Tag: iran

  • ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ತೆಹ್ರಾನ್: ಹಿಜಬ್ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ (Police) ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ (Iran Protest) ಭುಗಿಲೆದ್ದಿದ್ದು, ಇಂಟರ್‌ನೆಟ್ (Internet) ಬಳಕೆಯೊಂದಿಗೆ ವಾಟ್ಸಪ್‌ (WhatsApp), ಇನ್‌ಸ್ಟಾಗ್ರಾಮ್ (Instagram) ಬಳಕೆಯನ್ನೂ ನಿಷೇಧಿಸಲಾಗಿದೆ.

    ಇರಾನ್ ಮಹಿಳೆಯರ (Women) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಅದನ್ನು ಹತ್ತಿಕ್ಕಲು ಪೊಲೀಸರು (Police) ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    ಇತ್ತೀಚೆಗೆ ಇರಾನ್‌ನಲ್ಲಿ ಫೇಸ್‌ಬುಕ್ (FaceBook), ಟ್ವಿಟರ್ (Twitter), ಟೆಲಿಗ್ರಾಮ್, ಯೂಟ್ಯೂಬ್ (Youtube) ಮತ್ತು ಟಿಕ್‌ಟಾಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದ (Social Media) ವೇದಿಕೆಗಳ ಮೇಲೆ ನಿರ್ಬಂಧ ವಿಧಿಸಿದ ನಂತರ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್ ವ್ಯಾಪಕವಾಗಿ ಬಳಕೆಯಾಗಿವೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಇಂಟರ್‌ನೆಟ್ (Internet) ಬಳಕೆಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

    ಸತತ 7ನೇ ದಿನ ಇರಾನ್‌ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‌ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ.

    ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿಯಾಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಹ್ಸಾ ಆಮಿನಿ ಸಾವು, ಹಿಜಬ್‌ ವಿರೋಧಿಸಿ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಮೂವರು ಸಾವು

    ಮಹ್ಸಾ ಆಮಿನಿ ಸಾವು, ಹಿಜಬ್‌ ವಿರೋಧಿಸಿ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಮೂವರು ಸಾವು

    ತೆಹ್ರಾನ್: ಹಿಜಬ್‌ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ (Iran Protest) ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ವೇಳೆ ಮೂವರು ಸಾವನ್ನಪ್ಪಿದ್ದಾರೆ.

    ಪ್ರತಿಭಟನೆಯಲ್ಲಿ ಮೂವರು ಸಾವಿಗೀಡಾಗಿರುವ ಬಗ್ಗೆ ಇರಾನ್ ಗವರ್ನರ್ ಎಸ್ಮಾಯಿಲ್ ಜರೀ ಕೌಶಾ ದೃಢಪಡಿಸಿದ್ದಾರೆ. ಯಾವುದೇ ಹಂತದ ಭದ್ರತಾ ಅಥವಾ ಕಾನೂನು ಜಾರಿ ಪಡೆಗಳು ಬಳಸದ ಬಂದೂಕುಗಳಿಂದ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತನಿಖೆಗಳು ದೃಢಪಡಿಸಿವೆ ಎಂದು ವಾಯುವ್ಯ ಕುರ್ದಿಸ್ತಾನ್ ಪ್ರಾಂತ್ಯದ ಗವರ್ನರ್ ಕೌಶಾ ಹೇಳಿದ್ದಾರೆ. ಇದನ್ನೂ ಓದಿ: ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

    ಮೃತರಲ್ಲಿ ಒಬ್ಬರು ದಿವಾಂಡರೆಹ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ಸಾಕ್ವೆಜ್‌ನ ಆಸ್ಪತ್ರೆ ಬಳಿ ಸಾವನ್ನಪ್ಪಿದ್ದರೆ, ಮತ್ತೊಬ್ಬರದು ಅನುಮಾನಾಸ್ಪದ ಸಾವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಗವರ್ನರ್‌ ತಿಳಿಸಿದ್ದಾರೆ.

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರಿಗೆ ಕಾರಿಗೆ ನೂಕು ದೌರ್ಜನ್ಯ ನಡೆಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಈ ಘಟನೆಯನ್ನು ಖಂಡಿಸಿ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ಹಿಜಬ್‌ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು

    ಪ್ರತಿಭಟನೆ ಗಂಭೀರತೆ ಅರಿತ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಯುವತಿ ಆಮಿನಿ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಘಟನೆ ಕುರಿತು ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ಕೂಡ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

    ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

    ಟೆಹರಾನ್: ಹಿಜಬ್ ಧರಿಸದ ಯುವತಿಯ ಸಾವಿನ ಬೆನ್ನಲ್ಲೇ ಇರಾನಿನಲ್ಲಿ (Iran) ಪ್ರತಿಭಟನೆಗಳು ಭುಗಿಲೆದ್ದಿದ್ದು, ಇರಾನ್ ಮಹಿಳೆಯರು ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸಿ, ಹಿಜಬ್‍ಗಳನ್ನು (Hijab) ತೆಗೆದು ಸುಟ್ಟು ಹಾಕುತ್ತಿದ್ದಾರೆ.

    ಶನಿವಾರ ಹಿಜಬ್ ಧರಿಸದ ಕಾರಣಕ್ಕೆ ಇರಾನ್‍ನ ಪೊಲೀಸರು ಮಹ್ಸಾ ಆಮಿನಿ(22)ಯನ್ನು (Mahsa Amini) ಬಂಧಿಸಿದ್ದರು. ಬಂಧನದಿಂದ ಶಾಕ್‍ಗೆ ಒಳಗಾದ ಯುವತಿ ಕೋಮಾ ಸ್ಥಿತಿ ತಲುಪಿದ್ದಳು. ದುರದೃಷ್ಟವಶಾತ್ ನಂತರ ಆಕೆ ಮೃತಪಟ್ಟಿದ್ದಾಳೆ ಎಂದು ಅಲ್ಲಿನ ಪೊಲೀಸರು (Police) ಹೇಳಿದ್ದಾರೆ. ಆದರೆ ನೈತಿಕ ಪೊಲೀಸ್‍ಗಿರಿ ನೀಡಿದ ಟಾರ್ಚರ್‌ನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    ಈ ಘಟನೆ ದಿನೇ ದಿನೇ ಇರಾನ್‍ನಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹಿಜಬ್‍ನ್ನು ಧರಿಸಬೇಕು. ಕೂದಲು ಕಾಣದಂತೆ ಸಂಪೂರ್ಣವಾಗಿ ಹಿಜಬ್‍ನ್ನು ಧರಿಸಿಕೊಳ್ಳಬೇಕು ಎಂಬ ಇರಾನಿನ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿ, ಹಿಜಬ್‍ಗಳನ್ನು ಸುಟ್ಟುಹಾಕಿದರು. ಇದನ್ನೂ ಓದಿ: ಆಕಳಿಗೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಕಾರು ಪಲ್ಟಿ – ಮಹಿಳೆ ಸಾವು

    ಸರ್ಕಾರದ ವಿರುದ್ಧ ಅಲ್ಲಿನ ಮಹಿಳೆಯರು ದಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ಸಂಬಂಧ ಕೆಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರತಿಭಟನಾಕಾರರನ್ನು ಹಿಮ್ಮೆಟ್ಟಲು ಇರಾನ್ ಪಡೆಗಳು ಅಶ್ರುವಾಯುಗಳನ್ನು ಬಳಸುತ್ತಿದ್ದಾರೆ.

    ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತ ಮಾಸಿಹ್ ಅಲಿನೆಜಾದ್ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ಲಿಂಗ ವರ್ಣಭೇದ ನೀತಿಯಿಂದ ನಾವು ಬೇಸತ್ತಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಜಬ್‌ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು

    Live Tv
    [brid partner=56869869 player=32851 video=960834 autoplay=true]

  • ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್‌ನಲ್ಲಿ ಆದೇಶ

    ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್‌ನಲ್ಲಿ ಆದೇಶ

    ಟೆಹ್ರಾನ್: ಮಹಿಳೆಯರ ಹಿಜಬ್ ವಿಚಾರಕ್ಕೆ ಇಸ್ಲಾಮಿಕ್ ದೇಶಗಳಲ್ಲಿ ಆಗಾಗ ವಿವಾದಗಳು ಆಗುತ್ತಲೇ ಇರುತ್ತವೆ. ಇದೀಗ ಇರಾನ್‌ನಲ್ಲೂ ಹಿಜಬ್ ವಿಚಾರಕ್ಕೆ ಜಾಹೀರಾತುಗಳಲ್ಲಿ ಮಹಿಳೆಯರನ್ನೇ ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ.

    ಪ್ರಸಿದ್ಧ ಐಸ್‌ಕ್ರೀಂ ಕಂಪನಿಯ ಜಾಹೀರಾತೊಂದರಲ್ಲಿ ಮಹಿಳೆಯೊಬ್ಬಳು ಸಡಿಲವಾದ ಹಿಜಬ್ ಧರಿಸಿದ್ದು ಕಂಡುಬಂದ ಬಳಿಕ ಇರಾನ್‌ನಾದ್ಯಂತ ಭಾರೀ ವಿವಾದ ಉಂಟಾಯಿತು. ಬಳಿಕ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಎಲ್ಲಾ ರೀತಿಯ ಜಾಹೀರಾತುಗಳಲ್ಲಿ ಮಹಿಳೆಯರನ್ನು ಪ್ರದರ್ಶಿಸುವುದನ್ನೇ ನಿಷೇಧಿಸುವಂತೆ ಮಾಡಿದೆ. ಇದನ್ನೂ ಓದಿ: ಟಿವಿ ಶೋದಿಂದ ಪ್ರೇರಣೆ- ತನ್ನನ್ನು ತಾನು ಕಿಡ್ನಾಪ್ ಮಾಡ್ಕೊಂಡ ಬಾಲಕ!

    ಈ ಜಾಹೀರಾತು ಇರಾನ್ ಧರ್ಮಗುರುಗಳನ್ನು ಕೆರಳಿಸಿದೆ ಎಂದು ವರದಿಯಾಗಿದೆ. ಅವರು ವಿವಾದಾತ್ಮಕ ಜಾಹೀರಾತನ್ನು ಪ್ರದರ್ಶಿಸಿದ ಸ್ಥಳೀಯ ಐಸ್ ಕ್ರೀಮ್ ತಯಾರಕ ಕಂಪನಿ ವಿರುದ್ಧ ಮೊಕದ್ದಮೆ ಹೂಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ ಸ್ಟಾಲಿನ್

    ಈ ಬಗ್ಗೆ ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಕಲೆ ಮತ್ತು ಸಿನಿಮಾ ಶಾಲೆಗಳಿಗೆ ಪತ್ರ ಬರೆದಿದ್ದು, ಹಿಜಬ್ ಮತ್ತು ಪರಿಶುದ್ಧತೆಯ ನಿಯಮಗಳನ್ನು ಉಲ್ಲೇಖಿಸಿ, ಮಹಿಳೆಯರಿಗೆ ಇನ್ನು ಮುಂದೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ಕಡ್ಡಾಯ ಖಂಡಿಸಿ ಬೀದಿಗಿಳಿದ ಇರಾನ್‌ ಮಹಿಳೆಯರು

