Tag: Iron

  • ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಅಹಮದಾಬಾದ್: ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳ ಹೊಟ್ಟೆಯಿಂದ ಸುಮಾರು 1.5 ಕೆ.ಜಿಯಷ್ಟು ಕಬ್ಬಿಣದ ವಸ್ತುಗಳನ್ನು ಅಹಮದಾಬಾದ್‍ನ ನಾಗರಿಕ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

    40 ವರ್ಷದ ಸಂಗೀತಾ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿದೆ. ಮಹಿಳೆಯು ಮೂಲತಃ ಮಹಾರಾಷ್ಟ್ರದ ಶಿರಡಿ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಕಳೆದ ಅಕ್ಟೋಬರ್ 31 ರಂದು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರದಿಂದ ಸಂಗೀತಾಳನ್ನು ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ವರ್ಗಾಯಿಸಲಾಗಿತ್ತು.

    ಕೆಲವು ದಿನಗಳಿಂದ ಸಂಗೀತ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಇದನ್ನು ಕಂಡ ವೈದ್ಯರು ಆಕೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ, ಹೊಟ್ಟೆಯಲ್ಲಿ ಕಬ್ಬಿಣದ ಮೊಳೆಗಳು, ಪಿನ್‍ಗಳು, ಯು-ಪಿನ್‍ಗಳು, ಬಳೆ-ಸರ, ಮಂಗಳಸೂತ್ರ ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಅದರಲ್ಲೂ ಒಂದು ಪಿನ್ ಸಂಗೀತಾಳ ಕರಳಿಗೆ ಚುಚ್ಚಿಕೊಂಡಿದ್ದ ಕಾರಣ ತಕ್ಷಣ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಲ್ಲಿದ್ದ ಸರಿಸುಮಾರು 1.5 ಕೆ.ಜಿ ತೂಕದ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯಲಾಯಿತು ಎಂದು ನಾಗರಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ವೈದ್ಯರಾದ ಡಾ. ನಿತಿನ್ ಪಾಮರ್ ತಿಳಿಸಿದರು.

    ಮಾನಸಿಕ ಅಸ್ವಸ್ಥ ರೋಗಿಗಳಲ್ಲಿ ಅಕ್ಯುಫಾಗಿಯಾ ಎಂಬ ರೋಗ ಲಕ್ಷಣವಿರುವವರು ಕಬ್ಬಿಣದ ವಸ್ತುಗಳು ಹಾಗೂ ಚೂಪಾದ ಯಾವುದೇ ವಸ್ತುಗಳನ್ನು ತಿಂದುಬಿಡುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.

    ಸದ್ಯ ಸಂಗೀತಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಗುಣಮುಖಳಾದ ಮೇಲೆ ಅವಳ ಮನೆಯವರನ್ನು ಪತ್ತೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಬ್ಬಿಣದ ಹಾರೆಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ

    ಕಬ್ಬಿಣದ ಹಾರೆಯಿಂದ ಹೊಡೆದು ಪತ್ನಿಯ ಹತ್ಯೆಗೈದ ಪತಿ

    ಕಲಬುರಗಿ: ಕ್ಷುಲ್ಲಕ ವಿಚಾರಕ್ಕೆ ಪತಿಯೇ ಪತ್ನಿಯನ್ನು ಕಬ್ಬಿಣದ ಹಾರೆಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೀರಾಪುರ ಗ್ರಾಮದಲ್ಲಿ ನಡೆದಿದೆ.

    ಹೀರಾಪುರ ಗ್ರಾಮದ ಸವಿತ (35) ಕೊಲೆಯಾದ ದುರ್ದೈವಿ. ಗುರುವಾರ ತಡರಾತ್ರಿ ಸವಿತ ಹಾಗೂ ಪತಿ ಸಂತೋಷ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಕುಪಿತಗೊಂಡ ಸಂತೋಷ್ ಮನೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ಸವಿತಾರ ತಲೆಗೆ ಹೊಡೆದು, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಪತಿ ಪರಾರಿಯಾಗಿದ್ದಾನೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ದಂಪತಿ ಮಧ್ಯೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ವ್ಯಕ್ತಿಯ ಹೊಟ್ಟೆಯಿಂದ 263 ನಾಣ್ಯ, ಚೈನ್, ಶೇವಿಂಗ್ ಬ್ಲೇಡ್‍ಗಳನ್ನ ಹೊರತೆಗೆದ ವೈದ್ಯರು

