Tag: IPL

  • ಕೊಹ್ಲಿ ಸ್ಪಿನ್ ಬೌಲಿಂಗ್‍ಗೆ ಹೆಚ್ಚು ಔಟಾಗುತ್ತಿರುವ ಕಾರಣ ರಿವೀಲ್ ಮಾಡಿದ ವಿವಿಎಸ್

    ಕೊಹ್ಲಿ ಸ್ಪಿನ್ ಬೌಲಿಂಗ್‍ಗೆ ಹೆಚ್ಚು ಔಟಾಗುತ್ತಿರುವ ಕಾರಣ ರಿವೀಲ್ ಮಾಡಿದ ವಿವಿಎಸ್

    ಬೆಂಗಳೂರು: 2019ರ ಐಪಿಎಲ್ ಟೂರ್ನಿಯ 4 ಪಂದ್ಯದಲ್ಲಿ ಕೊಹ್ಲಿ 2 ಬಾರಿ ಸ್ಪಿನ್ ಬೌಲರ್ ಗಳಿಗೆ ವಿಕೆಟ್ ಒಪ್ಪಿಸಿದ್ದು, ಇದು ತಂಡ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟು ಮಾಡಿದೆ.

    ಟೂರ್ನಿಯಲ್ಲಿ ಆರ್ ಸಿಬಿ ತಂಡ ಕೋಲ್ಕತ್ತಾ ತಂಡವನ್ನು ಎದುರಿಸಲು ಸಿದ್ಧತೆ ನಡೆಸಿದ್ದು, ಇದೇ ವೇಳೆ ಕೊಹ್ಲಿ ಬ್ಯಾಟಿಂಗ್ ಕೆಲ ವೈಫಲ್ಯಗಳನ್ನು ಸಿನ್ನರ್‍ಗಳು ತಿಳಿದುಕೊಂಡಿದ್ದಾರೆ. ಅದ್ದರಿಂದಲೇ ಸ್ಪಿನ್ನರ್ ಗಳು ಕೊಹ್ಲಿ ವಿಕೆಟ್ ಪಡೆಯುತ್ತಿದ್ದಾರೆ ಎಂದು ಮಾಜಿ ಟೀಂ ಇಂಡಿಯಾ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕಳೆದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ 78 ರನ್ ಸಿಡಿಸಿದ್ದು, ಇದರಲ್ಲಿ 46 ರನ್ ಅವರ ಅಧಿಕ ಸ್ಕೋರ್ ಆಗಿದೆ. ಕೊಹ್ಲಿ ಕೂಡ ಹಿಂದೆ ಹಲವು ಬಾರಿ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸಿದ್ದರು. ಅದರಲ್ಲೂ ಕಳೆದ ಪಂದ್ಯದಲ್ಲಿ ಗೂಗ್ಲಿ ಎಸೆತದಲ್ಲೇ ಕೊಹ್ಲಿ ವಿಕೆಟ್ ಒಪ್ಪಿಸಿದ್ದು ವಿಶೇಷವಾಗಿತ್ತು. ಕಳೆದ ವರ್ಷ ಮುಜೀಬ್ ಉರ್ ರಹಮಾನ್, ಆ್ಯಡಂ ಜಂಪಾ, ಮಯಾಂಕ್ ಮಾರ್ಕಂಡೆಯರಂತಹ ಆಟಗಾರರು ಕೊಹ್ಲಿ ವಿಕೆಟ್ ಪಡೆದಿದ್ದರು. ಅದರಲ್ಲೂ ಈ ಬಾರಿ ರಾಜಸ್ಥಾನ್ ತಂಡದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಔಟ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ಪರಿಣಾಮ ಕೊಹ್ಲಿ ಇತ್ತ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

    ಕೊಹ್ಲಿ ಟೀಂ ಇಂಡಿಯಾದ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸುವುದು ಅವರ ಬ್ಯಾಟಿಂಗ್ ಟೆಕ್ನಿಕ್ ಲೋಪದಿಂದ. ಇದನ್ನು ಮೀರಿ ಕೊಹ್ಲಿ ಮುಂದಿನ ಪಂದ್ಯದಲ್ಲಿ ಪ್ರದರ್ಶನ ನೀಡುತ್ತರಾ ಎಂದು ಕಾದುನೋಡಬೇಕಿದೆ ಎಂದು ತಿಳಿಸಿದರು.

  • ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ಮುಂಬೈ: ಐಪಿಎಲ್ ಟೂರ್ನಿಯ ಡೆಲ್ಲಿ, ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂದ್ಯದ ವೇಳೆ ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

    ಪಂದ್ಯದ ವೇಳೆ ರಿಷಬ್ ಆಡಿದ ಮಾತು ಸ್ಟಂಪ್ ಮೈಕಿನಲ್ಲಿ ದಾಖಲಾಗಿದ್ದು, ಈ ಮಾತು ಕೇಳಿದ ಹಲವು ನೋಡುಗರು ಪಂದ್ಯ ಫಿಕ್ಸ್ ಆಗಿತ್ತಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪಂದ್ಯದ ವೇಳೆ ರಬಿನ್ ಉತ್ತಪ್ಪ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ರಿಷಬ್ ‘ಈ ಎಸೆತ ಖಚಿತವಾಗಿ ಬೌಂಡರಿ ಗೆರೆ ದಾಟುತ್ತದೆ’ ಎಂದು ತಿಳಿಸಿದ್ದರು. ಕಾಕತಾಳೀಯ ಎಂಬಂತೆ ಆ ಎಸೆತದಲ್ಲಿ ಉತ್ತಪ್ಪ ಬೌಂಡರಿ ಸಿಡಿಸಿದರು.

    ರಿಷಬ್ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಹಲವರು ಈ ಬಗ್ಗೆ ಪ್ರಶ್ನೆ ಮಾಡಿದ್ದು. ಬೌಲರ್ ಚೆಂಡು ಎಸೆಯುವ ಮುನ್ನವೇ ರಿಷಬ್ ಬೌಂಡರಿ ಸಿಡಿಸಲಿದ್ದಾರೆ ಎಂದು ಹೇಳಿದ್ದು ಹೇಗೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೇ ಐಪಿಎಲ್ ಎಂದರೆ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂಬ ಹಲವು ಟೀಕೆಗಳು ಕೂಡ ಕೇಳಿ ಬಂದಿತ್ತು.

    ಇದರ ನಡುವೆ ರಿಷಬ್ ಮಾತಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ರಿಷಬ್ ಮಾತನ್ನು ತಪ್ಪಾಗಿ ಆರ್ಥೈಸಲಾಗಿದೆ. ಆತನ ಹೇಳಿಗೂ ಮುನ್ನ ರಿಷಬ್ ಏನು ಮಾತನಾಡಿದ್ದರು ಎಂಬುವುದು ಯಾರಿಗೂ ತಿಳಿದಿಲ್ಲ. ರಿಷಬ್ ತಂಡದ ನಾಯಕನಿಗೆ ಆಫ್ ಸೈಡ್ ಭಾಗದಲ್ಲಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿಯೇ ಮಾತನಾಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

  • ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪ್ರಯಾಸ್ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದು, ಆ ಮೂಲಕ ಐಪಿಎಲ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಯಾಸ್ ಪಾದಾರ್ಪಣೆ ಮಾಡಿದ್ದಾರೆ. 16 ವರ್ಷ 157 ದಿನಗಳ ವಯಸ್ಸಿಗೆ ಪ್ರಯಾಸ್ ಐಪಿಎಲ್ ಆಡುವ ಅವಕಾಶ ಪಡೆದಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ರೆಹಮಾನ್ ಯಂಗೆಸ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡುವ ಮೂಲಕ ಪ್ರಯಾಸ್‍ಗೆ ಅವಕಾಶ ನೀಡಿ, ಉತ್ತಮ ಆಟಗಾರ ಎಂದು ಹೇಳಿದ್ದಾರೆ. ಅಂದಹಾಗೇ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಪ್ರಯಾಸ್ ರೇ ಬರ್ಮನ್‍ರನ್ನ ಬರೋಬ್ಬರಿ 1.5 ಕೋಟಿ ರೂ ನೀಡಿ ಆರ್ ಸಿಬಿ ಖರೀದಿ ಮಾಡಿತ್ತು.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದರು. ‘ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ 9 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿರುವ ಪ್ರಯಾಸ್ ಯಾವುದೇ ವಿಕೆಟ್ ಪಡೆಯದೆ 56 ರನ್ ನೀಡಿದ್ದರು.

