Tag: iran

  • ಇರಾನ್ ಚಳವಳಿಗೆ ಕೈಜೋಡಿಸಿದ ಕೇರಳದ ಮುಸ್ಲಿಂ ಮಹಿಳೆಯರು – ಹಿಜಬ್ ಸುಟ್ಟು ಪ್ರತಿಭಟನೆ

    ಇರಾನ್ ಚಳವಳಿಗೆ ಕೈಜೋಡಿಸಿದ ಕೇರಳದ ಮುಸ್ಲಿಂ ಮಹಿಳೆಯರು – ಹಿಜಬ್ ಸುಟ್ಟು ಪ್ರತಿಭಟನೆ

    ತಿರುವನಂತಪುರಂ: ಇರಾನ್‌ನಲ್ಲಿ (Iran) ನಡೆಯುತ್ತಿರುವ ಹಿಜಾಬ್ (Hijab) ಪ್ರತಿಭಟನೆಗೆ ಕೇರಳದ (Kerala) ಮುಸ್ಲಿಂ ಮಹಿಳೆಯರು (Muslim Women) ಕೈಜೋಡಿಸಿದ್ದಾರೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದು ಭಾರತದಲ್ಲಿ ಹಿಜಬ್ ಸುಟ್ಟಿರುವ ಮೊದಲ ವರದಿಯಾಗಿದೆ.

    ಕೋಝಿಕೋಡ್‌ನಲ್ಲಿ (Kozhikode) ನಡೆದ ಕಾರ್ಯಕ್ರಮದಲ್ಲಿ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಬ್ ವಿರೋಧಿ ಚಳವಳಿಗೆ ಒಗ್ಗಟ್ಟಿನಿಂದ ಮುಸ್ಲಿಂ ಮಹಿಳೆಯರು ಹಿಜಬ್ ಅನ್ನು ಸುಟ್ಟು ಹಾಕಿದ್ದಾರೆ. ಸಂಘಟನೆಯ 6 ಮುಸ್ಲಿಂ ಮಹಿಳೆಯರು ಹಿಜಬ್ ಸುಡುವ ಕ್ರಮದ ನೇತೃತ್ವವಹಿಸಿದ್ದರು. ಇದನ್ನೂ ಓದಿ: ಅನಾರೋಗ್ಯದ ಮಗುವಿದ್ರೆ ಲೈಫ್ ಎಂಜಾಯ್ ಮಾಡಲು ಸಾಧ್ಯವಿಲ್ಲ – ವೈದ್ಯೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ. ಈ ಬಾರಿ ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇರಾನ್‌ನಲ್ಲಿ ನಡೆದ ಘಟನೆಗಳಿಂದ ಪ್ರೇರಿತರಾಗಿ ಮುಸ್ಲಿಂ ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟಿಸಿದ್ದಾರೆ. ಇದನ್ನೂ ಓದಿ: BJP ಉದ್ಯೋಗದ ಬದಲಿಗೆ ಯುವ ಸಮೂಹಕ್ಕೆ ಡ್ರಗ್ಸ್ ಕೊಡ್ತಿದೆ: ಪ್ರಿಯಾಂಕಾ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ಇರಾನ್‌ನಲ್ಲಿ ಹಿಜಬ್‌ ವಿರೋಧಿಸಿ ಪ್ರತಿಭಟನೆ – 6 ವಾರಗಳಲ್ಲಿ 14,000 ಮಂದಿ ಬಂಧನ

    ನ್ಯೂಯಾರ್ಕ್: 22 ವರ್ಷದ ಯುವತಿ ಮಹ್ಸಾ ಅಮಿನಿ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್‌ (Hijab) ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದು, 6 ವಾರಗಳ ಅವಧಿಯಲ್ಲಿ 14,000 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ವಿಶ್ವಸಂಸ್ಥೆ (UN) ತಿಳಿಸಿದೆ.

