Tag: isi

  • ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್‌ ಕಡ್ಡಾಯ

    ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್‌ ಕಡ್ಡಾಯ

    * ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್‌ ಜೋಶಿ ಸೂಚನೆ
    * ಪರವಾನಗಿ ರಹಿತ 9 ತಯಾರಕರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್‌ಗಳ ವಶ

    ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮುಂದಾಗಿರುವ ಕೇಂದ್ರ ಸರ್ಕಾರ (Central Government) ಕಳಪೆ ಗುಣಮಟ್ಟದ ಹೆಲ್ಮೆಟ್‌ (Substandard Helmets) ಮಾರಾಟ ಮತ್ತು ಬಳಕೆಗೆ ತಡೆಯೊಡ್ಡಿದೆ.

    ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ, ರಸ್ತೆ ಬದಿಗಳಲ್ಲಿ ಮಾರಾಟ ಆಗುತ್ತಿರುವ ಕಳಪೆ ಹೆಲ್ಮೆಟ್‌ಗಳಿಗೆ ಬ್ರೇಕ್‌ ಹಾಕುವ ಜೊತೆಗೆ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಬಳಕೆಯನ್ನೇ ಕಡ್ಡಾಯಗೊಳಿಸಿದೆ.

    ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಕಳಪೆ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ದೆಹಲಿಯಲ್ಲಿ ಈಗಾಗಲೇ 2500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

    2024-25ನೇ ಆರ್ಥಿಕ ವರ್ಷದಲ್ಲಿ BIS ದೆಹಲಿಯಲ್ಲಿ 30ಕ್ಕೂ ಹೆಚ್ಚು ಹೆಲ್ಮೆಟ್‌ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ 9 ತಯಾರಕರು ಕಂಡುಬಂದಿದ್ದು, ಇವರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದೆ.

    ದೆಹಲಿಯ 17 ಅಂಗಡಿಗಳು ಮತ್ತು ರಸ್ತೆ ಬದಿ ವ್ಯಾಪಾರಸ್ಥರಲ್ಲೂ ಶೋಧ ನಡೆಸಿ, 500ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡ BIS ಅಧಿಕಾರಿಗಳ ತಂಡ, ವರ್ತಕರು ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಜರುಗಿಸಿದೆ.  ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು

    176 ತಯಾರಕರಿಗೆ BIS ಮಾನ್ಯತೆ:
    2025ರ ಜೂನ್ ವೇಳೆಗೆ ದೇಶಾದ್ಯಂತ 176 ಹೆಲ್ಮೆಟ್‌ ತಯಾರಕರು ಮಾತ್ರ ರಕ್ಷಣಾತ್ಮಕ ಹೆಲ್ಮೆಟ್‌ ಉತ್ಪಾದನೆಗೆ ಮಾನ್ಯವಾದ BIS ಪರವಾನಗಿ ಹೊಂದಿದ್ದಾರೆ. ರಸ್ತೆ ಬದಿಗಳಲ್ಲಿ ಮಾರಾಟವಾಗುತ್ತಿರುವ ಅನೇಕ ಹೆಲ್ಮೆಟ್‌ಗಳು BIS ಪ್ರಮಾಣೀಕರಣ ಹೊಂದಿರುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

    ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್‌ ಇಲ್ಲದೆ ಮತ್ತು ಹೆಲ್ಮೆಟ್‌ ಧರಿಸಿದ್ದರೂ ಕಳಪೆ ಗುಣಮಟ್ಟದ್ದಾಗಿದ್ದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು BIS ಅನೇಕ ಪ್ರಕರಣಗಳಲ್ಲಿ ಇದನ್ನು ಗಮನಿಸಿದ್ದು, ಬೈಕ್‌ ಸವಾರರ ಸುರಕ್ಷತೆ ದೃಷ್ಟಿಯಿಂದ ಕಳಪೆ ಗುಣಮಟ್ಟದ ಹೆಲ್ಮೆಟ್‌ ತಯಾರಕರು ಮತ್ತು ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

    BIS, ನಿಯಮಿತ ಕಾರ್ಖಾನೆ ಮತ್ತು ಮಾರುಕಟ್ಟೆ ಮೇಲೆ ಕಣ್ಗಾವಲಿರಿಸಿದ್ದು, 500ಕ್ಕೂ ಹೆಚ್ಚು ಹೆಲ್ಮೆಟ್ ಮಾದರಿಗಳನ್ನು ಪರೀಕ್ಷಿಸಿದೆ. 30ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆ ನಡೆಸಿ ಗುಣಮಟ್ಟದ ಮಾನದಂಡಗಳನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಸಹ ಗ್ರಾಹಕರ ರಕ್ಷಣೆ ಮತ್ತು ಸುರಕ್ಷಿತ ವಾಹನ ಸಂಚಾರಕ್ಕಾಗಿ ಕಳಪೆ-ಗುಣಮಟ್ಟದ ಹೆಲ್ಮೆಟ್‌ ಮಾರಾಟದ ವಿರುದ್ಧ ಸಮರ ಸಾರಿದೆ. ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವು ತಡೆಯುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್‌ ಮಾರಾಟ-ಖರೀದಿಗೆ ಆದ್ಯತೆ ನೀಡುತ್ತಿದೆ.

    ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ:
    ವಾಹನ ಸವಾರರ ಸುರಕ್ಷತೆ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಂದ ಗ್ರಾಹಕರನ್ನು ರಕ್ಷಿಸುವ ಪ್ರಯತ್ನವಾಗಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ನಡೆಸುತ್ತಿದೆ. ಎಲ್ಲಾ ಜಿಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಪತ್ರ ಬರೆದು ಮಾರುಕಟ್ಟೆಯಲ್ಲಿ ಹೆಲ್ಮೆಟ್‌ಗಳ ಗುಣಮಟ್ಟ ಪರಿಶೀಲನೆಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ದೇಶದ ಇತರೆಡೆಯೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಅಭಿಯಾನ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.  ಇದನ್ನೂ ಓದಿ: ಜನಸೇವೆಗಾಗಿ 30-40 ವರ್ಷಗಳ ಕಾಲ ಬದುಕುವ ಆಶಯವಿದೆ – ಉತ್ತರಾಧಿಕಾರಿ ವದಂತಿಗೆ ತೆರೆ ಎಳೆದ ದಲೈ ಲಾಮಾ

    ಬಿಐಎಸ್ ಕೇರ್ ಅಪ್ಲಿಕೇಶನ್‌ʼ
    ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ BIS ಪ್ರಾಮಾಣಿತ ಹೆಲ್ಮೆಟ್‌ಗಳನ್ನೇ ಧರಿಸಬೇಕು ಹಾಗೂ ಪ್ರಮಾಣೀಕರಣವಿಲ್ಲದ ಹೆಲ್ಮೆಟ್‌ಗಳ ತಯಾರಿಕೆ ಅಥವಾ ಮಾರಾಟ ಕಂಡುಬಂದರೆ ಗ್ರಾಹಕ ವ್ಯವಹಾರಗಳ ಇಲಾಖೆ ಅಥವಾ BIS ಗಮನಕ್ಕೆ ತರಬೇಕು. ಇದಕ್ಕಾಗಿ ʼಬಿಐಎಸ್ ಕೇರ್ ಅಪ್ಲಿಕೇಶನ್‌ʼ ಮತ್ತು ʼಬಿಐಎಸ್ ಪೋರ್ಟಲ್‌ʼನಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಿದೆ. ರಾಷ್ಟ್ರವ್ಯಾಪಿ ಗ್ರಾಹಕರ ಜಾಗೃತಿಗಾಗಿ ಬಿಐಎಸ್ ಕ್ವಾಲಿಟಿ ಕನೆಕ್ಟ್ ಅಭಿಯಾನ ಸಹ ಆಯೋಜಿಸುತ್ತಿದೆ. ‘ಮನಕ್ ಮಿತ್ರ’ ಸ್ವಯಂ ಸೇವಕರು ಹೆಲ್ಮೆಟ್‌ ಮತ್ತಿತರ ಉತ್ಪನ್ನಗಳ ಕಡ್ಡಾಯ ಪ್ರಮಾಣೀಕರಣ ಬಗ್ಗೆ ಗ್ರಾಹಕರಿಗೆ ಅಗತ್ಯ ಮಾಹಿತಿ ಒದಗಿಸುತ್ತಾರೆ ಎಂದಿದೆ BIS.

    ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದೇನು?
    ಈ ಕುರಿತು ಮಾತನಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ದೇಶದಲ್ಲಿ 21 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಸವಾರರ ಸುರಕ್ಷತೆ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಮೋಟಾರು ವಾಹನ ಕಾಯ್ದೆ, 1988ರಡಿ ಹೆಲ್ಮೆಟ್ ಕಡ್ಡಾಯವಾಗಿದ್ದು, ಅದರ ಗುಣಮಟ್ಟಕ್ಕೂ ಆದ್ಯತೆ ಕೊಡಬೇಕಿದೆ. ಹಾಗಾಗಿ 2021ರಿಂದ ಗುಣಮಟ್ಟ ನಿಯಂತ್ರಣ ಆದೇಶ ಜಾರಿಯಲ್ಲಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್‌ಗೆ ಅವಕಾಶವಿಲ್ಲ. ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ BIS ಮಾನದಂಡದಂತೆ (IS 4151:2015) ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಕಡ್ಡಾಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

  • ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    – ರೇಖಾಚಿತ್ರ, ಧ್ವನಿ ರೆಕಾರ್ಡಿಂಗ್‌ ಸಮೇತ ಮಾಹಿತಿ ಹಂಚಿಕೊಂಡಿದ್ದ‌ ಸ್ಪೈ

    ಮುಂಬೈ: ಆಪರೇಷನ್‌ ಸಿಂಧೂರ ಬಳಿಕ ದೇಶದಲ್ಲಿ ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಸುಮಾರು 20 ಮಂದಿ ಬೇಹುಗಾರರ (Spying) ಹೆಡೆಮುರಿ ಕಟ್ಟಲಾಗಿದೆ. ಒಂದು ದಿನದ ಹಿಂದೆಯಷ್ಟೇ ಐಎಸ್‌ಐ ಅಧಿಕಾರಿಗಳಿಗೆ ಭಾರತದ ಸಿಮ್‌ ಕಾರ್ಡ್‌ಗಳನ್ನ ಪೂರೈಸುತ್ತಿದ್ದ ರಾಜಸ್ಥಾನದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಇಂದು ಥಾಣೆಯಲ್ಲಿ ಮತ್ತೊರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.

    ಥಾಣೆಯ ಕಲ್ವಾ ನಿವಾಸಿಯಾದ ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ರವೀಂದ್ರ ವರ್ಮಾ (27) ಬಂಧಿತ ಆರೋಪಿ. ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ರವೀಂದ್ರನನ್ನ ಬಂಧಿಸಲಾಗಿದೆ.

    ಪೊಲೀಸರ ಪ್ರಕಾರ, ಫೇಸ್‌ಬುಕ್‌ನಲ್ಲಿ ಮಹಿಳೆಯಂತೆ ಡ್ರಾಮಾ ಮಾಡ್ತಿದ್ದ ಪಾಕಿಸ್ತಾನಿ ಏಜೆಂಟ್‌ನಿಂದ (Pakistani Agent) ಹನಿಟ್ರ್ಯಾಪ್‌ಗೆ ರವೀಂದ್ರ ಒಳಗಾಗಿದ್ದ. ಬಳಿಕ ಹಣದ ಆಮಿಷ ಒಡ್ಡಿ ಆತನಿಂದ ಸೂಕ್ಷ್ಮ ಮಾಹಿತಿಗಳನ್ನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಈತ 2024 ರಿಂದ ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ. ದೇಶದ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ನೀಡಿದ್ದ. ರೇಖಾಚಿತ್ರಗಳು ಮತ್ತು ಆಡಿಯೋ ರೆಕಾರ್ಡಿಂಗ್‌ ಸಮೇತ ಪಾಕಿಸ್ತಾನಿ ಗುಪ್ತಚರ ಆಪರೇಟಿವ್ (POI)ಗೆ ಮಾಹಿತಿ ಹಂಚಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ವಿದೇಶಗಳಲ್ಲಿನ ವಿವಿಧ ಬ್ಯಾಂಕ್‌ ಖಾತೆಗಳಿಂದ ಭಾರೀ ಮೊತ್ತದ ಹಣ ಪಡೆದುಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತನಿಖೆ ಸಮಯದಲ್ಲಿ ಉದ್ದೇಶಪೂರ್ವಕವಾಗಿಯೇ ರವೀಂದ್ರ ವರ್ಮಾ ಸೂಕ್ಷ್ಮ ಮಾಹಿತಿಯನ್ನ ಪಾಕ್‌ ಏಜೆಂಟ್‌ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬುದೂ ಗೊತ್ತಾಗಿದೆ ಎಂದು ವರದಿಗಳು ತಿಳಿಸಿವೆ.

    ವರ್ಮಾ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಕಾರಣದಿಂದ ದಕ್ಷಿಣ ಮುಂಬೈನಲ್ಲಿರುವ ನೇವಲ್ ಡಾಕ್‌ಯಾರ್ಡ್‌ಗೆ ಪ್ರವೇಶಿಸಲು ಅಧಿಕಾರವಿತ್ತು. ಅಲ್ಲದೇ ಈತ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೂ ಪ್ರಯಾಣಿಸುತ್ತಿದ್ದ. ಡಾರ್ಕ್‌ಯಾರ್ಡ್‌ಗೆ ಮೊಬೈಲ್‌ ಕೊಂಡೊಯ್ಯಲು ಅನುಮತಿ ಇಲ್ಲದಿದ್ದ ಕಾರಣ ರೇಖಾ ಚಿತ್ರಗಳನ್ನ ರೆಡಿ ಮಾಡಿಕೊಂಡಿದ್ದ. ಅಲ್ಲಿಂದ ಆಚೆಬಂದ ನಂತರ ವಾಯ್ಸ್‌ ರೆಕಾರ್ಡಿಂಗ್‌ ಮಾಡಿ ರೇಖಾ ಚಿತ್ರಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಟಿಎಸ್ ಸೋಮವಾರದ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದೆ.

  • 5-10 ಸಾವಿರ ರೂ.ಗೆ ಪಾಕ್ ಐಎಸ್‌ಐಗೆ ಮಿಲಿಟರಿ ಮಾಹಿತಿ ಲೀಕ್‌ – ಇಬ್ಬರು ಅರೆಸ್ಟ್‌

    5-10 ಸಾವಿರ ರೂ.ಗೆ ಪಾಕ್ ಐಎಸ್‌ಐಗೆ ಮಿಲಿಟರಿ ಮಾಹಿತಿ ಲೀಕ್‌ – ಇಬ್ಬರು ಅರೆಸ್ಟ್‌

    ಚಂಡೀಗಢ: ಕೇವಲ 5 ಸಾವಿರ ರೂ. ಮತ್ತು 10 ಸಾವಿ ರೂ.ಗಳಿಗೆ ಪಾಕಿಸ್ತಾನದ ಐಎಸ್‌ಐಗೆ (ISI) ಮಿಲಿಟರಿ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್‌ ಪೊಲೀಸರು (Punjab Police) ಬಂಧಿಸಿದ್ದಾರೆ.

    ಆರೋಪಿಗಳನ್ನು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಂಜಾಬ್‌ನ ಅಮೃತಸರದಲ್ಲಿರುವ (Amritsar) ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು. ಇದನ್ನೂ ಓದಿ: ಯುವತಿಯ ಹಿಂಬದಿ ಟಚ್‌ ಮಾಡಿ ಅಸಭ್ಯ ವರ್ತನೆ ತೋರಿದ್ದ ಎಂಬಿಎ ಪದವೀಧರ ಅರೆಸ್ಟ್‌

    ಈ ಕುರಿತು ಮಾಹಿತಿ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಮಣೀಂದರ್ ಸಿಂಗ್, ಭಾರತದ ವಾಯುನೆಲೆ ಮತ್ತು ಸೂಕ್ಷ್ಮ ಪ್ರದೇಶಗಳ ಬಗ್ಗೆ ಪಾಕ್‌ನ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಲಕ್‌ ಶೇರ್‌ ಮಸಿಹ್‌ ಮತ್ತು ಸೂರಜ್‌ ಮಸಿಹ್‌ ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಹರ್‌ಪ್ರೀತ್‌ ಎಂಬ ಸಹವರ್ತಿ ಇವರಿಬ್ಬರನ್ನು ಪಾಕ್‌ನ ಐಎಸ್‌ಐ ಜೊತೆಗೆ ಲಿಂಕ್‌ ಮಾಡಿಸಿದ್ದಾನೆ. ಆತನ ವಿರುದ್ಧ ಈಗಾಗಲೇ ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮೋದಿಯ ಪ್ರತೀಕಾರದ ಶಪಥಕ್ಕೆ ಬೆವರಿದ ಪಾಕ್ – ಭಾರತಕ್ಕೆ ಪರಮಾಣು ದಾಳಿಯ ಗೊಡ್ಡು ಬೆದರಿಕೆ

    ಅಲ್ಲದೇ ಆರೋಪಿಗಳಿಗೆ ಸಣ್ಣ ಮಾಹಿತಿಗಾಗಿ 5,000 ರೂ. ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ರೆ 10,000 ರೂ.ಗಳನ್ನ ನೀಡಲಾಗುತ್ತಿತ್ತು. ಹಾಗಾಗಿ ಅಧಿಕೃತ ರಹಸ್ಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸದ್ಯ ಬಂಧಿತರಿಂದ ಡೇಟಾ ಜೊತೆಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಆರ್‌ಡಿಎಕ್ಸ್‌, ಹೆರಾಯಿನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ ತನ್ನ ಶತ್ರುಗಳಿಗೆ ತಕ್ಕ ಉತ್ತರ ನೀಡುತ್ತೆ – ಭದ್ರತೆಯ ಜವಾಬ್ದಾರಿ ನನ್ನದು ಎಂದ ರಾಜನಾಥ್ ಸಿಂಗ್

  • ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ (ISI) ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಫಿರೋಜಾಬಾದ್‌ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

    ಬಂಧಿತನನ್ನ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ‌ಫಿರೋಜಾಬಾದ್‌ನ ಹಜರತ್‌ಪುರ ಮೂಲದ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಗಗನಯಾನ ಬಾಹ್ಯಾಕಾಶ ಯೋಜನೆ ಮತ್ತು ಮಿಲಿಟರಿ ಲ್ಯಾಜಿಸ್ಟಿಜ್ಸ್‌, ಡ್ರೋನ್ ಪ್ರಯೋಗಗಳ ಮಾಹಿತಿ ಸೇರಿದಂತೆ ಗೌಪ್ತ ಮಾಹಿತಿಯನ್ನ ಪಾಕಿಸ್ತಾನದ ಐಎಸ್‌ಐ ಜೊತೆಗೆ ಹಂಚಿಕೊಂಡಿದ್ದಾನೆ ಎಂದು ಯುಪಿ ಎಟಿಎಸ್ (UP ATS) ಮುಖ್ಯಸ್ಥ ನೀಲಬ್ಜಾ ಚೌಧರಿ ತಿಳಿಸಿದ್ದಾರೆ.

    ರವೀಂದ್ರ ಕುಮಾರ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ʻನೇಹಾʼ (Neha) ಎಂಬ ಹ್ಯಾಂಡ್ಲರ್‌ ಮೂಲಕ ರಕ್ಷಣಾ ವಲಯದ ಸೂಕ್ಷ್ಮ ಮಾಹಿತಿಗಳನ್ನ ಹಂಚಿಕೊಂಡಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನ ಇತರ ಕಾನೂನು ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದಾಗಿ ಚೌಧರಿ ವಿವರಿಸಿದ್ದಾರೆ.

    ʻನೇಹಾʼ ಹೆಸರಿನ ಹ್ಯಾಂಡ್ಲರ್‌ ಕಳೆದ ಒಂದು ವರ್ಷದ ಹಿಂದೆ ಫೇಸ್‌ ಮೂಲಕ ರವೀಂದ್ರನನ್ನ ಸಂಪರ್ಕಿಸಿದ್ದಳು. ಈಕೆಯೊಂದಿಗೆ ರಸಹ್ಯ ಡೇಟಾ ಹಂಚಿಕೊಳ್ಳುತ್ತಿದ್ದ ರವೀಂದ್ರ ತನ್ನ ಕೋಡನ್ನು ಮರೆ ಮಾಚಲು ʻಚಂದನ್‌ ಸ್ಟೋರ್‌ ಕೀಪರ್‌-2ʼ ಎಂದು ಸೇವ್‌ ಮಾಡಿಕೊಂಡಿದ್ದ. ಹಣದ ಆಮಿಷಕ್ಕೆ ಒಳಗಾಗಿ‌ ವಾಟ್ಸಪ್‌ ಮೂಲಕವೂ ಅನೇಕ ಗೌಪ್ಯ ಮಾಹಿತಿಗಳನ್ನ ಹಂಚಿಕೊಂಡಿದ್ದ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

    ಸಮಗ್ರ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು ರವೀಂದ್ರನನ್ನ ಆಗ್ರಾದಲ್ಲಿ ಬಂಧಿಸಿದ್ದಾರೆ. ಇದೇ ವೇಳೆ ಆತನ ಸಹಚರನನ್ನೂ ಬಂಧಿಸಲಾಗಿದ್ದು, ವಾಟ್ಸಪ್ ಚಾಟ್‌, ವರ್ಗೀಕೃತ ದಾಖಲೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

  • ಪಾಕ್‌ನ ಐಎಸ್‌ಐ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು – ಅಪರಾಧಿಗೆ 6 ವರ್ಷಗಳ ಕಠಿಣ ಶಿಕ್ಷೆ

    ಪಾಕ್‌ನ ಐಎಸ್‌ಐ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು – ಅಪರಾಧಿಗೆ 6 ವರ್ಷಗಳ ಕಠಿಣ ಶಿಕ್ಷೆ

