Tag: IPS officers

  • ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು (IPS Officers) ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

    ಆರ್‌ಸಿಬಿ (RCB) ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು. ಇದನ್ನೂ ಓದಿ: ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿದ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

  • ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ಕೇಸ್‌ಗೆ ಸಂಬಂಧಿಸಿದ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾಳೆಯೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

    ಯುಪಿಎಸ್‌ಸಿ ನಿಯಾಮವಳಿಗಳ ಪ್ರಕಾರ 15 ದಿನದೊಳಗಾಗಿ ವರದಿ ಸಲ್ಲಿಸಬೇಕು. ಐಪಿಎಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ರೆ ವರದಿ ಸಲ್ಲಿಸಬೇಕು. ಆದರೆ, ಅಮಾನತು ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನಷ್ಟೇ ನೀಡಿರುವ ರಾಜ್ಯ ಸರ್ಕಾರ ಲಿಖಿತ ವರದಿ ನೀಡಬೇಕಿದೆ. ಡಿಪಿಎಆರ್‌ನಿಂದಲೇ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ವರದಿ ತಯಾರಾಗಿದೆ. ಇದನ್ನೂ ಓದಿ: ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಐಪಿಎಸ್ ಅಧಿಕಾರಿಗಳಾದ ದಯಾನಂದ್, ಶೇಖರ್, ವಿಕಾಸ್ ಕುಮಾರ್ ಅವರನ್ನು ಚಿನ್ನಸ್ವಾಮಿ ಕಾಲ್ತುಳಿತದ ಕರ್ತವ್ಯಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ವರದಿಯಲ್ಲೂ ಪೊಲೀಸರ ಲೋಪ ಎತ್ತಿ ಹಿಡಿದಿದ್ಯಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.

    ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹೊಣೆ ಪೊಲೀಸರದ್ದಾಗಿದ್ದು, ಐಪಿಎಸ್ ಅಧಿಕಾರಿಗಳ ಮೇಲೆ ಕರ್ತವ್ಯಲೋಪದ ಚಾರ್ಜ್‌ಶೀಟ್ ಇದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಸಸ್ಪೆಂಡ್ ರಿಪೋರ್ಟ್ ಏನಾಗುತ್ತೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಸ್ಪೆಂಡ್ ಕ್ರಮವನ್ನ ಎತ್ತಿ ಹಿಡಿಯುತ್ತಾ ಅಥವಾ ರಿಜೆಕ್ಟ್ ಮಾಡುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

  • ಕಲ್ಲಿದ್ದಲು ಹಗರಣ – 8 ಐಪಿಎಸ್‌ ಅಧಿಕಾರಿಗಳಿಗೆ ED ಸಮನ್ಸ್‌

    ಕಲ್ಲಿದ್ದಲು ಹಗರಣ – 8 ಐಪಿಎಸ್‌ ಅಧಿಕಾರಿಗಳಿಗೆ ED ಸಮನ್ಸ್‌

    ನವದೆಹಲಿ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಎಂಟು ಐಪಿಎಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ.

    ಐಪಿಎಸ್ ಅಧಿಕಾರಿಗಳಾದ ಜ್ಞಾನವಂತ್ ಸಿಂಗ್, ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್, ಶ್ಯಾಮ್ ಸಿಂಗ್, ರಾಜೀವ್ ಮಿಶ್ರಾ, ಸುಕೇಶ್ ಕುಮಾರ್ ಜೈನ್, ತಥಾಗತ ಬಸು ಸೇರಿ 8 ಐಪಿಎಸ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದನ್ನೂ ಓದಿ: ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ

    ಐಪಿಎಸ್ ಅಧಿಕಾರಿಗಳು ಪಶ್ಚಿಮ ಬಂಗಾಳದವರಾಗಿದ್ದು, ಅವರ ವಿಚಾರಣೆ ಆಗಸ್ಟ್ 21 ರಿಂದ ಆಗಸ್ಟ್ 31ರ ನಡುವೆ ಪ್ರಾರಂಭವಾಗುವ ಸಾಧ್ಯತೆ ಇದೆ. ಸಮನ್ಸ್‌ ಜಾರಿ ಮಾಡಿರುವ ಐಪಿಎಸ್‌ ಅಧಿಕಾರಿಗಳನ್ನು ಕಲ್ಲಿದ್ದಲು ಅಕ್ರಮ ಗಣಿಗಾರಿಕೆ ಮತ್ತು ಕಳ್ಳಸಾಗಣೆ ನಡೆಯುತ್ತಿರುವ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಅಧಿಕೃತ ವಾಹನಗಳಲ್ಲಿ ನಗದು ಸಾಗಣೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

    ಟಿಎಂಸಿ ಯುವ ನಾಯಕ ಮತ್ತು ಪ್ರಕರಣದ ಪ್ರಮುಖ ಆರೋಪಿ ವಿನಯ್ ಮಿಶ್ರಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನಿಕಟ ಸಹವರ್ತಿ ಎಂದು ಹೇಳಲಾಗಿದ್ದು, ಈ ವರ್ಷ ಮಾರ್ಚ್‌ನಲ್ಲಿ ಇಡಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: ಜಾನುವಾರು ಅಕ್ರಮ ಸಾಗಣೆ – ಮಮತಾ ಬ್ಯಾನರ್ಜಿ ಆಪ್ತ ಬಂಧನ

    ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಇ.ಡಿ ಕೂಡ ಸಮಾನಾಂತರ ತನಿಖೆ ನಡೆಸುತ್ತಿದೆ. 2020ರ ನವೆಂಬರ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಪಶ್ಚಿಮ ಬಂಗಾಳದ ಪಶ್ಚಿಮ ಭಾಗಗಳಲ್ಲಿ ದಂಧೆ ನಡೆಯುತ್ತಿದೆ. ಹಲವು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಿ ಬ್ಲಾಕ್‌ ಮಾರ್ಕೆಟ್‌ನಲ್ಲಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಕಳೆದ ವರ್ಷ ಫೆಬ್ರವರಿ 21 ರಂದು ಸಿಬಿಐ ತಂಡವು ಅಭಿಷೇಕ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಅವರ ಪತ್ನಿ ರುಜಿರಾ ಮತ್ತು ಅವರ ಸೊಸೆ ಮೇನಕಾ ಗಂಭೀರ್ ಅವರಿಗೆ ಸಮನ್ಸ್‌ ನೀಡಿತ್ತು.

    ಕಲ್ಲಿದ್ದಲು ನಿರ್ವಾಹಕ ಅನೂಪ್ ಮಾಝಿ ಅಲಿಯಾಸ್ ಲಾಲಾ ಈ ಪ್ರಕರಣದ ಪ್ರಮುಖ ಶಂಕಿತ ಆರೋಪಿ. ಕೆಲ ಸಂಸದರು ಈ ಅಕ್ರಮ ವಹಿವಾಟಿನ ಫಲಾನುಭವಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಿದೆ ಎಂದು ಇ.ಡಿ ತಿಳಿಸಿದೆ. ಇದನ್ನೂ ಓದಿ: ಕುಡುಗೋಲು ಹಿಡಿದು ಫಿಲ್ಮಂ ಸ್ಟೈಲ್‍ನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿದ ಕೌನ್ಸಿಲರ್ ಪತಿ

    Live Tv
    [brid partner=56869869 player=32851 video=960834 autoplay=true]

  • 22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    22 ಐಪಿಎಸ್‌ ಅಧಿಕಾರಿಗಳು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ

    ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಒಟ್ಟು 22 ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

    ಕಳೆದ ಐದು ವರ್ಷಗಳಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿರುವ ಐಪಿಎಸ್ ಅಧಿಕಾರಿಗಳ ಸಂಖ್ಯೆ ಕುರಿತು ರಾಜ್ಯಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಅವರು, 2017 ರಿಂದ 2022 ಮಾರ್ಚ್ 30 ರವರೆಗೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 22 ಐಪಿಎಸ್ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್‍ರನ್ನು ವಶಕ್ಕೆ ಪಡೆದ ಸಿಬಿಐ

    ಉತ್ತರ ಪ್ರದೇಶದಲ್ಲಿ ಪರಾರಿಯಾಗಿರುವ ಐಪಿಎಸ್ ಅಧಿಕಾರಿಗಳ ಸಂಖ್ಯೆ ಕುರಿತು ಕೇಳಿದಾಗ, ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ ಒಬ್ಬ ಐಪಿಎಸ್ ಅಧಿಕಾರಿಯನ್ನು ಪರಾರಿ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ದೇಶದಲ್ಲಿ ಪೊಲೀಸ್ ಪಡೆಗಳ ನಡುವೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಸತ್ಯವೇ? ಅಂತಹ ಪ್ರವೃತ್ತಿಗೆ ಕಾರಣಗಳನ್ನು ಕಂಡುಹಿಡಿಯಲು ಅಧ್ಯಯನ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಯನ್ನು ಸಹ ಕೇಳಲಾಯಿತು. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್

    ಪೊಲೀಸ್ ಪಡೆಗಳಲ್ಲಿನ ಅಪರಾಧ ಪ್ರಕರಣಗಳನ್ನು ದಾಖಲಿಸುವುದು ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ ಎಂದು ರೈ ಸ್ಪಷ್ಟಪಡಿಸಿದ್ದಾರೆ.

  • IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಬೆಂಗಳೂರು: ಐಪಿಎಸ್ ರವಿ ಚೆನ್ನಣ್ಣವರ್ ವರ್ಗಾವಣೆ ಆದೇಶಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಈ ಮೂಲಕ ಒಂದೇ ದಿನಕ್ಕೆ ಸರ್ಕಾರ ತನ್ನ ಆದೇಶವನ್ನು ತಡೆಹಿಡಿದಿದೆ.

    ಎರಡು ದಿನಗಳ ಹಿಂದೆ ರವಿ ಡಿ.ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸಿಐಡಿ ಎಸ್‍ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾಯಿಸಲಾಗಿತ್ತು. ಆದರೆ ಇದೀಗ ಸರ್ಕಾರ ಮುಂದಿನ ಆದೇಶದವರೆಗೆ ತಡೆಹಿಡಿದಿದೆ.

    ಕೆಲ ದಿನಗಳಿಂದ ರವಿ ಡಿ.ಚನ್ನಣ್ಣನವರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ಪರ-ವಿರೋಧ ಚರ್ಚೆಗಳೂ ನಡೆಯುತ್ತಿವೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಪ್ರಸಾರವಾಗದಂತೆ ಕ್ರಮವಹಿಸಲು ಚನ್ನಣ್ಣನವರ್ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು. ಇದರ ಮಧ್ಯೆಯೇ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

    ಸಿಐಡಿಯಿಂದ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ, ಎಸಿಬಿಯಿಂದ ಅಬ್ದುಲ್ ಅಹದ್‍ರನ್ನು ಕೆಎಸ್‍ಆರ್‍ಟಿಸಿ ವಿಜಿಲೆನ್ಸ್, ಕಾರಾಗೃಹ ಇಲಾಖೆ ಎಸ್‍ಪಿ ಟಿ.ಪಿ.ಶಿವಕುಮಾರ್ರನ್ನು ಚಾಮರಾಜನಗರ ಎಸ್‍ಪಿ, ಡೆಕ್ಕ ಕಿಶೋರ್ ಬಾಬುರನ್ನು ಬೀದರ್ ಎಸ್‍ಪಿ ಹಾಗೂ ಅರುಣಂಗ್ಯು ಗಿರಿ ಅವರನ್ನು ಕೊಪ್ಪಳ ಎಸ್‍ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

  • ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

    ಹೋಮ್ ಮಿನಿಸ್ಟರ್ ತವರಲ್ಲೇ ಐಪಿಎಸ್ ಅಧಿಕಾರಿಗಳ ವಾರ್

    ಧಾರವಾಡ/ಹುಬ್ಬಳ್ಳಿ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತವರೂರಿನಲ್ಲೇ ಐಪಿಎಸ್ ಅಧಿಕಾರಗಳ ವಾರ್ ತಾರಕಕ್ಕೇರಿದೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಆರ್ ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ್ ಮಧ್ಯೆ ಜಗಳ ಶುರುವಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ಇದೀಗ ಪೊಲೀಸ್ ಮಹಾನಿರ್ದೇಶಕರವರೆಗೂ ತಲುಪಿದೆ.

    ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಆರ್.ದಿಲೀಪ್ ಇಲಾಖೆಯ ವಿಚಾರಗಳು, ಅಕ್ರಮ ಚಟುವಟಿಕೆ, ಕೋವಿಡ್ 19 ವಿಚಾರದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ವಿಚಾರ ಹಾಗೂ ಸಾಮಾಜಿಕ ಅಂತರ ಕಾಪಾಡುವ ವಿಚಾರದ ಬಗ್ಗೆ ಚರ್ಚೆ ಮಾಡಲು ಅನುಮತಿ ನೀಡುತ್ತಿಲ್ಲವೆಂದು ಡಿಸಿಪಿ ಕೃಷ್ಣಕಾಂತ್ ಆರೋಪಿಸಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

    ಡಿಸಿಪಿ ಆಗಿರುವ ತಾವೂ ಆಯುಕ್ತರನ್ನ ಭೇಟಿ ಮಾಡಲು ಇಂಟರಕಾಮ್ ಫೋನ್ ಮೂಲಕ ಸಂಪರ್ಕ ಮಾಡಿದರೂ ಭೇಟಿಗೆ ಅವಕಾಶ ನೀಡುತ್ತಿಲ್ಲ. 2,230 ಗಂಟೆಗಳ ಕಾಲ ಆಯುಕ್ತರ ಭೇಟಿಗೆ ಕಾಯ್ದರು ಅವಕಾಶ ನೀಡದ ಪರಿಣಾಮ ತಾವೂ ಕಂಟ್ರೋಲ್ ರೂಂ ಮೂಲಕ ಪತ್ರ ಸಲ್ಲಿಸಿರುವುದಾಗಿ ಕೃಷ್ಣಕಾಂತ್ ಹೇಳಿದ್ದಾರೆ. ಅಲ್ಲದೇ ಪತ್ರದ ಪ್ರತಿಯನ್ನ ಪೊಲೀಸ ಮಹಾನಿರ್ದೇಶಕರಿಗೂ ಕಳುಹಿಸಿದ್ದಾರೆ.

    ಪೊಲೀಸ್ ಆಯುಕ್ತ ಆರ್ ದಿಲೀಪ್, ಈ ಹಿಂದೆಯೂ ಡಿಸಿಪಿ ಹಾಗೂ ಎಸಿಪಿಗಳ ಜೊತೆಗೆ ಇದೇ ರೀತಿಯಲ್ಲಿ ಜಗಳ ಮಾಡಿಕೊಂಡಿದ್ದರು. ಇದೀಗ ಡಿಸಿಪಿಯೊಂದಿಗೆ ಮತ್ತೊಮ್ಮೆ ಜಗಳ ಮಾಡಿಕೊಂಡಿರುವುದು ಜಗಜ್ಹಾಹೀರ್ ಆಗಿರುವುದು ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ.

