Tag: IPS officer

  • ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ನಾವು ಪ್ರಾಣಿಗಳು ಮಾಡುವ ಅವಿವೇಕತನ, ಚೇಷ್ಟೆ ಹೀಗೆ ಹಲವು ರೀತಿಯ ಹಾಸ್ಯಮಯವಾದ ವೀಡಿಯೋಗಳನ್ನು ನೋಡಿರುತ್ತೇವೆ. ಆದರೆ ಕೋಳಿಯೊಂದು ಮೊಸಳೆ ಮೇಲೆ ಆರಾಮವಾಗಿ ಕುಳಿತುಕೊಂಡು ನದಿ ದಾಟುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಹೌದು, ವೈರಲ್ ಆಗಿರುವ 10 ಸೆಕೆಂಡ್ ವೀಡಿಯೋದಲ್ಲಿ ಕೋಳಿಯು ಮೊಸಳೆಯ ತಲೆ ಮೇಲೆ ಕುಳಿತು ನದಿಯನ್ನು ದಾಟಿದೆ. ಮೊಸಳೆಯು ಕೋಳಿಯನ್ನು ತನ್ನ ತಲೆಯ ಇರಿಸಿಕೊಂಡು ನಿಧಾನವಾಗಿ ಸಮಾಧಾನದಿಂದ ಯಾವುದೇ ತೊಂದರೆಯಾಗದಂತೆ ನದಿಯ ದಡಕ್ಕೆ ಹೋಗುತ್ತದೆ. ಈ ವೇಳೆ ನದಿಯ ಅಂಚಿಗೆ ತಲುಪಿದ ನಂತರ ಕೋಳಿ ಮೊಸಳೆಯ ತಲೆ ಮೇಲಿಂದ ಕೆಳಗೆ ಇಳಿಯುತ್ತಿದ್ದಂತೆ ಮೊಸಳೆ ತನ್ನ ಬೃಹತ್ ಬಾಯಿಯನ್ನು ತೆರೆದು ಕೋಳಿಯನ್ನು ತಿನ್ನಲು ಹೋಗುತ್ತದೆ. ಆದರೆ ಚಾಣಾಕ್ಷ ಕೋಳಿ ಮೊಸಳೆ ಮೇಲಿಂದ ಇಳಿಯುತ್ತಿದ್ದಂತೆಯೇ ಮೊಸಳೆಗೆ ಹೆದರಿ ವೇಗವಾಗಿ ಓಡಿ ಹೋಗುತ್ತದೆ.

    ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘2020 ರಿಂದ 2021.. ಮತ್ತೆ 2021ರ ಆರಂಭ.. ಹಾಗೇ ಸುಮ್ಮನೆ’ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 13.4 ಸಾವಿರ ವಿವ್ಸ್ ಪಡೆದುಕೊಂಡಿದ್ದು, ಹಲವಾರು ಕಮೆಂಟ್‍ಗಳು ಹರಿದು ಬಂದಿದೆ.

    ಅದರಲ್ಲಿ ಕೆಲವರು ಮೊಸಳೆ ಕೋಳಿಯನ್ನು ತಿಂದು ಬಿಡುತ್ತದೆ ಎಂದುಕೊಂಡಿದ್ದೇವು ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ವೀಡಿಯೋ ಕೊನೆಯ ಭಾಗ ನೋಡಿ ಭಯಭೀತರಾದೆವು ಎಂದು ಕಮೆಂಟ್ ಮಾಡಿದ್ದಾರೆ.

  • ಐಪಿಎಸ್ ಅಧಿಕಾರಿ ಜೀವನವನ್ನೇ ನಾಶ ಮಾಡಿದ್ರು – ಆತ್ಮಹತ್ಯೆಗೆ ಶರಣಾದ ಯುವಕ

    ಐಪಿಎಸ್ ಅಧಿಕಾರಿ ಜೀವನವನ್ನೇ ನಾಶ ಮಾಡಿದ್ರು – ಆತ್ಮಹತ್ಯೆಗೆ ಶರಣಾದ ಯುವಕ

    – ಐಪಿಎಸ್ ಅಧಿಕಾರಿಯೇ ನನ್ನ ಸಾವಿಗೆ ಕಾರಣ

    ಲಕ್ನೋ: ಐಪಿಎಸ್ ಅಧಿಕಾರಿ ಪ್ರಾಚಿ ಸಿಂಗ್ ವಿರುದ್ಧ ಪತ್ರ ಬರೆದು ಯುವಕನೋರ್ವ ಆತ್ಮಗತ್ಯೆಗೆ ಶರಣಾಗಿದ್ದಾರೆ. ಲಕ್ನೋ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಚಿ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆದ್ರೆ ಪೊಲೀಸ್ ಕಮಿಷನರ್ ಮೃತ ಯುವಕನ ಕುಟುಂಬಸ್ಥರ ಆರೋಪ ನಿರಾಧಾರ ಎಂದು ಹೇಳಿದ್ದಾರೆ.

    ಚಂದಗಂಜ್ ನಿವಾಸಿಯಾಗಿದ್ದ ವಿಶಾಲ್ (26) ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ವೇಶ್ಯಾವಾಟಿಕೆಯ ದಂಧೆಯಲ್ಲಿ ವಿಶಾಲ್ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ 21ರಂದು ಜಾಮೀನು ಪಡೆದು ವಿಶಾಲ್ ಹೊರ ಬಂದಿದ್ದರು. ಈ ಘಟನೆಯಿಂದಾಗಿ ವಿಶಾಲ್ ಮಾನಸಿಕವಾಗಿ ನೊಂದಿದ್ದರಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಫೆಬ್ರವರಿ 13ರಂದು ವಿಶಾಲ್ ರಸ್ತೆ ಬದಿಯ ಅಂಗಡಿಯಲ್ಲಿ ತಿಂಡಿ ಮಾಡುತ್ತಿದ್ದನು. ಅಲ್ಲೇ ಪಕ್ಕದಲ್ಲಿದ್ದ ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಹಲವರನ್ನ ಬಂಧಿಸಿದ್ದರು. ಪಕ್ಕದಲ್ಲಿಯೇ ತಿಂಡಿ ಮಾಡುತ್ತಿದ್ದ ವಿಶಾಲ್ ನನ್ನು ಸಹ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. 20 ದಿನಗಳ ನಂತ್ರ ನ್ಯಾಯಾಲಯ ಜಾಮೀನು ನೀಡಿತ್ತು. ಆದ್ರೆ ಈ ಎಲ್ಲ ಬೆಳವಣಿಗೆಯಿಂದ ಮಗ ಅವಮಾನಿತನಾಗಿದ್ದನು ಎಂದು ವಿಶಾಲ್ ತಂದೆ ಅರ್ಜುನ್ ಹೇಳಿದ್ದಾರೆ.

    ಬುಧವಾರ ಬೆಳಗ್ಗೆ 9 ಗಂಟೆಗೆ ವಿಶಾಲ್ ಕೆಲಸಕ್ಕೆ ಹೋಗುವದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದಾನೆ. ಆದ್ರೆ ಕೆಲಸಕ್ಕೆ ಹೋಗದೇ ಬೆಳಗ್ಗೆ 11 ಗಂಟೆಗೆ ರೈದಾಸ್ ಕ್ರಾಸಿಂಗ್ ಬಳಿ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅರ್ಜುನ್ ಕಣ್ಣೀರು ಹಾಕುತ್ತಾರೆ.

  • ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನ

    ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನ

    ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನರಾಗಿದ್ದಾರೆ.

    ಸಿಐಡಿ ಎಡಿಜಿಪಿ ಆಗಿ ಕೆಲಸ ಮಾಡುತ್ತಿದ್ದ ಚರಣ್ ರೆಡ್ಡಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ವಸಂತನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಏಳು ಗಂಟೆ ಸುಮಾರಿಗೆ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ.

    ಆಂಧ್ರದ ಚಿತ್ತೂರು ಮೂಲದ ಚರಣ್ ರೆಡ್ಡಿ 1993ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದರು. ಖಡಕ್ ಅಧಿಕಾರಿಯಾಗಿದ್ದ ಚರಣ್ ರೆಡ್ಡಿ ಬೆಂಗಳೂರಿನಲ್ಲಿ ಕಾವೇರಿ ಗಲಾಟೆ, ಅಕ್ರಮ ಗಣಿಗಾರಿಕೆ ಪ್ರಕರಣ, ಸಿಐಬಿ ಮತ್ತು ಬೆಂಗಳೂರಿನ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು.

    ಕಳೆದ 13 ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಧಿಕಾರಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇಂದು ಡಾಲರ್ಸ್ ಕಾಲೋನಿಯ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಡಿಜಿ ಐಜಿಪಿ ಪ್ರವೀಣ್ ಸೂದ್ ಸೇರಿದಂತೆ ಬೆಂಗಳೂರಿನ ಎಲ್ಲಾ ಹಿರಿಯ ಅಧಿಕಾರಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದುಕೊಂಡರು. ಶನಿವಾರ ಚರಣ್ ರೆಡ್ಡಿ ಹುಟ್ಟೂರಾದ ಆಂಧ್ರದ ಚಿತ್ತೂರಿನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ.

  • ಕೊನೆಗೂ ಆಹೋರಾತ್ರಿ ಧರಣಿ ಕೈಬಿಟ್ಟರು ಮಕ್ಕಳಿಗಾಗಿ ಪತ್ನಿ ಮನೆ ಮುಂದೆ ಕೂತ ಐಪಿಎಸ್ ಅಧಿಕಾರಿ

    ಕೊನೆಗೂ ಆಹೋರಾತ್ರಿ ಧರಣಿ ಕೈಬಿಟ್ಟರು ಮಕ್ಕಳಿಗಾಗಿ ಪತ್ನಿ ಮನೆ ಮುಂದೆ ಕೂತ ಐಪಿಎಸ್ ಅಧಿಕಾರಿ

    ಬೆಂಗಳೂರು: ಮಕ್ಕಳನ್ನು ನೋಡದೆ ಇಲ್ಲಿಂದ ಹೋಗಲ್ಲ ಎಂದು ಪತ್ನಿಯ ಮನೆಯ ಮುಂದೆ ಆಹೋರಾತ್ರಿ ಧರಣಿ ಕೂತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಕೊನೆಗೂ ಆಹೋರಾತ್ರಿ ಧರಣಿಯನ್ನು ಕೈಬಿಟ್ಟಿದ್ದಾರೆ.

    ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮನವೊಲಿಸುವಲ್ಲಿ ಡಿಸಿಪಿ ಭೀಮಶಂಕರ್ ಗೂಳೇದ್ ಪತ್ನಿ ಯಶಸ್ವಿಯಾಗಿದ್ದಾರೆ. ಕಲಬುರಗಿ ಐಎಸ್‍ಡಿಯಲ್ಲಿ ಎಸ್‍ಪಿಯಾಗಿರುವ ಅರುಣ್ ರಂಗರಾಜನ್ ಭಾನುವಾರ ಸಂಜೆ ಬೆಂಗಳೂರಿನ ವಸಂತನಗರದ ತನ್ನ ಪತ್ನಿಯ ಮನೆ ಬಳಿ ಬಂದಿದ್ದರು. ಬೆಂಗಳೂರಿನ ವಿವಿಐಪಿ ಸೆಕ್ಯೂರಿಟಿ ಡಿಸಿಪಿಯಾಗಿರುವ ಪತ್ನಿ ಇಲಕಿಯಾ ಕರುಣಾಕರನ್ ಅವರು ಮಕ್ಕಳನ್ನು ನೋಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತ ಎಸ್‍ಪಿ ಅರುಣ್ ರಂಗರಾಜನ್ ಅವರು ಮಕ್ಕಳನ್ನು ನೋಡದೆ ಇಲ್ಲಿಂದ ಹೋಗಲ್ಲ ಎಂದು ವಸಂತನಗರದ ಪತ್ನಿಯ ಮನೆ ಮುಂದೆಯೇ ಆಹೋರಾತ್ರಿ ಧರಣಿ ನಡೆಸಿದರು.