  • ಐಪಿಎಲ್ 2019: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್‍ಗೆ 12 ಲಕ್ಷ ರೂ. ದಂಡ

    ಐಪಿಎಲ್ 2019: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್‍ಗೆ 12 ಲಕ್ಷ ರೂ. ದಂಡ

    ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲುಂಡಿದ್ದು, ಇದರ ಬೆನ್ನಲ್ಲೇ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾಗೆ ಬರೋಬ್ಬರಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಮೂರು ಬಾರಿ ಟೈಟಲ್ ಚಾಂಪಿಯನ್ ಆಗಿರುವ ತಂಡದ ನಾಯಕನಾಗಿರುವ ರೋಹಿತ್, ಪಂಜಾಬ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದ್ದರು. ಪರಿಣಾಮ ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ದಂಡ ಪಡೆಯುತ್ತಿರುವ ಕುಖ್ಯಾತಿಯನ್ನು ಕೂಡ ಮುಂಬೈ ತಂಡ ಪಡೆಯಿತು. ಈ ಕುರಿತು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

    ಇತ್ತ ಪಂದ್ಯದಲ್ಲಿ ಕೆಎಲ್ ರಾಹುಲ್, ಮಯಾಂಕ್ ಭರ್ಜರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಮುಂಬೈ ಇಂಡಿಯನ್ಸ್ ನೀಡಿದ 177 ರನ್ ಗಳ ಸವಾಲಿನ ಗುರಿಯನ್ನು ಪಂಜಾಬ್ ಸುಲಭವಾಗಿ ಬೆನ್ನತ್ತಿ 18.4 ಓವರ್ ಗಳಲ್ಲಿ ಗೆಲುವು ಪಡೆಯಿತು. ಪಂಜಾಬ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 6ಬೌಂಡರಿ, ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿದರು. ಇತ್ತ ಮಯಾಂಕ್ ಕೂಡ 43 ರನ್ ಗಳಿಸಿ ಗಮನ ಸೆಳೆದರು.

    ರೋಹಿತ್ ಬ್ಯಾಟಿಂಗ್: ಪಂದ್ಯದಲ್ಲಿ ಮುಂಬೈ ತಂಡ ಸೋಲುಂಡರೂ ಕೂಡ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ನಿಂದ ಗಮನ ಸೆಳೆದರು. 5 ಬೌಂಡರಿ ಸಿಡಿಸಿದ ರೋಹಿತ್ 18 ಎಸೆತಗಳಲ್ಲಿ 32 ರನ್ ಗಳಿಸಿ ಎಲ್‍ಬಿ ಬಲೆಗೆ ಬಿದ್ದರು. ಆದರೆ ಅಂಪೈರ್ ಎಲ್‍ಬಿ ಔಟ್ ನೀಡಿದ್ದರು ಕೂಡ ರಿವ್ಯೂನಲ್ಲಿ ಅದು ನಾಟೌಟ್ ಆಗಿತ್ತು. ಇದಕ್ಕೂ ಮುನ್ನ ರಿವ್ಯೂ ಪಡೆಯುವ ಅವಕಾಶ ಇದ್ದರು ಕೂಡ ರೋಹಿತ್ ಅವಕಾಶ ಬಳಸಿಕೊಳ್ಳದೇ ಪೆವಿಲಿಯನತ್ತ ತೆರಳಿದ್ದರು.

    https://twitter.com/Duchess_Of_Swag/status/1111947962278531072

  • ಐಪಿಎಲ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ ಗೇಲ್

    ಐಪಿಎಲ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ ಗೇಲ್

    ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಐಪಿಎಲ್ ಲೀಗ್‍ನಲ್ಲಿ ಗೇಲ್ ಇದುವರೆಗೂ 302 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿ ಸಂಖ್ಯೆಯನ್ನು 302ಕ್ಕೆ ಹೆಚ್ಚಳ ಮಾಡಿದರು.

    ಈ ಪಟ್ಟಿಯಲ್ಲಿ ಬೇರೆ ಯಾವುದೇ ಆಟಗಾರ ಸಮೀಪದ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. 2ನೇ ಸ್ಥಾನದಲ್ಲಿರುವ ಎಬಿಡಿ ವಿಲಿಯರ್ಸ್ 192 ಸಿಕ್ಸರ್, 187 ಸಿಕ್ಸರ್ ಗಳೊಂದಿಗೆ ಧೋನಿ 3ನೇ ಸ್ಥಾನ ಪಡೆದಿದ್ದಾರೆ. 4ನೇ ಸ್ಥಾನದಲ್ಲಿ 186 ಸಿಕ್ಸರ್ ಗಳೊಂದಿಗೆ ಸುರೇಶ್ ರೈನಾ ಇದ್ದಾರೆ.