    ಹಿಜಬ್‌ ಕಡ್ಡಾಯ ಖಂಡಿಸಿ ಬೀದಿಗಿಳಿದ ಇರಾನ್‌ ಮಹಿಳೆಯರು

    ಟೆಹರಾನ್‌: ಹಿಜಬ್‌ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ಖಂಡಿಸಿ ಇರಾನ್‌ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ, ಈಶಾನ್ಯ ಇರಾನ್‌ನ ಮಶ್ಹದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್, ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶಕ್ಕೆ ಹಿಜಬ್‌ ಕಡ್ಡಾಯಗೊಳಿಸಿ ಆದೇಶ ಪ್ರಕಟಿಸಿದ್ದರು. ಈ ನಿರ್ಧಾರಕ್ಕೆ ನಗರದ ಮೇಯರ್ ವಿರೋಧ ವ್ಯಕ್ತಪಡಿಸಿದ್ದರೂ ಕೊನೆಗೆ ಅನುಮತಿ ನೀಡಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

    ಜುಲೈ 12 ರಂದು ಸರ್ಕಾರ “ಹಿಜಬ್‌ ಮತ್ತು ಪರಿಶುದ್ಧತೆ ದಿನ”ವನ್ನಾಗಿ ಆಚರಿಸಲು ಕರೆ ನೀಡಿತ್ತು. ಆದರೆ ಮಹಿಳೆಯರು ಈ ಆಚರಣೆಯನ್ನು ಖಂಡಿಸಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ಪ್ರತಿಭಟನೆ ನಡೆಸಿದ್ದಾರೆ.#No2hijab ಹ್ಯಾಶ್‌ಟ್ಯಾಗ್‌ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್

    ಹಿಜಬ್‌ ಕಾನೂನು ಹೇಗಿದೆ?
    1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ 9 ವರ್ಷ ಮೀರಿದ ಎಲ್ಲ ಹುಡುಗಿಯರು/ಮಹಿಳೆಯರು ಹಿಜಬ್‌ ಧರಿಸುವುದು ಕಡ್ಡಾಯ. ಈ ಕಾನೂನು ಉಲ್ಲಂಘನೆ ಮಾಡಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. 2017 ರಿಂದ 2019ರ ಅವಧಿಯಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಹಿಜಬ್‌ ಕಡ್ಡಾಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಬಳಿಕ 2019ರಲ್ಲಿ ಸಾರ್ವಜನಿಕವಾಗಿ ಹಿಜಬ್‌ ತೆಗೆದು ವೀಡಿಯೋ ಮಾಡಿದರೆ  10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿಗೆ ಅವಹೇಳನ – ಭಾರತದ ನಿಲುವಿನ ಬಗ್ಗೆ ತೃಪ್ತಿಯಿದೆ ಎಂದ ಇರಾನ್

    ನವದೆಹಲಿ: ಪ್ರವಾದಿ ಮೊಹಮ್ಮದ್ ಬಗೆಗಿನ ವಿವಾದಾತ್ಮಕ ಹೇಳಿಕೆ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರದ ಬಗ್ಗೆ ತೃಪ್ತಿಯಿದೆ ಎಂದು ಇರಾನ್ ಹೇಳಿದೆ.

    ಭಾರತಕ್ಕೆ ಭೇಟಿ ನೀಡಿದ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ಬಗ್ಗೆ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮ ಹಾಗೂ ಪ್ರಯತ್ನಗಳಿಂದ ನಮಗೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು: ಬಿಜೆಪಿ

    ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ ಅಬ್ದುಲ್ಲಾಹಿಯಾನ್ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನು ಭೇಟಿಯಾದರು. ಈ ವೇಳೆ ಸಭೆಯಲ್ಲಿ ಮಾಜಿ ಬಿಜೆಪಿ ವಕ್ತಾರರ ವಿವಾದಾತ್ಮಕ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಲಾಯಿತು. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ

    ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ ದೋವಲ್, ಪ್ರವಾದಿ ಮೊಹಮ್ಮದ್ ಬಗ್ಗೆ ಭಾರತ ಸರ್ಕಾರ ಹಾಗೂ ಅಧಿಕಾರಿಗಳಿಗೆ ಗೌರವವಿದೆ. ಅವರ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವವರ ಬಗ್ಗೆ ಸರ್ಕಾರವೂ ತಕ್ಕ ರೀತಿಯಲ್ಲಿ ವ್ಯವಹರಿಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ಲಾಹಿಯಾನ್ ಭಾರತದ ನಿಲುವಿನ ಬಗ್ಗೆ ನಾವು ತೃಪ್ತರಾಗಿದ್ದೇವೆ ಎಂದಿದ್ದಾರೆ.

    ಬಿಜೆಪಿ ಪಕ್ಷದ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಇತ್ತೀಚೆಗೆ ಪ್ರವಾದಿ ಮೊಹಮ್ಮದರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದು ಗಲ್ಫ್ ದೇಶಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಭಾನುವಾರ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಯಿತು.

  • ಇರಾನ್‌ನಲ್ಲಿ ಹಳಿತಪ್ಪಿದ ರೈಲು – 10 ಸಾವು, 50 ಮಂದಿಗೆ ಗಾಯ

    ಇರಾನ್‌ನಲ್ಲಿ ಹಳಿತಪ್ಪಿದ ರೈಲು – 10 ಸಾವು, 50 ಮಂದಿಗೆ ಗಾಯ

    ಟೆಹರಾನ್: ಪ್ರಯಾಣಿಕರ ರೈಲೊಂದು ಹಳಿ ತಪ್ಪಿ 10 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ಪೂರ್ವ ಇರಾನ್‌ನಲ್ಲಿ ನಡೆದಿದೆ.

    ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 50 ಮಂದಿಗೆ ಗಾಯಗಳಾಗಿವೆ. ಅವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

    ಇರಾನ್‌ನ ಮರುಭೂಮಿ ಪ್ರದೇಶವಾಗಿರುವ ತಬಾಸ್‌ನಲ್ಲಿ ಮುಂಜಾನೆ ರೈಲಿನ 7 ಬೋಗಿಗಳು ಹಳಿ ತಪ್ಪಿವೆ. ದುರ್ಘಟನೆ ನಡೆದಿರುವ ಪ್ರದೇಶ ನಗರದಿಂದ ದೂರದಲ್ಲಿದ್ದು, ಸಂವಹನವೂ ಕಷ್ಟಕರವಾಗಿದೆ. ಘಟನೆ ನಡೆಯುತ್ತಿದ್ದಂತೆ ಅಂಬುಲೆನ್ಸ್‌ಗಳು ಹಾಗೂ 3 ಹೆಲಿಕಾಪ್ಟರ್‌ಗಳು ರಕ್ಷಣಾಕಾರ್ಯಕ್ಕೆ ಧಾವಿಸಿವೆ. ಇದನ್ನೂ ಓದಿ: ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ರೈಲು ನೆಲ ಅಗೆಯುವ ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಡಿ ಸಮನ್ಸ್ – ವಿಚಾರಣೆಯಿಂದ ವಿನಾಯಿತಿ ಕೋರಿದ ಸೋನಿಯಾ

    2016ರಲ್ಲೂ ಇರಾನ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ ಹಲವರು ಸಾವನ್ನಪ್ಪಿದ್ದರು. ಇರಾನ್‌ನಲ್ಲಿ ಪ್ರತೀ ವರ್ಷ ರಸ್ತೆ ಅಪಘಾತಗಳಲ್ಲೇ ಸುಮಾರು 17,000 ಜನರು ಸಾವನ್ನಪ್ಪುತ್ತಾರೆ ಎಂದು ಅಂಕಿ ಅಂಶ ತಿಳಿಸಿದೆ. ಜೊತೆಗೆ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಸಂಚಾರಿ ಮಾರ್ಗಗಳನ್ನು ಹೊಂದಿರುವ ದೇಶಗಳಲ್ಲಿ ಇರಾನ್ ಒಂದಾಗಿದೆ.

  • ಭಾರತಕ್ಕೆ ಇಂಧನ ಭದ್ರತೆ ಪೂರೈಸಲು ಸಿದ್ಧ ಎಂದ ಇರಾನ್

    ನವದೆಹಲಿ: ಒಪೆಕ್(ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಸದಸ್ಯರ ವಿರುದ್ಧದ ನಿರ್ಬಂಧಗಳನ್ನು ತೆಗೆದುಹಾಕುವ ಕುರಿತು ಮಾತುಕತೆ ಮುಂದುವರಿಯುತ್ತಿರುವ ಹೊತ್ತಿನಲ್ಲೇ ಇರಾನ್ ಭಾರತದ ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ಅಲ್ಲಿನ ರಾಯಭಾರಿ ಕಚೇರಿ ಶುಕ್ರವಾರ ತಿಳಿಸಿದೆ.

    ಇರಾನ್ ಭಾರತಕ್ಕೆ 2ನೇ ಅತಿದೊಡ್ಡ ತೈಲ ಪೂರೈಕೆದಾರರಾಗಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಹಾಗೂ ಅದರ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ಮರುಸ್ಥಾಪಿಸಿದ ನಂತರ ನವದೆಹಲಿ ಟೆಹ್ರಾನ್‌ನಿಂದ ಆಮದು ನಿಲ್ಲಿಸಬೇಕಾಯಿತು. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ

    ಇದೀಗ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ, `ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನವನ್ನು ಎರಡು ದೇಶಗಳ ಕಂಪನಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಸಹಕರಿಸುತ್ತದೆ. ಇದರೊಂದಿಗೆ ಮಧ್ಯವರ್ತಿ ಹಾವಳಿ ತಪ್ಪಿಸಲು ಸಹಾಯ ಮಾಡುತ್ತದೆ’ ಎಂದು ಅಲಿ ಚೆಗೆನಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ವಿಶ್ವದ 3ನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಆಗಿರುವ ಭಾರತ, ತನ್ನ ಕಚ್ಚಾ ತೈಲದ ಶೇ.80 ರಷ್ಟು ಅಗತ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಈಗಾಗಲೇ ನಿರ್ಬಂಧಗಳಿಂದಾಗಿ ಭಾರತ-ಇರಾನ್ ವ್ಯಾಪಾರವು ಕಳೆದ ವರ್ಷಗಳಲ್ಲಿ 2 ಬಿಲಿಯನ್ ಡಾಲರ್ (ಸುಮಾರು 1ಲಕ್ಷ ಕೋಟಿ) ಗಳಷ್ಟು ನಷ್ಟ ಅನುಭವಿಸಿದೆ. ಎರಡೂ ದೇಶಗಳು ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನಗಳನ್ನು ಪ್ರಾರಂಭಿಸಿದರೆ, ದ್ವಿಪಕ್ಷೀಯ ವ್ಯಾಪಾರವು 30 ಶತಕೋಟಿ ಡಾಲರ್ (22 ಲಕ್ಷ ಕೋಟಿಗೂ ಅಧಿಕ)ನಷ್ಟು ವಹಿವಾಟು ಬೆಳೆಯಬಹುದು ಎಂದು ಚೆಗೆನಿ ಹೇಳಿದ್ದಾರೆ.

  • 17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    ಟೆಹರಾನ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಕತ್ತರಿಸಿ ಬಳಿಕ ಆ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿ ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ಇರಾನ್ ನಲ್ಲಿ ನಡೆದಿದೆ.

    ಇರಾನ್‍ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಮೋನಾ ಹೈದರಿ (17) ಎಂದು ಗುರುತಿಸಲಾಗಿದೆ. ಪತಿಯೇ ಮೋನಾಳನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕೃತಿ ಮೆರೆದಿದ್ದಾನೆ. ಈತನಿಗೆ ಸೋದರ ಮಾವನೂ ಸಾಥ್ ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿದ್ದು ಯಾಕೆ..?
    ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಈ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ಇದನ್ನೂ ಓದಿ: ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ 6 ತಿಂಗಳು ಜೈಲು!

    ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್‍ನಲ್ಲಿ ತೀವ್ರ ಸಂಚಲನವೇ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!

    ಹೆಸರಾಂತ ಸ್ತ್ರೀವಾದಿ ಚಲನಚಿತ್ರ ನಿರ್ಮಾಪಕಿ ತಹ್ಮಿನೆ ಮಿಲಾನಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಮೋನಾ ಅಜ್ಞಾನಕ್ಕೆ ಬಲಿಯಾಗಿದ್ದಾರೆ. ಈ ಅಪರಾಧಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಬರೆದುಕೊಂಡಿದ್ದಾರೆ. ಇರಾನ್‍ನಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಮೋನಿ ಹೈದರಿ 12 ವರ್ಷವಿದ್ದಾಗಲೇ ವಿವಾಹವಾಗಿದ್ದು, ಮೂರು ವರ್ಷದ ಮಗ ಆಕೆಗಿದ್ದಾನೆ.

  • ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ದುಬೈ: ಅಬುಧಾಬಿ ವಿಮಾನ ನಿಲ್ದಾಣದಲ್ಲಿರುವ ಸೌದಿ ಅರಾಮ್ಕೋ ತೈಲ ಸಂಗ್ರಹಾರದದ ಮೇಲೆ ಡ್ರೋನ್ ದಾಳಿ ನಡೆದಿದ್ದು ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಈ ದಾಳಿಯಲ್ಲಿ ಇಬ್ಬರು ಭಾರತಿಯರು ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದು, 6 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಬುಧಾಬಿಯ ರಾಷ್ಟ್ರೀಯ ತೈಲ ಸಂಸ್ಥೆಯ ಶೇಖರಣಾ ಸೌಲಭ್ಯಗಳ ಸಮೀಪವಿರುವ ಕೈಗಾರಿಕಾ ಮುಸಾಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್‍ಗಳು ಸ್ಫೋಟಗೊಂಡಿವೆ ಹಾಗೂ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡ ಎರಡೂ ಸ್ಥಳಗಳಲ್ಲಿ ಡ್ರೋನ್‍ನ ಭಾಗಗಳು ಕಂಡುಬಂದಿವೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದರು. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

    ಇರಾನ್ 2019ರಲ್ಲಿ ಯೆಮೆನ್‍ನಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಾಗಿ ಕಡಿಮೆಗೊಳಿಸಿತ್ತು. ಆದರೆ ಅದು ಸಶಸ್ತ್ರ ಮತ್ತು ತರಬೇತಿ ಪಡೆದ ಯೆಮೆನ್ ಪಡೆಗಳನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದೆ. ಇದರಿಂದಾಗಿ ಇರಾನ್ ಬೆಂಬಲಿತ ಯೆಮೆನ್‍ನ ಹೌತಿ ಪಡೆಗಳು ಸೌದಿ ಅರಾಮ್ಕೊದ ಘಟಕದ ಮೇಲೆ ದಾಳಿ ನಡೆಸಿದೆ. ಇದನ್ನೂ ಓದಿ: ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

    ವಿಶ್ವದ ಅತಿ ದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೋ ಮೇಲೆ ಡ್ರೋನ್ ದಾಳಿ ನಡೆಯುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್‍ನಲ್ಲಿದ್ದ ಸೌದಿ ಅರಾಮ್ಕೋದ ತೈಲ ಘಟಕದ ಮೇಲೆ ಮೇಲೆ ದಾಳಿ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಹೌತಿ ಪಡೆಗಳು ದಾಳಿ ನಡೆಸಿತ್ತು.