Tag: IPL

  • ಅಭ್ಯಾಸಕ್ಕಿಳಿದ ಧೋನಿ, ಸಿಎಸ್‍ಕೆ – ಮೊದಲ ಪಂದ್ಯದಲ್ಲೇ ಭರ್ಜರಿ ಫೈಟ್ ನಿರೀಕ್ಷೆ

    ಅಭ್ಯಾಸಕ್ಕಿಳಿದ ಧೋನಿ, ಸಿಎಸ್‍ಕೆ – ಮೊದಲ ಪಂದ್ಯದಲ್ಲೇ ಭರ್ಜರಿ ಫೈಟ್ ನಿರೀಕ್ಷೆ

    ಚೆನ್ನೈ: 2019ರ ಐಪಿಎಲ್ ಆರಂಭಕ್ಕೆ ದಿನಗಣನೇ ಆರಂಭವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್‍ಕೆ ತಂಡವನ್ನು ಮುನ್ನಡೆಸುತ್ತಿರುವ ಧೋನಿ ತಂಡದೊಂದಿಗೆ ಅಭ್ಯಾಸಕ್ಕೆ ಇಳಿದಿದ್ದಾರೆ.

    ಐಪಿಎಲ್ ಆರಂಭಕ್ಕೆ 1 ವಾರವಷ್ಟೇ ಬಾಕಿ ಇದ್ದು, ಮೊದಲ ಪಂದ್ಯದಲ್ಲೇ ಆರ್ ಸಿಬಿ, ಚೆನ್ನೈ ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಧೋನಿ ಬಿಗ್ ಶಾಟ್ ಸಿಡಿಸಲು ಅಭ್ಯಾಸ ನಡೆಸುತ್ತಿರುವುದು ಕಾಣಬಹುದಾಗಿದೆ. ಧೋನಿಯೊಂದಿಗೆ ತಂಡದ ಸದಸ್ಯರಾದ ಸುರೇಶ್ ರೈನಾ, ರಾಯುಡು, ಜಾಧವ್, ಮರಳಿ ವಿಜಯ್, ಕರಣ್ ಶರ್ಮಾ ಸೇರಿದಂತೆ ಹಲವು ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದೊಂದಿಗೆ ದಕ್ಷಿಣ ಆಫ್ರಿಕಾ ಆಟಗಾರ ಡುಪ್ಲೆಸಿಸ್, ಇಮ್ರಾನ್ ತಹೀರ್ ಇನ್ನಷ್ಟೇ ಸೇರಿಕೊಳ್ಳಬೇಕಿದೆ.

    ಮಾರ್ಚ್ 23 ರಂದು ಮೊದಲ ಪಂದ್ಯ ನಡೆಯಲಿದ್ದು, ತವರು ಕ್ರೀಡಾಂಗಣದಲ್ಲಿ ಧೋನಿ ತಂಡ ಆರ್ ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಕಮ್ ಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ವರ್ಷ ಟ್ರೋಫಿ ಗೆಲ್ಲುವ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು.

     

  • ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ತಮ್ಮ ವಿರುದ್ಧ ಆರೋಪಗಳಿಗೆ ಪೃಥ್ವಿ ಶಾ ತಿರುಗೇಟು!

    ಮುಂಬೈ: ಆಸೀಸ್ ಸರಣಿಯಲ್ಲಿ ವೇಳೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.

    ಸರಣಿಯಲ್ಲಿ ಗಾಯಗೊಂಡಿದ್ದ ಪೃಥ್ವಿಶಾರನ್ನು ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸರಣಿಯಿಂದ ಕೈ ಬಿಡಲಾಗಿತ್ತು ಎಂದು ಕೆಲ ವರದಿಗಳು ಪ್ರಕಟಗೊಂಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಗಾಯದ ಸಮಸ್ಯೆಯಿಂದ ಹೊರಗುಳಿಯ ಬೇಕಾಯಿತು. ಆದರೆ ಅಶಿಸ್ತಿನ ವರ್ತನೆ ವರದಿಗಳು ಎಲ್ಲವೂ ಕಪೋಲಕಲ್ಪಿತ ಎಂದು ಅಲ್ಲಗೆಳೆದಿದ್ದಾರೆ.

