Tag: Iron nails

  • ತಂದೆ ಬೈದಿದ್ದಕ್ಕೆ 21 ಕಬ್ಬಿಣದ ಮೊಳೆಗಳನ್ನು ನುಂಗಿದ ಹುಡುಗ!

    ತಂದೆ ಬೈದಿದ್ದಕ್ಕೆ 21 ಕಬ್ಬಿಣದ ಮೊಳೆಗಳನ್ನು ನುಂಗಿದ ಹುಡುಗ!

    – ಹುಡುಗನ ಶಸ್ತ್ರಚಿಕಿತ್ಸೆ ಯಶಸ್ವಿ

    ಭೋಪಾಲ್: ಅಪ್ಪ ಬೈದರೆಂದು 17 ವರ್ಷದ ಹುಡುಗನೊಬ್ಬ 21 ಕಬ್ಬಿಣದ ಮೊಳೆಗಳನ್ನು ನುಂಗಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

    ಹುಡುಗನನ್ನು ಧನಂಜಯ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಈತನನ್ನು ತಂದೆ ಯಾವುದೋ ಒಂದು ವಿಚಾರಕ್ಕೆ ಗದದ್ದಾರೆ. ಇಷ್ಟಕ್ಕೆ ಸಿಟ್ಟುಕೊಂಡ ಆತ 21 ಕಬ್ಬಿಣದ ಮೊಳೆಗಳನ್ನು ನುಂಗಿ ಬಿಟ್ಟಿದ್ದಾನೆ. ಇದಾದದ ಬಳಿಕ ಹುಡುಗನಿಗೆ ಪ್ರತಿದಿನ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಗೊಂಡ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ತಾಯಿಯೊಂದಿಗೆ ಸೇರಿ ಅಕ್ಕನನ್ನು ಕೊಂದ ತಮ್ಮ- ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ

    ಇತ್ತ ಹುಡುಗನನ್ನು ಪರೀಕ್ಷೆ ನಡೆಸಿದ ವೈದ್ಯರಿಗೆ ಪರಿಸ್ಥಿತಿ ಏನೆಂಬುದು ಅರ್ಥವಾಗಲಿಲ್ಲ. ಹೀಗಾಗಿ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಡೆಸಬೇಕು ಎಂದು ಹೇಳಿದರು. ಈ ಸ್ಕ್ಯಾನಿಂಗ್ ವೇಳೆ ಹುಡುಗನ ಹೊಟ್ಟೆಯಲ್ಲಿ ಮೊಳೆಗಳಿರುವುದು ಕಂಡುಬಂದಿದೆ. ಇದನ್ನು ಕಂಡು ವೈದ್ಯರೇ ಒಂದು ಬಾರಿ ಶಾಕ್ ಗೆ ಒಳಗಾಗಿದ್ದು, ಕೂಡಲೇ ಆಪರೇಷನ್ ಮಾಡಿ ಮೊಳೆಗಳನ್ನು ಹೊರತೆಗೆಯಬೇಕು ಎಂದು ಹುಡುಗನ ಪೋಷಕರ ಬಳಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

    ಪೋಷಕರ ಒಪ್ಪಿಗೆ ಸಿಕ್ಕ ಕೂಡಲೇ ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಹೊರತೆಗೆಯಲಾಗಿದೆ. ಸದ್ಯ ಯುವಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದರು. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಪೊಲೀಸ್ – ಡಿಕ್ಕಿ ಹೊಡೆದು ಇಬ್ಬರಿಗೆ ಗಾಯ

  • ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ಜೈಪುರ: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

    ಹೌದು. ಅಚ್ಚರಿ ಎನಿಸಿದರು ಇದು ನಿಜ. ರಾಜಸ್ಥಾನದ ಬುಂಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಆಪರೇಷನ್ ನಡೆದಿದೆ. ಭೋಲಾ ಶಂಕರ್(42) ಅವರ ಹೊಟ್ಟೆಯಲ್ಲಿದ್ದ 116 ಕಬ್ಬಿಣದ ಮೊಳೆಗಳು ಹಾಗೂ ಕೆಲವು ವೈರ್ ಗಳನ್ನು ವೈದ್ಯ ಡಾ. ಅನೀಲ್ ಸೈನಿ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರೋಗಿಯೂ ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ. ಆದರೆ ಇದನ್ನು ಕಂಡ ವೈದ್ಯರು ಅಚ್ಚರಿಗೊಂಡು ಮತ್ತೆ ರೋಗಿಯ ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಇರುವುದು ಖಚಿತಪಟ್ಟಿದೆ. ಅದಾದ ಬಳಿಕ ಸೋಮವಾರದಂದು ರೋಗಿಯ ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ.

    ರೋಗಿಯು ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಚಿತ್ರವೆಂದರೆ ರೋಗಿಗೆ ತನ್ನ ಹೊಟ್ಟೆಯಲ್ಲಿ ಈ ಕಬ್ಬಿಣದ ವಸ್ತುಗಳು ಹೇಗೆ ಸೇರಿತು ಎನ್ನುವ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ ರೋಗಿಯ ಮನೆಯವರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

    ಈ ಬಗ್ಗೆ ಮಾತನಾಡಿರುವ ವೈದ್ಯರು, ರೋಗಿಯ ಹೊಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮೊಳೆಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಈ ಮೊಳೆಗಳು ಕರಳುಗಳನ್ನು ಪ್ರವೇಶಿಸಿರಲಿಲ್ಲ. ಏನಾದರೂ ಮೊಳೆಗಳು ಕರಳುಗಳಲ್ಲಿ ಹೊಕ್ಕಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಷ್ಟವಾಗುತಿತ್ತು. ರೋಗಿಯ ಹೊಟ್ಟೆಯಿಂದ ಎಲ್ಲಾ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ಹೊರತೆಗೆಯುವುದಕ್ಕೆ ಒಂದೂವರೆ ಗಂಟೆ ಸಮಯ ಬೇಕಾಯ್ತು. ಅದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಉದ್ದವಿತ್ತು ಎಂದು ತಿಳಿಸಿದರು.

    ಈ ಹಿಂದೆ ಕೂಡ ಇಂತಹ ಪ್ರಕರಣಗಳು ನಡೆದಿತ್ತು. ಕೋಲ್ಕತ್ತಾದಲ್ಲಿ ಸುಮಾರು 2.5 ಸೆ.ಮೀ ಉದ್ದದ ಕಬ್ಬಿಣದ ಮೊಳೆಗಳು ರೋಗಿಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿತ್ತು. ಅಲ್ಲದೆ 2017ರ ಜುಲೈನಲ್ಲಿ ಬುಂಡಿ ನಿವಾಸಿ ಭದ್ರಿಲಾಲ್(56) ಅವರ ದೇಹದಿಂದ ಬರೋಬ್ಬರಿ 150 ಸೂಜಿಗಳು ಹಾಗೂ ಮೊಳೆಗಳನ್ನು ಫರಿದಾಬಾದ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದರು.