Tag: Isha Ambani

  • Reliance Retail Smart; ಸ್ಮಾರ್ಟ್ ಬಜಾರ್ ಗಮನ ಈಗ ಪ್ರೀಮಿಯಂ ವಸ್ತುಗಳ ಮಾರಾಟ, ಪ್ರಾದೇಶಿಕ ವಿಸ್ತರಣೆಗೆ

    Reliance Retail Smart; ಸ್ಮಾರ್ಟ್ ಬಜಾರ್ ಗಮನ ಈಗ ಪ್ರೀಮಿಯಂ ವಸ್ತುಗಳ ಮಾರಾಟ, ಪ್ರಾದೇಶಿಕ ವಿಸ್ತರಣೆಗೆ

    ಮುಂಬೈ: ಪ್ರೀಮಿಯಂ ಕೊಡುಗೆಗಳ ಜೊತೆಗೆ ರಿಲಯನ್ಸ್ ಸ್ಮಾರ್ಟ್ (Reliance Retail Smart) ಹಾಗೂ ಸ್ಮಾರ್ಟ್ ಬಜಾರ್ (Smart Bazaar) ತಮ್ಮ ಉತ್ಪನ್ನಗಳ ಪೋರ್ಟ್ ಫೋಲಿಯೋ ವೈವಿಧ್ಯಗೊಳಿಸುತ್ತಿದೆ.

    ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ವಿಲಾಸಿ ಗುಣಮಟ್ಟದ ದೇಹ ಸುಗಂಧ (ಲಘುವಾದ ಹಾಗೂ ಹೆಚ್ಚು ಘಾಟಿಲ್ಲದಂತೆ ವಾಸನೆ ಬೀರುವಂಥ ದ್ರವ್ಯ- ಬಾಡಿ ಮಿಸ್ಟ್) ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ, ಹಗುರವಾದ ಚರ್ಮ ರಕ್ಷಕ ಉತ್ಪನ್ನಗಳು (ಸೆರಮ್) ಒಳಗೊಂಡಂತೆ ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ರಿಲಯನ್ಸ್ ರಿಟೇಲ್ ಸಿಎಫ್ಒ ಆದ ದಿನೇಶ್ ತಲುಜಾ ಅವರು ಪ್ರೀಮಿಯಂ ವಸ್ತುಗಳ ಕಡೆಗೆ ಏರುತ್ತಿರುವ ಟ್ರೆಂಡ್‌ನ ಬಗ್ಗೆ ಗಮನ ಸೆಳೆದಿದ್ದಾರೆ. ಅದರಿಂದಾಗಿ ಹೆಚ್ಚುತ್ತಿರುವ ಸರಾಸರಿ ಬಿಲ್ ಮೌಲ್ಯ ಹಾಗೂ ಉತ್ತಮ ಮಾರ್ಜಿನ್‌ಗಳ ಬಗ್ಗೆಯೂ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಸ್ಮಾರ್ಟ್ ಹಾಗೂ ಸ್ಮಾರ್ಟ್ ಬಜಾರ್‌ನ ಇತ್ತೀಚಿನ ‘ಫುಲ್ ಪೈಸಾ ವಸೂಲ್ ಸೇಲ್’ ಮಾರಾಟವು ವರ್ಷದಿಂದ ವರ್ಷಕ್ಕೆ 21%ರಷ್ಟು ಮಾರಾಟ ಹೆಚ್ಚಳವನ್ನು ಕಂಡಿದೆ. ಈ ವೇಳೆ ಗೃಹೋಪಯೋಗಿ ಮತ್ತು ಪರ್ಸನಲ್ ಕೇರ್ ವಸ್ತುಗಳು ಹೆಚ್ಚು ಮಾರಾಟವಾಗಿವೆ. ಅವರ ಪ್ರಾದೇಶಿಕ ಅಸ್ತಿತ್ವವು ಬೆಳವಣಿಗೆಯ ಅವಕಾಶಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 2023-24ರ ನಾಲ್ಕನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳ ಪ್ರಕಟಣೆ ವೇಳೆ ದಿನೇಶ್ ತಲುಜಾ ಅವರು ಮಾತನಾಡಿ, ನಾವು ದೇಶದಲ್ಲಿ ತಳ ಮಟ್ಟದಲ್ಲೂ ಮಳಿಗೆಗಳ ಪ್ರಾದೇಶಿಕ ಜಾಲವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್‌ ನೆಹರೂ ಕುಟುಂಬದಲ್ಲಿ ಹುಟ್ಟಿದ್ದಾರಾ? ಡಿಎನ್‌ಎ ಪರಿಶೀಲಿಸಬೇಕು: ಕೇರಳ ಶಾಸಕ ಅನ್ವರ್‌

