Tag: Irfan Solanki

  • ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ಗೆ 7 ವರ್ಷ ಜೈಲು ಶಿಕ್ಷೆ

    ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ಗೆ 7 ವರ್ಷ ಜೈಲು ಶಿಕ್ಷೆ

    ಲಕ್ನೋ: ಕಾನ್ಪುರದ (Kanpur) ಜಾಜ್ಮೌ ಪ್ರದೇಶದಲ್ಲಿ ಬೆಂಕಿ ಹಚ್ಚಿ ಮನೆ ಸುಟ್ಟ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ ಸೋಲಂಕಿಗೆ (Irfan Solanki) 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಾನ್ಪುರದ ಸಂಸದ-ಶಾಸಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಸೋಲಂಕಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆತನ ಸಹೋದರ ರಿಜ್ವಾನ್ ಸೋಲಂಕಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ಶಿಕ್ಷೆ ವಿಧಿಸಲಾಗಿದೆ. 2022ರ ನವೆಂಬರ್‌ನಲ್ಲಿ ಜಾಜ್ಮೌದಲ್ಲಿ ವಿಡಿಪಿಡಬ್ಲ್ಯೂ ಅವರ ಮನೆಗೆ ಬೆಂಕಿ ಹಚ್ಚಿದ ಆರೋಪ ಸಮಾಜವಾದಿ ಪಕ್ಷದ ನಾಯಕರ ಮೇಲಿದೆ. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ ಅಮಿತ್‌ ಶಾ

    ಕೋರ್ಟ್‌ ಆದೇಶದಿಂದಾಗಿ ಸೋಲಂಕಿ, ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾಗುವ ಯಾವುದೇ ಶಾಸಕರು ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆ. ಗಂಭೀರ ಕ್ರಿಮಿನಲ್‌ ಅಪರಾಧ ಹೊಂದಿರುವ ವ್ಯಕ್ತಿ ಶಾಸಕರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ. ಪ್ರತಿ ಅಪರಾಧಿಗೆ ಒಟ್ಟು 30,500 ರೂ. ದಂಡವನ್ನು ವಿಧಿಸಲಾಗಿದೆ.

    ನಜೀರ್‌ ಫಾತಿಮಾ ಪರವಾಗಿ ಜಾಜ್ಮೌ ಪೊಲೀಸ್‌ ಠಾಣೆಯಲ್ಲಿ 2022ರ ನವೆಂಬರ್‌ 8 ರಂದು ಪ್ರಕರಣ ದಾಖಲಾಗಿತ್ತು. ಶಾಸಕ ಸೇರಿ ಒಟ್ಟು 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ತನ್ನ ಮನೆಯನ್ನು ಎಲ್ಲರೂ ಸುಟ್ಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣವಚನಕ್ಕೆ ಬಿಎಸ್‌ವೈಗೆ ಆಹ್ವಾನ

  • ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ಎಸ್‍ಪಿ ಶಾಸಕನ 7 ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ವಶ

    ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಶಾಸಕ ಇರ್ಫಾನ್ ಸೋಲಂಕಿ ಹಾಗೂ ಆತನ ಕಿರಿಯ ಸಹೋದರ ರಿಜ್ವಾನ್‍ಗೆ ಸೇರಿದ 7 ಕೋಟಿ ರೂ ಗಳ ಮೌಲ್ಯದ ಆಸ್ತಿಯನ್ನು ಪೊಲೀಸರು ಗ್ಯಾಂಗ್‍ಸ್ಟರ್ ಕಾಯ್ದೆ ಅಡಿ ವಶಪಡಿಸಿಕೊಂಡಿದ್ದಾರೆ.

    ಶಾಸಕ ಹಾಗೂ ಆತನ ಸಹೋದರನಿಗೆ ಸೇರಿದ 163 ಚದರ ಮೀಟರ್ ವಿಸ್ತೀರ್ಣದ ನಾಲ್ಕು ಪ್ಲಾಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕನ ಉಳಿದ ಆಸ್ತಿಯನ್ನು ವಶಪಡಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಸೋಲಂಕಿ (Irfan Solanki) ಹಾಗೂ ರಿಜ್ವಾನ್ ಇಬ್ಬರನ್ನೂ ಪ್ರತ್ಯೇಕ ಜೈಲಿನಲ್ಲಿಡಲಾಗಿದೆ ಎಂದು ಫೀಲ್ಖಾನಾ (Pheelkhana) ಪೊಲೀಸ್ ಠಾಣಾಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಸೋಲಂಕಿ ಅವರು ಎಸ್‍ಪಿ ಆಡಳಿತ ಅವಧಿಯಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಕಾನ್ಪುರ ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದುಕೊಂಡಿದ್ದರು ಎಂದು ಸಿಂಗ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಿಗೆ ಸೇರಿದ ಗಾಜಿಯಾಬಾದ್ ಹಾಗೂ ನೋಯ್ಡಾದ ಪ್ಲಾಟ್‍ಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

    ಜಜ್ಮೌ, ಚಕೇರಿ, ಚಮನ್‍ಗಂಜ್ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವುಗಳ ಅಂದಾಜು ಮೊತ್ತ ಸುಮಾರು 150-200 ಕೋಟಿ ರೂ ಗಳು ಎಂದು ಅಂದಾಜಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

    ಶಾಸಕ ಹಾಗೂ ಅವರ ಗ್ಯಾಂಗ್‍ಗೆ ಸೇರಿದ ಆಸ್ತಿಗಳ ವಿವರ ಪಡೆಯಲು ಕಾನ್ಪುರ  (Kanpur) ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಾನ್ಪುರ್ ಮುನ್ಸಿಪಾಲ್ ಕಾರ್ಪೊರೇಷನ್‍ನ ಸಹಾಯ ಕೇಳಿದ್ದೇವೆ ಎಂದು ಜಂಟಿ ಪೊಲೀಸ್ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.

    ಸೋಲಂಕಿ ಮತ್ತು ರಿಜ್ವಾನ್, ಕಳೆದ ನವೆಂಬರ್ 7 ರಂದು ಮಹಿಳೆಯೊಬ್ಬರಿಂದ ಪ್ಲಾಟ್ ಕಿತ್ತುಕೊಳ್ಳುವ ಸಲುವಾಗಿ ಮಹಿಳೆಯ ಮನೆಗೆ ಬೆಂಕಿ ಹಚ್ಚಿದ ಆರೋಪ ಹಾಗೂ ಡಿಸೆಂಬರ್ 2 ರಂದು ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಜೈಲಿನಲ್ಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಸೋಲಂಕಿ ಪ್ರಸ್ತುತ ಮಹಾರಾಜ್‍ಗಂಜ್ ಜೈಲಿನಲ್ಲಿದ್ದಾನೆ. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