– ವ್ಯಾಪಕ ಕಾರ್ಯಾಚರಣೆ – 700 ಜನ ಅರೆಸ್ಟ್ ಟೆಹ್ರಾನ್: ಇಸ್ರೇಲ್ (Israel) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ (Iran) ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಒಂದು ದಿನದ ಬಳಿಕ ಈ ಬೆಳವಣಿಗೆಯಾಗಿದೆ. ಗಲ್ಲಿಗೇರಿಸಲಾದ ಮೂವರು ವ್ಯಕ್ತಿಗಳನ್ನು ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್ ಎಂದು ಗುರುತಿಸಲಾಗಿದೆ. ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್‌ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರನ್ನು ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಇಂದು (ಜೂ.25ರಂದು) ಮರಣದಂಡನೆ ವಿಧಿಸಲಾಗಿದೆ. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?
ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್‌ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ (Iran Israel Conflict) ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ.
ಮೊಸಾದ್ ಜೊತೆ ಸಂಪರ್ಕ – ಗೂಢಚಾರಿಗೆ ಗಲ್ಲು
ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ (Mossad) ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ. ಗಲ್ಲಿಗೇರಿಸಲಾದ ಗೂಢಚಾರಿಗೆಯನ್ನು ಮಜೀದ್ ಮೊಸಾಯೆಬಿ ಎಂದು ಗುರುತಿಸಲಾಗಿದೆ ಎಂದು ನ್ಯಾಯಾಂಗದ ಮಿಜಾನ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈತ ಮೊಸಾದ್‌ಗೆ ಇರಾನ್‌ನ ಸೂಕ್ಷ್ಮ ಮಾಹಿತಿಯನ್ನು ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್, ಇರಾನ್ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?
ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ದೊಡ್ಡಣ್ಣ ಅಮೆರಿಕ (America) ಎಂಟ್ರಿ ಬಳಿಕ ಜಗತ್ತಿನಲ್ಲೆಡೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿತ್ತು. ಆದರೆ 12 ದಿನಗಳ ಬಳಿಕ ಇಂದು ಮೂರು ದೇಶಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಹೌದು, ಮಧ್ಯಪ್ರಾಚ್ಯ ದೇಶಗಳ ಈ ಸಂಘರ್ಷ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವ ಭೀತಿ ಜಗತ್ತಿನಲ್ಲೆಡೆ ಎದುರಾಗಿತ್ತು. ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಮಿಡ್‌ನೈಟ್ ಹ್ಯಾಮರ್ ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿತ್ತು. ಅದಾದ ಬಳಿಕ ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು. ಆದರೆ ಇಂದು 12 ದಿನಗಳ ಬಳಿಕ ಇರಾನ್ ಹಾಗೂ ಇಸ್ರೇಲ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್ ಕಮಾಂಡರ್‌ಗಳಿಗೆ ಮೊಸಾದ್ ಎಚ್ಚರಿಕೆ
ಮೂರು ದೇಶಗಳಿಗೆ ಸಿಕ್ಕಿದ್ದೇನು? ಅಮೆರಿಕ:
ಇರಾನ್ ಹಾಗೂ ಇಸ್ರೇಲ್ ಸಂಘರ್ಷದ ಮೂಲಕ ಪ್ರಮುಖ ಮೂರು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿ ನಾಶ ಮಾಡಿದೆ. ದಾಳಿಯಿಂದ ಇನ್ನು ಮುಂದೆ ಇರಾನ್ ಪರಮಾಣು ಬಾಂಬು ತಯಾರಿಸಲು ಸಾಧ್ಯವಿಲ್ಲ.
ಇರಾನ್:
ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕವನ್ನು ಎದುರು ಹಾಕಿಕೊಂಡಿತ್ತು. ಜೊತೆಗೆ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಮೂಲಕ ಜಗತ್ತಿನ ಶಕ್ತಿಶಾಲಿ ಅಮೆರಿಕದ ನೆಲೆಗೆ ದಾಳಿ ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು.
ಇಸ್ರೇಲ್:
ಈ ಯುದ್ಧದಿಂದಾಗಿ ಇರಾನ್ ರಾಜಧಾನಿ ಟೆಹ್ರಾನ್ ಹಾನಿಯಾಗಿದೆ. ಏರ್ ಡಿಫೆನ್ಸ್ ಧ್ವಂಸಗೊಳಿಸಿ ಇರಾನ್ ಮೇಲೆ ಇಸ್ರೇಲ್ ಬಾಂಬ್ ಸುರಿಮಳೆಗೈದಿತ್ತು. ಬ್ರಿಗೇಡಿಯರ್ ಜನರಲ್ ಅಲಿ ಶಾದ್ಮಾನಿ ಸೇರಿದಂತೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಪ್ರಮುಖ ವ್ಯಕ್ತಿಗಳ ಹತ್ಯೆಯಾಗಿದೆ. ಮುಖ್ಯವಾಗಿ ಇರಾನ್ ಅಣ್ವಸ್ರ್ತ ಹೊಂದಬಾರದು ಎನ್ನುವುದೇ ಇಸ್ರೇಲ್ ಗುರಿಯಾಗಿತ್ತು. ಅಮೆರಿಕ ದಾಳಿಯಿಂದ ಇನ್ನು ಮುಂದೆ ಇಸ್ರೇಲ್ ನಿಟ್ಟುಸಿರು ಬಿಡಬಹುದು.
