Tag: Isha Yoga Center

  • ಇಶಾ ಫೌಂಡೇಶನ್‌ ಶಿವರಾತ್ರಿ ಕಾರ್ಯಕ್ರಮ – ಅಮಿತ್‌ ಶಾ, ಡಿಕೆ ಶಿವಕುಮಾರ್‌ ಭಾಗಿ

    ಇಶಾ ಫೌಂಡೇಶನ್‌ ಶಿವರಾತ್ರಿ ಕಾರ್ಯಕ್ರಮ – ಅಮಿತ್‌ ಶಾ, ಡಿಕೆ ಶಿವಕುಮಾರ್‌ ಭಾಗಿ

    ಕೊಯಮತ್ತೂರು: ಇಶಾ ಫೌಂಡೇಶನ್‌ ವತಿಯಿಂದ ಆಯೋಜನೆಯಾಗಿರುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್‌ ಶಾ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಭಾಗಿಯಾಗಿದ್ದಾರೆ.

    ಇಶಾ ಯೋಗ ಕೇಂದ್ರದಲ್ಲಿ ಮಹಾ ಶಿವರಾತ್ರಿ ಆಚರಣೆಗಳು ಬುಧವಾರ ಸಂಜೆ 6 ಗಂಟೆಯಿಂದ ಆರಂಭವಾಗಿ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಸಾವಿರಾರು ಜನರು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಮಧ್ಯದಲ್ಲಿ ಕುಳಿತಿದ್ದರೆ ಬಲಗಡೆ ಡಿಕೆ ಶಿವಕುಮಾರ್‌, ಎಡಗಡೆ ಅಮಿತ್‌ ಶಾ ಕುಳಿತಿದ್ದಾರೆ.

    ಪ್ರತಿ ವರ್ಷ ಇಶಾ ಫೌಂಡೇಶ್‌ ವತಿಯಿಂದ ಶಿವರಾತ್ರಿ ಜಾಗರಣೆ ನಡೆಯುತ್ತದೆ. ಅಹೋರಾತ್ರಿ ನೃತ್ಯ, ಸಂಗೀತ ಕಾರ್ಯಕ್ರಮ ಆಯೋಜನೆ ಆಗಿರುತ್ತದೆ.

     

  • ಇಶಾ ಫೌಂಡೇಷನ್ ನಲ್ಲಿ ಶಿವರಾತ್ರಿ ಸಂಭ್ರಮ – ಆಹೋರಾತ್ರಿ ಕಾರ್ಯಕ್ರಮ

    ಇಶಾ ಫೌಂಡೇಷನ್ ನಲ್ಲಿ ಶಿವರಾತ್ರಿ ಸಂಭ್ರಮ – ಆಹೋರಾತ್ರಿ ಕಾರ್ಯಕ್ರಮ

    ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ ಮಹಾ ಶಿವರಾತ್ರಿ ಆಚರಣೆ ಆರಂಭವಾಗಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಗುತ್ತದೆ. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿ ಕಾರ್ಯಕ್ರಮವನ್ನು ನೀಡಲಿದ್ದಾರೆ.

    ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.