Tag: Iron Box

  • ಇಸ್ತ್ರಿ ಪೆಟ್ಟಿಗೆಯಲ್ಲಿತ್ತು 3.46 ಕೋಟಿ ಮೌಲ್ಯದ ಚಿನ್ನ

    ಇಸ್ತ್ರಿ ಪೆಟ್ಟಿಗೆಯಲ್ಲಿತ್ತು 3.46 ಕೋಟಿ ಮೌಲ್ಯದ ಚಿನ್ನ

    ಹೈದರಾಬಾದ್: 4 ಇಸ್ತ್ರಿ ಪೆಟ್ಟಿಗೆಯಲ್ಲಿ ಬರೋಬ್ಬರಿ 3.45 ಕೋಟಿ ಮೌಲ್ಯದ ಚಿನ್ನವನ್ನು ಅಡಿಗಿಸಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 3.46 ಕೋಟಿ ರೂಪಾಯಿ ಮೌಲ್ಯದ 9.21 ಕೆಜಿ ಚಿನ್ನವನ್ನು ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ದುಬೈ ಮೂಲದವನೆಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಈ ಚಾಲಾಕಿ ಆರೋಪಿ ಚಿನ್ನದ ಬಾರ್ ಗಳನ್ನು ಇಸ್ತ್ರಿ ಪೆಟ್ಟಿಗೆಯ ಹೀಟಿಂಗ್ ಕಾಯಿಲ್ ಅಳವಡಿಸುವ ಭಾಗದಲ್ಲಿ ಜೊಡಿಸಿ, ಅವುಗಳನ್ನು ಚೆಕ್ಡ್-ಇನ್ ಬ್ಯಾಗೇಜ್‍ನಲ್ಲಿ ಹಾಕಿ ಭದ್ರವಾಗಿ ಪ್ಯಾಕ್ ಮಾಡಿದ್ದನು.

    ಆದರೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆರೋಪಿ ಹಾಗೂ ಆತನ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 3,46,48,096 ರೂಪಾಯಿ ಬೆಲೆ ಬಾಳುವ ನಾಲ್ಕು ವಿ-ಆಕಾರದ ಚಿನ್ನದ ಬಾರ್ ಗಳನ್ನು ಪೊಲೀಸರು ವಶಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ.

    ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಹಿನ್ನೆಲೆ ಹಾಗೂ ಆತನ ಬಳಿ ಚಿನ್ನ ಹೇಗೆ ಬಂತು? ಎಲ್ಲಿಗೆ ಇದನ್ನು ಸಾಗಿಸುತ್ತಿದ್ದ ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

  • ಪತ್ನಿಯ ಗುಪ್ತಾಂಗವನ್ನು ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿ!

    ಪತ್ನಿಯ ಗುಪ್ತಾಂಗವನ್ನು ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿ!

    ಬೆಂಗಳೂರು: ತನ್ನ ಪತ್ನಿಯ ಗುಪ್ತಾಂಗಕ್ಕೆ ಐರನ್ ಬಾಕ್ಸ್ ನಿಂದ ಸುಟ್ಟ ಕ್ರೂರ ಪತಿಯೊಬ್ಬನನ್ನು ನಗರದ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಕುಮಾರ್ ಬಂಧಿತ ಪತಿ. ತವರು ಮನೆಯಿಂದ ಒಡವೆಗಳನ್ನು ತಂದಿಲ್ಲ ಎಂದು ಕೋಪಗೊಂಡ ದಿಲೀಪ್ ಸುಡುತ್ತಿರುವ ಐರನ್ ಬಾಕ್ಸ್ ನಿಂದ ಪತ್ನಿಯ ಗುಪ್ತಾಂಗವನ್ನು ಸುಟ್ಟಿದ್ದಾನೆ. ಐರನ್ ಬಾಕ್ಸ್ ವೈಯರ್ ನಿಂದ ಪತ್ನಿಯ ಕೈ, ಕಾಲುಗಳನ್ನು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾನೆ.

    ಸೆಪ್ಟಂಬರ್ 23ರ ಮಧ್ಯರಾತ್ರಿ ದಿಲೀಪ್ ಕುಡಿದು ಮನಗೆ ಬಂದಿದ್ದಾನೆ. ಕುಡಿದು ಬಂದಿದನ್ನು ಪತ್ನಿ ಪ್ರಶ್ನೆ ಮಾಡಿದ್ದಾರೆ. ತವರು ಮನೆಯಿಂದ ಒಡವೆ ತರದ ನೀನು ನನ್ನನ್ನು ಪ್ರಶ್ನಿಸುತ್ತೀಯಾ ಎಂದು ಬೈದು ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿಯನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=y8R_QxL_5BQ