Tag: IPL

  • 2019 ರ ಐಪಿಎಲ್ ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್?

    2019 ರ ಐಪಿಎಲ್ ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್?

    ಬೆಂಗಳೂರು: 2019ರ ಐಪಿಎಲ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಕಾಮ್ ಬ್ಯಾಕ್ ಮಾಡುವಂತೆ ಆರ್ ಸಿಬಿ ಟ್ವೀಟ್ ಮಾಡಿದೆ.

    ಎಬಿಡಿ ಅವರ ನಿವೃತ್ತಿಯ ಶಾಕಿಂಗ್ ಸುದ್ದಿ ತಿಳಿದ ಬಳಿಕ ಹಲವು ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ಅಪಾರ ಅಭಿಮಾನಿ ಬಳಗವನ್ನು ಗಳಿಸಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಕಾಮ್ ಬ್ಯಾಕ್ ಮಾಡಿ ಎಂದು ಬರೆದುಕೊಂಡಿದೆ.

    ಎಬಿಡಿ ನಿವೃತ್ತಿ ಘೋಷಿಸುವ ಮುನ್ನ 2018ರ ಐಪಿಎಲ್ ಟೂರ್ನಿಯಲ್ಲಿ ತಂಡ ತೋರಿದ್ದ ನೀರಸ ಪ್ರದರ್ಶನಕ್ಕೆ ಕ್ಷಮೆ ಕೋರಿದ್ದರು. ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಕ್ಷಮೆ ಕೋರಿ ಮುಂದಿನ ಐಪಿಎಲ್ ಗೆ ಮತ್ತಷ್ಟು ತಯಾರಿ ನಡೆಸಿ ಕಮ್ ಬ್ಯಾಕ್ ಮಾಡುವುದಾಗಿ ತಿಳಿಸಿದ್ದರು.

    https://www.instagram.com/p/BjFZIQfl2-F/?hl=en&taken-by=abdevilliers17

    ನಿವೃತ್ತಿ ಘೋಷಣೆ ಬಳಿಕವೂ ಐಪಿಎಲ್ ನಲ್ಲಿ ಭಾಗವಹಿಸುವ ಸಾಧ್ಯತೆಗಳಿದ್ದು, ಆದರೆ ಎಬಿಡಿ ಕುರಿತು ಸ್ಪಷ್ಟ ನಿರ್ಧಾರವನ್ನು ತಿಳಿಸಿಲ್ಲ. ದಕ್ಷಿಣ ಆಫ್ರಿಕಾ ಪರ 2015 ರಲ್ಲಿ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ್ದ ಎಬಿಡಿ ಇದೂವರೆಗೂ 228 ಏಕದಿನ ಪಂದ್ಯಗಳ 2018 ಇನ್ನಿಂಗ್ಸ್ ನಿಂದ ಒಟ್ಟು 9,577 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದ ಎಬಿಡಿ 114 ಪಂದ್ಯಗಳಲ್ಲಿ 8,765 ರನ್ ಗಳಿಸಿದ್ದಾರೆ. ಇನ್ನು 78 ಟಿ20 ಪಂದ್ಯವಾಡಿರುವ ಎಬಿಡಿ 75 ಇನ್ನಿಂಗ್ಸ್ ಗಳಲ್ಲಿ 1,672 ರನ್ ಗಳಿಸಿದ್ದಾರೆ. ಐಪಿಎಲ್ ಕೊನೆಯ ಪಂದ್ಯವನ್ನು ಮೇ 19 ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ್ದರು.

    ಐಪಿಎಲ್ ನಲ್ಲಿ ಆರ್ ಸಿಬಿ ಪರ 2011 ರಲ್ಲಿ ಮೊದಲ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಎಬಿಡಿ, ನಾಯಕ ಕೊಹ್ಲಿರೊಂದಿಗೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪರ ಈ ಇಬ್ಬರ ಜೋಡಿ 5 ಬಾರಿ 100 ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆ ಪಡೆದಿದೆ. ಅಲ್ಲದೇ 2 ಬಾರಿ 200 ಪ್ಲಸ್ ರನ್ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆ ಹೊಂದಿದೆ.  ಇದನ್ನು ಓದಿ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ವಿರಾಟ್ ಕೊಹ್ಲಿ

  • ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ವಿರಾಟ್ ಕೊಹ್ಲಿ

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ವಿರಾಟ್ ಕೊಹ್ಲಿ

    ಬೆಂಗಳೂರು: 2018 ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡ ನಿರೀಕ್ಷಿತ ಫಲಿತಾಂಶ ನೀಡಿಲ್ಲ, ಈ ಕುರಿತು ಅಭಿಮಾನಿಗಳಲ್ಲಿ ನಾಯಕ ಕೊಹ್ಲಿ ಕ್ಷಮೆ ಕೇಳಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋ ಫೋಸ್ಟ್ ಮಾಡಿರುವ ಕೊಹ್ಲಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಪ್ರತಿ ಪಂದ್ಯದಲ್ಲಿ ಗೆಲುವು ಪಡೆಯುವುದು ಅಗತ್ಯ ಇಲ್ಲವಾದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಇದು ಸಾಮಾನ್ಯ. ಆದರೆ ಈ ಬಾರಿಯ ಟೂರ್ನಿಯಲ್ಲಿ ತಂಡ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ತಂದಿದೆ. ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮುಂದಿನ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಆಶ್ವಾಸನೆ ನೀಡಿರುವ ಕೊಹ್ಲಿ, ತಂಡದ ಪ್ರತಿಯೊಬ್ಬ ಆಟಗಾರರು ಸಹ ಮುಂದಿನ ಟೂರ್ನಿಗೆ ಮತ್ತಷ್ಟು ತಯಾರಿ ನಡೆಸುತ್ತಾರೆ. ಮುಂದಿನ ಬಾರಿಯೂ ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.

    ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸದೆ ಹೊರ ಬಿದ್ದ ಆರ್ ಸಿಬಿ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿ 12 ಅಂಕಗಳೊಂದಿಗೆ 6 ಸ್ಥಾನದೊಂದಿಗೆ ನಿರ್ಗಮಿಸಿತು. ಆರ್ ಸಿಬಿ ತಂಡ ಕೊಹ್ಲಿ, ಎಬಿ ಡಿಲಿಯರ್ಸ್ ರಂತಹ ಸ್ಟಾರ್ ಆಟಗಾರನ್ನು ಹೊಂದಿದ್ದರೂ ಉತ್ತಮ ಪ್ಲೇಯಿಂಗ್ ಇಲೆವೆನ್ ರೂಪಿಸಲು ವಿಫಲವಾಗಿತ್ತು. ಇದುವರೆಗಿನ 11 ಟೂರ್ನಿಗಳಲ್ಲಿಯೂ ಪ್ರಶಸ್ತಿ ಗಳಿಸಲು ವಿಫಲವಾದ ಆರ್ ಸಿಬಿ ಮೂರು ಬಾರಿ ಫೈನಲ್ ಪ್ರವೇಶಿಸಿದೆ. 2009, 2011, 2016 ರ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ಆರ್ ಸಿಬಿ ಕ್ರಮವಾಗಿ ಡೆಕ್ಕನ್ ಚಾಜರ್ರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲುಂಡಿತ್ತು. 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವ ಮೂಲಕ ರನ್ನರ್ ಆಪ್ ಆಗಿತ್ತು.

    ಸದ್ಯ ಆರ್ ಸಿಬಿ ಪರ ಹೆಚ್ಚಿನ ಟೂರ್ನಿಗಳಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಸಹ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

  • ಡಾನ್ಸ್ ಮೂಲಕ ಧೋನಿಗೆ ಗೌರವ ಸೂಚಿಸಿದ ಬ್ರಾವೋ

    ಡಾನ್ಸ್ ಮೂಲಕ ಧೋನಿಗೆ ಗೌರವ ಸೂಚಿಸಿದ ಬ್ರಾವೋ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 7ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ತಂಡದ ಆಟಗಾರರು ಗೆಲುವಿನ ಬಳಿಕ ಸಂಭ್ರಮಾಚರಣೆ ಮಾಡಿದ್ದು, ಸಿಎಸ್‍ಕೆ ತಂಡದ ಹಾಡಿಗೆ ಬ್ರಾವೋ ಡಾನ್ಸ್ ಮಾಡಿ ಧೋನಿಗೆ ಗೌರವ ಸೂಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿಎಸ್‍ಕೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕೆರೆಬಿಯನ್ ಆಟಗಾರ, ಚೆನ್ನೈ ತಂಡದ ಬೌಲರ್ ಬ್ರಾವೋ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ಡ್ರೆಸ್ಸಿಂಗ್ ರೂಮ್ ನಲ್ಲಿದ್ದ ಧೋನಿ ಕೂಲ್ ಆಗಿಯೇ ಸಂಭ್ರಮಿಸಿ, ಇಬ್ಬರು ಆಟಗಾರರತ್ತ ನಗೆ ಬೀರಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎರಡು ವಿಕೆಟ್‍ಗಳಿಂದ ಮಣಿಸಿದ ಸಿಎಸ್‍ಕೆ, ನೇರವಾಗಿ ಫೈನಲ್ ಪ್ರವೇಶ ಪಡೆಯಿತು. ಚೆನ್ನೈ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಫಾ ಡು ಪ್ಲೆಸಿಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ ಕೊನೆಯ 3 ಓವರ್ ಗಳಲ್ಲಿ 43 ರನ್ ಗಳಿಸುವ ಒತ್ತಡದಲ್ಲಿದ್ದ ತಂಡಕ್ಕೆ ಡು ಪ್ಲೆಸಿಸ್ 18 ನೇ ಓವರ್ ನಲ್ಲಿ 20 ರನ್ ಸಿಡಿಸಿದರು. ಒಟ್ಟಾರೆ ಪಂದ್ಯದಲ್ಲಿ 42 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೆರವಿನಿಂದ 67 ರನ್ ಸಿಡಿಸಿ ಮಿಂಚಿದರು.

