Tag: iran

  • ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಇರಾನ್‌ನ 2 ಫೈಟರ್ ಜೆಟ್‌ಗಳನ್ನು ಉಡೀಸ್ ಮಾಡಿದ ಇಸ್ರೇಲ್

    ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು (Iran Isrel Conflict) ತಾರಕಕ್ಕೇರಿದೆ. ಇರಾನ್‌ನ ಪ್ರಮುಖ 2 ಫೈಟರ್ ಜೆಟ್‌ಗಳನ್ನು (Fighter Jet) ಇಸ್ರೇಲ್ ಹೊಡೆದುರುಳಿಸಿದೆ.

    ಟೆಹ್ರಾನ್ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕಾ ನಿರ್ಮಿತ ಎಫ್-14 ಯುದ್ಧ ವಿಮಾನಗಳು ಇಸ್ರೇಲ್ (Isrel) ದಾಳಿಗೆ ಛಿದ್ರ ಛಿದ್ರವಾಗಿದೆ. ಅಲ್ಲದೇ ಡ್ರೋನ್‌ಗಳನ್ನು ಹಾರಿಸಲು ಸಜ್ಜಾಗಿದ್ದ ಇರಾನಿನ ಸೈನಿಕರ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇದನ್ನೂ ಓದಿ: ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ

    ಇರಾನ್ ರಾಷ್ಟ್ರದ ಮೇಲೆ ಇಸ್ರೇಲ್ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದು, ಟೆಹ್ರಾನ್ ವಾಯುಪ್ರದೇಶವನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಇರಾನ್‌ನ 100 ಸ್ಥಳಗಳನ್ನ ಗುರಿಯಾಗಿಸಿ ಇಸ್ರೇಲ್ ಏರ್‌ಸ್ಟ್ರೈಕ್‌ ಮಾಡಿದ್ದು, ಈಗಾಗಲೇ ಇಸ್ರೇಲ್ 120ಕ್ಕೂ ಹೆಚ್ಚು ಇರಾನ್ ಮಿಸೈಲ್‌ಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

    ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್‌ನ ಐರನ್ ಡೋಮ್, ಥಾಡ್ ಏರ್ ಡಿಫೆನ್ಸ್ ಸಿಸ್ಟಂ ಆಕ್ಟೀವ್ ಆಗಿವೆ. ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಈವರೆಗೆ 200ಕ್ಕೂ ಹೆಚ್ಚು ಇರಾನ್ ನಾಗರಿಕರು ಬಲಿಯಾಗಿದ್ದಾರೆ.

  • ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ – ಲೈವ್‌ನಿಂದಲೇ ಓಡಿ ಹೋದ ನಿರೂಪಕಿ

    ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ – ಲೈವ್‌ನಿಂದಲೇ ಓಡಿ ಹೋದ ನಿರೂಪಕಿ

    ಟೆಹ್ರಾನ್‌: ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ (Isreal) ಟೆಹ್ರಾನ್‌ನಲ್ಲಿರುವ (Tehran) ಇರಾನಿನ ಸರ್ಕಾರಿ ಟಿವಿ ವಾಹಿನಿ IRIB(Islamic Republic of Iran Broadcasting) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

    ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ.

    ದಾಳಿ ಆಗುತ್ತಿದ್ದಂತೆ ನಿರೂಪಕಿ ಓಡಿ ಹೋಗಿದ್ದಾರೆ. ಗೋಡೆಗಳು ಉದುರುತ್ತಿರುವ ದೃಶ್ಯ ಸ್ಟುಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    ಪಶ್ಚಿಮ ಏಷ್ಯಾದ ಇಸ್ರೇಲ್-ಇರಾನ್ ದೇಶಗಳ ಮಧ್ಯೆ ಯುದ್ಧೋನ್ಮಾದ ತಾರಕಕ್ಕೇರಿದ್ದು ಸುಮಾರು 2,000 ಕಿ.ಮೀ. ದೂರ ಇದ್ದರೂ ಎರಡೂ ರಾಷ್ಟ್ರಗಳು ಪರಸ್ಪರ ಖಂಡಾಂತರ ಕ್ಷಿಪಣಿಗಳು, ಡ್ರೋನ್‌ಗಳ ಮೂಲಕ ಸಂಘರ್ಷ ನಡೆಸುತ್ತಿವೆ. 4 ದಿನಗಳ ಈ ಯುದ್ಧದಲ್ಲಿ ಎರಡೂ ಕಡೆ ಈವರೆಗೆ 224 ಮಂದಿ ಸಾವನ್ನಪ್ಪಿದ್ದರೆ, 1,300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