    ಪೊಲೀಸ್ ಕಮೀಷನರ್ ಆರ್ ದಿಲೀಪ್ ಕಚೇರಿ ಬಿಟ್ಟು  ಫೀಲ್ಡ್ ಗೆ ಬರದೇ ಕಾರ್ಯನಿರ್ವಹಿಸಿರುವ ವಿಚಾರವಾಗಿ ಈ ಹಿಂದೆ ಸ್ವತಃ ಗೃಹ ಸಚಿವರೇ ಆಯುಕ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಗೃಹ ಸಚಿವರ ಎಚ್ಚರಿಕೆಯ ನಂತರವೂ ಆಯುಕ್ತರು ಹಾಗೂ ಡಿಸಿಪಿ ಜಗಳ ತಾರಕಕ್ಕೇರಿರುವುದು ಪೊಲೀಸ್ ಇಲಾಖೆಯ ಒಳ ಹುಳಕುಗಳನ್ನ ಹೊರ ಹಾಕಿದಂತಾಗಿದೆ.

    ಪೊಲೀಸ್ ಇಲಾಖೆಯಲ್ಲಿನ ಒಂದು ಅನುದಾನದ ವಿಚಾರವಾಗಿ ಈ ಒಳಜಗಳ ಆರಂಭವಾಗಿದ್ದು. ಡಿಸಿಪಿಯೊಂದಿಗೆ ಚರ್ಚೆ ಮಾಡದೇ ಪೊಲೀಸ್ ಕಮೀಷನರ್ ಆರ್ ದಿಲೀಪ್ ಎಕಾಎಕಿ ತೀರ್ಮಾನ ಕೈಗೊಳ್ಳಲು ಮುಂದಾಗಿರುವುದೇ ಐಪಿಎಸ್ ಅಧಿಕಾರಿಗಳ ಒಳಜಗಳಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಈ ಇಬ್ಬರು ಐಪಿಎಸ್ ಅಧಿಕಾರಿಗಳ ಒಳಜಗಳವನ್ನ ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರು ಹೇಗೆ ಬಗೆಹರಿಸ್ತಾರೆ ಅನ್ನೋದು ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

  • ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ – 19 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ – 19 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    -ಚನ್ನಣ್ಣನವರ್ ಸಿಐಡಿ ಎಸ್‍ಪಿ ಆಗಿ ನೇಮಕ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಿದ್ದು, ಬರೋಬ್ಬರಿ 19 ಮಂದಿ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಲಾಗಿದೆ.

    ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ವರ್ಗಾವಣೆಯಾಗಿದ್ದಾರೆ. ಐಜಿಪಿ ರ್‍ಯಾಂಕ್ ನಿಂದ ಎಡಿಜಿಪಿಗೆ ಬಡ್ತಿ ನೀಡಿ ಕಮಿಷನರ್ ಆಗಿ ನೇಮಕಗೊಂಡಿದ್ದು, ಟಿ.ಸುನಿಲ್ ಕುಮಾರ್ ವಿಭಾಗ ಎಡಿಜಿಪಿ ಆಗಿ ವರ್ಗಾವಣೆಯಾಗಿದ್ದಾರೆ.

    ವರ್ಗಾವಣೆಯಾದ ಅಧಿಕಾರಿಗಳು:
    * ಅಮ್ರಿತ್ ಪೌಲ್ –  ಈಸ್ಟರ್ನ್ ರೇಂಜ್ ಐಜಿಪಿ ಆಗಿ ವರ್ಗಾವಣೆ
    * ಉಮೇಶ್ ಕುಮಾರ್ – ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ
    * ಬಿ.ಕೆ ಸಿಂಗ್ – ಗೃಹ ಇಲಾಖೆಯ ಕಾರ್ಯದರ್ಶಿ (PCAS)ಯಾಗಿ ವರ್ಗಾವಣೆ
    * ಸೌಮೆಂದು ಮುಖರ್ಜಿ-  ಬೆಂಗಳೂರು ಇಂಟರ್ನಲ್ ಸೆಕ್ಯುರಿಟಿ ಐಜಿಪಿ ಆಗಿ ವರ್ಗಾವಣೆ
    * ಶ್ರಿ ರಾಘವೇಂದ್ರ ಸುಹಾಸ್ ಸದರನ್ – ರೇಂಜ್ ಐಜಿಪಿ ಆಗಿ ವರ್ಗಾವಣೆ
    * ರವಿಕಾಂತೆ ಗೌಡ – ಸಿಸಿಬಿ ಮುಖ್ಯಸ್ಥರಾಗಿ ವರ್ಗಾವಣೆ
    * ಅಮಿತ್ ಸಿಂಗ್ – ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್‍ಪಿ ಆಗಿ ವರ್ಗಾವಣೆ
    * ರಾಮ್ ನಿವಾಸ್ ಸೆಪಟ್ – ಎಸಿಬಿ ಎಸ್‍ಪಿ ಆಗಿ ವರ್ಗಾವಣೆ