    ಹೈದರಾಬಾದ್ ವಿರುದ್ಧ ಗೆಲುವಿನೊಂದಿಗೆ ಚೆನ್ನೈ 7ನೇ ಬಾರಿ ಐಪಿಎಲ್ ಪ್ರವೇಶಿಸಿದ ಹೆಗ್ಗಳಿಕೆ ಪಡೆದಿದೆ. ಪಂದ್ಯದ ಬಳಿಕ ಮಾತನಾಡಿದ ಧೋನಿ, ತಮ್ಮ ಗೆಲುವಿಗೆ ಡ್ರೆಸ್ಸಿಂಗ್ ರೂಮ್ ವಾತಾವರಣ ಕಾರಣ. ತಂಡದ ಪ್ರತಿಯೊಬ್ಬ ಆಟಗಾರ ಹಾಗೂ ಸಿಬ್ಬಂದಿಯ ಪರಿಶ್ರಮ ಇಲ್ಲದಿದ್ದರೆ ಗೆಲುವು ಸಾಧಿಸುವುದು ಕಷ್ಟಸಾಧ್ಯ ಎಂದು ಹೇಳಿದರು.

     

  • `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    `ಈ ಸಲ ಕಪ್ ನಮ್ದೆ’ – ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ : ಉತ್ತಪ್ಪ, ಕೃಷ್ಣ

    ಕೋಲ್ಕತ್ತಾ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆದಿಲ್ಲ. ಹೀಗಾಗಿ ನಾವು ಕನ್ನಡಿಗರೇ ನಮ್ಮನ್ನು ಬೆಂಬಲಿಸಿ ಎಂದು ಕನ್ನಡಿಗರಾದ ರಾಬಿನ್ ಉತ್ತಪ್ಪ, ಪ್ರಸಿದ್ಧ ಕೃಷ್ಣ ಕನ್ನಡಲ್ಲೇ ಮನವಿ ಮಾಡಿದ್ದಾರೆ.

    ಚೆನ್ನೈ ವಿರುದ್ಧ ಪಂದ್ಯದ ಬಳಿಕ ಮಾತನಾಡಿರುವ ಕೋಲ್ಕತ್ತಾ ತಂಡ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ಮತ್ತು ಕೃಷ್ಣ, ಆರ್ ಸಿಬಿ ಈ ಟೂರ್ನಿಯಲ್ಲಿ ಇಲ್ಲ. ಅದ್ದರಿಂದ ತಮಗೇ ಬೆಂಬಲ ನೀಡಿ ಎಂದು ಕೇಳಿದ್ದಾರೆ.

    ಇದೇ ವೇಳೆ ಈ ಸಲ ಕಪ್ ನಮ್ದೆ ಎಂದು ಹೇಳಿದ ಇಬ್ಬರು ಆಟಗಾರರು, ಕೆಕೆಆರ್ ತಂಡದಲ್ಲಿ ಹಲವರು ಕನ್ನಡಿಗರು ಆಡುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲುವ ವಿಶ್ವಾಸವಿದೆ. ಅದ್ದರಿಂದ ಬೆಂಬಲ ನೀಡಿ ಎಂದು ಕನ್ನಡದಲ್ಲೇ ಮನವಿ ಮಾಡಿದರು.

    ಶನಿವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕೃಷ್ಣ, ಕೊನೆಯ ಓವರ್ ನಲ್ಲಿ ರನೌಟ್ ನೊಂದಿಗೆ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ದರು. ಈ ವೇಳೆ ಮಾತನಾಡಿದ ಕೃಷ್ಣ ಇನ್ನಿಂಗ್ಸ್ ಮೊದಲ ಓವರ್ ನಲ್ಲಿ 11 ರನ್ ನೀಡಿದ ವೇಳೆ ಹೆಚ್ಚಿನ ಒತ್ತಡವಾಗಿತ್ತು, ಬಳಿಕ ನನ್ನ ಮೇಲಿನ ವಿಶ್ವಾಸವನ್ನು ದೃಢಮಾಡಿ ಬೌಲ್ ಮಾಡಿದೆ ಎಂದು ಹೇಳಿದ್ದರು. ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ ಹಾಗೂ ಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಉತ್ತಪ್ಪ 34 ಎಸೆತಗಳಲ್ಲಿ 45 ರನ್ ಸಿಡಿಸಿದ್ದರು.