    ರಿಲಯನ್ಸ್ ರಿಟೇಲ್‌ನಿಂದ ದಿನಸಿ ಹೊಸ ವಾಣಿಜ್ಯ ವಿಭಾಗದಿಂದ ನಡೆಸಿದ ‘ಮೆಟ್ರೋ ಕಿರಾಣಾ ಉತ್ಸವ’ದಂಥ ಉಪಕ್ರಮಗಳಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆದರೆ ಹೋಟೆಲ್-ರೆಸ್ಟೋರೆಂಟ್-ಕೆಫೆ/ಕ್ಯಾಟರಿಂಗ್ (HoReCa) ವಿಭಾಗದಲ್ಲಿನ ಸಾಂಸ್ಥಿಕ ಗ್ರಾಹಕರೊಂದಿಗೆ ಪಾಲುದಾರಿಕೆಯು ವೈವಿಧ್ಯಮಯ ಆದಾಯದ ಹರಿವುಗಳನ್ನು ಹೊಂದಿದೆ.

  • ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

    ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

    ಮುಂಬೈ: ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದು, ತನ್ನ ಪುತ್ರ ಆಕಾಶ್ ಅಂಬಾನಿಗೆ ಸ್ಥಾನವನ್ನು ಹಸ್ತಾಂತರಿಸಿದ ಬೆನ್ನಲ್ಲೇ ಪುತ್ರಿ ಇಶಾ ಅಂಬಾನಿಗೂ ಕಂಪನಿಯ ದೊಡ್ಡ ಅಧಿಕಾರವನ್ನು ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

    ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ರಿಲಯನ್ಸ್‌ನ ರಿಟೇಲ್‌ವಿಭಾಗದ ಅಧ್ಯಕ್ಷೆಯನ್ನಾಗಿ ನೇಮಿಸಲಿದ್ದಾರೆ ಎಂದು ವರದಿಯಾಗಿದ್ದು, ಇದೀಗ 217 ಬಿಲಿಯನ್ ಡಾಲರ್(ಸುಮಾರು 17 ಲಕ್ಷ ಕೋಟಿ ರೂ.) ಮೌಲ್ಯದ ಕಂಪನಿಯನ್ನು ಮುನ್ನಡೆಸಲು ಮುಖೇಶ್ ಅಂಬಾನಿ ತಮ್ಮ ಮಕ್ಕಳನ್ನು ನೇಮಿಸುತ್ತಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲರ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿಯಾಗಿದ್ದಾರೆ. ಇಶಾ ಅವರ ಹೊಸ ಹುದ್ದೆ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ ಶೀಘ್ರವೇ ಕಂಪನಿ ಈ ಬಗ್ಗೆ ತಿಳಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

    ಇಶಾ ಮತ್ತು ಆಕಾಶ್ ಮುಕೇಶ್ ಅಂಬಾನಿಯ ಅವಳಿ ಮಕ್ಕಳಾಗಿದ್ದು, ಅನಂತ್ ಹೆಸರಿನ ಕಿರಿಯ ಸಹೋದರನೂ ಇದ್ದಾನೆ. ಇಶಾ ಯೆಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್‌ – ಯಾವುದೇ ಫೀಸ್‌ ಕಟ್ಟುವ ಅಗತ್ಯವಿಲ್ಲ

    Live Tv

  • ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

    ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯ ಮಂಡಳಿಯ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ. ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯು ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಮುಖ ಭಾಗವಾಗಿದೆ.

    ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಮಂಡಳಿಯು ಸೆಪ್ಟೆಂಬರ್ 23 ರಂದು ಇಶಾ ಅಂಬಾನಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.

    ನಾಲ್ಕು ವರ್ಷಗಳವರೆಗೆ ಇಶಾ ಅಂಬಾನಿ ಅವರು ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ, ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

    ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಸ್ಮಿತ್ಸೋನಿಯನ್‌ನ ವಿಶೇಷ ಕಲಾ ವಸ್ತುಸಂಗ್ರಹಾಲಯವಾಗಿದ್ದು, ನ್ಯಾಷನಲ್ ಮಾಲ್‌ನಲ್ಲಿರುವ ಪ್ರಪ್ರಥಮ ಕಲಾ ವಸ್ತುಸಂಗ್ರಹಾಲಯವಾಗಿದೆ. ಇದನ್ನೂ ಓದಿ: ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

     

    1923 ರಲ್ಲಿ ಫ್ರೀರ್ ಗ್ಯಾಲರಿ ಆಫ್ ಆರ್ಟ್ ಆಗಿ ಪ್ರಾರಂಭವಾದಾಗಿನಿಂದ ತನ್ನ ಅತ್ಯಪರೂಪದ ಸಂಗ್ರಹ ಮತ್ತು ಅದರ ಶತಮಾನದಷ್ಟು ಹಿಂದಿನ ವಿಶೇಷ ಸಂಗ್ರಹಗಳು, ಪ್ರದರ್ಶನಗಳು, ಸಂಶೋಧನಾ ಕಲೆಗಳ ಸಂರಕ್ಷಣೆ ಮತ್ತು ಸಂರಕ್ಷಣಾ ವಿಜ್ಞಾನದ ದೀರ್ಘ ಸಂಪ್ರದಾಯ ಶ್ರೇಷ್ಠತೆಗಾಗಿ ಅಂತರಾಷ್ಟ್ರೀಯ ಪ್ರಖ್ಯಾತಿ ಹೊಂದಿದೆ.  ಇದನ್ನೂ ಓದಿ: ಜಿಯೋ ಫೋನ್‌ ನೆಕ್ಸ್ಟ್ ಹೇಗೆ ತಯಾರಾಗುತ್ತಿದೆ? – ತಿರುಪತಿ ಫ್ಯಾಕ್ಟರಿಯ ವಿಡಿಯೋ ರಿಲೀಸ್‌

    2023ರಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಇಶಾ ಅಂಬಾನಿ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಿರುವುದು ವಿಶೇಷ. ಶಮಾನೋತ್ಸವ ಸಂಭ್ರಮವು ವಸ್ತುಸಂಗ್ರಹಾಲಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಮುಂದಿನ ಪೀಳಿಗೆಗೆ ವಸ್ತುಸಂಗ್ರಹಾಲಯವನ್ನು ಕಾಪಾಡುವ, ಸಂರಕ್ಷಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

    ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನ ಅಂಗಸಂಸ್ಥೆಯ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ಭಾರತದಲ್ಲಿ ತ್ವರಿತಗತಿ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2016ರಲ್ಲಿ 4ಜಿ ಸೇವೆಯು ಅತ್ಯಂತ ಕಡಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. 44 ಕೋಟಿ ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ 20 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿದೆ. ಹೊಸತಲೆಮಾರಿನ ತಾಂತ್ರಜ್ಞಾನ ಆಧರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖಪಾತ್ರ ವಹಿಸಿರುವ ಇಶಾ ಅಂಬಾನಿ, ಅಜಿಯೋಡಾಟ್ಕಾಮ್ ನ ಶಕ್ತಿಯೂ ಆಗಿದ್ದಾರೆ. ಜಿಯೋಮಾರ್ಟ್ ಮೂಲಕ ಇಕಾಮರ್ಸ್ ವಿಸ್ತರಿಸುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಇಶಾ ಅಂಬಾನಿ ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡಿರುವ ದೇಶದ ಅತಿದೊಡ್ಡ ಸೇವಾಸಂಸ್ಥೆ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.

    ಇಶಾ ಅವರ ದೃಷ್ಟಿ ಮತ್ತು ಕಲೆಗಳ ಮೇಲಿನ ಉತ್ಸಾಹವು ಸ್ಮಿತ್ಸೋನಿಯನ್ ಅವರ ಸಂಗ್ರಹಣೆಗಳು ಮತ್ತು ಪರಿಣತಿಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಮತ್ತು ಏಷ್ಯಾ ಭಾಗದ ಕಲೆಗಳು ಮತ್ತು ಸಂಸ್ಕೃತಿಗಳ ಉತ್ತಮ ತಿಳುವಳಿಕೆ ಮತ್ತು ಆಚರಣೆಯನ್ನು ಸಕ್ರಿಯಗೊಳಿಸುವ ಪ್ರಯತ್ನಗಳನ್ನು ಉದ್ದೀಪಿಸುತ್ತದೆ ಎಂದು ನಿರೀಕ್ಷಿಸಿದ್ದೇವೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ಶ್ಲಾಘಿಸಿದೆ.

  • ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

    ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

    ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ನಡೆದಿದ್ದು, ಮದುವೆಯಲ್ಲಿ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆ ಧರಿಸಿದ್ದು ವಿಶೇಷವಾಗಿತ್ತು.

    ಮದುವೆಯಲ್ಲಿ ಇಶಾ ಹಾಫ್ ವೈಟ್ ಬಣ್ಣದ ಲೆಹೆಂಗಾ ಧರಿಸಿದ್ದರು. ಆನಂದ್ ಕೂಡ ಇಶಾರನ್ನು ಮ್ಯಾಚ್ ಮಾಡಲು ಹಾಫ್ ವೈಟ್ ಬಣ್ಣದ ಶೆರ್ವಾನಿ ಧರಿಸಿ ಮಿಂಚಿದ್ದರು. ಈ ಲೆಹೆಂಗಾ ಮೇಲೆ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆಯನ್ನು ದುಪ್ಪಟಾ ರೀತಿಯಲ್ಲಿ ಹಾಕಿಕೊಂಡಿದ್ದರು.

    ಇಶಾ ತನ್ನ ವೈಟ್ ಹಾಫ್ ಲೆಹೆಂಗಾ ಮೇಲೆ ತಮ್ಮ ಹಳೆಯ ಕೆಂಪು ಸೀರೆಯನ್ನು ದುಪ್ಪಟಾ ಸ್ಟೈಲಿನಲ್ಲಿ ಧರಿಸಲು ತಾಯಿ ನೀತಾ ಅಂಬಾನಿ ಸಲಹೆ ನೀಡಿದ್ದರು. ಇಶಾ ಕೂಡ ತನ್ನ ತಾಯಿಯ ಮಾತನ್ನು ಕೇಳಿ ಸೀರೆಯನ್ನು ದುಪ್ಪಟಾ ರೀತಿ ಧರಿಸಿದ್ದರು.