    19 ವರ್ಷದ ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದೆ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಸರಣಿಯ ನಡುವೆ ಭಾರತಕ್ಕೆ ಹಿಂದಿರುಗಿದ್ದರು. ಸದ್ಯ ಚೇತರಿಸಿಕೊಂಡಿರುವ ಪೃಥ್ವಿ ಶಾ ಐಪಿಎಲ್ ಆಡಲು ಅಭ್ಯಾಸದಲ್ಲಿ ತೊಡಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಆಡಲಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪೃಥ್ವಿ ಶಾ, ನಾನು ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಗೆ ಹೋಗುಚ ವೇಳೆ ನನ್ನೊಂದಿಗೆ 10 ವರ್ಷ ಅನುಭವವುಳ್ಳ ಹಿರಿಯ ಆಟಗಾರರು ಇದ್ದರು. ಆದರೆ ನಾಯಕ ಹಾಗೂ ಕೋಚ್ ಇಲ್ಲಿ ಹಿರಿಯ, ಕಿರಿಯ ಎಂಬುವುದಿಲ್ಲ. ನೀನು ಯಾವುದೇ ಸಮಯದಲ್ಲಿ ಆಟಗಾರರೊಂದಿಗೆ ಮಾತನಾಡಬಹುದು, ನಿನ್ನ ಪ್ರಶ್ನೆಗಳ ಮೂಲಕ ಅವರಿಗೆ ಕಿರಿಕಿರಿ ಕೂಡ ಮಾಡಬಹುದು ಎಂದು ತಿಳಿದಿದ್ದಾಗಿ ಹೇಳಿದರು.

    ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿ ನನಗೆ ಬಹುತೇಕ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕೋಚ್ ಹಾಗೂ ತಜ್ಞರು ಉತ್ತಮ ಸಹಕಾರ ನೀಡಿದ್ದಾರೆ. ಹಲವು ಅನುಭವಿ ಆಟಗಾರರ ಆಡುವುದನ್ನು ನಾನು ಗಮನಿಸಿದ್ದೇನೆ. ಸದ್ಯ ತಂಡದಲ್ಲಿ ನನಗೆ ನಂ.5 ಕ್ರಮಾಂಕ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಐಪಿಎಲ್ 2019: ವಿಶ್ವಕಪ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದ ಕೊಹ್ಲಿ

    ಐಪಿಎಲ್ 2019: ವಿಶ್ವಕಪ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದ ಕೊಹ್ಲಿ

    ಬೆಂಗಳೂರು: ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ವಿಶ್ವಕಪ್‍ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಆದ್ದರಿಂದ ಅಂತಹ ಅವಕಾಶವನ್ನು ಯಾರು ತಪ್ಪಿಸಿಕೊಳ್ಳುವುದಿಲ್ಲ. ಪರಿಣಾಮ ನಾವು ಯಾವುದೇ ಆಟಗಾರರಿಗೆ ನಿರ್ಬಂಧ ಹೇರಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರ್ ಸಿಬಿ ಆ್ಯಪ್ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗವಹಿಸಿ ಮಾತನಾಡಿದರು. ಆಟಗಾರರಿಗೆ ಇಷ್ಟೇ ಪಂದ್ಯಗಳನ್ನು ಆಡಬೇಕು ಎಂದು ಹೇಳಲು ಸಾಧ್ಯವಿಲ್ಲ. ನಾನು 10 ರಿಂದ 15 ಪಂದ್ಯಗಳನ್ನು ಆಡುವ ಸಾಮಥ್ರ್ಯವನ್ನು ಹೊಂದಿದ್ದರೆ, ಅಷ್ಟು ಮಾತ್ರವೇ ಆಡಲು ಸಾಧ್ಯ. ನನಗಿಂತ ಹೆಚ್ಚಿನ ಸಾಮಥ್ರ್ಯ ಹೊಂದಿರುವ ಆಟಗಾರರು ಇದ್ದಾರೆ. ಇದು ವೈಯಕ್ತಿಕ ವಿಚಾರ ಎಂದರು. ಅಲ್ಲದೇ ಐಪಿಎಲ್‍ನಲ್ಲಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ, ಇದರ ನಡುವೆಯೇ ನಮ್ಮಿಂದ ಸಾಧ್ಯವಾಗುವ ಶ್ರೇಷ್ಠ ಪ್ರದರ್ಶನವನ್ನ ನೀಡುತ್ತೇವೆ ಎಂದು ಹೇಳಿದ್ರು.

