Tag: iran

  • ಇಷ್ಟು ಬೇಗ ಇರಾನ್‌ನಿಂದ ಬಿಡುಗಡೆ ಆಗ್ತೀನಿ ಅಂದ್ಕೊಡಿರಲಿಲ್ಲ, ಭಾರತ ಸರ್ಕಾರಕ್ಕೆ ಧನ್ಯವಾದಗಳು: ಟೆಸ್ಸಾ ಜೋಸೆಫ್

    ಇಷ್ಟು ಬೇಗ ಇರಾನ್‌ನಿಂದ ಬಿಡುಗಡೆ ಆಗ್ತೀನಿ ಅಂದ್ಕೊಡಿರಲಿಲ್ಲ, ಭಾರತ ಸರ್ಕಾರಕ್ಕೆ ಧನ್ಯವಾದಗಳು: ಟೆಸ್ಸಾ ಜೋಸೆಫ್

    ತಿರುವನಂತಪುರಂ: ಇಷ್ಟು ಬೇಗ ನಾನು ಬಿಡುಗಡೆಯಾಗುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಬಿಡುಗಡೆಗ ಸಹಕರಿಸಿದ ಭಾರತ ಸರ್ಕಾರಕ್ಕೆ (Indian Government) ಧನ್ಯವಾದಗಳು ಎಂದು ಇರಾನ್‌ (Iran) ವಶಪಡಿಸಿಕೊಂಡಿದ್ದ ಹಡಗಿನಿಂದ ಬಿಡುಗಡೆಯಾಗಿ ಸ್ವದೇಶಕ್ಕೆ ಮರಳಿದ ಟೆಸ್ಸಾ ಜೋಸೆಫ್ (Ann Tessa Joseph) ಹೇಳಿದ್ದಾರೆ.

    ಕೊಟ್ಟಾಯಂನಲ್ಲಿರುವ ಮನಗೆ ಆಗಮಿಸಿದ ಟೆಸ್ಸಾ ಜೋಸೆಫ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಹಡಗಿನಲ್ಲಿದ್ದ 25 ಸಿಬ್ಬಂದಿಗಳ ಜೊತೆ ಇರಾನಿನ ಯಾರೂ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ತಮ್ಮ ಕುಟುಂಬದ ಜೊತೆ ಸಂವಹನ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

    ಹಡಗಿನಲ್ಲಿ ನಾನೊಬ್ಬಳೇ ಮಹಿಳೆ ಸಿಬ್ಬಂದಿಯಾಗಿದ್ದರಿಂದ ನನ್ನನ್ನು ಬೇಗ ಬಿಡುಗಡೆ ಮಾಡಿರಬಹುದು. ಉಳಿದ ಭಾರತದ 17 ಸಿಬ್ಬಂದಿ ಶೀಘ್ರವೇ ಬಿಡುಗಡೆಯಾಗಬಹುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ನೇರ ಮಧ್ಯಸ್ಥಿಕೆಯಿಂದಾಗಿ ನಾನು ಬೇಗ ಬಿಡುಗಡೆಯಾಗಿದ್ದೇನೆ. ಅವರಷ್ಟೇ ಅಲ್ಲದೇ ನನ್ನ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಗುದ್ದಿ ಹತ್ಯೆ ಮಾಡಿದ್ದಾರೆ – ಕೊಡಗಿನಲ್ಲಿ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಆಕ್ರೋಶ

    ನಾವು ಜೈಲುಪಾಲಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳಲಿಲ್ಲ ಮತ್ತು ನಮಗೆ ಯಾವುದೇ ಆಹಾರದ ಸಮಸ್ಯೆ ಆಗಲಿಲ್ಲ ಎಂದು ಅವರು ವಿವರಿಸಿದರು.