    * ಎಂ.ಎನ್ ಅನುಚೇತ್‍ – ರೈಲ್ವೆ ಎಸ್‍ಪಿ ಆಗಿ ವರ್ಗಾವಣೆ
    * ಬಿ.ರಮೇಶ್ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಆಗಿ ವರ್ಗಾವಣೆ
    * ರವಿ ಡಿ. ಚನ್ನಣ್ಣನವರ್ – ಸಿಐಡಿ ಎಸ್‍ಪಿ ಆಗಿ ವರ್ಗಾವಣೆ
    * ಡಾ. ಭೀಮಾಶಂಕರ್ ಎಸ್ ಗುಳೇದ್ – ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ವರ್ಗಾವಣೆ
    * ಸಿ.ಬಿ ರಿಶ್ಯಂತ್ – ಮೈಸೂರು ಎಸ್‍ಪಿ ಆಗಿ ವರ್ಗಾವಣೆ
    * ಸುಜೀತಾ-  ಕೆ.ಜಿ.ಎಫ್ ಗೆ ಎಸ್‍ಪಿ ಆಗಿ ವರ್ಗಾವಣೆ
    * ಟಿಪಿ ಶಿವಕುಮಾರ್ – ಬೆಂಗಳೂರು ಗ್ರಾಮಾಂತರ ಎಸ್‍ಪಿ ಆಗಿ ವರ್ಗಾವಣೆ
    * ಎನ್ ವಿಷ್ಣುವರ್ಧನ – ಬೆಂಗಳೂರು ಅಡಳಿತ ಡಿಸಿಪಿ ಅಗಿ ವರ್ಗಾವಣೆ
    * ಕಲಾ ಕೃಷ್ಣ ಸ್ವಾಮಿ – ಎಫ್‍ಎಸ್‍ಎಲ್ ನಿರ್ದೇಶಕರಾಗಿ ವರ್ಗಾವಣೆ

  • ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!

    ಬೆಂಗಳೂರು: ಆಸ್ತಿ ವಿವರ ಸಲ್ಲಿಸಲು ಐಪಿಎಸ್ ಅಧಿಕಾರಿಗಳು ಜನಪ್ರತಿನಿಧಿಗಳಂತೆ ಮೊಂಡಾಟ ಮಾಡುತ್ತಿದ್ದಾರೆ. ಇದುವರೆಗೂ ರಾಜ್ಯದ ಬರೋಬ್ಬರಿ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    2018ರ ಆಸ್ತಿ ವಿವರ ಈ ವರ್ಷ ಜನವರಿ ಅಂತ್ಯದೊಳಗೆ ಸಲ್ಲಿಸಬೇಕಾಗಿತ್ತು. ಆದರೆ ಇದುವರೆಗೂ 45 ಐಪಿಎಸ್ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸಿಲ್ಲ.