    ಇಶಾ ತನ್ನ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾದಲ್ಲಿ 16 ಮೊಗ್ಗುಯಿದ್ದು, ಪ್ರತಿಯೊಂದು ಮೊಗ್ಗಿನ ಮೇಲೆ ಜರ್ದೋಝಿ ಹಾಗೂ ಮುಕೇಶ್ ವರ್ಕ್ ಮಾಡಲಾಗಿತ್ತು. ಇಶಾ ಧರಿಸಿದ್ದ ಲೆಹೆಂಗಾವನ್ನು ಕೈಯಿಂದಲೇ ಕಸೂತಿ ಮಾಡಲಾಗಿದೆ. ಲೆಹೆಂಗಾದಲ್ಲಿದ್ದ ಫ್ಲೋರಲ್ ಜಾಲಿಯನ್ನು ಕ್ರಿಸ್ಟಲ್ ಹಾಗೂ ಸೀಕ್ವೆನ್ಸ್ ನಿಂದ ಹೈಲೈಟ್ ಮಾಡಲಾಗಿದೆ.

    ಇಶಾ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಖ್ಯಾತ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಕೊಸಲಾ ಡಿಸೈನ್ ಮಾಡಿದ್ದಾರೆ. ಇಂದು ಇಶಾ ಹಾಗೂ ಆನಂದ್ ಅವರ ರಾಯಲ್ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯಲ್ಲಿ ಬಾಲಿವುಡ್ ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಶಾ ಅಂಬಾನಿ ಮದುವೆಯಲ್ಲಿ ಪತ್ರ ಓದಿದ ಬಿಗ್ ಬಿ – ಭಾವುಕರಾದ ಮುಕೇಶ್ ಅಂಬಾನಿ

    ಇಶಾ ಅಂಬಾನಿ ಮದುವೆಯಲ್ಲಿ ಪತ್ರ ಓದಿದ ಬಿಗ್ ಬಿ – ಭಾವುಕರಾದ ಮುಕೇಶ್ ಅಂಬಾನಿ

    ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ಮಗಳ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಗ್ ಬಿ ಅಮಿತಾಬ್ ಬಚ್ಚನ್ ಪತ್ರ ಓದಿದರು.

    ಅಮಿತಾಬ್ ಬಚ್ಚನ್ ಪತ್ರ ಓದುತ್ತಿದಂತೆ ಸಂಪ್ರದಾಯಿಕ ಕಾರ್ಯದಲ್ಲಿ ಕುಳಿತ್ತಿದ್ದ ಮುಕೇಶ್ ಅಂಬಾನಿ ಭಾವುಕರಾದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗಳ ಜವಾಬ್ದಾರಿಯನ್ನ ತಂದೆಯಾಗಿ ಕನ್ಯಾದಾನ ಮಾಡಿದ ಮುಕೇಶ್ ಅಂಬಾನಿ ಅಳಿಯನ ಕೈಗೆ ಪುತ್ರಿಯ ಕೈ ನೀಡಿ ಜವಾಬ್ದಾರಿ ಹಸ್ತಾಂತರಿಸಿದರು.

    https://www.instagram.com/p/BrTBqC6jw1D/?utm_source=ig_embed

    ಮುಂಬೈನಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಆಪ್ತ ವಲಯದ ಸುಮಾರು 600 ಕ್ಕೂ ಹೆಚ್ಚು ಮಂದಿ ಆಗಮಿಸಿದರು. ಬಾಲಿವುಡ್ ಸ್ಟಾರ್ ನಟರು, ರಾಜಕಾರಣಿಗಳು ಸೇರಿದಂತೆ ಉದ್ಯಮ ವಲಯದ ಪ್ರಮುಖ ದಿಗ್ಗಜರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಉಳಿದಂತೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಶಾರೂಖ್ ಖಾನ್, ಸಚಿನ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಕ್ರಿಕೆಟಿಗರು ಹಾಜರಿದ್ದರು. ಇದಕ್ಕೂ ಮುನ್ನ ಉದಯ್‍ಪುರದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭಕ್ಕೆ ಹಿಲರಿ ಕ್ಲಿಂಟನ್ ಸೇರಿದಂತೆ ಅನಿಲ್ ಕಪೂರ್, ವಿದ್ಯಾಬಾಲನ್, ಜಾನ್ ಅಬ್ರಹಂ ಪ್ರಿಯಾಂಕ ಚೋಪ್ರಾ, ಧೋನಿ ದಂಪತಿ ಕೂಡ ಭಾಗವಹಿಸಿದ್ದರು.

    https://www.instagram.com/p/BrTAb8ojrku/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಅದ್ಧೂರಿಯಾಗಿ ನಡೆದ ಮುಕೇಶ್ ಪುತ್ರಿಯ ವಿವಾಹಕ್ಕೆ ಗಣ್ಯರ ದಂಡು ಹಾಜರ್

    ಅದ್ಧೂರಿಯಾಗಿ ನಡೆದ ಮುಕೇಶ್ ಪುತ್ರಿಯ ವಿವಾಹಕ್ಕೆ ಗಣ್ಯರ ದಂಡು ಹಾಜರ್

    ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ವಿಜೃಂಭಣೆಯಿಂದ ನಡೆದಿದೆ.

    ಈ ಮೂಲಕ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ಮದುವೆಯು ಭಾರತದಲ್ಲಿ ನಡೆದ ಅತೀ ದುಬಾರಿ ಮದುವೆಗಳಲ್ಲಿ ಒಂದಾಗಿದೆ.

    ಈ ಅದ್ದೂರಿ ಮದುವೆಗೆ ಬಚ್ಚನ್ ಕುಟುಂಬದವರು, ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಆಮೀರ್ ಖಾನ್, ಸಚಿನ್ ತೆಂಡೂಲ್ಕರ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಸೇರಿದಂತೆ ಹಲವು ಖ್ಯಾತ ನಟ-ನಟಿಯರು, ಕ್ರೀಡಾಪಟುಗಳು, ರಾಜಕಾರಣಿಗಳು ಆಗಮಿಸಿ ನವ ವಧುವರರಿಗೆ ಶುಭಹಾರೈಸಿದರು. ಹಾಗೆಯೇ ಬಿಟೌನ್ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನ್ಸ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

    ಯುವ ಉದ್ಯಮಿ ಆನಂದ್ ಪಿರಾಮಾಲ್ ಹಾಗೂ ಇಶಾ ಅಂಬಾನಿ ಇಬ್ಬರು ಬಾಲ್ಯದ ಸ್ನೇಹಿತರು. ಅಲ್ಲದೆ ಇಬ್ಬರು ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಅಜಯ್ ಪಿರಾಮಾಲ್ ಅವರ ಮಕ್ಕಳು. ಎರಡು ಉದ್ಯಮಿಗಳು ಸೇರಿ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಅದರಲ್ಲೂ ತಮ್ಮ ಏಕೈಕ ಪುತ್ರಿಯ ಮದುವೆಯನ್ನು ಮುಕೇಶ್ ಅಂಬಾನಿ ಒಟ್ಟು 718 ಕೋಟಿ ರೂ. ಖರ್ಚು ಮಾಡಿ ಅದ್ದೂರಿಯಾಗಿ ನೆರವೇರಿಸಿದ್ದಾರೆ.

    ಉದಯ್‍ಪುರದಲ್ಲಿ ನಡೆದ ಇಶಾ ಹಾಗೂ ಆನಂದ್ ಅವರ ಮದುವೆ ಪೂರ್ವ ಸಮಾರಂಭಗಳಿಗೆ ಅಂದಾಜು 70 ಕೋಟಿ ರೂ ವೆಚ್ಚವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇಶಾ ಹಾಗೂ ಆನಂದ್ ಅವರ ಆರತಕ್ಷತೆ ಕಾರ್ಯಕ್ರಮವು ಮುಂಬೈನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಏಷ್ಯಾದ ನಂಬರ್ 1 ಶ್ರೀಮಂತ ಅಂಬಾನಿ ಮಗಳ ಮದ್ವೆಗೆ ಖರ್ಚಾಗುತ್ತಿರುವುದು ಎಷ್ಟು ಗೊತ್ತೆ?

    ಏಷ್ಯಾದ ನಂಬರ್ 1 ಶ್ರೀಮಂತ ಅಂಬಾನಿ ಮಗಳ ಮದ್ವೆಗೆ ಖರ್ಚಾಗುತ್ತಿರುವುದು ಎಷ್ಟು ಗೊತ್ತೆ?

    ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಮದುವೆ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದ್ದು, ಒಟ್ಟು ಮದುವೆ ಸಮಾರಂಭಕ್ಕೆ ಬರೋಬ್ಬರಿ 100 ಮಿಲಿಯನ್ ಡಾಲರ್ (ಸುಮಾರು 718 ಕೋಟಿ ರೂ.) ಖರ್ಚು ಮಾಡಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇಶಾ ಮದುವೆ ಸಮಾರಂಭದ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು ಡಿಸೆಂಬರ್ 8ರಂದೇ ಬಾಲಿವುಡ್ ಸ್ಟಾರ್ ನಟರು ಸೇರಿದಂತೆ ಸ್ನೇಹಿತರಿಗೆ ಆಹ್ವಾನ ನೀಡಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಹಲವು ಗಣ್ಯರು ಭಾಗವಹಿಸಿ ಶುಭಕೋರಿ ಸಂಭ್ರಮಿಸಿದ್ದರು. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಮುದ್ದಿನ ಮಗಳಾದ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ವಿವಾಹ ಆಗುತ್ತಿದ್ದು, ಸದ್ಯ ಮದುವೆಯ ಪೂರ್ವ ಶಾಸ್ತ್ರಗಳು ನಡೆಯುತ್ತಿದೆ.

