Tag: Isha Deol

  • ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗುತ್ತಾ ಅವಕಾಶ?

    ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗುತ್ತಾ ಅವಕಾಶ?

    ಲ್ಮಾನ್ ಖಾನ್ ಮತ್ತು ಇತರರು ನಟಿಸಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕರು. 2005ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್ ನಟಿಸಿದ್ದಾರೆ. ಈ ಬಾರಿ ಅಷ್ಟೂ ಪಾತ್ರಗಳು ತ್ರಿಪಾತ್ರಗಳು ಎನ್ನಲಾಗುತ್ತಿದ್ದು, ಪ್ರತಿ ಪಾತ್ರಕ್ಕೂ ಒಬ್ಬೊಬ್ಬ ಹಿರೋಯಿನ್ ಇರಲಿದ್ದಾರೆ. ಅಲ್ಲಿಗೆ ಒಂಬತ್ತು ನಾಯಕಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೋರ್ವ ನಟಿ ಕೂಡ ವಿಶೇಷ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.  

    ನಿರ್ದೇಶಕ ಅನೀಸ್ ಬಾಜ್ಮಿ ಹೇಳುವಂತೆ ಈ ಹಿಂದೆ ನೋ ಎಂಟ್ರಿ ಸಿನಿಮಾದಲ್ಲಿ ನಟಿಸಿದ್ದ, ಅಷ್ಟೂ ಕಲಾವಿದರು ಸಿಕ್ವೆಲ್‌ನಲ್ಲಿ ನಟಿಸಲು ಉತ್ಸುಕರಾಗಿದ್ದು, ಶೀಘ್ರದಲ್ಲೇ ಹಲವು ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಆದಷ್ಟು ಬೇಗ ಶೂಟಿಂಗ್ ಶುರು ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈಗಾಗಲೇ ಹಲವರೊಂದಿಗೆ ಮಾತುಕತೆ ಕೂಡ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. ಈ ಹೊಸ ಚಿತ್ರಕ್ಕೆ ನೋ ಎಂಟ್ರಿ ಮೇ ಎಂಟ್ರಿ ಎಂದು ಹೆಸರಿಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    salman

    ಇಶಾ ಡಿಯೋಲ್, ಬಿಪಾಶಾ ಬಸು, ಸೆಲಿನಾ ಜೇಟ್ಲಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ಸ್ಯಾಂಡಲ್‌ವುಡ್ ಮೂಲಕ ನಾಯಕಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೇ, ದಕ್ಷಿಣದ ಕೆಲವು ತಾರೆಯರು ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ಸಲ್ಮಾನ್ ಖಾನ್ ಕಭಿ ಈದ್ ಕಭಿ ದೀವಾಲಿ ಚಿತ್ರೀಕರಣದಲ್ಲಿದ್ದು, ಈ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಹಾಗಾಗಿ ದಕ್ಷಿಣದ ತಾರೆಯರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. 

     

    Live Tv