ಟೆಲ್ ಅವೀವ್: ಇಸ್ರೇಲ್ ಮತ್ತು ಇರಾನ್ (Israel Iran War) ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ತೈಲ ಡಿಪೋ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ದಾಳಿಗೆ ಟೆಹ್ರಾನ್ (Tehran) ಹೊತ್ತಿ ಉರಿಯುತ್ತಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಶನಿವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ‘ಟೆಹ್ರಾನ್ ಉರಿಯುತ್ತಿದೆ’ ಎಂದು ತಿಳಿಸಿದ್ದಾರೆ. ಇರಾನ್ ರಾಜಧಾನಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇರಾನ್ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್
ಇರಾನಿನ ರಾಜ್ಯ ಮಾಧ್ಯಮವು, ಇಸ್ರೇಲಿ ವೈಮಾನಿಕ ದಾಳಿಯು ಟೆಹ್ರಾನ್‌ನ ವಾಯುವ್ಯದಲ್ಲಿರುವ ತೈಲ ಡಿಪೋವನ್ನು ಅಪ್ಪಳಿಸಿದೆ ಎಂದು ದೃಢಪಡಿಸಿದ ನಂತರ ಈ ಹೇಳಿಕೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳು, ನಗರದ ಮೇಲೆ ದಟ್ಟವಾದ ಹೊಗೆ ಜೊತೆ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸಿದೆ.
ಟೆಹ್ರಾನ್‌ನಲ್ಲಿ ಸ್ಥಳೀಯ ಸಮಯ ನಸುಕಿನ ಜಾವ 2:30 ರ ಸುಮಾರಿಗೆ ಸ್ಫೋಟಗಳ ಶಬ್ದ ಕೇಳಿಬಂದವು. ಆದರೆ, ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಡ್ರೋನ್ ಮತ್ತು ಕ್ಷಿಪಣಿ ಸಂಘರ್ಷದ ನಡುವೆ ಅವುಗಳ ಮೂಲ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ
ಶುಕ್ರವಾರ ಪ್ರಾರಂಭವಾದ ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಫೈಟರ್ ಜೆಟ್‌ಗಳಿಗೆ ಇಂಧನ ತುಂಬಲು ಬಳಸುವ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಭಾನುವಾರ ಮುಂಜಾನೆ ಇರಾನ್ ಘೋಷಿಸಿದೆ.
ಇಸ್ರೇಲ್‌ನ ಹೈಫಾ ಮತ್ತು ಟೆಲ್ ಅವೀವ್ ನಗರಗಳು ಸೇರಿದಂತೆ ಹಲವು ಭಾಗಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಇಸ್ರೇಲಿ ಪಡೆಗಳು ಇರಾನ್‌ನಾದ್ಯಂತ ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ನಡೆಸಿ, ಟೆಹ್ರಾನ್‌ನಲ್ಲಿರುವ ಶಹ್ರಾನ್ ತೈಲ ಸ್ಥಾವರದಲ್ಲಿ ಬೆಂಕಿ ಹಚ್ಚಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ದಾಳಿ ಮುಂದುವರಿಸಿದೆ.
ಟೆಲ್ ಅವಿವ್: ಇರಾನ್-ಇಸ್ರೇಲ್ ನಡುವೆ ಯುದ್ಧದ (Iran – Israel War) ಕಾರ್ಮೋಡ ಕವಿದಿದೆ. ಉಭಯ ರಾಷ್ಟ್ರಗಳ ನಡುವಿನ ದಾಳಿ-ಪ್ರತಿದಾಳಿ ಯುದ್ಧದ ಸನ್ನಿವೇಶ ತಂದೊಡ್ಡಿದೆ. ಒಂದು ದಿನದ ಹಿಂದೆಯಷ್ಟೇ ಇಸ್ರೇಲ್ ಸೇನೆಯು ಇರಾನ್‌ನ ಅಣ್ವಸ್ತ್ರ (Nuclear Sites) ಹಾಗೂ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಕೂಡ ಮಿಸೈಲ್ ಮಳೆ ಸುರಿಸಿತು. ಇದರಿಂದ ಕೆರಳಿದ ಇಸ್ರೇಲ್, ಇರಾನಿನ ಮೇಲೆ ಭೀಕರ ದಾಳಿ ಮಾಡುವ ದೊಡ್ಡ ಸುಳಿವು ನೀಡಿದೆ.
ಈಗಾಗಲೇ ಇರಾನ್‌ನ ದಕ್ಷಿಣದಲ್ಲಿರುವ ಪರ್ಶಿಯನ್ ಅನಿಲ ಸಂಸ್ಕರಣಾ ಘಟಕಗಳ (Pars gas field) ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ ಎಂದು ಕೆಲ ಅರೆ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಒಂದು ವೇಳೆ ಇದು ಅಧಿಕೃತ ಎಂದಾದ್ರೆ ಇರಾನ್‌ನ ತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮದ ಮೇಲಿನ ಮೊದಲ ದಾಳಿಯಾಗಲಿದೆ. ಸದ್ಯಕ್ಕೆ ಇರಾನ್ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಸುರಕ್ಷಿತವಾಗಿವೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ
ಇಸ್ರೇಲ್‌ನ ʻಐರನ್ ಡೋಮ್ʼ ಭೇದಿಸಿದ ಇರಾನ್ ಮಿಸೈಲ್ಸ್
ಇಸ್ರೇಲ್ ಮೇಲೆ ಇರಾನ್ ಶುಕ್ರವಾರ (13 ಜೂನ್) ಭಾರೀ ಪ್ರತೀಕಾರದ ದಾಳಿ ನಡೆಸಿದೆ. ಟೆಲ್ ಅವಿವ್‌ನಲ್ಲಿರುವ ಇಸ್ರೇಲ್‌ನ ರಕ್ಷಣಾ ಪಡೆಗಳ (IDF) ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಿದೆ. ಇಸ್ರೇಲ್ ಈ ದಾಳಿ ಎದುರಿಸಲು ಸಜ್ಜಾಗಿತ್ತು, ಆದ್ರೆ ಊಹೆಗೂ ಮೀರಿದ ಸನ್ನಿವೇಶವೊಂದು ನಡೆದೇ ಹೋಯಿತು. ಇರಾನ್ ದಾಳಿಯನ್ನು ಇಸ್ರೇಲ್‌ನ ಕ್ಷಿಪಣಿ ನಿಗ್ರಹ ವ್ಯವಸ್ಥೆಯಾದ ಐರನ್ ಡೋಮ್ ಕೂಡ ಮೆಟ್ಟಿ ನಿಲ್ಲಲಾಗಿಲ್ಲ. ಇರಾನ್ ನಿಂದ ಹಾರಿಸಲ್ಪಟ್ಟ ಕೆಲವು ಕ್ಷಿಪಣಿಗಳು ಐರನ್ ಡೋಂನಿಂದಲೂ ಬಚಾವಾಗಿ ಬಂದು ಇಸ್ರೇಲ್‌ನ ಕೆಲವು ಕಟ್ಟಡಗಳಿಗೆ ಅಪ್ಪಳಿಸಿದವು. ಈ ವೇಳೆ ಇಸ್ರೇಲ್ ರಕ್ಷಣಾ ಪಡೆಗಳ ಕೇಂದ್ರ ಕಚೇರಿಯೇ ಧ್ವಂಸವಾಯಿತು.
ಇಸ್ರೇಲ್‌ನಲ್ಲಿ ಮೊಳಗಿದ ಸೈರನ್
ಇಸ್ರೇಲ್‌ನ ಜೆರುಸಲೇಮ್, ಟೆಲ್ ಅವಿವ್ ನಗರವನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ಡ್ರೋನ್‌ಗಳು, 100 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಪ್ರಯೋಗಿಸಿತು. ಇದರಿಂದ ಇಸ್ರೇಲ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಎರಡು ಎಫ್-35 ಜೆಟ್‌ಗಳೂ ನಾಶವಾಗಿವೆ. ಇಸ್ರೇಲ್‌ನಲ್ಲಿ ಸೈರನ್ ಮೊಳಗುತ್ತಿದ್ದಂತೆ ಜನ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುವ ದೃಶ್ಯ ವೈರಲ್ ಆಗಿದೆ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ
ಈ ಬೆನ್ನಲ್ಲೇ ಇರಾನ್ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳೋ ಬಗ್ಗೆ ಇಸ್ರೇಲ್ ಎಚ್ಚರಿಕೆ ಕೊಟ್ಟಿದೆ. ಇರಾನ್‌ನ ಟೆಹ್ರಾನ್ ನಗರ ಹೊತ್ತಿ ಉರಿಯುತ್ತೆ… ಸರ್ವನಾಶ ಮಾಡುತ್ತೇವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಇಸ್ರೇಲ್ ಸಹಾಯಕ್ಕೆ ಬಂದರೆ ನಿಮ್ಮ ನೌಕಾನೆಲೆಗಳನ್ನು ಧ್ವಂಸಗೊಳಿಸ್ತೇವೆ ಅಂತ ಅಮೆರಿಕ, ಇಂಗ್ಲೆಂಡ್ ಹಾಗೂ ಫ್ರಾನ್ಸ್‌ಗೆ ಇರಾನ್ ವಾರ್ನಿಂಗ್ ಕೊಟ್ಟಿದೆ. ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!
From nuclear sites to air defense systems, we’ve dismantled some of Iran’s most dangerous military assets.
ಇಸ್ರೇಲ್‌ನಿಂದ ಘೋರ ದಾಳಿಯ ಸುಳಿವು
ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವ ಇಸ್ರೇಲ್, ಇರಾನ್ ಮೇಲೆ ಭೀಕರ ದಾಳಿ ನಡೆಸುವ ಎಚ್ಚರಿಕೆ ಕೊಟ್ಟಿದೆ. ನಾವು ಇರಾನ್‌ನ ಅಣ್ವಸ್ತ್ರ ತಾಣಗಳಿಂದ ಹಿಡಿದು, ವಾಯು ರಕ್ಷಣಾ ವ್ಯವಸ್ಥೆಗಳ ವರೆಗೆ ಕೆಲವು ಅಪಾಯಕಾರಿ ಮಿಲಿಟರಿ ಸಂಪತ್ತುಗಳನ್ನು ನಾಶಪಡಿಸಿದ್ದೇವೆ. ಆದರೆ ಇರಾನ್ ನಮ್ಮಲ್ಲಿನ ಶಾಲೆಗಳು, ನಾಗರಿಕರ ಮನೆಗಳು ಹಾಗೂ ನಾಗರಿಕರನ್ನ ಗುರಿಯಾಗಿಸಿ ದಾಳಿ ನಡೆಸುತ್ತಾ ಬಂದಿದ್ದೆ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ. ಹೀಗಾಗಿ ಇರಾನ್ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ ನಡೆಯುವ ಸಾಧ್ಯತೆಗಳಿವೆ.
ಟೆಲ್ ಅವೀವ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವಿನ ಸಂಘರ್ಷ ಹೆಚ್ಚಾಗಿದ್ದು, ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy) 24×7 ಸಹಾಯವಾಣಿಯನ್ನು ಆರಂಭಿಸಿದೆ. ಅಲ್ಲದೇ, ಇಸ್ರೇಲ್ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸುವಂತೆ ಭಾರತೀಯರಿಗೆ ಪ್ರಜೆಗಳಿಗೆ ರಾಯಭಾರ ಕಚೇರಿ ಸಲಹೆ ನೀಡಿದೆ.
ADVISORY (As on 14 June 2025)
*In view of the prevailing situation in the region, all Indian nationals in Israel are advised to stay vigilant and adhere to the safety protocols as advised by the Israeli authorities and home front command (https://t.co/033m9pwvDj).
ಸಹಾಯವಾಣಿ ಸಂಖ್ಯೆ +972 54-7520711 +972 54-3278392, ಇಮೇಲ್ – cons1.telaviv@mea.gov.in, ಆಗಿದ್ದು, ಇಸ್ರೇಲ್‌ನಲ್ಲಿರುವ ಭಾರತೀಯರು ಅಗತ್ಯವಿರುವ ಸಮಯದಲ್ಲಿ ಕರೆ ಮಾಡುವಂತೆ ತಿಳಿಸಲಾಗಿದೆ. ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಇರಬೇಕು. ದೇಶದೊಳಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಸುರಕ್ಷತಾ ತಾಣಗಳ ಸಮೀಪದಲ್ಲಿರಿ ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ.
ಶುಕ್ರವಾರ ಇರಾನ್‌ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ (Hossein Salami) ಹತ್ಯೆಗೀಡಾಗಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮೇಲೆ ಪ್ರತಿ ದಾಳಿ ನಡೆಸಿತ್ತು. ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಮಹಾನ್ ಪಾಲುದಾರ; ಪಾಕ್ ಹೊಗಳಿದ ಅಮೆರಿಕ
ಟೆಹ್ರಾನ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಕೇಂದ್ರ (Nuclear Plant) ಹಾಗೂ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್‌ನ ಡಜನ್‌ಗಟ್ಟಲೆ ಜೆಟ್‌ಗಳು ಭೀಕರ ದಾಳಿ ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ (Hossein Salami) ಹತ್ಯೆಗೀಡಾಗಿದ್ದಾರೆ. ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.
ಆಪರೇಷನ್ ರೈಸಿಂಗ್ ಲಯನ್ (Rising Lion) ಕಾರ್ಯಾಚರಣೆಯಲ್ಲಿ ಇರಾನ್‌ನ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ (Israeli AirStrike) ನಡೆಸಿದ್ದು, ಟೆಹ್ರಾನ್ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ. ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಕಾರ್ಖಾನೆಗಳು, ಯುರೇನಿಯಂ ಸಂಗ್ರಹಣಾ ಕೇಂದ್ರಕ್ಕೂ ಹಾನಿಯಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?
Prime Minister Netanyahu:
“Moments ago, Israel launched Operation Rising Lion, a targeted military operation to roll back the Iranian threat to Israel’s very survival.
This operation will continue for as many days as it takes to remove this threat.” pic.twitter.com/3c8oF1GCYa
— Prime Minister of Israel (@IsraeliPM) June 13, 2025
ಇತ್ತ ಇಸ್ರೇಲ್ ಕೂಡ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುವುದನ್ನು ತಡೆಲು ಶುಕ್ರವಾರ ಇರಾನಿನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ಇರಾನ್ 15 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಷ್ಟು ಸಾಮಗ್ರಿಗಳನ್ನ ಸಂಗ್ರಹ ಮಾಡಿಕೊಂಡಿತ್ತು. ಇದನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೇಡಿಗಾಗಿ ಠಾಗೂರ್ ಮನೆ ಮೇಲೆ ದಾಳಿ – 50ಕ್ಕೂ ಹೆಚ್ಚು ಜನರ ಮೇಲೆ ಕೇಸ್
ಪ್ಯಾರಾಮಿಲಿಟರಿ ಮುಖ್ಯಸ್ಥ, ಪರಮಾಣು ವಿಜ್ಞಾನಿಗಳು ಸಾವು
ಇನ್ನೂ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ ಕಮಾಂಡರ್ ಹೊಸೇನ್ ಸಲಾಮಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳೂ ಹತರಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಮಹಾನ್ ಪಾಲುದಾರ; ಪಾಕ್ ಹೊಗಳಿದ ಅಮೆರಿಕ
ಭಾರತೀಯರಿಗೆ ಎಚ್ಚರಿಕೆ…
ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಹಾಗೂ ಇರಾಕ್‌ನಲ್ಲಿ ಇರುವ ತನ್ನ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆಯನ್ನು ನೀಡಿದೆ. ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪ್ರಜೆಗಳು ಜಾಗರೂಕರಾಗಿ ಇರಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರುವಂತೆಯೂ ತಿಳಿಸಿದೆ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು
ಟೆಹ್ರಾನ್: ಇರಾನ್‌ನಲ್ಲಿ (Iran) ಭಾರತದ (India) 3 ಯುವಕರನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಬಿಡುಗಡೆಗಾಗಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಅಪಹರಣಕ್ಕೊಳಗಾದವರನ್ನು ಪಂಜಾಬ್ (Punjab) ಮೂಲದ ಹುಶನ್‌ಪ್ರೀತ್ ಸಿಂಗ್ (ಸಂಗ್ರೂರ್), ಜಸ್ಪಾಲ್ ಸಿಂಗ್ (ಎಸ್‌ಬಿಎಸ್ ನಗರ) ಮತ್ತು ಅಮೃತ್‌ಪಾಲ್ ಸಿಂಗ್ (ಹೊಶಿಯಾರ್‌ಪುರ್) ಎಂದು ಗುರುತಿಸಲಾಗಿದೆ. ಈ ಮೂವರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಕಿರಿಕ್ – ನೆರೆಮನೆಯವನ ಮೂಗು ಕಚ್ಚಿದ ಭೂಪ!
ಮೂವರು ಯುವಕರು ಮೇ 1 ರಂದು ಟೆಹ್ರಾನ್‌ಗೆ ತೆರಳಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದರು. ಇರಾನ್‌ಗೆ ಪ್ರಯಾಣಿಸಿದ ನಂತರ ಯುವಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿಗೆ ನೀಡಲಾಗಿತ್ತು. ರಾಯಭಾರ ಕಚೇರಿಯು ಈ ವಿಷಯವನ್ನು ಇರಾನಿನ ಅಧಿಕಾರಿಗಳೊಂದಿಗೆ ಗಮನಕ್ಕೆ ತಂದು ಚರ್ಚಿಸಿದೆ. ಅವರನ್ನು ತುರ್ತಾಗಿ ಪತ್ತೆಹಚ್ಚಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ರಾಯಭಾರ ಕಚೇರಿ ಮನವಿ ಮಾಡಿದೆ.
ಪಂಜಾಬ್‌ನ ಹೋಶಿಯಾರ್‌ಪುರದ ಏಜೆಂಟ್ ಒಬ್ಬ ಈ ಮೂವರನ್ನು ದುಬೈ-ಇರಾನ್ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಹೇಳಿದ್ದ. ಅವರಿಗೆ ಇರಾನ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದಾಗಿ ಏಜೆಂಟ್ ಭರವಸೆ ನೀಡಿದ್ದ. ಆದರೆ ಅವರು ಅಲ್ಲಿಗೆ ತೆರಳುತ್ತಿದ್ದಂತೆ ಅಪಹರಣಕಾರರು ಯುವಕರನ್ನು ಅಪಹರಿಸಿದ್ದಾರೆ. ಬಿಡುಗಡೆಗೆ 1 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ರಾಯಭಾರ ಕಚೇರಿಯು ಯುವಕರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಪತ್ತೆಗೆ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುತ್ತಿದೆ.
ಅಪಹರಣಕಾರರು ನಮಗೆ ವೀಡಿಯೋ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಯುವಕರನ್ನು ಹಗ್ಗದಿಂದ ಕಟ್ಟಲಾಗಿದೆ. ಅಲ್ಲದೇ ಅವರ ತೋಳುಗಳಿಂದ ರಕ್ತ ಬರುತ್ತಿದೆ. ಹಣ ಕಳುಹಿಸದಿದ್ದರೆ ಅವರನ್ನು ಕೊಲ್ಲುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ಫೋನ್ ಮೂಲಕ ನಮ್ಮ ಬಳಿ ಮಾತನಾಡುತ್ತಿದ್ದರು. ಮೇ 11 ರಿಂದ ನಮ್ಮ ಸಂಪರ್ಕದಲ್ಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಟೆಹ್ರಾನ್: ಇರಾನ್‌ನ (Iran) ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ (Shahid Rajaee Port) ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಮಾನ್‌ನಲ್ಲಿ ಇರಾನ್ ಮತ್ತು ಅಮೆರಿಕದೊಂದಿಗೆ (America) ಮೂರನೇ ಸುತ್ತಿನ ಪರಮಾಣು ಒಪ್ಪಂದಗಳ ಕುರಿತು ಮಾತುಕತೆ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಾಜೀ ಬಂದರು ಟೆಹ್ರಾನ್‌ನಿಂದ ಆಗ್ನೇಯಕ್ಕೆ 1,050 ಕಿ.ಮೀ. ದೂರದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿದೆ. ಇದು ಪರ್ಷಿಯನ್ ಕೊಲ್ಲಿಯ ಕಿರಿದಾದ ದ್ವಾರವಾಗಿದ್ದು, ಈ ಬಂದರಿನ ಮೂಲಕ ವಿಶ್ವದ ಶೇ.2ಂರಷ್ಟು ತೈಲ ವ್ಯಾಪಾರ ನಡೆಯುತ್ತದೆ.ಇದನ್ನೂ ಓದಿ: ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ
ಸ್ಫೋಟದ ತೀವ್ರತೆ ಸುಮಾರು 10 ಕಿ.ಮೀವರೆಗೂ ವ್ಯಾಪಿಸಿದ್ದು, ದಟ್ಟವಾದ ಹೊಗೆ ಹೊರಸೂಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಬೆಂಕಿ ನಂದಿಸಲು ಬಂದರಿನ ಚಟುವಟಿಕೆಗಳನ್ನು ನಿಲ್ಲಿಸಲಾಗಿದ್ದು, ಬಂದರಿನಲ್ಲಿದ್ದ ಹಲವಾರು ಕಾರ್ಮಿಕರು ಈ ಅವಘಡದಲ್ಲಿ ಸಿಲುಕಿಕೊಂಡಿದ್ದಾರೆ.
ಈ ಕುರಿತು ಸ್ಥಳೀಯ ಬಿಕ್ಕಟ್ಟು ನಿರ್ವಹಣಾ ಅಧಿಕಾರಿಯೊಬ್ಬರು ಮಾತನಾಡಿ, ಬಂದರಿನ ವಾರ್ಫ್ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ಪಾತ್ರೆಗಳು ಸ್ಫೋಟಗೊಂಡಿರುವ ಕಾರಣದಿಂದ ಈ ಭಾರೀ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸದ್ಯ ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ತಿಳಿಸಿದರು.
ವಾಷಿಂಗ್ಟನ್: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಇರಾನ್ ಪ್ಲ್ಯಾನ್ ಮಾಡಿದೆ. ದೇಶದಲ್ಲಿನ ಸಶಸ್ತ್ರ ಪಡೆಗಳು ಉಡಾವಣೆಗಾಗಿ ದೈತ್ಯ ಕ್ಷಿಪಣಿಗಳನ್ನು (Missiles) ಸಿದ್ಧಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ಅಮೆರಿಕ ವಿರುದ್ಧ ಬೃಹತ್ ಮಟ್ಟದಲ್ಲಿ ವಾಯುದಾಳಿ ನಡೆಸಲು ಇರಾನ್ (Iran) ಪ್ಲ್ಯಾನ್ ಮಾಡಿದೆ. ಅದಕ್ಕಾಗಿ ಸಿದ್ಧಪಡಿಸಲಾದ ದೈತ್ಯ ಕ್ಷಿಪಣಿಗಳನ್ನು ತನ್ನ ದೇಶಾದ್ಯಂತ ಇರುವ ಭೂಗತ ನೆಲೆಗಳಲ್ಲಿ ಅಡಗಿಸಿಟ್ಟಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅಮೆರಿಕ ಬಾಂಬ್ ದಾಳಿಗೆ (Bomb Attack) ಮುಂದಾದ್ರೆ, ಇರಾನ್ ಸಹ ಪ್ರತಿದಾಳಿ ನಡೆಸಲು ಸಿದ್ಧವಾಗಿದೆ ಎನ್ನುವ ಸಂದೇಶ ಈ ಮೂಲಕ ರವಾನೆಯಾಗಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ
ಸಾಂದರ್ಭಿಕ ಚಿತ್ರ
ಟ್ರಂಪ್ ಹೇಳಿದ್ದೇನು?
ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸಲಾಗುವುದು. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅಲ್ಲದೇ 4 ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್ ಮತ್ತೆ ಹೊಸ ಬಾಂಬ್
2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ
ವಾಷಿಂಗ್ಟನ್: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್‌ನೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ನಾಲ್ಕು ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು.
ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ.
ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸಿ ಟ್ರಂಪ್ ಬರೆದ ಪತ್ರಕ್ಕೆ ಇರಾನ್, ಒಮಾನ್ ಮೂಲಕ ಪ್ರತಿಕ್ರಿಯೆ ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳಿಂದ ಇಸ್ರೇಲ್ ಜೊತೆ ಕಣ್ಣು ಕೆಂಪಗೆ ಮಾಡಿಕೊಂಡಿರುವ ಇರಾನ್ ಈಗ ತನ್ನ ಭೂಗತ ಮಿಸೈಲ್ ನಗರವನ್ನ (Iran Missile City) ಜಗತ್ತಿಗೆ ಪರಿಚಯಿಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೊಸ ವಿಡಿಯೋವೊಂದನ್ನ ಹಂಚಿಕೊಂಡಿದೆ.
ಈ ವಿಡಿಯೋನಲ್ಲಿ ಇರಾನ್ ಭೂಗತ ಕ್ಷಿಪಣಿ (Missile) ಸಂಗ್ರಹಣಾ ಸೌಲಭ್ಯವನ್ನು ಪರಿಚಯಿಸಿದೆ. ಇಲ್ಲಿಂದಲೇ ಹೊಸ ಕ್ಷಿಪಣಿಗಳನ್ನು ತಯಾರಿಸುತ್ತಿದ್ದೇವೆ ಎಂದು ಕೂಡ ಇರಾನ್ ತಿಳಿಸಿದೆ. ಇರಾನ್‌ನ ಸರ್ಕಾರಿ ಪ್ರಾಯೋಜಿತ ವಾಹಿನಿಯಲ್ಲಿ ವಿಡಿಯೋ ಬಿಡುಗಡೆಯಾಗಿದ್ದು, ಐಆರ್‌ಜಿಸಿ ಕಮಾಂಡರ್ ಮೇಜರ್ ಜನರಲ್ ಹುಸೇನ್ ಸಲಾಮಿ ಮತ್ತು ಬ್ರಿಗೇಡಿಯರ್ ಜನರಲ್ ಅಮೀರ್ ಅಲಿ ಹಾಜಿಜಾದೆ ಮಿಸೈಲ್ ಸಿಟಿಯನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ. ಹಾಜಿಜಾದೆ ಈ ಸ್ಥಳವನ್ನು ಸುಪ್ತ ಜ್ವಾಲಾಮುಖಿ ಎಂದು ಕರೆದಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಇರಾಜ್ ಈ ಭೂಗತ ನಗರ ಹೇಗಿದೆ? ಎಲ್ಲಿದೆ? ಇರಾನ್ ಹಾಗೂ ಇಸ್ರೇಲ್ ಸೇನೆಗಳ ಬಲಾಬಲ ಹೇಗಿದೆ ಎಂಬುದನ್ನು ತಿಳಿಯೋಣ…
ಇನ್ನು, ಕಳೆದ ವರ್ಷ ಏಪ್ರಿಲ್ ಹಾಗೂ ಅಕ್ಟೋಬರ್‌ನಲ್ಲಿ ಇಸ್ರೇಲ್ ವಿರುದ್ಧ ನಡೆದ ಕ್ಷಿಪಣಿ ಕಾರ್ಯಾಚರಣೆಗೆ ಈ ಮಿಸೈಲ್ ಸೌಲಭ್ಯವನ್ನು ಬಳಸಿಕೊಳ್ಳಲಾಗಿತ್ತು ಎಂಬುದು ಬಹಿರಂಗವಾಗಿದೆ. ಆದರೆ, ಈ ಸ್ಥಳ ಎಲ್ಲಿದೆ ಎಂಬುದು ಇರಾನ್‌ನ ಕೆಲವೇ ಕೆಲ ಮಂದಿಗೆ ಬಿಟ್ಟು ಬೇರೆಯವರಿಗೆ ಗೊತ್ತಿಲ್ಲ. ಅಂಡರ್‌ಗ್ರೌಂಡ್‌ನಲ್ಲಿ ಮಿಸೈಲ್ ಹಾಗೂ ಡ್ರೋನ್ ಸಿಟಿಗಳನ್ನು ಜಗತ್ತಿಗೆ ಪರಿಚಯಿಸುತ್ತೇವೆ ಎಂದು ಇರಾನ್ ಹೇಳಿದೆ. ಇರಾನ್‌ನ ಭೂಗತ ಸಿಟಿಯನ್ನು ನೋಡಿ ಇಸ್ರೇಲ್ ಬೆಚ್ಚಿಬಿದ್ದಿರುವುದಂತೂ ನಿಜ.
ಯುದ್ಧಕ್ಕೆ ಟ್ರಂಪ್‌ನಿಂದ ಬ್ರೇಕ್ – ಸೌದಿ ಹೇಳೋದೇನು?
ಇರಾನ್‌ನ ಈ ಭೂಗತ ನಗರಕ್ಕೆ ಅಮೆರಿಕ ಕೂಡ ಕಾರಣ ಎಂಬುದು ಸೌದಿ ಅರೇಬಿಯಾದ ಆರೋಪ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಇರಾನ್ ಸೇನೆಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದರು. ಇದೀಗ ಟ್ರಂಪ್ (Donald Trump) ಅಧಿಕಾರಕ್ಕೇರುತ್ತಿದ್ದಂತೆ ಯುದ್ಧಗಳಿಗೆ ಬ್ರೇಕ್ ಹಾಕುವ ಮುನ್ಸೂಚನೆ ನೀಡಿದ್ದಾರೆ. ಅಮೆರಿಕದ ಸಹಾಯ ನಿರಾಕರಿಸಿದ್ರೆ ಇರಾನ್-ಇಸ್ರೇಲ್ ನಡುವಿನ ಯುದ್ಧ ಬಹುತೇಕ ಮುಕ್ತಾಯಗೊಂಡಂತೆ ಆಗುತ್ತದೆ. ಅಲ್ಲದೇ ಇದು ಇತರ ದೇಶಗಳ ಮೇಲೆ ಉಂಟಾಗುತ್ತಿರುವ ಆರ್ಥಿಕ ಹೊಡೆತವನ್ನೂ ಕಡಿಮೆ ಮಾಡಲಿದೆ ಎಂದು ಸೌದಿ ಅರೇಬಿಯಾ ಹೇಳಿದೆ.
ಇರಾನ್ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?
ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನೂ ಇಸ್ರೇಲ್ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ.
ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು
ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್ ರಾಷ್ಟ್ರ ಇರಾನ್. 1948ರಲ್ಲಿ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್ ಭಾಗವಹಿಸಲಿಲ್ಲ. ಇಸ್ರೇಲ್ ಗೆದ್ದ ಬಳಿಕ ಇರಾನ್ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.
1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.
ಇಸ್ರೇಲ್-ಇರಾನ್ ಸೇನಾಬಲ ಮೈ ನಡುಗಿಸುತ್ತೆ
ಇಸ್ರೇಲ್ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್ ಫೈರ್ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.
ಇರಾನ್ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್ ಲಾಂಚರ್‌ಗಳ ಪೈಕಿ ಇರಾನ್ ಬಳಿ 775 ಮಲ್ಟಿ ಲಾಂಚರ್ ಇದ್ದರೆ, ಇಸ್ರೇಲ್ ಬಳಿ ಕೇವಲ 150 ರಾಕೆಟ್ ಲಾಂಚರ್‌ಗಳಿವೆ.
ಸೈನಿಕರ ಬಲದಲ್ಲಿ ಇರಾನ್ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್ 89 ಸಾವಿರ ಜೆಟ್‌ಮೆನ್ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.
ಸದ್ಯ ಇದೇ ತಿಂಗಳಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಇರಾನ್-ಇಸ್ರೇಲ್, ಸಿರಿಯಾ ಆಂತಕ ರಿಕ ಕದನಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದು ಯಾವ ಹಂತ ತಲುಪಲಿದೆ ಎಂಬುದು ಕಾದುನೋಡಬೇಕಿದೆ.
ಡಮಾಸ್ಕಸ್: ಬಂಡುಕೋರರು ಸಿರಿಯಾ (Syria) ರಾಜಧಾನಿ ಡಮಾಸ್ಕಸ್ (Damascus) ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮದ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ಭಾನುವಾರ ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
— ???? ???????????????????????????????? ???????????????? (@cheguwera) December 8, 2024
ಜುಲೈ 2000 ಇಸ್ವಿಯಲ್ಲಿ ಅಧಿಕಾರ ಸ್ವೀಕರಿಸಿದ್ದ ಬಶರ್ ಅಲ್ ಅಸ್ಸಾದ್ ಸರ್ಕಾರಕ್ಕೆ ರಷ್ಯಾ (Russia) ಮತ್ತು ಇರಾನ್ (Iran) ಬೆಂಬಲ ನೀಡಿತ್ತು. ಇಸ್ರೇಲ್ ಯುದ್ಧದಲ್ಲಿ ಇರಾನ್ ತೊಡಗಿಸಿಕೊಂಡಿದ್ದರೆ ಉಕ್ರೇನ್ ಯುದ್ಧದಲ್ಲಿ ರಷ್ಯಾ ತೊಡಗಿಸಿಕೊಂಡಿದೆ. ಈ ಎರಡು ದೇಶಗಳ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಸಿರಿಯಾ ಈಗ ಏಕಾಂಗಿಯಾಗಿದೆ.
ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ಅಂತರ್ಯುದ್ಧ ನಡೆಯುತ್ತಿದೆ. ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟು ಇರಲಿಲ್ಲ. ಆದರೆ ಈ ಬಾರಿ ಎಲ್ಲರೂ ಒಗ್ಗಟ್ಟಾಗಿರುವ ಕಾರಣ ಬಂಡುಕೋರರ ಸಂಘಟನೆ ಶಕ್ತಿಯುತವಾಗಿದೆ.
2011ರಲ್ಲಿ ಶಾಲೆಯ ಗೋಡೆಗಳ ಮೇಲೆ ಅಸ್ಸಾದ್ ವಿರೋಧಿ ಬರಹಗಳನ್ನ ಬರೆದ ಕೆಲ ಯುವಕರನ್ನು ಬಂಧಿಸಲಾಗಿತ್ತು. ಬಂಧಿತ ಯುವಕರಿಗೆ ಸರ್ಕಾರ ಹಿಂಸೆ ನೀಡುತ್ತಿದೆ ಎಂಬ ಆರೋಪ ಬಂದ ನಂತರ ಸಿರಿಯಾದಲ್ಲಿ ಅಂತರ್ ಯುದ್ಧ ಆರಂಭವಾಗಿತ್ತು.