Tag: Iron

  • ಕಬ್ಬಿಣ, ಸಿಮೆಂಟ್‌ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?

    ಕಬ್ಬಿಣ, ಸಿಮೆಂಟ್‌ ಬಳಸಿಲ್ಲ – ಕಲ್ಲಿನಿಂದಲೇ ಭವ್ಯ ರಾಮಮಂದಿರ ನಿರ್ಮಾಣ; ಯಾಕೆ ಗೊತ್ತಾ?

    – ಭೂಕಂಪವಾದ್ರೂ ತಡೆದುಕೊಳ್ಳುವ ಸಾಮರ್ಥ್ಯ

    500 ವರ್ಷಗಳ ಮತ್ತೊಂದು ವನವಾಸ ಮುಗಿಸಿ ಭಗವಾನ್‌ ರಾಮ ಅಯೋಧ್ಯೆಯಲ್ಲಿ (Ayodhya) ಮತ್ತೆ ಪಟ್ಟಕ್ಕೇರಿ ವಿರಾಜಮಾನನಾಗಿದ್ದಾನೆ. ಧರ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಅಯೋಧ್ಯೆ ಕಡೆ ಧಾವಿಸುತ್ತಿದೆ. ಸೋಮವಾರ ಪ್ರಾಣ ಪ್ರತಿಷ್ಠಾಪನೆಯಾಗಿದೆ. ದೇಶ-ವಿದೇಶಗಳಲ್ಲಿ ರಾಮ ಜಪ, ಭಜನೆ ಇನ್ನೂ ಮಾರ್ಧನಿಸುತ್ತಿದೆ. ಇದು ತೀರದ ಭಕ್ತಿ.

    ರಾಮನ ಪುನರಾಗಮನದಿಂದ ಅಯೋಧ್ಯೆ ರಾಮಮಂದಿರ (Ram Mandir) ಕಂಗೊಳಿಸುತ್ತಿದೆ. ಸುಂದರ ದೇವಾಲಯ ಈಗ ಜಗತ್ತಿನ ಭಕ್ತಿಯ ಕೇಂದ್ರವಾಗಿದೆ. ರಾಮಮಂದಿರ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಅಯೋಧ್ಯೆ ರಾಮಮಂದಿರಕ್ಕೆ ಬರುವ ಪ್ರತಿ ಭಕ್ತರಿಗೂ ಇದರ ವೈಶಿಷ್ಟ್ಯ ತಿಳಿದಿರಲೇಬೇಕು. ಇದನ್ನೂ ಓದಿ: ರಾಮಮಂದಿರದಲ್ಲಿರೋ ಮೂರ್ತಿಗೆ `ಬಾಲಕ ರಾಮ’ ಹೆಸರು: ಪ್ರತಿಷ್ಠಾಪನೆಯ ಅರ್ಚಕ ಅರುಣ್ ದೀಕ್ಷಿತ್ ಮಾಹಿತಿ

    ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು
    ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
    ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
    ಜಸವು ಜನಜೀವನಕೆ – ಮಂಕುತಿಮ್ಮ

    ಕನ್ನಡದ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿಗೆ ಹೇಳಿಮಾಡಿಸಿದಂತೆ ಅಯೋಧ್ಯೆ ರಾಮಮಂದಿರ ವಿನ್ಯಾಸ. ಈ ಭವ್ಯ ದೇವಾಲಯ ನಿರ್ಮಾಣಕ್ಕೆ ಸಾಂಪ್ರದಾಯಿಕ ಭಾರತೀಯ ಪರಂಪರೆಯ ವಾಸ್ತುಶಿಲ್ಪ ಹಾಗೂ ಆಧುನಿಕ ವಿಜ್ಞಾನ, ಎಂಜಿನಿಯರಿಂಗ್‌, ತಾಂತ್ರಿಕ ವಿಧಾನವನ್ನು ಸಂಯೋಜಿಸಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಶತಶತಮಾನಗಳ ವರೆಗೂ ರಾಮಭಕ್ತಿಯ ಪ್ರತಿಬಿಂಬವಾಗಿ ಈ ದೇವಾಲಯ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

    ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ‘ದೇವಾಲಯವನ್ನು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲಾಗಿದೆ. ಇದನ್ನು ಹಿಂದೆಂದೂ ಕಾಣದಂತಹ ಅಪ್ರತಿಮ ರಚನೆಯನ್ನಾಗಿ ಮಾಡಲು ಭಾರತದ ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ದೇವಾಲಯದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸೂಕ್ತವಾಗಿ ಬಳಸಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

    ನಾಗರ ಶೈಲಿ ದೇವಾಲಯ
    ಅಯೋಧ್ಯೆಯಲ್ಲಿ ಈಗ ಕಟ್ಟಲಾಗಿರುವ ರಾಮಮಂದಿರ ಸಂಪೂರ್ಣ ನಾಗರ ವಾಸ್ತು ಶೈಲಿಯಲ್ಲಿದೆ. ಉತ್ತರ ಭಾರತದ ಪುರಾತನ ದೇವಸ್ಥಾನಗಳೆಲ್ಲ ನಾಗರ ಶೈಲಿಯಲ್ಲೇ ಇವೆ. ಮುಖ್ಯವಾಗಿ ಗುಪ್ತರ ಕಾಲದಲ್ಲಿ ಶೈಲಿಯ ಹಲವು ದೇವಾಲಯಗಳನ್ನು ಕಾಣಬಹುದು. ನಾಗರ ಶೈಲಿಯ ವಿಶೇಷ ಏನೆಂದರೆ, ಕಲ್ಲುಗಳಿಂದ ವಿಶಾಲವಾದ ಮತ್ತು ಎತ್ತರವಾದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ ಮಂದಿರ ಕಟ್ಟಲಾಗುತ್ತದೆ. ದೊಡ್ಡ ಗೋಪುರದ ಕೆಳಗೆ ಗರ್ಭ ಗೃಹ ಇರುತ್ತದೆ. ಇದರ ಸುತ್ತ ಕೆಲವು ಮಂಟಪಗಳಿರುತ್ತವೆ (ರಾಮಮಂದಿರಕ್ಕೆ 5 ಮಂಟಪಗಳಿವೆ). ಉಳಿದಂತೆ ಗೋಪುರ, ಕಳಸ ಮತ್ತು ಅದರ ಮೇಲಿನ ಧ್ವಜ ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲೇ ಇರುತ್ತವೆ.