    ಭೋಪಾಲ್: ಮಧ್ಯಪ್ರದೇಶ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆವೊಂದನ್ನ ಮಾಡಿದ್ದು, ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಒಂದು ಚೈನ್, 263 ನಾಣ್ಯಗಳು ಹಾಗೂ ಶೇವಿಂಗ್ ಬ್ಲೇಡ್‍ಗಳು ಸೇರಿ ಒಟ್ಟು 5 ಕೆಜಿಯಷ್ಟು ಕಬ್ಬಿಣವನ್ನ ಹೊರತೆಗೆದಿದ್ದಾರೆ.

    ಇಲ್ಲಿನ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿನ ಸಾತ್ನಾ ಜಿಲ್ಲೆಯ ಸೋಹಾವಲ್ ನಿವಾಸಿಯಾದ 32 ವರ್ಷದ ಮೊಹಮ್ಮದ್ ಮಕ್ಸೂದ್‍ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವೆಂಬರ್ 18ರಂದು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಎಕ್ಸ್-ರೇ ಹಾಗೂ ಇನ್ನಿತರೆ ಪರೀಕ್ಷೆಗಳನ್ನ ಮಾಡಿದ ನಂತರ ಮಕ್ಸೂದ್ ಅವರ ಹೊಟ್ಟೆನೋವಿಗೆ ಕಾರಣ ಪತ್ತೆ ಮಾಡಿದೆವು. 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ 10-12 ಶೇವಿಂಗ್ ಬ್ಲೇಡ್‍ಗಳು, 4 ದೊಡ್ಡ ಸೂಜಿಗಳು, ಒಂದು ಚೈನ್ ಹಾಗೂ 263 ನಾಣ್ಯಗಳನ್ನ ಹೊರತೆಗೆದರು. ಜೊತೆಗೆ ಗ್ಲಾಸ್ ಪೀಸ್‍ಗಳು ಇದ್ದವು. ಒಟ್ಟು 5 ಕೆಜಿ ತೂಕದ ವಸ್ತುಗಳನ್ನ ಮಕ್ಸೂದ್ ಅವರ ಹೊಟ್ಟೆಯಿಂದ ಶುಕ್ರವಾರದಂದು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಪ್ರಿಯಾಂಕ್ ಶರ್ಮಾ ಹೇಳಿದ್ದಾರೆ.

    ರೇವಾ ಗೆ ಕರೆತರುವ ಮುನ್ನ ಮಕ್ಸೂದ್ ಅವರು ಸಾತ್ನಾದಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅವರ ಮನಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಈ ವಸ್ತುಗಳನ್ನ ನುಂಗಿರಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.

    ಸದ್ಯ ಮಕ್ಸೂದ್ ಚೇತರಿಸಿಕೊಳ್ಳುತ್ತಿದ್ದು, ತಜ್ಞ ವೈದ್ಯರ ತಂಡ ಅವರನ್ನ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

  • ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಬಳ್ಳಾರಿ: ಮಾವ ಶಾಸಕ, ಆದ್ರೆ ಶಾಸಕರ ಸೋದರಳಿಯ ಮಾತ್ರ ಮಹಾಕಳ್ಳ. ಶಾಸಕರ ಹೆಸರು ಬಳಸಿಕೊಂಡು ಜಿಂದಾಲ್ ಕಾರ್ಖಾನೆಯಲ್ಲಿ ಟ್ರಾನ್ಸ್ ಪೋರ್ಟ್ ಏಜೆನ್ಸಿ ಮಾಡುತ್ತಿದ್ದ ಗುಂಪೊಂದು ಸ್ಲಾಗ್ ಹೆಸರಿನಲ್ಲಿ ಜಿಂದಾಲ್ ಕಾರ್ಖಾನೆಯಿಂದಲೇ ಮಿದು ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿ ಕಳ್ಳರನ್ನ ಅರೆಸ್ಟ್ ಮಾಡಿದ್ದಾರೆ.