    ಕೇರಳದ ಮೂವರು ಸೇರಿದಂತೆ ಉಳಿದ 16 ಭಾರತೀಯರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಒಂಬತ್ತು ತಿಂಗಳ ಹಿಂದೆಯಷ್ಟೇ ಹಡಗಿನಲ್ಲಿ ಸಿಬ್ಬಂದಿಯಾಗಿ ನಾನು ಸೇರಿದ್ದೆ. ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿಂದ ಈ ಉದ್ಯೋಗಕ್ಕೆ ಸೇರಿದೆ. ಇದು ನನ್ನ ಮೊದಲ ಹಡಗು. ಈ ಘಟನೆಯಿಂದ ವಿಚಲಿತಳಾಗಿ ನಾನು ಉದ್ಯೋಗ ತೊರೆಯುವುದಿಲ್ಲ ಎಂದು ಅವರು ತಿಳಿಸಿದರು.

    ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗಳನ್ನು ಬರಮಾಡಿಕೊಂಡ ತಂದೆ ಬಿಜು ಅಬ್ರಹಾಂ ಮಾತನಾಡಿ, ಭಾರತ ಸರ್ಕಾರ ಮತ್ತು ಇತರ ಏಜೆನ್ಸಿಗಳ ಕಠಿಣ ಪರಿಶ್ರಮದಿಂದಾಗಿ ತಾನು ಇಷ್ಟು ಬೇಗ ಮನೆಗೆ ಮರಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.

    ಜೋಸೆಫ್ ಭಾರತಕ್ಕೆ ಬಂದಿಳಿದ ನಂತರ ವಿದೇಶಾಂಗ ಸಚಿವ ಎಸ್ ಜೈಶಂಕರ್‌ (S Jaishankar) ಅವರು, ಇರಾನ್‌ನಲ್ಲಿರುವ ಭಾರತೀಯ ಮಿಷನ್‌ನ ಅದ್ಭುತ ಕೆಲಸ. ಟೆಸ್ಸಾ ಜೋಸೆಫ್ ಮನೆಗೆ ತಲುಪಿದ್ದಕ್ಕೆ ಸಂತೋಷವಾಗಿದೆ. ದೇಶ ಅಥವಾ ವಿದೇಶದಲ್ಲಿ ಇರಲಿ ಮೋದಿ ಕೀ ಗ್ಯಾರಂಟಿ ಯಾವಾಗಲೂ ಕೆಲಸ ಮಾಡುತ್ತದೆ ಎಂದು ಪೋಸ್ಟ್‌ ಮಾಡಿದ್ದರು.

    ಏಪ್ರಿಲ್‌ 14 ರಂದು ಜೈಶಂಕರ್‌ ಇರಾನ್‌ ವಿದೇಶಾಂಗ ಸಚಿವ ಅಮೀರ್-ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ ಇರಾನ್‌ ಭಾರತೀಯ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಅನುಮತಿ ನೀಡಿತ್ತು.

    ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿ 17 ಮಂದಿ ಭಾರತೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸುರಕ್ಷಿತ ಬಿಡುಗಡೆ ಸಂಬಂಧ ಭಾರತ ಸರ್ಕಾರ ಇರಾನ್‌ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ.
    ಇದನ್ನೂ ಓದಿ: ಹರ್ಷಿಕಾ-ಭುವನ್ ಮೇಲೆ ಹಲ್ಲೆ: ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನೆ ಮಾಡಿದ ನಟಿ

    ಯುಎಇಯಿಂದ (UAE) ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್‌ ಶಿಪ್‌ ಅನ್ನು Strait of Hormuz ಬಳಿ ಇರಾನ್‌ ಏ.14 ರಂದು ವಶಪಡಿಸಿಕೊಂಡಿತ್ತು. ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ನೌಕಾ ದಳದ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ. ಈ ಹಡಗು ಇಸ್ರೇಲಿ (Israel) ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.

     

  • ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್‌ ಅವಕಾಶ

    ಭಾರತೀಯ ಸಿಬ್ಬಂದಿ ಭೇಟಿಗೆ ಅಧಿಕಾರಿಗಳಿಗೆ ಇರಾನ್‌ ಅವಕಾಶ

    ನವದೆಹಲಿ/ಟೆಹರಾನ್‌: ಹೈಜಾಕ್‌ ಆಗಿರುವ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಯನ್ನು ಭೇಟಿಯಾಗಲು ಅಧಿಕಾರಿಗಳಿಗೆ ಇರಾನ್‌ (Iran) ಅವಕಾಶ ನೀಡಿದೆ.