    ಆರ್ ಸಿಬಿ ಆ್ಯಪ್: 12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 23 ರಿಂದ ಚುಟುಕು ಕ್ರಿಕೆಟ್ ಸರಣಿ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿಯಡೆಗೆ ತಯಾರಿ ಆರಂಭಿಸಿದೆ. ಆರಂಭಿಕ ಆವೃತ್ತಿಯಿಂದ ಈವರೆಗೂ ಆರ್‍ಸಿಬಿ ಸೋತರೂ ಗೆದ್ದರೂ ಅಭಿಮಾನಿಗಳಿಗೆ ಕೊರತೆ ಇಲ್ಲ ಎಂಬುವುದನ್ನು ಎಲ್ಲಿರಿಗೂ ತಿಳಿದಿದೆ.

    ಇತ್ತ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಆರ್‍ಸಿಬಿ ವಿಶೇಷ ಆ್ಯಪ್‍ವೊಂದನ್ನ ಸಿದ್ಧಪಡಿಸಿದೆ. ನಗರದಲ್ಲಿ ಇಂದು ಆರ್ ಸಿಬಿ ಆ ವಿಶಿಷ್ಟ ಮೊಬೈಲ್ ಆಪ್ ಅನ್ನ ಬಿಡುಗಡೆಗೊಳಿತು. ಕಾರ್ಯಕ್ರಮದಲ್ಲಿ ಕೋಚ್ ಗ್ಯಾರಿ ಕಸ್ಟರ್ನ್, ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಪಾಲ್ಗೊಂಡಿದ್ರು.

  • ಕೊಲೆ ಮಾಡುವುದಕ್ಕಿಂತಲೂ ಮ್ಯಾಚ್ ಫಿಕ್ಸಿಂಗ್ ಘೋರ ಅಪರಾಧ: ಧೋನಿ

    ಕೊಲೆ ಮಾಡುವುದಕ್ಕಿಂತಲೂ ಮ್ಯಾಚ್ ಫಿಕ್ಸಿಂಗ್ ಘೋರ ಅಪರಾಧ: ಧೋನಿ

    ಬೆಂಗಳೂರು: ಐಪಿಎಲ್ 2019ರ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಂಡದ ಮೇಲೆ ವಿಧಿಸಿದ್ದ ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ ವೇಳೆ ಧೋನಿ ಈ ಬಗ್ಗೆ ಮಾತನಾಡಿದ್ದು, ನನ್ನ ಪಾಲಿಗೆ ಕೊಲೆ ಮಾಡುವುದಕ್ಕಿಂತ ಮ್ಯಾಚ್ ಫಿಕ್ಸಿಂಗ್ ಬಹುದೊಡ್ಡ ಅಪರಾಧ ಎಂದಿದ್ದಾರೆ.

    ತಂಡವೇ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಪರಿಣಾಮ ನನ್ನ ಹೆಸರು ಕೂಡ ಅದರಲ್ಲಿ ಕೇಳಿ ಬಂದಿತ್ತು. ಆ ಸಂದರ್ಭ ನಮಗೆ ಕಠಿಣವಾಗಿತ್ತು. ಅಭಿಮಾನಿಗಳು ಕೂಡ ತಂಡಕ್ಕೆ ನೀಡಿದ್ದ ಶಿಕ್ಷೆ ಕಠಿಣ ಎಂದೇ ಭಾವಿಸಿದ್ದರು. ಆದರೆ ನಮ್ಮ ಕಮ್ ಬ್ಯಾಕ್ ಸಮಯ ತುಂಬಾ ಭಾವನಾತ್ಮಕವಾಗಿತ್ತು. ನಾನು ಯಾವಾಗಲು ಹೇಳಿದಂತೆ ನಮ್ಮನ್ನು ಯಾವುದು ಕೊಲ್ಲುತ್ತದೋ ಅದರಿಂದ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ ಎಂದು ಧೋನಿ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದುವರೆಗೂ ಟ್ವಿಟ್ಟರಿನಲ್ಲಿ 54 ಸಾವಿರ ವ್ಯೂ ಕಂಡಿದೆ. ಅಲ್ಲದೇ 1,543 ಮಂದಿ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದಾರೆ. ಈ ಸಾಕ್ಷ್ಯ ಚಿತ್ರದ ಟ್ರೈಲರ್ ಧೋನಿ ಅವರದೊಂದಿಗೆ ಸಿಎಸ್‍ಕೆ ತಂಡದ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಶೇನ್ ವಾಟ್ಸಾನ್ ಕೂಡ ಕಾಣಿಸಿಕೊಂಡಿದ್ದಾರೆ.