    ಕಳೆದ ಆರು ವಾರಗಳಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14,000 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮಾನವ ಹಕ್ಕುಗಳ ಹೋರಾಟಗಾರರು, ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ದೇಶದಲ್ಲಿ ಭದ್ರತಾ ಪಡೆಗಳ ಹಿಂಸಾತ್ಮಕ ಪ್ರವೃತ್ತಿಗೆ ಕನಿಷ್ಠ 277 ಜನರು ಮೃತಪಟ್ಟಿದ್ದಾರೆ. ಸಾವು-ನೋವುಗಳ ಬಗ್ಗೆ ಈವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯ ಮಾಧ್ಯಮಗಳ ವರದಿ ಆಧರಿಸಿ ಅಂಕಿಅಂಶ ನೀಡಲಾಗಿದೆ.

    “ಇದು ಸುಧಾರಣೆಗಾಗಿ ಮಾತ್ರ ನಡೆಯುತ್ತಿರುವ ಪ್ರತಿಭಟನೆಯಲ್ಲ. ಇಸ್ಲಾಮಿಕ್‌ ಗಣರಾಜ್ಯದ ಅಂತ್ಯವನ್ನು ಬೇಡುವ ಧಂಗೆಯಾಗಿದೆ” ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಇತಿಹಾಸದ ಸಹಾಯಕ ಪ್ರಾಧ್ಯಾಪಕ ರೋಹಮ್ ಅಲ್ವಾಂಡಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ ಸೆ.16 ರಂದು ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ನಂತರ ಆಕೆ ಸಾವಿಗೀಡಾದಳು. ಇರಾನ್‌ನ ನೈತಿಕ ಪೊಲೀಸ್‌ಗಿರಿಗೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂತು. ಇದರ ಬೆನ್ನಲ್ಲೇ ಯುವತಿ ಸಾವು ಹಾಗೂ ಹಿಜಬ್‌ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು.

    Live Tv
    [brid partner=56869869 player=32851 video=960834 autoplay=true]

  • ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

    ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

    ಟೆಹರಾನ್: ದಶಕಗಳಿಂದಲೂ ಸ್ನಾನ ಮಾಡದೇ ಇದ್ದ ವಿಶ್ವದ ಅತ್ಯಂತ ಕೊಳಕು ಮನುಷ್ಯ (Dirtiest Man) ಎಂದೇ ಅಡ್ಡ ಹೆಸರು ಪಡೆದಿದ್ದ ಇರಾನಿನ (Iran) ವ್ಯಕ್ತಿ ನಿಧನರಾದರು.

    50 ವರ್ಷಕ್ಕೂ ಹೆಚ್ಚು ಕಾಲ ಸ್ನಾನ ಮಾಡದೇ ಒಂಟಿಯಾಗಿದ್ದ ಅಮೌ ಹಾಜಿ (94) ದಕ್ಷಿಣ ಪ್ರಾಂತ್ಯದ ಫಾರ್ಸ್‍ನ ದೇಜ್ಗಾ ಗ್ರಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಹಾಜಿ ತಾನು ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತೇನೆ ಎಂದು ಸ್ನಾನ ಮಾಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಅಲ್ಲಿನ ಗ್ರಾಮಸ್ಥರು ಆತನನ್ನು ಬಲವಂತವಾಗಿ ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನ ಮಾಡಿಸಿದ್ದರು. ಇದನ್ನೂ ಓದಿ: ಮೌಢ್ಯಕ್ಕೆ ಸೆಡ್ಡು – ಗ್ರಹಣ ವೇಳೆ ಬಾಳೆಹಣ್ಣು, ಚುರುಮುರಿ ಸೇವಿಸಿದ ಜನ

    2013ರಲ್ಲಿ ಹಾಜಿ ಜೀವನದ ಬಗ್ಗೆ ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ ಎಂಬ ಒಂದು ಕಿರು ಚಿತ್ರವನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಧರಿಸದೇ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಬಂಧನದ ಭೀತಿ