    ಈ ಬಾರಿ ಟೂರ್ನಿಯಲ್ಲಿ ಕೆಕೆಆರ್ ತಂಡ ಮಾತ್ರವಲ್ಲದೆ ರಾಜಸ್ಥಾನ ಪರ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಕೆ ಗೌತಮ್ ಆಡಿದ್ದರೆ, ಕೆಎಲ್ ರಾಹುಲ್, ಕರುಣ್, ಮಾಯಾಂಕ್ ಅಗರವಾಲ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ನಲ್ಲಿ ವಿನಯ್ ಕುಮಾರ್ ಆಡುತ್ತಿದ್ದಾರೆ.

    https://www.youtube.com/watch?v=oY-HilLrKn4

  • ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

    ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

    ಪುಣೆ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದೆ. ಈ ವೇಳೆಯೇ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಸೂಚನೆ ನೀಡಿದ್ದಾರೆ.

    ತಂಡದ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ಚೆನ್ನೈ ತಂಡದ ಫ್ರಾಚೈಂಸಿಗಳು ಆಟಗಾರರಿಗೆ ಉತ್ತಮ ಅವಕಾಶ ನೀಡಿದ್ದಾರೆ. ಹಾಗೆಯೇ ತಂಡದ ಹಲವು ಆಟಗಾರರು ಮುಂದಿನ ಎರಡು ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಆಡುವುದು ಕಷ್ಟಸಾಧ್ಯ. ಆಟಗಾರರು ಶಾರ್ಟ್ ಫಾರ್ಮ್ ಗೇಮ್ ಗೆ ಹೊಂದಾಣಿಕೆ ಸಹ ಆಗುವುದಿಲ್ಲ. ಚೆನ್ನೈ 10 ವರ್ಷ ಪೂರೈಸುವ ವೇಳೆ ಆಟಗಾರರಿಗೆ ಉತ್ತಮ ನೆನಪಿರುತ್ತದೆ ಎಂದು ಹೇಳಿದ್ದಾರೆ.

    36 ವರ್ಷದ ಧೋನಿ ಅವರ ಈ ಹೇಳಿಕೆಯಿಂದ ಸದ್ಯ ಚೆನ್ನೈ ತಂಡ ಐಪಿಎಲ್ ನಲ್ಲಿ 10 ವರ್ಷ ಪೂರ್ಣಗೊಳಿಸಿದ ಬಳಿಕ ಐಪಿಎಲ್ ನಿಂದ ನಿವೃತ್ತಿ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

    ಇದೇ ವೇಳೆ ಟೂರ್ನಿಯ ಆರಂಭದಲ್ಲಿ ಚೆನ್ನೈ ತಂಡದ ವಿರುದ್ಧ ಕೇಳಿ ಬಂದ ವಿಮರ್ಶೆಯಲ್ಲಿ ತಂಡದ ಬಹುತೇಕರು ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಧೋನಿ, ತಂಡದ ಆಟಗಾರರು ಪರಸ್ಪರ ಉತ್ತಮ ಭಾವನೆ ಹೊಂದಿದ್ದಾರೆ. ಅದ್ದರಿಂದ ಪಂದ್ಯವನ್ನು ಸುಲಭವಾಗಿ ತಿಳಿಯಲು ಸಾಧ್ಯ. ಅಲ್ಲದೇ ಇದು ತಂಡದ ನಾಯಕನ ಕಾರ್ಯ ಸುಲಭವಾಗಿಸುತ್ತದೆ. ಒಂದು ಉತ್ತಮ ತಂಡ ಆಯ್ಕೆ ಮಾಡದಿದ್ದರೆ, ಉತ್ತಮ ಪ್ರದರ್ಶನ ನೀಡುವುದು ಕಷ್ಟವಾಗುತ್ತದೆ. ತಂಡದ ಆಟಗಾರರು ಫಾರ್ಮ್ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಧೋನಿ ತಮ್ಮ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಹಲವು ಕಪ್ ಗಳನ್ನು ಗೆಲ್ಲಲು ಕಾರಣರಾಗಿದ್ದು. ಅಲ್ಲದೇ ಎರಡು ವಿಶ್ವಕಪ್ ಗೆದ್ದ ತಂಡದ ನಾಯಕತ್ವ ವಹಿಸಿದ್ದರು. ಐಪಿಎಲ್ ನಲ್ಲಿ ಚೆನ್ನೈ 2 ಬಾರಿ ಕಪ್ ಹಾಗೂ ಮೂರು ಬಾರಿ ರನ್ನರ್ ಆಪ್ ಸ್ಥಾನರೆಗೂ ಮುನ್ನಡೆಸಿದ್ದರು. ಎರಡು ವರ್ಷಗಳ ನಿಷೇಧ ಬಳಿಕ ಈ ಬಾರಿ ಟೂರ್ನಿಯಲ್ಲಿ ಭಾಗಹಿಸಿರುವ ಚೆನ್ನೈ ಕಪ್ ಗೆಲ್ಲುವ ಫೇವರೆಟ್ ತಂಡವಾಗಿದೆ. ಇದನ್ನು ಓದಿ: ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ಧೋನಿ ಈಗಾಗಲೇ ಟೆಸ್ಟ್ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಧೋನಿ ಈ ಹಿಂದೆಯೂ ನಿವೃತ್ತಿ ಬಗ್ಗೆ ಪ್ರಶ್ನಿಸಿದ ವೇಳೆಯೂ ತಮ್ಮ ದೇಹ ಆಟಕ್ಕೆ ಸಹಕಾರ ನೀಡುವವರೆಗೂ ಮುಂದುವರೆಯುವುದಾಗಿ ಹೇಳಿದ್ದರು. ಧೋನಿ ಸದ್ಯ ನಿವೃತ್ತಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ಇದ್ದರೂ ಅವರ ಈ ಹೇಳಿಕೆಗಳು ನಿವೃತ್ತಿಗೆ ಪುಷ್ಠಿ ನೀಡುತ್ತಿವೆ ಎನ್ನಬಹುದು. ಇದನ್ನು ಓದಿ: ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ

    https://www.instagram.com/p/BjDCPRqHu-p/?utm_source=ig_embed

  • ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಸೋತು ಟೂರ್ನಿಯಿಂದ ಹೊರಬಿದ್ದರೂ, ತಂಡದ ಸಹ ಮಾಲೀಕರಾಗಿರುವ ಪ್ರೀತಿ ಜಿಂಟಾ ಮಾತ್ರ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ತಂಡದ ಸಿಬ್ಬಂದಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಧ್ವನಿ ದಾಖಲಾಗದೇ ಇದ್ದರೂ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಗೆ ಪ್ರವೇಶಿಸದೇ ಹೊರಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಪ್ರೀತಿ ಜಿಂಟಾ ಟ್ವಿಟ್ಟರ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ಶುಭಕೋರಿದ್ದಾರೆ. ಅಲ್ಲದೇ ಮುಂದಿನ ವರ್ಷ ತಾವು ಕಮ್ ಬ್ಯಾಕ್ ಮಾಡುವುದಾಗಿ ಬರೆದು ಕೊಂಡಿದ್ದಾರೆ.

    ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಸತತ ಗೆಲುವುಗಳ ಮೂಲಕ ಟೂರ್ನಿ ಆರಂಭಿಸಿದ ಪಂಜಾಬ್ ತಂಡ ಮೊದಲ 5 ಪಂದ್ಯಗಳಲ್ಲಿ 4 ರಲ್ಲಿ ಜಯಗಳಿಸಿತ್ತು. ಬಳಿಕ ನಡೆದ 9 ಪಂದ್ಯದಲ್ಲಿ ಸತತವಾಗಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟಾರೆ ಟೂರ್ನಿಯಲ್ಲಿ ಪಂಜಾಬ್ ತಂಡ 14 ಪಂದ್ಯಗಳಲ್ಲಿ 6 ರಲ್ಲಿ ಮಾತ್ರ ಗೆಲುವು ಪಡೆದಿದೆ.

    ಇನ್ನು ಟೂರ್ನಿಯಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಸಹ ನೀರಸ ಪ್ರದರ್ಶನವನ್ನು ನೀಡಿ ಪ್ಲೇ ಆಫ್ ಪ್ರವೇಶಿಸದೇ ಹೊರ ನಡೆದಿದೆ. 14 ಪಂದ್ಯಗಳಲ್ಲಿ 6 ರಲ್ಲಿ ಜಯ ಗಳಿಸಿರುವ ಮುಂಬೈ 12 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ.

  • ಬೆನ್ ಸ್ಟೋಕ್ಸ್ 1 ರನ್ ಗೆ ಬರೋಬ್ಬರಿ 6 ಲಕ್ಷ ರೂ. ನೀಡಿದ ರಾಜಸ್ಥಾನ ರಾಯಲ್ಸ್!

    ಬೆನ್ ಸ್ಟೋಕ್ಸ್ 1 ರನ್ ಗೆ ಬರೋಬ್ಬರಿ 6 ಲಕ್ಷ ರೂ. ನೀಡಿದ ರಾಜಸ್ಥಾನ ರಾಯಲ್ಸ್!

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018 ರ ಟೂರ್ನಿಯ ವಿದೇಶಿ ಆಟಗಾರರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗಮನ ಸೆಳೆದಿದ್ದರು. ಆದರೆ ರಾಜಸ್ಥಾನ ಪರ ಆಡಿದ್ದ ಸ್ಟೋಕ್ 13 ಇನ್ನಿಂಗ್ಸ್ ಗಳಿಂದ ಕೇವಲ 196 ರನ್ ಗಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಲ್ಲಿ ಬೆನ್ ಸ್ಟೋಕ್ಸ್ ರನ್ನು ರಾಜಸ್ಥಾನ ರಾಯಲ್ಸ್ 12.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಟೂರ್ನಿಯಲ್ಲಿ ಬೆನ್ ಸ್ಟೋಕ್ಸ್ 13 ಇನ್ನಿಂಗ್ಸ್ ಗಳಿಂದ 196 ರನ್ ಗಳಿಸಿದ್ದು ಅವರು ಪಡೆದ ಮೊತ್ತಕ್ಕೆ ಹೋಲಿಸಿದರೆ ಪ್ರತಿ ರನ್ ಗೆ 6.37 ಲಕ್ಷ ರೂ. ನೀಡಿದಂತಾಗುತ್ತದೆ. ಇನ್ನು ಈ ಟೂರ್ನಿಯಲ್ಲಿ ಸ್ಟ್ರೋಕ್ಸ್ 8 ವಿಕೆಟ್ ಪಡೆದಿದ್ದು, ಪ್ರತಿ ವಿಕೆಟ್ ಗೆ 1.56 ಕೋಟಿ ನೀಡಿದಂತಾಗುತ್ತದೆ. 26 ವರ್ಷದ ಬೆನ್ ಸ್ಟ್ರೋಕ್ ಟೂರ್ನಿಯ ಮಧ್ಯದಲ್ಲೇ ರಾಷ್ಟ್ರೀಯ ತಂಡದ ಪರ ಆಡಲು ಹಿಂದಿರುಗಿದ್ದಾರೆ.

    ಸದ್ಯ ರಾಜಸ್ಥಾನ ರಾಯಲ್ಸ್ ತಂಡ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್ ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಗೋಪಾಲ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ಆರ್ ಸಿಬಿ ಸೋಲಿಗೆ ಕಾರಣರಾದರು. ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ 4 ವಿಕೆಟ್ ಪಡೆದ ಗೋಪಾಲ್ ಕೇವಲ 16 ರನ್ ಬಿಟ್ಟುಕೊಟ್ಟರು. ತಂಡದ ಗೆಲುವಿಗೆ ಕಾರಣರಾದ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

  • ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಗೆ ಪೈಪೋಟಿ ಕೊಟ್ರ ಮೆಕ್ಕಲಂ!

    ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಗೆ ಪೈಪೋಟಿ ಕೊಟ್ರ ಮೆಕ್ಕಲಂ!

    ಬೆಂಗಳೂರು: ಒಂದು ವಿಡಿಯೋ ಸಾಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದು ಇಂಟರ್ ನೆಟ್ ಸೆನ್ಸೇಷನ್ ಆಗಿದ್ದ ನಟಿ ಪ್ರಿಯಾ ವಾರಿಯರ್ ಗೆ ಪೈಪೋಟಿ ನೀಡುವಂತೆ ಆರ್ ಸಿಬಿ ಆಟಗಾರ ಬ್ರೆಂಡನ್ ಮೆಕ್ಕಲಂ ಹುಬ್ಬೆರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸದ್ಯ ಈ ವಿಡಿಯೋವನ್ನು ಆರ್ ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಿಯಾ ವಾರಿಯಾರ್ ಗೆ ಪೈಪೋಟಿ ನೀಡಿದ್ದರಾ ಎಂದು ಬರೆದುಕೊಂಡಿದೆ. ಈ ಹಿಂದೆಯೂ ಹಲವು ನಟ ನಟಿಯರು ಪ್ರಿಯಾ ವಾರಿಯರ್ ರೀತಿ ಹುಬ್ಬೆರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದರು. ಸದ್ಯ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಡಮ ಮೆಕಲಮ್ ಸಹ ಈ ಸಾಲಿಗೆ ಸೇರಿದ್ದಾರೆ.

    ಸದ್ಯದ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಮೆಕ್ಕಲಂ 6 ಜನ್ನಿಂಗ್ಸ್ ಗಳಲ್ಲಿ ಕೇವಲ 127 ರನ್ ಮಾತ್ರ ಗಳಿಸಿದ್ದಾರೆ. ಶನಿವಾರ ನಡೆದ ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ ಸೋಲುವ ಮೂಲಕ ಆರ್ ಸಿಬಿ 2018 ರ ಐಪಿಎಲ್‍ನಿಂದ ಹೊರಬಿದ್ದಿದೆ. ಟೂರ್ನಿಯಲ್ಲಿ 14 ಪಂದ್ಯಗಳನ್ನು ಆಡಿರುವ ಕೊಹ್ಲಿ ನಾಯಕತ್ವದ ಆರ್ ಸಿಬಿ ಕೇವಲ 6 ಪಂದ್ಯಗಳನ್ನು ಮಾತ್ರ ಗೆದ್ದು 12 ಅಂಕಗಳನ್ನು ಮಾತ್ರ ಪಡೆದಿದೆ.

    ಪಂದ್ಯದಲ್ಲಿ ರಾಜಸ್ಥಾನದ ಪರ ಕನ್ನಡಿಗ ಶ್ರೇಯಸ್ ಗೋಪಾಲ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ಆರ್ ಸಿಬಿ ಸೋಲಿಗೆ ಕಾರಣರಾದರು. ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ 4 ವಿಕೆಟ್ ಪಡೆದ ಗೋಪಾಲ್ ಕೇವಲ 16 ರನ್ ಬಿಟ್ಟುಕೊಟ್ಟರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ 14 ಪಂದ್ಯಗಳಿಂದ 14 ಅಂಕ ಪಡೆದರೂ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನು ಓದಿ: ಪ್ರಿಯಾ ವಾರಿಯರ್ `ಒರು ಅಡರ್ ಲವ್’ ಸಾಂಗ್ ಟೀಸರ್ ವೈರಲ್

  • ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಐಪಿಎಲ್ ನಲ್ಲಿ ಕೆಟ್ಟ ದಾಖಲೆ ಬರೆದ ಬಾಸೀಲ್ ತಂಪಿ

    ಬೆಂಗಳೂರು: ಆರ್ ಸಿಬಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲರ್ ಬಾಸೀಲ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡುವ ಮೂಲಕ ಇಶಾಂತ್ ಶರ್ಮಾ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಮುರಿದ್ದಾರೆ.

    ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ತಂಪಿ 17.50 ಎಕಾನಮಿಯಲ್ಲಿ 70 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ದಾಖಲೆ ಬರೆದರು. ಈ ಹಿಂದೆ 2013 ಹೈದರಾಬಾದ್ ತಂಡದ ಇಶಾಂತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ಓವರ್ ಎಸೆದು 66 ರನ್ ನೀಡಿದ್ದರು.

    ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಯಶಸ್ವಿ ಡೆತ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ತಂಪಿ, ಆರ್ ಸಿಬಿ ವಿರುದ್ಧ ನಿರಸ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಆರ್ ಸಿಬಿ ವಿರುದ್ಧ ಅತೀ ಹೆಚ್ಚು ರನ್ ನೀಡಿದವರ ಪಟ್ಟಿಯಲ್ಲಿ ಸಂದೀಪ್ ಶರ್ಮಾ(1/40), ಸಿದ್ದಾರ್ಥ್ ಕೌಲ್ (2/44) ಸ್ಥಾನ ಪಡೆದಿದ್ದಾರೆ.

    ಹೈದರಾಬಾದ್ ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದ ಆರ್ ಸಿಬಿ ಬ್ಯಾಟಿಂಗ್ ಪಡೆಯ ಎಬಿ ಡಿವಿಲಿಯಸ್ಸ್ (69), ಮೊಯಿನ್ ಅಲಿ (65), ಕಾಲಿನ್ ಡೇ (40) ರನ್ ಸಿಡಿಸಿ ಮಿಂಚಿದರು. ಆರ್ ಸಿಬಿ ಬೃಹತ್ ಮೊತ್ತ ಬೆನ್ನತಿದ ಹೈದರಾಬಾದ್ ಕೇನ್ ವಿಲಿಯಮ್ಸ್ (81 ರನ್, 42 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಮನೀಷ್ ಪಾಂಡ್ಯ (ಅಜೇಯ 62 ರನ್) ಬ್ಯಾಟಿಂಗ್ ನೆರವಿನಿಂದ ಗೆಲುವಿನ ಸನಿಹದಲ್ಲಿ ಎಡವಿತು. ಆರ್ ಚಿಬಿ ವಿರುದ್ಧ ಸೋಲಿನ ಬಳಿಕವೂ ಹೈದರಾಬಾದ್ 18 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

  • ಎಬಿಡಿ, ಕ್ಯಾಚ್ ಆಫ್ ದಿ ಟೂರ್ನಿಮೆಂಟ್ – `ಸೂಪರ್ ಮ್ಯಾನ್’ ಎಂದ್ರು ವಿರಾಟ್

    ಎಬಿಡಿ, ಕ್ಯಾಚ್ ಆಫ್ ದಿ ಟೂರ್ನಿಮೆಂಟ್ – `ಸೂಪರ್ ಮ್ಯಾನ್’ ಎಂದ್ರು ವಿರಾಟ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್, ಆರ್ ಸಿಬಿ ನಡುವಿನ ಪಂದ್ಯದಲ್ಲಿ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹಾರಿ ಕ್ಯಾಚ್ ಹಿಡಿದಿದ್ದನ್ನು ನೋಡಿ ಕೊಹ್ಲಿ ಎಬಿಡಿಯನ್ನು ಸೂಪರ್ ಮ್ಯಾನ್‍ಗೆ ಹೋಲಿಕೆ ಮಾಡಿದ್ದಾರೆ.

    ಈ ಕುರಿತು ಪಂದ್ಯದ ಮುಕ್ತಾಯ ಬಳಿಕ ಎಬಿ ಡಿವಿಲಿಯರ್ಸ್ ಫೋಟೋ ಟ್ವೀಟ್ ಮಾಡಿರುವ ಕೊಹ್ಲಿ ಸೂಪರ್ ಮ್ಯಾನ್ ಲೈವ್ ಟು ಡೇ ಎಂದು ಬರೆದುಕೊಂಡಿದ್ದಾರೆ.

    ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆಯುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದಕ್ಕೂ ಮುನ್ನ ಪಂದ್ಯದಲ್ಲಿ ಎಬಿಡಿ ಅರ್ಧ ಶತಕ (69 ರನ್, 39 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 218 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು, ಆದರೆ ಫೀಲ್ಡಿಂಗ್ ನಲ್ಲಿ ಹಲವು ಬಾರಿ ಎಡವಿತ್ತು. ನಾಯಕ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಕೈ ಚೆಲ್ಲಿದರೆ, ಹಲವು ಆಟಗಾರರು ಕಳಪೆ ಫೀಲ್ಡಿಂಗ್ ನಡೆಸಿದರು. ಇದರ ನಡುವೆಯೂ ಎಬಿಡಿ ಪಡೆದ ಕ್ಯಾಚ್ ಕ್ರಿಕೆಟ್ ಆರ್ ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

    ಆರ್ ಸಿಬಿ ಬೃಹತ್ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ತಂಡದ ವಿಲಿಯಮ್ಸ್(42 ಎಸೆತ, 81 ರನ್) ಮತ್ತು ಅಲೆಕ್ಸ್ ಹೇಲ್ಸ್(35) ಉತ್ತಮ ಆರಂಭ ನೀಡಿದರು. ಪಂದ್ಯದ 8 ನೇ ಓವರ್ ಬೌಲ್ ಮಾಡುತ್ತಿದ್ದ ವೇಳೆ ಮೊಯೆನ್ ಅಲಿ ಎಸೆತದಲ್ಲಿ ಹೇಲ್ಸ್ ಭಾರೀ ಹೊಡೆತಕ್ಕೆ ಮುಂದಾದರು. ಈ ವೇಳೆ ಬೌಂಡರಿ ಬಳಿಯಿದ್ದ ಡಿವಿಲಿಯರ್ಸ್ ಗಾಳಿಯಲ್ಲಿ ಹಾರಿ ಒಂದೇ ಕೈಲಿ ಕ್ಯಾಚ್ ಪಡೆದರು. ಪಂದ್ಯದ ಬಳಿಕ ಮಾತನಾಡಿದ ಎಬಿಡಿ ಆ ವೇಳೆ ಚೆಂಡು ತನ್ನ ಬಳಿಯಿಂದ ದೂರ ಬರುವುದನ್ನು ಕಂಡು ಕ್ಯಾಚ್ ಪಡೆಯಲು ಯತ್ನಿಸಿದೆ. ಅದೃಷ್ಟವಶಾತ್ ಚೆಂಡು ನನ್ನ ಕೈ ಸೇರಿತ್ತು. ಪ್ರತಿ ಬಾರಿ ನಾನು ನನ್ನನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

    ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಲು ಆರ್ ಸಿಬಿ ಗೆ ಹೈದರಾಬಾದ್ ವಿರುದ್ಧ ಗೆಲುವು ಪಡೆಯುವುದು ಅನಿವಾರ್ಯವಾಗಿತ್ತು. ಈ ಪಂದ್ಯದಲ್ಲಿ 14 ರನ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದೆ. ಶನಿವಾರ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್ ಸಿಬಿ ಎದುರಿಸಲಿದ್ದು, ಗೆಲ್ಲುವ ಒತ್ತಡದಲ್ಲಿದೆ.