    ಇಸ್ರೇಲ್‌ನ ಹೈಫಾ, ಟೆಲ್‌ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಹೈಫಾದ 2 ಪವರ್ ಪ್ಲಾಂಟ್‌ಗಳನ್ನು ಧ್ವಂಸಗೊಳಿಸಿದೆ. ಟೆಲ್‌ಅವಿವ್‌ನ ಪ್ರಧಾನಿ ನೆತನ್ಯಾಹು ಮನೆ ಮೇಲೆ ಮಿಸೈಲ್ ದಾಳಿ ಮಾಡಿದೆ. ನೆತನ್ಯಾಹು ಪಾರಾಗಿದ್ದಾರೆ. ಬೆನ್ನಲ್ಲೇ ಇಸ್ರೇಲ್ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇರಾನ್‌ನ ತೈಲ-ಅನಿಲ ಘಟಕ, ಮಿಲಿಟರಿ ಸೆಂಟರ್‌ಗಳ ಮೇಲೆ ಇಸ್ರೇಲ್ ಬಾಂಬ್ ಮಳೆ ಸುರಿಸಿದೆ. ಇರಾನ್‌ನ ನಾಲ್ವರು ಗುಪ್ತಚರ ಅಧಿಕಾರಿಗಳು ಬಲಿಯಾಗಿದ್ದಾರೆ

    ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಗಾರ ಧ್ವಂಸಗೊಳಿಸಿದೆ, ವಿದ್ಯುತ್, ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ನಲ್ಲಿ ಅನಿಲ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ. ಇದರಿಂದ 12 ಮಿಲಿಯನ್ ಕ್ಯೂಬಿಕ್ ಗ್ಯಾಸ್ ಉತ್ಪಾದನೆ ಬಂದ್ ಆಗಿದ್ದು, ಅನಿಲ ದರ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.

  • ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

    ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದ್ರೆ, ನಾವು ಪರಮಾಣು ದಾಳಿ ಮಾಡಲ್ಲ: ಪಾಕಿಸ್ತಾನ

    ನವದೆಹಲಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಪಾಕಿಸ್ತಾನ ಕೂಡ ಇಸ್ರೇಲ್ ಮೇಲೆ ಪರಮಾಣು ಬಾಂಬ್ (Nuclear Bomb) ದಾಳಿ ಮಾಡುತ್ತದೆ ಎಂದು ನಮಗೆ ತಿಳಿಸಿದೆ ಎಂದು ಐಆರ್‌ಜಿಸಿ ಕಮಾಂಡರ್ ಮತ್ತು ಇರಾನ್‌ನ (Iran) ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಜನರಲ್ ಮೊಹ್ಸೆನ್ ರೆಜೈ (Mohsen Rezaei) ನೀಡಿದ ಹೇಳಿಕೆಯನ್ನು ಪಾಕಿಸ್ತಾನ ನಿರಾಕರಿಸಿದೆ.

    ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಮೊಹ್ಸೆನ್ ರೆಜೈ ದೂರದರ್ಶನ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದರು. ಆದರೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಈ ಹೇಳಿಕೆಯನ್ನು ತಳ್ಳಿಹಾಕಿ, ಪಾಕ್ ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ

    ಈ ಬಗ್ಗೆ ಎಕ್ಸ್‌ಲ್ಲಿ ಪೋಸ್ಟ್ ಮಾಡಿರುವ ಆಸಿಫ್, ಪ್ರಸ್ತುತ ಅಸ್ಥಿರ ಪರಿಸ್ಥಿತಿಯ ನಡುವೆಯೂ ಇಸ್ರೇಲ್‌ನ (Isrel) ಅಘೋಷಿತ ಪರಮಾಣು ಶಸ್ತ್ರಗಾರವು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಲು ಧೈರ್ಯ ತುಂಬಬಹುದು. ಇದು ವ್ಯಾಪಕ ಪ್ರಾದೇಶಿಕ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ

    ಪರಮಾಣು ಪ್ರತೀಕಾರದ ಮಾತನ್ನು ಪಾಕಿಸ್ತಾನ (Pakistan) ತಿರಸ್ಕರಿಸಿದ್ದರೂ, ಪಾಕಿಸ್ತಾನವು `ಇರಾನ್‌ನ ಜೊತೆಗೆ ನಿಲ್ಲುವುದಾಗಿ’ ಹೇಳಿತ್ತು. ಅಲ್ಲದೇ ಯಹೂದಿ ರಾಷ್ಟ್ರವಾದ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟçಗಳ ಏಕತೆಗೆ ಕರೆ ನೀಡಿತ್ತು. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    ಜೂನ್ 14ರಂದು, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Muhammad Asif) ಸಂಸತ್‌ನಲ್ಲಿ ಮಾತನಾಡಿ, ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಅಥವಾ ಇರಾನ್ ಮತ್ತು ಪ್ಯಾಲೆಸ್ತೀನ್‌ನಂತೆಯೇ ಅದೇ ಗತಿಯನ್ನು ಎದುರಿಸುವ ಅಪಾಯವಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಲುಫ್ತಾನ್ಸಾ ಏರ್‌ಲೈನ್ಸ್‌ನ ಡ್ರೀಮ್‌ಲೈನರ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ – ಅರ್ಧದಲ್ಲೇ ಫ್ರಾಂಕ್‌ಫರ್ಟ್‌ಗೆ ವಾಪಸ್‌

    ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಮುಸ್ಲಿಂ ರಾಷ್ಟ್ರಗಳು ಸಂಬಂಧಗಳನ್ನು ಕಡಿದುಕೊಳ್ಳುವಂತೆ ಆಸಿಫ್ ಒತ್ತಾಯಿಸಿದ್ದರು. ಅಲ್ಲದೇ ಯಹೂದಿ ರಾಷ್ಟ್ರದ ವಿರುದ್ಧ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಇಸ್ಲಾಮಿಕ್ ಸಹಕಾರ ಸಂಸ್ಥೆ ಸಭೆ ಕರೆಯುವಂತೆ ಕರೆ ನೀಡಿದ್ದರು.

  • ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

    -ಇಸ್ರೇಲ್‌ನಲ್ಲಿ 18 ಕನ್ನಡಿಗರು ಸೇಫ್

    ಟೆಲ್ ಅವಿವ್/ಟೆಹ್ರಾನ್: ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳನ್ನೇ ಇಸ್ರೇಲ್ ಟಾರ್ಗೆಟ್ ಮಾಡಿಕೊಂಡಿದೆ.

    ಇರಾನ್-ಇಸ್ರೇಲ್ ಕದನ ಮೂರನೇ ದಿನಕ್ಕೆ ತಲುಪಿದ್ದು, ದಾಳಿ ಪ್ರತಿದಾಳಿಯ ಭೀಕರತೆ ಹೆಚ್ಚಾಗಿದೆ. ಇಸ್ರೇಲ್ ದಾಳಿಯಿಂದಾಗಿ 400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, 40ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್‌ನ ಶಹರಾನ್ ತೈಲ ಸಂಗ್ರಹಣಾ ಘಟಕ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ಇಸ್ರೇಲ್‌ನ ಈ ಭೀಕರ ದಾಳಿಯಿಂದ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರ ಸೌತ್ ಪಾರ್ಸ್ನಲ್ಲಿ ಅನಿಲ ಉತ್ಪಾದನೆಯನ್ನ ಇರಾನ್ ಸ್ಥಗಿತಗೊಳಿಸಿದೆ.ಇದನ್ನೂ ಓದಿ: ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

    ಇಸ್ರೇಲ್‌ನ ದಾಳಿಗೆ ಪ್ರತಿದಾಳಿ ಆರಂಭಿಸಿದ ಇರಾನ್ ರಾತ್ರಿಯಿಡಿ ಸೆಂಟ್ರಲ್ ಟೆಲ್ ಅವೀವ್ ನಗರದ ಮೇಲೆ ನೂರಾರು ಡ್ರೋನ್, ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ನಡೆಸಿದೆ. ಜೊತೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದು, ಸ್ವಲ್ಪದರಲ್ಲೇ ಪ್ರಧಾನಿ ಬಚಾವ್ ಆಗಿದ್ದಾರೆ.