ಶಾಶ್ವತ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಯಾವತ್ತೂ ತಯಾರಿರಲಿಲ್ಲ. ಈ ಕುರಿತು ಟ್ರಂಪ್ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ದೀರ್ಘಕಾಲದ ಯುದ್ಧದಿಂದ ರಾಜಕೀಯಕ್ಕೆ ಹಾನಿಕಾರಕವಾಗಬಹುದು. ಇದೇ ಕಾರಣದಿಂದ ಟ್ರಂಪ್, ಕತಾರ್‌ನಲ್ಲಿರುವ ವಾಯುನೆಲೆ ಮೇಲೆ ಇರಾನ್ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸುವುದು ಬೇಡ ಎಂದು ನಿರ್ಧರಿಸಿದ್ದರು. ಈ ಯುದ್ಧದಿಂದಾಗಿ ಅಮೆರಿಕದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.ಇದನ್ನೂ ಓದಿ: ಇಸ್ರೇಲ್ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್
ವಾಷಿಂಗ್ಟನ್: ಈಗಲಾದರೂ ಇರಾನ್ ಶಾಂತಿ ಸ್ಥಾಪಿಸಲಿ, ಇಲ್ಲವಾದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಭಾನುವಾರ ನಸುಕಿನಲ್ಲಿ ಇರಾನ್ (Iran) ಮೇಲೆ ಅಮೆರಿಕ (America) ನಡೆಸಿದ ವೈಮಾನಿಕ ದಾಳಿ (Air Strike) ಬಳಿಕ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಇರಾನ್ ಮೇಲಿನ ವೈಮಾನಿಕ ದಾಳಿ ಯಶಸ್ವಿಯಾಗಿದೆ. ಈಗಲಾದರೂ ಇರಾನ್. ಇಸ್ರೇಲ್ ಜೊತೆಗಿನ ಯುದ್ಧಕ್ಕೆ ವಿರಾಮ ಘೋಷಿಸಿ, ಶಾಂತಿ ಸ್ಥಾಪಿಸಲಿ. ಇಲ್ಲವಾದರೆ ಭವಿಷ್ಯದಲ್ಲಿ ಭಾರೀ ಪ್ರಮಾಣದ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್
ಶನಿವಾರ ರಾತ್ರಿ ವೈಮಾನಿಕ ದಾಳಿ ಮೂಲಕ ಇರಾನ್‌ನ ಪರಮಾಣು ಸ್ಥಾವರಗಳು ಹಾಗೂ ಪರಮಾಣು ಬಾಂಬ್‌ಗಳನ್ನು ತಯಾರಿಕೆಯನ್ನು ನಿಲ್ಲಿಸುವುದು ನಮ್ಮ ಮೂಲ ಉದ್ದೇಶವಾಗಿತ್ತು ಹಾಗೂ ಈ ಮೂಲಕ ಇಸ್ರೇಲ್‌ಗೆ ಯುದ್ಧ ಬೆದರಿಕೆ ಹಾಕುತ್ತಿರುವ ಇರಾನ್ ಅನ್ನು ಬುಡಸಮೇತ ಅಲುಗಾಡಿಸುವುದು ಮುಖ್ಯ ಗುರಿಯಾಗಿತ್ತು. ಈ ವೈಮಾನಿಕ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೀಡಿದ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.
White House situation room during American strikes on Iran. US President President Donald Trump, other top officials present
ದಾಳಿಯಲ್ಲಿ ಇರಾನ್‌ನ ಪ್ರಮುಖ ಪರಮಾಣು ಸ್ಥಾವರಗಳಾದ ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ನಡೆಸಿ, ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ವೇಳೆ ಫೋರ್ಡೊನಲ್ಲಿದ್ದ 30,000 ಪೌಂಡ್‌ನ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಧ್ವಂಸಮಾಡಲಾಗಿದೆ. ಈ ಮೂಲಕ ವೈಮಾನಿಕ ದಾಳಿ ಭರ್ಜರಿ ಯಶಸ್ಸನ್ನು ಕಂಡಿದೆ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಇದರಿಂದಾಗಿ ಇಸ್ರೇಲ್‌ಗಿದ್ದ ಒಂದು ದೊಡ್ಡ ಅಪಾಯವನ್ನು ತಪ್ಪಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಇಸ್ರೇಲ್ ಮೇಲೆ ಮತ್ತೆ ಬ್ಯಾಲಿಸ್ಟಿಕ್ ಮಿಸೈಲ್‌ಗಳ ಸುರಿಮಳೆ – ಅಮೆರಿಕ ದಾಳಿಗೂ ಜಗ್ಗದ ಇರಾನ್
ಕಳೆದ 40 ವರ್ಷಗಳಿಂದ ಇರಾನ್ ಇಸ್ರೇಲ್ ಹಾಗೂ ಅಮೆರಿಕಕ್ಕೆ ಸಾವಿನ ಬೆದರಿಕೆ ಹಾಕುತ್ತಲೇ ಬಂದಿದೆ. ಜನರಲ್ ಖಾಸಿಮ್ ಸೊಲೈಮಾನಿ ಸೇರಿ ಈಗಾಗಲೇ ಎಷ್ಟೋ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಇದೇ ಮುಂದುವರಿಯಲು ಬಿಡುವುದಿಲ್ಲ ಎಂದು ಹೇಳಿದರು.
ಈ ಮೊದಲೇ ಡೊನಾಲ್ಡ್ ಟ್ರಂಪ್ ಶಾಶ್ವತ ಯುದ್ಧ ಬೇಡ ಎಂದಿದ್ದರು. ಆದರೆ ಈದೀಗ ಇರಾನ್ ಮತ್ತು ಇಸ್ರೇಲ್ ಮಧ್ಯೆ ಅಮೆರಿಕ ಪ್ರವೇಶಿರುವುದು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.
ಶ್ವೇತಭನದ ಪರಿಸ್ಥಿತಿ ಹೇಗಿತ್ತು?
ಇರಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಸಂದರ್ಭದಲ್ಲಿ ಶ್ವೇತಭವನದ ಪರಿಸ್ಥಿತಿ ಹೇಗಿತ್ತು ಅನ್ನೋದರ ಒಂದಿಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಶ್ವೇತಭವನದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ದಾಳಿಯ ಪ್ರತಿ ಕ್ಷಣದ ಮಾಹಿತಿಯನ್ನು ಹೇಗೆ ಕಲೆಹಾಕುತ್ತಿದ್ದರು. ಇದಕ್ಕೆ ದುಗುಡ ಏನಿತ್ತು? ಇದಕ್ಕೆ ಟ್ರಂಪ್ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬೆಲ್ಲ ಚಿತ್ರಣವನ್ನು ಈ ಫೋಟೋಗಳು ಕಟ್ಟಿಕೊಟ್ಟಿವೆ.ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್ ವಾರ್ನಿಂಗ್
ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಭೀಕರತೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಅಮೆರಿಕದ (America) ಎಂಟ್ರಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವಂತಾಗಿದೆ.
ಇಷ್ಟು ದಿನ ಇಸ್ರೇಲ್ ಬೆನ್ನಿಗೆ ನಿಂತು ಬಲ ನೀಡಿದ್ದ ಅಮೆರಿಕ, ಈಗ ಒಂದು ಹೆಜ್ಜೆ ಮುಂದೆ ಬಂದು ನೇರವಾಗಿಯೇ ಇರಾನ್‌ಗೆ ಹೋರಾಟದ ಎಚ್ಚರಿಕೆ ನೀಡಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುತ್ತಾ ಎನ್ನುವ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಟ್ರಂಪ್‌ನ ಆ ಒಂದು ಹೇಳಿಕೆ ಮೂರನೇ ಮಹಾಯುದ್ಧ ಶುರುವಾದರೂ ಅಚ್ಚರಿಪಡಬೇಕಿಲ್ಲ ಎನ್ನುವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಇರಾನ್‌ಗೆ ಎರಡು ದಿನದ ಹಿಂದಷ್ಟೇ ಟ್ರಂಪ್ ನೇರ ಎಚ್ಚರಿಕೆ ನೀಡುವ ಮೂಲಕ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ ಇದಕ್ಕೆ ಬಗ್ಗದ ಇರಾನ್ ಸರ್ವೋಚ್ಛ ನಾಯಕ ಖಮೇನಿ ನೀವು ಕೂಡ ನಿಮ್ಮ ಪಾಡಿಗೆ ಸೈಲೆಂಟ್ ಆಗಿದ್ರೆ ಒಳ್ಳೆಯದು, ಇಲ್ಲದಿದ್ದರೆ ಅಮೆರಿಕ ಕೂಡ ಪರಿಣಾಮ ಎದುರಿಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದೆ. ಅದಾದ ಬೆನ್ನಲ್ಲೇ ನಿನ್ನೆ ಮತ್ತೆ ಇರಾನ್ ವಿರುದ್ಧ ಟ್ರಂಪ್ ಗುಡುಗಿದರು. ತಾವು ಕೂಡ ಇರಾನ್ ವಿರುದ್ಧ ಸಮರಕ್ಕಿಳಿಯುವ ಮುನ್ಸೂಚನೆ ನೀಡಿದರು. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಟ್ರಂಪ್ ಬಳಿ ಕೇಳಿದಾಗ ಯಾವುದೇ ಷರತ್ತುಗಳಿಲ್ಲದೆ ಇರಾನ್ ತನ್ನ ಪರಮಾಣು ಯೋಜನೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ವಾರ್ನಿಂಗ್ ಕೊಟ್ಟಿದ್ದಾರೆ.ಇದನ್ನೂ ಓದಿ: Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್ 26ರ ವರೆಗೂ ಭಾರೀ ಮಳೆ
ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಮಿಲಿಟರಿ ಪಡೆಗಳನ್ನು ಸ್ಥಳಾಂತರಿಸುತ್ತಿದೆ. ಮೂರನೇ ನೌಕಾ ವಿಧ್ವಂಸಕ ನೌಕೆ ಪೂರ್ವ ಮೆಡಿಟರೇನಿಯನ್ ಸಮುದ್ರವನ್ನು ಪ್ರವೇಶಿಸಿದೆ. ಮತ್ತೊಂದು ವಿಮಾನವಾಹನ ನೌಕೆ ಗುಂಪು ಅರೇಬಿಯನ್ ಸಮುದ್ರಕ್ಕೆ ತೆರಳುತ್ತಿದೆ ಎನ್ನಲಾಗ್ತಿದೆ. ಇದು ಕೇವಲ ರಕ್ಷಣಾತ್ಮಕ ಕ್ರಮವಾಗಿದೆ ಎಂಬ ಚರ್ಚೆ ಇದೆ. ಇರಾನ್ ಇಸ್ರೇಲ್ ಮೇಲೆ ಬಹುದೊಡ್ಡ ದಾಳಿ ನಡೆಸಿದರೆ ಅಮೆರಿಕ ರಣರಂಗಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ
ಅಮೆರಿಕದ ಎಚ್ಚರಿಕೆ ನಡುವೆ ಈಗ, ರಷ್ಯಾ (Russia) ಕೂಡ ಎಂಟ್ರಿ ಕೊಟ್ಟಿದ್ದು, ಅಮೆರಿಕಾಕ್ಕೆ ಸೈಲೆಂಟಾಗಿರುವಂತೆ ವಾರ್ನಿಂಗ್ ಕೊಟ್ಟಿದೆ. ಈ ಮೂಲಕ ಆಯಾ ದೇಶಗಳ ಪರ ಒಂದೊಂದೆ ದೇಶಗಳು ಎಂಟ್ರಿ ಆರಂಭವಾದಂತಿದ್ದು, ಒಂದೊಮ್ಮೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಇಡೀ ಪ್ರಪಂಚ ಮತ್ತೆ ಮತ್ತೊಂದು ಮಹಾಯುದ್ಧದ ಭೀಕರತೆಗೆ ಸಿಲುಕಲಿದೆ.ಇದನ್ನೂ ಓದಿ: ಇಂದಿನಿಂದ ಭಾರತ-ಇಂಗ್ಲೆಂಡ್ ಟೆಸ್ಟ್ – ಗಿಲ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ
ಟೆಹ್ರಾನ್: ಇಸ್ರೇಲ್ (Israel) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಏಕಾಂಗಿಯಾಗಿದ್ದಾರೆ. ಇರಾನ್‌ನ ಪ್ರಮುಖ ಸೇನಾ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಹತ್ಯೆ ಮಾಡುತ್ತಿದೆ.
ಈಗಾಗಲೇ ಇಸ್ರೇಲ್ ಇರಾನಿನ ಉನ್ನತ ಕಮಾಂಡರ್ ಅಲಿ ಶಾದ್ಮಾನಿ, ಮೇಜರ್ ಜನರಲ್ ಗುಲಾಮ್ ಅಲಿ ರಶೀದ್, ಇರಾನ್‌ನ ಪ್ರತಿಷ್ಠಿತ ಮಿಲಿಟರಿ ಘಟಕ ಕಮಾಂಡರ್ ಹುಸೇನ್ ಸಲಾಮಿ, ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಮತ್ತು ವಾಯು ಪ್ರದೇಶದ ಮುಖ್ಯಸ್ಥ ಅಮೀರ್ ಅಲಿ ಹಾಜಿಜಾದೆ, ಗುಪ್ತಚರ ಮುಖ್ಯಸ್ಥ ಮೊಹಮ್ಮದ್ ಕಜ್ಮಿಯನ್ನೂ ಹತ್ಯೆ ಮಾಡಿದೆ.ಇದನ್ನೂ ಓದಿ:ಆ ನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು 6ರ ಮಗು ಸಾವು?
