Tag: irfan patan

  • ಪತ್ನಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ವಿರುದ್ಧ ಕಿಡಿ

    ಪತ್ನಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ವಿರುದ್ಧ ಕಿಡಿ

    ನವದೆಹಲಿ: ಭಾರತದ ಕ್ರಿಕೆಟಿಗ ಇರ್ಫಾನ್ ಪಠಾಣ್ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಕ್ರಿಕೆಟಿಗ ಟ್ರೋಲ್ ಆಗಿದ್ದಾರೆ.

    ಹೌದು. 32 ವರ್ಷದ ಕ್ರಿಕೆಟಿಗ ಇರ್ಫಾನ್ ಪಠಾಣ್, ಕೈಗಳಿಂದ ಮುಖಮುಚ್ಚಿರೋ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ಹುಡುಗಿಯಿಂದ ತೊಂದರೆ ಲವ್, ವೈಫಿ ಅಂತ ಹ್ಯಾಶ್ ಟ್ಯಾಗ್ ಬಳಸಿ ತಮಾಷೆಯಾಗಿ ಪೋಸ್ಟ್ ಮಾಡಿದ್ದರು.

    ಇರ್ಫಾನ್ ಪಠಾಣ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ರೊಚ್ಚಿಗೆದ್ದ ಜನ ಫೋಟೋ ವಿರುದ್ಧ ಕಮೆಂಟ್‍ಗಳನ್ನು ಮಾಡಿದ್ದಾರೆ. ಈ ಫೋಟೋ ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು. ಒಬ್ಬ ಮುಸ್ಲಿಂ ಸಮುದಾಯದವನಾಗಿ ಪತ್ನಿಯ ಮುಖವನ್ನು ಸಮಾಜಕ್ಕೆ ಪ್ರದರ್ಶಿಸುವುದು ಸರಿಯಲ್ಲ. ಇಂದು ಆಕೆಯ ಮುಖದ ಫೋಟೋ, ನಾಳೆ ಆಕೆಯ ಫುಲ್ ಫೋಟೋ ಹಾಕ್ತೀರಾ ಅಂತಾ ಜನ ಕಿಡಿಕಾರಿದ್ದಾರೆ.

    ಅಲ್ಲದೇ ಫೋಟೋದಲ್ಲಿ ಇರ್ಫಾನ್ ಪತ್ನಿ ಕೈಗೆ ನೈಲ್ ಪಾಲಿಶ್ ಹಾಕಿದ್ದು, ಇದು ಕೂಡ ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ನೈಲ್ ಪಾಲಿಶ್ ಬದಲು ಉಗುರಿಗೆ ಮೆಹಂದಿ ಹಾಕಿ ಅಂತ ಕೆಲವರು ಸಲಹೆ ನೀಡಿದ್ದಾರೆ.

    2016ರ ಫೆಬ್ರವರಿಯಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಫ ಬೈಗ್ ಅವರನ್ನು ಪವಿತ್ರ ಸ್ಥಳ ಮೆಕ್ಕಾದಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆ ಅತ್ಯಂತ ಸರಳವಾಗಿ ನಡೆದಿತ್ತು.