Tag: Ira

  • ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಗಿಣಿಮರಿಗಳ ಜೊತೆಗೆ ಒಂದು ದಿನ ಕಳೆದ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’

    ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ ನಟ ಯಶ್. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದಾರೆ.

    ಮಂಗಳವಾರ ಇಡೀ ದಿನ ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಸಮಯ ಕಳೆದಿರುವ ಯಶ್, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. ಗಿಣಿಗಳನ್ನು ಮೈಮೇಲೆ ಬಿಟ್ಟುಕೊಂಡು ನಲಿದಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

    ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

    ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಕಥೆಯನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಮೂರು ನಿರ್ಮಾಣ ಸಂಸ್ಥೆಗಳು ಯಶ್ ಸಿನಿಮಾವನ್ನು ತಯಾರಿಸಲು ಮುಂದೆ ಬಂದಿದ್ದು, ಯಾವ ನಿರ್ಮಾಣ ಸಂಸ್ಥೆಯು ಇವರ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

  • ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್

    ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್

    ಬೆಂಗಳೂರು: ಚಂದನವನದ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳು ಐರಾ ಗೆ ಅ, ಆ, ಇ, ಈ ಕಲಿಸುತ್ತಿದ್ದಾರೆ.

    ಯಶ್ ನಟನೆಯ ಜೊತೆಗೆ ತಮ್ಮ ಕುಟುಂಬಕ್ಕೂ ಅಷ್ಟೇ ಸಮಯವನ್ನು ಮೀಸಲಿಡುತ್ತಾರೆ. ಇಂದು ಯಶ್ ಫ್ಯಾಮಿಲಿ ಜೊತೆ ಮನೆಯಲ್ಲೇ ಎಂಜಾಯ್ ಮಾಡುತ್ತಿದ್ದು, ಮಗಳಿಗೆ ಕನ್ನಡ ಕಲಿಸಿಕೊಂಡುತ್ತಿದ್ದಾರೆ. ಈ ಮುದ್ದಾದ ವೀಡಿಯೋವನ್ನು ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ವೀಕೆಂಡ್ ಸ್ವೆಷಲ್ ಕ್ಲಾಸ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

    ವೀಡಿಯೋದಲ್ಲಿ ಯಶ್ ಸೋಫಾ ಮೇಲೆ ಕುಳಿತುಕೊಂಡಿದ್ದು, ಅವರ ತೊಡೆಯ ಮೇಲೆ ಐರಾ ಕುಳಿತುಕೊಂಡಿದ್ದಾಳೆ. ಆಗ ಯಶ್ ಐರಾಗೆ ಅ, ಆ, ಇ, ಈ ಎಂದು ಕನ್ನಡ ವರ್ಣಮಾಲೆಗಳನ್ನು ಹೇಳಿಕೊಂಡುತ್ತಾರೆ. ಆಗ ಐರಾ ಸಹ ಯಶ್ ಹೇಳಿದ ರೀತಿಯಲ್ಲಿಯೇ ಕ್ಯೂಟ್ ಆಗಿ ಹೇಳುತ್ತಾಳೆ. ಯಶ್ ಮಗಳನ್ನು ಸೂಪರ್ ಎಂದು ಹೈ ಫೈವ್ ಕೊಡುತ್ತಾರೆ.

     

    View this post on Instagram

     

    A post shared by Radhika Pandit (@iamradhikapandit)

    ಈ ವೀಡಿಯೋ ನೋಡಿದ ನೆಟ್ಟಿಗರು, ಕ್ಲಾಸ್ ಸೂಪರ್, ನಮ್ ಐರಾ ಸಕ್ಕತ್ ಫಾಸ್ಟ್ ಎಂದು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಯಶ್‍ಗೆ ಕನ್ನಡದ ಮೇಲಿನ ಅಭಿಮಾನವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ:  ಕೆಜಿಎಫ್ ಸಿನಿಮಾದ ಹಾಡಿಗೆ ಕಿಲಿ ಪೌಲ್ ಮಸ್ತ್ ಸ್ಟೆಪ್ಸ್

    ಎರಡುವಾರದ ಹಿಂದೆಯಷ್ಟೇ 36ನೇ ವಸಂತಕ್ಕೆ ಕಾಲಿಟ್ಟ ಯಶ್ ಸಖತ್ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಯಶ್ ಅಭಿಮಾನಿಗಳು ಹಸಿರು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ನಡೆಯಿತು. ಯಶ್ ಅವರ ‘ಕೆಜಿಎಫ್-2’ ಸಿನಿಮಾಗಾಗಿ ಸಿನಿಮಾರಂಗವೇ ಕಾಯುತ್ತಿದ್ದು, ಇದೇ ವರ್ಷ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ತಿಳಿಸಿದೆ.

  • ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    – ಧನಂಜಯ್ ತೆಲುಗು ಚಿತ್ರದ ನಾಯಕಿ ಇರಾ

    ಬೆಂಗಳೂರು: ಈಗ ಟಗರು ಡಾಲಿಯ ಅಬ್ಬರ ತೆಲುಗಿನಲ್ಲಿಯೂ ಶುರುವಾಗಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಡಾಲಿ ಪಾತ್ರದ ಪ್ರಭಾವದಿಂದಲೇ ಧನಂಜಯ್‍ಗೆ ತೆಲುಗಿನ `ಭೈರವ ಗೀತ’ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶ ಒದಗಿ ಬಂದಿದೆ. ಮೊನ್ನೆಯಷ್ಟೇ ಚಿತ್ರೀಕರಣ ಶುರುವಿಟ್ಟುಕೊಂಡಿರೋ ಈ ಚಿತ್ರಕ್ಕೆ ತೆಲುಗು ನಟಿ ಇರಾ ನಾಯಕಿಯಾಗಿ ಆಗಮಿಸಿದ್ದಾಳೆ!

    ಭೈರವನಿಗೆ ಗೀತಾ ಆಗಿ ಜೊತೆಯಾಗಲಿರೋ ಇರಾ, ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ್ದ ಪ್ರತಿಭೆ. ಆರ್‍ಜಿವಿ ಪ್ರೊಡಕ್ಷನ್ ಚಿತ್ರದ ಮೂಲಕವೇ ನಟಿಯಾಗಿದ್ದ ಇರಾಳನ್ನು ವರ್ಮಾ ಸ್ವತಃ ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ವರ್ಮಾ ಮತ್ತು ಭಾಸ್ಕರ್ ಸೇರಿಕೊಂಡು ನಿರ್ಮಾಣ ಮಾಡುತ್ತಿರೋ ಈ ಚಿತ್ರವನ್ನು ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ.

    ಆರ್‍ಜಿವಿ ಈ ಹಿಂದೆ ಬೆಂಗಳೂರಿನ ಒರಾಯನ್ ಮಾಲಿಗೆ ಆಗಮಿಸಿ ಟಗರು ಚಿತ್ರ ನೋಡಿದ್ದರು. ಅದರಲ್ಲಿನ ಡಾಲಿ ಪಾತ್ರವನ್ನು ಮತ್ತು ಅದರೆಲ್ಲಿ ನಟಿಸಿದ್ದ ಧನಂಜಯ್‍ನನ್ನು ಮೆಚ್ಚಿಕೊಂಡಿದ್ದ ಆರ್‍ಜಿವಿ ಆ ಕ್ಷಣವೇ ಭೈರವ ಗೀತಾ ಚಿತ್ರಕ್ಕೆ ಮುಹೂರ್ತವಿಟ್ಟಿದ್ದರು. ಈ ಒಂದು ಪಾತ್ರದ ಮೂಲಕವೇ ಧನಂಜಯ್ ನಟನಾ ಚಾತುರ್ಯವನ್ನು ಗಮನಿಸಿರುವ ವರ್ಮಾ ಅದಕ್ಕೆ ತಕ್ಕುದಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

    ಈಗಾಗಲೇ ಭೈರವ ಗೀತ ಚಿತ್ರದ ಚಿತ್ರೀಕರಣ ಶುರುವಾಗಿದೆ. ಹೈದ್ರಾಬಾದಿನ ಹಳ್ಳಿಯೊಂದರಲ್ಲಿ ಚಿತ್ರ ತಂಡ ಬೀಡು ಬಿಟ್ಟು ಧನಂಜಯ್ ಭಾಗದ ಚಿತ್ರೀಕರಣವನ್ನು ನಡೆಸುತ್ತಿದೆ. ಧನಂಜಯ್ ಲುಂಗಿ ಬನಿಯನ್ನಿನ ರಗಡ್ ಲುಕ್ಕಿನಲ್ಲಿ ಮಿಂಚುತ್ತಿದ್ದಾರೆ. ಇದು ತೆಲುಗಿನಲ್ಲಿ ಧನಂಜಯ್ ಪಾಲಿಗೆ ಮೊದಲ ಚಿತ್ರ. ಈ ಚಿತ್ರದ ಮೊದಲ ದಿನದ ಚಿತ್ರೀಕರಣ ಮೊದಲ ದಿನ ಶಾಲೆಗೆ ಹೋದಂತೆಯೇ ಇತ್ತು ಅಂದಿರುವ ಧನಂಜಯ್ ಈ ಚಿತ್ರದ ಮೂಲಕ ತೆಲುಗಿನಲ್ಲಿಯೂ ನೆಲೆ ಕಂಡುಕೊಳ್ಳುವ ಲಕ್ಷಣಗಳಿದ್ದಾವೆ!