    ಹಿಜಬ್ ಧರಿಸದೇ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಬಂಧನದ ಭೀತಿ

    ತೆಹ್ರಾನ್: ದಕ್ಷಿಣ ಕೊರಿಯಾದಲ್ಲಿ ನಡೆದ ಗೋಡೆ ಹತ್ತುವ ಕ್ರೀಡಾಕೂಟದಲ್ಲಿ (ಕ್ಲೈಂಬಿಂಗ್‌ ಚಾಂಪಿಯನ್‌ಶಿಪ್) ಇರಾನ್ ಕ್ರೀಡಾಪಟು ಎಲ್ನಾಜ್ ರೆಕಾಬಿ (Elnaz Rekabi) ಹಿಜಬ್ (Hijab) ಧರಿಸದೇ ಭಾಗವಹಿಸಿದ್ದುದು ಈಗ ವಿವಾದಕ್ಕೆ ಕಾರಣವಾಗಿದೆ. ಅದಕ್ಕೆ ಪೂರಕವಾಗಿ ಸಿಯೋಲ್‌ನಲ್ಲಿ ಇರುವ ಇರಾನ್ ಅಧಿಕಾರಿಗಳು ಕ್ರೀಡಾಪಟುವನ್ನು ಸ್ವದೇಶಕ್ಕೆ ಕರೆದೊಯ್ಯಲು ಮಂಗಳವಾರ ವಿಮಾನ (Flight) ಹತ್ತಿಸಿದ್ದಾರೆ.

    33 ವರ್ಷದ ರೆಕಾಬಿ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ಸ್ (Sports) ಕ್ಲೈಂಬಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ (Climbing Championships) ಹಿಜಬ್ ಧರಿಸದೇ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿ ಅವರು ರಾಜಧಾನಿ ತೆಹ್ರಾನ್ ತಲುಪಿದ ನಂತರ ಇರಾನ್ ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ಇನ್ನೂ ಓದಿ: ಪ್ರೆಗ್ನೆಂಟ್ ಅಂತ ತಿಳಿದ 48 ಗಂಟೆಯಲ್ಲೇ ಮಗುವನ್ನು ಹೆತ್ತ ತಾಯಿ

    ಈ ಕುರಿತು ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಎಲ್ನಾಜ್ ರೆಕಾಬಿ, ಆಕಸ್ಮಿಕವಾಗಿ ತಲೆಯಿಂದ ಹಿಜಬ್ ಜಾರಿತು. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾಳೆ.

    ಇರಾನ್ ಸಹ ವರದಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ರೆಕಾಬಿ ಕುರಿತು ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ ಎಂದು ಹೇಳಿದೆ. ಸೋಲ್‌ನಲ್ಲಿರುವ ಇರಾನ್ ರಾಯಭಾರಿ ಕಚೇರಿ ಈ ಕುರಿತು ಪ್ರತಿಕ್ರಿಯೆ ನೀಡುವ ವೇಳೆ ಈ ಹಿಂದೆ ಹಿಜಬ್ ಧರಿಸಿ ರೆಕಾಬಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಫೋಟೋವನ್ನು ಹಂಚಿಕೊಂಡಿದೆ. ಇನ್ನೂ ಓದಿ: ಭಾರತಕ್ಕೆ ನೀಡಿದ ದರದಲ್ಲೇ ರಷ್ಯಾದಿಂದ ಇಂಧನ ಖರೀದಿಗೆ ಪಾಕ್‌ ಸಿದ್ಧ – ಹಣಕಾಸು ಸಚಿವ

    ಹಿಜಬ್ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ (Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಇರಾನ್‌ನಲ್ಲಿ ಹಿಜಬ್ ಸುಟ್ಟು, ತಮ್ಮ ಜಡೆಯನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಈವರೆಗೆ ಇಬ್ಬರು ಹುಡುಗಿಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಆದರೂ ಪ್ರತಿಭಟನೆ ಮುಕ್ತಾಯಗೊಂಡಂತೆ ಕಾಣುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಗತ್ತಿನಾದ್ಯಂತ ಈಗ ಹಿಜಬ್ (Hijab) ವಿರೋಧದದ್ದೇ ಸದ್ದು. ಅದರಲ್ಲೂ ಇರಾನ್ ಮಹಿಳೆಯರು ಹಿಜಬ್ ವಿರೋಧಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಈ ಹೋರಾಟಕ್ಕೆ ವಿಶ್ವದ ನಾನಾ ಕಡೆಯ ಮಹಿಳೆಯರು ಕೂಡ ತಮ್ಮದೇ ಆದ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಕೂಡ ವಿಭಿನ್ನ ರೀತಿಯಲ್ಲೇ ಆ ಮಹಿಳೆಯರ ಪರ ನಿಂತಿದ್ದಾರೆ.