    ಎರಡು ವರ್ಷಗಳ ಬ್ಯಾನ್ ಬಳಿಕ ಕಳೆದ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿದ್ದ ತಂಡದ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದು, ಪ್ರಸಕ್ತ ವರ್ಷದ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಎಸ್‍ಕೆ, ಬೆಂಗಳೂರು ತಂಡವನ್ನು ಎದುರಿಸಲಿದೆ. ಮಾಚ್ 23 ರಿಂದ ಟೂರ್ನಿ ಆರಂಭಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಶಾಕ್?

    ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಶಾಕ್?

    ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸುತ್ತಿರುವ ಆರ್‍ಸಿಬಿಗೆ ಶಾಕಿಂಗ್ ಸುದ್ದಿ ಲಭಿಸಿದೆ.

    360 ಡಿಗ್ರಿ ಶಾಟ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಪಾಕಿಸ್ತಾನದ ಸೂಪರ್ ಲೀಗ್‍ನಲ್ಲಿ ಕಳೆದ 2 ದಿನಗಳ ಹಿಂದೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದು, ಸದ್ಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದರ ಬೆನ್ನಲ್ಲೇ ಎಬಿಡಿ ಐಪಿಎಲ್ ವೇಳೆಗೆ ಫಿಟ್ ಆಗುತ್ತಾರ ಎಂಬ ಅನುಮಾನಗಳು ಅಭಿಮಾನಿಗಳನ್ನು ಕಾಡುತ್ತಿದೆ. ಐಪಿಎಲ್ ಆರಂಭಕ್ಕೆ ಇನ್ನು 3 ವಾರಗಳಷ್ಟೇ ಬಾಕಿ ಇದ್ದು, ಐಪಿಎಲ್‍ನಿಂದ ದೂರ ಉಳಿಯುತ್ತಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮಾಹಿತಿಯ ಪ್ರಕಾರ ಐಪಿಎಲ್ ವೇಳೆ ಚೇತರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಾಕಿಸ್ತಾನ್ ಸೂಪರ್ ಲೀಗ್‍ಗೂ ಮುನ್ನ ಬಾಂಗ್ಲಾ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಬಿಡಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಸದ್ಯ ವೈದ್ಯರು ಕನಿಷ್ಠ 2 ವಾರಗಳ ವಿಶ್ರಾಂತಿ ಸೂಚಿಸಿದ್ದು, ಆ ಬಳಿಕಷ್ಟೇ ತರಬೇತಿಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

    ಐಪಿಎಲ್ ನಲ್ಲಿ 4 ಸಾವಿರ ರನ್ ಪೂರ್ಣಗೊಳಿಸಲು ಎಬಿಡಿಗೆ ಇನ್ನು ಕೇವಲ 47 ರನ್ ಗಳ ಅಗತ್ಯವಿದ್ದು, 2008 ರ ಆರಂಭದಿಂದಲೂ ಎಬಿಡಿ ಐಪಿಎಲ್ ಟೂರ್ನಿಯ ಭಾಗವಾಗಿದ್ದಾರೆ. ಇವರೆಗೂ 141 ಪಂದ್ಯಗಳನ್ನು ಆಡಿರುವ ಅವರು 3,953 ರನ್ ಗಳಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ 12 ಪಂದ್ಯಗಳಿಂದ 480 ರನ್ ಸಿಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಸೇರಿದಂತೆ ಟಿ20 ಲೀಗ್‍ಗಳ ಮೇಲೆ ಪ್ರಭುತ್ವ ಸಾಧಿಸಲು ಐಸಿಸಿ ಯತ್ನ!