    ವಿವಾಹಕ್ಕೆ ಇಂಗ್ಲೆಂಡ್ ರಾಜ ಕುಟುಂಬ ಹಾಲಿವುಡ್, ಬಾಲಿವುಡ್ ನಟರು, ದೇಶ, ವಿದೇಶ ಗಣ್ಯ ಉದ್ಯಮಿಗಳು ಆಗಮಿಸುತ್ತಾರೆ. ಇವರಿಗೆ ಸೌಲಭ್ಯ ನೀಡಲೆಂದೇ ಮುಂಬೈಯಲ್ಲಿರುವ ಬಹುತೇಕ ಸ್ಟಾರ್ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ. ಅಲ್ಲದೇ ಮದುವೆ ಆಗಮಿಸುವ ಅತಿಥಿಗಳಿಗೆ 100ಕ್ಕೂ ಹೆಚ್ಚು ಚಾರ್ಟರ್ ವಿಮಾನಗಳನ್ನು ಬುಕ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಏಷ್ಯಾದ ಶ್ರೀಮಂತ ಉದ್ಯಮಿ ಎಂದ ಹೆಗ್ಗಳಿಕೆ ಪಡೆದಿರುವ ಮುಕೇಶ್ ಅಂಬಾನಿ ತಮ್ಮ ಮಗಳ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರವಲ್ಲದೇ ಸುಮಾರು 5,100 ಬಡ ಮಕ್ಕಳಿಗೂ ಕೂಡ 4 ನಾಲ್ಕು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಭಾರತದ ಪ್ರಮುಖ ಸಂಪ್ರದಾಯಿಕ ಕಲೆಗಳಿಗೆ ಬೆಂಬಲ ನೀಡಲು ವಿವಿಧ ಕಲಾವಿದರಿಗೆ ವ್ಯವಸ್ಥೆಯನ್ನು ಏರ್ಪಡಿಸಿದ್ದಾರೆ. ಮದುವೆಯ ಪ್ರಮುಖ ಕಾರ್ಯಕ್ರಮ ಮುಂಬೈನ ಮನೆಯಲ್ಲಿ ನಡೆಯಲಿದ್ದು, ಮದುವೆಗೂ ಮುನ್ನ ಆಚರಣೆಗಳು ನಗರದಲ್ಲಿ ನಡೆಯಲಿದೆ. ಮದುವೆಯ ಒಂದು ಆಮಂತ್ರಣ ಪತ್ರಿಕೆಗೆ 3 ಲಕ್ಷ ರೂ. ಖರ್ಚು ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಶಾ ಅಂಬಾನಿ ಮದುವೆ ಸಂಭ್ರಮದಲ್ಲಿ ದೀಪ್‍ವೀರ್ ಡ್ಯಾನ್ಸ್ – ವಿಡಿಯೋ ನೋಡಿ

    ಇಶಾ ಅಂಬಾನಿ ಮದುವೆ ಸಂಭ್ರಮದಲ್ಲಿ ದೀಪ್‍ವೀರ್ ಡ್ಯಾನ್ಸ್ – ವಿಡಿಯೋ ನೋಡಿ

    ಉದಯ್‍ಪುರ: ಬಾಲಿವುಡ್ ಕ್ಯೂಟ್ ಕಪಲ್ಸ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗಳ ಮದುವೆ ಪೂರ್ವ ಸಮಾರಂಭದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.

    ಬಿಟೌನ್ ತಾರೆಯರೆಲ್ಲ ಇಶಾ ಅಂಬಾನಿಯವರ ಮದುವೆ ಪೂರ್ವ ಪಾರ್ಟಿಯನ್ನು ಸಖತ್ ಆಗಿ ಎಂಜಾಯ್ ಮಾಡುವ ಮೂಲಕ ಸಂಭ್ರಮಕ್ಕೆ ಇನ್ನಷ್ಟು ಮೆರಗು ತಂದರು. ಉದಯ್‍ಪುರದಲ್ಲಿ ನಡೆಯುತ್ತಿರುವ ಈ ಅದ್ದೂರಿ ಮದುವೆ ಸಂಭ್ರಮದಲ್ಲಿ ಸಿನಿ ತಾರೆಯರು ಹೆಜ್ಜೆ ಹಾಕಿ ಮಿಂಚಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಅವರ ಕಪಲ್ ಡ್ಯಾನ್ಸ್ ನೋಡಿ ಸಂತೋಷಪಟ್ಟರು.