    ಹಿಜಬ್ ವಿರುದ್ಧದ ಹೋರಾಟ ಇರಾನ್ ನಲ್ಲಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಬಿಡಿ, ಹಿಜಬ್ ನಾವು ಧರಿಸುವುದಿಲ್ಲ. ನಮ್ಮ ಬಟ್ಟೆ ನಮ್ಮ ಹಕ್ಕು ಎನ್ನುತ್ತಾ ಸತತ ಒಂದು ತಿಂಗಳಿಂದ ಇರಾನ್ ಮಹಿಳೆಯರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಕುರಿತು ಬಾಲಿವುಡ್ ನಟ ಊರ್ವಶಿ ಕೂಡ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬೆರೆದುಕೊಂಡಿದ್ದು, ‘ಹಿಜಬ್ ಕುರಿತಾಗಿ ಹಲವು ಹತ್ಯೆಗಳು ನಡೆದಿವು. ಮಹ್ಸಾ ಅಮಿನಿ ಹತ್ಯೆಯ ನಂತರ ಹಿಜಬ್ ವಿರುದ್ಧದ ಹೋರಾಟ ಶುರುವಾಯಿತು. ಅಲ್ಲದೇ, ಅನೇಕರಿಗೆ ತೊಂದರೆ ನೀಡಿದರು. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಬ್ ವಿರೋಧಿಸುವೆ. ಮಹಿಳೆಯರು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯಾರೂ ಹೇಳಬೇಕಿಲ್ಲ. ತಮಗಿಷ್ಟ ಬಂದಂತೆ ಅವರನ್ನು ಬದುಕಲು ಬಿಡಿ’ ಎಂದು ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕೂದಲು (Hair) ಮಹಿಳೆಯರಿಗೆ ಸೌಂದರ್ಯದ ಸಂಕೇತ. ಹಾಗಾಗಿ ಅದನ್ನೇ ಬಳಸಿಕೊಂಡು ಆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ ಎಂದೂ ಬರೆದುಕೊಂಡಿರುವ ಊರ್ವಶಿ, ಇರಾನ್ ನಲ್ಲಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಜಯ ಸಿಗಲಿ ಎಂದು ಹಾರೈಸಿದ್ದಾರೆ. ಇಂತಹ ವಿಷಯಗಳಿಗೆ ಜಗತ್ತಿನ ಹೆಣ್ಣು ಮಕ್ಕಳು ಒಂದಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ. ಊರ್ವಶಿಯ ನಡೆಗೆ ಕೆಲವರು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇರಾನ್‍ ಜೈಲಿನಲ್ಲಿ ಅಗ್ನಿ ಅವಘಡ- ಹಿಜಬ್‌ ವಿರೋಧಿಯ ಬೆಂಬಲಿಗರು ಸಾವು

    ಇರಾನ್‍ ಜೈಲಿನಲ್ಲಿ ಅಗ್ನಿ ಅವಘಡ- ಹಿಜಬ್‌ ವಿರೋಧಿಯ ಬೆಂಬಲಿಗರು ಸಾವು

    ತೆಹ್ರಾನ್: ಇರಾನ್‍ನ (Iran) ಕುಖ್ಯಾತ ಎವಿನ್ ಜೈಲಿನಲ್ಲಿ (Evin Prison) ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಕೈದಿಗಳು ಸಾವನ್ನಪ್ಪಿದ್ದು, 61 ಕೈದಿಗಳು ಗಾಯಗೊಂಡಿರುವ ಘಟನೆ ನಡೆದಿದೆ.

    ಈ ಜೈಲು ರಾಜಕೀಯ ಕೈದಿಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಹಿಜಬ್ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ ( Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‍ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‍ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.