    ಭಾನುವಾರ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಇರಾನ್‌ ವಿದೇಶಾಂಗ ಸಚಿವ ಅಮೀರ್-ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ ಇರಾನ್‌ ಭಾರತೀಯ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಅನುಮತಿ ನೀಡಿದೆ.

    ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿ 17 ಮಂದಿ ಭಾರತೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಬಿಡುಗಡೆ ಸಂಬಂಧ ಭಾರತ ಸರ್ಕಾರ ಇರಾನ್‌ ಜೊತೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ದಾಖಲೆ – ಚುನಾವಣೆ ನಡೆಯುವ ಮೊದಲೇ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶ

    ಯುಎಇಯಿಂದ (UAE) ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್‌ ಶಿಪ್‌ ಅನ್ನು Strait of Hormuz ಬಳಿ ಇರಾನ್‌ ಏ.14 ರಂದು ವಶಪಡಿಸಿಕೊಂಡಿತ್ತು.

     

    ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ. ಈ ಹಡಗು ಇಸ್ರೇಲಿ (Israel) ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.

  • ಗಡಿ ದಾಟುವ ಮೊದಲೇ ಇರಾನ್‌ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್‌ – ಅರಬ್‌ ರಾಷ್ಟ್ರಗಳಿಂದಲೂ ತಡೆ

    ಗಡಿ ದಾಟುವ ಮೊದಲೇ ಇರಾನ್‌ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್‌ – ಅರಬ್‌ ರಾಷ್ಟ್ರಗಳಿಂದಲೂ ತಡೆ

    – 99% ಕ್ಷಿಪಣಿಗಳನ್ನು ತಡೆದ ಇಸ್ರೇಲ್‌

    ಟೆಲ್‌ ಅವೀವ್‌: ಇರಾನ್‌ (Iran) ಹಾರಿಸಿದ್ದ 300 ಕ್ಷಿಪಣಿಗಳ ಪೈಕಿ 99% ರಷ್ಟು ಕ್ಷಿಪಣಿ (Missile), ಯುಎವಿಗಳನ್ನು (UAV) ಹೊಡೆದು ಉರುಳಿಸಿದೆ ಎಂದು ಇಸ್ರೇಲ್‌ (Isreal) ಹೇಳಿದೆ.

    ತನ್ನ ಕಮಾಂಡರ್‌ ಹತ್ಯೆಯ ಪ್ರತೀಕಾರವಾಗಿ ಇಸ್ರೇಲ್‌ ಮೇಲೆ ಇರಾನ್‌ 300 ಕ್ಷಿಪಣಿಗಳನ್ನು ಹಾರಿಸಿತ್ತು. ಇವುಗಳನ್ನು ಇಸ್ರೇಲ್‌ ತಡೆದಿದೆ. 170 ಯುಎವಿಗಳನ್ನು ಇರಾನ್‌ ಹಾರಿಸಿತ್ತು. ಇವುಗಳನ್ನು ಇಸ್ರೇಲ್‌ ತಡೆದಿದೆ. ಇವು ಯಾವುದು ತನ್ನ ವಾಯುನೆಲೆಯನ್ನು ಪ್ರವೇಶ ಮಾಡಿಲ್ಲ ಎಂದು ಇಸ್ರೇನ್‌ ಸೇನೆಯ ವಕ್ತಾರ ಡೇನಿಯಲ್‌ ಹಗೆರಿ ತಿಳಿಸಿದ್ದಾರೆ.

