Tag: IPS Roopa

  • ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

    ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಕಂಗೊಳಿಸಿ ಅಚ್ಚರಿ ಮೂಡಿಸಿದ IPS ರೂಪಾ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ (IPS Officer Roopa) ಅವರು ಎಲ್ಲರಿಗೂ ಚಿರಪರಿಚಿತ. ಖಡಕ್ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಅವರು ಒಂದು ಫೋಟೋಶೂಟ್ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.

    ಹೌದು. ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂತೆಯೇ ಹಬ್ಬದ ಪ್ರಯುಕ್ತ ಕೆಲವರು ಫೋಟೋಶೂಟ್ (D Roopa Photoshoot) ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇಂದು ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಪೊಲೀಸ್ ಯೂನಿಫಾರ್ಮ್‍ನಲ್ಲಿ ಇರುತ್ತಿದ್ದ ರೂಪಾ ಅವರು ಇದೀಗ ಕೈಯಲ್ಲಿ ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣ ಬ್ಲೌಸ್, ಮೈತುಂಬಾ ಆಭರಣ ತೊಟ್ಟು ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುದಕ್ಕೆ ಡಿ ರೂಪಾ ಉತ್ತಮ ನಿದರ್ಶನ ಎಂದು ಫೋಟೋ ಅಪ್ಲೋಡ್ ಮಾಡಿರುವ ಭಾರ್ಗವಿ ಕೆ. ಆರ್ ಎಂಬವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಹಬ್ಬದ ಸಂಭ್ರಮದಲ್ಲಿ ಯಶ್- ರಾಧಿಕಾ ದಂಪತಿ

    ರೂಪ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆಯೇ ಹಲವಾರು ಕಾಮೆಂಟ್‍ಗಳು ಬರತೊಡಗಿದವು. ಕೆಲವರು ಹ್ಯಾಟ್ಸಾಫ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಅಂದ್ರೆ ಇನ್ನೂ ಕೆಲವರು ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಹಾಗೂ ಜೈ ದುರ್ಗಿ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ

    ರೋಹಿಣಿ ಸಿಂಧೂರಿ ಸ್ವಿಮ್ಮಿಂಗ್ ಪೂಲ್ ವಿವಾದ – ಟ್ವಿಟ್ಟರ್‌ನಲ್ಲಿ ತಿವಿದ ಐಜಿಪಿ ರೂಪಾ

    ಬೆಂಗಳೂರು: ರೋಹಿಣಿ ಸಿಂಧೂರಿ ಮೈಸೂರು ಡಿಸಿಯಾಗಿದ್ದಾಗ ಸರ್ಕಾರಿ ನಿವಾಸದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸ್ವಿಮ್ಮಿಂಗ್ ಪೂಲ್ ಮಾಡಿಸಿದ ಕ್ರಮ ಸಾಕಷ್ಟು ಟೀಕೆಗೆ ಒಳಗಾಯ್ತು. ಈಗ ಐಜಿಪಿ ರೂಪಾ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ  ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ತಿವಿದಿದ್ದಾರೆ.

    ಕೊರೊನಾ ಹಾಗೂ ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವ ಸಂದರ್ಭದಲ್ಲಿ ಜನರ ಹಣ ಅಂದರೆ ಸಾರ್ವಜನಿಕ ಹಣವ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಲು ಮುಂದಾಗಿದ್ದು ಮೊಟ್ಟ ಮೊದಲನೆಯದಾಗಿ ರೋಹಿಣಿ ಐಎಎಸ್ ಅವರ ನೈತಿಕ ಪತನ ಎದ್ದು ತೋರಿಸುತ್ತದೆ. ಕಟ್ಟಲು ಪರವಾನಗಿ ತೆಗೆದುಕೊಂಡಿಲ್ಲ ಎನ್ನುವುದು ನಂತರದ ವಿಚಾರ. ಕಟ್ಟುವುದನ್ನು ಮುಂದೂಡಬಹುದಿತ್ತು ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ್ರು ರೋಹಿಣಿ ಸಿಂಧೂರಿ – ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

    ಟ್ವೀಟ್‍ನಲ್ಲಿ ರೋಹಿಣಿ ಫೋಟೋ ಹಾಕಿ ಡಿ ರೂಪ ಉಲ್ಲೇಖ ಮಾಡಿದ್ದಾರೆ. ರೂಪಾ ಅವರ ಟ್ವೀಟ್‍ಗೆ ಸಿಂಧೂರಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.