ಖಮೇನಿಯ ಅನೇಕ ಪ್ರಮುಖ ಮಿಲಿಟರಿ ಮತ್ತು ಭದ್ರತಾ ಸಲಹೆಗಾರರು ಇಸ್ರೇಲ್‌ನ ವಾಯು ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆ. ಸರಣಿ ಹತ್ಯೆಗಳಿಂದ ಖಮೇನಿ ಆಂತರಿಕ ಸಲಹಾ ತಂಡದಲ್ಲಿ ಜನರ ಕೊರತೆಯಾಗಿದೆ. ಈ ನಡುವೆ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಲ್ಲುವುದಾಗಿ ಇಸ್ರೇಲ್ ನಾಯಕರು ಬೆದರಿಕೆ ಹಾಕಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಖಮೇನಿ ಅವರನ್ನು ಕೊಲ್ಲುವುದರಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ದೀರ್ಘಕಾಲದ ದ್ವೇಷವನ್ನು ಕೊನೆಗೊಳಿಸಬಹುದು ಎಂದು ಸೂಚಿಸಿದರು. ಒಂದು ದಿನದ ನಂತರ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಖಮೇನಿ ಮಾಜಿ ಇರಾಕಿ ನಾಯಕ ಸದ್ದಾಂ ಹುಸೇನ್‌ನಂತೆಯೇ ಅದೇ ಗತಿಯನ್ನು ಎದುರಿಸಬಹುದು ಎಂದು ಎಚ್ಚರಿಕೆ ನೀಡಿದರು.
ಈ ಹಿನ್ನೆಲೆ ಖಮೇನಿ ನಂತರದ ಇರಾನ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಯಕನನ್ನು ಹತ್ಯೆ ಮಾಡುವ ಇಸ್ರೇಲ್ ಯೋಜನೆಯನ್ನು ತಡೆದಿದ್ದಾರೆ ಎಂದು ವರದಿಯಾಗಿತ್ತು. ತಮ್ಮ ಸಂದರ್ಶನದಲ್ಲಿ ಯೋಜನೆಯನ್ನು ಸಮರ್ಥಿಸಿಕೊಂಡ ನೆತನ್ಯಾಹು, ಅಂತಹ ಕ್ರಮವು ಉದ್ವಿಗ್ನತೆಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಸಂಘರ್ಷವನ್ನು ಕೊನೆಗೊಳಿಸುತ್ತದೆ ಎಂದು ವಾದಿಸಿದರು.ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್ ಹಾಕುತ್ತಾ?
ಸಂಭಾವ್ಯ ಸರ್ವೋಚ್ಛ ಉತ್ತರಾಧಿಕಾರಿಗಳು ಯಾರು?
ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಮಗ ಮೊಜ್ತಬಾ ಖಮೇನಿ ಪ್ರಮುಖ ಸ್ಪರ್ಧಿಯಾಗಿ ಎದ್ದು ಕಾಣುತ್ತಾರೆ. 1969ರಲ್ಲಿ ಜನಿಸಿದ ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಮತ್ತು ಇರಾನ್‌ನ ಕ್ಲೆರಿಕಲ್ ಸ್ಥಾಪನೆ ಎರಡರೊಂದಿಗೂ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಅವರು ಇರಾನ್-ಇರಾಕ್ ಯುದ್ಧದ ಅಂತಿಮ ಹಂತದಲ್ಲಿ ಸೇವೆ ಸಲ್ಲಿಸಿದರು ಮತ್ತು ಈಗ ತೆರೆಮರೆಯಲ್ಲಿ ಬಲವಾದ ಪ್ರಭಾವ ಹೊಂದಿರುವ ಮಧ್ಯಮ ಶ್ರೇಣಿಯ ಧರ್ಮಗುರುವಾಗಿದ್ದಾರೆ.
ಮತ್ತೊಂದು ಪ್ರಮುಖ ಹೆಸರು ಅಲಿರೆಜಾ ಅರಾಫಿ. ಇವರು ಖಮೇನಿಯ ವಿಶ್ವಾಸಾರ್ಹ ಸಹಾಯಕರು. ಅರಾಫಿ ತಜ್ಞರ ಸಭೆಯ ಉಪಾಧ್ಯಕ್ಷರು, ಗಾರ್ಡಿಯನ್ ಕೌನ್ಸಿಲ್ ಸದಸ್ಯರು ಮತ್ತು ಕೋಮ್‌ನಲ್ಲಿ ಶುಕ್ರವಾರದ ಪ್ರಾರ್ಥನಾ ನಾಯಕ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಇರಾನ್‌ನ ಅಧಿಕಾರ ರಚನೆಯೊಳಗಿನ ಅವರ ವ್ಯಾಪಕ ಅರ್ಹತೆಗಳು ಅವರನ್ನು ಉತ್ತರಾಧಿಕಾರಕ್ಕೆ ಗಂಭೀರ ಅಭ್ಯರ್ಥಿಯನ್ನಾಗಿ ಮಾಡುತ್ತವೆ.
ನ್ಯಾಯಾಂಗ ಮತ್ತು ಗುಪ್ತಚರ ವಲಯಗಳಲ್ಲಿ ದಶಕಗಳನ್ನು ಕಳೆದಿರುವ ಘೋಲಮ್ ಹೊಸೇನ್ ಮೊಹ್ಸೇನಿ ಎಜೈ ಮತ್ತೊಬ್ಬ ಸಂಭಾವ್ಯ ಉತ್ತರಾಧಿಕಾರಿ. ಅವರು ಈ ಹಿಂದೆ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರ ಅಡಿಯಲ್ಲಿ ಇರಾನ್‌ನ ಗುಪ್ತಚರ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಅಟಾರ್ನಿ ಜನರಲ್ ಮತ್ತು ನ್ಯಾಯಾಂಗ ವಕ್ತಾರರು ಸೇರಿದಂತೆ ವಿವಿಧ ಹಿರಿಯ ಕಾನೂನು ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇತರ ಸಂಭಾವ್ಯ ಸ್ಪರ್ಧಿಗಳಲ್ಲಿ ಖಮೇನಿ ಕಚೇರಿಯ ದೀರ್ಘಕಾಲದಿಂದ ಮುಖ್ಯಸ್ಥರಾಗಿರುವ ಮೊಹಮ್ಮದ್ ಗೋಲ್ಪಾಯೆಗಾನಿ. ಮಾಜಿ ವಿದೇಶಾಂಗ ಸಚಿವರಾದ ಅಲಿ ಅಕ್ಬರ್ ವೆಲಾಯತಿ, ಕಮಲ್ ಖರಾಜಿ ಮತ್ತು ಮಾಜಿ ಸಂಸತ್ತಿನ ಸ್ಪೀಕರ್ ಅಲಿ ಲಾರಿಜಾನಿ ಸೇರಿದ್ದಾರೆ. ಎಲ್ಲರೂ ದೇಶೀಯ ಆಡಳಿತ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ, ವಿಶೇಷವಾಗಿ ಪರಮಾಣು ಮಾತುಕತೆಗಳಲ್ಲಿ ಆಳವಾದ ಅನುಭವ ಹೊಂದಿರುವ ಅನುಭವಿಗಳಾಗಿದ್ದಾರೆ.ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ
ಇರಾನ್ ಸರ್ವೋಚ್ಛ ನಾಯಕನ ಆಯ್ಕೆ ಹೇಗೆ?
ಇರಾನ್‌ನ ಸರ್ವೋಚ್ಛ ನಾಯಕ ನಿಧನರಾದಾಗ, ಅನರ್ಹರಾದಾಗ ಅಥವಾ ರಾಜೀನಾಮೆ ನೀಡಿದ ನಂತರ, ನಾಯಕತ್ವದಲ್ಲಿನ ನಿರ್ವಾತವನ್ನು ತುಂಬಲು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ತಜ್ಞರ ಸಭೆಯನ್ನು ಕರೆಯಲಾಗುತ್ತದೆ. ಸಭೆಯು ಸಾರ್ವಜನಿಕರಿಂದ ಆಯ್ಕೆಯಾದ ಇರಾನ್‌ನ ಗಾರ್ಡಿಯನ್ ಕೌನ್ಸಿಲ್‌ನಿಂದ ಪರಿಶೀಲಿಸಲ್ಪಟ್ಟ ಹಿರಿಯ ಧರ್ಮಗುರುಗಳಿಂದ ಕೂಡಿದೆ.
ಇದು ಎಂಟು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ 88 ಸದಸ್ಯರನ್ನು ಒಳಗೊಂಡಿರುವ ಒಂದು ಸಂಸ್ಥೆಯಾಗಿದೆ. ಅವರು ಮುಚ್ಚಿದ ಅಧಿವೇಶನದಲ್ಲಿ ಸಭೆ ಸೇರಿ ಸಾರ್ವಜನಿಕ ಪಾರದರ್ಶಕತೆ ಇಲ್ಲದ ರಹಸ್ಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುತ್ತಾರೆ ಮತ್ತು ಮತ ಚಲಾಯಿಸುತ್ತಾರೆ.
ಅವರು ಪ್ರತಿಯೊಬ್ಬ ಅಭ್ಯರ್ಥಿಯ ಧಾರ್ಮಿಕ ರುಜುವಾತುಗಳು, ರಾಜಕೀಯ ನಿಷ್ಠೆ ಮತ್ತು ಆಡಳಿತ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಚರ್ಚಿಸುತ್ತಾರೆ ಮತ್ತು ನಿರ್ಣಯಿಸುತ್ತಾರೆ. ಹೊಸ ಸುಪ್ರೀಂ ನಾಯಕನನ್ನು ನೇಮಿಸಲು 88 ಮತಗಳಲ್ಲಿ ಕನಿಷ್ಠ 45 ಮತಗಳ ಸರಳ ಬಹುಮತದ ಅಗತ್ಯವಿದೆ. ಬಣ ವಿವಾದಗಳನ್ನು ತಪ್ಪಿಸಲು ಸಭೆಯು ಒಮ್ಮತವನ್ನು ಬಯಸುತ್ತದೆ.
1989ರಲ್ಲಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಂತರ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅಧಿಕಾರಕ್ಕೆ ಬಂದರು. ಎರಡೂವರೆ ದಶಕಗಳಿಗೂ ಹೆಚ್ಚು ಕಾಲ, ಇರಾನ್ ಅನ್ನು ಅವರ ಮುಷ್ಟಿಯಿಂದ ಆಳಲಾಗಿದೆ. ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ನ್ಯಾಯಾಂಗ, ಸಶಸ್ತ್ರ ಪಡೆಗಳು, ರಾಜ್ಯ ಮಾಧ್ಯಮ, ಗಾರ್ಡಿಯನ್ ಕೌನ್ಸಿಲ್ ಮತ್ತು ಎಕ್ಸ್ಪೆಡಿಯೆನ್ಸಿ ಡಿಸರ್ನ್ಮೆಂಟ್ ಕೌನ್ಸಿಲ್‌ನಂತಹ ಪ್ರಮುಖ ಸಂಸ್ಥೆಗಳ ಮೇಲೆ ಅಂತಿಮ ಅಧಿಕಾರ ಹೊಂದಿದ್ದಾರೆ. ಅವರ ಮಾತುಗಳೇ ಇರಾನ್‌ಗೆ ಕಾನೂನು ಆಗಿರುತ್ತದೆ.ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ
ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಇದರ ನಡುವೆಯೂ ಭಾರತ (India) ತಟಸ್ಥವಾಗಿದೆ. ಆದರೆ ಯುದ್ಧದ ಪರಿಣಾಮದಿಂದಾಗಿ ದಿನಗಳೆದಂತೆ ಭಾರತಕ್ಕೆ ಆತಂಕ ಹೆಚ್ಚಾಗುತ್ತಿದೆ.
ಈ ಕುರಿತು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಪಕರು ಎಸ್.ಆರ್ ಕೇಶವ ಮಾತನಾಡಿ, ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ವಿವರಿಸಿದ್ದಾರೆ.
ಪರಿಣಾಮಗಳೇನು?
– ಹರಿಯಾಣ, ಪಂಜಾಬ್‌ನಿಂದ 30%-35%ರಷ್ಟು ಬಾಸುಮತಿ ಅಕ್ಕಿ ಇರಾನ್‌ಗೆ ರಫ್ತಾಗುತಿತ್ತು. ಸದ್ಯ ಇದಕ್ಕೆ ತಡೆಯಾಗುವ ಸಾಧ್ಯತೆಯಿದ್ದು, ಹಣದ ವಹಿವಾಟಿಗೆ ಇನ್ನೂ 6 ತಿಂಗಳು ಬೇಕಾಗಬಹುದು.
– ಗಲ್ಫ್ ಆಫ್ ಉಮಾನ್, ರೆಡ್ ಸೀ, ಹರ್ಮೂಜ್ ಜಲಸಂಧಿಯಲ್ಲಿ ಸಬ್‌ಮರೀನ್ ಕೇಬಲ್‌ಗಳನ್ನು ಹಾಕಲಾಗಿದೆ. ಇದರಿಂದಲೇ 95% ಗ್ಲೋಬಲ್ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇವುಗಳಿಂದ ಸೌತ್‌ಈಸ್ಟ್ ದೇಶಗಳಿಗೆ ಡಿಫೆನ್ಸ್, ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಕೇಬಲ್‌ಗಳಿಗೆ ಸಮಸ್ಯೆ ಆದರೆ ದೊಡ್ಡಮಟ್ಟದ ಹಾನಿಯಾಗುವ ಆತಂಕ ಉಂಟಾಗಿದೆ.
– ಇರಾನ್ ಪೋರ್ಟ್‌ನಲ್ಲಿ ಭಾರತ 80 ಬಿಲಿಯನ್ ಹೂಡಿಕೆ ಮಾಡಿದ್ದು, ಆತಂಕ ಹೆಚ್ಚಾಗಿದೆ.
ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಎರಡು ರಾಷ್ಟಗಳಿಂದ ಭಾರತ ಆಮದು ರಫ್ತನ್ನು ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ.ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ
ನವದೆಹಲಿ: ಇಸ್ರೇಲ್, ಇರಾನ್ ಮೇಲೆ ಪರಮಾಣು ಬಾಂಬ್ ಬಳಸಿದರೆ, ಪಾಕಿಸ್ತಾನ ಕೂಡ ಇಸ್ರೇಲ್ ಮೇಲೆ ಪರಮಾಣು ಬಾಂಬ್ (Nuclear Bomb) ದಾಳಿ ಮಾಡುತ್ತದೆ ಎಂದು ನಮಗೆ ತಿಳಿಸಿದೆ ಎಂದು ಐಆರ್‌ಜಿಸಿ ಕಮಾಂಡರ್ ಮತ್ತು ಇರಾನ್‌ನ (Iran) ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಜನರಲ್ ಮೊಹ್ಸೆನ್ ರೆಜೈ (Mohsen Rezaei) ನೀಡಿದ ಹೇಳಿಕೆಯನ್ನು ಪಾಕಿಸ್ತಾನ ನಿರಾಕರಿಸಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಮೊಹ್ಸೆನ್ ರೆಜೈ ದೂರದರ್ಶನ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದರು. ಆದರೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಈ ಹೇಳಿಕೆಯನ್ನು ತಳ್ಳಿಹಾಕಿ, ಪಾಕ್ ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭೀಮಾತೀರದ ನಕಲಿ ಎನ್‌ಕೌಂಟರ್ ಕೇಸ್ – ಜು.1ಕ್ಕೆ ವಿಚಾರಣೆ ಮುಂದೂಡಿಕೆ
ಈ ಬಗ್ಗೆ ಎಕ್ಸ್‌ಲ್ಲಿ ಪೋಸ್ಟ್ ಮಾಡಿರುವ ಆಸಿಫ್, ಪ್ರಸ್ತುತ ಅಸ್ಥಿರ ಪರಿಸ್ಥಿತಿಯ ನಡುವೆಯೂ ಇಸ್ರೇಲ್‌ನ (Isrel) ಅಘೋಷಿತ ಪರಮಾಣು ಶಸ್ತ್ರಗಾರವು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಲು ಧೈರ್ಯ ತುಂಬಬಹುದು. ಇದು ವ್ಯಾಪಕ ಪ್ರಾದೇಶಿಕ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಸೈಪ್ರಸ್‌ನ ಅತ್ಯುನ್ನತ ಗೌರವ
ಪರಮಾಣು ಪ್ರತೀಕಾರದ ಮಾತನ್ನು ಪಾಕಿಸ್ತಾನ (Pakistan) ತಿರಸ್ಕರಿಸಿದ್ದರೂ, ಪಾಕಿಸ್ತಾನವು `ಇರಾನ್‌ನ ಜೊತೆಗೆ ನಿಲ್ಲುವುದಾಗಿ’ ಹೇಳಿತ್ತು. ಅಲ್ಲದೇ ಯಹೂದಿ ರಾಷ್ಟ್ರವಾದ ಇಸ್ರೇಲ್ ವಿರುದ್ಧ ಮುಸ್ಲಿಂ ರಾಷ್ಟçಗಳ ಏಕತೆಗೆ ಕರೆ ನೀಡಿತ್ತು. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್
ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಮುಸ್ಲಿಂ ರಾಷ್ಟ್ರಗಳು ಸಂಬಂಧಗಳನ್ನು ಕಡಿದುಕೊಳ್ಳುವಂತೆ ಆಸಿಫ್ ಒತ್ತಾಯಿಸಿದ್ದರು. ಅಲ್ಲದೇ ಯಹೂದಿ ರಾಷ್ಟ್ರದ ವಿರುದ್ಧ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಇಸ್ಲಾಮಿಕ್ ಸಹಕಾರ ಸಂಸ್ಥೆ ಸಭೆ ಕರೆಯುವಂತೆ ಕರೆ ನೀಡಿದ್ದರು.
ಬೆಂಗಳೂರು: ಆಪರೇಷನ್ `ರೈಸಿಂಗ್ ಲಯನ್’ ಬಳಿಕ ಇಸ್ರೇಲ್-ಇರಾನ್ ((Israel-Iran Conflict)) ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಇರಾನ್‌ನಲ್ಲಿ ಸಿಲುಕಿರುವ ಕರ್ನಾಟಕದ 9 ವಿದ್ಯಾರ್ಥಿಗಳನ್ನ ಕರೆತರಲು ಕೋರಿ ವಿದೇಶಾಂಗ ಸಚಿವರಿಗೆ ರಾಜ್ಯ ನಾನ್ ರೆಸಿಡೆನ್ಸ್ ಫೋರಂ ಡೆಪ್ಯೂಟಿ ಚೇರ್ಮನ್ ಆರತಿ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: Israel-Iran Conflict | ಇಸ್ರೇಲ್ ಮಿಸೈಲ್ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ
ಕರ್ನಾಟಕ ಮೂಲದ 9 ವಿದ್ಯಾರ್ಥಿಗಳು ಇರಾನ್‌ನ ಟೆಹ್ರಾನ್ ನಗರದ ಜಫ್ರಾನಿಯಾ ಪ್ರದೇಶದ ತೌಪಿಕ್ ಅಲ್ಲೆಯಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ 9 ವಿದ್ಯಾರ್ಥಿಗಳು ಇರಾನ್‌ಗೆ ತೆರಳಿದ್ದರು. ಸದ್ಯ ಇರಾನ್-ಇಸ್ರೇಲ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ವಿದ್ಯಾರ್ಥಿಗಳು, ಇರಾನ್‌ನ ಭಾರತೀಯ ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಆರತಿ ಕೃಷ್ಣ ಅವರು ಕೂಡ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಅಣ್ವಸ್ತ್ರ ಮಿಲಿಟರಿ ನೆಲೆಗಳ ಬಳಿಕ ಇರಾನ್‌ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಲು ಶುರು ಮಾಡಿದೆ. ಇರಾನ್‌ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್!