Tag: Irrigation Department

  • ಕಾರಂಜಿಯಂತೆ 30 ಅಡಿ ಎತ್ತರಕ್ಕೆ ಚಿಮ್ಮಿದ 22 ಕೆರೆ ಯೋಜನೆಯ ನೀರು

    ಕಾರಂಜಿಯಂತೆ 30 ಅಡಿ ಎತ್ತರಕ್ಕೆ ಚಿಮ್ಮಿದ 22 ಕೆರೆ ಯೋಜನೆಯ ನೀರು

    ದಾವಣಗೆರೆ: ಅಧಿಕಾರಿಗಳ ನಿರ್ಲಕ್ಷ್ಯದಿಂದ 22 ಕೆರೆ ಯೋಜನೆಯ ಪೈಪ್ ಒಡೆದು ಕಾರಂಜಿಯಂತೆ ನದಿಯ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.

    ತುಂಗಾಭದ್ರ ನದಿಯಿಂದ ದಾವಣಗೆರೆಯ ಬರ ತಾಲೂಕುಗಳ 22 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ಪೈಪ್ ಗಳು ಪದೇ ಪದೇ ಒಡೆದು ನೀರು ಪೋಲಾಗುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಪೈಪ್ ಹಾಗೂ ಏರ್ ವಾಲ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಅಲ್ಲದೆ ಇಂದು ಒಡೆದ ಪೈಪ್ ನಿಂದ ಪಕ್ಕದಲ್ಲೇ ಇರುವ ಡಾಬಾಗೆ ನೀರು ನುಗ್ಗಿದ್ದು, ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

    ಪದೇ ಪದೇ ನೀರು ಪೋಲಾಗುತ್ತಿದ್ದು, ಇಂದು ಮೂವತ್ತು ಅಡಿಗಳಷ್ಟು ಎತ್ತರಕ್ಕೆ ನೀರು ಚಿಮ್ಮುತ್ತಿದೆ. ಇದರಿಂದ ಲಕ್ಷಾಂತರ ಲೀಟರ್ ನೀರು ಪೋಲಾಗಿದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಇದಕ್ಕೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಬೆಳಗಾವಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ನಡೆದಿದೆ.

    ನೀರಾವರಿ ಇಲಾಖೆಯ ಅಧಿಕಾರಿಗಳು ಹಾರೋಗೇರಿ ಪಟ್ಟಣದ ಕೆರೆ ತುಂಬಿಸಲು, ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹಾಯಿಸಿದ್ದಾರೆ. ಏಕಾಏಕಿ ನೀರು ಹರಿಸಿದ್ದರಿಂದ ಹಾರೋಗೇರಿ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ತಗ್ಗು ಪ್ರದೇಶದಲ್ಲಿಂದರಿಂದ ನೀರು ತುಂಬಿಕೊಂಡಿದ್ದು, ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ನೀರಿನಿಂದಾಗಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.

    ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸದೇ ನೀರು ಹರಿಸಿದ್ದರಿಂದ ಕಾಲುವೆ ತುಂಬಿ ಹತ್ತಿರದ ಮನೆಗಳಿಗೆ ನುಗ್ಗಿದೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟಿದ್ದರ ಪರಿಣಾಮ ನೀರು ನುಗ್ಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

  • ಶೂ ತೆಗೆದುಕೊಂಡು ಹೋಗೋದಕ್ಕೂ ಬೇಕು ಬಂಟರು- ಬೆಳಗಾವಿಯಲ್ಲಿ ಗೋವಾಕ್ಕೆ ನೀರು ಬಿಟ್ಟ ಅಧಿಕಾರಿಗಳ ದರ್ಪ

    ಶೂ ತೆಗೆದುಕೊಂಡು ಹೋಗೋದಕ್ಕೂ ಬೇಕು ಬಂಟರು- ಬೆಳಗಾವಿಯಲ್ಲಿ ಗೋವಾಕ್ಕೆ ನೀರು ಬಿಟ್ಟ ಅಧಿಕಾರಿಗಳ ದರ್ಪ

    ಬೆಳಗಾವಿ: ನೀರಾವರಿ ಅಧಿಕಾರಿಯೊಬ್ಬರು ದರ್ಪ ತೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರು ತಮ್ಮ ಚಾಲಕನ ಕೈಯಲ್ಲಿ ಶೂ ತೆಗೆದುಕೊಂಡು ಹೋಗುವಂತೆ ಹೇಳೋ ಮೂಲಕ ದರ್ಪ ತೋರಿಸಿದ್ದಾರೆ.

    ಮಲಪ್ರಭೆ ನೀರು ಕಳಸಾಗೆ ಸೇರಿ ಗೋವಾ ಪಾಲಾಗುತ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಈ ದರ್ಪ ತೋರಿದ್ದಾರೆ. ಅಧಿಕಾರಿ ಭೇಟಿ ನೀಡುವ ಸ್ಥಳ ಕೆಸರಿನಿಂದ ತುಂಬಿತ್ತು. ಹೀಗಾಗಿ ಶೂ ಕಳಚಿದ ಅಧಿಕಾರಿ ಶೂ ಕಳಚಿ ತಮ್ಮ ಚಾಲಕ ಗಣಪತಿ ಮದ್ಲಿಗೆ ನೀಡಿದ್ದಾರೆ. ಆ ಬಳಿಕ ಚಾಲಕ ಅಧಿಕಾರಿಯ ಶೂ ಹಿಡಿದುಕೊಂಡು ಹೋಗಿದ್ದು, ಈ ಮೂಲಕ ಅಧಿಕಾರಿಯ ಶೂ ಸೇಫ್ ಆಗಿದೆ.