    https://www.instagram.com/p/BrLzh7gHGfF/?utm_source=ig_embed&utm_campaign=embed_video_watch_again

    ಇಶಾ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ದೀಪ್‍ವೀರ್ ಬಾಲಿವುಡ್‍ನ ಹಿಟ್ ಹಾಡುಗಳಿಗೆ ಜೊತೆಯಾಗಿ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲದೆ `ದಿಲ್ ಧಡಕನೆ ದೋ’ ಚಿತ್ರದ ಗಾಲಾ ಗುಡಿಯಾ ಹಾಡಿಗೆ ಕ್ಯೂಟ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಗೆದ್ದಿದೆ.

    https://www.instagram.com/p/BrL_oYmnr7r/?utm_source=ig_embed&utm_campaign=embed_video_watch_again

    ಒಂದೆಡೆ ದೀಪಿಕಾ ಹಾಗೂ ರಣ್‍ವೀರ್ ಇನ್ನೊದೆಡೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕೂಲ್ ಆಗಿ ಹೆಜ್ಜೆ ಹಾಕಿದ್ದಾರೆ. ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬಹಳ ವರ್ಷಗಳ ನಂತರ ಜೋಡಿಯಾಗಿ `ಗುರು’ ಸಿನಿಮಾದ `ತೇರೆ ಬಿನಾ’ ಹಾಡಿಗೆ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.

    https://www.instagram.com/p/BrM7cY7gRs0/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗಳ ಸಂಗೀತ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಅಂಬಾನಿ ದಂಪತಿ

    ಮಗಳ ಸಂಗೀತ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಅಂಬಾನಿ ದಂಪತಿ

    ಉದಯ್‍ಪುರ: ಶನಿವಾರ ರಾತ್ರಿ ಸರೋವರಗಳ ನಗರಿ ಉದಯ್‍ಪುರದಲ್ಲಿ ಆಯೋಜಿಸಿದ್ದ ಇಶಾ ಅಂಬಾನಿ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

    ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಮುದ್ದಿನ ಮಗಳಾದ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ವಿವಾಹವು ಡಿಸೆಂಬರ್ 12ರಂದು ಅದ್ದೂರಿಯಾಗಿ ನಡೆಯಲಿದೆ. ಮದುವೆಯ ಪೂರ್ವ ಶಾಸ್ತ್ರಗಳ ಪ್ರಕಾರ ಶನಿವಾರ ರಾತ್ರಿ ಉದಯ್‍ಪುರದಲ್ಲಿ ಇಶಾ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ಬಾಲಿವುಡ್‍ನ ಖ್ಯಾತ ನಟ ನಟಿಯರು ಹಾಗೂ ಸಿನಿಮಾ ರಂಗದ ಗಣ್ಯರು ಭಾಗಿಯಾಗಿದ್ದರು.

    https://www.instagram.com/p/BrJD2i3lz_0/

    ಬಿಟೌನ್ ಸ್ಟಾರ್‌ಗಳಾದ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್ ಜೋನ್ಸ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್, ಶಾರೂಕ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಇಡೀ ಬಾಲಿವುಡ್ ಸಿನಿರಂಗವೇ ಇಶಾ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಈ ಅದ್ಧೂರಿ ಸಂಭ್ರಮಾಚರಣೆಯಲ್ಲಿ ಇಶಾ ಅಂಬಾನಿ ಹಾಗೂ ಆನಂದ್ ಜೊತೆಗೂಡಿ `ಕಬಿ ಅಲ್ವಿದಾ ನಾ ಕೆಹೆನಾ’ ಚಿತ್ರದ `ಮಿಥುವಾ’ ಹಾಡಿಗೆ ರೊಮಾಂಟಿಕ್ ಆಗಿ ಸ್ಟೆಪ್ಸ್ ಹಾಕುವ ಮೂಲಕ ಎಲ್ಲರ ಮನ ಗೆದ್ದರು. ಬಳಿಕ ಇಶಾ ಹಾಗೂ ಆನಂದ್ ಜೊತೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ಮಗ ಅನಂತ್ ಹಾಗೂ ಆಕಾಶ್ ಸೇರಿ ಒಟ್ಟಾಗಿ ಹೆಜ್ಜೆ ಹಾಕಿ ಖುಷಿಪಟ್ಟರು. ಅದರಲ್ಲೂ ಮುಕೇಶ್ ಅಂಬಾನಿ ಹಾಗೂ ನೀತಾ ಅವರ ಡ್ಯಾನ್ಸ್ ಸ್ಟೆಪ್ಸ್ ಗೆ ಎಲ್ಲರು ಫಿದಾ ಆಗಿದ್ದಾರೆ.

    https://www.instagram.com/p/BrJn8pfAo8X/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    3 ಲಕ್ಷ ರೂ. ನಲ್ಲಿ ತಯಾರಾಯ್ತು ಇಶಾಅಂಬಾನಿ ಮದ್ವೆ ಆಮಂತ್ರಣ- ವಿಡಿಯೋ

