Tag: IPL

  • ಸಿಎಸ್‍ಕೆ ಅಭಿಮಾನಿ ಅನುಷ್ಕಾ ಶರ್ಮಾ – ವೈರಲ್ ಫೋಟೋದ ಅಸಲಿ ಸ್ಟೋರಿ ಏನು

    ಸಿಎಸ್‍ಕೆ ಅಭಿಮಾನಿ ಅನುಷ್ಕಾ ಶರ್ಮಾ – ವೈರಲ್ ಫೋಟೋದ ಅಸಲಿ ಸ್ಟೋರಿ ಏನು

    ಬೆಂಗಳೂರು: 2019ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳಲ್ಲೂ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಿಎಸ್‍ಕೆ ತಂಡವನ್ನು ಬೆಂಬಲಿಸಿದ್ದಾರೆ ಎಂದು ಅರ್ಥ ಬರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅನುಷ್ಕಾ ಶರ್ಮಾರ ಫೋಟೋಶಾಪ್ ಮಾಡಿದ ಫೋಟೋ ಇದಾಗಿದ್ದು, ಈ ಹಿಂದೆ ಹಳದಿ ಬಣ್ಣದ ಟೀ ಶರ್ಟ್ ಧರಿಸಿದ್ದ ಅನುಷ್ಕಾ ಶರ್ಮಾ ಫೋಟೋ ಮೇಲೆ ಸಿಎಸ್‍ಕೆ ಲೋಗೋ ಹಾಕಿ ಫೋಟೋಶಾಪ್ ಮಾಡಲಾಗಿದೆ.

     

    View this post on Instagram

     

    ????????????????

    A post shared by CHUTIYAPA™ (@c.h.u.t.i.y.a.p.a) on

    ಹಳದಿ ಬಣ್ಣದ ಟೀ ಶರ್ಟ್ ಚೆನ್ನೈ ತಂಡದ ಜರ್ಸಿ ಆಗಿರುವುದಿಂದ ಕೆಲವರು ಸುಲಭವಾಗಿ ಫೋಟೋಶಾಪ್ ಮಾಡಿದ್ದು, ಆ ಮೂಲಕ ಕೊಹ್ಲಿ ಕಾಲೆಳೆಯಲು ಪ್ರತ್ನಿಸಿದ್ದರು. ಅಲ್ಲದೇ ಹಲವು ರೀತಿಯಲ್ಲಿ ಕೊಹ್ಲಿ, ಹಾಗೂ ಅನುಷ್ಕಾ ಶರ್ಮಾರ ಫೋಟೋಗಳನ್ನ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

    ಕೊಹ್ಲಿ ನಾಯಕತ್ವದ ಬಗ್ಗೆಯೂ ಕೆಲವರು ಕಾಮೆಂಟ್ ಮಾಡಿದ್ದು, ಕೊಹ್ಲಿ ವಿಶ್ವದ ನಂ.1 ಆಟಗಾರ ಹೌದು. ಆದರೆ ನಾಯಕತ್ವದ ಕೌಶಲ್ಯಗಳ ಬಗ್ಗೆ ಮತ್ತಷ್ಟು ಅನುಭವ ಪಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಳಿದಂತೆ ಶನಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಆರ್ ಸಿಬಿ ಪಡೆ ಕಣಕ್ಕಿಳಿಯಲಿದೆ.

  • ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಅಂಪೈರ್ ಜೊತೆ ವಾಗ್ವಾದ – ಧೋನಿ ನಡೆಗೆ ಹಿರಿಯ ಆಟಗಾರರು ಗರಂ

    ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಟಿ20 ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ವಾಗ್ವಾದ ನಡೆಸಿದ ಘಟನೆ ಬಗ್ಗೆ ಹಲವು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ನಡೆದ ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

    ಧೋನಿ ಅವರ ನಡೆಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.50 ಮೊತ್ತವನ್ನ ದಂಡವಾಗಿ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ತಂಡದ ಅನುಭವಿ ನಾಯಕರಾಗಿ ಧೋನಿ ಮೈದಾನ ಪ್ರವೇಶ ಮಾಡಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದು ಸರಿಯಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮಾರ್ಕ್ ವೋ ಹೇಳಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರರದ ಆಕಾಶ್ ಚೋಪ್ರಾ, ಹೇಮಂಗ್ ಬದನಿ ಸೇರಿದಂತೆ ಹಲವು ಆಟಗಾರರು ಧೋನಿ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತ ಟೂರ್ನಿಯಲ್ಲಿ ಅಂಪೈರ್ ಗಳ ಪ್ರದರ್ಶನವೂ ಕೆಟ್ಟದಾಗಿದೆ ಎಂದು ತಿಳಿಸಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಮಿಚೆಲ್ ಸ್ಯಾಂಟ್ನರ್ ಸಿಎಸ್‍ಕೆ ಗೆ ಗೆಲುವು ತಂದರು. ಈ ಪಂದ್ಯದಲ್ಲಿ ಚೆನ್ನೈ ತಂಡದ ಮೂಲಕ ಐಪಿಎಲ್ ಟೂರ್ನಿಯಲ್ಲಿ 100 ಗೆಲುವುಗಳಲ್ಲಿ ಜಯಗಳಿಸಿದ ಮೊದಲ ತಂಡದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ. ಅಂತಿಮ ಓವರಿನ 6 ಎಸೆತಗಳಲ್ಲಿ 18 ರನ್ ಗಳಿಸಬೇಕಾದ ಒತ್ತಡದಲ್ಲಿ ಇದ್ದ ವೇಳೆ ಓವರಿನ ಎಸೆತ ಎದುರಿಸಿದ ಜಡೇಜಾ ಸಿಕ್ಸರ್ ಸಿಡಿಸಿದ್ದರು. ಆದರೆ ಈ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು. ಇತ್ತ ಬೌಲರ್ ಕೂಡ ಆಯತಪ್ಪಿ ಕೆಳಕ್ಕೆ ಬಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ನನ್ನ ತಂದೆಗಾಗಿ ಪ್ರಾರ್ಥನೆ ಮಾಡಿ ಎಂದ ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್

    ನನ್ನ ತಂದೆಗಾಗಿ ಪ್ರಾರ್ಥನೆ ಮಾಡಿ ಎಂದ ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ತಮ್ಮ ತಂದೆಯ ಆರೋಗ್ಯ ಗುಣಮುಖವಾಗಲು ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಪಾರ್ಥಿವ್ ಅವರ ತಂದೆ ಫೆಬ್ರವರಿ ತಿಂಗಳಿನಿಂದ ಮೆದುಳಿನ ರಕ್ತಸ್ರಾವ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತೀವ್ರ ಅನಾರೋಗ್ಯನಿಂದ ಬಳುತ್ತಿದ್ದರೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಪಾರ್ಥಿವ್ ಭಾವನಾತ್ಮಕವಾಗಿ ಸಂದೇಶ ನೀಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿ ಮಾತನಾಡಿರುವ ಪಾರ್ಥಿವ್, ನನ್ನ ದಿನಚರಿ ಮನೆಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಮೂಲಕ ಆರಂಭವಾಗುತ್ತಿದೆ. ಪಂದ್ಯದ ವೇಳೆ ನನಗೆ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಇರುವುದಿಲ್ಲ. ನನ್ನ ಯೋಚನೆ ಕೂಡ ಪಂದ್ಯದ ಬಗ್ಗೆಯೇ ಕೇಂದ್ರಿಕರಿಸುತ್ತೇನೆ. ಆದರೆ ಪಂದ್ಯ ಮುಗಿಯುತ್ತಿದಂತೆ ನನ್ನ ಹೃದಯ ಸಂಪೂರ್ಣ ಮನೆಯ ಕಡೆ ಇರುತ್ತದೆ ಎಂದಿದ್ದಾರೆ.

    ತಂದೆಯ ಅನಾರೋಗ್ಯ ಕಾರಣ ನಿರಂತರವಾಗಿ ವೈದ್ಯರಿಂದ ಮಾಹಿತಿ ಪಡೆಯುವುದರೊಂದಿಗೆ ಕೆಲ ಮುಖ್ಯ ನಿರ್ಣಯಗಳನ್ನು ನಾನು ಕೈಗೊಳ್ಳಬೇಕಾಗುತ್ತದೆ. ಪತ್ನಿ ಹಾಗೂ ಅಮ್ಮ, ತಂದೆಯ ಜೊತೆಗಿದ್ದರೂ ನನ್ನ ಅಭಿಪ್ರಾಯವನ್ನೇ ಅಂತಿಮವಾಗಿ ತೆಗೆದುಕೊಳ್ಳುತ್ತಾರೆ. ತಂದೆಗೆ ನೀಡಲಾಗುತ್ತಿರುವ ಕೃತಕ ಉಸಿರಾಟವನ್ನ ಕೆಲ ದಿನಗಳ ಮಟ್ಟಿಗೆ ತೆಗೆಯುವಂತಹ ನಿರ್ಧಾರಗಳನ್ನು ವೈದ್ಯರ ಸಲಹೆ ಮೇರೆಗೆ ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದ್ದರಿಂದ ಇದು ನನಗೆ ಬಹುಮುಖ್ಯ ಸಮಯ ಎಂದು ತಿಳಿಸಿದ್ದಾರೆ.