    ಇರಾನ್‌ 30 ಕ್ರೂಸ್‌ ಕ್ಷಿಪಣಿ ಹಾರಿಸಿತ್ತು. ಈ ಪೈಕಿ 25 ಕ್ಷಿಪಣಿಗಳನ್ನು ಇಸ್ರೇಲ್‌ ಫೈಟರ್‌ ವಿಮಾನಗಳು ತಡೆದಿದೆ. 120 ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಪೈಕಿ ಕೆಲ ಮಾತ್ರ ಇಸ್ರೇಲ್‌ ಭೂ ಪ್ರದೇಶದ ಒಳಗಡೆ ಬಿದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ

    ನಮ್ಮ ಬಲವಾದ ಮಿತ್ರ ಪಕ್ಷಗಳು ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ತಡೆಯುವಲ್ಲಿ ಸಫಲರಾಗಿದ್ದರಿಂದ ಅವುಗಳು ಇಸ್ರೇಲ್‌ ಗಡಿ ದಾಟಿಲ್ಲ ಎಂದು ತಿಳಿಸಿದರು. ಮಿತ್ರ ಪಕ್ಷಗಳ ಹೆಸರನ್ನು ಉಲ್ಲೇಖಿಸದೇ ಇದ್ದರೂ ಅಮೆರಿಕ, ಯುಕೆ,ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳು ಇಸ್ರೇಲ್‌ ಬೆಂಬಲಕ್ಕೆ ನಿಂತಿವೆ.

    ಜೋರ್ಡಾನ್‌ನಲ್ಲಿ ಹಲವಾರು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕ ಹಲವು ಕ್ಷಿಪಣಿಗಳನ್ನು ಹೊಡೆದು ಹಾಕಿದೆ.

    ಕೆಲ ಮಾಧ್ಯಮಗಳು ತನ್ನ ವಾಯು ಸೇಮೆಯನ್ನು ಬಳಸಿದ್ದಕ್ಕೆ ಅರಬ್‌ ರಾಷ್ಟ್ರಗಳೇ ಇರಾನ್‌ ಸಿಡಿಸಿದ ಕ್ಷಿಪಣಿ ಮತ್ತು ಯುಎವಿಯನ್ನು ಹೊಡೆದು ಹಾಕಿವೆ ಎಂದು ವರದಿ ಮಾಡಿವೆ. ಆದರೆ ಯಾವ ದೇಶಗಳು ಎಷ್ಟು ಕ್ಷಿಪಣಿ, ಯುಎವಿ ಹೊಡೆದು ಹಾಕಿವೆ ಎಂಬುದನ್ನು ತಿಳಿಸಿಲ್ಲ. ಕ್ಷಿಪಣಿಯನ್ನು ತಡೆದಿದ್ದ ಸಿಟ್ಟಾಗಿ ತನ್ನ ಮೇಲೂ ಇರಾನ್‌ ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅರಬ್‌ ದೇಶಗಳು ಈ ವಿಷಯನ್ನು ಬಹಿರಂಗ ಮಾಡಿಲ್ಲ ಎಂದು ವರದಿಯಾಗಿದೆ.

  • ಇಸ್ರೆಲ್, ಇರಾನ್ ಉದ್ವಿಗ್ನತೆ – ಟೆಲ್ ಅವೀವ್‍ಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

    ಇಸ್ರೆಲ್, ಇರಾನ್ ಉದ್ವಿಗ್ನತೆ – ಟೆಲ್ ಅವೀವ್‍ಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

    ನವದೆಹಲಿ: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಲ್ ಅವೀವ್‍ಗೆ (Tel Aviv) ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಇಂಡಿಯಾ (Air India) ನಿರ್ಧರಿಸಿದೆ.

    ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ

    ಏರ್ ಇಂಡಿಯಾ ವಿಮಾನವು ದೆಹಲಿಯಿಂದ (Delhi) ಇಸ್ರೇಲ್‍ಗೆ ವಾರದಲ್ಲಿ ನಾಲ್ಕು ದಿನಗಳು ಹಾರಾಟ ನಡೆಸುತ್ತಿತ್ತು. ಇದೀಗ ತಾತ್ಕಾಲಿಕವಾಗಿ ಆ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಟಾಟಾ ಸಮೂಹದ ಮಾಲೀಕತ್ವದ ಏರ್ ಇಂಡಿಯಾ, ಸುಮಾರು ಐದು ತಿಂಗಳ ಅಂತರದ ನಂತರ ಮಾರ್ಚ್ 3 ರಿಂದು ಟೆಲ್ ಅವಿವ್‍ಗೆ ಸೇವೆಗಳನ್ನು ಮರುಪ್ರಾರಂಭಿಸಿತ್ತು. ಇಸ್ರೇಲಿ ನಗರದ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ 2023ರ ಅಕ್ಟೋಬರ್ 7 ರಿಂದ ಟೆಲ್ ಅವೀವ್‍ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಿತ್ತು. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

  • ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ

    ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ

    ನವದೆಹಲಿ: ಯುದ್ಧದ ಭೀತಿಯಲ್ಲಿರುವ ಭಾರತೀಯ ನಾಗರಿಕರಿಗೆ ಇಸ್ರೇಲ್‌ನಲ್ಲಿರುವ (Israel) ಭಾರತೀಯ ರಾಯಭಾರಿ (Indian Embassy) ಕಚೇರಿಯು ಭಾನುವಾರ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ.

    ಭಾರತೀಯ ನಾಗರಿಕರು ಶಾಂತವಾಗಿರಿ. ಇಸ್ರೇಲ್‌ನ ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಡಯಾಸ್ಪೊರಾ ಸದಸ್ಯರೊಂದಿಗೆ ರಾಯಭಾರ ಕಚೇರಿಯು ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ.

    ರಾಯಭಾರ ಕಚೇರಿಯು ತನ್ನ 24*7 ತುರ್ತು ಸಹಾಯವಾಣಿಯನ್ನು ಸಹ ಒದಗಿಸಿದೆ. ರಾಯಭಾರಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆಯೂ ಸಲಹೆ ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

    ಇಸ್ರೇಲ್‌ ಮೇಲೆ ಇರಾನ್‌ (Iran) 100 ಕ್ಕೂ ಹೆಚ್ಚು ಡ್ರೋನ್‌ಗಳ ದಾಳಿ ನಡೆಸಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ ಕಚೇರಿ ಮಾರ್ಗಸೂಚಿ ಹೊರಡಿಸಿದೆ.

  • ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿರೋ ಪುತ್ರನನ್ನು ನೆನೆದು ಕಣ್ಣೀರಿಟ್ಟ ಕೇರಳದ ವೃದ್ಧ ದಂಪತಿ

    ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿರೋ ಪುತ್ರನನ್ನು ನೆನೆದು ಕಣ್ಣೀರಿಟ್ಟ ಕೇರಳದ ವೃದ್ಧ ದಂಪತಿ

    ತಿರುವನಂತಪುರಂ: ಇರಾನ್ (Iran) ವಶಪಡಿಸಿಕೊಂಡಿರುವ, ಯುಎಇಯಿಂದ ಮುಂಬೈಗೆ (Mumbai) ಬರುತ್ತಿದ್ದ ಹಡಗಿನಲ್ಲಿದ್ದ (Container Ship) ತಮ್ಮ ಮಗನ ಸುರಕ್ಷತೆಯ ಬಗ್ಗೆ ಕೇರಳದ (Kerala) ವೃದ್ಧ ದಂಪತಿ ಆತಂಕ ವ್ಯಕ್ತಪಡಿಸಿದ್ದು, ಆತನ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.

    ಹಾರ್ಮುಜ್ ಜಲಸಂಧಿ ಬಳಿ ಶನಿವಾರ ಇರಾನ್ ಸೇನೆ ಇಸ್ರೇಲ್‍ಗೆ (Israel) ಸಂಬಂಧಿತ ಎಂಎಸ್‍ಸಿ ಏರೀಸ್ ಎಂಬ ಸರಕು ತುಂಬಿದ್ದ ಹಡಗನ್ನು ವಶಪಡಿಸಿಕೊಂಡಿದೆ. ಹಡಗಿನಲ್ಲಿದ್ದ ಸುಮಾರು 17 ಮಂದಿ ಭಾರತೀಯರು ಇರಾನ್ ವಶದಲ್ಲಿದ್ದು, ಇದರಲ್ಲಿ ಕೇರಳ ಮೂಲದ ಶ್ಯಾಮನಾಥ್ ಕೂಡ ಸೇರಿದ್ದಾರೆ. ಇದೀಗ ಶ್ಯಾಮನಾಥ್ ಪೋಷಕರಾದ ವಿಶ್ವನಾಥನ್ ಮತ್ತು ಶ್ಯಾಮಲಾ ಅವರು ಶಿಪ್ಪಿಂಗ್ ಕಂಪನಿಯೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ತಮ್ಮ ಮಗನ ಸುರಕ್ಷತೆಯ ಬಗ್ಗೆ ಕಾಳಜಿ ಇದೆ. ವಶಪಡಿಸಿಕೊಂಡ ನಂತರ ಅವರು ಹಡಗಿನಲ್ಲಿರುವ ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ವಿಶ್ವನಾಥನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೆರಳದ ವೆಲ್ಲಿಪರಂಬಲ್ಲಿಯ ಶ್ಯಾಮನಾಥ್, ಕಳೆದ 10 ವರ್ಷಗಳಿಂದ ಎಂಎಸ್‍ಸಿ ಹಡಗಿನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದರು. ಸಿಬ್ಬಂದಿಯಲ್ಲಿ ಶ್ಯಾಮನಾಥ್ ಜೊತೆಗೆ ನೆರೆಯ ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳ ಇಬ್ಬರು ವ್ಯಕ್ತಿಗಳೂ ಇದ್ದಾರೆ ಎಂದು ವಿಶ್ವನಾಥನ್ ಹೇಳಿದ್ದಾರೆ.

    ಹಡಗಿನಲ್ಲಿ ಭಾರತೀಯರಲ್ಲದೇ, ಫಿಲಿಪೈನ್ಸ್, ಪಾಕಿಸ್ತಾನ ಮತ್ತು ರಷ್ಯಾದವರು ಕೂಡ ಇದ್ದಾರೆ. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ತಮ್ಮ ಮಗ ಮತ್ತು ಅವನ ಸಹೋದ್ಯೋಗಿಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಮರಳಿ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಶ್ಯಾಮನಾಥ್ ಅವರ ತಾಯಿ ಕೂಡ ಮಾಧ್ಯಮದವರೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ ಮಗನನ್ನು ನೆನೆದು ಗದ್ಗದಿತರಾದರು. ಸದ್ಯ ಹಡಗಿನಲ್ಲಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಇರಾನ್‍ನ ಅಧಿಕಾರಿಗಳೊಂದಿಗೆ ಭಾರತ ಮಾತುಕತೆ ನಡೆಸಿದೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

  • ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

    ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

    ಟೆಲ್‌ ಅವಿವ್‌: ಇರಾನ್‌ (Iran) ಡ್ರೋನ್‌ ದಾಳಿ ಬೆನ್ನಲ್ಲೇ ಇಸ್ರೇಲ್‌ನ (Israel) ರಕ್ಷಣಾ ಪಡೆಗಳು ಅಲರ್ಟ್‌ ಆಗಿವೆ. ದೇಶದ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಇಸ್ರೇಲ್‌ನ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ.

    ಇಸ್ರೇಲ್‌ ಮೇಲೆ 200 ಕ್ಕೂ ಹೆಚ್ಚು ಡ್ರೋನ್‌ಗಳ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲಿ ನಾಗರಿಕರು ಜಾಗರೂಕರಾಗಿರಬೇಕು. ಎಚ್ಚರಿಕೆಯ ಸೈರನ್ ಶಬ್ದ ಕೇಳಿದ ತಕ್ಷಣ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

    ಇರಾನ್‌ ದಾಳಿಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಎಚ್ಚರಿಕೆ ವಹಿಸಿವೆ. ದೇಶ ರಕ್ಷಣೆಗಾಗಿ ಆಕಾಶದಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. IDF ವಕ್ತಾರ ರಿಯರ್-ಅಡ್ಮಿರಲ್ ಡೇನಿಯಲ್ ಹಗರಿ ಮಾತನಾಡಿ, ನಾಳೆಯಿಂದ ಶಾಲಾ-ಕಾಲೇಜುಗಳು ಇರುವುದಿಲ್ಲ. ಕಾರ್ಯಕ್ರಮ, ಪ್ರವಾಸ ಯಾವುದೂ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    1,000 ಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಹೋಮ್ ಫ್ರಂಟ್ ಕಮಾಂಡ್ ಹೇಳಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    ಹಮಾಸ್‌ ಮತ್ತು ಇಸ್ರೇಲ್‌ ಯುದ್ಧ ನಡುವೆಯೇ ಇರಾನ್‌ ಸೇನೆಯು ಇಸ್ರೇಲ್‌ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್‌ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ. ಇರಾನ್‌ನಿಂದ ಇಸ್ರೇಲ್‌ನತ್ತ 100 ಕ್ಕೂ ಹೆಚ್ಚು ಡ್ರೋನ್‌ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್‌ ಮಿಲಿಟರಿ ವರದಿಯಲ್ಲಿ ತಿಳಿಸಿದೆ.

    ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಇರಾನ್‌ ದಾಳಿಗೆ ಇಳಿದಿದೆ.

  • ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    ಇರಾನ್‌ನಿಂದ ಇಸ್ರೇಲ್‌ ಮೇಲೆ 100 ಕ್ಕೂ ಹೆಚ್ಚು ಡ್ರೋನ್‌ ದಾಳಿ

    ತೆಹ್ರಾನ್: ಹಮಾಸ್‌ ಮತ್ತು ಇಸ್ರೇಲ್‌ (Israel) ಯುದ್ಧ ನಡುವೆಯೇ ಇರಾನ್‌ (Iran) ಸೇನೆಯು ಇಸ್ರೇಲ್‌ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್‌ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ.

    ಇರಾನ್‌ನಿಂದ ಇಸ್ರೇಲ್‌ನತ್ತ 100 ಕ್ಕೂ ಹೆಚ್ಚು ಡ್ರೋನ್‌ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್‌ ಮಿಲಿಟರಿ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್‌ ಜನರಲ್‌ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು.

    ಇದಕ್ಕೆ ಪ್ರತೀಕಾರವಾಗಿ ಇರಾನ್‌ ದಾಳಿ ನಡೆಸಿದೆ ಎನ್ನಲಾಗಿದೆ. ಇಸ್ರೇಲ್‌ ಈ ವೈಮಾನಿಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ಇರಾನ್‌ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮುನ್ಸೂಚನೆ ನೀಡಿದ್ದರು. ಇಸ್ರೇಲ್‌ ರಕ್ಷಣೆಗೆ ಬೇಕಾದ ಅಗತ್ಯ ನೆರವು ಒದಗಿಸುವುದಾಗಿ ತಿಳಿಸಿದ್ದರು.

  • ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ನವದೆಹಲಿ/ಟೆಹರಾನ್‌: ಮಧ್ಯಪ್ರಾಚ್ಯದಲ್ಲಿ(Middle East) ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಮುಂಬೈಗೆ (Mumbai) ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು (Container Ship) ಇರಾನ್‌ ವಶಪಡಿಸಿಕೊಂಡಿದೆ.

    ಯುಎಇಯಿಂದ ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್‌ ಶಿಪ್‌ ಅನ್ನು Strait of Hormuz ಬಳಿ ವಶಪಡಿದೆ. ವಶಪಡಿಸಿದ ಹಡಗು ಈಗ ಇರಾನ್‌ (Iran) ಜಲ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ವರದಿಯಾಗಿದೆ.   ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಈ ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು ಇವರ ಬಿಡುಗಡೆ ಸಂಬಂಧ ಭಾರತ ಇರಾನ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಇಸ್ರೇಲ್‌ ಮೇಲೆ 48 ಗಂಟೆಯ ಒಳಗಡೆ ಇರಾನ್‌ ದಾಳಿ ನಡೆಸಬಹುದು ಎಂಬ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ. ಈ ಹಡಗು ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು. ಇದನ್ನೂ ಓದಿ: ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ಸೋವಿಯತ್ ಕಾಲ ಮಿಲ್ ಎಂಐ -17 ಹೆಲಿಕಾಪ್ಟರ್ ಬಳಸಿ ಈ ದಾಳಿ ಮಾಡಿದ್ದು, ಇದನ್ನು ಇರಾನಿನ ರೆವಲ್ಯೂಷನ್‌ ಗಾರ್ಡ್‌ ಮತ್ತು ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರು ಈ ಹಿಂದೆ ಬಳಸಿದ್ದರು.

    ಇಸ್ರೇಲ್‌ ಎಚ್ಚರಿಕೆ: ಹಡಗನ್ನು ಇರಾನ್‌ ವಶಪಡಿಸಿಕೊಂಡ ಬೆನ್ನಲ್ಲೇ ಇಸ್ರೇಲ್‌ ಸಿಟ್ಟಾಗಿದೆ. ಪರಿಸ್ಥಿತಿಯನ್ನು ಮತ್ತಷ್ಟು ಉಲ್ಭಣಗೊಳಿಸಿದರೆ ಅದರ ಪರಿಣಾಮಗಳನ್ನು ಇರಾನ್‌ ಎದುರಿಸಬೇಕಾಗಬಹುದು ಎಂದು ಇಸ್ರೇಲ್‌ ಸೇನೆ ಎಚ್ಚರಿಕೆ ನೀಡಿದೆ.

    ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ (Israel) ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿದ್ದವು. ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ದಾಳಿಗೆ ಪ್ರತೀಕಾರವಾಗಿ ನಾವು ಇಸ್ರೇಲ್‌ ಮೇಲೆ ದಾಳಿ ಮಾಡುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿತ್ತು.

     

  • ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ವಾಷಿಂಗ್ಟನ್‌: ಇಸ್ರೇಲ್‌ (Israel) ಮೇಲೆ ಇರಾನ್‌ (Iran) ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಅಮೆರಿಕ ಈಗ ತನ್ನ ಯುದ್ಧ ನೌಕೆಯನ್ನು (War Ship) ಇಸ್ರೇಲ್‌ಗೆ ಕಳುಹಿಸಿದೆ.

    ಸಂಭವನೀಯ ಇರಾನ್ ದಾಳಿಯನ್ನು ಎದುರಿಸಲು ಅಮೆರಿಕ (USA) ಸನ್ನದ್ಧವಾಗಿದೆ. ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ರಕ್ಷಣೆಗಾಗಿ ಯುದ್ಧ ನೌಕೆಗಳು ಧಾವಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಇಸ್ರೇಲ್ ಮತ್ತು ಅಮೆರಿಕನ್ ಪಡೆಗಳನ್ನು ರಕ್ಷಿಸಲು ಯುಎಸ್ ಹೆಚ್ಚುವರಿ ಮಿಲಿಟರಿ ಸೇನೆಯ ಜೊತೆ ಎರಡು ಯುದ್ಧ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಕಳುಹಿಸಿದೆ.

    ಕ್ಷಿಪಣಿ (Missile) ಮತ್ತು ಡ್ರೋನ್‌ (Drone) ಮೂಲಕ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಇರಾನ್‌ ಬಳಿ ಬ್ಯಾಲಿಸ್ಟಿಕ್‌ (Ballistic) ಮತ್ತು ಕ್ರೂಸ್‌ (Cruise Missiles) ಕ್ಷಿಪಣಿಗಳಿವೆ. ಇವು 2 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.  ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

    ಶುಕ್ರವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅತೀ ಶೀಘ್ರದಲ್ಲಿ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದರು.

     

    ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದ್ದವು.  ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.