Tag: Iron Gate

  • ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ದಾವಣಗೆರೆ: ಹುಟ್ಟುಹಬ್ಬದ (Birthday) ದಿನದಂದೇ ಕೌಂಪೌಂಡ್ (Compound) ಕುಸಿದುಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆಯ (Davanagere) ಬಸಾಪುರ (Basapura) ಗ್ರಾಮದಲ್ಲಿ ನಡೆದಿದೆ.

    ನಾಗಾರ್ಜುನ (11) ಮೃತ ಬಾಲಕ. ಈತ ಬಸಪುರ ಗ್ರಾಮದ ಗುರು ಶಾಂತಯ್ಯ ಎಂಬವರ ಪುತ್ರನಾಗಿದ್ದು, ಪಕ್ಕದ ಮನೆಗೆ ಆಟವಾಡಲು ತೆರಳಿದ್ದ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಕೌಂಪೌಂಡ್ ಗೋಡೆ ಕುಸಿದುಬಿದ್ದು ಮೃತಪಟ್ಟಿದ್ದಾನೆ. ನಾಗಾರ್ಜುನ ತನ್ನ 12ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುವ ಖುಷಿಯಲ್ಲಿದ್ದ. ಅದಕ್ಕಾಗಿ ಕುಟುಂಬಸ್ಥರು ರಾತ್ರಿಯೇ ಮನೆಗೆ ಕೇಕ್ ತಂದು ರಾತ್ರಿ 12ಕ್ಕೆ ಸರಿಯಾಗಿ ಮಗನ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದರು. ಇದನ್ನೂ ಓದಿ: ಶಹಾಪುರದಲ್ಲಿ 20 ಟನ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಖಾಲಿ ಲಾರಿ ಬಿಟ್ಟು ಖದೀಮರು ಪರಾರಿ

    ನಾಗಾರ್ಜುನ್ 9 ಗಂಟೆಯ ಸುಮಾರಿಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಸಂದರ್ಭ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆಯ ಮಾಲೀಕ ಸಿದ್ದಪ್ಪ ಅವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಕಾಏಕಿ ಕೌಂಪೌಂಡ್ ಕುಸಿದು ಬಿದ್ದ ಪರಿಣಾಮ ಕಬ್ಬಿಣದ ಗೇಟ್ (Iron Gate) ಬಾಲಕನ ತಲೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಾರ್ಜುನನ ಪೋಷಕರು ಬಡವರಾಗಿದ್ದು, ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾರ ಹುಣ್ಣಿಮೆ ತಡವಾಗಿ ಹೋಗು ಅಂದ್ರು ಮನೆಯವ್ರು – ಮಾತು ಲೆಕ್ಕಿಸದೇ ಹೊರಟ ವ್ಯಕ್ತಿ ಅಪಘಾತದಲ್ಲಿ ಸಾವು

  • ಶಾಲೆಯ ಕಬ್ಬಿಣದ ಗೇಟ್‌ ಬಿದ್ದು 8ರ ಬಾಲಕಿ ಸಾವು

    ಶಾಲೆಯ ಕಬ್ಬಿಣದ ಗೇಟ್‌ ಬಿದ್ದು 8ರ ಬಾಲಕಿ ಸಾವು

    ಅಹಮದಾಬಾದ್‌: ಸರ್ಕಾರಿ ಶಾಲೆಯೊಂದರಲ್ಲಿ ಕಬ್ಬಿಣದ ಗೇಟ್‌ (Iron Gate) ಬಿದ್ದು 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಗುಜರಾತ್‌ನ (Gujarat) ದಾಹೋದ್‌ ಜಿಲ್ಲೆಯಲ್ಲಿ ನಡೆದಿದೆ.

    ರಾಂಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ (School) ಈ ಘಟನೆ ನಡೆದಿದ್ದು, ಅಶ್ಮಿತಾ ಮೊಹಾನಿಯಾ (8) ಮೃತ ವಿದ್ಯಾರ್ಥಿನಿ (Student). ಈಕೆ ಶಾಲೆಯಲ್ಲಿದ್ದ ಕಬ್ಬಿಣದ ಗೇಟ್‌ನ ಬಳಿ ಆಟವಾಡುತ್ತಿದ್ದಳು. ಈ ವೇಳೆ ಅಶ್ಮಿತಾಳ ಮೇಲೆ ಭಾರವಾದ ಗೇಟ್‌ ಬಿದ್ದಿದೆ. ಇದರ ಪರಿಣಾಮವಾಗಿ ಬಾಲಕಿಯ ತಲೆಗೆ ಗಂಭೀರ ಗಾಯಗಳಾಗಿದೆ.

    ತಕ್ಷಣ ಅಲ್ಲಿದ್ದ ಶಿಕ್ಷಕರು, ಅಶ್ಮಿತಾಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ದಾಹೋದ್ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಕಾಂಗ್ರೆಸ್‌ ಶಾಸಕನ ಬಂಗಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

    ಘಟನೆಯ ನಂತರ, ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಈ ಆದೇಶ ತಕ್ಷಣದಿಂದಲೆ ಜಾರಿಗೆ ಬರುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ದಾಹೋದ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ಐಷಾರಾಮಿ ಕಾರು ಖರೀದಿ ನೆಪದಲ್ಲಿ ವಂಚಿಸಿದವ ಅರೆಸ್ಟ್- 10 ಕೋಟಿ ಮೌಲ್ಯದ 9 ಕಾರು ಜಪ್ತಿ

    Live Tv
    [brid partner=56869869 player=32851 video=960834 autoplay=true]