    ಈ ದೇವಾಲಯದ ಶಿಲ್ಪಿ ಯಾರು?
    ರಾಮಮಂದಿರ ವಾಸ್ತು ಶಿಲ್ಪಿ ಚಂದ್ರಕಾಂತ್‌ ಸೋಂಪುರ. ಅವರು ಗುಜರಾತ್‌ನ ಅಹಮದಾಬಾದ್‌ನ ಕರ್ಣಾವತಿಯವರು. ಅವರ ಅಜ್ಜ ಪ್ರಭಾಕರ್‌ ಸೋಂಪುರ ಗುಜರಾತ್‌ನ ಸೋಮನಾಥ ಮಂದಿರವನ್ನು ಕಟ್ಟಿದವರು. ನಾಗರ ಶೈಲಿಯಲ್ಲಿ ಮಂದಿರ ಕಟ್ಟುವ ಶಿಲ್ಪಿ ಅವರು. ತಲೆಮಾರುಗಳಿಂದ ಈ ಕುಟುಂಬ, ಸಂಪ್ರದಾಯದಂತೆ ಪರಂಪರೆಯ ದೇವಾಲಯ ರಚನೆಗಳನ್ನು ವಿನ್ಯಾಸಗೊಳಿಸಿಕೊಂಡು ಬಂದಿದೆ. ಈ ಕುಟುಂಬ 100 ಕ್ಕೂ ಹೆಚ್ಚು ದೇವಾಲಯಗಳನ್ನು ವಿನ್ಯಾಸಗೊಳಿಸಿದೆ. ಕೋಟ್ಯಂತರ ಭಾರತೀಯರ ಶತಶತಮಾನಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ವಿನ್ಯಾಸಗೊಳಿಸಿದ್ದು ಚಂದ್ರಕಾಂತ್‌ ಸೋಂಪುರ ಅವರ ಪುಣ್ಯ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ವಾಸ್ತುಶಿಲ್ಪಿ ಹೇಳೋದೇನು?
    ವಾಸ್ತುಶಿಲ್ಪದ ವಾರ್ಷಿಕಗಳಲ್ಲಿ ಶ್ರೀರಾಮ ದೇವಾಲಯವು ಭಾರತದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಯಾವುದೇ ಸ್ಥಳದಲ್ಲಿ ಇದುವರೆಗೆ ಕಲ್ಪಿಸಲಾಗದ ಅಪರೂಪದ, ವಿಶಿಷ್ಟ ರೀತಿಯ ಭವ್ಯವಾದ ಸೃಷ್ಟಿಯಾಗಿದೆ ಎಂದು ಚಂದ್ರಕಾಂತ್‌ ಸೋಂಪುರ ಹೇಳುತ್ತಾರೆ.

    ಮಂದಿರ ನಿರ್ಮಾಣಕ್ಕೆ ಕಬ್ಬಿಣ, ಸಿಮೆಂಟ್‌ ಬಳಕೆಯಿಲ್ಲ
    ರಾಮಮಂದಿರದ ಮತ್ತೊಂದು ವೈಶಿಷ್ಟ್ಯವೆಂದರೆ, ಪುರಾತನ ಕಾಲದಲ್ಲಿ ಶಿಲೆಯನ್ನಷ್ಟೇ ಬಳಸಿ ನಿರ್ಮಿಸುತ್ತಿದ್ದಂತೆಯೇ ಇದನ್ನೂ ನಿರ್ಮಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಬೃಹತ್‌ ಗಾತ್ರದ ಕಲ್ಲುಗಳನ್ನಷ್ಟೇ ಬಳಸಲಾಗಿದೆ. ಕಬ್ಬಿಣ, ಸಿಮೆಂಟ್‌ ಯಾವುದನ್ನೂ ಬಳಸಿಲ್ಲ. ಪ್ರಾಕೃತಿಕ ವಿಕೋಪಗಳಿಂದ ಮಂದಿರ ಡ್ಯಾಮೇಜ್‌ ಆಗಬಾರದು. ಅದರ ಆಯುಷ್ಯವೂ ಹೆಚ್ಚಿನ ವರ್ಷ ಬರಬೇಕು ಎಂಬ ದೃಷ್ಟಿಯಿಂದ ನಿರ್ಮಾಣ ಕಾರ್ಯದಲ್ಲಿ ಪಾರಂಪರಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ದೇವಾಲಯದ ಒಟ್ಟು ವಿಸ್ತೀರ್ಣ 2.7 ಎಕರೆ. ನಿರ್ಮಿತ ಪ್ರದೇಶವು ಸುಮಾರು 57,000 ಚದರ ಅಡಿಗಳಾಗಿದೆ. ಇದು ಮೂರು ಅಂತಸ್ತಿನ ರಚನೆಯಾಗಲಿದೆ. ಕಬ್ಬಿಣದ ಜೀವಿತಾವಧಿಯು ಕೇವಲ 80-90 ವರ್ಷಗಳಾಗಿರುತ್ತದೆ. ಹೀಗಾಗಿ, ದೇವಾಲಯದಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು, ಸಿಮೆಂಟ್‌ ಬಳಸಿಲ್ಲ ಎಂದು ನೃಪೇಂದ್ರ ಮಿಶ್ರಾ ಹೇಳುತ್ತಾರೆ. ದೇವಾಲಯದ ಎತ್ತರವು 161 ಅಡಿ. ಅಂದರೆ, ಕುತಾಬ್ ಮಿನಾರ್‌ನ ಎತ್ತರದ ಸುಮಾರು 70% ಇದೆ.

