Tag: iran

  • ಇರಾನ್‌ನಲ್ಲಿ ಹಿಜಬ್‌ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಯುವತಿ ಅರೆಸ್ಟ್‌

    ಇರಾನ್‌ನಲ್ಲಿ ಹಿಜಬ್‌ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಯುವತಿ ಅರೆಸ್ಟ್‌

    ಟೆಹ್ರಾನ್‌: ಕಡ್ಡಾಯವಾಗಿ ಹಿಜಬ್‌ ಧರಿಸಬೇಕೆಂಬ ವಸ್ತ್ರ ಸಂಹಿತೆ ವಿರುದ್ಧ ಇರಾನ್ ವಿಶ್ವವಿದ್ಯಾನಿಲಯದ‌ (Islamic Azad University) ಆವರಣದಲ್ಲಿ ಒಳ ಉಡುಪು ಧರಿಸಿ ಪ್ರತಿಭಟನೆ (Iranian Woman Protest) ನಡೆಸಿದ್ದ ಇರಾನ್‌ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಟೆಹ್ರಾನ್‌ನ ಇಸ್ಲಾಮಿಕ್‌ ಆಜಾಜ್‌ ವಿವಿಯಲ್ಲಿ ಒಳಉಡುಪು ಧರಿಸಿಕೊಂಡು ಸುತ್ತಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದ ಯುವತಿಯ ವೀಡಿಯೋ ಒಂದು ದಿನದ ಹಿಂದೆಯಷ್ಟೇ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಯುವತಿಯ ಪರ – ವಿರೋಧ ಚರ್ಚೆಗಳೂ ಹುಟ್ಟಿಕೊಂಡಿವೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

    ಇರಾನ್‌ನಲ್ಲಿ ಮುಸ್ಲಿಂ ಸಮುದಾಯದ (Muslim Community) ಮೂಲಭೂತವಾದಿಗಳು ಆಚರಣೆಯಲ್ಲಿಟ್ಟಿರುವ ಕಟ್ಟುನಿಟ್ಟಾದ ವಸ್ತ್ರಸಂಹಿತೆ ಹಾಗೂ ನೈತಿಕ ಪೊಲೀಸ್‌ಗಿರಿ ವಿರುದ್ಧ ಪ್ರತಿಭಟಿಸಲೆಂದೇ ಯುವತಿ ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ತಿರುಗಾಡಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಇಸ್ಲಾಮಿಕ್‌ ವಿಶ್ವವಿದ್ಯಾಲಯದ ವಕ್ತಾರ ಅಮೀರ್‌ ಮಹಜೋಬ್, ಕ್ಯಾಂಪಸ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡಿರುವ ಯುವತಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂದು ಹೇಳಿದ್ದರು. ಇದನ್ನೂ ಓದಿ: Canada | ಹಿಂದೂ ದೇವಾಲಯದಲ್ಲಿ ಭಕ್ತರ ಮೇಲೆ ಖಲಿಸ್ತಾನಿ ಗುಂಪು ಅಟ್ಯಾಕ್‌ – ಜಸ್ಟಿನ್‌ ಟ್ರುಡೋ ಖಂಡನೆ

    ಯುವತಿಯೊಬ್ಬಳು ಸಾರ್ವಜನಿಕವಾಗಿ ಒಳ ಉಡುಪಿನಲ್ಲಿ ಕಾಣಿಸಿಕೊಳ್ಳುವುದು ಇರಾನ್‌ ಮಹಿಳೆಯರಿಗೆ ಊಹಿಕೊಳ್ಳಲು ಅಸಾಧ್ಯವಾದ ಕೆಲಸ. ಆದರೆ, ಹಿಜಬ್‌ ಕಡ್ಡಾಯ ಎಂಬ ಮೂರ್ಖತನಕ್ಕೆ ಇದು ಸರಿಯಾದ ಪ್ರತಿಕ್ರಿಯೆಯಾಗಿದೆ ಎಂದು ಲೈಲಾ ಎನ್ನುವ ಇರಾನ್‌ ನಿವಾಸಿಯ ʻಎಕ್ಸ್‌ʼ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    2 ವರ್ಷಗಳ ಹಿಂದಿನ ಹಿಂಸಾಚಾರ ನೆನಪಿದೆಯೆ?
    2022ರಲ್ಲಿ ಇರಾನ್‌ ಪೊಲೀಸರ ವಶದಲ್ಲಿದ್ದ ಮಹ್ಸಾ ಅಮಿನಿಯಾ ಎಂಬ ಇರಾನ್‌ ಮೂಲದ ಯುವತಿಯು (ಹಿಜಬ್‌ ಧರಿಸದ ಅಪರಾಧ ಹಿನ್ನೆಲೆಯಲ್ಲಿ ಬಂಧಿತೆ) ಮೃತಪಟ್ಟ ಘಟನೆಯ ನಂತರ ಹಿಜಬ್‌ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಪ್ರತಿಭಟನಾಕಾರರ ಮೇಲೆ ಗುಂಡಿಕ್ಕುವಂತಹ ನಿರ್ದಾಕ್ಷಿಣ್ಯ ಕ್ರಮಗಳ ಮೂಲಕ ಕ್ರಮೇಣ ಜನರ ಆಕ್ರೋಶವನ್ನು ತಣ್ಣಗಾಗಿಸಲಾಗಿತ್ತು. ಸಾವಿರಾರು ಮಂದಿಯನ್ನು ಬಂಧಿಸಿ ಇರಾನ್‌ ಸರ್ಕಾರ ಜೈಲಿಗಟ್ಟಿತ್ತು. ಆ ಬಳಿಕ ಇರಾನ್‌ನಲ್ಲಿ ಪ್ರತಿಭಟನೆ ಕಾವು ತಣ್ಣಗಾಗಿತ್ತು. ಇದೀಗ ಯುವತಿ ಒಳುಡುಪು ಧರಿಸಿ ತಿರುಗಾಡಿದ ಹಿನ್ನೆಲೆ ಮತ್ತೆ ಹಿಜಬ್‌ ವಿವಾದ ಮುನ್ನೆಲೆಗೆ ಬಂದಿದೆ.

  • ಇಸ್ರೇಲ್‌ ಮೇಲೆ ದಾಳಿ ಬೆದರಿಕೆ – ಇರಾನ್ ಸರ್ವೋಚ್ಚ ನಾಯಕನ ಎಕ್ಸ್‌ ಖಾತೆ ಅಮಾನತು

    ಇಸ್ರೇಲ್‌ ಮೇಲೆ ದಾಳಿ ಬೆದರಿಕೆ – ಇರಾನ್ ಸರ್ವೋಚ್ಚ ನಾಯಕನ ಎಕ್ಸ್‌ ಖಾತೆ ಅಮಾನತು

    ಟೆಹ್ರಾನ್: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇರಾನ್‌ನ (Iran) ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ.

    ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ (Israel) ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಪೋಸ್ಟ್‌ನಲ್ಲಿ ಇಸ್ರೇಲ್‌ ತಪ್ಪು ಮಾಡಿದೆ. ಇರಾನ್ ಮೇಲಿನ ಅದರ ಲೆಕ್ಕಾಚಾರ ತಪ್ಪಾಗಿದೆ. ಇರಾನ್ ರಾಷ್ಟ್ರವು ಯಾವ ರೀತಿಯ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಇಸ್ರೇಲ್‌ಗೆ ಅರ್ಥ ಮಾಡಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದರು. ಇದನ್ನೂ ಓದಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಹ್ಯಾಂಡ್‌ಶೇಕ್; ಫಲ ನೀಡುತ್ತಾ ಒಪ್ಪಂದ?

    ಶನಿವಾರ ಇರಾನ್‌ನಲ್ಲಿ ಸೇನಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ನಂತರ ಖಮೇನಿ ಇಸ್ರೇಲ್‌ನಲ್ಲಿ ಮಾತನಾಡುವ ಹೀಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಲು ಖಾತೆಯನ್ನು ತೆರೆದಾಗ, ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಎಕ್ಸ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೋರಿಸಿರುವುದಾಗಿ ವರದಿಯಾಗಿದೆ.

    ಇಸ್ರೇಲ್ ಶನಿವಾರ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ನಾಲ್ವರು ಇರಾನ್ ಸೈನಿಕರು ಸಾವನ್ನಪ್ಪಿದ್ದರು. ಇದು ಇಸ್ರೇಲ್‌ನ ಮೇಲೆ ಇರಾನ್‌ ಇತ್ತೀಚಿಗೆ ನಡೆಸಿದ್ದ ರಾಕೆಟ್‌ ದಾಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಇದನ್ನೂ ಓದಿ: ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

  • ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

    ಇಸ್ರೇಲ್‌ಗೆ ನಮ್ಮ ಶಕ್ತಿ ಏನೆಂದು ತೋರಿಸಬೇಕು: ಮತ್ತೆ ಯುದ್ಧದ ಎಚ್ಚರಿಕೆ ನೀಡಿದ ಇರಾನ್‌ ಸುಪ್ರೀಂ ಲೀಡರ್‌

    ಟೆಹ್ರಾನ್‌: ಕಳೆದ ಅಕ್ಟೋಬರ್‌ 1ರಂದು 180 ಕ್ಷಿಪಣಿಗಳನ್ನು ಹಾರಿಸಿ ದಾಳಿ ನಡೆಸಿದ್ದ ಇರಾನ್‌ ವಿರುದ್ಧ ಇಸ್ರೇಲ್‌ ಕೊನೆಗೂ ಪ್ರತೀಕಾರದ ದಾಳಿ ನಡೆಸಿದೆ. ಶನಿವಾರ (ಅ.26) ಬೆಳಗ್ಗೆ ಸುಮಾರು 200 ಕ್ಷಿಪಣಿಗಳ ಮಳೆ ಸುರಿಸಿ ಇರಾನ್‌ ಮೇಲೆ ದಾಳಿ (Israel Airstrikes) ನಡೆಸಿದೆ. ಈ ಬೆನ್ನಲ್ಲೇ ಇರಾನ್‌ನ (Iran) ಸುಪ್ರೀಂ ಲೀಡರ್‌ ಮತ್ತೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ.

    ಇಸ್ರೇಲ್‌ ದಾಳಿ ಕುರಿತು ಭಾನುವಾರ ಮಾತನಾಡಿರುವ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಮತ್ತೆ ಇಸ್ರೇಲ್‌ ಮೇಲೆ ಯುದ್ಧ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್‌ ತನ್ನ ಶಕ್ತಿಯನ್ನು ಇಸ್ರೇಲ್‌ಗೆ ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಇರಾನ್ ಅಧಿಕಾರಿಗಳು ನಿರ್ಧರಿಸಬೇಕು. ಇಸ್ರೇಲ್‌ (Israel) ಮಾಡಿದ ದುಷ್ಟತನವನ್ನು ಕ್ಷಮಿಸಲೇಬಾರದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್‌

    ಏನಾಗಿತ್ತು?
    ಇಸ್ರೇಲ್‌ ಶನಿವಾರ ಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಳೆ ನೂರು ಯುದ್ಧ ವಿಮಾನಗಳ ಮೂಲಕ 200 ಕ್ಷಿಪಣಿಗಳನ್ನ ಹಾರಿಸಿ, ಭೀಕರ ದಾಳಿ ನಡೆಸಿತ್ತು. ಅಮೆರಿಕ ನಿರ್ಮಿತ ಎಫ್‌-35, ಎಫ್‌-151, ಎಫ್‌-26ಐ ಯುದ್ಧ ವಿಮಾನ ಬಳಸಿ, ಇರಾನ್‌ ಸಮೀಪವೇ ಬಂದು ಇಸ್ರೇಲ್‌ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇರಾನ್‌ನ ನಾಲ್ವರು ಯೋಧರು ಬಲಿಯಾದರು. ಅಲ್ಲದೇ ಇರಾನ್‌ನ ಸೇನಾ ನೆಲೆಗಳು, ಕ್ಷಿಪಣಿ ಉತ್ಪಾದನಾ ಘಟಕಗಳು ಧ್ವಂಸವಾದವು. ಈ ಬೆನ್ನಲ್ಲೇ ಇಸ್ರೇಲ್‌ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿತ್ತು.

    ಬಳಿಕ ಇರಾನ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಚರಣೆ ಬಗ್ಗೆ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದರು. ಇಸ್ರೇಲ್ ಮೂರು ಹಂತದ ದಾಳಿ ನಡೆಸಿದೆ. ಈ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಂತ್ಯವಾಗಿದೆ. ನಾವು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದೇವೆ. ಇಸ್ರೇಲ್ ಮೇಲಿನ ತಕ್ಷಣದ ಬೆದರಿಕೆಗಳನ್ನು ತಡೆಯುವುದು ನಮ್ಮ ಉದ್ದೇಶವಾಗಿತ್ತು. ಇದನ್ನೂ ಓದಿ: ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ

  • 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್‌

    100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್‌

    ನವದೆಹಲಿ: ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ಖಾರವಾಗಿ ಪ್ರತಿಕ್ರಿಯೆ ನೀಡಿದೆ. ಶುಕ್ರವಾರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್‌ನ 20 ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್‌ ನಡೆಸಿದೆ‌. ಇಸ್ರೇಲ್ ದಾಳಿಯಿಂದ ಇರಾನ್‌ನಲ್ಲಿ ಭಾರಿ ನಷ್ಟವಾಗಿದೆ ಎಂದು ವರದಿಯಾಗಿದೆ.

    ಅ.1 ರಂದು ಇರಾನ್ ಕ್ಷಿಪಣಿ ದಾಳಿ ನಡೆಸಿದಾಗ ಪ್ರತಿಕ್ರಿಯೆ ನೀಡುವುದಾಗಿ ಇಸ್ರೇಲ್ ಹೇಳಿತ್ತು. ಅದಕ್ಕೆ ಪೂರಕವಾಗಿ ಈ ಕಾರ್ಯಚರಣೆ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇರಾನ್ ವಿರುದ್ಧ ಇಸ್ರೇಲ್ ದಾಳಿ ಪ್ರಾರಂಭಿಸಿದಾಗ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಟೆಲ್ ಅವಿವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯಲ್ಲಿದ್ದರು ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ ಶಮನಕ್ಕೆ ಮೊದಲ ಹೆಜ್ಜೆ; ಸೇನಾಪಡೆಗಳ ವಾಪಸ್ ಪ್ರಕ್ರಿಯೆ ಶುರು

    ಟೆಹ್ರಾನ್‌ನಲ್ಲಿ ಮತ್ತು ಕರಾಜ್ ನಗರ ಸೇರಿದಂತೆ ಹತ್ತಿರದ ಮಿಲಿಟರಿ ನೆಲೆಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ರಾತ್ರಿ 2 ಗಂಟೆಯ ನಂತರ ದಾಳಿಗಳು ಪ್ರಾರಂಭವಾದವು. ಮೂರು ಅಲೆಗಳ ದಾಳಿಯನ್ನು ನಡೆಸಲಾಯಿತು ಎಂದಾದರೂ ಸ್ಥಳೀಯ ನಿವಾಸಿಗಳ ಪ್ರಕಾರ ಮೊದಲ ಸುತ್ತಿನಲ್ಲಿ ಕನಿಷ್ಠ ಏಳು ಸ್ಫೋಟಗಳು ಕೇಳಿಬಂದವು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

    ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ತೈಲ ಘಟಕಗಳನ್ನು ಇಸ್ರೇಲ್ ಗುರಿಯಾಗಿಸಬಹುದು ಎಂದು ಹೇಳಲಾಗಿತ್ತು. ಆದರೆ ಈ ಪ್ರದೇಶಗಳನ್ನು ಇಸ್ರೇಲ್ ಗುರಿಯಾಗಿಸಿಲ್ಲ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಇಸ್ರೇಲ್‌ನ ಆಕ್ರಮಣವನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ಜೊತೆಗೆ ಕೆಲವು ಸ್ಥಳಗಳ ಮೇಲಿನ ದಾಳಿಯನ್ನು ಪ್ರತಿಬಂಧಿಸಿದೆ. ಇಸ್ರೇಲ್ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಅದರ ಅನುಪಾತದ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಇರಾನ್ ಹೇಳಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ

    ಮುಂದಿನ ಸೂಚನೆ ಬರುವವರೆಗೂ ಇರಾನ್ ಎಲ್ಲಾ ಮಾರ್ಗಗಳಲ್ಲಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಸ್ರೇಲ್ ತನ್ನ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನಕ್ಕೆ ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿದೆ. ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಮುಂದಿನ ಸೂಚನೆ ಬರುವವರೆಗೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಇರಾಕ್‌ನ ಸಾರಿಗೆ ಸಚಿವಾಲಯ ತಿಳಿಸಿದೆ.

    ಇರಾನ್ ವಿರುದ್ಧ ಇಸ್ರೇಲ್ ಸೇನಾ ಕಾರ್ಯಚರಣೆ ಬಗ್ಗೆ ಇಸ್ರೇಲ್ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ ಮಾಹಿತಿ ನೀಡಿದ್ದಾರೆ. ಇಸ್ರೇಲ್ ಮೂರು ಹಂತದ ದಾಳಿ ನಡೆಸಿದೆ. ಈ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಅಂತ್ಯವಾಗಿದೆ. ನಾವು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದೇವೆ. ಇಸ್ರೇಲ್ ಮೇಲಿನ ತಕ್ಷಣದ ಬೆದರಿಕೆಗಳನ್ನು ತಡೆಯುವುದು ನಮ್ಮ ಉದ್ದೇಶವಾಗಿತ್ತು. ಇದನ್ನೂ ಓದಿ: ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

    ಇರಾನ್ ಕ್ಷಿಪಣಿ ದಾಳಿಗೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಇರಾನ್‌ನಲ್ಲಿನ ಆಡಳಿತವು ಹೊಸ ದಾಳಿ ಪ್ರಾರಂಭಿಸುವ ತಪ್ಪನ್ನು ಮಾಡಿದರೆ, ನಮ್ಮ ಸಂದೇಶವು ಸ್ಪಷ್ಟವಾಗಿದೆ. ಇಸ್ರೇಲ್ ಅನ್ನು ಬೆದರಿಸಲು ಪ್ರಯತ್ನಿಸುವವರೆಲ್ಲರೂ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇಸ್ರೇಲ್ ತನ್ನ ಜನರನ್ನು ರಕ್ಷಿಸಲು ನಾವು ಅಪರಾಧ ಮತ್ತು ರಕ್ಷಣೆಗೆ ಸಿದ್ಧರಾಗಿದ್ದೇವೆ. ದಾಳಿ ಅಂತ್ಯಗೊಳಿಸುವುದರ ಜೊತೆಗೆ ಪ್ರತಿ ದಾಳಿ ಮಾಡದಂತೆ ಎಚ್ಚರಿಕೆ ನೀಡಿದ ಇಸ್ರೇಲ್ ಸೇನಾ ಮುಖ್ಯಸ್ಥ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ‌.

  • ಜೀವಭಯದಿಂದ ಹಿಜ್ಬುಲ್ಲಾ ಲೀಡರ್ ಇರಾನ್‌ಗೆ ಪಲಾಯನ

    ಜೀವಭಯದಿಂದ ಹಿಜ್ಬುಲ್ಲಾ ಲೀಡರ್ ಇರಾನ್‌ಗೆ ಪಲಾಯನ

    ಬೈರುತ್: ಲೆಬನಾನ್‌ನ (Lebanon) ಮೇಲೆ ಇಸ್ರೇಲ್‌ನ ದಾಳಿಯ ಮಧ್ಯೆ ಹಿಜ್ಬುಲ್ಲಾದ ಎರಡನೇ-ಕಮಾಂಡ್ ಮತ್ತು ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ (Naim Qassem )ಲೆಬನಾನ್‌ನಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ.

    ಹಮಾಸ್, ಹಿಜ್ಬುಲ್ಲಾ (Hezbollah) ಮತ್ತು ಇತರ ಇರಾನ್ ಪೋಷಿತ ಉಗ್ರ ಸಂಘಟನೆಗಳನ್ನು ನಾಶಮಾಡುವ ಹೊರಟಿರುವ ಇಸ್ರೇಲ್ ದೇಶವು ಎರಡೂ ಗುಂಪುಗಳ ಹಲವಾರು ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇದರಲ್ಲಿ ಬದುಕುಳಿದರುವ ಹಿಜ್ಬುಲ್ಲಾ ಸಂಘಟನೆಯ ಕೆಲವು ನಾಯಕರಲ್ಲಿ ಹಿಜ್ಬುಲ್ಲಾದ ಎರಡನೇ ಕಮಾಂಡರ್ ಆಗಿದ್ದ ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ ಕೂಡ ಒಬ್ಬ. ಈತ ಭಯದಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಇಸ್ರೇಲ್ ಹಿಜ್ಬುಲ್ಲಾ ಉಗ್ರ ಸಂಘಟನೆಯ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ. ಈಗಾಗಲೇ ಹಮಾಸ್ ಮುಖ್ಯಸ್ಥ ಮುಖ್ಯಸ್ಥ ಹಸನ್ ನಡ್ರೆಲ್ಲಾ ಸೇರಿದಂತೆ ಸಂಘಟನೆಯೊಳಗಿನ ಹಲವಾರು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅ.24 ರಂದು ಒಡಿಶಾಕ್ಕೆ ಅಪ್ಪಳಿಸಲಿದೆ ಚಂಡಮಾರುತ – ಗಂಟೆಗೆ 100 -120 ಕಿ.ಮೀ ವೇಗದಲ್ಲಿ ಗಾಳಿ ಜೊತೆ ಸುರಿಯಲಿದೆ ಮಳೆ

    ಯುದ್ಧ ಪೀಡಿತ ಲೆಬನಾನ್ ಮತ್ತು ಸಿರಿಯಾ ದೇಶಗಳಿಗೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ ಭೇಟಿ ನೀಡಿದ ವೇಳೆಯೇ ನಯಿಮ್ ಕಾಸ್ಸೆಮ್ ಸಚಿವರೊಡನೆ ಅಕ್ಟೋಬರ್ 5 ರಂದು ಲೆಬನಾನ್‌ನ ಬೈರುತ್‌ನಿಂದ ಹೊರಟು ಇರಾನಿನ ಟೆಹ್ರಾನ್‌ಗೆ ತಲುಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋಯ್ತು ಸರ್ಕಾರಿ ಶಾಲಾ ಮೇಲ್ಛಾವಣಿ

    ಲೆಬನಾನ್ ಹಿಜ್ಬುಲ್ಲಾ ಮೇಲೆ ಪ್ರತಿಕಾರದಲ್ಲಿ ತೊಡಗಿರುವ ಇಸ್ರೇಲ್ ಹಿಜ್ಬುಲ್ಲಾ ಸಂಘಟನೆಯ ದೊಡ್ಡ ನಾಯಕರನ್ನೆಲ್ಲ ಹೊಡೆದು ಹಾಕಿದೆ. ಇದರ ನಡುವೆ ಜೀವ ಭಯದಿಂದಾಗಿ ಇಸ್ಲಾಮಿಕ್ ರಿಪಬ್ಲಿಕ್‌ನ ಉನ್ನತ ನಾಯಕರು ನಯಿಮ್ ಕಾಸ್ಸೆಮ್ ವರ್ಗಾವಣೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಸೆ. 27 ರಂದು ಇಸ್ರೇಲ್‌ನಿಂದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನು ಕೊಂದ ನಂತರ ಕಾಸ್ಸೆಮ್ ಮೂರು ಭಾಷಣಗಳನ್ನು ಮಾಡಿದ್ದಾನೆ ಅದರಲ್ಲಿ, ಒಂದು ಬೈರುತ್‌ನಿಂದ ಮತ್ತು ಇನ್ನೆರಡು ಟೆಹ್ರಾನ್‌ನಿಂದ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

    ನಯಿಮ್ ಕಾಸ್ಸೆಮ್ ರಾಜಕೀಯ ಚಟುವಟಿಕೆಯು ಲೆಬನಾನಿನ ಶಿಯಾ ಅಮಲ್ ಚಳವಳಿಯೊಂದಿಗೆ ಪ್ರಾರಂಭವಾಗಿತ್ತು. ನಂತರ ಇರಾನ್‌ನಲ್ಲಿ (Iran) ಇಸ್ಲಾಮಿಕ್ ಕ್ರಾಂತಿಯ ಹಿನ್ನೆಲೆಯಲ್ಲಿ ಕಾಸ್ಸೆಮ್ 1979ರಲ್ಲಿ ಸಂಘಟನೆಯನ್ನು ತೊರೆದಿದ್ದ. 1982ರಲ್ಲಿ ಇಸ್ರೇಲ್ ಮೇಲೆ ಲೆಬನಾನ್ ಆಕ್ರಮಣದ ನಂತರ ಇರಾನ್ ರೆವಲ್ಯೂಷನ್ ಗಾರ್ಡ್ ಬೆಂಬಲದೊಂದಿಗೆ ರಚನೆಯಾದ ಹಿಜ್ಬುಲ್ಲಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 1992 ರಲ್ಲಿ ಲೆಬೆನಾನ್ ಸಂಸತ್ತಿನ ಚುನಾವಣೆಯಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ಸ್ಪರ್ಧಿಸಿದಾಗಿನಿಂದಲೂ ಈತ ಅದರ ಪ್ರಚಾರಗಳ ಸಂಯೋಜಕರಾಗಿದ್ದಾನೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವರುಣ ರೌದ್ರನರ್ತನ – ತಗ್ಗು ಪ್ರದೇಶ ಜಲಾವೃತ, ಕೆಟ್ಟು ನಿಂತ ವಾಹನಗಳು

  • ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ಈಗಲೂ ಸಮಯವಿದೆ ಹಿಂದೆ ಸರಿದುಬಿಡಿ – ಲೆಬನಾನ್‌ಗೆ ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    – ಇಸ್ರೇಲ್‌ ಯುದ್ಧವನ್ನು ಕೊನೆಗೊಳಿಸಲು ನಿರ್ಧರಿಸಿದೆ

    ಟೆಲ್‌ ಅವೀವ್‌: ಇರಾನ್ ಬೆಂಬಲಿತ ಹಿಜ್ಬುಲ್ಲಾ ಭಯೋತ್ಪಾದಕ ಗುಂಪಿನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಲೆಬನಾನ್‌ಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

    ದಕ್ಷಿಣ ಲೆಬನಾನ್‌ (Lebanon) ಮೇಲೆ ಇಸ್ರೇಲ್‌ ದಾಳಿ ನಡೆಸಿದ ಕೆಲ ಗಂಟೆಗಳ ನಂತರ ನೆತನ್ಯಾಹು ವೀಡಿಯೋವೊಂದರಲ್ಲಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಪ್ರಾಕೃತಿಕ ಸೌಂದರ್ಯ, ಸಹಿಷ್ಣುತೆಗೆ ಹೆಸರುವಾಸಿಯಾಗಿದ್ದ ಮಧ್ಯಪ್ರಾಚ್ಯ ಈಗ ಹಿಜ್ಬುಲ್ಲಾ (Hezbollah) ಮದ್ದು ಗುಂಡುಗಳನ್ನು ಸಂಗ್ರಹಿಸಿದ್ದು, ಇರಾನಿನ ಮಿಲಿಟರಿ ನೆಲೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಕೂಡಲೇ ನಿಮ್ಮ ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಜೆನ್ನಾರಿಸ್ ಬಯೋನಿಕ್ ವಿಷನ್ ಸಿಸ್ಟಮ್’ – ಅಂಧರ ಪಾಲಿಗೆ ಭರವಸೆಯ ಬೆಳಕು!

    ಇದು ಲೆಬನಾನ್ ಜನತೆಗೆ ನಮ್ಮ ಸಂದೇಶ. ನಿಮ್ಮ ದೇಶವನ್ನು ಮಧ್ಯಪ್ರಾಚ್ಯದ ಮುತ್ತು ಎಂದು ಕರೆಯುತ್ತಿದ್ದದ್ದು ನೆನಪಿದೆಯಾ? ಈಗ ಲೆಬನಾನ್‌ಗೆ ಏನಾಯಿತು? ನಿರಂಕುಶಾಧಿಕಾರಿಗಳು ಮತ್ತು ಭಯೋತ್ಪಾದಕರ ಗುಂಪು ಅದನ್ನು ನಾಶಪಡಿಸಿದರು. ಒಂದು ಕಾಲದಲ್ಲಿ ಲೆಬನಾನ್ ಸಹನೆ, ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಇಂದು ಅದು ಅವ್ಯವಸ್ಥೆಯ ಸ್ಥಳವಾಗಿದೆ, ಯುದ್ಧದ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ನಾವು ಗಾಜಾದಲ್ಲಿ ನೋಡುವಂತೆ ವಿನಾಶ ಮತ್ತು ದುಃಖಕ್ಕೆ ಕಾರಣವಾಗುವ ಸುದೀರ್ಘ ಯುದ್ಧದ ಪ್ರಪಾತಕ್ಕೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಈಗಲೂ ಲೆಬನಾನ್‌ ತಮ್ಮ ರಾಷ್ಟ್ರವನ್ನು ಉಳಿಸಿಕೊಳ್ಳಬಹುದು. ನೀವು ನಿಮ್ಮ ಹಿಂತಿರುಗಿದರೆ, ಯುದ್ಧವನ್ನು ನಿಲ್ಲಿಸಿದ್ರೆ, ಶಾಂತಿ ಸಮೃದ್ಧ ಹಾದಿಗೆ ಮರಳಬಹುದು. ನೀವು ಮಾಡದಿದ್ದರೆ, ಹಿಜ್ಬುಲ್ಲಾ ಮಂದುವರಿಯುತ್ತದೆ. ನಿಮ್ಮ ನೇತೃತ್ವ ಖರ್ಚು ವೆಚ್ಚದಲ್ಲಿ ಇಸ್ರೇಲ್‌ ವಿರುದ್ಧ ಹೋರಾಡಲು ಪ್ರಯತ್ನಿಸಿ, ಲೆಬನಾನ್‌ ಅನ್ನು ಯುದ್ಧಕ್ಕೆ ಎಳೆದು ತರುತ್ತಾರೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಖಡಕ್ಕಾಗಿ ಹೇಳಿದ್ದಾರೆ.

    ಇಸ್ರೇಲ್ ಯುದ್ಧವನ್ನು ಕೊನೆಗಾಣಿಸಲು ನಿರ್ಧರಿಸಿದೆ. ನಮ್ಮ ಜನರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿಸಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ನಿರ್ಧರಿಸಿದ್ದೇವೆ. ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಇಸ್ರೇಲ್‌ಗೆ ಗೆಲ್ಲುವ ಛಲವೂ ಇದೆ, ಗೆಲ್ಲುತ್ತದೆ ಎಂದಿರುವ ಅವರು, ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪ್ರತಿಜ್ಞೆ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಇಸ್ರೇಲ್‌ ಹಿಜ್ಬುಲ್ಲಾದ 120 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ನನ್ನ ಹತ್ಯೆಗೈದಿತ್ತು. ಇದನ್ನೂ ಓದಿ: 120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

  • ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ಅನಗತ್ಯ ಪ್ರಯಾಣ ಬೇಡ, ಸುರಕ್ಷಿತ ಸ್ಥಳದಲ್ಲಿರಿ; ಇರಾನ್ – ಇಸ್ರೇಲ್ ಸಂಘರ್ಷದ ಬೆನ್ನಲ್ಲೇ ಭಾರತದ ಎಚ್ಚರಿಕೆ

    ನವದೆಹಲಿ: ಇಸ್ರೇಲ್ (Israel) ಮೇಲೆ ಇರಾನ್ ಕ್ಷಿಪಣಿ ದಾಳಿ (Iran Missile Attack) ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿದಿದ್ದು,ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ.

    ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ (Embassy) ಸಂಪರ್ಕದಲ್ಲಿರಲು ಸೂಚಿಸಿದ್ದಾರೆ. ನಾವು ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಇತ್ತೀಚಿನ ಉಲ್ಬಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್‌ನಲ್ಲಿ ನೆಲೆಸಿರುವವರು ಜಾಗರೂಕರಾಗಿರಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿನಂತಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಇದನ್ನೂ ಓದಿ: Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ದಯವಿಟ್ಟು ಜಾಗರೂಕರಾಗಿರಿ, ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಮ್ಮ ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಅಧಿಕಾರಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ಪರಿಹಾರ ಬಿಡುಗಡೆ

  • Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    Iran Attacks Israel | ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಭದ್ರತೆ ಹೆಚ್ಚಳ

    ನವದೆಹಲಿ: ಇಸ್ರೇಲ್ ಮೇಲೆ ಇರಾನ್ (Iran) ಕ್ಷಿಪಣಿ ದಾಳಿ ನಡೆಸಿದ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ (Israel Embassy) ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಇರಾನ್, ಇಸ್ರೇಲ್ ಮೇಲೆ 181 ಕ್ಷಿಪಣಿಗಳ ದಾಳಿ ಮಾಡಿದ ನಂತರ ಈ ಕ್ರಮಕೈಗೊಳ್ಳಲಾಗಿದೆ. ಕಚೇರಿಯ ಸುತ್ತಮುತ್ತ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಕಚೇರಿಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

    2021 ಮತ್ತು 2023 ರಲ್ಲಿ ರಾಯಭಾರ ಕಚೇರಿ ಬಳಿ ಶಂಕಿತ ಸ್ಫೋಟಗಳು ಸಂಭವಿಸಿದ್ದವು. ಇದನ್ನೂ ಓದಿ: ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಮಂಗಳವಾರ ತಡರಾತ್ರಿ ಮಧ್ಯ ಇಸ್ರೇಲ್‍ನ ಟೆಲ್ ಅವಿವ್‍ನ ಜಾಫಾ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದರು.

    ಈ ಇಬ್ಬರು ದಾಳಿಕೋರರು ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಇಬ್ಬರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಈ ಇಬ್ಬರು ವೆಸ್ಟ್‌ಬ್ಯಾಂಕ್‌ನ ಹೆಬ್ರಾನ್‍ನಿಂದ ಆಗಮಿಸಿದ್ದರು ಎಂದು ರಕ್ಷಣಾ ಪಡೆ ತಿಳಿಸಿತ್ತು. ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

  • ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

    ಟೆಹರಾನ್‌: ಇಸ್ರೇಲ್‌ (Israel) ಮೇಲೆ ಇರಾನ್‌ (Iran) ಇದೇ ಮೊದಲ ಬಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ (Hypersonic Missiles) ಪ್ರಯೋಗಿಸಿ ದಾಳಿ ನಡೆಸಿದೆ.

    ಇಸ್ರೇಲ್‌ ಮೇಲೆ ನಾವು ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ತಿಳಿಸಿದೆ. ಇಸ್ರೇಲಿನ ಐರನ್‌ಡೋಮ್‌ ತಪ್ಪಿಸಲು ಫತಾಹ್ ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಇರಾನ್‌ ಬಳಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್‌ಸಾನಿಕ್‌ ಕ್ಷಿಪಣಿಗಳಿಗಿದ್ದು ಇರಾನ್‌ ಕಳೆದ ವರ್ಷದ ಜೂನ್‌ನಲ್ಲಿ ಫತಾಹ್-1, ನವೆಂಬರ್‌ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ 80-90% ಕ್ಷಿಪಣಿಗಳು ನಿಗದಿತ ಗುರಿಯನ್ನು ಹೊಡೆದು ಹಾಕಿವೆ ಎಂದು IRGC ಹೇಳಿಕೊಂಡಿದೆ.  ಇದನ್ನೂ ಓದಿ: Israel | ಜಾಫಾದಲ್ಲಿ ಉಗ್ರರಿಂದ ಮನ ಬಂದಂತೆ ಗುಂಡಿನ ದಾಳಿಗೆ 8 ಬಲಿ

    ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ನಲ್ಲಿರುವ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೇಂದ್ರ ಕಚೇರಿ, ಅಮೆರಿಕ ನಿರ್ಮಿಸಿದ ಎಫ್‌ 16 ವಿಮಾನಗಳನ್ನು ನಿಲ್ಲಿಸಿರುವ ಏರ್‌ಬೇಸ್‌ ಹೌಸ್‌ಗಳನ್ನು ಗುರಿಯಾಗಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳು ಪ್ರಕಟವಾಗಿದೆ. ಇದನ್ನೂ ಓದಿ: ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

    ಫತಾಹ್-1 ಕ್ಷಿಪಣಿ 350-450 ಕೆಜಿ ಸಿಡಿತಲೆಯನ್ನು ಹೊತ್ತೊಯ್ಯುವುದರ ಜೊತೆ 13-15 ಮ್ಯಾಕ್‌ ವೇಗದಲ್ಲಿ ಚಲಿಸುವು ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೇ 1,400 ಕಿಲೋಮೀಟರ್‌ ದೂರದಲ್ಲಿರುವ ಗುರಿಯನ್ನು ಛಿದ್ರಗೊಳಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ.

  • ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ನ್ಯೂಯಾರ್ಕ್‌: ವಿಶ್ವಸಂಸ್ಥೆಯ (United Nations) ಭಾಷಣದಲ್ಲಿ ಇಸ್ರೆಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಭಾರತದ ನಕ್ಷೆ ತೋರಿಸಿ ವರ (Blessing) ಎಂದು ಹೇಳಿ ಹೊಗಳಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡಿದರು. ಈ ವೇಳೆ ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್, ಸುಡಾನ್, ಭಾರತ ಮತ್ತು ಯುಎಇ ಸೇರಿದಂತೆ ಇಸ್ರೇಲ್‌ಗೆ ಸ್ನೇಹ ಪರವಾಗಿರುವ ದೇಶಗಳ ಚಿತ್ರವನ್ನು ತೋರಿಸಿ ʼವರʼ ಎಂದು ಬಣ್ಣಿಸಿದ್ದಾರೆ. ನಂತರ ಇರಾನ್‌,ಇರಾಕ್‌ ಸಿರಿಯಾ ಮ್ಯಾಪ್‌ ತೋರಿಸಿ ಶಾಪ (Curse) ಎಂದು ಹೇಳಿದ್ದಾರೆ.

    ನೆತನ್ಯಾಹು ಅವರು ತಮ್ಮ ಭಾಷಣದಲ್ಲಿ, ಇರಾನ್ ಅನ್ನು ಬಹಳ ಸಮಯದವರೆಗೆ ಜಗತ್ತು ಸಮಾಧಾನದಿಂದ ನೋಡಿದೆ. ಆದರೆ ಅದರ ಆಂತರಿಕ ದಮನದ ವಿಚಾರದಲ್ಲಿ ಕುರುಡಾಗಿ ಬಾಹ್ಯ ಆಕ್ರಮಣ ನಡೆಸುತ್ತಿದೆ. ಈ ತುಷ್ಟೀಕರಣ ಕೊನೆಗೊಳ್ಳಬೇಕು ಮತ್ತು ಈಗಲೇ ಕೊನೆಯಾಗಬೇಕು ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹತ್ಯೆ – ಇಸ್ರೇಲ್ ಸೇನೆಯಿಂದ ಘೋಷಣೆ

    ಟೆಹರಾನ್‌ ನಿರಂಕುಶಾಧಿಕಾರಿಗಳಿಗೆ ನನ್ನ ಬಳಿ ಸಂದೇಶವಿದೆ. ನೀವು ನಮ್ಮನ್ನು ಹೊಡೆದರೆ, ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಗುಡುಗಿದರು.

    ನೆತನ್ಯಾಹು ಅವರು ಹಿಡಿದ ವರ ನಕ್ಷೆಯು ಇಸ್ರೇಲ್ ಮತ್ತು ಅದರ ಅರಬ್ ಪಾಲುದಾರರ ನಡುವಿನ ಏಕತೆಯ ದೃಷ್ಟಿಯನ್ನು ವಿವರಿಸುತ್ತದೆ. ಹಿಂದೂ ಮಹಾಸಾಗರ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಭೂ ಸೇತುವೆಯ ಮೂಲಕ ಏಷ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸುತ್ತದೆ.