತು ಅವರಿಂದ ಬಂದಿರುವ ಬೆದರಿಕೆ ಸಂದೇಶಗಳನ್ನು ಗೂಗಲ್‌ಗೆ ಕಳುಹಿಸಿರುವ ಇಂಟೆಲಿಜೆನ್ಸ್‌ ಫ್ಯೂಷನ್‌ ಮತ್ತು ಸ್ಟ್ರ್ಯಾಟಜಿ ಆಪರೇಷನ್ಸ್‌ ಯೂನಿಟ್‌ನ ವಿಶೇಷ ಕೋಶವು ಹೆಚ್ಚಿನ ಮಾಹಿತಿ ಕಲೆಹಾಕುವಂತೆ ತಿಳಿಸಿದೆ.

  • ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ  ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

    ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

    ನವದೆಹಲಿ: ಐಸಿಸ್ ಕಾಶ್ಮೀರದಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಬಿಜೆಪಿ ಸಂಸದ ಗೌತಮ್ ಗಂಭೀರ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ಗಂಭೀರ್ ಅವರ ಮನೆಗೆ ಹೆಚ್ಚಿನ ಭದ್ರತೆ ನೀಡಿತನಿಖೆ ಪ್ರಾರಂಭಿಸಿದ್ದಾರೆ.

    ಗೌತಮ್ ಗಂಭೀರ್‌ಗೆ ಬಂದಿರುವ ಬೆದರಿಕೆಯ ಮೇಲ್‍ಗಳ ಕುರಿತು ತನಿಖೆ ನಡೆಸುತ್ತಿದ್ದೇವೆ. ಅಷ್ಟೇ ಅಲ್ಲದೇ ಗಂಭೀರ್ ಮನೆಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ ಎಂದು ಎಂದು ಕೇಂದ್ರ ಡಿಸಿಪಿ ಶ್ವೇತಾ ಚೌಹಾಣ್ ಮಾಹಿತಿಯನ್ನು ನೀಡಿದರು.

    ನ.23ರಂದು ರಾತ್ರಿ 9:32ರ ವೇಳೆಗೆ ನನ್ನ ಅಧಿಕೃತ ಖಾತೆಗೆ ಐಸಿಸ್ ಕಾಶ್ಮಿರದಿಂದ ಇ-ಮೇಲ್ ಬಂದಿದೆ ಎಂದು ಗೌತಮ್ ಗಂಭೀರ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

    ಮೇಲ್‍ನಲ್ಲಿ ಏನಿದೆ?
    ನಾವು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಕೊಲ್ಲಲಿದ್ದೇವೆ ಎಂದು ಮೇಲ್‍ನಲ್ಲಿ ಬರೆಯಲಾಗಿದೆ.

    ಕಟ್ಟಾ ರಾಷ್ಟ್ರೀಯವಾದಿಯಾದ 40 ವರ್ಷ ವಯಸ್ಸಿನ ಕ್ರಿಕೆಟಿಗ ಹಾಗೂ ರಾಜಕಾರಣಿ ಗೌತಮ್ ಗಂಭೀರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಬಗ್ಗೆ ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಭಯೋತ್ಪಾದನೆ ನಿಯಂತ್ರಣಗೊಳ್ಳುವವರೆಗೂ ಪಾಕ್‍ನೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ತಿಳಿಸಿದ್ದರು. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಸಾಧ್ಯತೆ ಕಡಿಮೆ: ಗುಲೇರಿಯಾ

    ಈ ಹಿಂದೆ 2019ರ ಡಿಸೆಂಬರ್ ತಿಂಗಳಲ್ಲೂ ಗಂಭೀರ್ ಅವರಿಗೆ ಅಂತರಾಷ್ಟ್ರೀಯ ಸಂಖ್ಯೆಯಿಂದ ಜೀವ ಬೆದರಿಕೆಯ ಕರೆಗಳು ಬಂದಿದ್ದವು. ಆಗಲೂ ದೂರು ದಾಖಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯನ್ನು ನೀಡಿತ್ತು.