    ಬೆಂಗಳೂರಿನ ನಾರ್ಥ್ ಈಸ್ಟ್ ಡಿಸಿಪಿ ಭೀಮಶಂಕರ್ ಗುಳೇದ್ ಹಾಗೂ ಇತರೆ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನ ಐಪಿಎಸ್ ಅಧಿಕಾರಿಗಳು, ರಂಗರಾಜನರ್ ಮನವೊಲಿಸಲು ವಿಫಲರಾಗಿದ್ದರು. ಡಿಸಿಪಿ ಭೀಮಶಂಕರ್ ಗುಳೇದ್ ತಡರಾತ್ರಿ ಹನ್ನೇರಡು ಗಂಟೆವರೆಗೂ ಮನವೊಲಿಸಲು ಯತ್ನಿಸಿ ವಿಫಲರಾಗಿ ವಾಪಸ್ ಹೋದರು. ಆದರೆ ತಡರಾತ್ರಿ 2 ಗಂಟೆಯಾದರೂ ಎಸ್‍ಪಿ ರಂಗರಾಜನ್ ಅವರು ಪತ್ನಿಯ ಮನೆ ಮುಂದೆಯೇ ಕೊರೆವ ಚಳಿಯಲ್ಲೂ ಅನ್ನ, ನೀರು ಮುಟ್ಟದೇ ಏಕಾಂಗಿಯಾಗಿ ಧರಣಿ ಮುಂದುವರಿಸಿದರು. ಕೊನೆಗೆ ತಡರಾತ್ರಿ 2:30ರ ವೇಳೆಗೆ ಪತ್ನಿ ಜೊತೆಗೆ ಬಂದ ಡಿಸಿಪಿ ಭೀಮಾಶಂಕರ್ ಗುಳೇದ್, ಸೋಮವಾರ ನಿನ್ನ ಮಕ್ಕಳನ್ನು ಭೇಟಿ ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿ, ಎಸ್‍ಪಿ ರಂಗರಾಜನ್‍ರನ್ನ ತನ್ನ ಮನೆಗೆ ಕರೆದುಕೊಂಡು ಹೋದರು.

    ಇಲಕಿಯಾ ಹಾಗೂ ಅರುಣ್ ರಂಗರಾಜನ್ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಈ ನಡುವೆ ಇಬ್ಬರು ಒಂದಾಗಿ ಮಗುವನ್ನು ಮಾಡಿಕೊಂಡಿದ್ದರು. ಈಗ ಮಗುವನ್ನು ಪತ್ನಿ ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ದೂರಿದ್ದರು.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅರುಣ್ ರಂಗರಾಜನ್, ನಾನು ಹಾಗೂ ಇಲಕಿಯಾ ಪ್ರೀತಿಸಿ ಮದುವೆ ಆಗಿದ್ದೇವು. ಆಗ ನಾವು ಚತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ ಅಲ್ಲಿ ಸೇವೆ ಸಲ್ಲಿಸಲು ಒಪ್ಪದ ಇಲಕಿಯಾ, ಚತ್ತೀಸ್‍ಗಢ ಹೆಣ್ಣು ಮಕ್ಕಳಿಗೆ ಸೂಕ್ತ ಪ್ರದೇಶವಲ್ಲ. ಹೀಗಾಗಿ ನಾವು ಕರ್ನಾಟಕ್ಕೆ ವರ್ಗಾವಣೆ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿದ್ದರು. ಆದರೆ ನನಗೆ ಇಷ್ಟವಿರಲಿಲ್ಲ. ಇದಕ್ಕೆ ಒಪ್ಪದ ಇಲಕಿಯಾ ನನ್ನ ಹೆಸರಿನಲ್ಲಿ ಪತ್ರ ಬರೆದು ಅದಕ್ಕೆ ತಾನೇ ಸಹಿ ಮಾಡಿ ಚತ್ತೀಸ್‍ಗಢ ಸರ್ಕಾರಕ್ಕೆ ಕಳುಹಿಸಿದ್ದಳು. ಆದರೆ ಸರ್ಕಾರವು ವರ್ಗಾವಣೆ ಸಾಧ್ಯವಿಲ್ಲ ಅಂತಾ ತಿಳಿಸಿದ್ದರು ಎಂದು ಹೇಳಿದ್ದರು.

    ವರ್ಗಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಆದರೆ ಪತ್ನಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ನನ್ನನ್ನು ಒಪ್ಪಿಸಿದ್ದಳು. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಸಂಪರ್ಕಿಸಿ ಇಬ್ಬರಿಗೂ ವರ್ಗಾವಣೆಯಾಗುವಂತೆ ಮಾಡಿದ್ದಳು. ಕರ್ನಾಟಕ್ಕೆ ಬಂದ ಬಳಿಕ ಇಬ್ಬರಿಗೂ ಡಿವೋರ್ಸ್ ಆಗಿತ್ತು ಎಂದು ಅರುಣ್ ರಂಗರಾಜನ್ ತಿಳಿಸಿದ್ದರು.

    ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದಾಗ ನನ್ನ ಒಪ್ಪಿಗೆ ಇಲ್ಲದೆ ಪತ್ನಿ ಅಬಾರ್ಶನ್ ಮಾಡಿಸಿಕೊಂಡಿದ್ದಳು. ಅದಾದ ಬಳಿಕ ಇಬ್ಬರು ಸೇರಿ ಮಗುವನ್ನು ಮಾಡಿಕೊಂಡಿದ್ದೇವು. ಈಗ ನೋಡಿದರೆ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಅರುಣ್ ಗಂಭೀರ ಆರೋಪ ಮಾಡಿದ್ದರು.

  • ಮಕ್ಕಳ ವಿಚಾರಕ್ಕೆ ಬೀದಿಗೆ ಬಂತು ಐಪಿಎಸ್ ದಂಪತಿ ಜಗಳ

    ಮಕ್ಕಳ ವಿಚಾರಕ್ಕೆ ಬೀದಿಗೆ ಬಂತು ಐಪಿಎಸ್ ದಂಪತಿ ಜಗಳ

    – ಪತ್ನಿಯ ಮನೆ ಮುಂದೆ ಐಪಿಎಸ್ ಅಧಿಕಾರಿ ಪ್ರತಿಭಟನೆ, ಕಣ್ಣೀರು
    – ಪ್ರೀತಿಸಿ ಮದುವೆಯಾಗಿದ್ದ ದಂಪತಿ

    ಬೆಂಗಳೂರು: ಮಕ್ಕಳನ್ನು ನೋಡಲು ಬಿಡದ ಪತ್ನಿ, ಐಪಿಎಸ್ ಅಧಿಕಾರಿ ಮನೆಯ ಮುಂದೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕಲಬುರಗಿ ಐಎಸ್‍ಡಿಯಲ್ಲಿ ಎಸ್‍ಪಿ ಆಗಿರುವ ಅರುಣ್ ರಂಗರಾಜನ್ ಅವರು ತಮ್ಮ ಪತ್ನಿ ಇಲಕಿಯಾ ಕರುಣಾಕರನ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳನ್ನು ನೋಡಲು ಪತ್ನಿ ಅವಕಾಶ ಕೊಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಗಂಭೀರ ಆರೋಪ ಮಾಡಿದ್ದಾರೆ.

    ಐಪಿಎಸ್ ಅಧಿಕಾರಿ ಇಲಕಿಯಾ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಈ ನಡುವೆ ಇಬ್ಬರು ಒಂದಾಗಿ ಮಗು ಮಾಡಿಕೊಂಡಿದ್ದರು. ಈಗ ಮಗುವನ್ನು ಹೆಂಡತಿ ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ದೂರಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅರುಣ್ ರಂಗರಾಜನ್, ನಾನು ಹಾಗೂ ಇಲಕಿಯಾ ಪ್ರೀತಿಸಿ ಮದುವೆ ಆಗಿದ್ದೇವು. ಆಗ ನಾವು ಚತ್ತೀಸ್‍ಗಢದಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ ಅಲ್ಲಿ ಸೇವೆ ಸಲ್ಲಿಸಲು ಒಪ್ಪದ ಇಲಕಿಯಾ, ಚತ್ತೀಸ್‍ಗಢ ಹೆಣ್ಣು ಮಕ್ಕಳಿಗೆ ಸೂಕ್ತ ಪ್ರದೇಶವಲ್ಲ. ಹೀಗಾಗಿ ನಾವು ಕರ್ನಾಟಕ್ಕೆ ವರ್ಗಾವಣೆ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿದ್ದರು. ಆದರೆ ನನಗೆ ಇಷ್ಟವಿರಲಿಲ್ಲ. ಇದಕ್ಕೆ ಒಪ್ಪದ ಇಲಕಿಯಾ ನನ್ನ ಹೆಸರಿನಲ್ಲಿ ಪತ್ರ ಬರೆದು ಅದಕ್ಕೆ ತಾನೇ ಸಹಿ ಮಾಡಿ ಚತ್ತೀಸ್‍ಗಢ ಸರ್ಕಾರಕ್ಕೆ ಕಳುಹಿಸಿದ್ದಳು. ಆದರೆ ಸರ್ಕಾರವು ವರ್ಗಾವಣೆ ಸಾಧ್ಯವಿಲ್ಲ ಅಂತಾ ತಿಳಿಸಿದ್ದರು ಎಂದು ಹೇಳಿದರು.

    ವರ್ಗಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಆದರೆ ಪತ್ನಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ನನ್ನನ್ನು ಒಪ್ಪಿಸಿದ್ದಳು. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಸಂಪರ್ಕಿಸಿ ಇಬ್ಬರಿಗೂ ವರ್ಗಾವಣೆಯಾಗುವಂತೆ ಮಾಡಿದ್ದಳು. ಕರ್ನಾಟಕ್ಕೆ ಬಂದ ಬಳಿಕ ಇಬ್ಬರಿಗೂ ಡಿವೋರ್ಸ್ ಆಗಿತ್ತು ಎಂದು ಅರುಣ್ ರಂಗರಾಜನ್ ತಿಳಿಸಿದರು.

    ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದಾಗ ನನ್ನ ಒಪ್ಪಿಗೆ ಇಲ್ಲದೆ ಪತ್ನಿ ಅಬಾರ್ಶನ್ ಮಾಡಿಸಿಕೊಂಡಿದ್ದಳು. ಅದಾದ ಬಳಿಕ ಇಬ್ಬರು ಸೇರಿ ಮಗುವನ್ನು ಮಾಡಿಕೊಂಡಿದ್ದೇವು. ಈಗ ನೋಡಿದರೆ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಅರುಣ್ ಗಂಭೀರ ಆರೋಪ ಮಾಡಿದರು.