    ಗೇಲ್ ತಮ್ಮ ಮೊದಲ ಸಿಕ್ಸರ್ ಗಳ ಶತಕವನ್ನು 37 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದರು. ಆ ಬಳಿಕ 69ನೇ ಇನ್ನಿಂಗ್ಸ್ ವೇಳೆ ಸಿಕ್ಸರ್ ದ್ವಿಶತಕದ ಹಾಗೂ 144 ಇನ್ನಿಂಗ್ಸ್ ವೇಳೆಗೆ ಸಿಕ್ಸರ್ ಗಳ ತ್ರಿಶತಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೇಲ್ 24 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿ ಔಟಾದರು.

    ಕೆಎಲ್ ರಾಹುಲ್ ಅರ್ಧ ಶತಕ: ಮುಂಬೈ ಇಂಡಿಯನ್ಸ್ ನೀಡಿದ 177 ರನ್ ಗಳ ಸವಾಲಿನ ಗುರಿಯನ್ನು ಪಂಜಾಬ್ ಸುಲಭವಾಗಿ ಬೆನ್ನತ್ತಿ 18.4 ಓವರ್ ಗಳಲ್ಲಿ ಗೆಲುವು ಪಡೆಯಿತು. ಪಂಜಾಬ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 6ಬೌಂಡರಿ, ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿದರು. ಇತ್ತ ಮಯಾಂಕ್ ಕೂಡ 43 ರನ್ ಗಳಿಸಿ ಗಮನ ಸೆಳೆದರು.

  • ಐಪಿಎಲ್ 2019: ಅಂಪೈರ್ ಮತ್ತೊಂದು ಎಡವಟ್ಟು!

    ಐಪಿಎಲ್ 2019: ಅಂಪೈರ್ ಮತ್ತೊಂದು ಎಡವಟ್ಟು!

    ಮೊಹಾಲಿ: 2019ರ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಗಳು ಮಾಡುವ ತಪ್ಪುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಗುರುವಾರ ಮುಂಬೈ ಇಂಡಿಯನ್ಸ್, ಆರ್ ಸಿಬಿ ಪಂದ್ಯದ ಅಂತಿಮ ಓವರಿನ ಕೊನೆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಗುರುತಿಸಲು ವಿಫಲರಾಗಿದ್ದ ಘಟನೆ ಮಾಸುವ ಮುನ್ನವೇ ಅಂಪೈರ್ ಮತ್ತೊಂದು ಎಡವಟ್ಟು ಮಾಡಿರುವ ಘಟನೆ ನಡೆದಿದೆ.

    ಸದ್ಯ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ತಂಡ ನಡುವೆ ಪಂದ್ಯ ನಡೆಯುತ್ತಿದ್ದು, ಅಶ್ವಿನ್ ತಮ್ಮ ಮೊದಲ ಓವರಿನಲ್ಲಿ 7 ಬೌಲ್ ಮಾಡಿದ್ದಾರೆ. ಹೌದು, ಅಶ್ವಿನ್ ತಮ್ಮ ಮೊದಲ ಓವರಿನ 6 ಎಸೆತಗಳಲ್ಲಿ ಕೇವಲ ಮೂರು ರನ್ ಗಳನ್ನು ಮಾತ್ರ ನೀಡಿದ್ದರು. ಆದರೆ ನಾನ್ ಸ್ಟ್ರೈಕರ್ ಬದಿಯಲ್ಲಿದ್ದ ಅಂಪೈರ್ ಅಶ್ವಿನ್ 6 ಎಸೆತಗಳು ಪೂರ್ಣಗೊಂಡಿದೆ ಎಂಬುವುದನ್ನು ಮರೆತ ಪರಿಣಾಮ 7ನೇ ಎಸೆತ ಬೌಲ್ ಮಾಡಿದರು. ಈ ಎಸೆತದಲ್ಲಿ ಡಿಕಾಕ್ ಬೌಂಡರಿ ಸಿಡಿಸಿದರು. ಪರಿಣಾಮ 7 ಎಸೆತಗಳ ಓವರಿನಲ್ಲಿ 7 ರನ್ ಮುಂಬೈ ತಂಡ ಗಳಿಸಿತು. ಪಂದ್ಯ ಪ್ರಗತಿಯಲ್ಲಿ ಇರುವ ಪರಿಣಾಮ ಅಂಪೈರ್ ಎಡವಟ್ಟು ಪಂಜಾಬ್ ತಂಡದ ಮೇಲೆ ಹೇಗೆ ಪರಿಣಾಮ ಉಂಟು ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕರಾಗಿರುವ ಆರ್ ಅಶ್ವಿನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಕಡ್ ರನೌಟ್ ಮಾಡಿ ಸುದ್ದಿಯಾಗಿದ್ದರು. 2ನೇ ಪಂದ್ಯದಲ್ಲಿ ಫೀಲ್ಡಿಂಗ್ ಎಡವಟ್ಟು ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದು, ಸದ್ಯ ಓವರಿನಲ್ಲಿ 7  ಎಸೆತ ಎಸೆದಿದ್ದಾರೆ.