    ಇದ್ದಕ್ಕಿದ್ದಂತೆ ಮನೆಯಲ್ಲಿ ಪಾರ್ಥಿವ್ ಅವರ ತಂದೆ ಮನೆಯಲ್ಲಿ ಕುಸಿದ ಬಿದ್ದ ಬಳಿಕ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು. ಪರಿಣಾಮ ಪಾರ್ಥಿವ್ ಮುಷ್ತಾಕ್ ಅಲಿ ಟ್ರೋಫಿಯಿಂದ ಹೊರ ನಡೆದಿದ್ದರು. ಆದರೆ ಐಪಿಎಲ್ ಟೂರ್ನಿಯಲ್ಲಿ ಆಡುವಂತೆ ಕುಟುಂಬ ಸದಸ್ಯರು ಪಾರ್ಥಿವ್‍ರ ಮನವೊಲಿಸಿದ್ದರು. 34 ವರ್ಷ ವಯಸ್ಸಿನ ಪಾರ್ಥಿವ್ ಪಾಟೇಲ್ ಕಳೆದ 6 ಪಂದ್ಯದಲ್ಲಿ 172 ರನ್ ಸಿಡಿಸಿದ್ದಾರೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಸಿಡಿಸಿದ ಅರ್ಧ ಶತಕವೂ ಸೇರಿದೆ. ಆರ್ ಸಿಬಿ ತಂಡ ಪ್ರತಿ ಪಂದ್ಯದ ಬಳಿಕ ತಂದೆಯನ್ನ ಭೇಟಿ ಮಾಡಲು ಅವಕಾಶವನ್ನು ನೀಡುತ್ತಿದೆ.

    ನನ್ನ ಕುಟುಂಬ ಈ ವಿಚಾರದಲ್ಲಿ ನನಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದು ನನಗೆ ಪಂದ್ಯದ ವೇಳೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಪಂದ್ಯ ಮುಗಿದ ಬಳಿಕಷ್ಟೇ ಈ ಬಗ್ಗೆ ಮಾತನಾಡುತ್ತಾರೆ. ಸದ್ಯ ನಾನು ಕಠಿಣ ಸಂದರ್ಭಗಳನ್ನು ಎದುರಿಸಲು ಸಿದ್ಧನಾಗುತ್ತಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ. ಅಂದಹಾಗೇ  ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಶನಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದೆ.

  • ಮೊಹಾಲಿಯಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ

    ಮೊಹಾಲಿಯಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ

    ಮೊಹಾಲಿ : ಐಪಿಎಲ್ 12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದ್ದಾರೆ.

    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಏಪ್ರಿಲ್ 8 ರಂದು ನಡೆದ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದಲ್ಲಿ 53 ಎಸೆತಗಳ ನೆರವಿನಿಂದ 7 ಬೌಂಡರಿ, 1 ಸಿಕ್ಸರ್ ಸಿಡಿಸಿ 71 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದಿದ್ದರು.

    ಕಳೆದ ವರ್ಷ ಇದೇ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗದ ಅರ್ಧ ಶತಕ ಸಿಡಿಸಿದ ಸಾಧನೆಯನ್ನ ಮಾಡಿದ್ದರು. ಆ ಮೂಲಕ ಯೂಸಫ್ ಪಠಾಣ್ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ಯೂಸುಫ್ ಪಠಾಣ್ 2015 ರಲ್ಲಿ 15 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು. ಒಂದು ವರ್ಷದ ಅವಧಿಯ ಅಂತರದಲ್ಲಿ ಕಾಕತಾಳಿಯವಾಗಿ ಎಂಬಂತೆ ಅರ್ಧ ಶತಕದ ಸಾಧನೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ.

    2019ರ ಐಪಿಎಲ್ ಆರಂಭಕ್ಕೂ ಮುನ್ನ ಫಾರ್ಮ್ ಸಮಸ್ಯೆ ಎದುರಿಸಿದ್ದ ರಾಹುಲ್ ಟೂರ್ನಿಯ ಎರಡು ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ಆ ಬಳಿಕ ನಡೆದ 4 ಪಂದ್ಯಗಳಲ್ಲಿ 3 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಕಾಫಿ ವಿಥ್ ಕರಣ್ ಶೋ ಬಳಿಕ ವಿವಾದಕ್ಕೆ ಸಿಲುಕಿದ್ದ ರಾಹುಲ್ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಬಿಸಿಸಿಐ ನಿಷೇಧ ತೆರವುಗೊಳಿಸಿದ ಬಳಿಕ ಇಂಗ್ಲೆಂಡ್ ಎ ತಂಡದ ವಿರುದ್ಧ ಆಡುವ ಅವಕಾಶ ಪಡೆದು ರಾಹುಲ್ ದ್ರಾವಿಡ್ ಅವರ ಸಲಹೆಗಳೊಂದಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರು. ಸದ್ಯ ರಾಹುಲ್ ಮಹತ್ವದ ವಿಶ್ವಕಪ್ ರೇಸ್‍ನಲ್ಲಿದ್ದಾರೆ. ಇತ್ತ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಗೆಲುವು ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬುಧವಾರ ಮುಂಬೈ ತಂಡವನ್ನು ಎದುರಿಸಲಿದೆ.

  • ಆರ್‌ಸಿಬಿ ಮ್ಯಾಚ್ ವೇಳೆ ನಲಪಾಡ್ ಅಬ್ಬರ

    ಆರ್‌ಸಿಬಿ ಮ್ಯಾಚ್ ವೇಳೆ ನಲಪಾಡ್ ಅಬ್ಬರ

    ಬೆಂಗಳೂರು: ಕಳೆದ ದಿನ ನಡೆದ ಆರ್‌ಸಿಬಿ ಮ್ಯಾಚ್ ವೇಳೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಚೌಕಿದಾರ್ ಚೋರ್ ಎಂದು ಘೋಷಣೆ ಕೂಗಿದ್ದಾರೆ.

    ಭಾನುವಾರ ರಾತ್ರಿ 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯ ಆರನೇ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಐಪಿಎಲ್ ಮ್ಯಾಚ್ ನೋಡಲು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸ್ಟೇಡಿಯಂಗೆ ಹೋಗಿದ್ದಾರೆ. ಆದರೆ ನಲಪಾಡ್ ಸ್ಟೇಡಿಯಂನ ಗ್ಯಾಲರಿಯಲ್ಲಿ ನಿಂತು ಪದೇ ಪದೇ ಚೌಕಿದಾರ್ ಚೋರ್ ಹೇ…ಚೌಕಿದಾರ್ ಚೋರ್ ಹೇ… ಎಂದು ಘೋಷಣೆ ಕೂಗಿದ್ದಾರೆ.

    ಅಷ್ಟೇ ಅಲ್ಲದೇ 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋತಿದ್ದಕ್ಕೆ ಅಭಿಮಾನಿಯೊಬ್ಬ ಕೋಪಗೊಂಡ ಕೈಯಲ್ಲಿದ್ದ ಬ್ಯಾಟ್‍ನಿಂದ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಗಳೊಂದಿಗೆ ಗೆಲುವು ಸಾಧಿಸಿದೆ.

    ಈ ಹಿಂದೆ ನಡೆದ ಮ್ಯಾಚ್‍ನಲ್ಲೂ ಕ್ರೀಡಾಂಗಣದಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಬೋರ್ಡ್ ಹಿಡಿದು ಘೋಷಣೆ ಕೂಗಿದ್ದರು. ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಹೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

  • ಆರ್‌ಸಿಬಿ ಮ್ಯಾಚ್ ಸೋತಿದ್ದಕ್ಕೆ ಟಿವಿ ಪುಡಿ ಪುಡಿ

    ಆರ್‌ಸಿಬಿ ಮ್ಯಾಚ್ ಸೋತಿದ್ದಕ್ಕೆ ಟಿವಿ ಪುಡಿ ಪುಡಿ

    ಬೆಂಗಳೂರು: 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋತಿದ್ದಕ್ಕೆ ಅಭಿಮಾನಿಯೊಬ್ಬ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ.

