Tag: irani gang

  • ಹಗಲಿನಲ್ಲಿ ಮನೆ ಗುರುತಿಸಿ ರಾತ್ರಿ ಕಳ್ಳತನ – ಇರಾನಿ ಗ್ಯಾಂಗ್‌ನ 6 ಮಂದಿ ಅರೆಸ್ಟ್

    ಹಗಲಿನಲ್ಲಿ ಮನೆ ಗುರುತಿಸಿ ರಾತ್ರಿ ಕಳ್ಳತನ – ಇರಾನಿ ಗ್ಯಾಂಗ್‌ನ 6 ಮಂದಿ ಅರೆಸ್ಟ್

    – 28 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

    ಬೆಂಗಳೂರು: ಹಗಲಿನಲ್ಲಿ ಮನೆ ಗುರುತಿಸಿ ರಾತ್ರಿವೇಳೆ ಕಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್‌ನ್ನು ಕೋಡಿಗೆಹಳ್ಳಿ (Kodigehalli) ಪೊಲೀಸರು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಆಕ್ಟಿವ್ ಆಗಿದ್ದ ಇರಾನಿ ಗ್ಯಾಂಗ್‌ನ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಗವಿಶ್ರೀಗಳಿಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್

    ಈ ಗ್ಯಾಂಗ್‌ನವರು ನಗರದಲ್ಲಿ ಸ್ಟೋನ್ ರಿಂಗ್ಸ್ ವ್ಯಾಪಾರ ಮಾಡುತ್ತಿದ್ದರು. ರಸ್ತೆಯಲ್ಲಿ ಓಡಾಡುತ್ತಾ ಮಾರಾಟ ಮಾಡುತ್ತಿದ್ದರು. ಈ ವೇಳೆ ಒಂಟಿ ಮನೆ, ಬೀಗ ಹಾಕಿರುವ ಮನೆಗಳನ್ನ ಗುರುತಿಸುತ್ತಿದ್ದರು. ಹಗಲಿನಲ್ಲಿ ಮನೆ ಗುರುತಿಸಿ, ರಾತ್ರಿ ಹೋಗಿ ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ಮನೆಗಳ್ಳತನದ ಜೊತೆಗೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು.

    ಮಹಾರಾಷ್ಟ್ರ ಮತ್ತು ಆಂಧ್ರದಿಂದ ಬೆಂಗಳೂರಿಗೆ ಕಳ್ಳತನ ಮಾಡಿಕೊಂಡು ಅಲೆದಾಡುತ್ತಿದ್ದರು. ಒಂದು ಸಾರಿ ನಗರಕ್ಕೆ ಎಂಟ್ರಿ ಕೊಟ್ಟರೆ 7-8 ದಿನ ವಾಸ ಮಾಡಿ ಐದಾರು ಮನೆ, ನಾಲ್ಕೈದು ಸರಗಳ್ಳತನ ಮಾಡಿಕೊಂಡು ಜಾಗ ಖಾಲಿ ಮಾಡುತ್ತಿದ್ದರು.

    ಸದ್ಯ ಇರಾನಿ ಗ್ಯಾಂಗ್‌ನ ಆರು ಮಂದಿಯನ್ನ ಪೊಲೀಸರು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಡಹಗಲೇ ಶೂಟೌಟ್ – ಓರ್ವನ ಬರ್ಬರ ಹತ್ಯೆ, ಹಳೇ ದ್ವೇಷಕ್ಕೆ ಹರಿಯಿತಾ ನೆತ್ತರು?

     

  • ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಇರಾನಿ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು, ಒಂದು ವಾರದ ಅಂತರದಲ್ಲಿಯೇ ಎರಡು ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಬೈಕ್‍ನಲ್ಲಿ ಬರುವ ಖದೀಮರು ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದಾರೆ.

    ಬೆಳಗಾವಿ ನಗರದ ಹೊರವಲಯ ಗಣೇಶಪುರದಲ್ಲಿ ಸಂಬಂಧಿಕರ ಮದುವೆಗೆ ಹೊರಟಿದ್ದ ವೃದ್ಧ ದಂಪತಿಯನ್ನ ಪೊಲೀಸರೆಂದು ಹೇಳಿ ಯಾಮಾರಿಸಿ 50 ಗ್ರಾಂ ಚಿನ್ನಾಭರಣಗಳನ್ನು ತೆಗೆದುಕೊಂಡು ಕಳ್ಳರು ಪರಾರಿ ಆಗಿದ್ದಾರೆ. ಈ ಕುರಿತು ವೃದ್ಧರು ಪೊಲೀಸರಿಗೆ ದೂರು ಕೊಟ್ಟಿದ್ದು, ಪ್ರಸ್ತುತ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!

    ಪ್ರಕರಣ ಹಿನ್ನೆಲೆ:
    ಸೋದರಸಂಬಂಧಿ ಮದುವೆಗೆ ಪತ್ನಿ ಜೊತೆಗೆ ಹೊರಟಿದ್ದ ಗಣಪತ್ ಪಾಟೀಲ್ ಅವರನ್ನು ಪೊಲೀಸರೆಂದು ಹೇಳಿಕೊಂಡು ಬಂದ ಖದೀಮರು ತಡೆದಿದ್ದಾರೆ. ಈ ವೇಳೆ ತಾನು ಪೊಲೀಸ್ ವಿಸಲ್ ಹಾಕ್ತಿದ್ರೂ ಬೈಕ್ ಏಕೆ ನಿಲ್ಲಿಸುತ್ತಿಲ್ಲ ಎಂದು ಅವಾಜ್ ಹಾಕಿದ್ದಾರೆ. ಬಳಿಕ ನಿಮ್ಮ ದ್ವಿಚಕ್ರವಾಹನದಲ್ಲಿ ಗಾಂಜಾ, ಅಫೀಮು ಸಾಗಿಸುತ್ತಿದ್ದೀರಿ ಅಂತಾ ನಮಗೆ ಮಾಹಿತಿ ಇದೆ ಅಂತಾ ಚೆಕಿಂಗ್ ಮಾಡಿದ್ದಾರೆ.

    ಬಳಿಕ ವಾಹನ ತಪಾಸಣೆ ನಡೆಸಿದಾಗ ಮದುವೆಗೆ ಹೊರಟಿದ್ದೇವೆ ಎಂದು ವೃದ್ಧ ದಂಪತಿ ಆಮಂತ್ರಣ ಪತ್ರಿಕೆಯನ್ನು ತೋರಿಸಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ವೃದ್ಧೆ ಬಂಗಾರ ಆಭರಣಗಳನ್ನು ಹಾಕಿಕೊಂಡಿದ್ದನ್ನು ಗಮನಿಸಿದ್ದಾರೆ. ಈ ಮಾರ್ಗದಲ್ಲಿ ಕಳ್ಳತನ ಪ್ರಕರಣ ಹೆಚ್ಚಳವಾಗಿದೆ. ಹೀಗಾಗಿ ಬಂಗಾರದ ಆಭರಣಗಳನ್ನು ಹಾಕಿಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

    ಬಳಿಕ ಆಭರಣಗಳನ್ನು ಒಂದು ಕೈವಸ್ತ್ರದಲ್ಲಿ ಕಟ್ಟಿ ಸ್ಕೂಟಿಯಲ್ಲಿ ಇಡುವಂತೆ ಹೇಳಿದ್ದಾರೆ. ಇದಾದನಂತರ ಕೈವಸ್ತ್ರದಲ್ಲಿ ಕಟ್ಟಿದ್ದ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬೈಕ್ ಡಿಕ್ಕಿಯಲ್ಲಿ ಇಟ್ಟಂತೆ ಮಾಡಿದ್ದಾರೆ. ಆದರೆ ಆ ಐದು ತೊಲೆ ಬಂಗಾರದ ಆಭರಣಗಳು ಎಸ್ಕೇಪ್ ಮಾಡಿಕೊಂಡು ಪರಾರಿ ಆಗಿದ್ದಾರೆ. ಈ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಮತ್ತೊಂದೆಡೆ ಇಂದು ಬೆಳ್ಳಂಬೆಳಗ್ಗೆ ಮಹಾಂತೇಶ್ ನಗರದ ಎಸ್‍ಬಿಐ ಬ್ಯಾಂಕ್ ಬಳಿ ಹಾಲು ತರಲು ಹೋಗಿದ್ದ, ವೃದ್ಧೆ ಕವಿತಾ ಡೊಳ್ಳಿ(60) ಕೊರಳಲ್ಲಿದ್ದ 20ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ದಾಖಲಾಗಿದೆ.