    ಈ ವೇಳೆ ಕೆಲವರನ್ನು ಬಂಧಿಸಿ ಇದೇ ಜೈಲಿನಲ್ಲಿ ಇಡಲಾಗಿತ್ತು. ಆದರೆ ಬೆಂಕಿ ಅವಘಡದಿಂದಾಗಿ ನಾಲ್ವರು ಸಾವನ್ನಪ್ಪಿದ್ದು, 61 ಮಂದಿಗೆ ಗಂಭೀರ ಗಾಯವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿವಾಹಿತನೊಂದಿಗೆ ಓಡಿ ಹೋಗಿದ್ದಕ್ಕೆ ಕಲ್ಲೆಸೆದು ಕೊಲ್ಲುವ ಶಿಕ್ಷೆ – ತಾನೇ ನೇಣಿಗೆ ಶರಣಾದ ಅಫ್ಘಾನ್ ಮಹಿಳೆ

    ಆದರೆ ಇರಾನ್ ಮಾಧ್ಯಮವು ಎವಿನ್ ಜೈಲಿನಲ್ಲಿ ಉಂಟಾದ ಬೆಂಕಿ ಅವಘಡಕ್ಕೆ ಹಾಗೂ ಇರಾನ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ, ನನಗೆ ಗೆಲ್ಲುವ ಭರವಸೆ ಇದೆ: ಶಶಿ ತರೂರ್

    Live Tv
    [brid partner=56869869 player=32851 video=960834 autoplay=true]

  • ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    ಸೇಡಿಗೆ ಸೇಡು – ಇರಾನ್‌ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ

    ಕೀವ್: ಇರಾನಿನ (Iran) ಡ್ರೋನ್‍ಗಳನ್ನು (Drone) ಬಳಸಿ ನಮ್ಮ ಮೇಲೆ ರಷ್ಯಾ (Russia) ಸೇನೆ ದಾಳಿ ನಡೆಸಿದೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ (Volodymyr Zelensky)  ಆರೋಪಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ ರಷ್ಯಾ ಸಂಪರ್ಕಿಸುವ ಕ್ರಿಮಿಯಾ ಸೇತುವೆಯನ್ನು (Crimean Bridge) ಉಕ್ರೇನ್ ಸೇನೆ ದಾಳಿ ನಡೆಸಿ ನಾಶಮಾಡಿತ್ತು. ಉಕ್ರೇನ್‍ನ ಖೇರ್ಸನ್, ಝರ್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ರಷ್ಯಾ ಸೇಡು ತಿರಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಉಕ್ರೇನ್‍ನಲ್ಲಿ ಮತ್ತೆ ರಷ್ಯಾ ಸೇನೆ ಗುಂಡಿನ ಮಳೆ ಆರಂಭಿಸಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ

    ಉಕ್ರೇನ್‍ನ ರಾಜಧಾನಿ ಕೀವ್ (Kyiv), ಲಿವ್, ತೆರ್ನೋಪಿಲ್ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ರಾಕೆಟ್ ದಾಳಿ ನಡೆದಿದೆ. ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಫೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕಿವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ರಷ್ಯಾ ಕೀವ್ ನಗರವನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿದ್ದು, ಇದೀಗ ಇರಾನ್‍ನ ಡ್ರೋನ್‍ಗಳನ್ನು ಬಳಸಿ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಝೆಲೆನ್ಸ್ಕಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

    ರಷ್ಯಾ ಸೈನ್ಯ ಉಕ್ರೇನ್‍ನ ಕೀವ್ ನಗರದ ಮೇಲೆ 75ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ ಎಂದು ಮೂಲಗಳಿಂದ ವರದಿಯಾಗಿದೆ. ಈಗಾಗಲೇ ಹಲವು ಕಟ್ಟಡಗಳು ಧ್ವಂಸವಾಗಿವೆ, ರಸ್ತೆಯಲ್ಲಿದ್ದಂತಹ ಕಾರ್ ಸೇರಿದಂತೆ ವಾಹನಗಳು ಬೆಂಕಿಗಾಹುತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ತೆಹ್ರಾನ್: ಇರಾನ್‌ನ (Iran) ಸರ್ಕಾರಿ ದೂರದರ್ಶನವನ್ನು ಶನಿವಾರ ನೇರ ಪ್ರಸಾರದ ಸಂದರ್ಭದಲ್ಲಿ ಪ್ರತಿಭಟನಾಕಾರರು ಹ್ಯಾಕ್ ಮಾಡಿದ್ದಾರೆ. ದೇಶಾದ್ಯಂತ ಉಂಟಾಗಿರುವ ಅಶಾಂತಿಯ ನಡುವೆ ಸರ್ಕಾರದ ವಿರೋಧಿ ಸಂದೇಶವನ್ನು ಪ್ರದರ್ಶಿಸುವ ಸಲುವಾಗಿ ಪ್ರಸಾರಕ್ಕೆ ಅಡ್ಡಿಪಡಿಸಲಾಗಿದೆ.