    ಲಕ್ನೋ: ಪಾಕಿಸ್ತಾನದ (Pakistan) ಐಎಸ್‌ಐ (ISI) ಏಜೆಂಟ್‌ಗಳೊಂದಿಗೆ ಸೇರಿ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಗುಜರಾತ್‌ನ (Gujarat) ವ್ಯಕ್ತಿಯೊಬ್ಬನನ್ನು ಇಲ್ಲಿನ ವಿಶೇಷ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

    ರಾಜಕ್‌ಭಾಯ್ ಕುಂಬಾರ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈತ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟ್‌ಗಳೊಂದಿಗೆ ಸಂಚು ರೂಪಿಸಿದ್ದ. ಈ ತನ ವಿರುದ್ಧ 2020 ರಲ್ಲಿ ಎನ್‌ಐಎ ಪ್ರಕರಣ ದಾಖಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಎನ್‌ಐಎ ನ್ಯಾಯಾಲಯವು 6 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಈ ಪ್ರಕರಣದ ಮೊದಲನೇ ಅಪರಾಧಿ ಉತ್ತರ ಪ್ರದೇಶದ ರಶೀದ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು ಈಗಾಗಲೇ ಶಿಕ್ಷೆ ವಿಧಿಸಿತ್ತು. ಇಬ್ಬರೂ ಸೇರಿ ಪಾಕಿಸ್ತಾನಿ ಏಜೆಂಟ್‌ಗಳಿಗೆ ಭಾರತದಲ್ಲಿನ ಸೂಕ್ಷ್ಮ, ಯುದ್ಧತಂತ್ರದ ಮತ್ತು ಆಯಕಟ್ಟಿನ ಪ್ರಮುಖ ಸ್ಥಳಗಳ ಮಾಹಿತಿ ಕೊಟ್ಟಿದ್ದರು. ಅಲ್ಲದೇ ಭಾರತೀಯ ಸೇನೆಯ ಚಲನವಲನಗಳ ಫೋಟೋಗಳನ್ನು ಒದಗಿಸಿದ್ದರು ಎಂದು ಎನ್‌ಐಎ ಆರೋಪಿಸಿತ್ತು. ಈ ಛಾಯಾಚಿತ್ರಗಳನ್ನು ಅವರ ಮೊಬೈಲ್ ಫೋನ್ ಬಳಸಿ ತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಶೀದ್ ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ್ದ ಸೂಕ್ಷ್ಮ ಛಾಯಾಚಿತ್ರಗಳಿಗೆ ಕುಂಬಾರ್ ಹಣ ಒದಗಿಸಿದ್ದ. ಅಲ್ಲದೇ ಇಬ್ಬರೂ ಸೇರಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿತ್ತು.

    ಏಪ್ರಿಲ್ 2020 ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಜುಲೈ 2020 ರಲ್ಲಿ ರಶೀದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಫೆಬ್ರವರಿ 2021 ರಲ್ಲಿ ಕುಂಬಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.

  • ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

    ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ

    ಮುಂಬೈ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ (ISI) ಪರ ಬೇಹುಗಾರಿಕೆ ನಡೆಸಿದ್ದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‍ನ (BrahMos Aerospace) ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‍ಗೆ (Nishant Agarwal) ನಾಗ್ಪುರ ಜಿಲ್ಲಾ ನ್ಯಾಯಾಲಯ (Nagpur district court) ಜೀವಾವಧಿ ಶಿಕ್ಷೆ (Life Imprisonment) ಹಾಗೂ 3,000 ರೂ. ದಂಡ ವಿಧಿಸಿದೆ.

    ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ.ದೇಶಪಾಂಡೆ ಅವರಿದ್ದ ಪೀಠ ನಿಶಾಂತ್ ಅಗರ್ವಾಲ್‍ನನ್ನು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನಿಶಾಂತ್ ಅಗರ್ವಾಲ್ ಅಪರಾದ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) ಮತ್ತು ಅಧಿಕೃತ ರಹಸ್ಯ ಕಾಯ್ದೆಯ (ಒಎಸ್‍ಎ) ವಿವಿಧ ಸೆಕ್ಷನ್‍ಗಳು ಹಾಗೂ ಕ್ರಿಮಿನಲ್  ಪ್ರೊಸೀಜರ್ ಕೋಡ್‍ನ ಸೆಕ್ಷನ್ 235ರ ಅಡಿಯಲ್ಲಿ ಅಗರ್ವಾಲ್‍ನನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದನ್ನೂ ಓದಿ: ದೆಹಲಿ ಮದ್ಯ ಹಗರಣ – ಬಿಆರ್‌ಎಸ್ ನಾಯಕಿ ಕವಿತಾ ನ್ಯಾಯಾಂಗ ಬಂಧನ ವಿಸ್ತರಣೆ

    ನಿಶಾಂತ್ ಅಗರ್ವಾಲ್, ನಾಗ್ಪುರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್‍ನ ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದ. ಆತನ ವಿರುದ್ಧ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್‍ಐ) ತಾಂತ್ರಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಬಳಿಕ ಆತನನ್ನು 2018 ರಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಮಿಲಿಟರಿ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು.

    ಅಗರ್ವಾಲ್‍ಗೆ ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠವು ಕಳೆದ ಏಪ್ರಿಲ್‍ನಲ್ಲಿ ಜಾಮೀನು ನೀಡಿತ್ತು. ಇದನ್ನೂ ಓದಿ: ಜೈಲಿಗೆ ಶರಣಾದ ಕೇಜ್ರಿವಾಲ್‌ಗೆ ಜೂನ್‌ 5 ರವರೆಗೆ ನ್ಯಾಯಾಂಗ ಬಂಧನ

  • ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್

    ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್

    ಲಕ್ನೋ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಾಸ್ಕೋದಲ್ಲಿರುವ ಭಾರತೀಯ ರಾಜಭಾರಿ ಕಚೇರಿಯ ಉದ್ಯೋಗಿಯೊಬ್ಬನನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.

    ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಮೀರತ್‌ನಲ್ಲಿ ಬಂಧಿಸಲಾಗಿದ್ದು, ಸತ್ಯೇದ್ರ ಸಿವಾಲ್, 2021 ರಿಂದ ಮಾಸ್ಕೋದಲ್ಲಿರುವ (Moscow) ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಯಾವ ಔಷಧಿ ಕಂಪನಿಯೂ ನನಗೆ ಹಣ ನೀಡಿಲ್ಲ: ಜಾಗೃತಿಗಾಗಿ ಡ್ರಾಮಾ ಮಾಡಿದೆ ಎಂದ ಪೂನಂ

    ಐಎಸ್‌ಐ ಹ್ಯಾಂಡ್ಲರ್‌ಗಳು ಭಾರತೀಯ ವಿದೇಶಾಂಗ ಸಚಿವಾಲಯದ ಉದ್ಯೋಗಿಗಳನ್ನ ತಮ್ಮತ್ತ ಸೆಳೆಯುತ್ತಿದ್ದು, ಅದಕ್ಕಾಗಿ ಹಣದ ಆಮಿಷ ತೋರಿಸುತ್ತಿದ್ದಾರೆ ಎಂಬ ಸೂಕ್ಷ್ಮ ಮಾಹಿತಿ ಭಾರತೀಯ ಸೇನೆ ಹಾಗೂ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಭಯೋತ್ಪಾದನಾ ನಿಗ್ರಹ ದಳ ರಹಸ್ಯವಾಗಿಯೇ ತನ್ನ ಕಾರ್ಯಾಚರಣೆ ಮುಂದುವರಿಸಿತ್ತು.

    ಉತ್ತರ ಪ್ರದೇಶ (Uttar Pradesh) ಹಾಪುರ್‌ನ ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿಯಾಗಿದ್ದ ಸತೇಂದ್ರ ಸಿವಾಲ್, ಬೇಹುಗಾರಿಕೆ ಜಾಲದ ಪ್ರಮುಖ ರುವಾರಿಯಾಗಿದ್ದ. ಮಾಸ್ಕೋದಲ್ಲಿರುವ ತನ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ತನ್ನ ಸ್ಥಾನವನ್ನು ದುರ್ಬಕೆ ಮಾಡಿಕೊಂಡು ಗೌಪ್ಯ ದಾಖಲೆಗಳನ್ನ ಹೊರ ತೆಗೆಯುತ್ತಿದ್ದ. ಹಣದ ಆಸೆಗಾಗಿ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ಸೇನೆಯ ಆಂತರಿಕೆ ಮತ್ತು ಬಾಹ್ಯ ಕಾರ್ಯಾಚರಣೆ ಚಟುವಟಿಕೆಗಳ ಬಗ್ಗೆ ಮಾಹಿತಿ ಹೊರತೆಗೆದು ಅದನ್ನು ಐಎಸ್‌ಐ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಗೋಲ್ಮಾಲ್ – ಹಣಕ್ಕೆ ದಂಪತಿಯಾದ ಜೋಡಿಗಳು, 15 ಮಂದಿ ಸೇರಿ ಇಬ್ಬರು ಅಧಿಕಾರಿಗಳ ಬಂಧನ

    ಇತ್ತೀಚಿನ ದಿನಗಳಲ್ಲಿ ಐಎಸ್‌ಐ ಉಗ್ರರು ಭಾರತೀಯ ಸೇನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉದ್ಯೋಗಿಗಳಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಇದರಿಂದ ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ದೊಡ್ಡ ಅಪಾಯ ಉಂಟುಮಾಡುವ ಆತಂಕ ಎದುರಾಗುತ್ತಿದೆ ಎಂದು ಕೆಲ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 1 ಕಿ.ಮಿಗೆ 1.59 ಲಕ್ಷ, ದಿನಕ್ಕೆ 50 ಲಕ್ಷ – ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71 ಕೋಟಿ ಖರ್ಚು

  • ಪಾಕ್ ಉಗ್ರ ಸಂಘಟನೆಯೊಂದಿಗೆ ನಂಟು – ಮೂವರ ಬಂಧನ

    ಪಾಕ್ ಉಗ್ರ ಸಂಘಟನೆಯೊಂದಿಗೆ ನಂಟು – ಮೂವರ ಬಂಧನ

    ಚಂಡೀಗಢ: ಐಎಸ್‌ಐ (ISI) ನಿಯಂತ್ರಿತ ಪಾಕ್ ಮೂಲದ ಭಯೋತ್ಪಾದಕ ಘಟಕದೊಂದಿಗೆ ನಂಟು ಹೊಂದಿದ್ದ ಮೂವರನ್ನು ಪಂಜಾಬ್‌ ಪೊಲೀಸರು (Punjab Police) ಬಂಧಿಸಿದ್ದಾರೆ.

    ಯುಎಪಿಎ ಪ್ರಕರಣಗಳ ಅಡಿಯಲ್ಲಿ ಸಂಗ್ರೂರ್ ಜೈಲಿನಲ್ಲಿರುವ ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

    ಬಂಧಿತರಿಂದ 8 ಶಸ್ತ್ರಾಸ್ತ್ರಗಳು, 9 ಮ್ಯಾಗ್ಸಿನ್ಸ್, 30 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕ್ಯಾಂಟ್ ಬಟಿಂಡಾ ಠಾಣೆಯಲ್ಲಿ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

  • 15 ಸಾವಿರಕ್ಕಾಗಿ ಭಾರತೀಯ ಸೇನೆ ರಹಸ್ಯ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್

    15 ಸಾವಿರಕ್ಕಾಗಿ ಭಾರತೀಯ ಸೇನೆ ರಹಸ್ಯ ಮಾಹಿತಿಯನ್ನ ಪಾಕಿಸ್ತಾನಕ್ಕೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: ಪಾಕಿಸ್ತಾನದಲ್ಲಿರುವ (Pakistan) ತನ್ನ ಹ್ಯಾಂಡ್ಲರ್‌ಗಳಿಗೆ ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನ ರಹಸ್ಯವಾಗಿ ತಲುಪಿಸುತ್ತಿದ್ದ ಆರೋಪದ ಮೇಲೆ ಭಾನುವಾರ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಶಂಕಿತ ಐಎಸ್‌ಐ ಏಜೆಂಟ್‌ನನ್ನ ಬಂಧಿಸಿದೆ.

    ಶಂಕಿತ ISI ಏಜೆಂಟ್‌ನನ್ನ ಮೊಹಮ್ಮದ್ ರಯೀಸ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಗೊಂಡಾದ ತರಬ್‌ಗಂಜ್ ಪ್ರದೇಶದ ನಿವಾಸ ಮೊಹಮ್ಮದ್ ರಯೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಮಾನ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಾನೆ. ನಂತರ ಭಾರತದಲ್ಲಿ ಮುಸ್ಲಿಂ (Muslims) ಸಮುದಾಯದ ಸದಸ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಅರ್ಮಾನ್ ತನ್ನನ್ನ ಪ್ರಚೋದಿಸಲು ಪ್ರತ್ನಿಸಿರುವುದಾಗಿ ರಯೀಸ್ ಎಂದು ತಿಳಿಸಿದ್ದಾರೆ.

    ವಿಚಾರಣೆಯಲ್ಲಿ ರಯೀಸ್ ಹೇಳಿದ್ದೇನು?
    ತಾನು ಕೆಲಸಕ್ಕೆ ಸೌದಿ ಅರೇಬಿಯಾಕ್ಕೆ (Saudi Arabia) ಹೋಗಬೇಕೆಂದು ಅರ್ಮಾನ್‌ಗೆ ಹೇಳಿಕೊಂಡಿದ್ದೆ. ನಂತರ ಅರ್ಮಾನ್ ಪಾಕಿಸ್ತಾನ ವ್ಯಕ್ತಿಯೊಬ್ಬನಿಗೆ ತನ್ನ ಸಂಪರ್ಕ ಸಂಖ್ಯೆ ನೀಡುವುದಾಗಿ ತಿಳಿಸಿದ. ನಂತರ ನನ್ನನ್ನು ಭಾರತದ ವಿರುದ್ಧ ಗೂಢಚಾರಿಕೆ ಮಾಡುವಂತೆ ಮನವೊಲಿಸಿದ. ಈ ಕೆಲಸ ಮಾಡಿದ್ರೆ ಕೈತುಂಬ ಹಣ ನೀಡುವುದಾಗಿಯೂ ಹೇಳಿದ್ದ. ಅದಾದ ಮೇಲೆ ಕಳೆದ ವರ್ಷ ನನಗೆ ವಿದೇಶ ಸಂಖ್ಯೆಯಿಂದ ದೂರವಾಣಿ ಕರೆ ಬಂದಿತು. ಆ ವ್ಯಕ್ತಿ ತನ್ನನ್ನ ಹುಸೇನ್ ಎಂದು ಪರಿಚಯಿಸಿಕೊಂಡಿದ್ದ. ನನ್ನನ್ನು ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡುವಂತೆ ಹೇಳಿದ್ದ. ಇದನ್ನೂ ಓದಿ: ಪಾಕಿಸ್ತಾನದಲ್ಲಿ 150 ವರ್ಷದಷ್ಟು ಹಳೆಯ ಹಿಂದೂ ದೇವಾಲಯ ನೆಲಸಮ – ಬೆಳಗ್ಗೆ ಎದ್ದು ನೋಡಿದ ಹಿಂದೂಗಳಿಗೆ ಶಾಕ್!

    ನನ್ನೊಂದಿಗೆ ಮಾತನಾಡುತ್ತಾ, ಮಿಲಿಟರಿ ಕಂಟೋನ್ಮೆಂಟ್ ಮತ್ತು ಸ್ಥಾಪನೆಗಳ ಬಗ್ಗೆ ಮಾಹಿತಿ ಕಳುಹಿಸುವ ಕೆಲಸವನ್ನು ವಹಿಸಿದ. ಈ ಕೆಲಸಕ್ಕಾಗಿ ನಾನು ನನ್ನ ಸ್ನೇಹಿತರನ್ನೂ ಜೊತೆಗೆ ಸೇರಿಸಿಕೊಂಡಿದ್ದೆ. ನಾನು ಮಾಹಿತಿ ಕೊಟ್ಟರೆ ಪ್ರತಿಯಾಗಿ ನನಗೆ 15 ಸಾವಿರ ರೂ. ಕೊಡುತ್ತಿದ್ದ ಎಂದು ರಯೀಸ್ ಹೇಳಿದ್ದಾನೆ. ಇದನ್ನೂ ಓದಿ: ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

    ಈ ಬಗ್ಗೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿ ವಿರುದ್ಧ ಲಕ್ನೋ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 121ಎ ಮತ್ತು 123 ಮತ್ತು ಅಧಿಕಾರಿಗಳ ರಹಸ್ಯ ಕಾಯ್ದೆ-1923ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಮತ್ತೊಂದು ಕೇಸ್‌ – ಪಬ್ಜಿ ಪ್ರೇಮಿಗಾಗಿ ಭಾರತಕ್ಕೆ ಹಾರಿ ಬಂದ ಬಾಂಗ್ಲಾದೇಶದ ಯುವತಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಹಂಚಿಕೆ – ಮೂವರು ಅರೆಸ್ಟ್

    ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಹಂಚಿಕೆ – ಮೂವರು ಅರೆಸ್ಟ್

    ಭುವನೇಶ್ವರ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ(ISI) ಏಜೆಂಟ್‌ಗಳೊಂದಿಗೆ ಸಿಮ್ ಕಾರ್ಡ್‌ಗಳು (Sim Card) ಹಾಗೂ ಒಟಿಪಿಗಳನ್ನು (OTP) ಹಂಚಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನು ಒಡಿಶಾ (Odisha) ಪೊಲೀಸರ ವಿಶೇಷ ಕಾರ್ಯಪಡೆ (STF) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳು ನಯಾಗರ್ ಮತ್ತು ಜಾಜ್‌ಪುರ ಜಿಲ್ಲೆಗೆ ಸೇರಿದವರಾಗಿದ್ದು, ಪಠಾಣಿಸಮಂತ್ ಲೆಂಕಾ (35), ಸರೋಜ್ ಕುಮಾರ್ ನಾಯಕ್ (26) ಮತ್ತು ಸೌಮ್ಯಾ ಪಟ್ಟನಾಯಕ್ (19) ಎಂದು ಗುರುತಿಸಲಾಗಿದೆ. ಈ ಎಲ್ಲಾ ಆರೋಪಿಗಳು ವಂಚನೆಯ ಮೂಲಕ ಇತರರ ಹೆಸರಿನಲ್ಲಿ ಅಪಾರ ಸಂಖ್ಯೆಯ ಸಿಮ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೇ ಅದರ ಒಟಿಪಿಗಳನ್ನು ಪಾಕಿಸ್ತಾನದ (Pakistan) ಪಿಐಒ ಮತ್ತು ಐಎಸ್‌ಐ ಏಜೆಂಟ್‌ಗಳು ಸೇರಿದಂತೆ ಅನೇಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಏಂಜೆಟ್‌ಗಳು ಅವರಿಗೆ ಹಣವನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆರೋಪಿಗಳು ಕಳೆದ ವರ್ಷ ರಾಜಸ್ಥಾನದಲ್ಲಿ (Rajasthan) ಅಧಿಕೃತ ರಹಸ್ಯ ಕಾಯಿದೆ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧಿಸಿದ ಮಹಿಳಾ ಪಿಐಒ ಏಜೆಂಟ್ ಜೊತೆಗೆ ಸಂಪರ್ಕದಲ್ಲಿದ್ದರು. ಸಂಗ್ರಹಿಸಿದ ಈ ಸಿಮ್ ಕಾರ್ಡ್‌ಗಳು ಮತ್ತು ಒಟಿಪಿಗಳನ್ನು ಬಳಸಿಕೊಂಡು ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ (Social Media) ನಕಲಿ ಖಾತೆಗಳನ್ನು ರಚಿಸಿ ತಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿ ಜನರಿಗೆ ವಂಚಿಸುತ್ತಿದ್ದರು. ಇದು ಭಾರತದ ಸಿಮ್ ಆಗಿರುವುದರಿಂದ ಜನರು ಅದನ್ನು ಬಹುಬೇಗ ನಂಬಿಬಿಡುತ್ತಿದ್ದರು. ಆದರೆ ನಿಜಾಂಶವೇನೆಂದರೆ ಅದು ಭಾರತೀಯರ ಹೆಸರಿನಲ್ಲಿದ್ದು, ಪಾಕಿಸ್ತಾನದ ಏಜೆಂಟ್‌ಗಳು ಅದನ್ನು ಕಂಟ್ರೋಲ್ ಮಾಡುತ್ತಾರೆ. ಇದನ್ನೂ ಓದಿ: ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಬಂಧಿತ ಆರೋಪಿಗಳಿಂದ 19 ಮೊಬೈಲ್ ಫೋನ್‌ಗಳು, 47 ಪ್ರೀ-ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳು, 61 ಎಟಿಎಮ್ ಕಾರ್ಡ್‌ಗಳು, 21 ಸಿಮ್ ಕವರ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಉಗ್ರರ ಸುರಂಗವನ್ನು ಭೇದಿಸಿದ ಭದ್ರತಾ ಪಡೆ – ಅನಂತ್‌ನಾಗ್‌ನಲ್ಲಿ ಗುಂಡಿನ ಚಕಮಕಿ

    ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತ ವಿರೋಧಿ ಚಟುವಟಿಕೆಗಳಾದ ಭಯೋತ್ಪಾದಕರೊಂದಿಗೆ ಸಂಪರ್ಕ, ಹನಿ ಟ್ರ್ಯಾಪಿಂಗ್, ಭಾರತದ ವಿರುದ್ಧ ಅಪಪ್ರಚಾರ, ಲೈಂಗಿಕ ದೌರ್ಜನ್ಯ ಮುಂತಾದ ಕೃತ್ಯಗಳನ್ನು ಮಾಡಲು ಈ ಸಿಮ್‌ಕಾರ್ಡ್‌ಗಳು ಹಾಗೂ ಒಟಿಪಿಗಳು ಸಹಾಯ ಮಾಡುತ್ತದೆ. ಇದನ್ನೂ ಓದಿ: ಒಂದು ಧಾರ್ಮಿಕ ಪೋಸ್ಟ್‌ಗೆ ನಡೀತು ಭಾರೀ ಘರ್ಷಣೆ – 1 ಸಾವು, 8 ಮಂದಿಗೆ ಗಾಯ