Tag: iran protest

  • ಹಿಜಬ್ ಧರಿಸಿದ್ದಕ್ಕೆ ತರಗತಿಗೆ ಪ್ರವೇಶ ನಿಷೇಧ – ವ್ಯಾಪಕ ಪ್ರತಿಭಟನೆ ಬಳಿಕ ಶಾಲೆ ಬಿಡಿಸಿದ ಪೋಷಕರು

    ಹಿಜಬ್ ಧರಿಸಿದ್ದಕ್ಕೆ ತರಗತಿಗೆ ಪ್ರವೇಶ ನಿಷೇಧ – ವ್ಯಾಪಕ ಪ್ರತಿಭಟನೆ ಬಳಿಕ ಶಾಲೆ ಬಿಡಿಸಿದ ಪೋಷಕರು

    ತಿರುವನಂತರಪುರಂ: ಕೇರಳದ (Kerala) ಕೋಝಿಕೋಡ್‌ನಲ್ಲಿ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (Student) ಹಿಜಬ್ (Hijab) ಧರಿಸಿದ್ದಕ್ಕಾಗಿ ಶಾಲಾ ಆಡಳಿತ ಮಂಡಳಿ ಪ್ರವೇಶ ನಿರಾಕರಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿ ಕುಟುಂಬಸ್ಥರು ಮುಸ್ಲಿಂ ಸಂಘಟನೆಗಳ (Islamic Organisation) ವ್ಯಾಪಕ ಪ್ರತಿಭಟನೆಯ ನಂತರ ವಿದ್ಯಾರ್ಥಿನಿಯನ್ನು ಶಾಲೆಯಿಂದಲೇ ಬಿಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಕೋಝಿಕೋಡ್‌ನಲ್ಲಿರುವ ಪ್ರಾವಿಡೆನ್ಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ್ದರಿಂದ ಇಸ್ಲಾಮಿಕ್ ಆರ್ಗನೈಜೇಷನ್ಸ್ ಅಫ್ ಇಂಡಿಯಾ (SIO) ಹಾಗೂ ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಷನ್ (MSF) ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿವೆ. ಈ ವಿಷಯವನ್ನು ಶಾಲಾ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಕುಟುಂಬಸ್ಥರು ಸಂವಿಧಾನ (Constitution) ವಿರೋಧಿ ಹೆಜ್ಜೆ ಇಟ್ಟಿರುವ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವೇ (Education) ಬೇಡವೆಂದು ಶಾಲೆಯಿಂದ ಬಿಡಿಸಿದ್ದಾರೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

    ಇರಾನ್ ಹಿಜಬ್ ಧರಿಸಿದ್ದಕ್ಕೆ ಪೊಲೀಸರಿಂದ (Iran Police) ಥಳಿತಕ್ಕೊಳಗಾಗಿ ಕೋಮಾ ಸ್ಥಿತಿಗೆ ತಲುಪಿ ಮೃತಪಟ್ಟ ನಂತರ ಅಲ್ಲಿ ಜನ ಹಿಂಸಾತ್ಮಕ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಭದ್ರತಾ ಪಡೆಗಳ ಜೊತೆಗಿನ ಕಾದಾಟದಲ್ಲಿ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 700ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹ್ಸಾ ಆಮಿನಿ ಸಾವು, ಹಿಜಬ್‌ ವಿರೋಧಿಸಿ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಮೂವರು ಸಾವು

    ಮಹ್ಸಾ ಆಮಿನಿ ಸಾವು, ಹಿಜಬ್‌ ವಿರೋಧಿಸಿ ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಮೂವರು ಸಾವು

    ತೆಹ್ರಾನ್: ಹಿಜಬ್‌ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ (Iran Protest) ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ವೇಳೆ ಮೂವರು ಸಾವನ್ನಪ್ಪಿದ್ದಾರೆ.

    ಪ್ರತಿಭಟನೆಯಲ್ಲಿ ಮೂವರು ಸಾವಿಗೀಡಾಗಿರುವ ಬಗ್ಗೆ ಇರಾನ್ ಗವರ್ನರ್ ಎಸ್ಮಾಯಿಲ್ ಜರೀ ಕೌಶಾ ದೃಢಪಡಿಸಿದ್ದಾರೆ. ಯಾವುದೇ ಹಂತದ ಭದ್ರತಾ ಅಥವಾ ಕಾನೂನು ಜಾರಿ ಪಡೆಗಳು ಬಳಸದ ಬಂದೂಕುಗಳಿಂದ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತನಿಖೆಗಳು ದೃಢಪಡಿಸಿವೆ ಎಂದು ವಾಯುವ್ಯ ಕುರ್ದಿಸ್ತಾನ್ ಪ್ರಾಂತ್ಯದ ಗವರ್ನರ್ ಕೌಶಾ ಹೇಳಿದ್ದಾರೆ. ಇದನ್ನೂ ಓದಿ: ನೈತಿಕ ಪೊಲೀಸ್‍ಗಿರಿಗೆ ಯುವತಿ ಬಲಿ: ತಲೆ ಕೂದಲು ಕತ್ತರಿಸಿ, ಹಿಜಬ್ ಸುಟ್ಟು ಇರಾನಿ ಮಹಿಳೆಯರ ಆಕ್ರೋಶ

    ಮೃತರಲ್ಲಿ ಒಬ್ಬರು ದಿವಾಂಡರೆಹ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ಸಾಕ್ವೆಜ್‌ನ ಆಸ್ಪತ್ರೆ ಬಳಿ ಸಾವನ್ನಪ್ಪಿದ್ದರೆ, ಮತ್ತೊಬ್ಬರದು ಅನುಮಾನಾಸ್ಪದ ಸಾವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಗವರ್ನರ್‌ ತಿಳಿಸಿದ್ದಾರೆ.

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರಿಗೆ ಕಾರಿಗೆ ನೂಕು ದೌರ್ಜನ್ಯ ನಡೆಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಈ ಘಟನೆಯನ್ನು ಖಂಡಿಸಿ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ಹಿಜಬ್‌ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು

    ಪ್ರತಿಭಟನೆ ಗಂಭೀರತೆ ಅರಿತ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಯುವತಿ ಆಮಿನಿ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಘಟನೆ ಕುರಿತು ತನಿಖೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ಕೂಡ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]