    ಐಪಿಎಲ್ ಸೇರಿದಂತೆ ಟಿ20 ಲೀಗ್‍ಗಳ ಮೇಲೆ ಪ್ರಭುತ್ವ ಸಾಧಿಸಲು ಐಸಿಸಿ ಯತ್ನ!

    ದುಬೈ: ಅಂತರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂಡಿಯನ್ ಪ್ರೀಮಿಯರ್ ಟೂರ್ನಿ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದು, ಈ ಪ್ರಕ್ರಿಯೆಯಲ್ಲಿ ಐಸಿಸಿ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ.

    ಐಪಿಎಲ್ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳು ಆಯೋಜಿಸುತ್ತಿರುವ ಟೂರ್ನಿಯಗಳ ಬಗ್ಗೆ ವಾಚ್ ಡಾಗ್ ಆಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದ್ದು, ಲೀಗ್‍ಗಳನ್ನು ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ರೂಪಿಸಿಸುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    2008ರಲ್ಲಿ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಆರಂಭವಾಗಿ ಭಾರೀ ಯಶಸ್ಸು ಗಳಿಸಿತ್ತು. ಇದರ ತರುವಾಯ ಹಲವು ಕ್ರಿಕೆಟ್ ಆಡುವ ದೇಶಗಳಲ್ಲೂ ಲೀಗ್ ನಡೆಸಲಾಯಿತು. ಇಂತಹ ಲೀಗ್‍ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸುವ ಕಾರಣದಿಂದ ಐಸಿಸಿ ಆಯೋಜಿಸುವ ಪಂದ್ಯಗಳಿಗೆ ಆಟಗಾರರ ಅಲಭ್ಯತೆಯ ಸಮಸ್ಯೆ ಎದುರಾಗಿತ್ತು. ಸದ್ಯ ಐಸಿಸಿ ನಿರ್ಧಾರ ಬಿಸಿಸಿಐ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದ್ದು, ಇದು ದೇಶಿಯ ಕ್ರಿಕೆಟ್ ಟೂರ್ನಿ ಎಂದು ಹೇಳಿದೆ.

    ಐಸಿಸಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ (ಸಿಒಒ) ಉಯಾಆನ್ ಹಿಗ್ಗಿನ್ಸ್ ಮತ್ತು ಮಾಧ್ಯಮ ಹಕ್ಕುಗಳ ಮುಖ್ಯಸ್ಥ ಆದಿ ಸಿಂಗ್ ದಾಬಾಸ್ ಐಸಿಸಿ ಸಮಿತಿಗೆ ಆಯ್ಕೆ ಆಗಿದ್ದಾರೆ. ಈ ಸಮಿತಿ ಪ್ರಮುಖವಾಗಿ ಕೆಲ ಪ್ರಸ್ತಾಪವನೆಗಳನ್ನು ಮುಂದಿಟ್ಟಿದ್ದು, ವಿಶ್ವದಲ್ಲಿ ನಡೆಯಲಿರುವ ಕ್ರಿಕೆಟ್ ಲೀಗ್ ಗಳ ಮೇಲೆ ಹೆಚ್ಚಿನ ನಿಯಂತ್ರಣ, ಅಲ್ಲದೇ ಲೀಗ್ ಆಯೋಜನೆ ಮಾಡಲು ಎಲ್ಲಾ ದೇಶಗಳಿಗೆ ಇಂದು ಒಂದೇ ರೀತಿಯ ನಿಯಮ ರೂಪಿಸುವುದು, ಆಟಗಾರರಿಗೆ ನಿಯಮಗಳ ರಚನೆ, ಕ್ರಿಕೆಟ್ ಆಡಳಿತ ಮಂಡಳಿಯಂತೆ ಟಿ22 ಲೀಗ್ ನಡೆಸುವ ಕುರಿತು ಮಂಡಳಿಯನ್ನು ರಚಿಸಬೇಕು ಎಂದು ಹೇಳಿದೆ.

    ವರ್ಷದಿಂದ ವರ್ಷಕ್ಕೆ ಟಿ20 ಲೀಗ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಣಾಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ವಿಶ್ವಕಪ್ ಕ್ರಿಕೆಟ್‍ನಿಂದ ಪಾಕಿಸ್ತಾವನ್ನು ಹೊರಗಿಡುವ ಬೇಡಿಕೆ ನಡುವೆಯೂ ಐಸಿಸಿ ಮಹತ್ವದ ನಡೆಯನ್ನು ಇಟ್ಟಿದ್ದು, ಬಿಸಿಸಿಐ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2019ರ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು

    2019ರ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು

    ಮುಂಬೈ: ಬಹು ನಿರೀಕ್ಷೆಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12 ಆವೃತ್ತಿಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದು, ಆದರೆ ಈ ಬಾರಿ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿಸಿ ಆ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನೀಡಲು ತೀರ್ಮಾನ ಮಾಡಲಾಗಿದೆ.

    ಟೂರ್ನಿಯ ಆರಂಭದ ಪಂದ್ಯದಲ್ಲೇ ಚೆನ್ನೈ ಹಾಗೂ ಆರ್‍ಸಿಬಿ ತಂಡಗಳು ಮುಖಾಮುಖಿ ಆಗಲಿದ್ದು, ಇದಕ್ಕೂ ಮುನ್ನ ನಡೆಯಬೇಕಿದ್ದ ಸಮಾರಂಭ ರದ್ದಾಗಿದೆ. ಈ ಕುರಿತು ಬಿಸಿಸಿಐ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಮಾಹಿತಿ ನೀಡಿದ್ದು, ಯೋಧರ ಕುಟುಂಬಗಳಿಗೆ ನೀಡುವ ಮೂಲಕ ಹಣವನ್ನು ಸದುಪಯೋಗ ಮಾಡುವ ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

    ಟೂರ್ನಿ ಆರಂಭ ಆಗುವುದಕ್ಕೆ 30 ದಿನಗಳು ಮಾತ್ರ ಬಾಕಿ ಇದ್ದು, ಪಾಕಿಸ್ತಾನದೊಂದಿಗೆ ವಿಶ್ವಕಪ್ ಪಂದ್ಯ ಆಡಬೇಕಾ ಬೇಡವಾ ಎಂಬುವುದರ ನಡುವೇ ಯೋಧರ ನೆರವಿಗೆ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 2018ರ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಬಿಸಿಸಿಐ 20 ಕೋಟಿ ರೂ. ಹಣವನ್ನು ಮೀಸಲಿಟ್ಟಿತ್ತು.

    ಕೆಳ ದಿನಗಳ ಹಿಂದೆ ಟೂರ್ನಿಯ ಮೊದಲ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಮಾರ್ಚ್ 23 ರಂದು ಮೊದಲ ಪಂದ್ಯ ನಡೆಯಲಿದೆ. ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಮುಂದಿನ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಬಿಡುಗಡೆ ಆಗಿರುವ ವೇಳಾಪಟ್ಟಿಯ ಅನ್ವಯ 17 ಪಂದ್ಯಗಳ ದಿನಾಂಕ ನಿಗದಿ ಆಗಿದ್ದು, ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೂ ಪಂದ್ಯಗಳು ನಡೆಯಲಿದೆ. ಮಾರ್ಚ್ 24, 30 ಮತ್ತು 31 ರಂದು ಎರಡು ಪಂದ್ಯಗಳು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ 2019: ಮೊದಲ ಪಂದ್ಯದಲ್ಲೇ ಆರ್‌ಸಿಬಿ-ಚೆನ್ನೈ ಹಣಾಹಣಿ

    ಐಪಿಎಲ್ 2019: ಮೊದಲ ಪಂದ್ಯದಲ್ಲೇ ಆರ್‌ಸಿಬಿ-ಚೆನ್ನೈ ಹಣಾಹಣಿ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2019 ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಾರ್ಚ್ 23 ರಂದು ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

    2018 ಆವೃತಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಸದ್ಯ 2 ವಾರಗಳ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದ್ದು ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಮುಂದಿನ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ.

    ಸದ್ಯ ಬಿಡುಗಡೆ ಆಗಿರುವ ವೇಳಾಪಟ್ಟಿಯ ಅನ್ವಯ 17 ಪಂದ್ಯಗಳ ದಿನಾಂಕ ನಿಗದಿ ಆಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೂ ಪಂದಗಳು ನಡೆಯಲಿದೆ. ಮಾರ್ಚ್ 24, 30 ಮತ್ತು 31 ರಂದು ಎರಡು ಪಂದ್ಯಗಳು ನಡೆಯಲಿದೆ.

    ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ ತಂಡಗಳು 5 ಪಂದ್ಯಗಳನ್ನು ಈ ಅವಧಿಯಲ್ಲಿ ಆಡಲಿದ್ದು, ಉಳಿದ 6 ತಂಡಗಳು ತಲಾ 4 ಪಂದ್ಯಗಳನ್ನು ಆಡಲಿದೆ. ಉಳಿದಂತೆ ಡೆಲ್ಲಿ, ಆರ್ ಸಿಬಿ 3 ಪಂದ್ಯ ತವರಿನಲ್ಲಿ, 3 ಪಂದ್ಯ ಹೊರಗೆ ಆಡಲಿವೆ. ಇನ್ನುಳಿದ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಲಿದೆ.

    ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವ ಕಾರಣ ಕ್ರಿಕೆಟ್ ಮತ್ತು ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಭದ್ರತಾ ಕಾರಣ ಮತ್ತು ಕೇಂದ್ರ ಸರ್ಕಾರ ಭಾರತದಲ್ಲೇ ಆಯೋಜನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಈ ಹಿಂದೆ ವರದಿಯಾಗಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಜನವರಿ 8 ರಂದು ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತ್ತು ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಂಡಿತ್ತು.

    2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಪಂದ್ಯಗಳು ನಡೆದಿತ್ತು. 2014ರಲ್ಲಿ ಏಪ್ರಿಲ್ 16 ರಿಂದ ಏಪ್ರಿಲ್ 30ರ ವರೆಗಿನ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾದಲ್ಲಿ ನಡೆದಿದ್ದರೆ ನಂತರ ಜೂನ್ 1ರವರೆಗಿನ ಪಂದ್ಯಗಳು ಭಾರತದಲ್ಲಿ ನಡೆದಿತ್ತು. ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಏಪ್ರಿಲ್ ಎರಡನೇ ವಾರ ಮೊದಲ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7 ರಿಂದ ಆರಂಭಗೊಂಡು ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದು ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್‍ಗೂ ಮುನ್ನ ಯುವಿ ಭರ್ಜರಿ ಬ್ಯಾಟಿಂಗ್ – ವಿಡಿಯೋ

    ಐಪಿಎಲ್‍ಗೂ ಮುನ್ನ ಯುವಿ ಭರ್ಜರಿ ಬ್ಯಾಟಿಂಗ್ – ವಿಡಿಯೋ

    ಮಾಲೆ: ಐಪಿಎಲ್ ಆರಂಭಕ್ಕೆ ಮುನ್ನ ವಿಶೇಷ ಶೈಲಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ನಡೆಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಮಾಲ್ಡೀವ್ಸ್ ವಿರುದ್ಧದ ಸ್ನೇಹ ಪೂರ್ವಕ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಆಡಿದ್ದಾರೆ. ಈ ಟೂರ್ನಿಯನ್ನು ಜಂಟಿಯಾಗಿ ಮಲ್ಡೀವ್ಸ್ ಕ್ರೀಡಾ ಸಚಿವಾಲಯ ಆಯೋಜಿಸಿದೆ. ಸದ್ಯ ಯುವರಾಜ್ ಸಿಂಗ್ ರಿವರ್ಸ್ ಸ್ವೀಪ್ ಮಾಡಿಕ ಸಿಕ್ಸರ್ ಸಿಡಿಸಿರುವ ವಿಡಿಯೋ ನೋಡಿದ ಅಭಿಮಾನಿಗಗಳು ಸಾಮಾಜಿಕ ಜಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    https://www.instagram.com/p/Bt7mn49n9oa/?utm_source=ig_embed

    2011ರ ವಿಶ್ವಕಪ್ ಭಾಗವಾಗಿದ್ದ ಯುವಿ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ ಫಾರ್ಮ್ ಸಮಸ್ಯೆಯಿಂದ ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯುವಿ ವಿಫಲರಾಗಿದ್ದಾರೆ. 2017 ರ ಜೂನ್ 30 ರಂದು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯ ಹಾಗೂ 2017ರ ಫೆಬ್ರವರಿ 1 ರಂದು ನಡೆದ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.

    ರಾಷ್ಟ್ರಿಯ ತಂಡದಲ್ಲಿ ಸ್ಥಾನ ಪಡೆಯದಿದ್ದರೂ ಕೂಡ ಯುವಿ ದೇಶಿಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದರು. 8 ಇನ್ನಿಂಗ್ಸ್ ಗಳಿಂದ 65 ರನ್ ಗಳನಷ್ಟೇ ಯುವಿ ಗಳಿಸಿದ್ದರು.

    ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 37 ವರ್ಷದ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಮೊದಲ ಸುತ್ತಿನಲ್ಲಿ ಯುವಿಯನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ತಂಡ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೌಟ್ ಬೇಡ.. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯುತ್ತೆ

    ಡೌಟ್ ಬೇಡ.. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯುತ್ತೆ

    ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ಎಲ್ಲಿ ನಡೆಯುತ್ತದೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. 12ನೇ ಆವೃತ್ತಿಯ ಐಪಿಎಲ್ ಪಂದ್ಯ ಭಾರತದಲ್ಲಿ ನಡೆಯಲಿದೆ.

    ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಮಂಗಳವಾರ ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತು. ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

    ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದ್ದು ಮೇ ಕೊನೆಯವರೆಗೆ ನಡೆಯಲಿದೆ. ಆರಂಭದ ದಿನ ಮಾತ್ರ ಪ್ರಕಟವಾಗಿದ್ದು ಉಳಿದ ದಿನ ಮತ್ತು ಎಲ್ಲಿ ಪಂದ್ಯಗಳು ನಡೆಯಲಿದೆ ಎನ್ನುವ ವಿವರ ಪ್ರಕಟವಾಗಿಲ್ಲ. ಇದನ್ನೂ ಓದಿ:  ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆರ್‌ಸಿಬಿ ಕೋಚ್ – ಯಾರಿಗೆ ಎಷ್ಟು ಸಂಭಾವನೆ? ಇಲ್ಲಿದೆ ಮಾಹಿತಿ

    12 ನೇ ಆವೃತ್ತಿಗಾಗಿ ಈಗಾಗಲೇ ಆಟಗಾರರ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಪ್ರಕಟವಾದ ಬಳಿಕ ಯಾವ ರಾಜ್ಯದಲ್ಲಿ, ಯಾವ ದಿನ ಐಪಿಎಲ್ ಕ್ರಿಕೆಟ್ ನಡೆಯಲಿದೆ ಎನ್ನುವುದು ಪ್ರಕಟವಾಗಲಿದೆ.  ಇದನ್ನೂ ಓದಿ: 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವ ಕಾರಣ ಕ್ರಿಕೆಟ್ ಮತ್ತು ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಭದ್ರತಾ ಕಾರಣ ಮತ್ತು ಕೇಂದ್ರ ಸರ್ಕಾರ ಭಾರತದಲ್ಲೇ ಆಯೋಜನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿತ್ತು.

    2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಪಂದ್ಯಗಳು ನಡೆದಿತ್ತು. 2014ರಲ್ಲಿ ಏಪ್ರಿಲ್ 16 ರಿಂದ ಏಪ್ರಿಲ್ 30ರ ವರೆಗಿನ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾದಲ್ಲಿ ನಡೆದಿದ್ದರೆ ನಂತರ ಜೂನ್ 1ರವರೆಗಿನ ಪಂದ್ಯಗಳು ಭಾರತದಲ್ಲಿ ನಡೆದಿತ್ತು.

    ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಏಪ್ರಿಲ್ ಎರಡನೇ ವಾರ ಮೊದಲ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7 ರಿಂದ ಆರಂಭಗೊಂಡು ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದು ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv