Tag: Iruvudellava Bittu

  • ‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

    ‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

    ಬೆಂಗಳೂರು: ಮದುವೆಯಾದ ನಂತರ ಮೇಘನಾ ರಾಜ್ ನಟಿಸಿರುವ ಮೊದಲ ಸಿನಿಮಾ ತೆರೆಗೆ ಬಂದಿದೆ.

    ಕಾಂತಾ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸಾಗಿದೆ. ಈ ಸಿನಿಮಾವನ್ನು ಮೊದಲ ದಿನದ ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ಮತ್ತು ಧೃವಾ ಸರ್ಜಾ ಮೆಜೆಸ್ಟಿಕ್ ನ ಅನುಪಮಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇವರಿಬ್ಬರೂ ಬರೋ ಸುದ್ದಿ ತಿಳಿದ ಅಭಿಮಾನಿಗಳು ಕಿಕ್ಕಿರಿದು ಥಿಯೇಟರ್ ಬಳಿ ಜಮಾಯಿಸಿದ್ದರು.

    ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

    ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸಿದೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಇರುವುದೆಲ್ಲವ ಬಿಟ್ಟು ಅಮಿಕಂಡಿರೋ ಹಾಡು ಬರೆದ ಯೋಗರಾಜ ಭಟ್!

    ಇರುವುದೆಲ್ಲವ ಬಿಟ್ಟು ಅಮಿಕಂಡಿರೋ ಹಾಡು ಬರೆದ ಯೋಗರಾಜ ಭಟ್!

    ಬೆಂಗಳೂರು: ನಿರ್ದೇಶಕ ಕಾಂತ ಕನ್ನಲಿ ಕಡೇ ಕ್ಷಣಗಳಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದ ಬಗ್ಗೆ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವಂಥಾದ್ದೊಂದು ಕೆಲಸ ಮಾಡಿದ್ದಾರೆ. ಕಾಂತ ಕನಸಿಗೆ ನಿರ್ದೇಶಕ ಯೋಗರಾಜ ಭಟ್ಟರೂ ಕೈ ಜೋಡಿಸಿದ್ದಾರೆ. ಇದರಿಂದಾಗಿಯೇ ಸಿದ್ಧಗೊಂಡಿರೋ ಪ್ರಮೋಷನ್ ಸಾಂಗ್ ಈಗ ಸೂಪರ್ ಹಿಟ್ ಆಗಿ ಬಿಟ್ಟಿದೆ!

    ಇರುವುದೆಲ್ಲವ ಬಿಟ್ಟು ಚಿತ್ರದ ಪ್ರಮೋಷನ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹುಮ್ಮಸ್ಸಿನಿಂದ ಹರಿಡಾಡಲಾರಂಭಿಸಿದೆ. `ಈ ಜೀವನ ಎಲ್ಲಾನು ಕಲಿಸುತ್ತೆ ಅಮಿಕಂಡಿರೋದನ್ನ ಬಿಟ್ಟು. ಈ ಜೀವನ ನಮಗರ್ಥ ಆಗೋದ್ರೊಳಗೆ ಎಲ್ಲ ಕೂತ್ಕೊಂಡ್ಬಿಟ್ವಲ್ಲಪ್ಪ ಕೆಟ್ಟು’ ಎಂಬ ಹಾಡನ್ನು ಯೋಗರಾಜ ಭೌಟ್ ಬರೆದಿದ್ದಾರೆ. ಅದಕ್ಕೆ ಸಮ್ಮೋಹಕ ಸಂಗೀತ ಸ್ಪರ್ಶ ನೀಡಿರುವವರು ಅನಂತ್ ಕಿಶನ್. ಕನ್ನಡ ಕೋಗಿಲೆ ಖ್ಯಾತಿಯ ಗಣೇಶ್ ಕಾರಂತ್ ಹಾಡಿರೋ ಈ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ.

    ಇದು ಈ ಚಿತ್ರದ ಒಟ್ಟಾರೆ ಆಂತರ್ಯವನ್ನು ಧ್ವನಿಸುವಂಥಾ ಹಾಡು. ಅಷ್ಟೇ ಆಗಿದ್ದರೆ ಬಹುಶಃ ಇದು ಈ ಪಾಟಿ ಪ್ರಸಿದ್ಧಿ ಪಡೆದುಕೊಳ್ಳುತ್ತಿರಲಿಲ್ಲವೇನೋ. ಇದು ಬದುಕಿಗೂ ಅನ್ವಯಿಸುವಂತಿದೆ. ಹಾಗಂದ ಮೇಲೆ ಈ ಚಿತ್ರ ಕೂಡಾ ಹಾಡಿನಂತೆಯೇ ಹಿಟ್ ಆಗೋದರಲ್ಲಿ ಸಂದೇಹವೇನಿಲ್ಲ!