  • ರಾಜಕೀಯಕ್ಕೆ ಧುಮುಕಲು ಅಣ್ಣಾಮಲೈ ನಿವೃತ್ತಿ – ಐಪಿಎಸ್ ರೂಪಾ ಶುಭಾಶಯ

    ರಾಜಕೀಯಕ್ಕೆ ಧುಮುಕಲು ಅಣ್ಣಾಮಲೈ ನಿವೃತ್ತಿ – ಐಪಿಎಸ್ ರೂಪಾ ಶುಭಾಶಯ

    ಬೆಂಗಳೂರು: ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಇದೀಗ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಪ್ರತಿಕ್ರಿಯಿಸಿದ್ದಾರೆ.

    ರೂಪಾ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. “ನಾನು ಅಣ್ಣಾಮಲೈ ಜೊತೆ ಮಾತನಾಡಿದ್ದೇನೆ. ಇಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಅವರ ರಾಜಕೀಯಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಐಪಿಎಸ್ ಅಧಿಕಾರಿಯಾಗಲೂ ಕಠಿಣ ಶ್ರಮ ಪಡಬೇಕಾಗುತ್ತದೆ. ಅದೇ ರೀತಿ ಆ ಕೆಲಸಕ್ಕೆ ರಾಜೀನಾಮೆ ನೀಡಲು ತುಂಬಾ ಧೈರ್ಯ ಬೇಕು. ಇಂತಹ ಸಾಧಕರು ರಾಜಕೀಯಕ್ಕೆ ಹೋಗುವುದನ್ನು ನೋಡಲು ಚೆನ್ನಾಗಿರುತ್ತದೆ” ಬರೆದು ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

    ಅಣ್ಣಾಮಲೈ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ನೀಲಮಣಿ ರಾಜು ಅವರು ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಿ, ಬಳಿಕ ಅದು ಗೃಹ ಕಾರ್ಯದರ್ಶಿ ಹೋಗುತ್ತದೆ. ಅಂತಿಮವಾಗಿ ಕೇಂದ್ರ ಯುಪಿಎಸ್ಸಿಗೆ ತಲುಪಿದ ಬಳಿಕ ರಾಜೀನಾಮೆ ಅಂಗಿಕಾರವಾಗುತ್ತದೆ. ಇದನ್ನೂ ಓದಿ: ರಾಜೀನಾಮೆಯ ವಿಚಾರಕ್ಕೆ ಸ್ಪಷ್ಟನೆ ನೀಡಿದ ಡಿಸಿಪಿ ಅಣ್ಣಾಮಲೈ

    ಅಣ್ಣಾಮಲೈ ರಾಜೀನಾಮೆಗೆ ತಂದೆ- ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದು ಪ್ಲಾನ್ ಮಾಡಿದ್ದೆ. ಚುನಾವಣೆ ಮುಗಿಸದೇ ಹೋದರೆ ಸರಿ ಹೋಗಲ್ಲ ಎಂದು ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್‍ಸಿ ಪರೀಕ್ಷೆ ಬರೆದಿದ್ದೆ. ನನಗೆ ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ನಾನು ಯಾವ ರಾಜಕೀಯಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಮುಂದಿನ ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜೀನಾಮೆ ಬಳಿಕ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗುತ್ತೇನೆ. ಅಲ್ಲದೇ ನನ್ನ ಕುಟುಂಬಕ್ಕೆ ಟೈಂ ಸಹ ಕೋಡುತ್ತೇನೆ. ನನ್ನ ಮಗ ಓದುತ್ತಿದ್ದಾನೆ ಅವನ ಜೊತೆ ಇರುತ್ತೇನೆ. 33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ಆದರೆ ನಾನು ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೆ ಬೇರೆ ಜೀವನ ಇದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.