    ನಗರದಲ್ಲಿ ಭಾನುವಾರ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ತನ್ನ ಸ್ನೇಹಿತರ ಜೊತೆ ಅಭಿಮಾನಿ ಪಂದ್ಯ ವೀಕ್ಷಿಸುತ್ತಿದ್ದನು. ಈ ಮ್ಯಾಚ್‍ನಲ್ಲಿ ಆರ್‌ಸಿಬಿ ಸೋಲುತ್ತಿದ್ದಂತೆ ಕೋಪಗೊಂಡ ಅಭಿಮಾನಿ ತನ್ನ ಕೈಯಲ್ಲಿದ್ದ ಬ್ಯಾಟ್‍ನಿಂದ ಟಿವಿಯನ್ನು ಪುಡಿ ಪುಡಿ ಮಾಡಿದ್ದಾನೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್‌ಸಿಬಿ ಸುಲಭವಾಗಿ ತುತ್ತಾಯಿತು. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ ಡೆಲ್ಲಿ 4 ವಿಕೆಟ್ ಗಳೊಂದಿಗೆ ಗೆಲುವು ಪಡೆಯಿತು.

    ಈ ಹಿಂದಿನ ಐಪಿಎಲ್ ಟೂರ್ನಿಗಳಿಗೆ ಹೋಲಿಸಿದರೆ ಈ ಬಾರಿ ಆರ್‌ಸಿಬಿ ಅಭಿಮಾನಿಗಳು ಹೆಚ್ಚು ಬೆಂಬಲವನ್ನು ನೀಡಿ ಪ್ರಚಾರ ಮಾಡಿದ್ದರು. ಆದರೆ ಸತತ 6 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಎಷ್ಟೇ ಪಂದ್ಯ ಸೋತರೂ ಕೂಡ ನಮ್ಮ ಬೆಂಬಲ ನಮ್ಮ ತಂಡಕ್ಕೆ ಮಾತ್ರ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ತಂಡದ ವಿರುದ್ಧ ಟ್ರೋಲ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

  • ಮಕ್ಕಳೊಂದಿಗೆ ಮಗುವಾದ ಎಂಎಸ್‍ಡಿ : ವಿಡಿಯೋ

    ಮಕ್ಕಳೊಂದಿಗೆ ಮಗುವಾದ ಎಂಎಸ್‍ಡಿ : ವಿಡಿಯೋ

    ಚೆನ್ನೈ: 2019ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭವನ್ನು ಪಡೆದಿದ್ದು, ಆಡಿರುವ 5 ಪಂದ್ಯದಲ್ಲಿ 4ರಲ್ಲಿ ಗೆದ್ದು ಬೀಗಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ.

    ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಚೆನ್ನೈ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಳವಾಗಿದೆ. ಪಂದ್ಯದ ಬಳಿಕ ಸಿಎಸ್‍ಕೆ ನಾಯಕ ಧೋನಿ ಕ್ರೀಡಾಂಗಣದಲ್ಲಿ ಮಕ್ಕಳೊಂದಿಗೆ ಸೇರಿ ಮನರಂಜನೆ ನೀಡಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಇಮ್ರಾನ್ ತಹೀರ್, ವ್ಯಾಟ್ಸನ್ ಅವರ ಪುತ್ರರು ಪಂದ್ಯದ ಬಳಿಕ ಮೈದಾನದಲ್ಲಿ ಓಡುವ ಸವಾಲು ಹಾಕಿ ತಮ್ಮ ಸಮಯವನ್ನು ಕಳೆಯುತ್ತಿದ್ರು. ಈ ವೇಳೆ ಮಧ್ಯ ಪ್ರವೇಶಿಸಿದ ಧೋನಿ ಮಕ್ಕಳೊಂದಿಗೆ ತಾವು ಓಡುವ ಮೂಲಕ ನೋಡುಗರಿಗೆ ಮತ್ತಷ್ಟು ಮನರಂಜನೆ ನೀಡಿದರು. ಸಿಎಸ್‍ಕೆ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದ್ದು, ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ಧೋನಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂಬೈ ವಿರುದ್ಧ ಪಂದ್ಯದ ವೇಳೆಯೂ ಧೋನಿ ಹಿರಿಯ ಅಭಿಮಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಧೋನಿಯನ್ನು ಭೇಟಿ ಆದ ಮಹಿಳೆ ‘ನಾನು ಧೋನಿಗಾಗಿ ಮಾತ್ರ ಇಲ್ಲಿಗೆ ಬಂದಿದ್ದೇನೆ ಎಂದಿದ್ದರು. ಹಿರಿಯರೊಂದಿಗೆ ಕೆಲ ಸಮಯ ಕಳೆದ ಅವರು ಪುಟ್ಟ ಬಾಲಕಿಗೆ ತಮ್ಮ ಹಸ್ತಾಕ್ಷರವಿದ್ದ ಜರ್ಸಿ ಗಿಫ್ಟ್ ನೀಡಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.