    ಉತ್ತಮ ಗುಣಮಟ್ಟದ ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ. ಜಾಯಿಂಟ್‌ (joints) ಮಾಡುವಂತಹ ಭಾಗಗಳಲ್ಲಿ ಸಿಮೆಂಟ್ ಅಥವಾ ಸುಣ್ಣದ ಗಾರೆಗಳ ಬಳಕೆ ಮಾಡಿಲ್ಲ. ಸಂಪೂರ್ಣ ರಚನೆಯ ನಿರ್ಮಾಣದಲ್ಲಿ ಲಾಕ್ ಮತ್ತು ಕೀ ಯಾಂತ್ರಿಕ ವ್ಯವಸ್ಥೆಯನ್ನು ಮಾತ್ರ ಬಳಸಲಾಗಿದೆ ಎಂದು ನಿರ್ಮಾಣ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪ್ ಕುಮಾರ್ ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಮನೆ-ಮನಗಳಲ್ಲಿ ದೀಪೋತ್ಸವ – ʻರಾಮ ಜ್ಯೋತಿʼ ಬೆಳಗಿಸಿದ ಪ್ರಧಾನಿ ಮೋದಿ

    2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದ್ರೂ ತಡೆದುಕೊಳ್ಳುತ್ತೆ
    ಪ್ರಾಕೃತಿಕ ವಿಕೋಪಗಳು ತಂದೊಡ್ಡಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರವನ್ನು ನಿರ್ಮಿಸಲಾಗಿದೆ. ಮಂದಿರದ ಆಯುಷ್ಯ ಹೆಚ್ಚು ವರ್ಷ ಇರಬೇಕು ಎಂಬ ದೃಷ್ಟಿಯಿಂದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಕೆಲಸ ಮಾಡಿದೆ. 2,500 ವರ್ಷಗಳ ವರೆಗೆ ಎಷ್ಟೇ ಭೂಕಂಪವಾದರೂ ಮಂದಿರಕ್ಕೆ ಯಾವುದೇ ಅಪಾಯವಿರುವುದಿಲ್ಲ. ಅದೆಲ್ಲವನ್ನೂ ತಡೆದುಕೊಂಡು ಸುರಕ್ಷಿತವಾಗಿ ನಿಲ್ಲುವಂತೆ ಮೂರು ಅಂತಸ್ತಿನ ಭವ್ಯ ಮಂದಿರ ನಿರ್ಮಿಸಲಾಗಿದೆ (ಈಗಾಗಲೇ ಮೊದಲ ಅಂತಸ್ತಿನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 2025 ರ ಹೊತ್ತಿಗೆ ಪೂರ್ಣಗೊಳ್ಳಲಿದೆ).

    ರಾಮಮಂದಿರ ಹೇಗೆ ಕಟ್ಟಲಾಗ್ತಿದೆ?
    ಇಡೀ ದೇವಾಲಯದ ಪ್ರದೇಶಕ್ಕೆ ಮಣ್ಣನ್ನು 15 ಮೀಟರ್ ಆಳಕ್ಕೆ ಅಗೆಯಲಾಗಿದೆ. 12-14 ಮೀಟರ್ ಆಳದಲ್ಲಿ ಇಂಜಿನಿಯರ್ಡ್ ಮಣ್ಣನ್ನು ಹಾಕಲಾಗಿದೆ. ಯಾವುದೇ ಕಬ್ಬಿಣದ ಸರಳುಗಳನ್ನು ಬಳಸಿಲ್ಲ. ರೋಲ್‌ ಮಾಡುವಾಗ 48 ಲೇಯರ್‌ (ಪದರ)ಗಳನ್ನು ಹಾಕಲಾಗಿದೆ. ಇದರ ಮೇಲೆ 1.5 ಮೀಟರ್ ದಪ್ಪದ M-35 ದರ್ಜೆಯ ಲೋಹ ಮುಕ್ತ ಕಾಂಕ್ರೀಟ್ ತೆಪ್ಪವನ್ನು ಬಲವರ್ಧನೆಯಾಗಿ ಹಾಕಲಾಗಿದೆ. ಅಡಿಪಾಯವನ್ನು ಮತ್ತಷ್ಟು ಬಲಪಡಿಸಲು ದಕ್ಷಿಣ ಭಾರತದಿಂದ ತಂದಿರುವ 6.3 ಮೀಟರ್ ದಪ್ಪದ ಗ್ರಾನೈಟ್ ಕಲ್ಲಿನ ಸ್ತಂಭವನ್ನು ಇರಿಸಲಾಗಿದೆ. ಈ ಕಲ್ಲುಗಳನ್ನು ಹೆಚ್ಚಾಗಿ ಕರ್ನಾಟಕದ್ದೇ ಬಳಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ರಾಜಸ್ಥಾನದ ಭರತ್‌ಪುರ ಜಿಲ್ಲೆ ಬಯಾನಾ ತಾಲೂಕಿನ ಒಂದು ಗುಡ್ಡದ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸ್ಯಾಂಡ್‌ ಸ್ಟೋನ್‌ ಸಿಗುತ್ತದೆ. ಆ ಕಲ್ಲುಗಳನ್ನು ಬಳಸಿ ಈ ಮಂದಿರದ ನಿರ್ಮಾಣ ಆಗಿದೆ. ಕೆತ್ತನೆ ಆಗಿಯೇ ಬಂದಿರುವ ಕಲ್ಲುಗಳಿವು. ಇದರಿಂದಾಗಿ ಈ ಮಂದಿರಕ್ಕೆ ಪ್ರಾಚೀನತೆಯ ಮೆರುಗು ಸಿಕ್ಕಿದೆ. CBRI ಪ್ರಕಾರ, ನೆಲ ಅಂತಸ್ತಿನ ಒಟ್ಟು ಅಂಕಣಗಳ ಸಂಖ್ಯೆ 160, ಮೊದಲ ಮಹಡಿ 132 ಮತ್ತು ಎರಡನೇ ಮಹಡಿ 74. ಇವೆಲ್ಲವೂ ಮರಳುಗಲ್ಲಿನಿಂದ ಮಾಡಲ್ಪಟ್ಟಿವೆ. ಅಲಂಕರಿಸಿದ ಗರ್ಭಗುಡಿಯು ರಾಜಸ್ಥಾನದಿಂದ ತೆಗೆದ ಬಿಳಿ ಮಕ್ರಾನ ಅಮೃತಶಿಲೆಯಿಂದ ಕೂಡಿದೆ. ತಾಜ್‌ಮಹಲ್‌ ನಿರ್ಮಾಣಕ್ಕೂ ಇದೇ ಶಿಲೆ ಬಳಸಲಾಗಿದೆ. ತಾಜ್‌ಮಹಲ್ ಅನ್ನು ಮಕ್ರಾನಾ ಗಣಿಗಳಿಂದ ತೆಗೆದ ಅಮೃತಶಿಲೆ ಬಳಸಿ ನಿರ್ಮಿಸಲಾಗಿದೆ. CBRI ಸಂಸ್ಥೆಯು 2020 ರ ಆರಂಭದಿಂದಲೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

    ಅತ್ಯಾಧುನಿಕ ಸಾಫ್ಟ್‌ವೇರ್‌ ಉಪಕರಣಗಳು ಮತ್ತು 21ನೇ ಶತಮಾನದ ಕಟ್ಟಡ ಸಂಕೇತಗಳು ರಾಮಮಂದಿರವನ್ನು ಪ್ರತಿನಿಧಿಸುತ್ತವೆ. ಈಗಿನ ಕಲೆಯ ಜ್ಞಾನದ ಆಧಾರದ ಮೇಲೆ ರಾಮಮಂದಿರವು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅತ್ಯಂತ ಆನಂದದಾಯಕ ಅನುಭವ. ಉತ್ತಮ ಕಲಿಕೆಯ ಕಾರ್ಯವಾಗಿತ್ತು ಎಂದು ರಾಮಂಚಾರ್ಲ ತಿಳಿಸಿದ್ದಾರೆ. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

  • ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳ ದರೋಡೆ

    ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳ ದರೋಡೆ

    ಚಾಮರಾಜನಗರ: ನೀರು ಕೇಳುವ ನೆಪದಲ್ಲಿ ಚಾಕು ತೋರಿಸಿ ಕಬ್ಬಿಣದ ವಸ್ತುಗಳನ್ನು ದರೋಡೆ ಮಾಡಿದ್ದ ಮೂವರನ್ನು ಚಾಮರಾಜನಗರ ಜಿಲ್ಲೆಯ ಪೊಲೀಸರು (Police) ಬಂಧಿಸಿದ್ದಾರೆ. (Arrest)

    ಚಾಮರಾಜನಗರ (Chamarajanagar) ಸಮೀಪದ ಮಾದಾಪುರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನೀರು ಕೇಳುವ ನೆಪದಲ್ಲಿ ಕಾಂಕ್ರೀಟ್ ಪ್ಲಾಂಟ್‍ನಲ್ಲಿ, 1.64 ಲಕ್ಷ ಮೌಲ್ಯದ ಕಬ್ಬಿಣದ ವಸ್ತುಗಳನ್ನು 6 ಮಂದಿ ದರೋಡೆ ಮಾಡಿದ್ದರು. ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಲಾಗಿದೆ. ಮೈಸೂರು ಮೂಲದ ನದೀಂಖಾನ್, ತನು, ಶಹಬ್ಬಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

    POLICE JEEP

    ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಈ ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಬಂಧಿತರಿಂದ ಲಕ್ಷಾಂತರ ಮೌಲ್ಯದ ಕಳ್ಳತನ ಮಾಡಿದ ವಸ್ತುಗಳು, ಒಂದು ಕಾರು, ಒಂದು ಗೂಡ್ಸ್ ಆಟೋ, ಮೊಬೈಲ್, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಅಡುಗೆ ಮಾಡುವ ಮುನ್ನ ಅಕ್ಕಿ ತೊಳೆದಿರಲಿಲ್ಲ- 31 ವಿದ್ಯಾರ್ಥಿಗಳು ಅಸ್ವಸ್ಥ

    Live Tv
    [brid partner=56869869 player=32851 video=960834 autoplay=true]

  • ಐರನ್, ಫೋಲಿಕ್ ಆಸಿಡ್ ಮಾತ್ರೆ ಸೇವಿಸಿ 21 ವಿದ್ಯಾರ್ಥಿಗಳು ಅಸ್ವಸ್ಥ

    ಐರನ್, ಫೋಲಿಕ್ ಆಸಿಡ್ ಮಾತ್ರೆ ಸೇವಿಸಿ 21 ವಿದ್ಯಾರ್ಥಿಗಳು ಅಸ್ವಸ್ಥ

    ಬೆಳಗಾವಿ: ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

    ಸವದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಊಟದ ಬಳಿಕ ಸೇವಿಸಬೇಕಿದ್ದ ಮಾತ್ರೆಯನ್ನು ಊಟಕ್ಕೂ ಮೊದಲೇ ಸೇವಿಸಿದ್ದರಿಂದ ಅವಘಢ ಸಂಭವಿಸಿದೆ. ಇದನ್ನೂ ಓದಿ: ಮಂಗಳೂರಿನ ಪಬ್‍ನಲ್ಲಿ ವಿದ್ಯಾರ್ಥಿಗಳ ಮೋಜು – ಪಾರ್ಟಿಗೆ ಭಜರಂಗದಳದಿಂದ ಅಡ್ಡಿ

    ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು, ತಲೆನೋವು ಎಂದು ಬಳಲುತ್ತಿರುವ 21 ಮಂದಿಗೆ ಸವದತ್ತಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಘಟನಾ ಸ್ಥಳಕ್ಕೆ ಟಿಎಚ್‍ಒ ಡಾ. ಮಹೇಶ್ ಚಿತ್ತರಗಿ, ಬಿಇಒ ಶ್ರೀಶೈಲ್ ಕರಿಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ

    Live Tv
    [brid partner=56869869 player=32851 video=960834 autoplay=true]

  • ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್

    ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್

    ಸಾಮಾನ್ಯವಾಗಿ ಕಬ್ಬಿಣದ ಇಸ್ತ್ರಿ ಪೆಟ್ಟಿಗೆಯಿಂದ ಇಸ್ತ್ರಿ ಮಾಡುವಾಗ ಬಟ್ಟೆಯ ಮೇಲೆ ನೀರನ್ನು ಸಿಂಪಡಿಸಿ ಇಸ್ತ್ರಿ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ವ್ಯಕ್ತಿಯೋರ್ವ ಬಟ್ಟೆಯ ಮೇಲೆ ನೀರನ್ನು ಉಗುಳಿ ವಿಭಿನ್ನವಾಗಿ ಇಸ್ತ್ರಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by THE ADULT SOCIETY (@adultsociety)

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ವಯಸ್ಸಾದ ವ್ಯಕ್ತಿಯೊರ್ವ ಬಟ್ಟೆ ಇಸ್ತ್ರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇಸ್ತ್ರಿ ಮಾಡುವ ಮುನ್ನ ಕೈಯಲ್ಲಿ ನೀರು ತುಂಬಿದ ಬಟ್ಟಲು ಹಿಡಿದುಕೊಂಡು, ನೀರನ್ನು ಕುಡಿದು ನಂತರ ಬಾಯಿಯೊಳಗಿದ್ದ ನೀರನ್ನು ಮತ್ತೆ ಬಟ್ಟೆಯ ಮೇಲೆ ಉಗುಳಿ ಇಸ್ತ್ರಿ ಮಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಹೆತ್ತ ತಾಯಿಯ ಕತ್ತು ಸೀಳಿ ಕೊಂದು, ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಗ

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು (3 ಮಿಲಿಯನ್) 30 ಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಬಹಳ ಅಸಹ್ಯಕರವಾಗಿದೆ ಎಂದು ಹಲವರು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ

    Live Tv
    [brid partner=56869869 player=32851 video=960834 autoplay=true]

  • ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಶಿವಮೊಗ್ಗದ ಖೈದಿ

    ಶಿವಮೊಗ್ಗ: ಖೈದಿಯೊಬ್ಬನು ಗ್ರಂಥಾಲಯದ ಕಬ್ಬಿಣದ ರ್ಯಾಕ್‍ಗೆ ಅಳವಡಿಸಿದ ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

    ತೀರ್ಥಹಳ್ಳಿ ಮೂಲದ ಮಹಮ್ಮದ್ ನೌಷದ್ (34) ಕುತ್ತಿಗೆ ಕೊಯ್ದುಕೊಂಡ ಖೈದಿ. ಗಾಂಜಾ ಪ್ರಕರಣದಲ್ಲಿ ಜ.7ರಂದು ಬಂಧನಕ್ಕೆ ಒಳಗಾಗಿದ್ದ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಗಾಂಜಾ ಹಾಗೂ ಮದ್ಯ ವ್ಯಸನಿಯಾಗಿದ್ದ ನೌಷದ್‍ನನ್ನು ನೋಡಲು ಕಾರಾಗೃಹಕ್ಕೆ ಯಾರೂ ಬರುತ್ತಿರಲಿಲ್ಲ. ಜಾಮೀನು ಕೊಡಿಸುತ್ತಿಲ್ಲ ಅಂತ ಮನನೊಂದಿದ್ದ. ಗಾಯಗೊಂಡ ಖೈದಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್

    ಉಡುಪಿ: ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ಮೈಗೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ವಸ್ತುಗಳು ಅಂಟುತ್ತದೆ. ಇದೊಂದು ಕೌತುಕ.. ವಿಸ್ಮಯ.. ಮೈಯ್ಯಲ್ಲಿ ಅಯಸ್ಕಾಂತೀಯ ಶಕ್ತಿಯಿದೆ. ಹೀಗಂತ ಒಂದು ವೀಡಿಯೋ ಉಡುಪಿಯಲ್ಲಿ ಶೇರ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆ ಪೂರ್ಣಪ್ರಜ್ಞ ಕಾಲೇಜು ಸಮೀಪದವರಾಗಿದ್ದಾರೆ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು ವಸ್ತುಗಳು ಅವರ ದೇಹಕ್ಕೆ ಅಂಟಿಕೊಂಡಿದ್ದು, ಅವರಿಗೆ ಆಶ್ಚರ್ಯವಾಗಿದೆ.

    ಕೊರೊನಾ ವಿರುದ್ಧ ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಹೀಗಾಗಿದೆ ಎಂದು ವೀಡಿಯೋ ವೈರಲಾಗಿದೆ. ವ್ಯಾಕ್ಸಿನ್ ಪಡೆಯೋ ಮೊದಲು ಈ ರೀತಿ ರಾಮದಾಸ್ ಯಾವುದೇ ಪ್ರಯತ್ನ ನಡೆಸಿಲ್ವಂತೆ. ಹಾಗಾಗಿ ವ್ಯಾಕ್ಸಿನ್‍ಗೂ ಈ ಬೆಳವಣಿಗೆಗೂ ಸಂಬಂಧ ಇಲ್ಲ ಎಂದೂ ಹೇಳಲಾಗುತ್ತಿದೆ. ದೆಹಲಿ ಮತ್ತು ಪಂಜಾಬ್‍ನಲ್ಲಿ ನಡೆದ ಇಂತಹ ಘಟನೆಯ ಬಗ್ಗೆ ಈಗಾಗಲೇ ತಜ್ಞರು, ಅಭಿಪ್ರಾಯ ವ್ಯಕ್ತಪಡಿಸಿದ್ದು ವ್ಯಾಕ್ಸಿನ್ ಪಡೆಯುವುದರಿಂದ ಈ ರೀತಿ ಆಗುವುದಿಲ್ಲ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದರು. ಕೆಲವು ವ್ಯಕ್ತಿಗಳ ಮೈಗುಣಕ್ಕೆ ಹೀಗಾಗುತ್ತದೆ. ಈ ಬಗ್ಗೆ ಸಂಶೋಧನೆ ಆಗಬೇಕು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಇದನ್ನೂ ಓದಿ: ಅಪರೂಪದ ಬಿಳಿ ನಾಗರಹಾವು ಪ್ರತ್ಯಕ್ಷ – ರಸ್ತೆಯಲ್ಲಿಯೇ ಕೈ ಮುಗಿದ ಜನ

  • ಕಬ್ಬಿಣದ ಅದಿರು ರಫ್ತಿಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ

    ಕಬ್ಬಿಣದ ಅದಿರು ರಫ್ತಿಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ

    ಬೆಂಗಳೂರು: ರಾಜ್ಯದಿಂದ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಸುಪ್ರೀಂಕೋರ್ಟ್ ನಲ್ಲಿ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ಮೇಲ್ಮನವಿ ಅರ್ಜಿ ಹಾಕಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ತೀರ್ಮಾನಿಸಿದೆ. ಉನ್ನತಾಧಿಕಾರಿಗಳ ಸಮಿತಿ(ಸಿಇಸಿ)ಯ ಅಭಿಪ್ರಾಯ ಪಡೆದು ಕಬ್ಬಿಣದ ಅದಿರು ರಫ್ತು ಮಾಡಲು ವಿಧಿಸಿರುವ ನಿಷೇಧವನ್ನು ತೆರವು ಮಾಡುವಂತೆ ಮನವಿ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

    ಗುರುವಾರ ವಿಕಾಸಸೌಧದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿದರು. ವಿದೇಶಕ್ಕೆ ರಫ್ತು ಮಾಡುವ ಸಂಬಂಧ ಅಭಿಪ್ರಾಯ ಕೇಳಲಾಗಿತ್ತು. ಕರ್ನಾಟಕದಿಂದ ಕಬ್ಬಿಣದ ಅದಿರನ್ನು ವಿದೇಶಕ್ಕೆ ರಫ್ತು ಮಾಡುವ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

    ದೇಶದ ಯಾವುದೇ ರಾಜ್ಯಗಳಲ್ಲೂ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡಲು ನಿಷೇಧ ಹೇರಿಲ್ಲ. ಕರ್ನಾಟಕದಲ್ಲಿ ಮಾತ್ರ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ವರಮಾನವು ನಿಂತು ಹೋಗಿದೆ. ಕೇಂದ್ರ ಸರ್ಕಾರವೂ ನಮಗೆ ಸಂಪೂರ್ಣವಾದ ಸಹಕಾರವನ್ನು ನೀಡುತ್ತಿದೆ. ನ್ಯಾಯಾಲಯದಲ್ಲಿ ಕಾನೂನಿನ ನೆರವು ನೀಡುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಮ್ಮ ನಿಲುವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸರ್ಕಾರಕ್ಕೆ ಹೆಚ್ಚಿನ ವರಮಾನ ತಂದುಕೊಡುವ ಪ್ರಮುಖ ಮೂಲವು ಇದಾಗಿದೆ. ಈ ಎಲ್ಲ ಅಂಶಗಳನ್ನು ಪ್ರಹ್ಲಾದ್ ಜೋಶಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯದ ನಿಲುವಿಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು. ಅದಿರು ರಫ್ತು ಮಾಡುವ ಸರ್ಕಾರದ ನಿಲುವನ್ನು ಸಿಇಸಿಯವರೆಗೂ ಮನವರಿಕೆ ಮಾಡಿಕೊಡಲಾಗುವುದು. ಕಾನೂನಿನ ಇತಿಮಿತಿಯಲ್ಲೇ ಮಾಡಲಿದ್ದೇವೆ ಎಂದು ಪುನರುಚ್ಚರಿಸಿದರು.

    ದಿನದ 24 ಗಂಟೆಯವರೆಗೆ ಮೈನಿಂಗ್‍ಗೆ ಅವಕಾಶ ಇದೆ. ಸಾಗಾಣಿಕೆಗೆ ಮಾತ್ರ 12 ಗಂಟೆ ಇದೆ. ಇದರಿಂದ ನಮ್ಮ ಕಾರ್ಖಾನೆಯವರಿಗೆ ಸಮಸ್ಯೆಯಾಗಿದೆ ಎಂದು ಮನವಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗಣಿ ಕಂಪನಿಗಳಿಂದ ಸಂಗ್ರಹಣೆ ಮಾಡಿರುವ ರಾಯಲ್ಟಿ ಹಣವೂ ಸುಪ್ರೀಂಕೋರ್ಟ್ ನಲ್ಲಿದೆ. ಇದನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಬಹುದು. ಇದನ್ನು ರಾಜ್ಯಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಹೇಳಿದರು.

    ಪ್ರಸ್ತುತ ರಾಜ್ಯದಲ್ಲಿ 35 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತದೆ. 2030ರ ವೇಳೆಗೆ ಇದನ್ನು 70 ದಶಲಕ್ಷ ಮೆಟ್ರಿಕ್ ಟನ್ ಗೆ ಕೊಂಡೊಯ್ಯುವ ಗುರಿ ಹಾಕಿಕೊಳ್ಳಲಾಗಿದೆ. 100 ಮೈನಿಂಗ್ ಹೊಸದಾಗಿ ಮಾಡುವ ಬಗ್ಗೆ ಗುರಿಹೊಂದಲಾಗಿದೆ. 3 ಸಾವಿರ ಅರ್ಜಿಗಳು ಬಂದಿವೆ. ಅದನ್ನು ತ್ವರಿತವಾಗಿ ವಿಲೇವಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಆತ್ಮ ನಿರ್ಭರ್ ಅಡಿಯಲ್ಲಿ 500 ಮೈನಿಂಗ್ ಮಾಡಲು ನಿರ್ದೇಶನ ಮಾಡಲಾಗಿದೆ. ಎರಡು ವರ್ಷದಲ್ಲಿ 100 ಮೈನಿಂಗ್ ಮಾಡಲು ಶ್ರಮ ವಹಿಸುತ್ತೇವೆ ಎಂದು ಸಚಿವ ನಿರಾಣಿ ತಿಳಿಸಿದರು.

    ರಾಜ್ಯದಲ್ಲಿ ಮೈನಿಂಗ್ ಸಂಪನ್ಮೂಲ ಚೆನ್ನಾಗಿದೆ, ಗೋಲ್ಡ್ ಮೈನಿಂಗ್ ರಾಜ್ಯದಲ್ಲಿ ಚೆನ್ನಾಗಿದೆ. ಖನಿಜ ಸಂಪತ್ತನ್ನು ಉಪಯೋಗಿಸಿಕೊಳ್ಳಲು ಸಲಹೆ ಬಂದಿದೆ. ರಾಜ್ಯದಲ್ಲಿ ಒಟ್ಟು ಎಷ್ಟು ಪ್ರಮಾಣದಲ್ಲಿ ಅದಿರು ಇದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯುತ್ತಿಲ್ಲ. ಹೀಗಾಗಿ ಇದನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ. ಎಲ್ಲಿ, ಎಷ್ಟು ಪ್ರಮಾಣದಲ್ಲಿದೆ? ಇದರ ಗುಣಮಟ್ಟ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಮೀಕ್ಷೆ ನಡೆಸುತ್ತೇವೆ ಎಂದರು.

    ಯಡಿಯೂರಪ್ಪ ನಮ್ಮ ನಾಯಕರು
    ನಾಯಕತ್ವ ಬದಲಾವಣೆ ನನಗೆ ಗೊತ್ತಿಲ್ಲ. ಬಿಎಸ್‍ವೈ ಇಳಿ ವಯಸ್ಸಿನಲ್ಲಿಯೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಇಷ್ಟು ಕೆಲಸ ಮಾಡುತ್ತಿದ್ದಾರೆ. ಅವರ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆದಿದ್ದಾರೆ. ಮುಂದಿನ ಎರಡು ವರ್ಷದವರೆಗೆ ಅವರೇ ಮುಂದುವರೆಯಬೇಕು. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಸಿಎಂ ಸೀಟು ಖಾಲಿ ಇಲ್ಲ, ಇದ್ದಿದ್ದರೆ ಮಾತನಾಡಬಹುದಿತ್ತು. ಆದರೆ ಬಿಎಸ್‍ವೈ ಆ ಸ್ಥಾನದಲ್ಲಿ ಇದ್ದಾರೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕಿದರು.

    ನಾವು ಕೊರೊನಾ ಸಂಬಂಧ, ನಮ್ಮ ಇಲಾಖೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಹೈ ಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧ ಎಂದು ಗೊಂದಲಗಳಿಗೆ ತೆರೆಎಳೆದರು. ಮುಂದಿನ ಚುನಾವಣೆಯಲ್ಲಿ ಎಮ್‍ಎಲ್‍ಎ ಸೀಟ್ ಕೊಡುವುದಿಲ್ಲ ಎಂದು ಪಕ್ಷ ತೀಮಾ9ನ ಮಾಡಿದರೆ ಅದಕ್ಕೂ ಬದ್ಧ. ನಮ್ಮ ಪಕ್ಷ ಏನೇ ಹೇಳಿದರೂ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.

  • ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಕಬ್ಬಿಣದ ಬಳಕೆ ಇಲ್ಲ – ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ

    ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣ ಕಾರ್ಯ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.

    ರಾಮ ಮಂದಿರ ದೇವಾಲಯ ಸಂಬಂಧ ಮಾಹಿತಿ ನೀಡಲೆಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೆಸರಿನಲ್ಲಿ ಟ್ವಿಟ್ಟರ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ.

     

    ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ(ಸಿಬಿಆರ್‌ಐ), ಮದ್ರಾಸ್‌ ಐಐಟಿ ಮತ್ತು ಎಲ್‌ ಆಂಡ್‌ ಟಿ ಕಂಪನಿಯ ಎಂಜಿನಿಯರ್‌ಗಳು ಈಗ ಮಂದಿರ ನಿರ್ಮಾಣವಾಗುವ ಭಾಗದಲ್ಲಿರುವ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. 36-40 ತಿಂಗಳ ಒಳಗಡೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದೆ.

    ಎರಡನೇ ಟ್ವೀಟ್‌ನಲ್ಲಿ, ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಮಂದಿರವನ್ನು ನಿರ್ಮಿಸಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂಭವಿಸಿದರೂ ಅದನ್ನು ತಡೆಯಬಲ್ಲ ಸಾಮರ್ಥ್ಯ ಇರುವ ದೇವಾಲಯವನ್ನು ಕಟ್ಟಲಾಗುತ್ತದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದೆ.

    ಈ ಟ್ವೀಟ್‌ಗೆ ಜನರು ಕಬ್ಬಿಣ ಇಲ್ಲದೇ ದೇವಾಲಯವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕೆಲವರು ಹಿಂದಿನ ಕಾಲದ ದೇವಾಲಯದಲ್ಲಿ ಕಬ್ಬಿಣದ ಬಳಕೆ ಇರಲಿಲ್ಲ. ಕಬ್ಬಿಣದ ಬಳಕೆ ಮಾಡಿದರೆ ಹಲವು ವರ್ಷಗಳ ಬಳಿಕ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಈ ಹಿಂದೆ ನಿರ್ಮಾಣವಾದ ದೇವಾಲಯಗಳಲ್ಲಿ ಕಬ್ಬಿಣ ಇರಲಿಲ್ಲ. ಕಲ್ಲುಗಳನ್ನು ಬಳಸಿ ನಿರ್ಮಿಸಿದ ದೇವಾಲಯ ನೂರಾರು ವರ್ಷಗಳ ಕಾಲ ಬಾಳಿಕೆ ಬಂದಿದೆ ಎಂದು ಉತ್ತರಿಸಿದ್ದಾರೆ.

    ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.

    ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.

    ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

    ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ಮಾಡಿದ್ದರು‌.

  • ಪರವಾನಿಗೆ ಇಲ್ಲದ ಲಕ್ಷಾಂತರ ಮೌಲ್ಯದ ಗ್ರಾನೈಟ್, ಕಬ್ಬಿಣ ವಶ

    ಪರವಾನಿಗೆ ಇಲ್ಲದ ಲಕ್ಷಾಂತರ ಮೌಲ್ಯದ ಗ್ರಾನೈಟ್, ಕಬ್ಬಿಣ ವಶ

    ನೆಲಮಂಗಲ: ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಗ್ರಾನೈಟ್ ಮತ್ತು ಕಬ್ಬಿಣ ಸಾಗಿಸುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣ ಬಳಿಯ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ಮಾಡಿದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಾರಿಗಳನ್ನು ಪರಿಶೀಲನೆ ಮಾಡಿ ದಾಖಲೆಗಳು, ಪರವಾನಗಿ ಇಲ್ಲದೆ ಇರುವ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಮುಖಾಂತರ ಬೆಂಗಳೂರಿನಿಂದ ಪುಣೆ ಮಹಾರಾಷ್ಟ್ರಕ್ಕೆ ಲಾರಿಗಳು ಹೋಗುತ್ತಿದ್ದವು. ನೆಲಮಂಗಲ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.

  • ಓವರ್ ಡ್ಯೂಟಿ ಮಾಡಿ ನಂಬಿಕೆ ಗಿಟ್ಟಿಸಿ, ಲೋಡ್‍ಗಟ್ಟಲೇ ಕಬ್ಬಿಣ ಸಾಗಿಸಿದ ಸೆಕ್ಯೂರಿಟಿಗಳು

    ಓವರ್ ಡ್ಯೂಟಿ ಮಾಡಿ ನಂಬಿಕೆ ಗಿಟ್ಟಿಸಿ, ಲೋಡ್‍ಗಟ್ಟಲೇ ಕಬ್ಬಿಣ ಸಾಗಿಸಿದ ಸೆಕ್ಯೂರಿಟಿಗಳು

    ಬೆಂಗಳೂರು: ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಆರೋಪಿಗಳು, ಸಮಯವನ್ನೂ ಲೆಕ್ಕಿಸದೆ ಹೆಚ್ಚುವರಿ ಕೆಲಸ ಮಾಡಿ ಮಾಲೀಕನ ನಂಬಿಕೆ ಗಿಟ್ಟಿಸಿಕೊಂಡು ನಂತರ ರಾತ್ರೋ ರಾತ್ರಿ ಲೋಡ್‍ಗಟ್ಟಲೇ ಕಬ್ಬಿಣವನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

    ಹೆಚ್‍ಎಎಲ್ ಬಳಿಯ ಹೊಂಬಾಳೆ ಕನ್‍ಸ್ಟ್ರಕ್ಷನ್ ಹಾಗೂ ಕಶ್ಯಪ್ ಗ್ರೂಪ್ ಕಂಪನಿಗಳಲ್ಲಿ ಕಬ್ಬಿಣ ಸಾಗಿಸಿದ್ದ ಆರೋಪಿಗಳಾದ ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಖತರ್ನಾಕ್ ಸೆಕ್ಯುರಿಟಿ ಗಾರ್ಡ್ ಗಳನ್ನು ಹೆಚ್‍ಎಎಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ 14 ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ.

    ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬರುತ್ತಿದ್ದ ಆರೋಪಿಗಳು, ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ನಂತರ ಕೆಲಸದ ಅವಧಿ ಪೂರ್ಣಗೊಂಡರೂ, ಮನೆಗೆ ತೆರಳದೇ ಹೆಚ್ಚುವರಿ ಕೆಲಸ ಮಾಡುತ್ತಿದ್ದರು. ಈ ಕೆಲಸಕ್ಕೆ ಹೆಚ್ಚುವರಿ ಸಂಬಳವನ್ನೂ ಕೇಳುತ್ತಿರಲಿಲ್ಲ. ಇದರಿಂದಾಗಿ ಮಾಲೀಕರಿಗೆ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಅಪಾರ ನಂಬಿಕೆ ಬಂದಿತ್ತು. ಹೀಗೆ ನಂಬಿಕಸ್ಥರಂತೆ ವರ್ತಿಸಿ ರಾತ್ರೋ ರಾತ್ರಿ ಲಾರಿಯಲ್ಲಿ ಲೋಡ್ ಗಟ್ಟಲೇ ಕಬ್ಬಿಣವನ್ನು ಸಾಗಿಸಿದ್ದರು.