    ಇಂದು ಇಸ್ರೇಲ್ ಪ್ರಧಾನಿಯ ಪುತ್ರ ಅವ್ನೇರ್ ನೆತಾನ್ಯಾಹುನ ಮದುವೆ ಇತ್ತು. ಯುದ್ಧದ ಸಮಯದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆ, ಮದುವೆಯನ್ನು ಮುಂದೂಡಲಾಗಿದೆ. ಇನ್ನೂ ಇಸ್ರೇಲ್‌ನ ಟೆಲ್ ಅವೀವ್ ನಗರದ ಕಟ್ಟಡಗಳು ಧ್ವಂಸಗೊAಡಿದ್ದು, ಪುಟ್ಟ ಕಂದಮ್ಮಗಳನ್ನ ಉಳಿಸಲು ಇಸ್ರೇಲ್‌ನ ರಕ್ಷಣಾ ಪಡೆಗಳು ನಿರಂತರ ರಕ್ಷಣಾ ಕಾರ್ಯಚರಣೆ ಮಾಡುತ್ತಿದ್ದಾರೆ. ಸದ್ಯ ಮುಂದಿನ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

    ಇಸ್ರೇಲ್‌ನಲ್ಲಿ 18 ಕನ್ನಡಿಗರು ಸೇಫ್:
    ಇಸ್ರೇಲ್‌ನ ಟೆಲ್ ಅವೀವ್ ನಗರದಲ್ಲಿ 18 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯಕ್ಕೆ ಹೊಟೇಲ್ ಒಂದರಲ್ಲಿ ಸೇಫ್ ಆಗಿದ್ದಾರೆ. ಅಧ್ಯಯನ ಪ್ರವಾಸಕ್ಕೆ ಹೋಗಿದ್ದ ತಂಡದ ಜೊತೆ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿದ್ದು, ಧೈರ್ಯ ತುಂಬಿದ್ದಾರೆ. ಇಸ್ರೇಲ್‌ನ ಜೇರುಸೇಲಂ ನಗರದಲ್ಲಿಯೂ ಮಂಗಳೂರು ಮೂಲದ ಹಲವರು ಕೆಲಸ ಮಾಡ್ತಿದ್ದು, ಮಿಸೈಲ್, ಡ್ರೋನ್ ದಾಳಿಯ ನಡುವೆ ಬಂಕರ್‌ಗಳಲ್ಲಿ ಸುರಕ್ಷಿತವಾಗಿದ್ದಾರೆ. ಮೂರು ದಿನಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ರಕ್ತಸಿಕ್ತ ಸಂಘರ್ಷಕ್ಕೆ ನಾಂದಿ ಹಾಡುವಂತಿದೆ.ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

  • Israel-Iran Conflict | ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

    Israel-Iran Conflict | ಅಡುಗೆ ಎಣ್ಣೆ ಬೆಲೆ 3-4ರೂ. ದಿಢೀರ್ ಹೆಚ್ಚಳ

    – ಯುದ್ಧ ಮುಂದುವರೆದ್ರೆ 10-30 ರೂ. ಏರಿಕೆ ಸಾಧ್ಯತೆ

    ನವದೆಹಲಿ/ಬೆಂಗಳೂರು: ಇರಾನ್-ಇಸ್ರೇಲ್ ಉದ್ವಿಗ್ನತೆದಿಂದಾಗಿ (Iran Israel Conಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರಿಂದಾಗಿ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಅಡುಗೆ ಎಣ್ಣೆ ಬೆಲೆ ಕಳೆದ ಶನಿವಾರದಿಂದ 3-4ರೂ. ಏರಿಕೆಯಾಗಿದೆ.

    ಸದ್ಯ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ಒಂದೆಡೆ ಕಚ್ಛಾ ತೈಲ ಬೆಲೆ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಡುಗೆ ಎಣ್ಣೆ ಬೆಲೆ ಶನಿವಾರದಿಂದಲೇ ಲೀಟರ್‌ಗೆ 3 ರಿಂದ 4 ರೂ. ಏರಿಕೆಯಾಗಿದೆ.ಇದನ್ನೂ ಓದಿ: Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    ಖಾದ್ಯ ತೈಲಗಳಾದ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ ಹಾಗೂ ದೀಪದ ಎಣ್ಣೆಯಲ್ಲಿಯೂ ಏರಿಕೆಯಾಗಿದೆ. ಒಂದು ವೇಳೆ ಯುದ್ಧ ಇದೇ ರೀತಿ ಮುಂದುವರೆದರೆ ಲೀಟರ್‌ಗೆ 10 ರಿಂದ 30 ರೂ.ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

    ಬೆಲೆ ಏರಿಕೆ:
    ಬ್ರ್ಯಾಂಡ್‌                      ಎಷ್ಟಿತ್ತು?     ಎಷ್ಟಾಗಿದೆ?
    *ಸನ್ ಫ್ಲವರ್ ಆಯಿಲ್     139ರೂ.      141ರೂ.
    *ಗೋಲ್ಡ್ ವಿನ್ನರ್            142ರೂ.       145ರೂ.
    *ರುಚಿಗೋಲ್ಡ್                 110ರೂ.        112ರೂ.
    *ಜೆಮಿನಿ                        147ರೂ.         150ರೂ.
    *ಫ್ರೀಡಂ                        137ರೂ.         141ರೂ.
    *ದೀಪದ ಎಣ್ಣೆ                  111ರೂ.         114ರೂ.

    ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧದಿಂದಾಗಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತಿದೆ.ಇದನ್ನೂ ಓದಿ: Israel-Iran Conflict – ರಾಜ್ಯದ 9 ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಸಚಿವರಿಗೆ ಪತ್ರ

  • Israel-Iran Conflict – ರಾಜ್ಯದ 9 ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಸಚಿವರಿಗೆ ಪತ್ರ

    Israel-Iran Conflict – ರಾಜ್ಯದ 9 ವಿದ್ಯಾರ್ಥಿಗಳನ್ನು ಕರೆತರಲು ವಿದೇಶಾಂಗ ಸಚಿವರಿಗೆ ಪತ್ರ

    ಬೆಂಗಳೂರು: ಆಪರೇಷನ್ `ರೈಸಿಂಗ್ ಲಯನ್’ ಬಳಿಕ ಇಸ್ರೇಲ್-ಇರಾನ್ ((Israel-Iran Conflict)) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಇರಾನ್‌ನಲ್ಲಿ ಸಿಲುಕಿರುವ ಕರ್ನಾಟಕದ 9 ವಿದ್ಯಾರ್ಥಿಗಳನ್ನ ಕರೆತರಲು ಕೋರಿ ವಿದೇಶಾಂಗ ಸಚಿವರಿಗೆ ರಾಜ್ಯ ನಾನ್ ರೆಸಿಡೆನ್ಸ್ ಫೋರಂ ಡೆಪ್ಯೂಟಿ ಚೇರ್ಮನ್ ಆರತಿ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: Israel-Iran Conflict | ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    ಕರ್ನಾಟಕ ಮೂಲದ 9 ವಿದ್ಯಾರ್ಥಿಗಳು ಇರಾನ್‌ನ ಟೆಹ್ರಾನ್ ನಗರದ ಜಫ್ರಾನಿಯಾ ಪ್ರದೇಶದ ತೌಪಿಕ್ ಅಲ್ಲೆಯಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ 9 ವಿದ್ಯಾರ್ಥಿಗಳು ಇರಾನ್‌ಗೆ ತೆರಳಿದ್ದರು. ಸದ್ಯ ಇರಾನ್-ಇಸ್ರೇಲ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ವಿದ್ಯಾರ್ಥಿಗಳು, ಇರಾನ್‌ನ ಭಾರತೀಯ ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಆರತಿ ಕೃಷ್ಣ ಅವರು ಕೂಡ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ಅಣ್ವಸ್ತ್ರ ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

  • ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ

    ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ

    ಬೆಂಗಳೂರು: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಜ್ಯದ (Karnataka) 9 ವಿದ್ಯಾರ್ಥಿಗಳು ಇರಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ.

    ರಾಜಧಾನಿ ಟೆಹರಾನ್‌ನಲ್ಲಿ (Tehran) ಜಫ್ರಾನಿಯಾ ಪ್ರದೇಶದ ತೌಫಿಕ್ ಅಲ್ಲೆಯಲ್ಲಿ 9 ಮಂದಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದರು. ಈ 9 ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಕರ್ನಾಟಕ ನಾನ್ ರೆಸಿಡೆನ್ಸಿ ಪೋರಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.  ಇದನ್ನೂ ಓದಿ: ನಮ್ಮ ತಂಟೆಗೆ ಬಂದ್ರೆ ಹಿಂದೆಂದೂ ನೋಡಿರದ ಮಿಲಿಟರಿ ಬಲವನ್ನು ಎದುರಿಸಬೇಕಾಗುತ್ತೆ – ಇರಾನ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

     
    ಪೋರಂನ ಡೆಪ್ಯುಟಿ ಚೇರ್‌ಮನ್ ಡಾ. ಆರತಿ ಕೃಷ್ಣ ಅವರು ವಿದೇಶಾಂಗ ಸಚಿವ ಜೈಶಂಕರ್‌ (Jaishankar) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

    ಸದ್ಯ ಭಾರತಕ್ಕೆ ಮರಳಲು ಸಹಾಯ ಮಾಡಲು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದ ಕರ್ನಾಟಕದ ವಿದ್ಯಾರ್ಥಿಗಳಾದ ನದೀಮ್ ಹುಸೇನ್, ಮೀರ್ ನಾಸರ್ ಹುಸೇನ್, ಸೈಯದ್ ಮೊಹಮ್ಮದ್ ಟಕಿ, ಮೀರ್ ಎಸಾಮ್ ರೆಜಾ, ಅಬ್ಬಾಸ್ ಅಸ್ಕರಿ, ಸೈಯದ್ ಮೊಹ್ಸಿನ್ ರೆಜಾ, ಮರ್ಯಮ್ ಫಾತಿಮಾ, ಡೇನಿಯಾ ಉಲ್ಫಾಟ್, ಅಬ್ಬಾಸ್ ಅಲಿ ಅವರು ತುರ್ತು ಸಹಾಯಕ್ಕೆ ಮನವಿ ಮಾಡಿದ್ದಾರೆ.

  • ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

    ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

    – ರಾಶಿ ರಾಶಿ ಡ್ರೋನ್, ಕ್ಷಿಪಣಿಗಳಿಂದ ದಾಳಿ

    ಟೆಲ್ ಅವೀವ್: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ ಸಂಘರ್ಷ ಉಂಟಾಗಿ, ದಾಳಿ-ಪ್ರತಿದಾಳಿಗಳು ನಡೆಸುತ್ತಿದೆ. ಇದೀಗ ಇಸ್ರೇಲ್‌ನಲ್ಲಿ ಸಿಲುಕಿರುವ ಕರ್ನಾಟಕದ ಮಹಿಳೆಯೊಬ್ಬರು ಇರಾನ್ ದಾಳಿಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಇಸ್ರೇಲ್‌ನಲ್ಲಿ ಕೇರ್ ಟೇಕರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಗಳೂರಿನ ಮಹಿಳೆಯೊಬ್ಬರು, ಪಬ್ಲಿಕ್ ಟಿವಿಯೊಂದಿಗೆ ದಾಳಿ ಭೀಕರತೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಂದು ಬೆಳಗ್ಗೆ ಕೂಡಾ ಡ್ರೋನ್, ಮಿಸೈಲ್ ಅಟ್ಯಾಕ್ (Missile attack) ಆಗಿದೆ. ಇಲ್ಲಿನ ಒಂದೊಂದು ಕ್ಷಣವೂ ಭಯದಿಂದ ಕೂಡಿದೆ. ರಾಶಿ, ರಾಶಿ ಡ್ರೋನ್, ಮಿಸೈಲ್‌ಗಳಿಂದ ದಾಳಿ ನಡೆಯುತ್ತಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

    ರಸ್ತೆಗಳಿಗೆ ಇಳಿಯಲು ಭಯ ಆಗ್ತಿದೆ. ಜೆರುಸೇಲಂನಲ್ಲಿ 2 ದಿನಗಳಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಕಚೇರಿ, ಕಾರ್ಖಾನೆಗಳಿಗೆ ರಜೆ ನೀಡಲಾಗಿದೆ. ಅಧಿಕಾರಿಗಳು, ರಸ್ತೆಗೆ ಇಳಿಯದಂತೆ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಜೇರುಸೇಲಂನ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗ್ತಿದೆ. ಸೈರನ್ ಮೊಳಗ್ತಿದ್ದಂತೆ ಬಂಕರ್‌ಗೆ ಜನರು ಓಡಿ ಹೋಗುತ್ತಿದ್ದಾರೆ ಎಂದು ಇರಾನ್ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

    ತುರ್ತು ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ಸಂಚಾರ ಅನುಮತಿ ಇಲ್ಲ. ಟೆಲ್ ಅವೀವ್, ಬೆತ್ಲಹೆಂನಲ್ಲಿ ಮನೆಗಳಿಗೆ ಹಾನಿ ಆಗಿದೆ. ಜೆರುಸಲೆಂನಲ್ಲಿ ಹಾನಿಯಾಗಿಲ್ಲ. ಆದರೆ ಕ್ಷಿಪಣಿ, ಡ್ರೋನ್ ದಾಳಿಗಳು ನಡೆಯುತ್ತಿವೆ. ರಾತ್ರಿ, ಬೆಳಗ್ಗೆ ಎನ್ನದೇ ದಾಳಿ ನಡೆಯುತ್ತಿದೆ. ಇದರ ಭಯದಲ್ಲಿ ನಮಗೆ ಇಲ್ಲಿ ನಿದ್ದೆ ಇಲ್ಲದಂತಾಗಿದೆ. ಮೊನ್ನೆ ನಡೆದ ಕ್ಷಿಪಣಿ ದಾಳಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನೋಡಿ ತುಂಬಾ ಭಯ ಆಯ್ತು. ಬಳಿಕ ಬಿಲ್ಡಿಂಗ್ ಕೆಳಗೆ ಇರುವ ಬಂಕರ್‌ಗೆ ಹೋಗಿ ಕುಳಿತಿದ್ದೆವು ಎಂದು ದಾಳಿ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

  • Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

    Israel-Iran Conflict | ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

    ಟೆಲ್ ಅವೀವ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವೆ ಸಂಘರ್ಷ ತೀವ್ರಗೊಂಡಿದ್ದು, ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ 18 ಮಂದಿ ಕನ್ನಡಿಗರು (Kannadigas) ಇಸ್ರೇಲ್‌ನಲ್ಲಿ ಸಿಲುಕಿದ್ದಾರೆ.

    ಒಂದು ವಾರದಿಂದ ಇಸ್ರೇಲ್‌ನಲ್ಲಿದ್ದ ಕನ್ನಡಿಗರ ತಂಡ, ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಇಸ್ರೇಲ್ -ಇರಾನ್ ಸಂಘರ್ಷದ ಪರಿಣಾಮ ದಿಢೀರ್ ವಿಮಾನ ಹಾರಾಟ ಸ್ಥಗಿತಗೊಳಿಸಿದ ಹಿನ್ನೆಲೆ ಬಿ ಪ್ಯಾಕ್ ಎನ್‌ಜಿಒ ತಂಡ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ಉಳಿದುಕೊಂಡಿದೆ. ಇದನ್ನೂ ಓದಿ: Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್‌ಬಾಕ್ಸ್‌’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್‌ ಆಕ್ಸಿಡೆಂಟ್‌ಗಳಲ್ಲಿ ಏಕೆ ಮುಖ್ಯ?

    ಇಸ್ರೇಲ್ ಹಾಗೂ ಇರಾನ್ ನಡುವೆ ದಾಳಿ- ಪ್ರತಿದಾಳಿ ತೀವ್ರಗೊಂಡ ಬೆನ್ನಲ್ಲೇ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ 61 ಮಂದಿ ಭಾರತೀಯರು ಜಾರ್ಜಿಯಾದಲ್ಲಿ ಸಿಲುಕಿದ್ದಾರೆ. ರಾಜಸ್ಥಾನದ 61 ಮಂದಿಯ ತಂಡ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಕಾರ್ಯಕ್ರಮಕ್ಕೆ ಜೂನ್ 8ರಂದು ತೆರಳಿದ್ದರು. ಜೂನ್ 13ರಂದು ಶಾರ್ಜಾ ಮೂಲಕ ಭಾರತಕ್ಕೆ ವಾಪಸ್ ಆಗಬೇಕಿತ್ತು. ವಿಮಾನ ಸ್ಥಗಿತಗೊಂಡ ಹಿನ್ನೆಲೆ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ತುರ್ತಾಗಿ ತಮಗೆ ಸಹಾಯ ಮಾಡುವಂತೆ ಕೋರಿ ಭಾರತ ಸರ್ಕಾರಕ್ಕೆ ಭಾರತೀಯ ತಂಡ ಮನವಿ ಮಾಡಿದೆ. ಭಾರತಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳುವಂತೆ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ ಪ್ರಕರಣ – ಕಠಿಣ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಪತ್ರ

  • ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

    ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

    ಟೆಲ್‌ ಅವೀವ್: ಇಸ್ರೇಲ್‌ ಮತ್ತು ಇರಾನ್‌ (Israel Iran War) ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದೆ. ದಾಳಿ ಪರಿಣಾಮ ಈವರೆಗೆ ಎರಡೂ ದೇಶಗಳಲ್ಲಿ 80 ಜನ ಮೃತಪಟ್ಟಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಭಾನುವಾರ ಮುಂಜಾನೆಯೇ ಉಭಯ ದೇಶಗಳು ಒಬ್ಬರ ಮೇಲೊಬ್ಬರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳು ಇರಾನಿನ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮತ್ತು ಪರಮಾಣು ಸಿಸ್ಟಮ್‌ ಮೇಲೆ ಸರಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿವೆ. ಇದನ್ನೂ ಓದಿ: Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ

    ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಾಗಾರವನ್ನು ಇಸ್ರೇಲ್‌ ಟಾರ್ಗೆಟ್‌ ಮಾಡಿದೆ ಎಂದು ಇರಾನ್ ಹೇಳಿದೆ. ಇಸ್ರೇಲಿ ಮಿಲಿಟರಿ ಟೆಹ್ರಾನ್ ಬಳಿಯ ತೈಲ ಸಂಸ್ಕರಣಾಗಾರದ ಮೇಲೂ ದಾಳಿ ಮಾಡಿತು. ಶನಿವಾರ ಇಸ್ರೇಲಿ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ನಂತರ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್ ಕ್ಷೇತ್ರದಲ್ಲಿ ಇರಾನ್ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಿದೆ.

    ಇಸ್ರೇಲಿ ನಗರಗಳ ಮೇಲೆ ಇರಾನ್ ಕೂಡ ದಾಳಿಗಳನ್ನು ನಡೆಸಿದೆ. ಜೆರುಸಲೆಮ್ ಮತ್ತು ಟೆಲ್ ಅವೀವ್‌ನಾದ್ಯಂತ ವಾಯುದಾಳಿ ಸೈರನ್‌ಗಳು ಮೊಳಗಿದವು. 10 ವರ್ಷದ ಬಾಲಕ ಮತ್ತು 20 ವರ್ಷದ ಮಹಿಳೆ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಇರಾನ್ ತನ್ನ ಪ್ರತಿಕಾರದ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲ್‌ನಲ್ಲಿ ಇದುವರೆಗೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

    ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳು ಇಸ್ರೇಲ್‌ನ ಇಂಧನ ಮೂಲಸೌಕರ್ಯ ಮತ್ತು ಯುದ್ಧ ಜೆಟ್ ಇಂಧನ ಉತ್ಪಾದನೆಗೆ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ತಿಳಿಸಿವೆ.

    ಇಸ್ರೇಲಿ ಸೇನೆಯು ಶುಕ್ರವಾರ ಆಪರೇಷನ್ ‘ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿತು. ಇರಾನ್‌ನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ದಾಳಿ ಮಾಡಿದ ನಂತರ ಇಬ್ಬರು ಪರಸ್ಪರ ದಾಳಿ ಮುಂದುವರಿಸಿದ್ದಾರೆ.

    ನಾವು ನಡೆಸಿದ ದಾಳಿಯಲ್ಲಿ ಉನ್ನತ ಜನರಲ್‌ಗಳು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿರಿಯ ವಿಜ್ಞಾನಿಗಳು ಮತ್ತು ತಜ್ಞರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಭಾನುವಾರದ ದಾಳಿಗೆ ಮೊದಲು ಇರಾನ್‌ನ ವಿಶ್ವಸಂಸ್ಥೆಯ ರಾಯಭಾರಿಯು, 78 ಜನರು ಸಾವನ್ನಪ್ಪಿದ್ದಾರೆ ಮತ್ತು 320 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