    ಮುಂಬೈ: ಭಾರತದ ಖ್ಯಾತ ಮತ್ತು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಮದುವೆಯ ಭಾರೀ ಮೊತ್ತದ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜನಾರ್ದನ ರೆಡ್ಡಿ ಮಗಳ ಮದುವೆಯ ಆಮಂತ್ರಣದ ವೆಚ್ಚವನ್ನ ನೋಡಿ ಜನರು ಸುಸ್ತಾಗಿದ್ದರು. ಈಗ ಮುಖೇಶ್ ಅಂಬಾನಿ ಮಗಳ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತೆ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ಬೆಲೆ ಬರೊಬ್ಬರಿ 3 ಲಕ್ಷ ರೂ.

    ಇನ್‍ಸ್ಟಾಗ್ರಾಂನಲ್ಲಿರುವ ವಿಡಿಯೋದಲ್ಲಿ ಆಮಂತ್ರಣ ಪತ್ರಿಕೆಯನ್ನು ಎರಡು ಬಾಕ್ಸ್‍ಗಳಲ್ಲಿ ಕಾಣಬಹುದು. ಮೊದಲ ಬಾಕ್ಸ್ ನ ಮೇಲೆ ಇಶಾ ಮತ್ತು ಆನಂದ್ ಅವರ ಮೊದಲ ಅಕ್ಷರಗಳನ್ನು ಸೇರಿಸಿ ‘ಐಎ’ ಎಂದು ಮುದ್ರಿಸಲಾಗಿದ್ದು, ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಹೂಗಳಿಂದ ಅಲಂಕೃತವಾಗಿದೆ. ಈ ಬಾಕ್ಸ್ ತೆರೆದರೆ ಒಂದು ಚೆಂದದ ಚಿತ್ತಾರದ ಆಹ್ವಾನ ಪತ್ರಿಕೆಯಲ್ಲಿ ಮದುವೆಗೆ ಆಹ್ವಾನ ಮಾಡಲಾಗಿದೆ. ಚಿನ್ನದ ಬಣ್ಣದ ದ್ವಾರಗಳಿಂದ ಕೂಡಿದ ಹಾಳೆಗಳು ಅದರಲ್ಲಿದ್ದು, ಈ ಆಮಂತ್ರಣ ಪತ್ರಿಕೆಯ ನಾಲ್ಕನೇ ಪುಟದಲ್ಲಿ ಇಶಾ ಮತ್ತು ಆನಂದ್ ಬರೆದ ಪತ್ರವೊಂದಿದೆ. ಇತರೆ ಪುಟಗಳಲ್ಲಿ ನಾನಾ ಸಂಗತಿಗಳಿದ್ದು, ‘ಶುಭ್ ಅಭಿನಂದನ್’ ಎಂದು ಬರೆಯಲಾಗಿದೆ.

    https://www.instagram.com/p/BpwL0xPDOwi/?utm_source=ig_embed

    ಇನ್ನೂ ಎರಡನೇ ಬಾಕ್ಸ್ ಗುಲಾಬಿ ಮತ್ತು ಚಿನ್ನದ ಹೂಗಳಿಂದ ಅಲಂಕೃತವಾಗಿದ್ದು, ಬಾಕ್ಸ್ ತೆರೆದ ಕೂಡಲೇ ಗಾಯತ್ರಿ ದೇವಿಯ ಮಂತ್ರ ಕೇಳಿಸುತ್ತದೆ. ಇದರಲ್ಲಿ ಲಕ್ಷ್ಮಿ ಫೋಟೋವನ್ನ ಇರಿಸಲಾಗಿದೆ. ಈ ವೈಭೋಗದ ಮದುವೆಗೆ ಗಣ್ಯಾತೀಗಣ್ಯರು ಆಗಮಿಸಲಿದ್ದು, ಅವರಿಗೆ ಆಮಂತ್ರಣ ನೀಡಲು ಈ ಅದ್ಧೂರಿಯ ಕರೆಯೋಲೆ ತಯಾರಾಗಿದೆ.

    ಕಳೆದ ಸೆಪ್ಟೆಂಬರ್‍ನಲ್ಲಿ ಇಟಲಿಯ ಲೇಕ್ ಕೊಮುನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್, ಇದೇ ಡಿಸೆಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಖೇಶ್ ಅಂಬಾನಿ ಕುಟುಂಬ ಈಗಾಗಲೇ ದೇವರಿಗೆ ಆಮಂತ್ರಣ ಪತ್ರಿಕೆ ಅರ್ಪಿಸಿ ಗಣ್ಯರಿಗೆ ಕಾರ್ಡ್ ಹಂಚುವ ಕೆಲಸವನ್ನ ಶುರು ಮಾಡಿದ್ದಾರೆ ಎನ್ನಲಾಗಿದೆ.

    https://www.instagram.com/p/Bp_GI4qHvN3/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews