Tag: Iran President

  • ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

    ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ದುರ್ಮರಣ

    ಟೆಹ್ರಾನ್: ಭಾನುವಾರ ಪತನಗೊಂಡಿದ್ದ ಹೆಲಿಕಾಪ್ಟರ್‌ನಲ್ಲಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಸಹಿತ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ (Iran) ಮಾಧ್ಯಮಗಳು ವರದಿ ಮಾಡಿವೆ.

    ಈ ದುರ್ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್‌ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಇರಾನ್‍ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವರಹಿತ ವಿಮಾನ (ಯುಎವಿ) ಗುರುತಿಸಿದೆ ಎಂದು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಅನಾಡೊಲು ವರದಿ ಮಾಡಿದೆ.

    ಪರ್ವತ ಶ್ರೇಣಿಗಳ ನಡುವೆ ಇಬ್ರಾಹಿಂ ರೈಸಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪ್ಯರಿತ್ಯದಿಂದ ಭಾನುವಾರ ಸಂಜೆ (ಮೆ 19) ಪತನಗೊಂಡಿತ್ತು. ಹೆಲಿಕಾಪ್ಟರ್ ಹಾರಾಟದ ಸುಮಾರು 30 ನಿಮಿಷಗಳ ನಂತರ ಸಂಪರ್ಕವನ್ನು ಕಳೆದುಕೊಂಡಿತ್ತು.

    ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಭಾಗದಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್‍ಗೆ ಹಿಂದಿರುಗುವ ಈ ಘಟನೆ ಸಂಭವಿಸಿತ್ತು.

  • ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನ- ಸುರಕ್ಷಿತವಾಗಿ ವಾಪಸ್‌ ಆಗಲು ಮೋದಿ ಪ್ರಾರ್ಥನೆ

    ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನ- ಸುರಕ್ಷಿತವಾಗಿ ವಾಪಸ್‌ ಆಗಲು ಮೋದಿ ಪ್ರಾರ್ಥನೆ

    ನವದೆಹಲಿ/ಟೆಹ್ರಾನ್: ಅಜರ್‌ಬೈಜಾನ್‌ನಿಂದ ಟೆಹ್ರಾನ್‌ಗೆ ಹಿಂದಿರುಗುತ್ತಿದ್ದಾಗ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi), ವಿದೇಶಾಂಗ ಸಚಿವರು ಮತ್ತು ಇತರ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ಹೆಲಿಕಾಪ್ಟರ್ ಪತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ಇರಾನ್ ಅಧ್ಯಕ್ಷ (Iran President) ಹಾಗೂ ಇತರ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಸಂಬಂಧಿಸಿದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಈ ಸಂಕಷ್ಟದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಪತನವಾದ ಹೆಲಿಕಾಪ್ಟರ್‌ನಲ್ಲಿದ್ದವರು ಶೀಘ್ರವೇ ಸುರಕ್ಷಿತವಾಗಿ ವಾಪಸ್‌ ಆಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪರ್ವತಗಳ ಮಧ್ಯೆ ಪತನ: ವರದಿ

    ಆಗಿದ್ದೇನು..?: ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಜರ್‌ಬೈಜಾನ್‌ನ (Azerbaijan to Tehran) ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ದಟ್ಟ ಮಂಜಿನಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಇಸ್ರಾನ್-ಇರಾನ್ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಅಮೀರ್ ನಾಪತ್ತೆಯಾಗಿದ್ದು, 65 ತಂಡಗಳಿಂದ ತೀವ್ರ ಶೋಧ ನಡೀತಾ ಇದೆ. ಪ್ರತಿಕೂಲ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಕಾಪ್ಟರ್ ಪತನಗೊಂಡಿದೆ ಎನ್ನಲಾಗಿದೆ. ದೇಶದಾದ್ಯಂತ ರೈಸಿಗಾಗಿ ಪ್ರಾರ್ಥಿಸಲಾಗುತ್ತಿದೆ.

    63 ವಯಸ್ಸಿನ ರೈಸಿ 2021 ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ವಹಿಸಿಕೊಂಡಾಗಿನಿಂದ ನೈತಿಕತೆಯ ಕಾನೂನುಗಳನ್ನು ಬಿಗಿಗೊಳಿಸುವಂತೆ ಆದೇಶಿಸಿದ್ದರು. ವಿಶ್ವ ಶಕ್ತಿಗಳೊಂದಿಗೆ ಪರಮಾಣು ಮಾತುಕತೆಗಳನ್ನು ತಳ್ಳಿಹಾಕಿದ್ದರು.

  • ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    ವಾಷಿಂಗ್ಟನ್: ಸಂದರ್ಶಕಿಯೊಬ್ಬಳು ಹಿಜಬ್ (Hijab) ಧರಿಸಲು ನಿರಾಕರಿಸಿದ್ದಾಗಿ ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ.

    ಸಿಎನ್‍ನ್ ವಾಹಿನಿಯ ಖ್ಯಾತ ಆ್ಯಂಕರ್ (CNN Journalist) ಕ್ರಿಸ್ಟಿಯಾನೆ ಅಮನ್‍ಪೋರ್ (Christiane Amanpour) ಅವರು ಹಿಜಬ್ ಧರಿಸದೇ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯನ್ನು (Ebrahim Raisi) ಸಂದರ್ಶನ ಮಾಡಲು ನಿರ್ಧರಿಸಿದ್ದರು. ಸಂದರ್ಶನ ನಡೆಸುವ ಮುನ್ನವೇ ಹಿಜಬ್ ಧರಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನು ಅಮ್‍ಪೋರ್ ನಿರಾಕರಿಸಿದ್ದಾರೆ. ಹಿಜಬ್ ಧರಿಸದ್ದಕ್ಕೆ ಇಬ್ರಾಹಿಂ ರೈಸಿ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ.

    ಈ ಬಗ್ಗೆ ಅಮನ್‍ಪೋರ್ ಸರಣಿ ಟ್ವೀಟ್ ಮಾಡಿದ್ದು, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಖಾಲಿ ಕುರ್ಚಿ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಇರಾನ್‍ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆ ಬಗ್ಗೆ ಚರ್ಚಿಸಲು ಯೋಜಿಸಿದ್ದೆ. ಇದರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿಯ ಸಾವು, ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟನೆ ನಡೆಸುತ್ತಿರುವುದರ ಜೊತೆಗೆ ಹಲವಾರು ಘಟನೆಗಳು ಸೇರಿತ್ತು. ಇರಾನ್‍ನ ಅಧ್ಯಕ್ಷ ರೈಸಿ ಯುಎಸ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಅವರ ಮೊದಲ ಸಂದರ್ಶನವಾಗಿದೆ. ಈ ಸಂದರ್ಶನವು ವಾರಗಳ ಹಿಂದಿನ ಯೋಜನೆಯಾಗಿದ್ದು, 8 ಗಂಟೆಗಳಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು.

    ಇರಾನ್‍ನ ಅಧ್ಯಕ್ಷರು ಬರುತ್ತಾರೆ ಎಂದು ಅವರಿಗಾಗಿ 40 ನಿಮಿಷಗಳ ಕಾಲ ಕಾಯುತ್ತಿದ್ದೆವು. ಆದರೆ ಸಂದರ್ಶನ ಪ್ರಾರಂಭವಾಗುವ ಮುನ್ನ ಸಹಾಯಕರೊಬ್ಬರು ಬಂದು ಅಧ್ಯಕ್ಷರು ಹೇಳಿದ್ದಾರೆ. ತಲೆಗೆ ಸ್ಕಾರ್ಫ್ ಧರಿಸಬೇಕು. ಏಕೆಂದರೆ ಇದು ಮೊಹರಂನ ಪವಿತ್ರ ತಿಂಗಳಾಗಿದೆ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಇರಾನ್‍ ಹಿಜಬ್ ಹೋರಾಟ – ಪೊಲೀಸರ ಗುಂಡಿಗೆ 8 ಮಂದಿ ಬಲಿ

    ಈ ಹಿನ್ನೆಲೆಯಲ್ಲಿ ನಾನು ನಯವಾಗಿ ನಿರಾಕರಿಸಿದ್ದು, ನಾವು ನ್ಯೂಯಾರ್ಕ್‍ನಲ್ಲಿದ್ದೇವೆ. ಹಿಜಬ್‍ಗೆ ಸಂಬಂಧಿಸಿದಂತೆ ಇಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯಗಳಿಲ್ಲ. ನಾನು ಇರಾನ್ ಹೊರಗೆ ಸಂದರ್ಶನ ಮಾಡುವಾಗ ಹಿಂದಿನ ಯಾವ ಅಧ್ಯಕ್ಷರು ಹಿಜಬ್ ಧರಿಸಲು ಹೇಳಿರಲಿಲ್ಲ ಎಂದು ಅವರಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಸಂದರ್ಶನವನ್ನು ನಿರಾಕರಿಸಿದರು ಎಂದು ಹೇಳಿದ್ದಾರೆ.

    ಹಿಜಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಇದಾದ ನಂತರ ಇರಾನ್‍ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಇರಾನ್‍ನಲ್ಲಿ ಇಂಟರ್‌ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    Live Tv
    [brid partner=56869869 player=32851 video=960834 autoplay=true]