Tag: IPS officer D roopa

  • ಸೆಲ್ಫಿಗೆ ಬೆರಳು ತೋರಿಸಿದ್ರೆ, ನಿಮ್ಮ ಮಾಹಿತಿಗೆ ಕನ್ನ ಹಾಕ್ತರೆ ಹುಷಾರ್ – ವೀಡಿಯೋ ನೋಡಿ

    ಸೆಲ್ಫಿಗೆ ಬೆರಳು ತೋರಿಸಿದ್ರೆ, ನಿಮ್ಮ ಮಾಹಿತಿಗೆ ಕನ್ನ ಹಾಕ್ತರೆ ಹುಷಾರ್ – ವೀಡಿಯೋ ನೋಡಿ

    ಬೆಂಗಳೂರು: ನೀವು ಸೆಲ್ಫಿ ಪ್ರಿಯರಾಗಿದ್ದಾರೆ ಫೋಟೋಗೆ ಪೋಸ್ ನೀಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಐಪಿಎಸ್ ಅಧಿಕಾರಿ ಡಿ. ರೂಪ ಅವರು ಟ್ವೀಟ್ ಮಾಡಿದ್ದಾರೆ.

    ಹೌದು, ಸೆಲ್ಫಿಗೆ ಪೋಸ್ ನೀಡುವ ವೇಳೆ ಸಾಮಾನ್ಯವಾಗಿ ನಮ್ಮ ಕೈ ಬೆರಳು ತೋರಿಸಿ ಫೋಟೋ ತೆಗೆದುಕೊಳ್ಳುತ್ತೇವೆ. ಆದರೆ ಇದು ಸೈಬರ್ ಕಳ್ಳರಿಗೆ ನಿಮ್ಮ ಮಾಹಿತಿಗೆ ಕನ್ನ ಹಾಕಲು ಸಹಾಯವಾಗುತ್ತದೆ ಎಂಬ ವೀಡಿಯೋವನ್ನು ಡಿ. ರೂಪ ಅವರು ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

    ಆಧುನಿಕ ತಂತ್ರಜ್ಞಾನದ ಬಳಕೆಯಿಂದ ನಮ್ಮ ಫೋಟೋದಲ್ಲಿ ಸೆರೆಯಾದ ಫ್ರಿಂಗರ್ ಪ್ರಿಂಟ್ (ಬೆರಳಚ್ಚು)ನ್ನು ನಕಲಿ ಮಾಡಲು ಸಾಧ್ಯವಾಗಿರುವುದು ವೀಡಿಯೋದಲ್ಲಿ ವಿವರಿಸಲಾಗಿದೆ. ಯಾರು ಬೇಕಾದರೂ ವ್ಯಕ್ತಿಯ ನಕಲಿ ಬೆರಳಚ್ಚು ಪಡೆದು ವ್ಯಕ್ತಿಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.

    ಸದ್ಯ ಸೈಬರ್ ಕಳ್ಳರ ಈ ತಂತ್ರಕ್ಕೆ ತಜ್ಞರು ಪರಿಹಾರವನ್ನು ಕಂಡು ಹಿಡಿದಿದ್ದು, ಸೆಲ್ಫಿಗೆ ಪೋಸ್ ನೀಡುವ ಮುನ್ನ ನಮ್ಮ ಫ್ರಿಂಗರ್ ಪ್ರಿಂಟ್ ದಾಖಲಾಗದ ಹಾಗೆ ವಸ್ತುವನ್ನು ಧರಿಸಬಹುದಾಗಿದೆ. ಆದರೆ ಈ ವಸ್ತು ಮಾರುಕಟ್ಟೆಯಲ್ಲಿ ಲಭ್ಯವಾಗಲು ಇನ್ನು 1 ರಿಂದ 2 ವರ್ಷಗಳು ಬೇಕಾಗುತ್ತದೆ ಎನ್ನಲಾಗಿದೆ.