  • ಧೋನಿ ಬಳಿಕ ಕೆಎಲ್ ರಾಹುಲ್‍ಗೆ ಲಕ್ – ಬಾಲ್ ವಿಕೆಟ್‍ಗೆ ತಾಗಿದರೂ ನಾಟೌಟ್!

    ಧೋನಿ ಬಳಿಕ ಕೆಎಲ್ ರಾಹುಲ್‍ಗೆ ಲಕ್ – ಬಾಲ್ ವಿಕೆಟ್‍ಗೆ ತಾಗಿದರೂ ನಾಟೌಟ್!

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯದಲ್ಲಿ ಚೆನ್ನೈ 22 ರನ್ ಗಳ ಜಯ ಪಡೆದಿದ್ದು, ಸಿಎಸ್‍ಕೆ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ಪಂಜಾಬ್ ಸೋಲುಂಡಿತು. ಇದಕ್ಕೂ ಮುನ್ನ ಪಂದ್ಯದಲ್ಲಿ ಕೆಎಲ್ ರಾಹುಲ್ ಅಚ್ಚರಿಯ ರೀತಿಯಲ್ಲಿ ರನೌಟ್ ನಿಂದ ಪಾರಾಗಿದ್ದರು.

    ಪಂದ್ಯದ 13ನೇ ಓವರಿನಲ್ಲಿ ಕೆಎಲ್ ರಾಹುಲ್ ಸ್ಟ್ರೈಕ್ ಎದುರಿಸಿ ಜಡೇಜಾ ಬೌಲಿಂಗ್‍ನಲ್ಲಿ ರನ್ ಕದಿಯುವ ಯತ್ನ ಮಾಡಿದರು. ವಿಕೆಟ್ ಹಿಂದಿದ್ದ ಧೋನಿ ತಕ್ಷಣ ಚೆಂಡು ಪಡೆದು ತಮ್ಮದೇ ರೀತಿಯಲ್ಲಿ ರನೌಟ್ ಮಾಡಲು ಯತ್ನಿಸಿದರು. ಆದರೆ ಧೋನಿ ಎಸೆತ ಚೆಂಡು ವಿಕೆಟಿಗೆ ತಾಕಿದರೂ ಕೂಡ ಬೇಲ್ಸ್ ಹಾರದ ಪರಿಣಾಮ ರನೌಟ್ ನಿಂದ ರಾಹುಲ್ ಸೇಫ್ ಆದ್ರು. ಈ ಹಿಂದೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ಕೂಡ ಬೌಲ್ಡ್ ಆಗಿದ್ದರು ಕೂಡ ಬೇಲ್ಸ್ ಹಾರದ ಕಾರಣ ನಾಟೌಟ್ ಆಗಿದ್ದರು.

    ಪಂಜಾಬ್ ತಂಡದ ಪರ ಕೆಎಲ್ ರಾಹುಲ್ 55 ರನ್, ಸರ್ಫರಾಜ್ ಖಾನ್ 67 ರನ್ ಗಳಿಸಿದ್ದು ಬಿಟ್ಟರೆ ಬೇರೆ ಆಟಗಾರರು ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕಾರಣ ಪಂಜಾಬ್ 5 ವಿಕೆಟ್ ಕಳೆದುಕೊಂಡು 138 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಹರ್ಭಜನ್, ಸ್ಕಾಟ್ ಕಗ್ಲಿಜಿನ್ ತಲಾ 2 ವಿಕೆಟ್ ಪಡೆದರೆ, ಚಹಲ್ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಧೋನಿ 37 ರನ್, ಡುಪ್ಲೆಸಿಸ್ 54 ರನ್ ಗಳ ನೆರವಿನಿಂದ ಚೆನ್ನೈ 3 ವಿಕಟ್ ಕಳೆದುಕೊಂಡು 160 ರನ್ ಗಳಿಸಿತ್ತು.

  • ನನಗೆ ಸಾಕಾಗುವಷ್ಟು ದೊಡ್ಡ ಗ್ರೌಂಡ್ ಯಾವುದಿಲ್ಲ ಅನ್ನಿಸುತ್ತದೆ: ರಸೆಲ್

    ನನಗೆ ಸಾಕಾಗುವಷ್ಟು ದೊಡ್ಡ ಗ್ರೌಂಡ್ ಯಾವುದಿಲ್ಲ ಅನ್ನಿಸುತ್ತದೆ: ರಸೆಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಬಳಿಕ ಮಾತನಾಡಿರುವ ರಸೆಲ್ ನನಗೆ ಸಾಕಾಗುವಷ್ಟು ದೊಡ್ಡದಾದ ಮೈದಾನ ಯಾವುದು ಇಲ್ಲ ಎಂದೆನಿಸುತ್ತದೆ ಎಂದು ತಿಳಿಸಿದ್ದಾರೆ.

    ಪಂದ್ಯದಲ್ಲಿ ಒಂದು ಎಸೆತದಲ್ಲಿ 13 ರನ್ ಚಚ್ಚಿ ಗಮನ ಸೆಳೆದ ರಸೆಲ್, ಗೆಲುವು ಕಷ್ಟಸಾಧ್ಯ ಎನ್ನಲಾದ ಪಂದ್ಯದಲ್ಲಿ ಸಿಕ್ಸರ್ ಗಳ ಸುರಿಮಳೆ ಗೈದರು. 13 ಎಸೆತಗಳಲ್ಲಿ 48 ರನ್ ಗಳಿಸಿ 5 ಎಸೆತ ಬಾಕಿ ಇರುವಂತೆಯೇ ತಂಡಕ್ಕೆ ಗೆಲುವು ತಂದು ಕೊಟ್ಟರು. ಬಳಿಕ ಮಾತನಾಡಿ, ನಾನು ನನ್ನ ಸಾಮಥ್ರ್ಯ ಶಕ್ತಿಯ ಮೇಲೆ ನಂಬಿಕೆ ಇಡುತ್ತೇನೆ. ನನ್ನ ಬ್ಯಾಟ್ ಸ್ಪೀಡ್ ಉತ್ತಮವಾಗಿದೆ. ಕೆಲವು ಸಿಕ್ಸರ್ ಗಳು ಮೈದಾನದ ಸ್ಟ್ಯಾಂಡ್ ಮೇಲೆಗೂ ಹೋಗಿದ್ದು ನನಗೆ ಅಚ್ಚರಿ ತಂದಿತ್ತು. ನನ್ನ ಊಹೆ ಪ್ರಕಾರ ನನಗೆ ಸಾಕಾಗುವಷ್ಟು ದೊಡ್ಡ ಮೈದಾನಗಳಿಲ್ಲ ಎಂದಿದ್ದಾರೆ.

    1 ಎಸೆತ 13 ರನ್: ರಸೆಲ್ ಬ್ಯಾಟಿಂಗ್ ಆಗಮಿಸಿದ ವೇಳೆ 16 ಎಸೆತಗಳಲ್ಲಿ 53 ರನ್ ಗಳಿಸಬೇಕಿತ್ತು. ಈ ವೇಳೆ ಮಹ್ಮದ್ ಸಿರಾಜ್ 17ನೇ ಓವರ್ ಎಸೆಯುವ ಅವಕಾಶ ಪಡೆದರು. ತಮ್ಮ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದ ರಸೆಲ್ ಓವರಿನ 3 ಎಸೆತವನ್ನು ಸಿಕ್ಸರ್ ಸಿಡಿಸಿದರು. ಆದರೆ ಅದನ್ನು ಅಂಪೈರ್ ನೋಬಾಲ್ ಎಂದು ತೀರ್ಪು ನೀಡಿದ್ದರು. ಪರಿಣಾಮ ನಾಯಕ ಕೊಹ್ಲಿ ಸಿರಾಜ್ ಬದಲು ಉಳಿದ 4 ಎಸೆತ ಬೌಲ್ ಮಾಡಲು ಸ್ಟೊಯಿನಿಸ್ ಗೆ ಅವಕಾಶ ನೀಡಿದರು. ಸಿಕ್ಕ ಫ್ರೀ ಹಿಟ್ ಅವಕಾಶವನ್ನ ಬಳಸಿಕೊಂಡ ರಸೆಲ್ ಅದನ್ನು ಸಿಕ್ಸರ್ ಗಟ್ಟಿದರು. ಇದರೊಂದಿಗೆ ಒಂದೇ ಎಸೆತದಲ್ಲಿ 13 ರನ್ ಲಭ್ಯವಾಯಿತು.