    ಜಿಂದಾಲ್ ಉದ್ಯೋಗಿಗಳ ಜೊತೆ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಸೋದರಳಿಯ ಯರ್ರಿಸ್ವಾಮಿ ಹಾಗೂ ಇನ್ನಿತರ ಹತ್ತು ಜನರ ವಿರುದ್ಧ ಜಿಂದಾಲ್ ಕಾರ್ಖಾನೆ ಆಡಳಿತ ಮಂಡಳಿ ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಪ್ರಕರಣದ ತನಿಖೆ ನಡೆಸಿದ ತೋರಣಗಲ್ ಪೊಲೀಸರು ನಾಲ್ವರು ಜಿಂದಾಲ್ ಸಿಬ್ಬಂದಿ ಸೇರಿದಂತೆ 7 ಜನರನ್ನು ಬಂಧಿಸಿದ್ದು ಇನ್ನೂ ಮೂವರಿಗೆ ಬಲೆ ಬೀಸಿದ್ದಾರೆ.

    ಹಂಪನಗೌಡ ಬಾದರ್ಲಿ

    ಪ್ರಕರಣಕ್ಕೆ ಸಂಬಧಿಸಿದಂತೆ 2 ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು ಇದೊಂದು ಬಹುದೊಡ್ಡ ಹಗರಣವಾಗಿರುವ ಶಂಕೆ ವ್ಯಕ್ತವಾಗಿದೆ.

  • ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ!

    ಪಾರ್ಕ್ ನಲ್ಲಿ ಆಟವಾಡುತ್ತಿದ್ದಾಗ ತಲೆಗೆ ಕಬ್ಬಿಣದ ರಾಡ್ ಬಿದ್ದು ಬಾಲಕಿ ದುರ್ಮರಣ!

    ಬೆಂಗಳೂರು: ಬಿಬಿಎಂಪಿ ಪಾರ್ಕ್‍ನಲ್ಲಿ ಬಾಲಕಿಯೊಬ್ಬಳ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದು ದಾರುಣ ಸಾವನ್ನಪ್ಪಿದ್ದಾಳೆ.

    ಬೆಂಗಳೂರಿನ ಕೆ.ಆರ್.ಪುರಂನ ಎಂವಿಜೆ ಲೇಔಟ್ ನಿವಾಸಿ ಬಾಬು ಹಾಗೂ ವಿಜಯಾ ದಂಪತಿಯ ಪುತ್ರಿ ಪ್ರಿಯಾ ಶನಿವಾರ ಸಂಜೆ ಆಟ ಆಡಲು ತೆರಳಿದ್ದಳು. ಈ ವೇಳೆ ಪಾರ್ಕ್‍ನಲ್ಲಿದ್ದ ಕಬ್ಬಿಣದ ರಾಡ್ ತುಂಡಾಗಿ ಪ್ರಿಯಾಳ ತಲೆ ಮೇಲೆ ಬಿದ್ದಿದೆ.

    ರಾಡ್ ಬಿದ್ದ ರಭಸಕ್ಕೆ ರಕ್ತಸಿಕ್ತ ಮಡುವಿನಲ್ಲಿ ಒದ್ದಾಡಿ ಪ್ರಿಯಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಮಕ್ಕಳ ಉದ್ಯಾನವನದಲ್ಲಿ ಆಟಿಕೆ ವಸ್ತುಗಳ ನಿರ್ಮಾಣ ಕಾಮಗಾರಿ ನಡೀತಿತ್ತು. ನಿರ್ಮಾಣ ಹಂತದಲ್ಲಿರುವಾಗಲೇ ಸಿಬ್ಬಂದಿ ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಟ್ಟಿದ್ದಕ್ಕೆ ಈ ಮಗು ಸಾವನ್ನಪ್ಪಿದೆ ಅನ್ನೋ ಆರೋಪವೂ ಕೇಳಿ ಬಂದಿದೆ.

    ಇನ್ನು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹಾದೇವಪುರ ಠಾಣೆ ಪೊಲೀಸ್ರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಪಾರ್ಕ್ ಉಸ್ತುವಾರಿ ವಹಿಸಿಕೊಂಡಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.