  • ಬೀದಿಯಲ್ಲಿ ಮಾರಾಮಾರಿ- ಅರೆಸ್ಟ್‌ ಮಾಡಲು ಬಂದ ಪೊಲೀಸರ ಮೇಲೆಯೇ ಹಲ್ಲೆ, ಕಳ್ಳರು ಪರಾರಿ

    ಬೀದಿಯಲ್ಲಿ ಮಾರಾಮಾರಿ- ಅರೆಸ್ಟ್‌ ಮಾಡಲು ಬಂದ ಪೊಲೀಸರ ಮೇಲೆಯೇ ಹಲ್ಲೆ, ಕಳ್ಳರು ಪರಾರಿ

    ಧಾರವಾಡ: ಕಳ್ಳರು ತಪ್ಪಿಸಿಕೊಂಡು ಹೋಗುವಾಗ ಪೊಲೀಸರು ಅವರನ್ನು ಹೊಡೆಯುವುದು ಸಾಮಾನ್ಯ. ಆದರೆ ತಮ್ಮನ್ನು ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಹಾಡಹಗಲೇ ನಡುಬೀದಿಯಲ್ಲೇ ಇರಾನಿ ಗ್ಯಾಂಗ್‌ನ ಕಳ್ಳರು ಹಲ್ಲೆ ಮಾಡಿ, ರಾಜಾರೋಷವಾಗಿ ತಪ್ಪಿಸಿಕೊಂಡು ಹೋಗಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ಇದು ಪೊಲೀಸರು ಮತ್ತು ಕಳ್ಳರ ಮಧ್ಯೆ ನಡೆದ ಫೈಟಿಂಗ್ ಅಂದರೆ ನೀವು ನಂಬಲೇಬೇಕು. ಬೆಂಗಳೂರಿನ ಪೊಲೀಸರಿಗೆ ಸಂಗಮ್‌ ವೃತ್ತದಲ್ಲಿ ನಡುಬೀದಿಯಲ್ಲಿ ಹೊಡೆದು ಧಾರವಾಡದ ಇರಾನಿ ಗ್ಯಾಂಗ್‌ನ ನಟೋರಿಯಸ್ ಕಳ್ಳರು ಪರಾರಿಯಾಗಿದ್ದಾರೆ.

    ಏನಿದು ಘಟನೆ?
    ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದರ ಹಿಂದೆ ಧಾರವಾಡದ ಇರಾನಿ ಗ್ಯಾಂಗ್‌ನ ಕೈವಾಡ ಇದೆ ಎಂಬ ಮಾಹಿತಿ ಬೆಂಗಳೂರು ಪೊಲೀಸರಿಗೆ ಸಿಕ್ಕಿತ್ತು.

    ಈ ಮಾಹಿತಿ ಆಧರಿಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಎಸ್‌ಐ ಸಂತೋಷ್‌ ಹಾಗೂ ಮಾಗಡಿ ರೋಡ್ ಠಾಣೆ ಎಸ್.ಐ ರವಿಕುಮಾರ್‌ ನೇತೃತ್ವದ ತಂಡ ಧಾರವಾಡಕ್ಕೆ ಬಂದಿತ್ತು. ಇಂದು ಪೊಲೀಸರು ಇರಾನಿ ಗ್ಯಾಂಗ್‌ನ ಸದಸ್ಯರನ್ನು ಫಾಲೋ ಮಾಡುತ್ತಿದ್ದಾಗ ತಮಗೆ ಬೇಕಿದ್ದ ಮೂವರು ಇರಾನಿ ಕಳ್ಳರು ಸಂಗಮ್ ವೃತ್ತದ ಬಳಿ ಇರುವ ಖಚಿತ ಮಾಹಿತಿ ಸಿಕ್ಕಿದೆ. ಇನ್ನೋವಾದಲ್ಲಿ ಬಂದಿಳಿದ ಪೊಲೀಸರು ಮೂವರ ಮೇಲೆ ದಾಳಿ ಮಾಡಿ ಕೈಗೆ ಬೇಡಿ ತೋಡಿಸಲು ಮುಂದಾದಾಗ ಮಾರಾಮಾರಿ ನಡೆದಿದೆ.

    ಗಲಾಟೆಯ ವೇಳೆ ಪಿಎಸ್‌ಐ ಸಂತೋಷ್‌ ಅವರಿಗೆ  ಗಾಯವಾಗಿದೆ. ಸದ್ಯ ಇರಾನಿ ಗ್ಯಾಂಗ್‌ನ ಮೂವರು ಬೈಕ್ ಏರಿ ಪಾರಾಗಿದ್ದು, ಓರ್ವ ಸ್ಥಳೀಯ ಇರಾನಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.