    ಇರಾನ್‌ನ ಅರೆ-ಅಧಿಕೃತ ತಸ್ನಿಮ್ ನ್ಯೂಸ್ ಏಜೆನ್ಸಿಯು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ) ಅಡಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್ (ಐಆರ್‌ಐಎನ್‌ಎನ್) ನಡೆಸಿದ ಸುದ್ದಿ ಪ್ರಸಾರವನ್ನು ಕ್ರಾಂತಿಕಾರಿ ವಿರೋಧಿಗಳು ಕೆಲವು ಕ್ಷಣಗಳಿಗೆ ಹ್ಯಾಕ್ ಮಾಡಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್ – ಭಾರತೀಯರಿಗೆ ಜರ್ಮನ್ ವೀಸಾ ಶುಲ್ಕ ಕಡಿತ

    ಹಿಜಬ್‌ ಧರಿಸದೇ ಇದ್ದಿದ್ದಕ್ಕೆ 22ರ ಹರೆಯದ ಮಹ್ಸಾ ಅಮಿನಿ (Mahsa Amini) ಹೆಸರಿನ ಯುವತಿ ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆ ಸಾವಿನ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಸಾವಿರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.

    ಇರಾನ್‌ನಲ್ಲಿ ಹಿಜಬ್‌ (Hijab) ಸುಟ್ಟು, ತಮ್ಮ ಜಡೆಯನ್ನು ಕತ್ತರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಇಬ್ಬರು ಹುಡುಗಿಯರು ಸೇರಿ ಮೂವರು ಮೃತಪಟ್ಟರು. ಇದನ್ನೂ ಓದಿ: ಪುಟಿನ್ ಕನಸಿನ ಯುರೋಪಿನ ಉದ್ದದ ಸೇತುವೆ ಉಡೀಸ್ -ಕ್ರಿಮಿಯಾ ಸಂಪರ್ಕ ಕಡಿತ

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    ಟೆಹರಾನ್‌: ಇರಾನ್‌ನಲ್ಲಿ ಹಿಜಬ್‌(Iran Hijab  Protests) ವಿರುದ್ಧದ ಪ್ರತಿಭಟನೆ ತೀವ್ರವಾಗಿದ್ದು ಈಗ ಹೋರಾಟಕ್ಕೆ ಶಾಲಾ ವಿದ್ಯಾರ್ಥಿನಿಯರು ಧುಮುಕಿದ್ದಾರೆ.

    ಇಲ್ಲಿಯವರೆಗೆ ಮಹಿಳೆಯರು ಮತ್ತು ಯುವತಿಯರು ಪ್ರತಿಭಟಿಸುತ್ತಿದ್ದರು. ಆದರೆ ಮಂಗಳವಾರದಿಂದ ಶಾಲಾ ಮಕ್ಕಳು ಭಾಗಿಯಾಗಿದ್ದು ನಡು ಬೀದಿಯಲ್ಲಿ ಹಿಜಬ್‌ ತೆಗೆದು ಪ್ರತಿಭಟನೆ ಮಾಡಿದ್ದಾರೆ.

    https://twitter.com/StepanGronk/status/1577136451715682305?ref_src=twsrc%5Etfw%7Ctwcamp%5Etweetembed%7Ctwterm%5E1577136451715682305%7Ctwgr%5E32354b00fbe9913e0f287be04933c109dd4146ed%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Firanian-schoolgirls-remove-hijabs-shout-slogans-against-govt-mahsa-amini-protest-2008709-2022-10-05

    ಇನ್ನೊಂದು ಕಡೆ ಹಿಜಬ್‌ ಧರಿಸದೇ ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಶಾಲೆಯ(School) ಡೈರೆಕ್ಟರ್‌ ಡಿಬಾರ್‌ ಮಾಡಿದ್ದಾನೆ. ಇದಕ್ಕೆ ಸಿಟ್ಟಾದ ಮಕ್ಕಳು ಪ್ರತಿಭಟನೆ ನಡೆಸಿ ನೀರಿನ ಬಾಟಲಿಯನ್ನು ಎಸೆದಿದ್ದಾರೆ. ಮಕ್ಕಳ ಪ್ರತಿಭಟನೆ ಜೋರಾಗುತ್ತಿದ್ದಂತೆ  ಸ್ಥಳದಿಂದಲೇ ಡೈರೆಕ್ಟರ್‌ ಓಡಿ ಹೋಗಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ನಾವು ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲ ಒಂದಾಗಿದ್ದೇವೆ. ಒಬ್ಬೊಬ್ಬರಾಗಿ ಸಾಯಲು ನಾವು ಸಿದ್ಧ ಎಂದು ಇರಾನ್‌ ಸರ್ಕಾರದ ವಿರುದ್ಧ ಬಾಲಕಿಯರು ಘೋಷಣೆ ಕೂಗುತ್ತಿದ್ದಾರೆ.

    ರಾಜದಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಇರಾನ್‌ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ.

    https://twitter.com/AlinejadMasih/status/1577527514695548928?ref_src=twsrc%5Etfw%7Ctwcamp%5Etweetembed%7Ctwterm%5E1577527514695548928%7Ctwgr%5E32354b00fbe9913e0f287be04933c109dd4146ed%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Firanian-schoolgirls-remove-hijabs-shout-slogans-against-govt-mahsa-amini-protest-2008709-2022-10-05

    ಸರ್ಕಾರ ಬಲವಂತ ಮಾಡಿ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೂ ದಿನೇ ದಿನೇ ಹಿಜಬ್‌ ವಿರುದ್ಧದ ಹೋರಾಟ ಜಾಸ್ತಿಯಾಗುತ್ತಿದ್ದು ವಿಶ್ವಾದ್ಯಂತ ಇರಾನ್‌ ಮಹಿಳೆಯರಿಗೆ ಬೆಂಬಲ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಟೆಹರಾನ್‌: ಇರಾನಿನಾದ್ಯಂತ ಮಹಿಳೆಯರು ಹಿಜಬ್‌ (Hijab) ಧರಿಸದೇ ತಮ್ಮ ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಟರ್ಕಿಯ (Turkey) ಪ್ರಸಿದ್ಧ ಗಾಯಕಿ (Singer) ವೇದಿಕೆಯಲ್ಲಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

    ಟರ್ಕಿಶ್‌ನ ಪ್ರಸಿದ್ಧ ಗಾಯಕಿ ಮಾಲೆಕ್‌ ಮೊಸ್ಸೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಗಾಯಕಿಯನ್ನು ಶ್ಲಾಘಿಸಿದಾಗ ಮೆಲೆಕ್ ಮೊಸ್ಸೊ ತಮ್ಮ ಕೂದಲನ್ನು ಕತ್ತರಿಸಿಕೊಂಡು ಇರಾನ್‌ ಮಹಿಳೆಯರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಮೊಸ್ಸೊ ಅವರು ಮಹಿಳಾ ಹಕ್ಕುಗಳ ಬೆಂಬಲಕ್ಕಾಗಿ ಈಗಾಗಲೇ ಅನೇಕ ಬಾರಿ ಹೋರಾಡಿದ್ದಾರೆ. 2020ರಲ್ಲಿ ಟರ್ಕಿಯಲ್ಲಿ ಅತ್ಯಾಚಾರಿ ಪೊಲೀಸ್ ಅಧಿಕಾರಿಯ ಬಿಡುಗಡೆ ಕುರಿತು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಗಾಯಕಿಯನ್ನು ವೇದಿಕೆಯಿಂದ ಕೆಳಗಿಳಿಸಲಾಗಿತ್ತು. ಈ ಬಗ್ಗೆ ಮಾತನಾಡಿ, ಈ ಅತ್ಯಾಚಾರ ಮತ್ತು ಕೊಲೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಗಿದೆ. ಇದು ಯಾವ ರೀತಿಯ ವ್ಯವಸ್ಥೆ ಎಂದು ಕಿಡಿಕಾರಿದ್ದರು.

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ (Iranian Women) ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರು ಕಾರಿಗೆ ನೂಕಿ ದೌರ್ಜನ್ಯ ನಡೆಸಿದ್ದರು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಇದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಬುಧವಾರ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ (Protest), 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    Live Tv
    [brid partner=56869869 player=32851 video=960834 autoplay=true]