  • ಪತ್ನಿಗೆ ಕಿರುಕುಳ- ತರಬೇತಿ ನಿರತ ಐಪಿಎಸ್ ಅಧಿಕಾರಿ ಅಮಾನತು

    ಪತ್ನಿಗೆ ಕಿರುಕುಳ- ತರಬೇತಿ ನಿರತ ಐಪಿಎಸ್ ಅಧಿಕಾರಿ ಅಮಾನತು

    – ಪರೀಕ್ಷೆಯಲ್ಲಿ ರ‌್ಯಾಂಕ್ ಬರ್ತಿದ್ದಂತೆ ವರಸೆ ಬದಲಾಯಿಸಿದ

    ಹೈದರಾಬಾದ್: ಪತ್ನಿಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡಿದ್ದಕ್ಕಾಗಿ ತರಬೇತಿ ನಿರತ ಐಪಿಎಸ್ ಅಧಿಕಾರಿಯನ್ನು ಗೃಹ ಇಲಾಖೆ ಅಮಾನತು ಮಾಡಿದೆ.

    ಐಪಿಎಸ್ ಅಧಿಕಾರಿ ಕೊಕ್ಕಂತಿ ಮಹೇಶ್ವರ ರೆಡ್ಡಿ ಅವರನ್ನು ಕೇಂದ್ರ ಗೃಹ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ವಿಚ್ಛೇದನ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

    ಅಪರಾಧ ಪ್ರಕರಣ ದಾಖಲಾಗಿರುವ ಹಿನ್ನೆಲೆ, ತನಿಖೆ ನಡೆಯುತ್ತಿದೆ. ಹೀಗಾಗಿ 28 ವರ್ಷದ ಅಧಿಕಾರಿಯ ನೇಮಕಾತಿಯನ್ನು ಅಮಾನತಿನಲ್ಲಿಡಲಾಗಿದೆ. ಪತ್ನಿ ಬಿರುದುಲ ಭಾವನಾ(28) ಅವರು ಹೈದರಾಬಾದಿನ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ಬೇರೆ ಮಹಿಳೆಯನ್ನು ಮದುವೆಯಾಗಲು ವಿಚ್ಛೇದನ ನೀಡುವಂತೆ ಮಹೇಶ್ವರ ರೆಡ್ಡಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾವನಾ, ಈ ಕುರಿತು ಜವಾಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡಿದ ಆಧಾರದ ಮೇಲೆ ಐಪಿಎಸ್ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಎಸ್‍ಸಿ, ಎಸ್‍ಟಿ ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ.

    2009ರಿಂದ ಕಾಲೇಜು ದಿನಗಳಿಂದಲೂ ನಾವಿಬ್ಬರು ಜೊತೆಯಾಗಿದ್ದೆವು, ನಂತರ ಇಬ್ಬರೂ ಮದುವೆಯಾದೆವು ಎಂದು ಭಾವನಾ ತಿಳಿಸಿದ್ದಾರೆ.

    ಆಂಧ್ರ ಪ್ರದೇಶದ ಕಡಪ ಜಿಲ್ಲೆಯವರಾದ ಕೊಕ್ಕಂತಿ ಮಹೇಶ್ವರ ರೆಡ್ಡಿ ಪ್ರಸಕ್ತ ಸಾಲಿನಲ್ಲಿ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ 126ನೇ ರ‌್ಯಾಂಕ್ ಪಡೆದಿದ್ದು, ಪ್ರಸ್ತುತ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ಪ್ರಾಥಮಿಕ ತರಬೇತಿ ಪಡೆಯುತ್ತಿದ್ದಾರೆ.

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಬರುತ್ತಿದ್ದಂತೆ ಬೇರೆ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ ವಿಚ್ಛೇದನ ನೀಡುವಂತೆ ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಈ ಕುರಿತು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಭಾವನಾ ಆರೋಪಿಸಿದ್ದಾರೆ.

    ಪ್ರಕರಣದ ಕುರಿತು ಪೊಲೀಸರು ಮಾಹಿತಿ ನೀಡಿ, ಎಫ್‍ಐಆರ್ ದಾಖಲಿಸುವುದಕ್ಕೂ ಮುನ್ನ ನಾವು ಇಬ್ಬರನ್ನೂ ಕರೆದು ವಿಚಾರಣೆ ನಡೆಸಿ, ಸಂಧಾನ ಮಾಡಲು ಯತ್ನಿಸಿದೆವು. ಆದರೆ ಅದು ಫಲಕಾರಿಯಾಗಲಿಲ್ಲ ಎಂದು ತಿಳಿಸಿದ್ದಾರೆ.

  • ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಕೇಂದ್ರ ಗೃಹ ಇಲಾಖೆ

    ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಕೇಂದ್ರ ಗೃಹ ಇಲಾಖೆ

    ಬೆಂಗಳೂರು: ಐಪಿಎಸ್ ಹುದ್ದೆಗೆ ಅಣ್ಣಾಮಲೈ ಸಲ್ಲಿಸಿದ್ದ ರಾಜೀನಾಮೆಯನ್ನು ಕೇಂದ್ರ ಗೃಹ ಇಲಾಖೆ ಇಂದು ಅಂಗೀಕರಿಸಿದೆ.

    2011ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಮೇ 28ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದನ್ನೂ ಓದಿ:  ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

    ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ್ದ ಅಣ್ಣಾಮಲೈ, ನಾನು ಸರ್ವಿಸ್‍ಗೆ ಸೇರಿ 9 ವರ್ಷಗಳು ಕಳೆದವು. ಆದರೆ ನಾನು ನನ್ನ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ. ನಾನು ಈ ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೇನೆ. ನಾನು ಇಲ್ಲಿ ಇರುವುದ್ದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ದರು. ಆದರೆ ಕೊನೆ ಪಕ್ಷ ಅವರ ಅಂತ್ಯಕ್ರಿಯೆಗೂ ಹೋಗುವುದಕ್ಕೆ ನನಗೆ ಆಗಲಿಲ್ಲ. ತಂದೆ ತಾಯಿ, ಬಂಧು ಬಳಗ ಎಲ್ಲಾ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು ಏನು ಮಾಡಲಿ ಎಂದು ಹೇಳಿದ್ದರು. ಇದನ್ನೂ ಓದಿ: ರವಿ ಚೆನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫುಲ್ ಖುಷ್

    ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕೆಂದು ಪ್ಲಾನ್ ಮಾಡಿದ್ದೆ. ಚುನಾವಣೆ ಮುಗಿಸದೇ ಹೋದರೆ ಸರಿ ಹೋಗಲ್ಲ ಎಂದು ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ಮಲೇಷ್ಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್‍ಸಿ ಪರೀಕ್ಷೆ ಬರೆದಿದ್ದೆ. ನನಗೆ ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ, ದರೋಡೆ ಬಗ್ಗೆ ಕೆಲಸ ಮಾಡಲಿ. ಸದ್ಯ ನಾನು ಯಾವ ರಾಜಕೀಯಕ್ಕೂ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಮುಂದಿನ ಆರು ತಿಂಗಳು ವಿಶ್ರಾಂತಿ ಪಡೆಯುತ್ತೇನೆ. ರಾಜೀನಾಮೆ ಬಳಿಕ ಹಿಮಾಲಯ ಟ್ರೆಕ್ಕಿಂಗ್ ಹೋಗುತ್ತೇನೆ. ಅಲ್ಲದೇ ನನ್ನ ಕುಟುಂಬಕ್ಕೆ ಟೈಂ ಸಹ ಕೋಡುತ್ತೇನೆ. ನನ್ನ ಮಗ ಓದುತ್ತಿದ್ದಾನೆ. ಅವನ ಜೊತೆ ಇರುತ್ತೇನೆ. 33-34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ಆದರೆ ನಾನು ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೆ ಬೇರೆ ಜೀವನ ಇದೆ ಎಂದು ಅಣ್ಣಾಮಲೈ ತಿಳಿಸಿದ್ದರು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೊಂದು ಗ್ರಂಥಾಲಯ, ಇಷ್ಟವಾದ್ರೆ ಪುಸ್ತಕ ನೀಡಿ: ಅಣ್ಣಾಮಲೈ 

    ಅಣ್ಣಾಮಲೈ ರಾಜೀನಾಮೆ ವಿಚಾರ ತಿಳಿದು ಅಭಿಮಾನಿಗಳು ಅವರ ಮನೆ ಮುಂದೆ ಬಂದಿದ್ದರು. ”ಸರ್, ಮಾಧ್ಯಮದಲ್ಲಿ ನಿಮ್ಮ ರಾಜೀನಾಮೆ ವಿಚಾರ ತಿಳಿದು ಬೇಜಾರಾಯಿತು. ನೀವು ಇರಬೇಕು ಸಾರ್” ಎಂದ ಅಭಿಮಾನಿಗಳು ಅಣ್ಣಾಮಲೈ ಬಳಿ ಕೇಳಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳ ಸೆಲ್ಫಿಗೆ ಅಣ್ಣಾಮಲೈ ತಾವೇ ಮೊಬೈಲ್ ಹಿಡಿದು ಫೋಟೋ ತೆಗೆದುಕೊಟ್ಟಿದ್ದರು.

    ಇದಾದ ಬಳಿಕ ಅಣ್ಣಾಮೈಲೆ ಅವರು ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ನನ್ನ ರಾಜೀನಾಮೆ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಇಂದು ಅಂದರೆ ಮೇ 28ರಂದು ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳಲೂ ಸ್ವಲ್ಪ ಸಮಯ ಬೇಕಾಗುತ್ತದೆ. ನನ್ನ ಸುತ್ತ ಹರಿದಾಡುವ ಮಾತುಗಳ ಬಗ್ಗೆ ನಾನು ಸ್ಪಷ್ಟನೆ ನೀಡುತ್ತೇನೆ. ನಾನು 6 ತಿಂಗಳಿನಿಂದ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ ಎಂದು ತಿಳಿಸಿದ್ದರು.

    ನಾನು ನನ್ನ ಸಹದ್ಯೋಗಿಗಳ ಜೊತೆ ಕಳೆದ ಸುಂದರವಾದ ಕ್ಷಣಗಳು ಖಾಕಿ ನನಗೆ ಎಂದಿಗೂ ಮರೆಯಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ಕೆಲಸ ದೇವರಿಗೆ ಹತ್ತಿರವಾದ ಕೆಲಸ ಎಂದು ನಾನು ನಂಬಿದ್ದೇನೆ. ಹೆಚ್ಚು ಒತ್ತಡ ಇರುವ ಕೆಲಸಗಳು ತನ್ನದೇ ಆದ ಕಡಿಮೆ ಸಮಯದಲ್ಲಿ ಬರುತ್ತದೆ. ನಾನು ಸಾಕಷ್ಟು ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ನಾನು ಕಷ್ಟದಲ್ಲಿದ್ದಾಗ ನನಗೆ ಜನರು ಸಹಾಯ ಮಾಡಿದ್ದರು. ಆದರೆ ಅವರಿಗೆ ಕಷ್ಟದ ಸಮಯ ಬಂದಾಗ ನನಗೆ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

  • ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಸಿದ ಐಪಿಎಸ್ ಅಧಿಕಾರಿ

    ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಸಿದ ಐಪಿಎಸ್ ಅಧಿಕಾರಿ

    ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಕೆ ಮಾಡುವ ಮೂಲಕ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

    ಬೆಂಗಳೂರಿನ ಕ್ರೈಂ ಡಿಸಿಪಿ ಕುಲದೀಪ್ ಕುಮಾರ್ ಆರ್ ಜೈನ್ ಕೆಎಸ್‍ಆರ್ ಪಿ ವಾಹನದ ಜೊತೆಗೆ ಪೊಲೀಸರಿಗೆ ನೀಡಿರುವ ಆಂಬ್ಯುಲೆನ್ಸ್ ಮನೆ ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಬಳಸಿಕೊಂಡಿದ್ದಾರೆ. ಕುಲದೀಪ್ ಕುಮಾರ್ ಆರ್ ಜೈನ್ ಸಿಸಿಬಿ ಕ್ರೈಂ ಒನ್ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಶಿವಾಜಿನಗರದ ಮೋತಿ ಮಸೀದಿ ಪಕ್ಕದಲ್ಲಿರುವ ಸರ್ಕಾರಿ ಬಂಗಲೆಗೆ ಶಿಫ್ಟ್ ಆಗಿದ್ದಾರೆ. ಸರ್ಕಾರಿ ಬಂಗಲೆಗೆ ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಸರ್ಕಾರಿ ವಾಹನಗಳನ್ನು ಬಳಸಿಕೊಂಡಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಜೊತೆಗೆ ಪೊಲೀಸರ ಜೀವ ರಕ್ಷಕ ಆಂಬ್ಯುಲೆನ್ಸ್ ಅನ್ನು ಮನೆ ಶಿಫ್ಟ್ ಮಾಡೊದಕ್ಕೆ ಬಳಸಿಕೊಂಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

  • ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿ ನೇಮಕವಾದ ಕೆಲವೇ ದಿನಗಳಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ನೂತನ ಸರ್ಕಾರ ಆದೇಶ ನೀಡಿದ್ದು, ಈ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.

    ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರನ್ನು 45 ದಿನಗಳ ಹಿಂದೆಯಷ್ಟೇ ಮೈತ್ರಿ ಸರ್ಕಾರ ನಗರದ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಸದ್ಯ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‍ಆರ್ ಪಿ) ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೆಎಸ್‍ಆರ್ ಪಿ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

    ಸಮ್ಮಿಶ್ರ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ವೇಳೆ ನಿಯಮಗಳನ್ನು ಮೀರಿ ಆದೇಶ ಮಾಡಿರುವುದೇ ಅವರ ವರ್ಗಾವಣೆ ಕಾರಣ ಎನ್ನಲಾಗಿದೆ. ಅಲೋಕ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದ್ದ ಸಂದರ್ಭದಲ್ಲೂ ಕೆಲವರು ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸದ್ಯ ನೂತನ ಸರ್ಕಾರ ವರ್ಗಾವಣೆ ಮಾಡಿ ಈ ವಿವಾದಕ್ಕೆ ತೆರೆ ಎಳೆದಿದೆ.

    ಸದ್ಯ ನೂತನವಾಗಿ ಆಯ್ಕೆ ಆಗಿರುವ ಭಾಸ್ಕರ್ ರಾವ್ ಅವರು ಬೆಂಗಳೂರಿನವರೇ ಆಗಿದ್ದು, ಆ ಮೂಲಕ ಬೆಂಗಳೂರು ನಗರದವರೆ ಕಮಿಷನರ್ ಆಗಿದ್ದಾರೆ. ಅಲೋಕ್ ಕುಮಾರ್ ಸೇರಿದಂತೆ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

    ಯಾರು ಎಲ್ಲಿಗೆ ವರ್ಗಾವಣೆ?
    ಹೇಮಂತ್ ನಿಂಬಾಳ್ಕರ್- ಐಜಿಪಿ, ಆಡಳಿತ, ಬೆಂಗಳೂರು
    ರವಿಕಾಂತೇಗೌಡ – ಜಂಟಿ ಆಯುಕ್ತ, ಪಶ್ಚಿಮ, ಬೆಂಗಳೂರು ನಗರ
    ದೇವರಾಜ್ – ಎಸ್‍ಪಿ, ಸಿಐಡಿ
    ಆರ್ ಚೇತನ್ – ಎಸ್‍ಪಿ, ಕೋಸ್ಟಲ್ ಸೆಕ್ಯುರಿಟಿ
    ಎಂ ಅಶ್ವಿನಿ – ಡಿಸಿಪಿ, ಗುಪ್ತಚರ, ಬೆಂಗಳೂರು
    ಉಮೇಶ್ ಕುಮಾರ್ – ಡಿಸಿಪಿ, ಅಗ್ನಿಶಾಮಕದಳ

  • ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

    ತಿರುವನಂತಪುರಂ: ಕೇರಳದ ಲೇಡಿ ಐಪಿಎಸ್ ಅಧಿಕಾರಿಯೊಬ್ಬರು ಅತ್ಯಾಚಾರ ಆರೋಪಿಯನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಎಳೆ ತಂದಿದ್ದಾರೆ.

    ಸುನೀಲ್ ಕುಮಾರ್ ಅತ್ಯಾಚಾರವೆಸಗಿದ ಆರೋಪಿ. ಸುನೀಲ್ ಕುಮಾರ್ ಮೂಲತಃ ಕೊಲ್ಲಂ ನಿವಾಸಿಯಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದನು. ಸುನೀಲ್ 2017ರಲ್ಲಿ ರಜೆಗೆಂದು ಕೊಲ್ಲಂಗೆ ಬಂದಿದ್ದನು. ಈ ವೇಳೆ ಆತ ತನ್ನ ಸ್ನೇಹಿತನ 13 ವರ್ಷದ ಮಗಳ ಮೇಲೆ 3 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದ.

    ಅಪ್ರಾಪ್ತೆ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಆಗ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಅಷ್ಟರಲ್ಲಿ ಆರೋಪಿ ಸುನೀಲ್ ಸೌದಿ ಅರೇಬಿಯಾಗೆ ಪರಾರಿ ಆಗಿದ್ದನು. ಇದಾದ ಬಳಿಕ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಮೊದಲು ಆರೋಪಿಯನ್ನು ಬಾಲಕಿಯ ಕುಟುಂಬಕ್ಕೆ ಪರಿಚಯಿಸಿದ್ದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.

    2019 ಜೂನ್ ತಿಂಗಳಿನಲ್ಲಿ ಮೇರಿನ್ ಜೋಸೆಫ್ ಕೊಲ್ಲಂನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇರಿನ್ ಅವರು ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ್ದ ಬಾಕಿ ಉಳಿದಿದ್ದ ಫೈಲ್ ತರಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣವನ್ನು ನೋಡಿದೆ. ಆಗ ಆರೋಪಿ ಅತ್ಯಾಚಾರವೆಸಗಿ 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದಾನೆ ಎಂಬುದು ತಿಳಿಯಿತು. ಬಳಿಕ ಈ ಪ್ರಕರಣ ತನಿಖೆ ನಿಂತು ಹೋಗಿತ್ತು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರು ಎಂದರು.

    2017ರಲ್ಲಿ ಆರೋಪಿ ಸುನೀಲ್‍ಗೆ ಇಂಟರ್ ಪೋಲ್ ನೋಟಿಸ್ ನೀಡಲಾಗಿತ್ತು. ಆದರೆ ಪ್ರಕರಣ ಮುಂದುವರಿಯಲಿಲ್ಲ. ಇಂಟರ್ ಪೋಲ್ ನೋಟಿಸ್ ನೀಡಿದ್ದರೂ ಅನೇಕ ಪ್ರಕರಣ ಮುಂದುವರೆಯಲ್ಲ. ಏಕೆಂದರೆ ಇದಕ್ಕೆ ಆ ದೇಶದಿಂದ ನಿರಂತರ ಸಹಕಾರ ಹಾಗೂ ಫಾಲೋ ಅಪ್ ಬೇಕಾಗುತ್ತದೆ. 2010ರಲ್ಲಿ ಪ್ರಧಾನಿಯಾಗಿದ್ದ ಮನ್‍ಮೋಹನ್ ಸಿಂಗ್ ಅವರು ಸೌದಿಯ ದೊರೆ ಅಬ್ದುಲ ಜೊತೆ ಭಾರತ- ಸೌದಿ ಹಸ್ತಾಂತರ ಒಪ್ಪಂದ ಸಹಿ ಮಾಡಿತ್ತು. ಆ ನಂತರ ಕೇರಳದ ವಾಂಟೆಡ್ ಕ್ರಿಮಿನಲ್‍ಗಳು ಸೌದಿಗೆ ಪರಾರಿಯಾಗಿದ್ದರು. ಆದರೆ ಆ ಆರೋಪಿಗಳ ಹಸ್ತಾಂತರ ಆಗಲಿಲ್ಲ. ಕೆಲವು ದಿನಗಳ ಹಿಂದೆ ಸುನೀಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಸೌದಿ ಪೊಲೀಸರು ತಿಳಿಸಿದ್ದರು. ಮರೀನ್ ಅವರು ಜೂನಿಯರ್ ಅಧಿಕಾರಿಯನ್ನು ಕಳುಹಿಸುವ ಬದಲು ಸ್ವತಃ ತಾವೇ ದುಬೈಗೆ ಹೋಗಿದ್ದರು.

    ಆರೋಪಿಯನ್ನು ಕರೆತಂದ ಬಳಿಕ ಮಾತನಾಡಿದ ಮರೀನ್, ನಾವು ಮೊದಲ ಬಾರಿಗೆ ಇಂತಹ ಹಸ್ತಾಂತರವನ್ನು ಮಾಡುತ್ತಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ನಾನು ಬಯಸಿದ್ದೆ. ಅಲ್ಲದೆ ಇದರ ಬಗ್ಗೆ ನನ್ನ ತಂಡದ ಜೊತೆ ಹಂಚಿಕೊಳ್ಳಬಹುದು ಎಂದು ಎನಿಸಿತ್ತು. ಇದಕ್ಕೆ ಸಾಕಷ್ಟು ಪೇಪರ್ ಕೆಲಸಗಳು ಇದ್ದವು. ಆರೋಪಿಯನ್ನು ಅಲ್ಲಿಂದ ಕರೆ ತರಲು ದಾಖಲೆ ಕೂಡ ಮಾಡಬೇಕಿತ್ತು. ಹಾಗಾಗಿ ನಾನು ಸೌದಿಗೆ ಹೋಗಲು ನಿರ್ಧರಿಸಿದೆ. ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡಿರುವ ಪ್ರಕರಣದ ಬಗ್ಗೆ ಕೆಲಸ ಮಾಡಲು ನನಗೆ ಇಷ್ಟ. ಅಲ್ಲದೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಬೇಕು ಎಂದು ನಿರ್ಧರಿಸಿದೆ. ಸುನೀಲ್ ಕುಮಾರ್ ಕೇರಳದಲ್ಲಿ ನಡೆದ ಅಪರಾಧಕ್ಕಾಗಿ ಹಸ್ತಾಂತರಿಸಲ್ಪಟ್ಟ ಮೊದಲ ವ್ಯಕ್ತಿ ಎಂದು ಹೇಳಿದ್ದಾರೆ.