    ಇರುವುದೆಲ್ಲವ ಬಿಟ್ಟು ಚಿತ್ರ ಇದೇ ತಿಂಗಳು 21 ರಿಲೀಸ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=GRMSXFPmuCQ

  • ‘ಇರುವುದೆಲ್ಲವ ಬಿಟ್ಟು’ – ಮದುವೆ ನಂತರ ಮೇಘನಾ ರಾಜ್‍ಗೆ ಸಿಕ್ಕ ಮೊದಲ ಮೋಹಕ ಪಾತ್ರ!

    ‘ಇರುವುದೆಲ್ಲವ ಬಿಟ್ಟು’ – ಮದುವೆ ನಂತರ ಮೇಘನಾ ರಾಜ್‍ಗೆ ಸಿಕ್ಕ ಮೊದಲ ಮೋಹಕ ಪಾತ್ರ!

    ಬೆಂಗಳೂರು: ಮದುವೆಯಾದ ನಂತರ ಹೆಚ್ಚಿನ ನಟಿಯರು ಸಂಸಾರದ ಸಡಗರಗಳಲ್ಲಿ ಕಳೆದು ಹೋಗೋದೇ ಹೆಚ್ಚು. ಚಿರಂಜೀವಿಯವರನ್ನು ಮದುವೆಯಾದ ಮೇಘನಾ ಕೂಡಾ ಅದೇ ಸಾಲಿಗೆ ಸೇರುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಕಾಂತ ಕನ್ನಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರ ಆ ಆತಂಕವನ್ನು ದೂರಾಗಿಸಿದೆ!

    ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಪಕ್ಕಾ ಹಾಟ್ ಲುಕ್ಕಿನೊಂದಿಗೆ ಮರಳಿ ಬಂದಿದ್ದಾರೆ. ಈ ಚಿತ್ರವೇ ಅವರ ಪಾಲಿನ ಸೆಕೆಂಡ್ ಇನ್ನಿಂಗ್ಸನ್ನು ಭರ್ಜರಿಯಾಗಿಸೋ ಲಕ್ಷಣಗಳೂ ಕಾಣಿಸುತ್ತಿವೆ. ಇರುವುದೆಲ್ಲವ ಬಿಟ್ಟು ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕ ಕಾಂತ ಕನ್ನಲಿ ವಿಶಿಷ್ಟವಾಗಿಯೇ ರೂಪಿಸಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರವನ್ನು ಮೇಘನಾ ನಿರ್ವಹಿಸಿದ್ದಾರೆ.

    ಈ ಚಿತ್ರದಲ್ಲಿ ಮೇಘನಾ ಐಟಿ ಉದ್ಯೋಗಿಯಾಗಿ ನಟಿಸಿದ್ದಾರೆ. ಅವರದ್ದಿಲ್ಲಿ ಪಕ್ಕಾ ಬೋಲ್ಡ್ ಪಾತ್ರ. ಇದರ ಕೆಲ ಫೋಟೋಗಳು ಜಾಹೀರಾಗಿ ಅಭಿಮಾನಿಗಳನ್ನು ಮುದಗೊಳಿಸಿವೆ. ಈವರೆಗೂ ಥರ ಥರದ ಪಾತ್ರಗಳಲ್ಲಿ ನಟಿಸಿದ್ದರೂ ಮೇಘನಾ ಅವರು ಈ ಥರದ ಹಾಟ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಇದೇ ಮೊದಲು. ತಿಲಕ್‍ಗೆ ಜೋಡಿಯಾಗಿ ನಟಿಸಿರೋ ಮೇಘನಾ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ಹೊರಟ ಯುವ ಮನಸುಗಳ ಸಂಕೇತದಂಥಾ ಪಾತ್ರ ನಿರ್ವಹಿಸಿದ್ದಾರೆ.

    ಬೋಲ್ಡ್ ನೆಸ್ ಮಾತ್ರವಲ್ಲದೇ ಭಾವುಕವಾಗಿಯೂ ಕಾಡುವಂತಿರುವ ಈ ಪಾತ್ರವನ್ನು ಮೇಘನಾ ಬಹಳಷ್ಟು ಇಷ್ಟಪಟ್ಟು ಒಪ್ಪಿಕೊಂಡಿದ್ದರಂತೆ. ಬಿಡುಗಡೆಗೂ ಮುಂಚೆಯೇ ಅದರ ಬಗ್ಗೆ ಬರುತ್ತಿರೋ ಸಕಾರಾತ್ಮಕ ಅಭಿಪ್ರಾಯಗಳು ಮೇಘನಾರಲ್ಲಿ ಥ್ರಿಲ್ ಮೂಡಿಸಿವೆ. ಸದ್ಯ ಈ ಚಿತ್ರ ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv