Tag: Ishaq Dar

  • ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್‌ ದಾರ್‌ (Ishaq Dar) ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಗೆ ಸಂಸತ್‌ನಲ್ಲಿ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನ ಸಂಸತ್ತಿನಲ್ಲಿ ಭಾಷಣ ಮಾಡುವಾಗ, ಪಹಲ್ಗಾಮ್‌ ದಾಳಿಯನ್ನ (Pahalgam attack) ಟಿಆರ್‌ಎಫ್‌ ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ ಎಂದು ಕೇಳಿರುವ ಇಶಾಕ್‌ ದಾರ್‌ ಉಗ್ರ ಸಂಘಟನೆಗೆ ನೇರ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    USA designates LeT offshoot TRF behind the Pahalgam attack as terrorist organisation Setback for Pakistan

    ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿ (Pahalgam Attack) ಎಸಗಿದ ಪಾಕಿಸ್ತಾನ (Pakistan) ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಅಮೆರಿಕದ ವಿದೇಶಾಂಗ ಇಲಾಖೆ ಒಂದು ದಿನದ ಹಿಂದಷ್ಟೇ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕದ ಈ ಹೇಳಿಕೆ ಬೆನ್ನಲ್ಲೇ ಪಾಕ್‌ ಉಪ ಪ್ರಧಾನಿ ಸಂಸತ್‌ನಲ್ಲಿ ಟಿಆರ್‌ಎಫ್‌ ಪರ ಧ್ವನಿ ಎತ್ತಿದ್ದಾರೆ.  ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

    ಸಂಸತ್‌ನಲ್ಲಿ ಮಾತನಾಡಿದ ಇಶಾಕ್‌ ದಾರ್‌, ಅಮೆರಿಕ ಟಿಆರ್‌ಎಫ್‌ ಅನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಗುಂಪು ಟಿಆರ್‌ಎಫ್‌. ಇದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ನ ಪ್ರಾಕ್ಸಿ ಕೂಡ ಆಗಿದೆ ಅಂತ ಅಮೆರಿಕ ಹೇಳಿದೆ. ಯುಎನ್‌ಎಸ್‌ಸಿ ಹೇಳಿಕೆಯಲ್ಲಿ ಟಿಆರ್‌ಎಫ್ ಉಲ್ಲೇಖವನ್ನು ನಾವು ವಿರೋಧಿಸುತ್ತೇವೆ. ಪಾಕಿಸ್ತಾನ ಇದನ್ನ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಯ್ತು ಏರ್ ಇಂಡಿಯಾ ವಿಮಾನ

    Pahalgam Terror Attack 2 1

    ಟಿಆರ್‌ಎಫ್‌ ಅನ್ನು ಅಕ್ರಮವೆಂದು ನಾವು ಪರಿಗಣಿಸಲ್ಲ, ಪಹಲ್ಗಾಮ್‌ ದಾಳಿಯನ್ನ ಅವರೇ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿ ತೋರಿಸಿ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

  • ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಇಸ್ಲಾಮಾಬಾದ್‌: ಭಾರತ ಭಾರೀ ನಷ್ಟ ಅನುಭವಿಸುತ್ತಿರುವುದರಿಂದ 2 ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಅಂತ ಪಾಕಿಸ್ತಾನದ (Pakistan) ಸಚಿವ ಇಶಾಕ್‌ ದಾರ್‌ (Ishaq Dar) ಹೇಳಿದ್ದಾರೆ.

    ಗಡಿಯಲ್ಲಿ ಭಾರತದಿಂದ ಉಂಟಾದ ಭಾರೀ ನಷ್ಟಗಳ ಬಗ್ಗೆ ವರದಿಯಾಗುತ್ತಿದ್ದಂತೆ ಇಸ್ಲಾಮಾಬಾದ್‌ನಲ್ಲಿ (Islamabad) ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಪಾಕಿಸ್ತಾನ ಶಾಂತಿ ಮಾತುಕತೆಗೆ ಸಿದ್ಧವಾಗಿದ್ದರೂ ಭಾರತ ಆಸಕ್ತಿ ತೋರುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಸಿಂಧೂ ಜಲ ಒಪ್ಪಂದ ಸೇರಿದಂತೆ ಬಹು ವಿವಾದಾತ್ಮಕ ವಿಷಯಗಳನ್ನೊಳಗೊಂಡ ಸಮಗ್ರ ಚರ್ಚೆಗೆ ಪಾಕಿಸ್ತಾನ ಮುಕ್ತವಾಗಿದೆ. ಆದ್ರೆ ಭಾರತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಾತ್ರ ತೊಡಗಿಕೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಪ್ರೇಮಿ ಪಾಕ್‌ಗೆ ಮಿಲಿಟರಿ ಬಜೆಟ್ಟೇ ಭಸ್ಮಾಸುರ!?

    ಮುಂದುವರಿದು.. ಭಾರತದ ಎಲ್‌ಒಸಿ ಬಳಿ ಗಡಿಯಾಚೆಗಿನ ಭಯೋತ್ಪಾದನೆ ಕಾರ್ಯಾಚರಣೆ ವೇಳೆ ಭಾರೀ ನಷ್ಟ ಅನುಭವಿಸಿದೆ ಅನ್ನೋ ಮಾಹಿತಿಗಳು ಬಂದಿವೆ ಎಂದಿದ್ದಾರೆ. ಆದ್ರೆ ಪಾಕಿಸ್ತಾನದ ಉತ್ತನ ಅಧಿಕಾರಿಗಳು ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಬಳಿಕ ನಡೆದ ಭದ್ರತಾ ಸಂಪುಟ ಸಮಿತಿಯಲ್ಲಿ ಭಾರತ ಸಿಂಧೂ ಜಲಒಪ್ಪಂದವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಆದ್ರೆ ಪಾಕಿಸ್ತಾನದ ಶೇ.80 ರಷ್ಟು ಕೃಷಿ ಭೂಮಿಗೆ ಈ ನೀರಿನ ಮೂಲವೇ ಆಧಾರವಾಗಿದೆ. ಸದ್ಯ ಭಾರತದಿಂದ ನೀರಿನ ಪ್ರಮಾಣ ಇಳಿಕೆ ಮಾಡಿರೋದ್ರಿಂದ ಕೃಷಿಯಲ್ಲೂ ಪಾಕಿಸ್ತಾನ ನಷ್ಟ ಅನುಭವಿಸುವ ಆತಂಕದಲ್ಲಿದೆ ಎಂದು ತಿಳಿದುಬಂದಿದೆ.

  • ಉಗ್ರರ ಪೋಷಕ ಪಾಕಿಸ್ತಾನಕ್ಕೆ ಮತ್ತೆ ಬೆಂಬಲ ಘೋಷಿಸಿದ ಚೀನಾ

    ಉಗ್ರರ ಪೋಷಕ ಪಾಕಿಸ್ತಾನಕ್ಕೆ ಮತ್ತೆ ಬೆಂಬಲ ಘೋಷಿಸಿದ ಚೀನಾ

    – ಪಾಕ್‌ಗೆ ಚೀನಾ ದೃಢವಾಗಿ ನಿಲ್ಲುವುದು ಮುಂದುವರಿಯುತ್ತದೆ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

    ಬೀಜಿಂಗ್: ಭಯೋತ್ಪಾದನೆ ಪೋಷಕ ಪಾಕಿಸ್ತಾನಕ್ಕೆ ಚೀನಾ (China) ಮತ್ತೆ ಬೆಂಬಲ ವ್ಯಕ್ತಪಡಿಸಿದೆ. ಪಾಕಿಸ್ತಾನದ (Pakistan) ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ತನ್ನ ದೇಶವು ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ (Wang Yi) ಹೇಳಿಕೆ ನೀಡಿದ್ದಾರೆ.

    ನನ್ನ ಜೊತೆಗೆ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಸಚಿವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪಾಕ್‌ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ತಿಳಿಸಿದ್ದಾನೆ.‌ ಇದನ್ನೂ ಓದಿ: ನಾಗ್ರೋಟಾದಲ್ಲಿ ಭಾರತೀಯ ಸೇನೆ & ಉಗ್ರರ ನಡುವೆ ಗುಂಡಿನ ಚಕಮಕಿ

    ಸಂಭಾಷಣೆಯ ಸಮಯದಲ್ಲಿ ವಾಂಗ್ ಯಿಗೆ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ದಾರ್‌ ವಿವರಿಸಿದ್ದಾನೆ. ಸವಾಲಿನ ಸಂದರ್ಭಗಳಲ್ಲಿ ಪಾಕಿಸ್ತಾನ ಸಂಯಮ ಮತ್ತು ಅದರ ಜವಾಬ್ದಾರಿಯುತವಾಗಿ ವರ್ತಿಸಿದೆ ಎಂದು ಚೀನಾದ ವಾಂಗ್‌ ಯಿ ಮಾತನಾಡಿದ್ದಾರೆ.

    ಪ್ರತ್ಯೇಕವಾಗಿ, ದಾರ್ ಮತ್ತು ಯುಎಇ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅವರೊಂದಿಗೆ ಮಾತನಾಡಿದ್ದಾನೆ. ಪಾಕಿಸ್ತಾನ ಮತ್ತು ಭಾರತ ನಡುವಿನ ಕದನ ವಿರಾಮ ಒಪ್ಪಂದವನ್ನು ಸ್ವಾಗತಿಸಿದ್ದಾನೆ ಎನ್ನಲಾಗಿದೆ. ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಜೊತೆಗೆ ದಾರ್ ಮಾತನಾಡಿ, ಈ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿದ್ದಾನೆ. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ

    ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ರಷ್ಯಾ, ಇಸ್ರೇಲ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಆದರೆ, ಚೀನಾ ಮತ್ತು ಟರ್ಕಿ ಮಾತ್ರ ಪಾಕಿಸ್ತಾನ ಪರ ಬೆಂಬಲ ಘೋಷಿಸಿವೆ.

  • ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ

    – ಭಾರತವೂ ಕದನವಿರಾಮಕ್ಕೆ ಒಪ್ಪಿದೆ ಎಂದ ಪಾಕಿಸ್ತಾನ

    ಇಸ್ಲಾಮಾಬಾದ್: ಪಾಕಿಸ್ತಾನ (Pakistan) ಹಾಗೂ ಭಾರತ (India) ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಫೋರ್ಜ್, ಮಹೀಂದ್ರಾ ಕಂಪನಿಗಳಿಗೆ ಯುದ್ಧ ಸಾಮಗ್ರಿ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ

    ಕದನವಿರಾಮಕ್ಕೆ ಭಾರತವೂ ಒಪ್ಪಿದೆ ಎಂದು ಇಶಾಕ್ ದಾರ್ ತಿಳಿಸಿದ್ದಾರೆ. ಆದರೆ ಭಾರತ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇದನ್ನೂ ಓದಿ: ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್‌ ಘೋಷಣೆ

    ಎರಡೂ ದೇಶಗಳ ಜೊತೆ ಯಶಸ್ವಿಯಾಗಿ ಮಾತುಕತೆ ನಡೆಸಿದ್ದು, ತಕ್ಷಣದ ಕದನ ವಿರಾಮಕ್ಕೆ ಉಭಯ ರಾಷ್ಟçಗಳು ಒಪ್ಪಿಗೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಕ್ಸ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್‌ ಪ್ಯಾಕೇಜ್‌ ಸ್ಥಗಿತ

  • ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಪಾಕ್ ಉಪಪ್ರಧಾನಿ ಇಶಾಕ್ ದಾರ್

    ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಪಾಕ್ ಉಪಪ್ರಧಾನಿ ಇಶಾಕ್ ದಾರ್

    ಇಸ್ಲಾಮಾಬಾದ್: ನಮ್ಮ ಮೇಲಿನ ಭಾರತದ ದಾಳಿಯನ್ನು ಖಂಡಿಸುತ್ತೇವೆ ಎಂದು ಪಾಕ್ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್(Ishaq Dar) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಭಾರತದ ಆಕ್ರಮಣವನ್ನು ಪಾಕಿಸ್ತಾನ(Pakistan) ಬಲವಾಗಿ ಖಂಡಿಸುತ್ತದೆ, ಇದು ಪಾಕಿಸ್ತಾನದ ಸಾರ್ವಭೌಮತ್ವ, ವಿಶ್ವಸಂಸ್ಥೆಯ, ಅಂತರರಾಷ್ಟ್ರೀಯ ಕಾನೂನು ಹಾಗೂ ಅಂತರ-ರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪಹಲ್ಗಾಮ್ ದಾಳಿಯ(Pahalgam Attack) ನಂತರ, ಭಾರತೀಯ ನಾಯಕತ್ವವು ಮತ್ತೊಮ್ಮೆ ಭಯೋತ್ಪಾದನೆಯ ನೆಪವನ್ನು ಮುಂದಕ್ಕೆ ಕೊಂಡೊಯ್ಯಲು ಬಳಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ – ಆಕ್ರೋಶದ ಬೆನ್ನಲ್ಲೇ ಕಾಂಗ್ರೆಸ್‌ ಪೋಸ್ಟ್‌ ಡಿಲೀಟ್‌

    ಭಾರತದ ಈ ದಾಳಿಯು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಭಾರತದ ಅಜಾಗರೂಕ ಕ್ರಮವು ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳನ್ನು ಪ್ರಮುಖ ಸಂಘರ್ಷಕ್ಕೆ ಹತ್ತಿರ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: Operation Sindoor | 23 ನಿಮಿಷದ ದಾಳಿಗೆ 80ಕ್ಕೂ ಹೆಚ್ಚು ಉಗ್ರರು ಮಟ್ಯಾಶ್‌

    ಇಂದು ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ೯ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿದ್ದು, ೧೦೦ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದ ಈ ದಾಳಿಗೆ ಇದೀಗ ಪಾಕಿಸ್ತಾನವು ಪತರುಗುಟ್ಟಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

  • ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ಇಸ್ಲಾಮಾಬಾದ್:‌ ನಾವು ಭಾರತದ ಜೊತೆಗಿದ್ದೇವೆ. ಪಾಕಿಸ್ತಾನ ಯಾವಾಗಲೂ ಉತ್ತಮ ನೆರೆಹೊರೆ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಶಾಕ್ ದಾರ್, ಭಾರತದೊಂದಿಗಿನ ಸಂಬಂಧದ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದರು. ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ (India) ಉತ್ತಮ ಸಂಬಂಧವನ್ನು ಹೊಂದಲು ಉತ್ಸುಕವಾಗಿದೆ ಎಂದು ಹೇಳಿದರು.

    ಭಾರತದೊಂದಿಗಿನ ನಮ್ಮ ಸಂಬಂಧವು ಐತಿಹಾಸಿಕವಾಗಿ ಕಳಪೆಯಾಗಿದೆ. ಆದರೆ ಪಾಕಿಸ್ತಾನವು ಶಾಶ್ವತ ಹಗೆತನವನ್ನು ಬಯಸುವುದಿಲ್ಲ. ಪರಸ್ಪರ ಗೌರವ, ಸಾರ್ವಭೌಮ ಸಮಾನತೆ ಮತ್ತು ದೀರ್ಘಕಾಲದ ಜಮ್ಮು ಮತ್ತು ಕಾಶ್ಮೀರ ವಿವಾದದ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರದ ಆಧಾರದ ಮೇಲೆ ನಾವು ಭಾರತದೊಂದಿಗೆ ಉತ್ತಮ ನೆರೆಯ ಸಂಬಂಧಗಳನ್ನು ಬಯಸುತ್ತೇವೆ ಎಂದಿದ್ದಾರೆ.

    ಇದೇ ವೇಳೆ ಎರಡು ಪರಮಾಣು ಸಶಸ್ತ್ರ ನೆರೆಹೊರೆಯವರ ನಡುವಿನ ದ್ವಿಪಕ್ಷೀಯ ಸಂಬಂಧಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮೋದಿ ಸರ್ಕಾರಕ್ಕೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್‌ ಆಗ್ತಿದ್ದ ಮಹಿಳೆಗೆ ಹೆಚ್‌ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ

    ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸಂಪೂರ್ಣ ಬಹುಮತ ಪಡೆಯುವ ಮೂಲಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿದ್ದಾರೆ. ಈ ಹಿನ್ನೆಲೆ ಮೋದಿಯವರಿಗೆ ವಿಶ್ವಾದ್ಯಂತ ನಾಯಕರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ ಹಲವು ದೇಶಗಳು ಕೂಡ ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕೆ ಒತ್ತು ನೀಡುತ್ತಿವೆ. ಈ ನಡುವೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರ ಪಾಕಿಸ್ತಾನ ಈ ಮಹತ್ವದ ಹೇಳಿಕೆಯೊಂದನ್ನು ನೀಡಿದೆ.

  • ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್‌ ಸಿದ್ಧ – ಹಣಕಾಸು ಸಚಿವ

    ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್‌ ಸಿದ್ಧ – ಹಣಕಾಸು ಸಚಿವ

    ವಾಷಿಂಗ್ಟನ್‌: ನೆರೆಯ ಭಾರತಕ್ಕೆ (India) ಒದಗಿಸುವ ದರದಲ್ಲಿ ರಷ್ಯಾದಿಂದ (Russia) ಇಂಧನವನ್ನು (Fuel) ಖರೀದಿಸಲು ತಮ್ಮ ದೇಶ ಸಿದ್ಧವಾಗಿದೆ ಎಂದು ಪಾಕಿಸ್ತಾನದ (Pakistan) ಹಣಕಾಸು ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.

    ದೇಶದ ನೂತನ ಹಣಕಾಸು ಸಚಿವರಾಗಿರುವ ಇಶಾಕ್ ದಾರ್ ಅವರು ಅಮೆರಿಕಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದಿಂದ ಸಂಕಷ್ಟ ಎದುರಾಗಿದ್ದರೂ ಪಾಶ್ಚಿಮಾತ್ಯ ದೇಶಗಳಿಂದ ರಿಯಾಯಿತಿ ದರದಲ್ಲಿ ಇಂಧನ ಆಮದು ಮಾಡಿಕೊಳ್ಳಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ

    ನಾನು ವಾಷಿಂಗ್ಟನ್‌ನಲ್ಲಿ 4 ದಿನಗಳ ವಾಸ್ತವ್ಯದ ಅವಧಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಯುಎಸ್, ಸೌದಿ ಅರೇಬಿಯಾ ಮತ್ತು ಇತರ ದೇಶಗಳ ಅಧಿಕಾರಿಗಳೊಂದಿಗೆ 58 ಸಭೆಗಳನ್ನು ನಡೆಸಿದ್ದೇನೆ ಇಶಾಕ್‌ ಮಾಹಿತಿ ನೀಡಿದ್ದಾರೆ.

    ಪಾಕಿಸ್ತಾನದಲ್ಲಿನ ಪ್ರವಾಹದ ಕುರಿತು ಚರ್ಚಿಸಲು ಆಯೋಜಿಸಲಾದ ದುಂಡುಮೇಜಿನ ಸಮ್ಮೇಳನದಲ್ಲಿ, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಅಧಿಕಾರಿಗಳು ಜಂಟಿ ವರದಿಯನ್ನು ಅಲ್ಲಿ ಮಂಡಿಸಿದರು ಎಂದು ಪಾಕಿಸ್ತಾನದ ಹಣಕಾಸು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ಪ್ರವಾಹದಿಂದಾಗಿ ಪಾಕಿಸ್ತಾನವು 32.40 ಶತಕೋಟಿ ಡಾಲರ್‌ ನಷ್ಟ ಅನುಭವಿಸಿದೆ. 16 ಶತಕೋಟಿ ಡಾಲರ್‌ಗೂ ಹೆಚ್ಚು ಹಣ ಪುನರ್ವಸತಿ ಕಾರ್ಯಕ್ಕೆ ಪಾಕಿಸ್ತಾನಕ್ಕೆ ಅಗತ್ಯವಿದೆ ಎಂದು ಸಚಿವರು ಇದೇ ವೇಳೆ ಉಲ್ಲೇಖಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ಳ, ಕಳ್ಳ – ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಹಣಕಾಸು ಸಚಿವನಿಗೆ ನಿಂದನೆ