    ಸ್ಟ್ರೈಕ್ ರೇಟ್: ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ರಸೆಲ್ ಇದುವರೆಗೂ ಆಡಿರುವ 77 ಎಸೆತಗಳಲ್ಲಿ 268.83ನ ಸ್ಟ್ರೈಕ್ ರೇಟ್ ನೊಂದಿಗೆ 207 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಬೌಂಡರಿ, 22 ಸಿಕ್ಸರ್ ಗಳು ಸೇರಿವೆ.

    ಶಾರುಖ್ ಮೆಚ್ಚುಗೆ: ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಗೆಲುವಿಗೆ ಕಾರಣರಾದ ರಸೆಲ್ ಅವರಿಗೆ ತಂಡದ ಫ್ರಾಂಚೈಸಿ ಆಗಿರುವ ಶಾರುಖ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ಬಾಹುಬಲಿ ಗೆಟಪ್ ನಲ್ಲಿರುವ ರಸೆಲ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಶಾರುಖ್ ರ ಈ ಟ್ವೀಟ್ಟಿಗೆ ಬಾಹುಬಲಿ ಸಿನಿಮಾದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಲಭಿಸಿದೆ. ಸದ್ಯ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿರುವ ಕೋಲ್ಕತ್ತಾ ತಂಡ 3 ರಲ್ಲಿ ಜಯ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.

  • ‘ಆರ್‌ಸಿಬಿಯನ್ನ ಬೈದರೆ ಕೊಲೆ ಆಗ್ತಿಯಾ’ – ವಿವರಣೆಗಾರನ ವಿರುದ್ಧ ಅಭಿಮಾನಿ ಗರಂ

    ‘ಆರ್‌ಸಿಬಿಯನ್ನ ಬೈದರೆ ಕೊಲೆ ಆಗ್ತಿಯಾ’ – ವಿವರಣೆಗಾರನ ವಿರುದ್ಧ ಅಭಿಮಾನಿ ಗರಂ

    ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಂದು ಗೆಲುವುವನ್ನ ಪಡೆದಿಲ್ಲ. ಇದೇ ವೇಳೆ ತಂಡದ ವಿರುದ್ಧ ಕಮೆಂಟ್ ಮಾಡಿದ್ದ ನ್ಯೂಜಿಲೆಂಡಿನ ವೀಕ್ಷಕ ವಿವರಣೆಗಾರ ಸೈಮನ್ ಡೌಲ್‍ಗೆ ಅಭಿಮಾನಿಯೊಬ್ಬರು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಆರ್ ಸಿಬಿ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬೇಸರಗೊಂಡಿದ್ದು, ಕೆಲವರು ಇದರಿಂದ ತಂಡದ ವಿರುದ್ಧ ಅಸಮಾಧಾನ ಹೊರಹಾಕಿ ನಾಯಕತ್ವದ ಬದಲಾವಣೆ ಮಾತನಾಡಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಮಾತ್ರ ತಂಡದ ಬಗ್ಗೆ ಕಮೆಂಟ್ ಮಾಡಿದರೆ ಕೊಲೆ ಮಾಡುವುದಾಗಿ ಸೈಮಲ್ ಡೌಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾನೆ.

    ಅಭಿಮಾನಿಯ ಈ ಹೇಳಿಕೆಗೆ ಸೈಮನ್ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಯ ಈ ಸಂದೇಶದ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ. ಕೊಲೆ ಬೆದರಿಕೆ ಬರುವಂತೆ ನಾನು ಏನು ಹೇಳಿದ್ದೇನೆ ಎಂಬುವುದರ ಬಗ್ಗೆ ಅರಿವಿಲ್ಲ. ಆದರೆ ಇದು ಕೇವಲ ಕ್ರೀಡೆಯಷ್ಟೇ ಎಂದು ತಿಳಿಸಿ ಸಮಾಧಾನಗೊಳ್ಳುವಂತೆ ಬರೆದುಕೊಂಡಿದ್ದಾರೆ. ಆದರೆ ಈ ಟ್ವೀಟ್ ವೈರಲ್ ಆಗುತ್ತಿದಂತೆ ಡಿಲೀಟ್ ಮಾಡಿದ್ದಾರೆ.

    ಆರ್ ಸಿಬಿ ತಂಡದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಹಾಗೂ ಟ್ರೋಲ್ ಗಳನ್ನು ಸಹಿಸದ  ಅಭಿಮಾನಿಯೊಬ್ಬರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.