    ಐಪಿಎಸ್ ಅಧಿಕಾರಿಗಳ ಮೊಂಡಾಟಕ್ಕೆ ಬೇಸತ್ತು ರಾಜ್ಯ ಒಳಡಾಳಿತ ಇಲಾಖೆಗಳ ಕಾರ್ಯದರ್ಶಿ ರಜನೀಶ್ ಗೋಯಲ್ ಡಿಜಿ ಐಜಿಪಿಗೆ ಪತ್ರ ಬರೆದಿದ್ದಾರೆ. ಪ್ರತಿ ವರ್ಷ ಐಪಿಎಸ್ ಅಧಿಕಾರಿಗಳು ತಮ್ಮ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸಬೇಕು ಎನ್ನುವ ನಿಯಮವಿದೆ.

    ಆಸ್ತಿ ವಿವರ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಮಾಡಿದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದಾರೆ. ಚಿರಾಸ್ತಿ ಹಾಗೂ ಸ್ಥಿರಾಸ್ತಿ ವಿವರ ಸಲ್ಲಿಕೆ ಮಾಡಲು ಐಪಿಎಸ್ ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಡಿಜಿಪಿಗೆ ಪತ್ರ ಬರೆದು ತ್ವರಿತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

  • ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

    ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

    ಬೆಂಗಳೂರು: ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ನಡುವೆ ಟ್ವೀಟ್ ವಾರ್ ಶುರುವಾಗಿದೆ.

    ಐಪಿಎಸ್ ಅಧಿಕಾರಿಗಳಾದ ಮಧುಕರ್ ಶೆಟ್ಟಿ, ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್, ಉತ್ತರ ವಲಯ ಡಿಸಿಪಿ ಲಾಭೂರಾಂ ಹಾಗೂ ಡಿಐಜಿ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ಬಗ್ಗೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನ ಪ್ರತಾಪ್ ಸಿಂಹ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶೇರ್ ಮಾಡಿದ್ರು.

    ಸಂಸದ ಪ್ರತಾಪ್ ಸಿಂಹ ವರದಿ ಶೇರ್ ಮಾಡಿದ್ದರ ಬಗ್ಗೆ ಆಕ್ಷೇಪ ಎತ್ತಿರುವ ಐಪಿಎಸ್ ರೂಪ, ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಲವಾರು ಪ್ರಶ್ನೆಗಳನ್ನ ಎತ್ತಿದ್ದಾರೆ. ಅಧಿಕಾರಿಗಳನ್ನ ರಾಜಕೀಯದಿಂದ ದೂರವಿಡಿ ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯ ಅಗತ್ಯ ಮತ್ತು ಆಸೆಯಾಗಿರುತ್ತದೆ. ಹಾಗೇ ಯಾವುದೇ ಒಬ್ಬ ಅಥವಾ ಇಬ್ಬರು ಅಧಿಕಾರಿಯನ್ನ ಹೀರೋ ಮಾಡುವುದು ಸರಿಯಲ್ಲ. ಕೆಲವು ಅಧಿಕಾರಿಗಳ ಮೇಲೆ ಮಾತ್ರ ಅವಲಂಬಿತವಾದ್ರೆ ಇಡೀ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಆ ಅಧಿಕಾರಿಗೆ ವರ್ಗಾವಣೆ ಅಥವಾ ನಿವೃತ್ತಿಯಾದ್ರೆ ಆಗ ಇಡೀ ವ್ಯವಸ್ಥೆಯೇ ಕುಸಿಯುತ್ತದೆ. ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಎಂದೆಲ್ಲಾ ರೂಪಾ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

    ರೂಪಾ ಅವರ ಪೋಸ್ಟ್ ಗೆ ಸ್ಪಷ್ಟನೆ ನೀಡಿರುವ ಪ್ರತಾಪ್ ಸಿಂಹ, ಪಬ್ಲಿಕ್ ಟಿವಿ ವರದಿಯನ್ನಷ್ಟೇ ಶೇರ್ ಮಾಡಿದ್ದೇನೆ. ನಿಮಗೆ ಸಮಯವಿದ್ದರೆ ಈ ಸುದ್ದಿಯನ್ನು ಓದಿ ಎಂದು ಪಬ್ಲಿಕ್ ಟಿವಿ ವರದಿಯ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

    https://www.facebook.com/roopad.moudgil/posts/1046017038837211

    ಇದನ್ನೂ ಓದಿ: ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

  • ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ಬೆಂಗಳೂರು: ರಾಜ್ಯ ಐಪಿಎಸ್ ಅಧಿಕಾರಿಗಳ ಗುಳೆ ಪರ್ವ ಆರಂಭವಾಗಿದೆ. ರಾಜ್ಯ ಸೇವೆಗೆ ಗುಡ್ ಬೈ ಹೇಳಿ ಕೇಂದ್ರ ಸೇವೆಗೆ ತೆರಳಲು ನಾಲ್ವರು ಐಪಿಎಸ್ ಅಧಿಕಾರಿಗಳು ತಯಾರಾಗಿದ್ದಾರೆ.

    ಈ ಲಿಸ್ಟ್ ನಲ್ಲಿ ಮೊದಲಿಗೆ ಇರೋರು ಮಧುಕರ್ ಶೆಟ್ಟಿ. ರಾಜ್ಯದಲ್ಲಿ ಒಳ್ಳೆಯ ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಕದ ತಟ್ಟಿದ್ದಾರೆ. ಇದೀಗ ನ್ಯಾಷನಲ್ ಪೊಲೀಸ್ ಅಕಾಡೆಮಿ ಐಜಿಯಾಗಿ ಮಧುಕರ್ ಶೆಟ್ಟಿ ನಿಯೋಜನೆಗೊಂಡಿದ್ದಾರೆ.

    ಖಡಕ್ ಮಹಿಳಾ ಅಧಿಕಾರಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕಾಸುರರನ್ನ ಹೆಡೆಮುರಿ ಕಟ್ಟಿದವರು. ಸದ್ಯ ಸಿಐಡಿ ಯಲ್ಲಿ ಡಿಐಜಿ ಯಾಗಿ ಕರ್ತವ್ಯ ನಿರ್ವಹಿಸ್ತಿದ್ದು, ಏಪ್ರಿಲ್ 1ರಿಂದ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಈ ಮೂಲಕ ಎನ್‍ಐಎ ಡಿಐಜಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಳೆದ ವರ್ಷವೇ ಕೇಂದ್ರ ಸೇವೆಗೆ ತೆರಳಬೇಕಿದ್ದ ನಾರಂಗ್ ಅವರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರಲಿಲ್ಲ.

    ದಕ್ಷ ಪ್ರಾಮಾಣಿಕ ಅಧಿಕಾರಿ ಲಾಭೂರಾಮ್ ಅವರ ಹೆಸರು ಕೇಳಿದಾಕ್ಷಣ ಒಳ್ಳೆ ಆಫೀಸರ್ ಅಂತಾರೆ ಜನ. ಸದ್ಯ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿರೋ ಲಾಭೂರಾಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಇವರ ಜೊತೆಗೆ ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಸಹ ಕೇಂದ್ರ ನಿಯೋಜನೆಗೆ ತೆರಳಲಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಗೆ ಇಬ್ಬರೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

    ಈ ನಾಲ್ವರ ಟ್ರಾನ್ಸ್ ಫರ್ ಗೆ ಕೇಂದ್ರ ಗೃಹ ಇಲಾಖೆ ಸಮ್ಮತಿ ನೀಡಿದೆ. ಆದ್ರೆ ಇಂಥ ಒಳ್ಳೆ ಆಫೀಸರ್ ಗಳನ್ನು ಸರ್ಕಾರ ಉಳಿಸಿಕೊಳ್ಳೋಕೆ ಆಗ್ತಿಲ್ವಲ್ಲ ಅನ್ನೋದೇ ವಿಪರ್ಯಾಸ.