    ಸುಳ್ಳ, ಕಳ್ಳ – ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಹಣಕಾಸು ಸಚಿವನಿಗೆ ನಿಂದನೆ

    ವಾಷಿಂಗ್ಟನ್: ಪಾಕಿಸ್ತಾನದ (Pakistan) ನೂತನ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಇಶಾಕ್ ದಾರ್ (Ishaq Dar) ಅವರು ಅಮೆರಿಕಗೆ (America) ಭೇಟಿ ನೀಡಿದ್ದ ಸಂದರ್ಭ ಕೆಲ ಅಪರಿಚಿತ ವ್ಯಕ್ತಿಗಳು ಅವರಿಗೆ ಸುಳ್ಳುಗಾರ, ಕಳ್ಳ ಎಂದು ನಿಂದಿಸಿರುವ ಘಟನೆ ನಡೆದಿದೆ. ಇದರಿಂದ ಸಚಿವರು ಕೂಡಾ ಕಿಡಿಯಾಗಿದ್ದಾರೆ.

    ಜಾಗತಿಕ ಸಾಲ ನೀಡುವ ಸಂಸ್ಥೆಗಳೊಂದಿಗೆ ಸಭೆಗಳಲ್ಲಿ ಭಾಗವಹಿಸಲು ಹಾಗೂ ನಗದು ಕೊರತೆ ಮತ್ತು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಹೆಚ್ಚು ಅಗತ್ಯವಿರುವ ನೆರವು ಪಡೆಯಲು ಇಶಾಕ್ ದಾರ್ ಅವರು ವಾಷಿಂಗ್ಟನ್ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ (Airport) ಅವರಿಗೆ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.

    ಘಟನೆಯ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕೆಲ ವ್ಯಕ್ತಿಗಳು ದಾರ್ ಅವರನ್ನು ಚೋರ್ ಚೋರ್ (ಕಳ್ಳ ಕಳ್ಳ) ಎಂದು ಗೇಲಿ ಮಾಡಿರುವುದು ಕಂಡುಬಂದಿದೆ. ಇದರಿಂದ ಕಿಡಿಯಾದ ಸಚಿವರು ಲೇವಡಿ ಮಾಡಿದ ವ್ಯಕ್ತಿಗಳಿಗೆ ಪ್ರತ್ಯುತ್ತರವಾಗಿ, ನೀನು ಸುಳ್ಳುಗಾರ, ಕಳ್ಳ ಎಂದು ಖಾರವಾಗಿ ನುಡಿದಿದ್ದಾರೆ. ಇದನ್ನೂ ಓದಿ: ಜಿನ್‌ಪಿಂಗ್ ವಿರುದ್ಧ ಭುಗಿಲೆದ್ದ ಚೀನಾದ ಜನ – ಅಪರೂಪದಲ್ಲಿ ಕಂಡುಬಂತು ಬ್ಯಾನರ್

    72 ವರ್ಷದ ಇಶಾಕ್ ದಾರ್ ಅವರು ಮಿಫ್ತಾ ಇಸ್ಮಾಯಿಲ್ ಅವರ ಬಳಿಕ ಇತ್ತೀಚೆಗೆ ಪಾಕಿಸ್ತಾನದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ಅಮೆರಿಕಗೆ ತೆರಳಿದ್ದರು.

    ಕಳೆದ ತಿಂಗಳು ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ದೇಶ ಆರ್ಥಿಕವಾಗಿ ನಲುಗಿ ಹೋಗಿದೆ. ಇದೀಗ ಪಾಕಿಸ್ತಾನ ಅಂತಾರಾಷ್ಟ್ರೀಯ ಸಾಲದಾತರ ಮೊರೆ ಹೋಗಿದೆ. ಇದನ್ನೂ ಓದಿ: ರಷ್ಯಾದಿಂದ ದೆಹಲಿಗೆ ಬಂದ ವಿಮಾನದಲ್ಲಿ ಬಾಂಬ್ ಬೆದರಿಕೆ – ದೆಹಲಿ ಏರ್‌ಪೋರ್ಟ್ ಹೈ ಅಲರ್ಟ್

    Live Tv
    [brid partner=56869869 player=32851 video=960834 autoplay=true]