Tag: Ishaan Khatter

  • ಮೂರು ವರ್ಷದ ಪ್ರೀತಿ ಖತಂ: ಅನನ್ಯಾ ಪಾಂಡೆ ದೂರವಾಗಲು ಕಾರಣವೇನು?

    ಮೂರು ವರ್ಷದ ಪ್ರೀತಿ ಖತಂ: ಅನನ್ಯಾ ಪಾಂಡೆ ದೂರವಾಗಲು ಕಾರಣವೇನು?

    ಸಿನಿಮಾ ರಂಗದಲ್ಲಿ ಲವ್ ಸ್ಟೋರಿಗಳಿಗೇನು ಕಮ್ಮಿ ಇಲ್ಲ. ಸ್ಯಾಂಡಲ್ವುಡ್, ಬಾಲಿವುಡ್‌ನಲ್ಲಿ ಕೆಲವು ಪ್ರೇಮ್ ಕಹಾನಿಗಳ ಸುದ್ದಿಯಾಗುತ್ತಲೆ ಇರುತ್ತದೆ. ಇದೀಗ ಬಾಲಿವುಡ್ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಬರೋಬ್ಬರಿ ಮೂರು ವರ್ಷಗಳ ಕಾಲ ಜೊತೆಗೆ ಇದ್ದು, ಇದೀಗ ಬೇರೆಯಾಗಲು ನಿರ್ಧರಿಸಿದ್ದಾರೆ.


    ಕಳೆದ ಕೆಲವು ವರ್ಷಗಳಿಂದ, ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಪಾರ್ಟಿಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಆದರೆ ಈ ಜೋಡಿ ಬೇರೆಯಾಗಿ ಜೀವನ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?


    ಮೂಲಗಳ ಪ್ರಕಾರ, ಅನನ್ಯ ಪಾಂಡೆ ಮತ್ತು ಇಶಾನ್ ಖಟ್ಟರ್ ‘ಖಾಲಿ ಪೀಲಿ’ಯ ಸೆಟ್‌ಗಳಲ್ಲಿ ಇಬ್ಬರು ಒಳ್ಳೆಯವ ಬಾಂಧವ್ಯ ಹೊಂದಿದ್ದರು. ಇದು ಇವರ ಹೊಸ ಪ್ರಯಾಣದ ಆರಂಭಕ್ಕೆ ಕಾರಣವಾಯಿತು. 3 ವರ್ಷಗಳ ಕಾಲ ಒಟ್ಟಿಗೆ ಇದ್ದರು. ನಂತರ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಇಬ್ಬರು ಪರಸ್ಪರ ಒಪ್ಪಿಕೊಂಡಿದ್ದಾರೆ. ಇಬ್ಬರು ಮುಂದೆ ಚೆನ್ನಾಗಿರುತ್ತೇವೆ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ 


    ಒಂದು ತಿಂಗಳ ಹಿಂದೆ, ಶಾಹಿದ್ ಕಪೂರ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇಶಾನ್ ಮತ್ತು ಅನನ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಬೇರೆ ಬೇರೆಯಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆಫರ್ ಬಂದರೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಬಹುದು. ಕೆಲವು ವಿವಾರವಾಗಿ ಇಬ್ಬರ ನಡುವೆ ಮನಸ್ತಾಪವಾಗಿ ದೂರವಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.