    https://twitter.com/paapabutterfly/status/1111962267610832898

  • ಪಾಪ ಸೋತು ಬಿಟ್ರು – ಇಂಟರ್‌ವಲ್‌ ಬಿಟ್ ವಿನ್ ಪಾಲಿಟಿಕ್ಸ್ ಬಗ್ಗೆ ಮಾಜಿ ಸಿಎಂ ಮಾತು

    ಪಾಪ ಸೋತು ಬಿಟ್ರು – ಇಂಟರ್‌ವಲ್‌ ಬಿಟ್ ವಿನ್ ಪಾಲಿಟಿಕ್ಸ್ ಬಗ್ಗೆ ಮಾಜಿ ಸಿಎಂ ಮಾತು

    ಮೈಸೂರು: ಇಂಟರ್‌ವಲ್‌ ಬಿಟ್ ವಿನ್ ಪಾಲಿಟಿಕ್ಸ್ ಇರಬೇಕು. ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಸೋತುಬಿಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.

    ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಆರ್‌ಸಿಬಿ ಸೋತು ಬಿಟ್ಟಿತು. ನಾನು 11 ಗಂಟೆಗೆ ವಾಪಸ್ ಬಂದುಬಿಟ್ಟೆ. ಪಂದ್ಯ ಮುಗಿಯುವವರೆಗೂ ಇರಲಿಲ್ಲ. ಯಾವಾಗಲೂ ಇಂಟರ್‌ವಲ್‌ ಬಿಟ್ ವಿನ್ ಪಾಲಿಟಿಕ್ಸ್ ಇರಬೇಕು. ನಾವು ಯಾವಾಗಲೂ ರಾಜಕೀಯ ಜಂಜಾಟದಲ್ಲಿ ಇರುತ್ತೇವೆ. ಹಾಗಾಗಿ ರಾಜಕೀಯದ ಮಧ್ಯೆ ಇವೆಲ್ಲ ಇರಬೇಕು ಎಂದರು.

    ಬಿಜೆಪಿ ಬಳಿ ದುಡಿಲ್ವಾ?
    ಐಟಿ ರೇಡ್ ಮಾಡುವುದ್ದಕ್ಕೆ ನಮ್ಮ ವಿರೋಧ ಇಲ್ಲ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಐಟಿ ರೇಡ್ ಮಾಡಬೇಡಿ. ಬೇರೆ ಸಮಯ ಯಾಕೆ ಇಲ್ಲ. ಚುನಾವಣಾ ಸಮಯ ಯಾಕೆ ಆಯ್ಕೆ ಮಾಡಿಕೊಳ್ಳುತ್ತೀರಿ. ಚುನಾವಣಾ ಸಂದರ್ಭದಲ್ಲಿ ಬೆಂಬಲಿಗರನ್ನು ಹೆದರಿಸುವ ವಾತಾವರಣ ಸೃಷ್ಟಿಸಬೇಡಿ. ಇದು ರೂಟಿನ್ ಕಾರ್ಯವಾಗಿದ್ದರೆ ಬಿಜೆಪಿಯವರ ಬಳಿ ದುಡ್ಡಿಲ್ಲವಾ?. ಯಡಿಯೂರಪ್ಪ 25 ಕೋಟಿ ಶಾಸಕರಿಗೆ ಆಫರ್ ಇಟ್ಟಿರಲಿಲ್ವಾ. ಈಶ್ವರಪ್ಪ ಮನೆ ನೋಟು ಎಣಿಸುವ ಯಂತ್ರ ಸಿಕ್ಕಲ್ವಾ? ಅವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಇದು ನಮಗೆ ಭಯ ಅಲ್ಲ ನನ್ನ ಪ್ರಶ್ನೆ ಆಗಿದೆ. ಇಂತಹ ದಾಳಿಗಳಿಂದ ನಮ್ಮನ್ನು ಬೆಂಬಲಿಸುವವರು, ಸಹಾಯ ಮಾಡುವವರು ಹಿಂದೆ ಹೋಗ್ತಾರೆ. ಕಾರ್ಯಕರ್ತರು ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ. ಹೀಗಾಗಿ ಇಂತಹ ದಾಳಿಗಳು ನಮಗೆ ಸ್ವಲ್ಪ ಪರಿಣಾಮ ಬಿರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮೋದಿಯವರು ಇದನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.


    ಮುದ್ದೇಹನುಮೇಗೌಡರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ಒಪ್ಪಿಕೊಂಡಿದ್ದಾರೆ. ನಾನು ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ನನ್ನ ಬಳಿ ಹೇಳಿದ್ದಾರೆ. ನಾನು ಅವರಿಗೆ ಏನೂ ಹೇಳಿಲ್ಲ. ಕಾಂಗ್ರೆಸ್ ಸಂಸದ ಆಗಿದ್ದೀರಿ. ನಿಮಗೆ ಅನ್ಯಾಯ ಆಗಿದೆ. ಮುಂದೆ ಆ ಅನ್ಯಾಯವನ್ನು ಸರಿಪಡಿಸಲು ಏನಾದರೂ ಮಾಡೋಣ ಎಂದು ಹೇಳಿದರು.

    ನಾನು 28 ಕ್ಷೇತ್ರಗಳಿಗೂ ಹೋಗುತ್ತೇನೆ. ಜೆಡಿಎಸ್ ಅಭ್ಯರ್ಥಿ ಇರುವ ಕಡೆ ಹೋಗುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಇರುವ ಕಡೆಯೂ ಹೋಗುತ್ತೇನೆ. ನಾನು ಸ್ಟಾರ್ ಕಂಪೇನರ್. ಹಾಗಂತ ಸ್ಟಾರ್ ಎಂದರೆ ನಾನು ಹಣೆ ಮೇಲೆ ಸ್ಟಾರ್ ಹಾಕಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.

  • ಅಂಪೈರ್ ನೋ ಬಾಲ್ ಎಡವಟ್ಟು – ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ: ಕೊಹ್ಲಿ ಗರಂ

    ಅಂಪೈರ್ ನೋ ಬಾಲ್ ಎಡವಟ್ಟು – ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ: ಕೊಹ್ಲಿ ಗರಂ

    ಬೆಂಗಳೂರು: ಅಂಪೈರ್ ಮಾಡಿದ ನೋ ಬಾಲ್ ಎಡವಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 6 ರನ್‍ಗಳಿಂದ ಸೋಲು ಕಂಡಿದೆ. ಅಂಪೈರ್ ನೀಡಿದ್ದ ತಪ್ಪು ನಿರ್ಧಾರಕ್ಕೆ ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ.

    ಈ ಪಂದ್ಯದಲ್ಲಿ ಸೋತ ನಂತರ ವಿರಾಟ್ ಕೋಪದಲ್ಲಿ, “ನಾವು ಐಪಿಎಲ್ ಆಡುತ್ತಿದ್ದೇವೆ. ಕ್ಲಬ್ ಕ್ರಿಕೆಟ್ ಅಲ್ಲ. ಅಂಪೈರ್ ಕಣ್ಣು ಬಿಟ್ಟು ಇರಬೇಕಾಗುತ್ತದೆ. ಕೊನೆಯ ಎಸೆತದಲ್ಲಿ ಈ ರೀತಿ ಆಗಿರುವುದು ಬಹಳ ನಾಚಿಕೆಯ ವಿಷಯ. ಗೆಲ್ಲುವ ಪಂದ್ಯದಲ್ಲಿ ಅಂಪೈರ್ ಈ ರೀತಿ ನಿರ್ಧಾರ ನೀಡಿದರೆ, ಏನು ಆಗುತ್ತದೆ ನನಗೆ ಗೊತ್ತಿಲ್ಲ. ಇಂತಹ ಮ್ಯಾಚ್‍ಗಳಲ್ಲಿ ಅಂಪೈರ್ ಶಾರ್ಪ್ ಆಗಿ ಇರಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.

    ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ಕಳೆದುಕೊಂಡು 187 ರನ್ ಸ್ಕೋರ್ ಮಾಡಿತ್ತು. ಬಳಿಕ ಆರ್‌ಸಿಬಿ ತಂಡ 20 ಒವರ್ ಗೆ 181 ರನ್ ಗಳಿಸಿತ್ತು. ಆದರೆ ಈ ಪಂದ್ಯದ ಕೊನೆಯ ಎಸೆತ ಈಗ ವಿವಾದ ಸೃಷ್ಟಿಯಾಗಿದೆ.

    ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ 7 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಒವರ್ ಅನ್ನು ಮುಂಬೈ ತಂಡದ ಆಟಗಾರ ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ್ದಾಗ ಶಿವಂ ದುಬೆ ಕ್ರೀಸ್ ನಲ್ಲಿದ್ದರು. ಕೊನೆಯ ಎಸೆತದಲ್ಲಿ ಶಿವಂ ದುಬೆ ಯಾವುದೇ ರನ್ ಪಡೆಯಲಿಲ್ಲ. ಆದರೆ ರಿಪ್ಲೈ ನೋಡಿದ್ದಾಗ ಲಸಿತ್ ಅವರ ಕಾಲು ಕ್ರೀಸ್‍ಕ್ಕಿಂತ ಮುಂದೆ ಇತ್ತು. ಅಂದರೆ ನೋ ಬಾಲ್ ಆಗಿತ್ತು. ಆದರೆ ಅದನ್ನು ಅಂಪೈರ್ ಗಮನಿಸಲಿಲ್ಲ. ಅಂಪೈರ್ ನೋ ಬಾಲ್ ಎಂದು ಪರಿಗಣಿಸಿದ್ದರೆ ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರೆ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಳ್ಳುತಿತ್ತು.

    ಎಬಿ ಡಿವಿಲಿಯರ್ಸ್ ಅಜೇಯ 70 ರನ್(41 ಎಸೆತ, 4 ಬೌಂಡರಿ, 6 ಸಿಕ್ಸರ್) ಚಚ್ಚಿ ಪಂದ್ಯವನ್ನು ಗೆಲುವಿನ ಹತ್ತಿರ ತಂದಿದ್ದರು.

  • ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಐಪಿಎಲ್ ಪಂದ್ಯಕ್ಕೂ ಎಂಟ್ರಿ ಕೊಟ್ಟಿತ್ತು ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪ’ ಡೈಲಾಗ್ ಈಗ ಐಪಿಎಲ್ ಮ್ಯಾಚ್ ಸ್ಟೇಡಿಯಂನಲ್ಲೂ ಎಂಟ್ರಿ ಕೊಟ್ಟಿದೆ.

    ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಿತು. ಈ ವೇಳೆ ಯುವಕನೊಬ್ಬ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎನ್ನುವ ಫಲಕವನ್ನು ಪ್ರದರ್ಶಿಸಿದ್ದಾರೆ.

    ‘ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಈ ಡೈಲಾಗ್ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ರಾಜಕೀಯವಾಗಿ ಇದನ್ನು ಸಿಕ್ಕ ಸಿಕ್ಕ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಈ ಬಗ್ಗೆ ನಿಖಿಲ್ ಕೂಡ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದರು. “ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡೋರಿಗೆ, ಟ್ರೋಲ್ ಮಾಡೋರಿಗೆ ಒಂದು ಪದ ಬಳಸ್ತೀನಿ ತಪ್ಪು ತಿಳ್ಕೋಬೇಡಿ ಅಂದಿದ್ದರು. ಇಂಥವರೆಲ್ಲ ಸ್ಯಾಡಿಸ್ಟ್ ಗಳು, ಅವರು ವೋಟು ಹಾಕಲ್ಲ. ಅವರ ಬಗ್ಗೆ ನಾನು ತಲೆನೂ ಕೆಡಿಸಿಕೊಳ್ಳಲ್ಲ” ಎಂದು ಮಾತಿನ ಚಾಟಿ ಬೀಸಿದ್ದರು.

    ಇಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಸಹ ಬಿಜೆಪಿ ಅವರು ಎಲ್ಲಿದ್ದೀರಪ್ಪ. ಮಂಡ್ಯದಲ್ಲಿ ಹುಡುಕ್ತಿದ್ದೀನಿ ಎಂದು ಟ್ರೋಲ್ ಮಾಡಿ ನನಗೂ ಕಳುಹಿಸುತ್ತಿದ್ದಾರೆ. ಬಟ್ ಇಟ್ಸ್ ನಾಟ್ ಗುಡ್ ಎಂದು ಹೇಳಿದ್ದರು. ಬಳಿಕ ಇಂತಹ ಟ್ರೋಲ್ ಮಾಡೋರಿಗೆ ಅಂದು ಆತ್ಮಹತ್ಯೆ ಮಾಡಿಕೊಂಡ 75 ರೈತ ಕುಟುಂಬಗಳಿಗೆ ಚೆಕ್ ವಿತರಿಸಿದ್ದು ಯಾಕೆ ಕಣ್ಣಿಗೆ ಕಾಣಿಸಲಿಲ್ಲ ಎಂದು ಪ್ರಶ್ನೆ ಕೂಡ ಹಾಕಿದ್ದರು. ನಾವೆಲ್ಲ ಇರೋದು ಗಾಜಿನ ಮನೆಯಲ್ಲಿ, ಒಡೆದರೆ ನಮ್ಮ ಮನೆ ಗಾಜು ಒಡೆದೋಗುತ್ತೆ, ಅವರ ಮನೆಯ ಗಾಜು ಕೂಡ ಒಡೆದೋಗುತ್ತೆ ಎಂದು ಕಿವಿಮಾತು ಹೇಳಿದ್ದರು.

  • ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಕೋಲ್ಕತ್ತಾ: 2019ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಪಾದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಮೊದಲ ಓವರಿನಲ್ಲೇ 25 ರನ್ ನೀಡಿ ದುಬಾರಿ ಬೌಲಿಂಗ್ ಮಾಡಿದ್ದಾರೆ.

    ವರುಣ್ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದ್ದು, ಇನ್ನಿಂಗ್ಸ್ ನ 2ನೇ ಓವರ್ ಬೌಲ್ ಮಾಡಲು ಅವಕಾಶ ಪಡೆದಿದ್ದರು. ಸ್ಟ್ರೈಕ್ ನಲ್ಲಿದ್ದ ಕೆಕೆಆರ್ ತಂಡದ ಸುನೀಲ್   ನರೇನ್ ಭರ್ಜರಿ ಬೌಂಡರಿ, ಸಿಕ್ಸರ್ ಗಳೊಂದಿಗೆ 25 ರನ್ ಸಿಡಿಸಿದ್ದಾರೆ.

    27 ವರ್ಷದ ವರುಣ್ ಕರ್ನಾಟಕದ ಬೀದರ್ ನಲ್ಲಿ 1991 ರಲ್ಲಿ ಜನಿಸಿದ್ದು, ತಮಿಳುನಾಡಿನ ಪರ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ವರುಣ್ ರನ್ನು 8.4 ಕೋಟಿಗೆ ಕಿಂಗ್ಸ್ ಇಲೆವೆನ್ ಖರೀದಿ ಮಾಡಿತ್ತು.

    ತಮಿಳುನಾಡು ಟಿ20 ಲೀಡ್, ಟಿಎನ್‍ಪಿಎಲ್ ನಲ್ಲಿ ಉತ್ತಮ ಅವಕಾಶ ಪಡೆದಿದ್ದರು. ಒಟ್ಟು 7 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದರು. ಟೂರ್ನಿಯಲ್ಲಿ 4 ಓವರ್ ಗಳಲ್ಲಿ 28 ರನ್ ಮಾತ್ರ ನೀಡಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲೂ 22 ವಿಕೆಟ್ ಕಬಳಿಸಿದ್ದರು. ಐಪಿಎಲ್ ಆರಂಭ 1 ಓವರಿನಲ್ಲೇ 25 ರನ್ ನೀಡಿ ನಿರಾಸೆ ಅನುಭವಿಸಿದರು. ಆದರೆ ಇದೇ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡಿದ ವರುಣ್ ತಮ್ಮ 3ನೇ ಓವರಿನಲ್ಲಿ ಕೇವಲ 1 ರನ್ ನೀಡಿ ವಿಕೆಟ್ ಕಬಳಿಸಿ ತಿರುಗೇಟು ನೀಡಿದರು. ಅಂತಿಮವಾಗಿ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.