Tag: isi mark

  • ಬೆಲ್ಟ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ –  ಚೆಕ್‌ ಮಾಡೋದು ಹೇಗೆ?

    ಬೆಲ್ಟ್‌ ಹಾಕದೇ ISI ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿದರೆ 2 ಸಾವಿರ ದಂಡ – ಚೆಕ್‌ ಮಾಡೋದು ಹೇಗೆ?

    ನವದೆಹಲಿ: ಬೆಲ್ಟ್‌ ಹಾಕದೇ ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌(ಐಎಸ್‌ಐ) ಮಾರ್ಕ್‌ ಇಲ್ಲದ ಹೆಲ್ಮೆಟ್‌ ಧರಿಸಿ  ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರೆ ಇನ್ನು ಮುಂದೆ 2 ಸಾವಿರ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

    ಮೋಟಾರು ವಾಹನ ಕಾಯ್ದೆಯಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡಲಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಸರಿಯಾದ ಹೆಲ್ಮೆಟ್‌ ಧರಿಸದೇ ಇದ್ದಲ್ಲಿ 2 ಸಾವಿರ ರೂ. ದಂಡವನ್ನು ವಿಧಿಸಲಾಗುತ್ತದೆ.

    ಯಾವುದಕ್ಕೆ ಎಷ್ಟು ದಂಡ?
    ನೀವು ಹೆಲ್ಮೆಟ್ ಧರಿಸಿದ್ದರೂ ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸುವಾಗ ಬ್ಯಾಂಡ್/ಬಕಲ್ ಬಿಚ್ಚಿದ್ದರೆ 1,000 ರೂ. ದಂಡ ತೆರಬೇಕಾಗುತ್ತದೆ.

    ನಿಮ್ಮ ಹೆಲ್ಮೆಟ್ BSI (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕರಣವನ್ನು ಹೊಂದಿಲ್ಲದಿದ್ದರೆ ನಿಮಗೆ 1,000 ರೂ. ದಂಡ ವಿಧಿಸಬಹುದು.

    ನೀವು ಇತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಉದಾಹರಣೆಗೆ ಹೆಲ್ಮೆಟ್‌ ಧರಿಸಿಯೂ ರೆಡ್‌ ಸಿಗ್ನಲ್‌ ಜಂಪ್‌ ಮಾಡಿದರೆ 2,000 ರೂ. ದಂಡವನ್ನು ವಿಧಿಸಲಾಗುತ್ತದೆ. ಇದನ್ನೂ ಓದಿ: ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ಚೆಕ್‌ ಮಾಡುವುದು ಹೇಗೆ?
    ನೀವು ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ್ದೀರೋ ಇಲ್ಲವೋ ಎನ್ನುವುದನ್ನು ಆನ್‌ಲೈನಿನಲ್ಲೇ ಪರಿಶೀಲನೆ ಮಾಡಬಹುದು.

    www.echallan.parivahan.gov.in ತೆರಳಿ ‘Get Challan Detailsʼ ಕ್ಲಿಕ್‌ ಮಾಡಬೇಕು. ಇಲ್ಲಿ ಚಲನ್‌ ನಂಬರ್‌/ ವಾಹನ ಸಂಖ್ಯೆ/ ಡಿಎಲ್‌ ನಂಬರ್‌ ಪೈಕಿ ಒಂದನ್ನು ಆರಿಸಿ ಕಾಣುತ್ತಿರುವ ಕ್ಯಾಪ್ಚವನ್ನು ಎಂಟರ್‌ ಮಾಡಿ ‘Get Detail‘ ಕ್ಲಿಕ್‌ ಮಾಡಬೇಕು. ಉಲ್ಲಂಘನೆ ಮಾಡದೇ ಇದ್ದರೆ ಚಲನ್‌ ನೀಡಿಲ್ಲ ಎಂಬ ಸ್ಟೇಟಸ್‌ ಕಾಣುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೆ ದಂಡದ ಮಾಹಿತಿ ಅಲ್ಲಿ ಸಿಗುತ್ತದೆ.  ಇದನ್ನೂ ಓದಿ: ಹರ್ಯಾಣದಲ್ಲಿ ಮಾರುತಿಯಿಂದ ದೊಡ್ಡ ಫ್ಯಾಕ್ಟರಿ – ಸ್ಥಳೀಯರಿಗೆ ಶೇ.75 ಮೀಸಲಾತಿ, ನಿಯಮ ಏನು?

  • ಐಎಸ್‌ಐ ಮಾರ್ಕ್ ಇಲ್ಲದ 70 ಲಕ್ಷ ಮೌಲ್ಯದ ಚೀನಾ ಆಟಿಕೆ ವಶ

    ಭೋಪಾಲ್: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಅಧಿಕಾರಿಗಳು ಗುರುವಾರ ನಗರದ ಖಾಸಗಿ ಮಾಲ್‌ಗಳಿಗೆ ದಾಳಿ ಮಾಡಿ ಸುಮಾರು 70 ಲಕ್ಷ ರೂ. ಮೌಲ್ಯದ ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಬಿಐಎಸ್ ಹಿರಿಯ ವಿಜ್ಞಾನಿ ರಮಣ್ ತ್ರಿವೇದಿಯವರ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದ್ದು, ಮಾಲ್‌ಗಳಿಂದ ಐಎಸ್‌ಐ ಗುರುತು ಇಲ್ಲದ ಚೀನಾ ಆಟಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

    ಕೆಲವು ನಿರ್ದಿಷ್ಟ ಮಾಹಿತಿಯ ಮೇರೆಗೆ ಬಿಐಎಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾಲ್‌ಗಳಿಂದ ದೊಡ್ಡ ಪ್ರಮಾಣದ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಟಿಕೆಗಳನ್ನು ಯಾವ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಇಂತಹ ವ್ಯವಹಾರ ಯಾವಾಗಿನಿಂದ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಐಎಸ್‌ಐ ಗುರುತು ಇಲ್ಲದ ಆಟಿಕೆ ನಿಷೇಧ:
    ಐಎಸ್‌ಐ ಗುರುತು ಇಲ್ಲದ ಆಟಿಕೆಗಳನ್ನು ಮಾರಾಟ ಮಾಡುವುದನ್ನು ದೇಶದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಐಎಸ್‌ಐ ಗುರುತು ಇಲ್ಲದ ಆಟಿಕೆಗಳ ಮಾರಾಟ ನಡೆಯುತ್ತಿದೆ. ಇಂತಹ ಅಕ್ರಮ ಮಾರಾಟದ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಅಧಿಕಾರಿ ಅಮರ್ ಉಜಾಲಾ ತಿಳಿಸಿದ್ದಾರೆ.

    ನಾವು ಆಟಿಕೆಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ ಕಠಿಣ ಕ್ರಮ ಕೈಗೊಂಡಿದ್ದೇವೆ. ಬಿಐಎಸ್ ಅಧಿಕಾರಿಗಳು ಅಂಗಡಿಗಳನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಚೈನೀಸ್ ಆಟಿಕೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮದ ವಿಚಾರಕ್ಕೆ ಬಂದ ಪಕ್ಕದ ಮನೆಯವರಿಗೆ ಸಲ್ಮಾನ್ ಕ್ಲಾಸ್

    ಭಾರತ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಐಎಸ್‌ಐ ಗುರುತು ಇಲ್ಲದ ಆಟಿಕೆಗಳು ಮಕ್ಕಳಿಗೆ ಹಾನಿಕಾರಕ. ಅಂಗಡಿಯವರು ಇದನ್ನೆಲ್ಲ ಲೆಕ್ಕಿಸದೇ ತಮ್ಮ ಲಾಭಕ್ಕಾಗಿ ವಿದೇಶದಿಂದ ಕಡಿಮೆ ಬೆಲೆಗೆ ಆಟಿಕೆಗಳನ್ನು ಆಮದು ಮಾಡಿಕೊಂಡು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಇದೀಗ ಭೋಪಾಲ್‌ನಲ್ಲಿ ಬಿಐಎಸ್ ಅಧಿಕಾರಿಗಳ 13 ಸದಸ್ಯರ ತಂಡ ಹಲವೆಡೆ ದಾಳಿ ನಡೆಸುತ್ತಿದ್ದಾರೆ.

  • ಪೊಲೀಸ್ ಪೇದೆಯ ಹೆಲ್ಮೆಟ್ ಒಡೆದು ಹಾಕಿದ ಸಾರ್ವಜನಿಕರು

    ಪೊಲೀಸ್ ಪೇದೆಯ ಹೆಲ್ಮೆಟ್ ಒಡೆದು ಹಾಕಿದ ಸಾರ್ವಜನಿಕರು

    ಮೈಸೂರು: ಮಂಗಳವಾರದಿಂದ ಮೈಸೂರಿನಲ್ಲಿ ಐಎಸ್‍ಐ ಮಾರ್ಕಿನ ಹೆಲ್ಮೆಟ್ ಅಭಿಯಾನ ನಡೆಯುತ್ತಿದೆ. ಈ ನಡುವೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹೊಂದಿದ್ದ ಪೊಲೀಸ್ ಪೇದೆಯ ಕಳಪೆ ಹೆಲ್ಮೆಟನ್ನು ಸಾರ್ವಜನಿಕರೇ ಒಡೆದು ಹಾಕಿರೋ ಘಟನೆ ನಡೆದಿದೆ.

    ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಪೊಲೀಸ್ ಪೇದೆ ಬಳಿ ಕಳಪೆ ಹೆಲ್ಮೆಟ್ ಇರುವುದನ್ನು ನೋಡಿದ ಸಾರ್ವಜನಿಕರು, ಹೆಲ್ಮೆಟ್ ಒಡೆದು ಹಾಕಿ ಪೇದೆಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=Gihb1FMiVtA&feature=youtu.be

    ಮೈಸೂರು ಸಂಚಾರಿ ಪೊಲೀಸರಿಂದ ಮಂಗಳವಾರದಂದು ಆಪರೇಷನ್ ಸೇಫ್ ರೈಡ್ ಹೆಸರಿನಲ್ಲಿ ಮೆಗಾ ಹೆಲ್ಮೆಟ್ ತಪಾಸಣೆ ನಡೆಯಿತು. ಇಷ್ಟು ದಿನ ಹೆಲ್ಮೆಟ್ ಹಾಕದವರಿಗೆ ದಂಡ ಮಾತ್ರ ಹಾಕುತ್ತಿದ್ದ ಪೊಲೀಸರು ನಿನ್ನೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್‍ಗಳನ್ನು ಸ್ಥಳದಲ್ಲಿಯೇ ವಶಪಡಿಸಿಕೊಂಡ್ರು. ಗಟ್ಟಿಯಾದ ಹಾಗೂ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸೂಚನೆ ನೀಡಿದ್ರು.

    ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಸವಾರರಿಂದ ಪಡೆದು ದಂಡ ಕಟ್ಟಿಸಿಕೊಳ್ಳದೇ ಎಚ್ಚರಿಕೆ ನೀಡಿ ಕಳಿಸಿದ್ರು. ಹಳೇ ಹೆಲ್ಮೆಟ್ ಬೇಕು ಎಂದರೆ ಹೊಸದಾಗಿ ಐಎಸ್‍ಐ ಮಾಕ್ ಉಳ್ಳ ಫುಲ್ ಹೆಲ್ಮೆಟ್ ಖರೀದಿಸಿ ತಂದು ತೋರಿಸುವಂತೆ ಸೂಚಿಸಿದ್ರು. ಮೈಸೂರು ನಗರದಾದ್ಯಂತ ಈ ವಿಶೇಷ ತಪಾಸಣೆ ನಡೆಯಿತು.

    ನಿನ್ನೆ ಮೈಸೂರು ನಗರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಇದೇ ವಾರ ಮತ್ತೊಮ್ಮೆ ದಿಢೀರ್ ದಾಳಿ ಮಾಡಲಿದ್ದಾರೆ.

    ಹೆಲ್ಮೆಟ್ ಕಸಿದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಹೊಸ ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ತಂದು ತೋರಿಸಿದ್ರೆ ಹಳೇ ಹೆಲ್ಮೆಟ್ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮತ್ತೆ ಆ ಹಳೇ ಹೆಲ್ಮೆಟ್ ಧರಿಸುವಂತಿಲ್ಲ.